advertise here

Search

ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಅವರಿಂದ ಮಾದರಿ ಹೊಸವರ್ಷಾಚರಣೆ


ಬೆಂಗಳೂರು:ಮನಸು ಮಾಡಿದ್ರೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಎನಿಸಿಕೊಳ್ಳುವವರು ಅವರ ಕೆಪಾಸಿಟಿ ಹಾಗೂ ಪವರ್ ಗೆ ಎಷ್ಟ್  ಅದ್ದೂರಿಯಾಗಿ ಬೇಕಾದ್ರೂ ವರ್ಷಾಚರಣೆ ಮಾಡಿಕೊಳ್ಳಬಹುದು.ಆದರೆ ಇದಕ್ಕೆ ಅಪವಾದ ಎನ್ನುವಂತಿದ್ದಾರೆ ನಮ್ಮ ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ .ಅದಕ್ಕೇನೆ ಅವರಿಗೆ ಕಾಮನ್ ಮ್ಯಾನ್ ಕಮಿಷನರ್ ಎನ್ನುವುದು. ಇದೇ ದಯಾನಂದ್ ಅವರು ನೂತನ ವರ್ಷಾಚರಣೆಯಲ್ಲೂ ಮಾದರಿ ಹಾಗು ಆದರ್ಶ ಮೆರೆದಿದ್ದಾರೆ.

ಹೌದು..ಇದನ್ನು ಕೇಳಿದ್ರೆ ಅಚ್ಚರಿಯಾಗಬಹುದು.ಇಡೀ ಜಗತ್ತು ಸಕಲ ಸಂಭ್ರಮ-ವೈಭೋಗಗಳಲ್ಲಿ ಮೈಮರೆತು ಡಿಸೆಂಬರ್ 31ರ ರಾತ್ರಿ ಹೊಸ ವರ್ಷಾಚರಣೆ ಮಾಡಿದ್ರೆ ದಯಾನಂದ್ ಅವರು,ಮಾತ್ರ ಮಾರನೇ ದಿನ ಅಂದರೆ ಇಂದು ಬೆಳಗ್ಗೆ  ಹೊಸ ವರ್ಷವನ್ನು ವಿನೂತನವಾಗಿಯಷ್ಟೇ ಅಲ್ಲ ಮಾದರಿ-ಆದರ್ಶಪ್ರಾಯರಾಗಿ ಆಚರಿಸಿ ಎಲ್ಲರ ಗಮನ ಸೆಳೆದಿದ್ದಾರೆ.ಸೋಶಿಯಲ್ ಮೀಡಿಯಾಗಳಲ್ಲಿ ಅವರ ಬದ್ಧತೆ-ಸಾಮಾಜಿಕ ಕಳಕಳಿ ಹಾಗೂ ಸಂವೇದನಾಶೀಲತೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇಂದು ಬೆಳಗ್ಗೆ ನೇರವಾಗಿ ಅನಾಥ ಆಶ್ರಮಕ್ಕೆ ತೆರಳಿದ ದಯಾನಂದ್ ಅವರು ಅಲ್ಲಿದ್ದ ದೇವರ ಮಕ್ಕಳ ಜೊತೆಗೆ ಕೇಕ್ ಕಟ್ ಮಾಡಿ ಹೊಸ ವರ್ಷವನ್ನು ಆಚರಿಸಿಕೊಂಡರು.ಮಕ್ಕಳು ಕೂಡ ದಯಾನಂದ್ ಅವರಿಗೆ ಶುಭಾಷಯ ಕೋರಿದರು. ಪ್ರತಿ ವರ್ಷವು ಅನಾಥ ಆಶ್ರಮ ಮಕ್ಕಳ ಜೊತೆ ಬಿ ದಯಾನಂದ ಅವರು ವರ್ಷಾಚರಣೆ ಮಾಡುವುದು  ಸಂಪ್ರದಾಯವಾಗಿ ಬಂದಿದೆ.ಅದರ ಮುಂದುವರೆದ ಭಾಗವಾಗಿಯೇ ಇವತ್ತು ಅನಾಥಮಕ್ಕಳ ಜತೆ ಸಂಭ್ರಮಿಸಿದರು. ತಮ್ಮ ಜತೆ ಇದ್ದ ಅಧಿಕಾರಿ ಮತ್ತು ಸಿಬ್ಬಂದಿಗು ಸಹ ಇಂಥಾ ಕೆಲಸ ಮಾಡುವ ಮುಲಕ ಮಾದರಿಯಾಗಬೇಕೆಂದು ತಿಳಿ ಹೇಳಿದರು. ತಮ್ಮ ವ್ಯಾಪ್ತಿಯ ಅನಾಥ ಆಶ್ರಮ, ವೃದ್ದಶ್ರಾಮ, ವಿಶೇಷ ಮಕ್ಕಳನ್ನು ಭೇಟಿ ಮಾಡಿ ಶುಭಾಶಯ ತಿಳಿಸಿ ಹೊಸ ವರ್ಷ ಆಚರಣೆ ಮಾಡುವಂತೆ  ಈಗಾಗಲೇ ಸೂಚನೆ ನೀಡಿದ್ದು,ನಗರದ ಪೊಲೀಸ್ ಅಧಿಕಾರಿಗಳು ಅನಾಥ ಆಶ್ರಮ ಹಾಗೂ ವೃದ್ದಶ್ರಾಮಗಳಿಗೆ ಭೇಟಿ ನೀಡಿ ಅವರೊಂದಿಗೆ ಸಂಭ್ರಮಾಚರಣೆ ಮಾಡಿಕೊಳ್ಳುತ್ತಿರುವುದು ವಿಶೇಷ.

ALSO READ :  ಎಕ್ಸೆಲ್ ಕಾಲೇಜಿನಿಂದ ವಿಷವಾಯಿತಾ ಗುರುವಾಯನಕೆರೆ? ಮೀನುಗಳ ಮಾರಣಹೋಮಕ್ಕೆ ಯಾರು ಹೊಣೆ!

Political News

ಗ್ಯಾರೆಂಟಿ ಹೊರೆಗಳಿಂದ ಮತ್ತಷ್ಟು ಬಡವಾಯ್ತೇ ರಾಜ್ಯ ಸರ್ಕಾರ?

ಬಾಗಲಕೋಟೆ ಉಪಚುನಾವಣೆ ಕಣದಲ್ಲಿ ರಾಜಕೀಯದ ಜಿದ್ದಾಜಿದ್ದಿ, ಮುನ್ನೆಲೆಗೆ ಬಂದ ದಶಕಗಳಿಂದ ಬಗೆ ಹರಿಯದ ಸಮಸ್ಯೆಗಳು

ಬಾಗಲಕೋಟೆ ಉಪಚುನಾವಣೆಯ ‘ಕೈ’ ಗ್ರೌಂಡ್ ರಿಪೋರ್ಟ್ ಬಹಿರಂಗ; ಯಾರಿಗೆ ಎಷ್ಟು ಪರ್ಸೆಂಟ್ ಗೆಲ್ಲುವ ಚಾನ್ಸ್?

ಪಂಚರಾಜ್ಯಗಳ ಚುನಾವಣಾ ಅಖಾಡದಲ್ಲಿ ಖಾಕಿ ಹದ್ದಿನ ಕಣ್ಣು: ಬರೋಬ್ಬರಿ ₹650 ಕೋಟಿ ಮೌಲ್ಯದ ನಗದು, ಮದ್ಯ, ಡ್ರಗ್ಸ್ ಸೀಜ್

ನಾಳೆ ಬಟಾಬಯಲಾಗಲಿದೆಯಂತೆ ಪರಿಶ್ರಮ ಗೋಲ್ಮಾಲ್‌ .! ಕಳಚಲಿದೆಯಂತೆ ಪ್ರದೀಪ್‌ ಈಶ್ವರ್‌ ಮುಖವಾಡ..!

ದಾವಣಗೆರೆ (ದಕ್ಷಿಣ) ದಂಗಲ್‌:ಮಾದ್ಯಮ-ರಿಪೋರ್ಟರ್‌ ಗಳು(ಕೆಲವು) ಮಾಲಾಮಾಲ್..! ಕ್ಯಾಮೆರಾಮನ್‌ ಗಳು ಕಂಗಾಲ್..!

ಕೇಜ್ರಿವಾಲ್ ಆಪ್ತ ಚಡ್ಡಾಗೆ ಬಿಗ್ ಶಾಕ್: ರಾಜ್ಯಸಭಾ ಉಪ ನಾಯಕನ ಸ್ಥಾನದಿಂದ ವಜಾ..!

ಯುದ್ಧ ಅಮೆರಿಕದ್ದು, ಹಣ ನಿಮ್ಮದು! ಅರಬ್ ರಾಷ್ಟ್ರಗಳಿಗೆ ಟ್ರಂಪ್ ನೀಡಿದ ಶಾಕಿಂಗ್ ಆಫರ್ ಏನು?

Scroll to Top