advertise here

Search

“ವಿಸ್ತಾರ” ಪುನರಾಂಭಕ್ಕೆ ದೊಡ್ಡ ಹಿನ್ನಡೆ..!! “ಚಾನೆಲ್” ಮಾಲೀಕತ್ವದ ಕಂಪೆನಿಯ ಸ್ವತ್ತುಗಳು ಜಪ್ತಿ..!?


ಬೆಂಗಳೂರು: ಹಿರಿಯ ಪತ್ರಕರ್ತ ಹಾಗೂ ವಿಸ್ತಾರ ನ್ಯೂಸ್ ಚಾನೆಲ್ ನ ನಿರ್ದೇಶಕರಲ್ಲಿ ಒಬ್ಬರೆನ್ನಲಾಗಿದ್ದ ಹರಿಪ್ರಕಾಶ್ ಕೋಣೆಮನೆ ವಿರುದ್ಧ ಮಾಹಿತಿ ಮತ್ತು  ಪ್ರಸಾರ ಸಚಿವಾಲಯಕ್ಕೆ ದೂರು ಸಲ್ಲಿಕೆಯಾಗಿದೆ ಎಂದು ಮಾದ್ಯಮಗಳು ವರದಿ ಮಾಡಿವೆ.ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ಪಾಲುದಾರರೂ ಆಗಿರುವ ಮೈಸೂರು ಮರ್ಕಂಟೈಲ್  ಕಂಪೆನಿಯ  ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಡಾ.ಎಚ್.ಎಸ್ ಶೆಟ್ಟಿ ಅವರು ದೂರು ನೀಡಿದ್ದಾರೆನ್ನಲಾಗಿದ್ದು,ಅನುಮತಿ ಇಲ್ಲದೆ ಕಂಪೆನಿಯ ಷೇರುಗಳನ್ನು ಹಸ್ತಾಂತರಿಸಿದ್ದಾರೆನ್ನುವುದು ಕೋಣೆಮನೆ ಮೇಲೆ ಕೇಳಿಬಂದಿರುವ ಆಪಾದನೆ.

ಅನುಮತಿ ಇಲ್ಲದೆ ಷೇರುಗಳನ್ನು ಇನ್ನೊಬ್ಬರಿಗೆ ಮಾರಬಾರದೆನ್ನುವುದು ಕಂಪೆನಿ ರೂಲ್ಸ್.ಆದರೆ ಕೋಣೆಮನೆ ಅವರು ನಿಯಮಗಳನ್ನು ಉಲ್ಲಂಘಿಸಿ ಕಂಪೆನಿ ಷೇರುಗಳನ್ನು ಬೇರೆಯವರಿಗೆ ಹಸ್ತಾಂತರಿಸಿದ್ದಾರೆ ಎಂದು ಆಪಾದಿಸಲಾಗಿದೆ.  ಅಷ್ಟೇ ಅಲ್ಲ  ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಖಾತೆ, ಪಂಡ್,ಆಸ್ತಿ.ಹೂಡಿಕೆಗಳನ್ನೆಲ್ಲಾ ಜಪ್ತಿ ಮಾಡುವಂತೆಯೂ ದೂರಿನಲ್ಲಿ ಮನವಿ ಮಾಡಲಾಗಿತ್ತು.ಇದನ್ನು ಗಂಭೀರವಾಗಿ ಪರಿಗಣಿಸಿದ ರಾಷ್ಟ್ರೀಯ ಕಂಪೆನಿ  ಲಾ ಟ್ರಿಬ್ಯೂನಲ್  ಕಂಪೆನಿಯ ಸ್ವತ್ತುಗಳನ್ನೆಲ್ಲಾ ಜಪ್ತಿ ಮಾಡಿದೆ ಎಂದು ವರದಿಯಾಗಿದೆ.

ವಿಸ್ತಾರ ನ್ಯೂಸ್ ಚಾನೆಲ್ ನ ಮುಖ್ಯಸ್ಥರಾಗಿದ್ದ ಹಿರಿಯ ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ
ವಿಸ್ತಾರ ನ್ಯೂಸ್ ಚಾನೆಲ್ ನ ಮುಖ್ಯಸ್ಥರಾಗಿದ್ದ ಹಿರಿಯ ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ

ಹರಿಪ್ರಕಾಶ್ ಕೋಣೆಮನೆ ಅವರಷ್ಟೇ ಅಲ್ಲ ಕಂಪೆನಿ ಜತೆ ಗುರುತಿಸಿಕೊಂಡಿರುವ ಸಾಕಷ್ಟು ಪಾಲುದಾರರ  ಖಾಸಗಿ ಸ್ವತ್ತು ಹಾಗು ಬ್ಯಾಂಕ್ ಅಕೌಂಟ್ ಗಳನ್ನು ಕೂಡ ಸೀಜ್ ಮಾಡಲಾಗಿದೆ ಎಂದು ಮಾದ್ಯಮಗಳು ವರದಿ ಮಾಡಿವೆ.ಈ ರೀತಿ ಜಪ್ತಿ ಮಾಡಿರುವುದು ತೀರಾ ಅಪರೂಪದ ಪ್ರಕರಣ ಎನ್ನಲಾಗಿದೆ.ಸಹಜವಾಗಿ ಈ ರೀತಿಯ ಸನ್ನಿವೇಶಗಳು ನಡೆಯುವುದಿಲ್ಲ.ಆದರೆ ಈ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ ಇಂತದ್ದೊಂದು ಆದೇಶ ನೀಡಿರುವುದರಿಂದ ವಿಸ್ತಾರ ಚಾನೆಲ್ ನ ಅನೇಕ ನಿರ್ದೇಶಕರಿಗೆ ತೀವ್ರ ಹಿನ್ನಡೆ ಹಾಗು ಮುಜುಗರ ಉಂಟಾಗಿದೆ.

ALSO READ :  ರಾಜ್ಯೋತ್ಸವದ ಹೊಸ್ತಿಲಲ್ಲೇ ಕನ್ನಡ ಸಾಹಿತ್ಯ ಪರಿಷತ್ ಗೆ ಮರ್ಮಾಘಾತ..! ಪರಿಷತ್ ನಿಂದ ಹೊರಬಿದ್ದ ಕನ್ನಡದ ಕಟ್ಟಾಳು ಜೆ.ಎಂ ರಾಜಶೇಖರ್..
ವಿಸ್ತಾರ ನ್ಯೂಸ್ ಚಾನೆಲ್ ಆರಂಭಗೊಂಡು ವೈಭವ ಮೆರೆದಿದ್ದೆಲ್ಲಾ ಈಗ ಇತಿಹಾಸ
ವಿಸ್ತಾರ ನ್ಯೂಸ್ ಚಾನೆಲ್ ಆರಂಭಗೊಂಡು ವೈಭವ ಮೆರೆದಿದ್ದೆಲ್ಲಾ ಈಗ ಇತಿಹಾಸ

ದೂರುದಾರರ ಪ್ರಕಾರವೇ ಹರಿಪ್ರಕಾಶ್ ಕೋಣೆಮನೆ ಮಾಡಿದ್ದೇನು..? ಮೈಸೂರು ಮರ್ಕಂಟೈಲ್  ಕಂಪೆನಿಯ  ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಡಾ.ಎಚ್.ಎಸ್ ಶೆಟ್ಟಿ ಅವರ ದೂರಿನಲ್ಲಿ ಉಲ್ಲೇಖವಾಗಿರುವ ಸಂಗತಿಗಳ ಪ್ರಕಾರ ಹರಿಪ್ರಕಾಶ್ ಕೋಣೆಮನೆ  ಮತ್ತು ಇತರರು ವಿಸ್ತಾರ ಕಂಪೆನಿಯ ವ್ಯವಹಾರ ನೋಡಿಕೊಳ್ಳುತ್ತಿದ್ದರು.ಆದರೆ ಅವರೆಲ್ಲರು ಕಂಪೆನಿಯ ಹಿತಾಸಕ್ತಿಗೆ ವಿರುದ್ದವಾಗಿ ಕೆಲಸ ಮಾಡುತ್ತಿದ್ದಾರೆ.ಮೋಸದಿಂದ ಆಡಳಿತ ನಡೆಸುತ್ತಿದ್ದಾರೆ.ಆದಾಯ ಕರ ಇಲಾಖೆ ಮತ್ತು ಜಿಎಸ್ ಟಿ ಗೆ ಮಾಹಿತಿ ನೀಡದೆ  ಹಣದ ವ್ಯವಹಾರದಲ್ಲಿ ತೊಡಗಿದ್ದರು.ತಮ್ಮ ಅವ್ಯವಹಾರ ಮುಚ್ಚಿಕೊಳ್ಳಲು  ಆಡಿಟರ್ ಅಥವಾ ಸಿಎಸ್  ಅವರನ್ನು ನೇಮಿಸಿಕೊಂಡಿರಲಿಲ್ಲ ಹಾಗೆಯೇ ಷೇರುಗಳನ್ನು  ಅಕ್ರಮವಾಗಿ ಬೇರೆಯವರಿಗೆ ಹಂಚಿದ್ದಾರೆ.ಇದೆಲ್ಲವೂ ಕಂಪೆನಿ  ನಿಯಮಗಳಿಗೆ ವಿರುದ್ಧವಾಗಿ ನಡೆದಿರುವುದರಿಂದ ಹರಿಪ್ರಕಾಶ್ ಕೋಣೆಮನೆ ಹಾಗೂ ಇತರರ ಸ್ವತ್ತುಗಳನ್ನು ಜಪ್ತಿ ಮಾಡಬೇಕು.ಕಂಪೆನಿಯ ಸ್ವತ್ತುಗಳನ್ನು ಜಪ್ತಿ ಮಾಡಬೇಕು ಎಂದು ಮನವಿ ಮಾಡಿದ್ದರು.ಇದೆಲ್ಲದರ ಮೇರೆಗೆ ಟ್ರಿಬ್ಯೂನಲ್ ಕಠಿಣ ನಿರ್ದಾರಕ್ಕೆ ಬಂದು ಎಲ್ಲಾ ಸ್ವತ್ತುಗಳನ್ನು ಜಪ್ತಿ ಮಾಡಿದೆ.

ಈ ಬೆಳವಣಿಗೆಯಿಂದ ವಿಸ್ತಾರ ನ್ಯೂಸ್ ಪುನರ್ ಆರಂಭವಾಗಬಹುದೆನ್ನುವ ನಿರೀಕ್ಷೆಗಳಿಗೆ ತಣ್ಣೀರು ಬಿದ್ದಂತಾಗಿದೆ ಎನ್ನಲಾಗುತ್ತಿದೆ.ಉದ್ಯಮಿಯೊಬ್ಬರು ಚಾನೆಲ್ ನಡೆಸಲು ಮುಂದಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದರೆನ್ನಲಾಗುತ್ತಿತ್ತು. ಕೆಲಸ ಕಳೆದುಕೊಂಡ ಮಾಜಿ ಉದ್ಯೋಗಿಗಳು ಮತ್ತೆ ಚಾನೆಲ್ ಆರಂಭವಾದ್ರೆ ಬದುಕುಗಳು ಮತ್ತೆ ಹಳಿಗೆ ಬರಬಹುದೇನೋ ಎನ್ನುವ ನಿರೀಕ್ಷೆಯಲ್ಲಿದ್ದರು.ಆದರೆ ಈ ಒಂದು ಬೆಳವಣಿಗೆಯಿಂದಾಗಿ ಆ ಎಲ್ಲಾ ನಿರೀಕ್ಷೆಗಳು ಬುಡಮೇಲಾದಂತಾಗಿವೆ. ವಿಸ್ತಾರ ಚಾನೆಲ್ ವಿಚಾರದಲ್ಲಿ ಎದುರಾಗಿರುವ ಕಾನೂನಾತ್ಮಕ ತೊಡಕುಗಳು ನಿವಾರಣೆ ಆಗುವವರೆಗೂ ಚಾನೆಲ್ ಪುನಾರಂಭ   ಎನ್ನುವುದು ಕೇವಲ ಕನಸು  ಎಂದೇ ವಿಶ್ಲೇಷಿಸಲಾಗುತ್ತಿದೆ.


Political News

ಎಲೆನ್ (allen) ಅಕ್ರಮದ ಸಕ್ರಮಕ್ಕೆ ಮುಂದಾಯ್ತಾ ಶಿಕ್ಷಣ ಇಲಾಖೆ..? ಕ್ರಮಕ್ಕೆ ಶಿಫಾರಸ್ಸು ಮಾಡಿದ್ದ  ಡಿಡಿಪಿಯು(ddpu) ಮನೋಹರ್  ಕೊಳ್ಳಾ “ಯೂ ಟರ್ನ್” ಹಿಂದಿದ್ಯಾ “ಮೆಗಾ ಪ್ಲ್ಯಾನ್”-“ಬಿಗ್ ಡೀಲ್”..!?

EXCLUSIVE….. ಯಾವ ಕ್ಷಣದಲ್ಲೂ ಎಲೆನ್‌ (ALLEN) ಟ್ಯೂಷನ್‌ ಸೆಂಟರ್ಸ್‌ ಗಳಿಗೆ ಬೀಗ..?!

BBMP ಯುಗಾಂತ್ಯ-ಗ್ರೇಟರ್ ಬೆಂಗಳೂರು ಯುಗಾರಂಭ..GBA ಗೆ ತುಷಾರ ಗಿರಿನಾಥ್ ಬಾಸ್…!

“ಯುದ್ಧಭೂಮಿ”ಯಲ್ಲಿ ಪ್ರಾಣದ ಹಂಗು ತೊರೆದ “ಮಾದ್ಯಮಯೋಧರು”

ಶೈಕ್ಷಣಿಕ ನಿಯಮ ಉಲ್ಲಂಘಿಸಿ “ಡೆಲ್ಲಿ ಪಬ್ಲಿಕ್‌ ಸ್ಕೂಲ್‌” ನಿರ್ಮಾಣ..!?

ಇದೆಂಥಾ ನ್ಯಾಯ.? ಸಂಬಂಧಿಗೇ ಸಾಲ.. ?! ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರ ವಿರುದ್ಧ “ಸ್ವಜನ ಪಕ್ಷಪಾತ” ಆರೋಪ..?!

ಈ ಸುದ್ದಿ ನಮ್ಮಲ್ಲಿ ಮಾತ್ರ…POLITICAL EXCLUSIVE… ಕಾಂಗ್ರೆಸ್ ಗೆ ಗುಡ್ ಬೈ..! ಬಿಜೆಪಿಗೆ ಜೈ..ಜೈ.. ! 60 ಶಾಸಕರಿಗೆ ಗಾಳ….! 42 ಶಾಸಕರ ಲೀಸ್ಟ್ ರೆಡಿ..! ನವೆಂಬರ್ ಗೆ “ಡಿಕೆಶಿ” ಜಂಪಿಂಗ್ ಪಕ್ಕಾ..!

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಲೀಸ್ಟ್ ನ ಆ ಮುಂಚೂಣಿ ಹೆಸರು..ರೇಸ್ ನಲ್ಲಿರೋರು ಯಾರ್ ಗೊತ್ತಾ..!?

Scroll to Top