advertise here

Search

ಇದೆಂಥಾ ನ್ಯಾಯ.? ಸಂಬಂಧಿಗೇ ಸಾಲ.. ?! ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರ ವಿರುದ್ಧ “ಸ್ವಜನ ಪಕ್ಷಪಾತ” ಆರೋಪ..?!


ಇದೆಂಥಾ ನ್ಯಾಯ.? ಸಂಬಂಧಿಗೇ ಸಾಲ.. ?! ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರ ವಿರುದ್ಧ ಸ್ವಜನ ಪಕ್ಷಪಾತ ಆರೋಪ..?!

ಸೀರೆ ವ್ಯಾಪಾರಕ್ಕೆ ಸಾಲ ನೀಡುವಂತೆ ನಿಗಮದ ಉಪನಿರ್ದೇಶಕರಿಂದ ಬ್ಯಾಂಕ್ ಮ್ಯಾನೇಜರ್ ಗೆ ಪತ್ರ…   

ಬೆಂಗಳೂರು: ಇದು ಸತ್ಯವೇ ಆಗಿದ್ದಲ್ಲಿ,..ಅಲ್ಲದೇ ಹೀಗೋಂದು ಅವಕಾಶ ಕಾನೂನಿನ ಚೌಕಟ್ಟಿನಲ್ಲಿ ಇಲ್ಲದಿದ್ದರೆ ನಿಜಕ್ಕೂ ಇದಕ್ಕಿಂತ ಮುಜುಗರಕಾರಿ ಹಾಗೂ ಅಪಮಾನಕಾರಿ ಸಂಗತಿ ಮತ್ತೊಂದಿರಲಾರದು.?  ಏಕೆಂದರೆ ಎಲ್ಲೆಡೆ ಹರಿದಾಡುತ್ತಿರುವ ಆ ಒಂದು ದಾಖಲೆಯಲ್ಲಿರುವ ಅಂಶವೇ ಅಷ್ಟೊಂದು ಸ್ಪೋಟಕವಾಗಿದೆ.

ರಾಜ್ಯ ಮಹಿಳಾ ಅಭಿವೃದ್ದಿ ನಿಗಮಕ್ಕೆ ಅಧ್ಯಕ್ಷರಾಗಿರುವಂಥವರ ವಿರುದ್ಧ ಸ್ವಜನ ಪಕ್ಷಪಾತದ ಆಪಾದನೆ ಹೇಳಿಬಂದಿದೆ. ಸಾಮಾಜಿಕ ಕಾರ್ಯಕರ್ತರಾದ ಮಂಜುನಾಥ್‌ ಅವರು ದಾಖಲೆ ಸಮೇತ ಇಂತದ್ದೊಂದು ಗಂಭೀರ ಆಪಾದನೆ ಮಾಡಿದ್ದಾರೆ.ಏಕೆಂದರೆ ಅಧ್ಯಕ್ಷರ  ತೀರಾ ಹತ್ತಿರದ ಸಂಬಂಧಿಗೆ ಅವರ ನಿಗಮದಲ್ಲೇ ಸೀರೆ ವ್ಯಾಪಾರಕ್ಕೆ ಸಾಲ ನೀಡಲು ಶಿಫಾರಸ್ಸು ಮಾಡಲಾಗಿದೆ.ಕೆಲವು ಮೂಲಗಳ ಪ್ರಕಾರ ಸಾಲವೂ ಮಂಜುರಾಗಿದೆಯಂತೆ.ಅದರಲ್ಲೇನಿದೆ ವಿಶೇಷ ಎಂದು ಅನೇಕರು ಪ್ರಶ್ನಿಸಬ ಹುದು.ವಿಷಯ ಇರೋದೇ ಅಲ್ಲ.ಆರ್ಥಿಕವಾಗಿ ಅನುಕೂಲಕರ ಸ್ಥಿತಿಯಲ್ಲಿರುವ ಅವರ ಸಂಬಂಧಿಯ ಹೆಸರು ಫಲಾನೂಭವವಿಗಳ ಪಟ್ಟಿಯಲ್ಲಿ ಸೇರೊಕ್ಕೆ ಮುಖ್ಯ ಕಾರಣವೇ ಅಧ್ಯಕ್ಷರು ಎನ್ನುವುದು ಮಂಜುನಾಥ್‌ ಅವರ ಆಪಾದನೆ.

ತೀರಾ ಹತ್ತಿರದ ಸಂಬಂಧಿಗೆ ಅಧ್ಯಕ್ಷರಾಗಿರುವ ಅವರದೇ ನಿಗಮವೊಂದರಿಂದ ಸಾಲಕ್ಕೆ ಶಿಫಾರಸ್ಸು ಮಾಡಲಾಗಿದೆ.ಹಾಗೊಂದು ಶಿಫಾರಸ್ಸು ಮಾಡಿರುವುದು ನಿಗಮದ ಉಪನಿರ್ದೆಶಕರು. ಮೇಲ್ನೋಟಕ್ಕೆ ಉಪನಿರ್ದೇಶಕರು ಶಿಫಾರಸ್ಸು ಮಾಡಿರಬಹುದಾದ್ರೂ ಆ ಸಂಬಂಧಿಯ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಸೇರೊಕ್ಕೆ ಮುಖ್ಯ ಕಾರಣವೇ ಅಧ್ಯಕ್ಷರು ಎನ್ನುವುದು ಮಂಜುನಾಥ್‌ ಅವರ ಮುಂದುವರೆದ ಆಪಾದನೆ.ಅಂದ್ಹಾಗೆ ಅಧ್ಯಕ್ಷರ ಸಂಬಂಧಿ ಎನ್ನಲಾಗಿರುವ ಮಹಿಳೆಗೆ ಮಂಜೂರಾಗಲು ಶಿಫಾರಸ್ಸು ಮಾಡಲಾಗಿದೆ ಎನ್ನಲಾಗಿರುವ  ಆ ಎಕ್ಸ್ ಕ್ಲ್ಯೂಸಿವ್  ದಾಖಲೆ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಲಭ್ಯವಾಗಿದೆ.

ವ್ಯವಸ್ಥಾಪಕರು  ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ  ರಾಜಾಜಿನಗ ಶಾಖೆ ಬೆಂಗಳೂರು-೫೬೦೦೧೦ ಅವರಿಗೆ  ೨೨/೦೧/೨೦೨೫ ರಂದು ಉಪನಿರ್ದೇಶಕರು ಮಹಿಳಾ ಮತ್ತು ಕಲ್ಯಾಣ ಅಭಿವೃದ್ಧಿ ಇಲಾಖೆ ಅವರು ಪತ್ರ ಬರೆದಿದ್ದಾರೆ.ಅಂದ್ಹಾಗೆ ಪತ್ರದಲ್ಲಿ ಉಲ್ಲೇಖವಾಗಿರುವ ಸಂಗತಿಗಳು ಇಂತಿವೆ.ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಉದ್ಯೋಗಿನಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು. 2024 25 ನೇ ಸಾಲಿನ ಉದ್ಯೋಗಿನಿ ಯೋಜನೆಯ ಸರ್ಕಾರಿ ವಿವೇಚನಾ ಕೋಟಾದಲ್ಲಿ ಒಟ್ಟು 54 ಮಹಿಳೆಯರನ್ನು ಆಯ್ಕೆ ಮಾಡಲಾಗಿರುತ್ತಿದೆ.ಆಯ್ಕೆಯಾಗಿರುವ ಮಹಿಳೆಯರಿಗೆ ಸಾಲ ಮಂಜೂರಾತಿ ಮಾಡಿದ್ದಲ್ಲಿ, ನಿಗಮದಿಂದ ಸಹಾಯಧನ ಬಿಡುಗಡೆ  ಮಾಡಲಾಗುವುದು ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಬಯಸುತ್ತಾ, ಸದರಿ ಅರ್ಜಿದಾರರಿಗೆ ಸಾಲ ಮಂಜೂರು ಮಾಡಲು ಈ ಮೂಲಕ ಕೋರಿದೆ.

ಇದರೊಂದಿಗೆ ಅರ್ಜಿದಾರರ ಅರ್ಜಿ ಹಾಗೂ ಇನ್ನಿತರೆ ದಾಖಲಾತಿಗಳನ್ನು ಈ ಪತ್ರಕ್ಕೆ ಸಲ್ಲಿಸಿ ಅರ್ಜಿದಾರರ ವಿವರ ಕಂಡಂತೆ ನಮೂದಿಸಿದೆ.( ಬ್ಯಾಂಕಿನಿಂದ ಒಂದು ಲಕ್ಷದಿಂದ 3, ಸಾಲ ಮಂಜೂರು ಮಾಡುವಲ್ಲಿ ನಿಗಮದಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಶೇಕಡ 50 ಅಥವಾ ಒಂದುವರೆ ಲಕ್ಷ ಸಹಾಯಧನ( 1,50,000) ಹಾಗೂ  ಇತರೆ ಮಹಿಳೆಯರಿಗೆ 30 ಶೇಕಡ ಅಥವಾ 90 ಸಾವಿರ ಸಹಾಯಧನವನ್ನು ಬ್ಯಾಕ್ ಎಂಡ್ ಬ್ಯಾಕ್ ಸಬ್ಸಿಡಿಯಾಗಿ ಬಿಡುಗಡೆ ಮಾಡಲಾಗುವುದು. ಹಾಗೂ ಅರ್ಜಿದಾರರ ಕೆಳಕಂಡಂತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಮೇಲ್ಕಂಡ ಸಂಗತಿಗಳನ್ನು ಗಮನಿಸಿದ್ರೆ ಮೇಲ್ನೋಟಕ್ಕೆ ಇದೆಲ್ಲವನ್ನು ಉಪನಿರ್ದೇಶಕರೇ ಮಾಡಿದ್ದಾರೆಂದೆನಿಸುವುದು ಸತ್ಯ.ಆದರೆ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿ ಸುವುದು ಅವರೊಬ್ಬರೇ ಅಲ್ವಲಾ..? ಎಲ್ಲಾ ಫಲಾನುಭವಿಗಳ ಪಟ್ಟಿಯು ಅಧ್ಯಕ್ಷರ ಕಣ್ಣು ತಪ್ಪಿ ಉಪನಿರ್ದೇಶಕರ ಬಳಿ ಹೋಗುವುದಿಲ್ಲ. ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸುವುದರಲ್ಲಿ ಅಧ್ಯಕ್ಷರ ಪಾತ್ರವೂ ಇರುತ್ತದೆ. ಹಾಗಾಗಿ ಅವರಿಗೆ ತಮ್ಮ ತೀರ  ಹತ್ತಿರದ ಸಂಬಂಧಿಯ ಹೆಸರು ಪಟ್ಟಿಯಲ್ಲಿರುವುದು ಗೊತ್ತಾಗದೆ ಇರಲಿಕ್ಕೆ ಸಾಧ್ಯವೇ ಇಲ್ಲ..ಕಣ್ ತಪ್ಪಿನಿಂದ ಇದೆಲ್ಲಾ ಆಗಿದೆ ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸಿದ್ರೂ ಅದು ಆಡಳಿತಾತ್ಮಕ ಹಾಗೂ ತಾಂತ್ರಿಕವಾಗಿ ಸಾಧ್ಯವೇ ಇಲ್ಲ ಎನ್ನುತ್ತಾರೆ ಅದೇ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ.

ಸಂಬಂಧಿಗಳನ್ನು ಆಯ್ಕೆ ಮಾಡಲು ಅವಕಾಶ ಇದೆಯೇ..? ಅದು ಸ್ವಜನಪಕ್ಷಪಾತ ಎನಿಸಿಕೊಳ್ಳುವುದಿಲ್ಲವೇ..?  ಇದೆಲ್ಲದರ ನಡುವೆ ಸೃಷ್ಟಿಯಾಗುವ ಪ್ರಶ್ನೆ ಹತ್ತಿರದ ಸಂಬಂಧಿಗಳನ್ನು ಫಲಾನುಭವಿ ಪಟ್ಟಿಯಲ್ಲಿ ಸೇರಿಸಿದರೆ ತಪ್ಪೇನಿದೆ..? ಅದರಿಂದ ಆಗುವಂಥ ಮಹಾಪ್ರಮಾದವೇನು..? ಎಂದು ಪ್ರಶ್ನಿಸಬಹುದು.ಅದಕ್ಕೆ ಅವಕಾಶವೂ ಇದೆ ಎಂದು ವಾದಿಸಬಹುದು.ಹಾಗೆಲ್ಲಾ ಅವಕಾಶವಿದ್ದರೆ ಅದನ್ನು ಒಪ್ಪಿಕೊಳ್ಳೋಣ..ಆದ್ರೆ  ಆತ್ಮಸಾಕ್ಷಿ ಹಾಗೂ ನೈತಿಕತೆ ಎನ್ನೋದಕ್ಕೆ ಇದು ತದ್ವಿರುದ್ದವಾಗಿದೆ.

ALSO READ :  ಬಿಜೆಪಿ ಆಡಳಿತದಲ್ಲಿ 619 ಕೋಮುಗಲಭೆಯ ಕೇಸ್ ವಾಪಸ್: ಕಾಂಗ್ರೆಸ್ ಆರೋಪ

ಷ್ಟೇ ಅಲ್ಲ, ಸಂಬಂಧಿಯನ್ನು ಆಯ್ಕೆ ಮಾಡಿದ್ದರಿಂದ ನಿಜವಾಗಿ  ಇನ್ನೊಬ್ಬ ಅರ್ಹ ಫಲಾನುಭವಿಗೆ ಸಿಗಬಹುದಾಗಿದ್ದ ಯೋಜನೆಯ ನೆರವು ಕೈ ತಪ್ಪಿ ಹೋದಂತಾಗುವುದಿಲ್ಲವೇ..? ಸರ್ಕಾರಿ ನಿಯಮದಲ್ಲಿದ್ದರೂ ಮನಸಾಕ್ಷಿಒಪ್ಪುವ ಕೆಲಸ ಆಗಲಾರದಲ್ವಾ..? ಎನ್ನೋದಷ್ಟೇ ನಮ್ಮ ಪ್ರಶ್ನೆ.ಅಧ್ಯಕ್ಷರು ಅವರ ತೀರಾ ಹತ್ತಿರದ ಸಂಬಂಧಿಗೆ ಏಕೆ ಪ್ರಯೋಜನವನ್ನು ಕೊಟ್ಟಿರಿ..? ಸಂಬಂಧಿ ಯಾದ್ರೆ ಕೊಡಬಾರದೆನ್ನುವ ನಿಯಮವೇನಾದ್ರೂ ಇದೆಯೇ..? ಎಂದು ಪ್ರಶ್ನಿಸಿದ್ರೆ ನಮ್ಮದು ಖಂಡಿತಾ ಆ ವಾದವಲ್ಲ..ಮಾಜಿ ಮೇಯರ್ ಅವರನ್ನು ಅಪಮಾನಿಸಬೇಕೆನ್ನುವ ಉದ್ದೇಶವೂ ನಮ್ಮದಲ್ಲ.. ಅರ್ಹರೊಬ್ಬರಿಗೆ ಸಿಗಬೇಕಾದ ಸೌಲಭ್ಯ ಅನ್ಯಾಯವಾಗಿ ಕೈ ತಪ್ಪಿದಂತಾಗುತ್ತದೆ ಎನ್ನುವುದಷ್ಟೇ ನಮ್ಮ ಅಭಿಪ್ರಾಯ.

ಅಧಿಕಾರಿಗಳ ತಪ್ಪಾ..? ಅಧ್ಯಕ್ಷರ ಪ್ರಮಾದನಾ..ಯಾರದು ನಿಜವಾಗಿಯೂ ತಪ್ಪು….?! ದಾಖಲೆಗಳಲ್ಲಿ ಸರ್ಕಾರಿ ವಿವೇಚನಾ ಕೋಟಾದಲ್ಲಿ ಕೊಡಲಾಗಿದೆ ಎನ್ನುವುದು ಸ್ಪಷ್ಟವಾಗಿ ಉಲ್ಲೇಖವಾಗಿದೆ.ಕೋಟಾದಲ್ಲಿ ಫಲಾನುಭವಿಗಳ ಆಯ್ಕೆ ಮಾಡಲಾಗಿದೆ ಎನ್ನುವುದೇ ಸತ್ಯವಾದ್ರೆ ಅದನ್ನು ಸಿದ್ದಮಾಡಿದವರು ಯಾರು ಎನ್ನುವುದು ಪೃಶ್ನೆ.ಫಲಾನುಭವಿಗಳ ಪಟ್ಟಿ ಸಿದ್ದಪಡಿಸುವುದು ನನ್ನ ಕರ್ತವ್ಯವಲ್ಲ,ಅದು ನನ್ನ ಗಮನಕ್ಕೂ ಬರುವುದಿಲ್ಲ.ಅದನ್ನು ನಾನು ಪರಿಶೀಲಿಸುವ ಗೋಜಿಗೂ ಹೋಗುವುದಿಲ್ಲ.ಏಕೆಂದರೆ ಅದು ನನ್ನ ಕೆಲಸವಲ್ಲ ಎಂದು ಅನೇಕ ಕಾರಣ ಮುಂದೊಡ್ಡಿ ಅವರು ನುಣುಚಿಕೊಳ್ಳಬಹುದು.ಆದರೆ ಫಲಾನುಭವಿಗಳ ಪಟ್ಟಿ ಎನ್ನುವುದಷ್ಟೇ ಅಲ್ಲ ನಿಗಮದಿಂದ ಏನೇ ಒಂದು ಸಣ್ಣ ಪ್ರಕ್ರಿಯೆ ನಡೆಯಬೇಕಾದರೂ ಅದು ಅಧ್ಯಕ್ಷರ ಗಮನಕ್ಕೆ ಇಲ್ಲದೆ ಹೋಗಲು ಸಾಧ್ಯವೇ ಇಲ್ಲ.ಇದನ್ನು ನಾವು ಹೇಳುತ್ತಿಲ್ಲ.ನಿಗಮದಲ್ಲಿ ಕೆಲಸ ಮಾಡುವ ಕೆಲ ಸಿಬ್ಬಂದಿನೆ  ತಿಳಿಸುತ್ತಾರೆ.

ನನಗೂ ಫಲಾನುಭವಿಗಳ ಪಟ್ಟಿಗೂ ಸಂಬಂಧವೇ ಇಲ್ಲ..ಪಟ್ಟಿ ಯಾವಾಗ ಸಿದ್ದವಾಯಿತು..ಯಾವಾಗ ಅದು ಬಿಡುಗಡೆಯಾಯಿತೋ ನನಗೆ ಗೊತ್ತಿಲ್ಲ ಎಂದ್ರೆ ಅದು ತಮಾಷೆಯ ಮಾತಾಗುತ್ತೆ.ಅಧ್ಯಕ್ಷರು ಕಣ್ಣಾಡಿಸಿ ಅಪ್ರೂವಲ್‌ ನೀಡದ ಹೊರತು ಪಟ್ಟಿ ಅಲ್ಲಿಂದ ರವಾನೆಯಾಗುವುದೇ ಇಲ್ಲ..ಪಟ್ಟಿ ಸಿದ್ದವಾಗಿ ಅಲ್ಲಿಂದ ಪಾಸ್‌ ಆಗುವಾಗ ನಾನು ಗಮನಿಸಿಲ್ಲ ಎಂದರೂ ನಂಬೊಕ್ಕೆ ಸಾಧ್ಯವಿಲ್ಲ.ಎಲ್ಲವೂ ಅಧ್ಯಕ್ಷರ ಗಮನಕ್ಕೆ ಬಂದಿಯೇ ಫಲಾನುಭವಿಗಳ ಪಟ್ಟಿ ಸಿದ್ದವಾಗುತ್ತದೆ ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಅಧಿಕಾರಿ ಸಿಬ್ಬಂದಿ .ತಾನು ಮಾಡಿಲ್ಲ ಎಲ್ಲಾ ಅಧಿಕಾರಿಗಳೇ ಮಾಡಿದ್ದಾರೆ ಎಂದು ಅವರು ವಾದಿಸಬಹುದು.ಆದರೆ  ಅಂತಿಮವಾಗಿ ಪಟ್ಟಿ ಪರಿಶೀಲಿಸುವಾಗಲಾದರೂ ತಮ್ಮ ಸಂಬಂಧಿ ಹೆಸರಿರುವುದನ್ನು ಪತ್ತೆ ಮಾಡಿ ಅದನ್ನು ರದ್ದು ಮಾಡಬಹುದಿತ್ತಲ್ಲಾ..? ಅದನ್ನೇಕೆ ಅವರು ಮಾಡಲಿಲ್ಲ ಎನ್ನುವುದು ನೈತಿಕವಾದ ಪ್ರಶ್ನೆ.

ಅದರಲ್ಲಿ ಮಹಾ ಅಪರಾಧ ಆಗುವಂತದ್ದೇನಿದೆ..?ಇದೆ ಖಂಡಿತಾ ಇದೆ..!: ಅಧ್ಯಕ್ಷರ ತೀರಾ ಹತ್ತಿರದ ಸಂಬಂಧಿ ಹೆಸರನ್ನು ಫಲಾನುಭವಿಗಳ ಪಟ್ಟಿಯಲ್ಲಿ ಸೇರಿಸಿ ಸೀರೆ ಉದ್ಯೋಗಕ್ಕೆ ಸಾಲ ಪಡೆಯುವ ಮಟ್ಟದ ಬೆಳವಣಿಗೆಗಳಾದ್ರೆ ಅಧ್ಯಕ್ಷರು ಇದಕ್ಕೂ ನನಗೂ ಸಂಬಂಧವೇ ಇಲ್ಲ ಎನ್ನುವಂತಿದ್ದಾರೆ.ಅವರ ಪ್ರಕಾರ ಇದೇನು ಮಹಾ ಅಪರಾಧವಾ..? ಆಗಬಾರದ್ದೇನಾಗಿದೆ..? ಫಲಾನುಭವಿ ಎನಿಸಿಕೊಂಡವರು ಯೋಜನೆ ಲಾಭ ಪಡೆಯಕ್ಕೆ ಅನರ್ಹರಾ..? ಇದನ್ನು ವಿವಾದದ ವಿಷಯವನ್ನಾಗಿ ಸುವ ಅಗತ್ಯವೇನಿದೆ..? ಆಗಬಾರದ್ದೇನಾಗಿದೆ..? ಎಂದು ಪ್ರಶ್ನಿಸಬಹುದು. ಇದು ಅವರ ಪಾಲಿಗೆ ದೊಡ್ಡ ವಿಷಯವೇನೂ ಅಲ್ಲದಿರಬಹುದು.ಆದರೆ ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧ್ಯಕ್ಷರು ಸ್ವಜನ ಪಕ್ಷಪಾತ-ಸ್ವ ಹಿತಾಸಕ್ತಿಯಿಲ್ಲದೆ ಕೆಲಸ ಮಾಡಬೇಕಾಗುತ್ತದೆ.ಅವರ ಸಂಬಂಧಿಗಳು ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿದ್ದರೂ ಅದರ ಬಗ್ಗೆಒತ್ತಡವನ್ನಾಗಲಿ, ಶಿಫಾರಸ್ಸನ್ನಾಗಲಿ, ಪ್ರಭಾವವನ್ನಾಗಲಿ ಬೀರುವಂತಿಲ್ಲ.ಯಾರನ್ನು ಪ್ರಚೋದಿಸುವಂತಿಲ್ಲ.ಅದು ನೈತಿಕವಾದ ಪ್ರಶ್ನೆ..ಸಹಜವಾಗಿ ಉನ್ನತ ಸ್ಥಾನದಲ್ಲಿರುವವರು ಸರ್ಕಾರದ ಮಟ್ಟದಲ್ಲಿ ತಮ್ಮ ಸ್ವಂತದವರಿಗೆ ಅನುಕೂಲವಾಗುವಂಥ ಯಾವುದೇ ಕೆಲಸ ಮಾಡಿದ್ರೂ ಅದು ನೈತಿಕ ಪ್ರಶ್ನೆ ಹುಟ್ಟಿ ಹಾಕಿ ವಿವಾದಕ್ಕೆ ಎಡೆ ಮಾಡಿಕೊಟ್ಟ ಉದಾಹರಣೆಗಳು ಸಾಕಷ್ಟಿವೆ. ಹಾಗಾಗಿ ಅಧ್ಯಕ್ಷರು ಇದೇನ್‌ ಮಹಾ ವಿಷಯ..ಇದರಲ್ಲಿ ತಲೆ ಹೋಗುವಂತದ್ದೇನಿದೆ ಎಂದು ತೀರಾ ಹಗುರವಾಗಿ ಮಾತನಾಡುವಂತೆಯೇ ಇಲ್ಲ.  

ಇದು ಅಂದುಕೊಂಡಷ್ಟು ಸಾಮಾನ್ಯ ವಿಷಯವೇನಲ್ಲ.ಆಯಕಟ್ಟಿನ ಹುದ್ದೆಯಲ್ಲಿರುವ ಅಧ್ಯಕ್ಷರ ವಿರುದ್ಧ ಸ್ವಜನ ಪಕ್ಷಪಾತದಂಥ ಗಂಭೀರ ಆಪಾದನೆ.ಅವರು ಇದಕ್ಕು ನನಗೂ ಸಂಬಂಧವೇ ಇಲ್ಲ ಎಂದು ಹೇಳಬಹುದು.ಆದರೆ ಸಾಧ್ಯವೇ ಇಲ್ಲ.ನಿಗಮದಲ್ಲಿ ಯೋಜನೆಗಳಿಗೆ ಫಲಾನುಭವಿಗಳ ಪಟ್ಟಿ ಹೇಗೆಲ್ಲಾ ಸಿದ್ದವಾಗುತ್ತದೆ  ಎನ್ನುವುದು ನಮಗೂ ಗೊತ್ತಿದೆ.ಅಧ್ಯಕ್ಷರ ಸಂಬಂಧಿಯ ಹೆಸರು ಅದ್ಹೇಗೆ ಪಟ್ಟಿಯಲ್ಲಿ ಸೇರುತ್ತದೆ.ಇದರ ಹಿಂದೆ ಅಧ್ಯಕ್ಷರ ಶಿಫಾರಸ್ಸು-ಪ್ರಭಾವ ಅಥವಾ ಒತ್ತಡ ಕೆಲಸ ಮಾಡಿರುವ ಸಾಧ್ಯತೆಗಳಿವೆ.ಅಧ್ಯಕ್ಷರೆನಿಸಿಕೊಂಡವರು ಹೀಗೆಲ್ಲಾ ಮಾಡಬಾರದು.ತನಗೆ ಗೊತ್ತಿಲ್ಲದೆ ಇದೆಲ್ಲಾ ಆಗಿದೆ ಎನ್ನುವುದು ಅವರ ಗಮನಕ್ಕೆ ಬಂದ ಮೇಲಾದ್ರೂ ದೋಷ ಸರಿಪಡಿಸಿಕೊಳ್ಳಬಹುದಿತ್ತೇನೋ..? ಆದರೆ ಹಾಗೆ ಮಾಡದೆ ಸುಮ್ಮನಿರುವುದು ಕೂಡ ತಪ್ಪು..ಇದು ಸಾರ್ವಜನಿಕರಿಗೆ ತಿಳಿಯಬೇಕು..ಹಾಗಾಗಿ ಅಧ್ಯಕ್ಷರ ವಿರುದ್ಧ ದೂರು ಸಲ್ಲಿಸಲು ಸಿದ್ದತೆ ಮಾಡಿಕೊಂಡಿದ್ದೇವೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಮಂಜುನಾಥ ಗೌಡ.


Political News

ಶೈಕ್ಷಣಿಕ ನಿಯಮ ಉಲ್ಲಂಘಿಸಿ “ಡೆಲ್ಲಿ ಪಬ್ಲಿಕ್‌ ಸ್ಕೂಲ್‌” ನಿರ್ಮಾಣ..!?

ಇದೆಂಥಾ ನ್ಯಾಯ.? ಸಂಬಂಧಿಗೇ ಸಾಲ.. ?! ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರ ವಿರುದ್ಧ “ಸ್ವಜನ ಪಕ್ಷಪಾತ” ಆರೋಪ..?!

ಈ ಸುದ್ದಿ ನಮ್ಮಲ್ಲಿ ಮಾತ್ರ…POLITICAL EXCLUSIVE… ಕಾಂಗ್ರೆಸ್ ಗೆ ಗುಡ್ ಬೈ..! ಬಿಜೆಪಿಗೆ ಜೈ..ಜೈ.. ! 60 ಶಾಸಕರಿಗೆ ಗಾಳ….! 42 ಶಾಸಕರ ಲೀಸ್ಟ್ ರೆಡಿ..! ನವೆಂಬರ್ ಗೆ “ಡಿಕೆಶಿ” ಜಂಪಿಂಗ್ ಪಕ್ಕಾ..!

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಲೀಸ್ಟ್ ನ ಆ ಮುಂಚೂಣಿ ಹೆಸರು..ರೇಸ್ ನಲ್ಲಿರೋರು ಯಾರ್ ಗೊತ್ತಾ..!?

EXCLUSIVE..ಹಿರಿಯ “ಪತ್ರಕರ್ತ ದಿಗ್ಗಜ”ರೊಬ್ಬರಿಗೆ ಬಿಜೆಪಿ ಗಾಳ..!- ಆಯಕಟ್ಟಿನ ಹುದ್ದೆಗೆ ಡಿಮ್ಯಾಂಡ್..!

EXCLUSIVE…ಅಧಿಕಾರ ವಹಿಸಿಕೊಂಡ ದಿನವೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿಗೆ ಬಿಗ್ ಶಾಕ್..!

ಅಕ್ರಮ ಖಾತಾ ವರ್ಗಾವಣೆ ಆರೋಪಕ್ಕೆ ತುತ್ತಾದ AC ದುರ್ಗಶ್ರೀ,ತಹಸೀಲ್ದಾರ್ ವಿಭಾ ರಾಠೋಡ್ ವಿರುದ್ಧ ಮತ್ತೆರೆಡು ದೂರು…ಸಾಕ್ಷ್ಯವಿದ್ರೂ ಕ್ರಮ ಕೈಗೊಳ್ಳದೆ ಸಚಿವ ಕೃಷ್ಣ ಭೈರೇಗೌಡ ಮೌನ..?!

DCM ಆಪ್ತ ಬಿ.ಎಸ್ .ಪ್ರಹ್ಲಾದ್ ಕಚೇರಿ ಮೇಲೆ ಇ.ಡಿ ರೇಡ್ ಗೆ ಬೆಚ್ಚಿಬಿದ್ದ ಭ್ರಷ್ಟರು: ನಿಟ್ಟುಸಿರು ಬಿಟ್ಟ ಸಂತ್ರಸ್ಥ ಅಧಿಕಾರಿ ಸಿಬ್ಬಂದಿ..

Scroll to Top