advertise here

Search

ಸಿ.ಪಿ. ಯೋಗೇಶ್ವರ್ ಹೆಸರು ಫೈನಲ್ ಆದ ಮೇಲೂ, ಡಿಕೆಶಿ ಇಬ್ಬರ ಹೆಸರನ್ನು ಹೈಕಮಾಂಡ್ ಗೆ ಕಳುಹಿಸಿದ್ದೇಕೆ..?!


ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಸಿ,ಪಿ.ಯೋಗೇಶ್ವರ್
ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಸಿ,ಪಿ.ಯೋಗೇಶ್ವರ್

ಬೆಂಗಳೂರು: ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಗೆ ಸೇರಿದ್ದಾಗಿದೆ.ಅವರನ್ನೇ ಕಣಕ್ಕಿಳಿಸುವುದು ಕೂಡ ನಿಕ್ಕಿಯಾಗಿದೆ.ಹೀಗಿದ್ರೂ ಇಬ್ಬರ ಹೆಸರನ್ನು ಹೈಕಮಾಂಡ್ ಗೆ ಕಳುಹಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿರುವುದು ಸಾಕಷ್ಟು ಅಚ್ಚರಿ-ಅನುಮಾನ ಮೂಡಿಸಿದೆ. ಯೋಗೇಶ್ವರ್ ಬಿಟ್ಟು ಹೈಕಮಾಂಡ್ ಗೆ ಕಳುಹಿಸಿರಬಹುದಾದ ಮತ್ತೊಂದು ಹೆಸ್ರು ಯಾರದು..? ಎನ್ನುವುದೇ ಈಗ ಮಿಲಿಯನ್ ಡಾಲರ್ ಪ್ರಶ್ನೆ.

ಮೊನ್ನೆ ಮೊನ್ನೆಯವರೆಗೂ ಡಿಕೆ ಬ್ರದರ್ಸ್ ಹಾಗೂ ಕಾಂಗ್ರೆಸ್ ಪಕ್ಷವನ್ನು ಸಿಕ್ಕಾಪಟ್ಟೆ ಬೈಯ್ಯುತ್ತಿದ್ದವರು ಸಿ.ಪಿ ಯೋಗೇಶ್ವರ್. ಬಿಜೆಪಿ ಟಿಕೆಟ್ ಕೊಡುವುದಾಗಿ ಹೇಳಿದ್ರೂ..ಜೆಡಿಎಸ್ ನೀವೇ ಸ್ಪರ್ದಿಸಿ ಎಂದು ಅಂಗಲಾಚಿದ್ರೂ ನಿಮ್ ಸಹವಾಸವೇ ಬೇಡ ಎಂದು ರಾತ್ರೊರಾತ್ರಿ ಕಾಂಗ್ರೆಸ್ ಸೇರುವ ನಿರ್ದಾರ ಪ್ರಕಟಿಸಿದ್ದೇ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ರಾಜಕೀಯವೇ ಹಾಗೆ ಯಾವ್ ಕ್ಷಣದಲ್ಲಿ ಯಾರು..ಯಾರ ಮಿತ್ರರಾಗಿರುತ್ತಾರೆ.ಯಾರು..ಯಾರಿಗೆ ಬೇಡವಾಗದಷ್ಟು ದ್ವೇಷಿ ಗಳಾಗುತ್ತಾರೋ ಎಂದು ಹೇಳೊಕ್ಕೆ ಬರೊಲ್ಲ ಎಂದು ಜನ ಮಾತನಾಡಿಕೊಂಡಿದ್ರು.

ಅದೆಲ್ಲಾ ಒತ್ತಟ್ಟಿಗೆ ಇರಲಿ, ಕೊನೆಗೂ ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ಸೇರಿಯಾಗಿದೆ.ಕಾಂಗ್ರೆಸ್ ನಿಂದ ಅವರನ್ನೇ ಕಣಕ್ಕಿಳಿಸುವುದು ಕೂಡ ಫಿಕ್ಸ್ ಆದಂತಿದೆ.ಹೀಗಿರುವಲ್ಲಿ ಸಿ.ಪಿ ಯೋಗೇಶ್ವರ್ ಸೇ್ರಿದಂತೆ ಇಬ್ಬರ ಹೆಸರನ್ನು ಹೈಕಮಾಂಡ್ ಗೆ ಶಿಫಾರಸ್ಸು ಮಾಡಲಾಗಿದೆ ಎಂದು ಹೇಳಿರುವುದು  ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.ಆ ಮತ್ತೊಂದು ಹೆಸರು ಯಾರದಿರಬಹುದು ಎನ್ನುವ ಕುತೂಹಲದ ಬೆನ್ನಲ್ಲಿ ಡಿಕೆ ಶಿವಕುಮಾರ್ ಸಹೋದರ ಡಿ.ಕೆ ಸುರೇಶ್ ಅಥವಾ ಖುದ್ದು ಡಿ.ಕೆ ಶಿವಕುಮಾರ್ ಅವರದೇ ಇರಬಹುದಾ ಎನ್ನುವ ಗುಣಿತಗಳು ಶುರುವಾಗಿದೆ.

“ಎಲ್ಲಕ್ಕಿಂತ ಮುಖ್ಯವಾಗಿ ಸಿ.ಪಿ.ಯೋಗೇಶ್ವರ್ ಅವರು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದೇ ಆಶ್ಚರ್ಯ ಹಾಗೂ ಅನುಮಾನ ಉಂಟುಮಾಡಿದೆ.ಯಾವ  ಡಿ.ಕೆ ಬ್ರದರ್ಸ್ ನ್ನು ಹಿಗ್ಗಾಮುಗ್ಗಾ ಜಾಡಿಸುತ್ತಿದ್ದರೋ, ಕಾಂಗ್ರೆಸ್ ಕಂಡ್ರೆ ಕೆಂಡಾಮಂಡಲವಾಗುತ್ತಿದ್ದರೋ ಅಥವಾ ಬ್ರದರ್ಸ್ ನ್ನು ಒಪ್ಪಿಕೊಂಡು ರಾತ್ರೋರಾತ್ರಿ ತಮ್ಮ ನಿರ್ದಾರ ಬದಲಿಸಿದ್ದರ ಬಗ್ಗೆ ರಾಜಕೀಯ ವಲಯದಲ್ಲಿ ಬಿರುಸಿನ ಚರ್ಚೆ ಶುರುವಾಗಿದೆ.ಸಿ.ಪಿ ಯೋಗೇಶ್ವರ್ ಅವರು ಇಷ್ಟವಿದ್ದೇ ಕಾಂಗ್ರೆಸ್ ಗೆ ಬಂದ್ರೋ…ಅಥವಾ ಷರತ್ತುಬದ್ಧವಾಗಿ ಸೇರ್ಪಡೆಗೊಂಡರೋ ಎನ್ನುವುದಕ್ಕೂ ಅವರೇ ಉತ್ತರಿಸಬೇಕಿದೆ.ಕೆಲವು ಮೂಲಗಳ ಪ್ರಕಾರ ಸಿ.ಪಿ ಯೋಗೇಶ್ವರ್ ಅವರ ಸೇರ್ಪಡೆ ಹಿಂದೆ ಬೇರೆಯದೇ ಕಾರಣಗಳಿವೆ.ಅದು ಯೋಗೇಶ್ವರ್, ಡಿಕೆ ಬ್ರದರ್ಸ್ ಗೆ ಮಾತ್ರ ಗೊತ್ತಿದೆ.ಆದ್ರೆ ಒಂದಂತೂ ಸತ್ಯ ಸಿ.ಪಿ ಯೋಗೇಶ್ವರ್ ಅಧಿಕಾರದ ಆಸೆಗಿಂತ  ಯಾವುದೋ ಒತ್ತಡ, ಪ್ರಭಾವಕ್ಕೆ ಈಡಾಗಿ ಅನಿವಾರ್ಯವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎನ್ನುವ ಮಾತುಗಳು ಕೂಡ ಚರ್ಚೆಗೀಡಾಗುತ್ತಿವೆ” 

ಚನ್ನೆಪಟ್ಟಣಕ್ಕೆ ತಾನೇ ಅಭ್ಯರ್ಥಿ ಎಂದು ಡಿ.ಕೆ ಶಿವಕುಮಾರ್ ಮೊದಲಿಂದಲು ಹೇಳುತ್ತಲೇ ಬಂದಿದ್ದರು.ಇದರ ಹಿಂದೆ ನಾನಾ ಲೆಕ್ಕಾಚಾರಗಳಿದ್ವು.ಚನ್ನಪಟ್ಟಣದಲ್ಲಿ ನಾನು ಗೆದ್ದರೆ ಕನಕಪುರಕ್ಕೆ ನಡೆಬಹುದಾದ ಮತ್ತೊಂದು ಉಪಚುನಾವಣೆಯಲ್ಲಿ ಎಂಪಿ ಎಲೆಕ್ಷನ್ ನಲ್ಲಿ ಸೋತ ಡಿ.ಕೆ ಸುರೇಶ್ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರಬಹುದು..ಆ ಮೂಲಕ ಅಧಿಕಾರವಿಲ್ಲದೆ ಕುಳಿತಿರುವ ಸಹೋದರನಿಗೆ ರಾಜಕೀಯ ಪುನರ್ಜನ್ಮ ಕೊಡಬಹುದೆನ್ನುವುದು ಈ ಲೆಕ್ಕಾಚಾರದಲ್ಲಿತ್ತು.ಅದೇ ಫೈನಲ್ ಆಗಬಹುದೆನ್ನುವ ಮಾತಿತ್ತು.

ALSO READ :  ರಾಷ್ಟ್ರಧ್ವಜಕ್ಕೆ 21 ಬಾರಿ ಸೆಲ್ಯೂಟ್ ಮಾಡಲು ಯುವಕನಿಗೆ ಶಿಕ್ಷೆ!

ಆದರೆ ಇದೆಲ್ಲವನ್ನು ಬುಡಮೇಲು ಮಾಡುವ ರೀತಿಯಲ್ಲಿ ಚಟುವಟಿಕೆ ನಡೆಯಲಾರಂಭಿಸಿವೆ.ಸಿ.ಪಿ ಯೋಗೇಶ್ವರ್ ಅವರನ್ನು ಎಮ್ಮೆಲ್ಲೆಗಳಾದ ಬಾಲಕೃಷ್ಣ,ಉದಯ್ ಅವರ ಮೂಲಕ ಆಪರೇಷನ್ ಮಾಡಿಸುವಲ್ಲಿ ಯಶಸ್ವಿಯಾದ ಡಿಕೆ ಬ್ರದರ್ಸ್  ಜೆಡಿಎಸ್ ಜತೆಗೆ ದೇವೇಗೌಡರ ಫ್ಯಾಮಿಲಿಯನ್ನು ಸರ್ವನಾಶ ಮಾಡುವ ತಮ್ಮ ಉದ್ದೇಶವನ್ನೂ ಒಂದ್ ಹಂತದಲ್ಲಿ ಈಡೇರಿಸಿಕೊಂಡರೆನ್ನುವ ಮಾತು ಕೇಳಿಬರುತ್ತಿದೆ.ಸಿ.ಪಿ ಯೋಗೇಶ್ವರ್ ಅವರನ್ನೇ ಕೈ ಅಭ್ಯರ್ಥಿ ಎಂದು ಫೈನಲ್ ಮಾಡಿದ ಮೇಲೂ ಯಾಕೆ ಡಿ.ಕೆ ಶಿವಕುಮಾರ್ ಇಬ್ಬರ ಹೆಸರನ್ನು ಹೈಕಮಾಂಡ್ ಗೆ ಶಿಫಾರಸ್ಸು ಮಾಡಿ ಕಳುಹಿಸಿದರೆನ್ನುವುದೇ ರಾಜಕೀಯ ವಲಯದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

ಸಿ.ಪಿ ಯೋಗೇಶ್ವರ್ ಅವರನ್ನೇ ಅಭ್ಯರ್ಥಿ ಎಂದು ಫೈನಲ್ ಮಾಡಿದ್ರೂ ಕೊನೇ ಕ್ಷಣದಲ್ಲಿ ಅವರ ಬದಲಿಗೆ ಇದೇ ಡಿಕೆ ಶಿವಕುಮಾರ್ ಶಿಫಾರಸ್ಸು ಮಾಡಿ ಕಳುಹಿಸಿರಬಹುದಾದ ಆ ಮತ್ತೋರ್ವನನ್ನು ಕಣಕ್ಕಿಳಿಸುವ ನಿರ್ದಾರ ಮಾಡುತ್ತಾರಾ..? ಆ ಅಚ್ಚರಿಯ ಅಭ್ಯರ್ಥಿ ಅವರ ಸಹೋದರ ಡಿ.ಕೆ ಸುರೇಶ್ ಆಗಲಿದ್ದಾರಾ..? ಅಥವಾ ತಾವೇ ಕಣಕ್ಕೆ ಧುಮುಕುತ್ತಾರಾ..? ಎನ್ನುವ ಪ್ರಶ್ನೆ ಸಾಕಷ್ಟು ರೀತಿಯಲ್ಲಿ ಸುಳಿಯಲಾರಂಭಿಸಿದೆ. ಏಕಂದ್ರೆ ಡಿ.ಕೆ ಶಿವಕುಮಾರ್ ಸಿ.ಪಿ ಯೋಗೇಶ್ವರ್ ಜತೆ್ಗೆ ಇನ್ನೊಬ್ಬರ ಹೆಸರನ್ನು ಕಳುಹಿಸುವ ಅವಶ್ಯಕತೆ ಇರಲಿಲ್ಲ..ಸಿ.ಪಿ ಯೋಗೇಶ್ವರ್ ಬರುವುದು ಪಕ್ಕಾ ಆದ ಮೇಲೂ ಯಾಕೆ ಆ ಹೆಸರನ್ನು ಕಳುಹಿಸಿಕೊಟ್ರೋ  ಅದಕ್ಕೆ ಡಿ.ಕೆ ಶಿವಕುಮಾರ್ ಅವರೆ ಉತ್ತರಿಸಬೇಕಿದೆ.


Political News

ಬಣ್ಣಗಳಲ್ಲಿ ಲೀನವಾದ Btv ಮೇಕಪ್‌ಮ್ಯಾನ್‌ ಚೇತನ್

Exclusive: ಅಕ್ರಮ-ಅವ್ಯವಸ್ಥೆಯ ಗೂಡಾಯ್ತಾ ಪಿಯು ಇಲಾಖೆ? ಏನ್ ಮಾಡುತ್ತಿದ್ದೀರಾ ಶಿಕ್ಷಣ ಸಚಿವರೇ!?

BMTC ಸಿಬ್ಬಂದಿಯಿಂದಲೇ ಬಸ್ ಕ್ಲೀನಿಂಗ್.. ಸ್ವಚ್ಛತೆಗೆಂದೇ ಕೊಟ್ಟ ಟೆಂಡರ್ ಹಣ ಎಲ್ಲೋಯ್ತು!?

Sahyadri science College alumni meet: ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳ ಮಹಾಸಮಾಗಮಕ್ಕೆ ಮುಹೂರ್ತ ಫಿಕ್ಸ್

Puneeth rajkumar award: ನ್ಯೂಸ್ ಚಾನೆಲ್‌ಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 12 ಕ್ಯಾಮೆರಾಮನ್ ಮಿತ್ರರಿಗೆ ಪುನೀತ್ ರಾಜ್‌ಕುಮಾರ್ ಪ್ರಶಸ್ತಿ

Deepavali pollution Decrease! ಬೆಂಗಳೂರಿಗೆ ಬೆಂಗಳೂರೇ ಪಟಾಕಿ ಹೊಗೆಯಲ್ಲಿ ಕಳೆದೋದರೂ ಕಳೆದ ವರ್ಷದಷ್ಟು ಮಾಲಿನ್ಯ ಆಗಿಲ್ವಂತೆ!?

Rajyotsava awards 2024: ರಾಜ್ಯೋತ್ಸವ ಪ್ರಶಸ್ತಿ ಪ್ರಕಟ- ಹೇಮಾ ಚೌಧರಿ, ಅರುಣ್ ಯೋಗಿರಾಜ್ ಸೇರಿ 69 ಸಾಧಕರಿಗೆ ಪ್ರಶಸ್ತಿಯ ಗರಿ

ದಸರಾ ನಂದಿಧ್ವಜದ ಮಹಾದೇವಣ್ಣರನ್ನು ಮರೆತೇ ಬಿಡ್ತಾ ಸರ್ಕಾರ? ಜೀವನ್ಮರಣ ಹೋರಾಟದಲ್ಲಿ ಮಹದೇವಣ್ಣ

Scroll to Top