ಬೆಂಗಳೂರು/ಬಳ್ಳಾರಿ/ ಬೆಳ್ತಂಗಡಿ: ಬೆಳ್ತಂಗಡಿಯ ಬಾಲೆ ಸೌಜನ್ಯ(saujanya) ಅತ್ಯಾಚಾರ-ಕೊಲೆ (rape and murder)ಪ್ರಕರಣದ ಸ್ಪೋಟಕ ವೀಡಿಯೋ ಹರಿಬಿಡುವ ಮೂಲಕ ದೊಡ್ಡ ಸಾಹಸ ಮಾಡಿದ ಯುವ ಯು ಟ್ಯೂಬರ್ (youtuber) ಸಮಿರ್(sameer-the dootha) ಇದೀಗ ದೊಡ್ಡ ಮಟ್ಟದ ಕಾನೂನಿನ ಸಂಘರ್ಷಕ್ಕೆ ಅಣಿಯಾಗಬೇಕಿದೆ.ಆತನನ್ನು ವ್ಯವಸ್ತಿತವಾಗಿ ಮುಗಿಸಿ ಹಾಕುವ ಹುನ್ನಾರ ಕೆಲವರಿಂದ ಶುರುವಾಗಿದೆ.ದುರಂತ ಎಂದರೆ ಯಾವುದೇ ಕಾನೂನಾತ್ಮಕ ಪ್ರಕ್ರಿಯೆಗಳಿಲ್ಲದೆ ಆತನ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಳ್ಲಲಾಗಿದೆ. ತತ್ ಕ್ಷಣವೇ ಸ್ಟೇಷನ್ ಗೆ ಬಂದು ಹಾಜರಾಗುವಂತೆ ಸೂಚಿಸಲಾಗಿದೆ.ಬಂಧನದ ಭಯಕ್ಕೆ ಸಿಲುಕಿರುವ ಸಮೀರ್ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾನೆ.ಅಂದ್ಹಾಗೆ ಸಮೀರ್ ವಿರುದ್ದ ಬಳ್ಳಾರಿಯ ಕೌಲ್ ಬಜಾರ್ ಸ್ಟೇಷನ್ ನಲ್ಲಿ ದಾಖಲಾಗಿರುವ ಎಫ್ ಐಆರ್ ಪ್ರತಿ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಲಭ್ಯವಾಗಿದೆ.


ಇದು ನಮ್ಮ ವ್ಯವಸ್ಥೆಯ ದುರಂತ ಎನ್ನೊಕ್ಕೆ ಯುವ ಯೂಟ್ಯೂಬರ್ ಸಮೀರ್ ಪ್ರಕರಣವೇ ಸಾಕ್ಷಿ. ಸೌಜನ್ಯ ಪ್ರಕರಣದ ಬಗ್ಗೆ ಸಂವಿಧಾನ ನೀಡಿರುವ ವಾಕ್-ಅಭಿವ್ಯಕ್ತಿ-ವಿಚಾರ ಸ್ವಾತಂತ್ರ್ಯದ ಅಡಿಯಲ್ಲಿ ಪ್ರಸಾರ ಮಾಡಿದ ಸುದ್ದಿ ಆತನನ್ನು ಕಾನೂನಾತ್ಮಕ ಸಂಘರ್ಷಕ್ಕೆ ಈಡುಮಾಡಿದೆ. ಈ ನೆಲದ ಕಾನೂನಿಗೆ ಗೌರವ ಕೊಟ್ಟಿಯೇ ಸುದ್ದಿ ಮಾಡಿದ್ದರೂ ಘನಘೋರ ಕೃತ್ಯ ಎಸಗಿದ್ದಾನೆನ್ನುವ ರೇಂಜ್ ನಲ್ಲಿ ಆತನನ್ನು ಕಟ್ಟಿ ಹಾಕುವ ಪ್ರಯತ್ನ ಮಾಡಲಾಗ್ತಿದೆ.ಇದರ ಭಾಗವಾಗಿ ಹೊತ್ತಲ್ಲದ ಹೊತ್ತಲ್ಲಿ ಆತನ ಮನೆಗೆ ನುಗ್ಗಿ ನೊಟೀಸ್ ಜಾರಿ ಮಾಡಲಾಗ್ತದೆ. ಬಳ್ಳಾರಿಯ ಪೊಲೀಸ್ ಸ್ಟೇಷನ್ ನಲ್ಲಿ ಎಫ್ ಐ ಆರ್ ಮಾಡಿ ಬಂಧನಕ್ಕೆ ಬಲೆ ಬೀಸಲಾಗ್ತದೆ. ಕಂಗಾಲಾದ ಸಮೀರ್ ಕಾನೂನಿನ ಆಶ್ರಯ ಪಡೆಯಲು ಮುಂದಾಗಿದ್ದಾರೆ.
ಸಮೀರ್ ಅವರ ಯೂ ಟ್ಯೂಬ್ ಚಾನೆಲ್ ದೂತದಲ್ಲಿ ಪ್ರಸಾರವಾದ ವೀಡಿಯೋದಿಂದ ನಖಶಿಖಾಂತ ಉರಿದು ಹೋಗಿರುವ ಧರ್ಮಕ್ಷೇತ್ರದ ಪ್ರಮುಖರು ಹಾಗೂ ಅವರ ಸೋ ಕಾಲ್ಡ್ ಅನುಯಾಯಿಗಳು ಸಮೀರ್ ಅವರನ್ನು ನಾಲ್ಕೂ ಆಯಾಮಗಳಲ್ಲೂ ಟಾರ್ಗೆಟ್ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಸಮೀರ್ ಮುಸ್ಲಿಂ ಎನ್ನುವ ಕಾರಣಕ್ಕೆ ಜಾತಿ ಎಳೆದು ತರಲಾ್ಗಿದೆ.ನಿಮ್ಮ ಸಮುದಾಯದಲ್ಲೇ ಸುದ್ದಿ ಮಾಡುವಷ್ಟು ಅಸಹ್ಯಗಳು ತುಂಬಾ ಇವೆ..ಅದನ್ನು ತಾಕತ್ತಿದ್ದರೆ ವರದಿ ಮಾಡಿ ಸರಿ ಮಾಡೋ, ನಮ್ಮ ಧರ್ಮದ ತಂಟೆಗೆ ಬರಬೇಡ ಎನ್ನುವಂತ ಕಾಮೆಂಟ್ ಗಳಿಂದ ಹಿಡಿದು ಕೊಲ್ಲುವುದಾಗಿ ಬೆದರಿಕೆ ಹಾಕುವಂಥ ಕರೆಗಳು ಹೋಗಿವೆ.ಜತೆಗೆ ಸಮೀರ್ ಯಾವುದೋ ಕಾಲ ಘಟ್ಟದಲ್ಲಿ ಆನ್ ಲೈನ್ ಗೇಮಿಂಗ್ ಉತ್ತೇಜಿಸುವ ನಿಟ್ಟಿನಲ್ಲಿ ಮಾಡಿದ್ದ ಕೆಲ ವೀಡಿಯೋಗಳನ್ನು ಕೂಡ ಈಗ ವೈರಲ್ ಮಾಡಲಾಗ್ತಿದೆ. ಇದಷ್ಟೇ ಅಲ್ಲ ಆತನ ಪೂರ್ವಾಪರವನ್ನು ಬಗೆದು ಎಷ್ಟರ ಮಟ್ಟಿಗೆ ತೇಜೋವಧೆ ಮಾಡಲು ಸಾಧ್ಯವಿದೆಯೋ ಆ ಮಟ್ಟದಲ್ಲಿ ಹಣಿದು ಹಾಕಲು ಯತ್ನಿಸಲಾಗುತ್ತಿದೆ.ಇದಕ್ಕೆಂದೇ ತಂಡವೊಂದು ಕೂಡ ರಾತ್ರೋರಾತ್ರಿ ಸಿದ್ದವಾಗಿದೆಯಂತೆ.
ಎಲ್ಲಕ್ಕಿಂತ ಹೆಚ್ಚು ಬೇಸರ ತರಿಸಿದ್ದು ಪೊಲೀಸರ ವರ್ತನೆ.ಸಮೀರ್ ಮಾಡಿದ ಒಂದು ವೀಡಿಯೋದಿಂದ ಇಡೀ ಸಮಾಜದ ಸ್ವಾಸ್ಥ್ಯ ಕದಡಿಬಿಡುತ್ತೆ. ಗಲಭೆ-ಹಿಂಸಾಚಾರ ನಡೆದು ಬಿಡುತ್ತೆ. ಕೋಮು ಸಂಘರ್ಷ ಸೃಷ್ಟಿಯಾಗಿಬಿಡುತ್ತೆ ಎನ್ನುವ ರೇಂಜ್ನಲ್ಲಿ ಆಲೋಚಿಸಿದ ಪೊಲೀಸರು ಆತನ ವಿರುದ್ಧ ಕ್ರಮಕ್ಕೆ ಮುಂದಾಗಿ ನೊಟೀಸ್ ನೀಡಿದಂತ ಬೆಳವಣಿಗೆ ಇರಬಹುದು..ಅಥವಾ ಬಳ್ಳಾರಿಯ ಕೌಲ್ ಬಜಾರ್ ಠಾಣೆಯಲ್ಲಿ ಬಿಎನ್ ಎಸ್ 299ರ ಅನ್ವಯ( ಸೆಕ್ಷನ್ 229:ಧಾರ್ಮಿಕ ಭಾವನೆಗಳನ್ನು –ಶೃದ್ಧಾನಂಬಿಕೆಗಳಿಗೆ ಧಕ್ಕೆ ತರುವಂತ ರೀತಿಯಲ್ಲಿ ವರ್ತಿಸುವವರ ವಿರುದ್ದ ದಾಖಲಿಸಬಹುದಾದ ಸೆಕ್ಷನ್) ಎಫ್ ಐ ಆರ್ ದಾಖಲಿಸಿ 24 ಗಂಟೆಯೊಳಗೆ ಠಾಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಬರದಿದ್ದರೆ ನಾನ್ ಬೇಲಬಲ್ ಸೆಕ್ಷನ್ ಆಗಿರುವುದರಿಂದ ಬಂಧಿಸುವ ಸಾಧ್ಯತೆಗಳೂ ಇದೆ ಎನ್ನಲಾಗುತ್ತಿದೆ.
ಬಳ್ಳಾರಿಯ ಕೌಲ್ ಬಜಾರ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಎಂ,ನಿಂಗಪ್ಪ ಅವರು ನೀಡಿರುವ ದೂರಿನ ಅನ್ವಯ ಬಿಎನ್ ಎಸ್ ಸೆಕ್ಷನ್ 299 ರ ಅಡಿಯಲ್ಲಿ ಎಫ್ ಐ ಆರ್ ದಾಖಲಿಸಿಕೊಳ್ಳಲಾಗಿದೆ.ಆದರೆ ಇದಕ್ಕೆ ಮುನ್ನ ಪಾಲಿಸಬೇಕಾದ ಯಾವುದೇ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಕೂಡ ಪಾಲಿಸಲಾಗಿಲ್ಲ ಎನ್ನುವುದು ದುರಂತ. ವೀಡಿಯೋ ಒಂದರ ಕಾರಣವನ್ನೇ ಮುಂದಿಟ್ಟುಕೊಂಡು ಎಫ್ ಐ ಆರ್ ಮಾಡಲಾಗ್ತದೆ. ಅರೆಸ್ಟ್ ಮಾಡಲು ಸಿದ್ದತೆ ಮಾಡಿಕೊಳ್ಳಲಾಗ್ತದೆ ಎಂದರೆ ಈ ನೆಲದ ಕಾನೂನು ನಿಜಕ್ಕು ಪಾಲನೆ ಆಗುತ್ತಿದೆಯೇ..? ಪೊಲೀಸರು ಅದನ್ನು ಸರಿಯಾಗಿ ಪಾಲಿಸುತ್ತಿದ್ದಾರಾ ಎನ್ನುವ ಶಂಕೆ ಮೂಡುತ್ತದೆ.

ವೀಡಿಯೋ ಮಾಡಲಾಗಿದೆ ಎನ್ನುವ ಏಕೈಕ ಕಾರಣಕ್ಕೆ ಸಮೀರ್ ಅವರ ವಿರುದ್ಧ ಎಫ್ ಐ ಆರ್ ದಾಖಲಿಸುವ ಮಟ್ಟದ ಅವಹೇಳನಕಾರಿ,ಕೋಮು ಸಾಮರಸ್ಯ ಕದಡುವ, ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸುವಂಥ ವಿಚಾರಗಳೇನಿದೆ ಎನ್ನುವುದಕ್ಕೆ ಬಹುಷಃ ಪೊಲೀಸರ ಬಳಿಯೇ ಉತ್ತರ ಸಿಗಲಿಕ್ಕಿಲ್ಲವೇನೋ..
ಏಕಂದ್ರೆ ಇದು,ಸೌಜನ್ಯ ಪ್ರಕರಣದ ಬಗ್ಗೆ ಮಾಡಲಾದ ಮೊದಲ ವೀಡಿಯೋವಾಗಲಿ, ಕೊನೆಯಾಗಬಹುದಾದ ವೀಡಿಯೋ ಅಲ್ಲ..ಹಿಂದೆಯೂ ಅನೇಕ ಸೋಶಿಯಲ್ ಮೀಡಿಯಾಗಳಲ್ಲಿ ಇದಕ್ಕಿಂತ ಖಂಡನೀಯ ಸ್ವರೂಪದಲ್ಲಿ ಪ್ರಕರಣವನ್ನು ನಿರೂಪಿಸಲಾಗಿತ್ತು.ಆಗೆಲ್ಲಾ ಸಾಕಷ್ಟು ವೀಡಿಯೋಗಳನ್ನು ಡಿಲೀಟ್ ಮಾಡಿಸಲಾಗಿತ್ತು.ಕಾನೂನಿಗೆ ಬೆಲೆ ಕೊಟ್ಟು ಅನೇಕರು ತಮ್ಮ ವೀಡಿಯೋಗಳನ್ನು ಡಿಲೀಟ್ ಮಾಡಿದರೆ ಹೊರತು ಆ ಕ್ಷೇತ್ರದ ಘನತೆ-ಪಾವಿತ್ರ್ಯತೆಗೆ ಧಕ್ಕೆ ತಂದವರ ಬೆನ್ನಿಗೆ ನಿಂತ ಆರೋಪ ಎದುರಿಸುತ್ತಿದ್ದವರ ಸ್ಥಾನಕ್ಕಲ್ಲ ಎಂದು ಅನೇಕ ಯೂ ಟ್ಯೂಬರ್ಸ್ ಗಳು ಹೇಳಿಕೊಂಡಿದ್ದುಂಟು.ತಪ್ಪು ಮಾಡಿಲ್ಲ ಎನ್ನುವುದಾದರೆ,ಆ ತಪ್ಪನ್ನು ಸಮಾಧಿ ಮಾಡಿದವರ ಬೆನ್ನಿಗೆ ತಾನು ನಿಂತಿಲ್ಲ ಎನ್ನುವುದಾದರೆ ಸತ್ಯ ಜಗತ್ತಿಗೆ ಗೊತ್ತಾಗಲಿ ಎಂದು ಸುಮ್ಮನಾಗಿ ದೊಡ್ಡವರಾಗಬಹುದಿತ್ತು.ಆದರೆ ವೀಡಿಯೋಗಳನ್ನು ಡಿಲೀಟ್ ಮಾಡಿಸಿ ತುಂಬಾ ಸಣ್ಣವರಾಗಿಬಿಟ್ಟರು ಎಂದು ಅನೇಕರು ಮಾತನಾಡಿಕೊಂಡಿದ್ದುಂಟು.


ಸಮೀರ್ ಮೇಲ್ಕಂಡ ವೀಡಿಯೋದಲ್ಲಿ ಯಾರು ಹೇಳಿರದಂಥ ಅಗೋಚರವಾದ ವಿಷಯಗಳನ್ನೇನು ಹೇಳಿಲ್ಲ..ವಿಶೇಷವಾದ ವ್ಯಾಖ್ಯಾನವನ್ನೇನು ನೀಡಿಲ್ಲ.. ಹಿಂದಿನ ಯೂಟ್ಯೂಬರ್ಸ್ ಗಳು ಹೇಳಿದ್ದನ್ನೇ ಪುನರುಚ್ಚರಿಸಿದ್ದಾರೆ.ಆದರೆ ಇತರರ ವಿಚಾರಕ್ಕೂ ಸಮೀರ್ ವಿಚಾರಕ್ಕೂ ಇರುವ ವ್ಯತ್ಯಾಸ ಏನೆಂದರೆ ಅತ್ಯದ್ಭುತ ನಿರೂಪಣೆ- ಬಳಸಿಕೊಳ್ಳಲಾಗಿರುವ ಗ್ರಾಫಿಕ್ಸ್.ಅವರೇ ಹೇಳಿಕೊಂಡಂತೆ ತಮ್ಮ ಸಾಕಷ್ಟು ಸಮಯವನ್ನು ಈ ಕ್ರಿಯಾಶೀಲ ಕೆಲಸಕ್ಕೆ ಅವರು ಬಳಸಿಕೊಂಡಿದ್ದಾರಂತೆ. ಧರ್ಮಸೂಕ್ಷ್ಮ ವಿಚಾರವಾಗಿ ರುವುದರಿಂದ ಅದರ ಸಾಧಕ-ಬಾಧಕಗಳ ಅರಿವನ್ನು ಸ್ಪಷ್ಟವಾಗಿಟ್ಟುಕೊಂಡಿಯೇ ರೀಸರ್ಚ್ ವೇಳೆ ಸಾಕ್ಷ್ಯಗಳನ್ನು ಕ್ರೋಢೀಕರಿಸಿ ಅದನ್ನು ಬಿಂಬಿಸಿರುವುದಾಗಿ ಅವರೇ ಹೇಳಿಕೊಂಡಿದ್ದಾರೆ.ಇಷ್ಟೆಲ್ಲಾ ಇರುವಾಗ ಪೂರ್ವಾಪರ ವಿಚಾರಿಸದೆ ಸಮೀರ್ ಮೇಲೆ ಹರಿಹಾಯುವ,ಅದಕ್ಕೆ ಕಾನೂನನ್ನು ಮಿಸ್ ಯೂಸ್ ಮಾಡಿಕೊಳ್ಳುವಂಥ ಬೆಳವಣಿಗೆಗಳು ಶೋಭೆ ತರುವುದೇ ಇಲ್ಲ.
ಹೀಗೆಲ್ಲಾ ಆಗಬಹುದು ಎನ್ನುವ ಅಂದಾಜು ಸಮೀರ್ ಗೆ ಇತ್ತಾದರೂ ಇಷ್ಟೊಂದು ದೊಡ್ಡ ಪ್ರಮಾಣದ ಕ್ರಾಂತಿಯ ಕಿಚ್ಚನ್ನು ಹಚ್ಚಿಸುತ್ತದೆ ಎನ್ನುವ ಲೆಕ್ಕಾಚಾರ ಇರಲಿಲ್ಲವಂತೆ. ಮೂರು ದಿನಗಳ ಅವಧಿಯಲ್ಲಿ ಅದು ಪಡೆದುಕೊಂಡ ವ್ಯಾಪಕ ಪ್ರಚಾರಕ್ಕೆ ಸಮೀರ್ ಅವರೇ ತಬ್ಬಿಬ್ಬಾಗಿದ್ದಾರೆ.ಅದರ ಬೆನ್ನಲ್ಲಿ ಬರಲಾರಂಭಿಸಿದ ಕೊಲೆ ಬೆದರಿಕೆ ಕರೆಗಳನ್ನು ಆರಂಭದಲ್ಲಿ ನಿರ್ಲಕ್ಷ್ಯಿಸಿದರಾದ್ರೂ ಪೊಲೀಸ್ ಇಲಾಖೆ ಹಂತದಲ್ಲಿ ತನ್ನನ್ನು-ತನ್ನ ವಿಚಾರಗಳನ್ನು-ತನ್ನ ಕೆಲಸಗಳನ್ನು ಹತ್ತಿಕ್ಕುವ ಕೆಲಸ ಶುರುವಾಗಿದೆ ಎನ್ನುವುದು ಗೊತ್ತಾಗುತ್ತಿದ್ದಂತೆ ಸ್ವಲ್ಪ ಅಧೀರರಾಗಿದ್ದಾರೆ.ಆದರೆ ಅವರ ಅದೃಷ್ಟ ಚೆನ್ನಾಗಿತ್ತು.ಸೌಜನ್ಯಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮ್ಮರೋಡಿ, ಗಿರೀಶ್ ಮಟ್ಟಣ್ಣನವರ್ ಅವರಂಥ ಹೋರಾಟಗಾರರು ಸಮೀರ್ ಬೆನ್ನಿಗೆ ನಿಂತಿದ್ದಾರೆ. ಸದ್ಯ ಸಮೀರ್ ಅವರ ಹಿಂದೆಮುಂದೆ ಭೀಮಬಲದಂತೆ ಕಾಯುತ್ತಿರೋರೇ ಗಿರೀಶ್ ಮಟ್ಟಣ್ಭನವರ್. ಸಮೀರ್ ಗೆ ಏನೇ ಸಮಸ್ಯೆ ಬಂದರೂ ಅದನ್ನು ನಿವಾರಿಸಲು ನಾವಿದ್ದೇವೆ ಎಂಬ ಅಭಯ ಅನೇಕರಿಂದ ಕೇಳಿಬಂದಿದೆ. ವಿಚಾರವಾದಿಗಳು, ಪ್ರಗತಿಪರ ಚಿಂತಕರು,ಸೌಜನ್ಯಳಿಗೆ ನ್ಯಾಯ ಸಿಗ್ಬೇಕೆನ್ನುವ ಆಶಯ ಇಟ್ಟುಕೊಂಡಿರುವವರೆಲ್ಲಾ ಸಮೀರ್ ಬೆನ್ನಿಗೆ ನಿಲ್ಲೊಕ್ಕೆ ಮುಂದೆ ಬಂದಿದ್ದಾರೆ.ಇದು ಸಮೀರ್ ನನ್ನು ಹತ್ತಿಕ್ಕಲು ಯತ್ನಿಸುತ್ತಿದ್ದವರಿಗೆ ದೊಡ್ಡ ಅಘಾತವನ್ನುಂಟುಮಾಡಿದೆ.

ಸೌಜನ್ಯ ಪ್ರಕರಣದಲ್ಲಿ ಈಗಾಗಲೇ ದೊಡ್ಡ ಮಟ್ಟದ ಮರ್ಮಾಘಾತ ಅನುಭವಿಸಿರುವ ಆ ದೊಡ್ಡವರೆನಿ ಸಿಕೊಂಡವರು ಸಮೀರ್ ನನ್ನು ಮುಗಿಸಲು ತಮಗಿರುವ ಎಲ್ಲಾ ರೀತಿಯ ಪ್ರಭಾವ ಬಳಸಿಕೊಳ್ಳುತ್ತಿದ್ದಾರಾ..? ಎನ್ನುವ ಶಂಕೆ ಪೊಲೀಸರು ನಡೆದುಕೊಳ್ಳುತ್ತಿರುವ ರೀತಿಯಿಂದಲೇ ಕಾಡುತ್ತಿದೆ. ಒಂದು ಯೂ ಟ್ಯೂಬ್ ವೀಡಿಯೋದಿಂದ ವ್ಯವಸ್ಥೆಯಲ್ಲಿ ಕೋಮು ಸಾಮರಸ್ಯ ಹಾಳಾಗುತ್ತದೆ ಎಂದು ಎಫ್ ಐ ಆರ್ ದಾಖಲಿಸಲಾಗುತ್ತದೆ ಎಂದ್ರೆ ಇದಕ್ಕೆ ಏನನ್ನಬೇಕೋ ಗೊತ್ತಿಲ್ಲ.ಎಫ್ ಐ ಆರ್ ಹಾಕಿ ಅರೆಸ್ಟ್ ಮಾಡುವಂಥ ಅಂಶಗಳೇನು ಆ ಸುದ್ದಿಯಲ್ಲಿದೆ ಎನ್ನೋದೇ ಕುತೂಹಲ.ಹಾಗೆಲ್ಲಾ ಆಗೋದಿದ್ರೆ ಇವತ್ತು ಸಾವಿರಾರು ಸಂಖ್ಯೆಯಲ್ಲಿ ಯು ಟ್ಯೂಬರ್ಸ್ ಗಳು ಜೈಲಿನಲ್ಲಿರಬೇಕಿತ್ತೇನೋ.. ಬಹುಷಃ ಪೊಲೀಸರು ಒತ್ತಡದಲ್ಲಿ ಇದೆಲ್ಲಾ ಮಾಡುತ್ತಿದ್ದಾರಾ ಗೊತ್ತಿಲ್ಲ.

ಸಮೀರ್ ವಿರುದ್ಧ ಕಾನೂನುಕ್ರಮ ಕೈಗೊಳ್ಳಿ ಎಂದು ಪೊಲೀಸ್ ವರಿಷ್ಟರೇ ತಮ್ಮ ಕೆಳಹಂತದ ಅಧಿಕಾರಿಗಳಿಗೆ ಸೂಚನೆ ಕೊಡ್ತಾರೆ. ಸಮೀರ್ ಅನೇಕ ವರ್ಷಗಳಿಂದ ಬಳ್ಳಾರಿಯಲ್ಲಿ ಇಲ್ಲದಿದ್ದರೂ ಕೌಲ್ ಬಜಾರ್ ಠಾಣೆಯಲ್ಲಿ ದೂರು-ಎಫ್ ಐ ಆರ್ ದಾಖಲಾಗ್ತದೆ ಎಂದರೆ ಇದರ ಹಿಂದೆ ಏನೋ ನಿಗೂಢ ರಹಸ್ಯ ಅಡಗಿದೆ ಎಂದೆನಿಸುತ್ತದೆ.ಏಕೆಂದರೆ ಸಮೀರ್ ವಿಚಾರದಲ್ಲಿ ಅವರ ಸುತ್ತ ನಡೆಯುತ್ತಿರುವ ಬೆಳವಣಿಗೆಗಳು-ವಿದ್ಯಾಮಾನಗಳು ಯಾಕೋ ನ್ಯಾಯಯುತವಾಗಿವೆ ಎಂದೆನಿಸುವುದಿಲ್ಲ.ಎಲ್ಲೋ ಯಡವಟ್ಟಾಗಿದೆ.ಒಂದೊಳ್ಳೆ ಉದ್ದೇಶವನ್ನು –ನ್ಯಾಯಯುತ ದ್ವನಿಯನ್ನು ಅಡಗಿಸಲಾಗುತ್ತಿದೆಯೇ ಎಂದೆನಿಸುತ್ತದೆ.ಅನ್ಯಾಯ ಆಗಲು ನಮ್ಮ ಸಮಾಜ ಬಿಟ್ಟರೆ ಅದಕ್ಕಿಂತ ದೊಡ್ಡ ದುರಂತ ಮತ್ತೊಂದಿರಲಾರದು.. ಸಾಮಾಜಿಕ ಕಾಳಜಿಯಲ್ಲಿ ಮಾಡಿದ ಕೆಲಸಕ್ಕೆ ಕಾನೂನಿನ ಕುಣಿಕೆಯಲ್ಲಿ ಸಿಲುಕಿ ಹಾಕಿಕೊಂಡು ಸಂಕಷ್ಟದಲ್ಲಿರುವ ಸಮೀರ್ ನ ಬೆಂಬಲಕ್ಕೆ ಎಲ್ಲರೂ ಮುಂದಾಗಬೇಕಿದೆ.ನ್ಯಾಯ-ಅನ್ಯಾಯಗಳ ಸಂಘರ್ಷದಲ್ಲಿ ನ್ಯಾಯದ ಕೈನೇ ಮೇಲಾಗಬೇಕು..ಅನ್ಯಾಯಕ್ಕೆ ಸೋಲಾಗಬೇಕಾದಲ್ಲಿ ಎಲ್ಲರೂ ಸೇರಿ ಸಮೀರ್ ಗೆ ನೈತಿಕ ಸ್ಥೈರ್ಯ ನೀಡಬೇಕಿದೆ.