advertise here

Search

ಆರ್ಥಿಕ ಸಂಕಷ್ಟ ನಿಜವಾದ ಕಾರಣನಾ..!? ಕುಂಟು ನೆವನಾ.?-ತಿಂಗಳ ಸಂಬಳಕ್ಕೂ ಚಾತಕಪಕ್ಷಿಗಳಂತಾದ ನ್ಯೂಸ್ ಫಸ್ಟ್ ಸುದ್ದಿಮಿತ್ರರು..!

news first kannada media

ತೇಜೋವಧೆ ಮಾಡುವುದಲ್ಲ..ಸತ್ಯ ಹೇಳುವುದಷ್ಟೇ ಕನ್ನಡ ಫ್ಲ್ಯಾಶ್ ನ್ಯೂಸ್ ಉದ್ದೇಶ

ನ್ಯೂಸ್ 1 ಕನ್ನಡ ಚಾನೆಲ್ ನಲ್ಲಿ ಉದ್ಭವವಾಗಿರುವ ಸಮಸ್ಯೆ, ಸಿಬ್ಬಂದಿಗೆ ಆಗುತ್ತಿರುವ ಅನ್ಯಾಯದ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನೇ ನಮ್ಮ ತೇಜೋವಧೆ ಎಂದು ಭಾವಿಸಿದ್ರೆ,.ಸತ್ಯ ಹೇಳುವ ನಮ್ಮ ದೃಢತೆ-ಬದ್ಧತೆಯನ್ನು ಕಾನೂನಾತ್ಮಕವಾಗಿ ಮಣಿಸುವ ಕೆಲಸವನ್ನು ಮಾಡಿದ್ರೆ, ಅದಕ್ಕೆ ನಾವು ಖಂಡಿತಾ ಹೊಣೆಯೂ ಅಲ್ಲ. ಅದರಿಂದ ನಾವು ಕುಗ್ಗುವುದೂ ಇಲ್ಲ..

ನ್ಯೂಸ್ ಫಸ್ಟ್ ಆಡಳಿತ ಈ ಮೊದಲಿದ್ದಂತೆ ವ್ಯವಸ್ಥೆಯನ್ನು ಸರಿಯಾಗಿ ನಡೆಸಿಕೊಂಡು ಹೋಗಿದಿದ್ದರೆ (ಚಾನೆಲ್ ಆರಂಭದಲ್ಲಿ ಸಿಬ್ಬಂದಿಯನ್ನು ಚೆನ್ನಾಗಿಯೇ ನೋಡಿಕೊಂಡಿತ್ತೆನ್ನುವುದರಲ್ಲಿ ಯಾವುದೇ ಆಕ್ಷೇಪವಿಲ್ಲ.. ಇವತ್ತು  ಒಂದು ಜವಾಬ್ದಾರಿಯುತ ಮಾದ್ಯಮವಾಗಿ ಕನ್ನಡ ಫ್ಲ್ಯಾಶ್ ನ್ಯೂಸ್ ಪ್ರಶ್ನಿಸುವ  ಪ್ರಮೇಯವೇ ಬರುತ್ತಿರಲಿಲ್ಲ ಅಲ್ವೇ. ಇದನ್ನು ನಮ್ಮ ತೇಜೋವಧೆ ಎನ್ನುವುದು..ಚಾನೆಲ್ ಘನತೆ-ಪ್ರತಿಷ್ಟೆಗೆ ಚ್ಯುತಿ ಎಂದು ಬಿಂಬಿಸುವುದು ತಪ್ಪು. ಜಗತ್ತಿನ ಯಾವುದೇ ಮೂಲೆಗಳಲ್ಲಿ ಯಾವುದೇ ಕಾರ್ಮಿಕ-ಶ್ರಮಿಕ ಸಮುದಾಯಕ್ಕೆ ಅನ್ಯಾಯವಾದ್ರೆ ಅದು ಪ್ರಶ್ನಿಸುವ ಮಾದ್ಯಮಗಳೇ ತಮ್ಮ ಸಿಬ್ಬಂದಿಗೆ ತಿಂಗಳುವರೆಗೆ ಸಂಬಳ ಕೊಡದಿರುವಂತದ್ದು ಯಾವ ನ್ಯಾಯ..? ಮಾದ್ಯಮಗಳಾಗಿ ನಮಗೆ ವ್ಯವಸ್ಥೆಯನ್ನು ಪ್ರಶ್ನಿಸುವ ನೈತಿಕತೆ ಇರುತ್ತಾ..? ಹೇಳಿ. ಒಂದು ಜವಾಬ್ದಾರಿಯುತ ಮಾದ್ಯಮವಾಗಿ ಕನ್ನಡ  ಫ್ಲ್ಯಾಶ್ ನ್ಯೂಸ್ ತನ್ನ ಕೆಲಸ ಮಾಡಿದೆ ಅಷ್ಟೇ..

ನ್ಯೂಸ್ ಫಸ್ಟ್ ಚಾನೆಲ್‌ನಲ್ಲಿರುವ ಸಮಸ್ಯೆ ಯಾರಿಗೂ ತಿಳಿದಿಲ್ಲವೇ?

ಅಷ್ಟಕ್ಕೂ ನ್ಯೂಸ್ ಫಸ್ಟ್ ಚಾನೆಲ್ ನಲ್ಲಿನ ಸಮಸ್ಯೆ  ಇಡೀ ಮಾದ್ಯಮ ಕ್ಷೇತ್ರಕ್ಕೆ ಗೊತ್ತಿರುವ ಸತ್ಯ..ಅದೇನು ಗೌಪ್ಯವಾಗಿರುವಂತದ್ದಲ್ಲ. ಅದನ್ನು ನಾವು ಎತ್ತಿಹಿಡಿದಿದ್ದೇವೆ ಅಷ್ಟೆ. ನಮ್ಮ ಕಾಳಜಿ-ಕಳಕಳಿ ಅಲ್ಲಿನ ಸಿಬ್ಬಂದಿಗೆ ಸಂಬಳ ದೊರೆಯಬೇಕು ಅಷ್ಟೆ. ನ್ಯೂಸ್ ಫಸ್ಟ್ ಚಾನೆಲ್ ನಲ್ಲಿ ನಡೆದ ಎಷ್ಟೋ ಸಕಾರಾತ್ಮಕ ಬೆಳವಣಿಗೆಗಳ ಬಗ್ಗೆಯೂ ಕನ್ನಡ ಫ್ಲ್ಯಾಶ್ ನ್ಯೂಸ್ ಬೆಳಕು ಚೆಲ್ಲಿದೆ. ಅದನ್ನು ಸ್ವೀಕರಿಸುವವರು ವಾಸ್ತವ ಬರೆದಾಗಲೂ ಒಪ್ಪಿಕೊಳ್ಳಬೇಕಾಗುತ್ತದೆ. ಅದೇ ನಿಜವಾದ ಪತ್ರಿಕೋದ್ಯಮ ಎನ್ನುವುದಷ್ಟೇ ನಮ್ಮ ಭಾವನೆ. ಇದರಿಂದ ಚಾನೆಲ್ ರೆಪ್ಯುಟೇಷನ್ ಹಾಳಾಗುತ್ತದೆ ಎನ್ನುವ ಹೆದರಿಕೆ-ಅಂಜಿಕೆ ಮ್ಯಾನೇಜ್ಮೆಂಟ್ ಗೆ ಇರುವುದೇ ಸತ್ಯವಾದರೆ ಸುದ್ದಿಮನೆಯಲ್ಲಿ ಕೂತು ಪ್ರಾಮಾಣಿಕವಾಗಿ ಕೆಲಸ ಮಾಡುವ ಮಾದ್ಯಮಮಿತ್ರರ ಬದುಕುಗಳು ಬೀದಿಗೆ ಬರಬಾರದೆನ್ನುವ ಕಾಳಜಿಯೂ ಅವರಿಗೆ ಇರಬೇಕಾಗುತ್ತದಲ್ಲವೇ..? ನ್ಯೂಸ್ ಫಸ್ಟ್ ಒಂದೇ ಅಲ್ಲ, ಕನ್ನಡದ ಯಾವುದೇ ಮಾದ್ಯಮಗಳು ತಮ್ಮ ಹೊಣೆಗಾರಿಕೆ ಮರೆತಾಗ ಅದನ್ನು ಎಚ್ಚರಿಸುವ-ಮನವರಿಕೆ ಮಾಡಿಕೊಡುವ ಕೆಲಸವನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ಪ್ರಾಮಾಣಿಕವಾಗಿ-ಪಾರದರ್ಶಕವಾಗಿ ಅಷ್ಟೇ ನಿಷ್ಟೆಯಿಂದ ಮಾಡುತ್ತಾ ಬಂದಿದೆ. ಮುಂದೆಯೂ ಮಾಡಲಿದೆ. ಹಾಗಾಗಿನೇ ಕನ್ನಡ ಫ್ಲ್ಯಾಶ್ ನ್ಯೂಸ್ ಇಡೀ ರಾಜ್ಯದಲ್ಲಿ ಅಷ್ಟೊಂದು ಮಾದ್ಯಮಮಿತ್ರರ ವಿಶ್ವಾಸಕ್ಕೆ ಪಾತ್ರವಾಗಿರುವುದು. ಇದನ್ನು ಅರ್ಥ ಮಾಡಿಕೊಳ್ಳದೆ ನಮ್ಮ ದ್ವನಿಯನ್ನು ಅಡಗಿಸಲು ಸೈಬರ್ ಕ್ರೈಮ್ ಗೆ ಕಂಪ್ಲೆಂಟ್ ಕೊಡುವುದರಿಂದ ನಮ್ಮ ನೈತಿಕ ಸ್ಥೈರ್ಯವನ್ನು ಕುಂದಿಸಲು ಸಾಧ್ಯವಿಲ್ಲ. ಅದರಿಂದ ನಾವು ಇನ್ನಷ್ಟು ಗಟ್ಟಿಯಾಗುತ್ತೇವೆ. ನಮ್ಮ ದ್ವನಿ ಮತ್ತಷ್ಟು ನಿಷ್ಟವಾಗುತ್ತದೆ. ನೆನಪಿರಲಿ.. ಸಂಪಾದಕೀಯ ಸ್ಪಷ್ಟನೆ

ಕನ್ನಡ ಸುದ್ದಿ ಮಾದ್ಯಮ ಕ್ಷೇತ್ರದಲ್ಲಿ ವೃತ್ತಿಪರತೆಗೆ ಹೆಸರಾಗಿದ್ದ ನ್ಯೂಸ್ ಫಸ್ಟ್ ಚಾನೆಲ್ ಮತ್ತೆ ಸುದ್ದಿಯಲ್ಲಿದೆ. ಅದು ಅಲ್ಲಿನ ಬಹುತೇಕ ಸಿಬ್ಬಂದಿಗೆ ಸಂಬಳ ನೀಡಲು ಸಾಧ್ಯವಾಗದ ಕಾರಣಕ್ಕೆ. ಕಳೆದ ಎರಡ್ಮೂರು ತಿಂಗಳಿಂದ ಅನೇಕರಿಗೆ ಸಂಬಳ ಕೊಡದೆ ಅಲ್ಲಿನ ಮ್ಯಾನೇಜ್ಮೆಂಟ್ ಸಿಬ್ಬಂದಿಯ ಕೆಂಗಣ್ಣಿಗೆ ಗುರಿಯಾಗಿದೆ. ಎಲ್ಲರಿಗೂ ಸಂಬಳ ಕೊಡದಿದ್ದರೆ ಪರ್ವಾಗಿಲ್ಲ. ಒಂದಷ್ಟು ಜನಕ್ಕೆ ಕೊಟ್ಟು ಇನ್ನೊಂದಷ್ಟು ಜನಕ್ಕೆ ನಿರಾಕರಿಸಲಾಗಿದೆ ಎನ್ನುವುದು ಚಾನೆಲ್ ನಲ್ಲಿ ದೊಡ್ಡಮಟ್ಟದ ಕೋಲಾಹಲಕ್ಕೆ ಕಾರಣವಾಗಿದೆಯಂತೆ. ಒಂದೇ ಕುಟುಂಬದ ಸದಸ್ಯರಂತಿದ್ದ ನಮ್ಮ ನಡುವೆಯೇ ಭಿನ್ನಾಭಿಪ್ರಾಯ ಸೃಷ್ಟಿಗೆ ಮ್ಯಾನೇಜ್ಮೆಂಟ್ ಕಾರಣವಾಗ್ತಿದೆ ಎನ್ನುವ ಅಳಲು-ಆಕ್ರೋಶ ಸಂತ್ರಸ್ಥರದ್ದಂತೆ. ಚಾನೆಲ್ ನಡೆಸ್ಲಿಕ್ಕೆ ಆಗದವರು. ಸಿಬ್ಬಂದಿಯನ್ನು ಸರಿಯಾಗಿ ನಡೆಸಿಕೊಳ್ಳೊ ತಾಕತ್ತಿಲ್ಲದವರು ಅದರ ಉಸಾಬರಿಗೇ ಹೋಗಬಾರದೆನ್ನುವ ಮಟ್ಟಿಗೆ ಸಿಬ್ಬಂದಿ ಮ್ಯಾನೇಜ್ಮೆಂಟ್ ವಿರುದ್ದ ತಮ್ಮ ಆಕ್ರೋಶ ಹೊರಹಾಕ್ತಿದೆ. 

ಚಾನೆಲ್ ನಿಜವಾಗ್ಯೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಿದ್ದರೆ ಸಿಬ್ಬಂದಿಗೆ ಸಂಬಳ ಕೊಡೊಕ್ಕೆ ಕಷ್ಟವಾಗುತ್ತಿದೆ ಎಂದುಕೊಳ್ಳಬಹುದಿತ್ತು. ಆದರೆ ನ್ಯೂಸ್ ಫಸ್ಟ್ ನ ನೊಂದ ಸಿಬ್ಬಂದಿ ಹೇಳುವಂತೆ ಚಾನೆಲ್ ನ  ಸ್ಥಿತಿ  ಸಂಪೂರ್ಣ ಇದಕ್ಕೆ ವಿರುದ್ದವಾಗಿದೆಯಂತೆ. ಜಾಹಿರಾತಿನ ಹರಿವು ಚೆನ್ನಾಗಿದೆ. ಇವೆಂಟ್ಸ್ ಗಳ ಮೂಲಕ ಕೋಟ್ಯಾಂತರ ಲಾಭಬರುತ್ತಿದೆ. ಟಿಆರ್ ಪಿಯಲ್ಲಿ ದಿಗ್ಗಜ ಚಾನೆಲ್ ಗಳನ್ನು ಹಿಂದಿಕ್ಕಿ ಮುನ್ನಡೆಯುತ್ತಿದೆ…ಇಷ್ಟಾದರೂ ನಮ್ಮನ್ನು ಹಣವಿಲ್ಲ ಎಂಬ ಕಾರಣವೊಡ್ಡಿ ಎಂದು ಸಂಬಳದಿಂದ ವಂಚಿಸಲಾಗ್ತಿದೆ. ಅದು ಒಂದು ತಿಂಗಳಾದ್ರೆ ಪರ್ವಾಗಿಲ್ಲ..ಎರಡ್ಮೂರು ತಿಂಗಳಿಂದಲೂ ಸಂಬಳ ಇಲ್ಲದೆ ಬೆಂಗಳೂರಿನಲ್ಲಿ ಬದುಕು ನಡೆಸೋದು ಹೇಗೆ ಎಂದು ಅನೇಕರು ಪ್ರಶ್ನಿಸಿದ್ದಾರೆ. ತಮ್ಮ ಅಳಲು ಮ್ಯಾನೇಜ್ಮೆಂಟ್ ಗೆ ಗೊತ್ತಿದ್ದರೂ ಅಮಾನವೀಯವಾಗಿ ವರ್ತಿಸ್ತಿದೆ ಎನ್ನುವುದು ನೊಂದವರ ಅಳಲು.

ನ್ಯೂಸ್ ಫಸ್ಟ್ ಚಾನೆಲ್ ಬಗ್ಗೆ ಹೆಚ್ಚಾಗಿ ಬರೆದಿರೋದೇ ಕನ್ನಡ ಫ್ಲ್ಯಾಶ್ ನ್ಯೂಸ್‌

ನ್ಯೂಸ್ ಫಸ್ಟ್ ಚಾನೆಲ್ ಬಗ್ಗೆ ಬರೆದಷ್ಟನ್ನು ಕನ್ನಡ ಫ್ಲ್ಯಾಶ್ ಇನ್ನೊಂದು ಸುದ್ದಿ ಸಂಸ್ಥೆ ಬಗ್ಗೆ ಬರೆದಿರಲಿಕ್ಕಿಲ್ಲ ಎನ್ನಿಸುತ್ತದೆ. ಚಾನೆಲ್ ಒಳ್ಳೆಯ ಕಾರಣಕ್ಕೆ ಸುದ್ದಿಯಾದಾಗ ಅದನ್ನೂ ಬರೆದಿದ್ದೇವೆ.. ಕೆಟ್ಟ ಕಾರಣಕ್ಕೆ ಸುದ್ದಿಯಾದಾಗ ಅದನ್ನೂ ವರದಿ ಮಾಡಿದ್ದೇವೆ. ಈಗ ಸಿಬ್ಬಂದಿಯ ಸಂಬಳ ನೀಡಲಾಗಿಲ್ಲ ಎನ್ನುವುದೇ ಸುದ್ದಿಯ ಮುಖ್ಯ ವಿಷಯ. ಏಕಂದ್ರೆ ಸುದ್ದಿ ಚಾನೆಲ್ ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಕಷ್ಟಸಂಕಷ್ಟ-ಅಳಲು ದುಗುಡಗಳನ್ನು ತೀರಾ ಹತ್ತಿರದಿಂದ ಬಲ್ಲಂತ ಮಾರುತಿ-ರವಿಕುಮಾರ್ ಅವರೇ ಈ ಚಾನೆಲ್ ನ ಮುಖ್ಯಸ್ಥರು.ಆದರೆ ಅವರೇ ಅದನ್ನು ನಿರ್ವಹಿಸುವಲ್ಲಿ ವಿಫಲವಾಗಿದ್ದಾರೆನ್ನುವುದು ದುರಂತವೇ ಸರಿ..ಅವರ ತಾವಾಯ್ತು ತಮ್ಮ ಜೀವನ-ಕುಟುಂಬ-ದುಡಿಮೆಯಾಯ್ತು ಎನ್ನುವ ಅವರ ನಿರ್ಲಿಪ್ತ ಹಾಗೂ ನಿರ್ಲಕ್ಷ್ಯ ಭಾವನೆಯಿಂದಲೇ ನಾವೆಲ್ಲಾ ಅಕ್ಷರಶಃ ಅನಾಥರಾಗಿದ್ದೇವೆ.ತಮ್ಮ ಅಳಲನ್ನು ಯಜಮಾನರಾಗಿ ಕೇಳಬೇಕಾದವ್ರೇ ಸಂವೇದನೆ ಕಳಕೊಂಡವರಂತಾಗಿದ್ದಾರೆ.ನ್ಯಾಯಯುತವಾಗಿ ದುಡಿಯುತ್ತಿರುವ ತಮಗೆ  ನ್ಯಾಯೊಚಿತವಾಗಿ ಸಿಗಬೇಕಾದ ಹಕ್ಕಿನ ಸಂಬಳ ಕೊಡದೆ ಸತಾಯಿಸುತ್ತಿದ್ದಾರೆ ಎನ್ನುವುದು ಮಾದ್ಯಮ  ಮಿತ್ರರ ಅಳಲು.

ಕನ್ನಡದ ಪ್ರಮುಖ ಸುದ್ದಿ ವಾಹಿನಿಗಳಲ್ಲಿ ನ್ಯೂಸ್ ಪಸ್ಟ್ ಒಂದು ಎನ್ನುವುದರಲ್ಲಿ ಅನುಮಾನ ವಿಲ್ಲ .ಕಡಿಮೆ ಅವಧಿಯಲ್ಲಿ ಹೆಚ್ಚು ಜನರನ್ನು ತಲುಪಿ ಜನಪ್ರಿಯತೆ ಪಡೆದ ಚಾನೆಲ್ ಎನ್ನುವ ಹೆಗ್ಗಳಿಕೆ ಅದಕ್ಕಿದೆ.ಅದರೆ ದುರಂತ ಎಂದರೆ ಅದೇ ಚಾನೆಲ್ ನ್ನು ಅನೇಕ ತಿಂಗಳುಗಳಿಂದ ಅಲ್ಲಿನ ಮ್ಯಾನೇಜ್ಮೆಂಟೇ ಹಳ್ಳ ಹಿಡಿಸುವ ಸ್ಥಿತಿಗೆ ತಂದಿದೆ ಎಂಬ ಆಪಾದನೆ ಅಲ್ಲಿನ ಸಿಬ್ಬಂದಿಯಿಂದ ಕೇಳಿಬಂದಿದೆ. ಸಿಬ್ಬಂದಿಗೆ ಕೊಡಬೇಕಾದ ತಿಂಗಳ ಸಂಬಳ ಕೊಡದೆ ಸತಾಯಿಸಲಾಗುತ್ತಿದೆಯಂತೆ. ಸಬೂಬುಗಳನ್ನು ಹೇಳುತ್ತ ಮನವೊಲಿಸುತ್ತಿದ್ದ ಮುಖ್ಯಸ್ಥರು ಈಗೀಗ ಇದ್ದರೆ ಇರಬಹುದು..ಇಲ್ಲದಿದ್ರೆ ಜಾಗ ಖಾಲಿ ಮಾಡಬಹುದು..ನಿಮ್ಮನ್ನು ನಂಬಿ ಚಾನೆಲ್ ಮಾಡಿಲ್ಲ..ನಮಗೆ ಚಾನೆಲ್ ನಡೆಸಲು ಗೊತ್ತಿದೆ ಎಂಬ ಹೊಸ ರಾಗ ತೆರೆಯಲಾರಂಭಿಸಿದ್ದಾರಂತೆ. ದೈರ್ಯ ಮಾಡುತ್ತಿರುವವರು ಶಾಪ ಹಾಕಿ ಹೊರ ನಡೆಯುತ್ತಿದ್ದರೆ,ಪಾಪ, ತಿಂಗಳುಗಳವರೆಗೆ ಸಂಬಳ ಬರಬೇಕಾದ ಸಿಬ್ಬಂದಿ ಕೆಲಸ ಬಿಟ್ರೆ ಅದೂ ಸಿಗೊಲ್ಲ ಎಂದು ಎಷ್ಟೇ ನೋವಾದ್ರೂ ತುಟಿ ಕಚ್ಚಿ ಸಹಿಸಿಕೊಳ್ಳುತ್ತಿದ್ದಾರೆನ್ನುವ ಮಾತಿದೆ.. 

 ಆರಂಭದ ವರ್ಷಗಳಲ್ಲಿ ಸಿಬ್ಬಂದಿಯನ್ನು  ಚೆನ್ನಾಗಿಯೇ ನೋಡಿಕೊಂಡಿದ್ದ ಮ್ಯಾನೇಜ್ಮೆಂಟ್ ಕಳೆದ ಒಂದೆರೆಡು ವರ್ಷಗಳಿಂದ ಯೂ ಟರ್ನ್ ಹೊಡೆಯಲಾರಂಭಿಸಿದೆಯಂತೆ.ಚಾನೆಲ್ ಗೆ ಹಣದ ಕೊರತೆಯೇನೂ ಇಲ್ಲ ಎನ್ನುವುದು ಅಲ್ಲಿನ ಮಾರ್ಕೆಟಿಂಗ್ ವಿಭಾಗದ ಅಂಕಿಅಂಶಗಳ ವರ್ತಮಾನ.ಹಾಗಿದ್ದಾಗ್ಯೂ ಸಿಬ್ಬಂದಿಗೆ ತಿಂಗಳುವರೆಗೆ ಸಂಬಳ ಕೊಡದೆ ಸತಾಯಿಸುತ್ತಿರುವುದು ನೋವು-ಬೇಸರ ತರಿಸುತ್ತದೆ.ತಿಂಗಳ ಸಂಬಳವನ್ನೇ ನೆಚ್ಚಿಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ನೂರಾರು ಸಿಬ್ಬಂದಿ ನೋವು-ನಿರಾಶೆ-ಬೇಸರದಿಂದ ದಿನನಿತ್ಯ ಮನೆಗೆ ವಾಪಸ್ಸಾ ಗುವಂತಾಗಿದೆಯಂತೆ.ಮುಖ್ಯಸ್ಥರೆನಿಸಿಕೊಂಡವರು ಮಾತ್ರ ಅನೇಕ ರೂಪಗಳಲ್ಲಿ ಸಂದಾಯವಾಗುತ್ತಿರುವ ಲಾಭದಲ್ಲಿ ಒಂದು ಪಾಲನ್ನು ತಮ್ಮ ಜೀವನ-ಹೆಂಡ್ತಿ ಮಕ್ಕಳು-ಅವರ ಅವಶ್ಯಕತೆಗಳಿಗೆ ಮೀಸಲಿಟ್ಟು ಉಳಿದಿದ್ದನ್ನು ಬೆಂಗಳೂರಿನ ಹಲವೆಡೆ ಇನ್ವೆಸ್ಟ್ ಮಾಡ್ತಿದ್ದಾರೆನ್ನುವ ಮಾತುಗಳಿವೆಯಂತೆ.

ಕಟ್ಟಡ ಬಾಡಿಗೆ ಕಟ್ಟಿಲ್ಲ..!ನೀರು-ವಿದ್ತುತ್ ಬಿಲ್ ಬಾಕಿ ಅಂತೆ..!ಜನರೇಟರ್ ಮೊರೆ ಹೋದ ಚಾನೆಲ್..!:  

ರವೀಂದ್ರ ಕಲಾಕ್ಷೇತ್ರದ ಹಿಂದಿನ ರಸ್ತೆಯಲ್ಲಿರುವ ಬೃಹತ್ ಕಟ್ಟಡದಲ್ಲಿ ನಡೆಯುತ್ತಿರುವ ಚಾನೆಲ್ ಗೆ ಬಾಡಿಗೆ ಕಟ್ಟಲೂ ಹಣವಿಲ್ಲ ಎನ್ನುವ ಅಘಾತಕಾರಿ ಸುದ್ದಿ ಹೊರಬಿದ್ದಿದೆ. ಅಷ್ಟೇ ಅಲ್ಲ ನೀರು-ವಿದ್ಯುತ್ ಬಿಲ್ ನ್ನೂ ಬಾಕಿ ಉಳಿಸಿಕೊಳ್ಳಲಾಗಿದೆಯಂತೆ. ಜನರೇಟರ್ ನಲ್ಲಿ ಚಾನೆಲ್ ರನ್ ಮಾಡುವಂತ ಸ್ಥಿತಿ ಸೃಷ್ಟಿಯಾಗಿದೆ ಎನ್ನುವ ಮಾತುಗಳಿವೆ.ಇದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದನ್ನು ಮ್ಯಾನೇಜ್ಮೆಂಟೇ ಸ್ಪಷ್ಟಪಡಿಸಬೇಕಿದೆ.

ALSO READ :  "ಮಗ"ನ ಹೆಸರ "ಕಂಪೆನಿ"ಗೆ ಲಕ್ಷಾಂತರ ರೂ "ಧಾರೆ"..! "ಟೆಂಡರ್" ನಿಯಮ ಉಲ್ಲಂಘಿಸಿ ಹಣ "ಟ್ರಾನ್ಸ್ ಫರ್"..? "ಅಕ್ರಮ" ನಡೆದ್ರೂ ಕ್ರಮ ಕೈಗೊಳ್ಳಲು "ಮೀನಾಮೇಷ"ವೇಕೇ..?!

ಎಚ್ ಆರ್ ಗೂ ಸಂಬಳವಿಲ್ಲ ಅಂತೆ..!:

ಸಿಬ್ಬಂದಿಯ ಸಂಬಳ,ಅವರ ಕುಂದುಕೊರತೆ ನೋಡಿಕೊಳ್ಳಬೇಕಾದ ಎಚ್ ಆರ್ ಸಿಬ್ಬಂದಿಗೇನೆ ಮ್ಯಾನೇಜ್ಮೆಂಟ್ ಸಂಬಳ ಕೊಟ್ಟಿಲ್ಲವಂತೆ.   ಯಾರೇ ಸಿಬ್ಬಂದಿ ಸಂಬಳ ಕೇಳಿಕೊಂಡು ಬಂದ್ರೂ ಮೇಲಿನವರ ಆರ್ಡರ್ ಬಂದಿಲ್ಲ ಎಂದೇಳುತ್ತಿದ್ದಾರಂತೆ. ಆರಂಭದಲ್ಲಿ ಹಾಗೆಯೇ ಹೇಳುತ್ತಿದ್ದ ಎಚ್ ಆರ್ ಸಿಬ್ಬಂದಿಯೇ ಮ್ಯಾನೇಜ್ಮೆಂಟ್ ದೋರಣೆಗೆ ಬೇಸತ್ತಿದ್ದಾರಂತೆ.  ಸಂಬಳ ಕೊಡಿ ಇಲ್ಲದಿದ್ದರೆ ಕಾನೂನಿನ ಹಾದಿ ಹಿಡಿಯಬೇಕಾಗ್ತದೆ ಎನ್ನುತ್ತಿರುವ ಸಿಬ್ಬಂದಿಗೆ ದ್ವನಿಗೂಡಿಸಿದ್ದಾರಂತೆ. ಸಂಬಳ ಕೇಳಿಕೊಂಡು ಬರುವ ಸಿಬ್ಬಂದಿಗೆ ತಮ್ಮ ಅಸಹಾಯಕತೆ  ತೋಡಿಕೊಳ್ತಿದಾರಂತೆ. ಪಾಪ..ಅವರಾದ್ರೂ ಏನ್ ಮಾಡೊಕ್ಕಾಗುತ್ತೆ ಹೇಳಿ..!?

ಕ್ಯಾಬ್ ಗೂ ಹಣ ಕೊಟ್ಟಿಲ್ಲ..!ಇಂಧನ ನೀವೇ ಭರಿಸಿಕೊಳ್ಳಿ ಅಂದ್ರೆ ಹೇಗೆ..ಸರ್..?!:

ಸಿಬ್ಬಂದಿ ಆಪಾದಿಸುವಂತೆ ನ್ಯೂಸ್ ಫಸ್ಟ್ ನ ಸ್ತಿತಿ ಎಷ್ಟು ಹದಗೆಟ್ಟಿದೆ ಎಂದ್ರೆ  ಸ್ಟೋರಿಗಳಿಗೆ-ಅಸೈನ್ಮೆಂಟ್ ಗಳಿಗೆ ಹೋಗಲಿಕ್ಕೂ ಕ್ಯಾಬ್ ಗೆ ದುಡ್ಡು ಕೊಡ್ತಿಲ್ಲವಂತೆ….ಪಾಪ.! ರಿಪೋರ್ಟರ್ಸ್  ಸ್ಟೋರಿಗೆ ಹೋಗಬೇಕೆಂದ್ರೆ ಕ್ಯಾಬ್ ,ಕ್ಯಾಮೆರಾಮನ್  ಕೊಡ್ತೇವೆ..ಆದ್ರೆ ಡೀಸೆಲ್ ಮಾತ್ರ ಕೇಳಬೇಡಿ ಎನ್ತಿದೆಯಂತೆ.  ಸಂಬಳವೇ ಕೊಡ್ತಿಲ್ಲ ಎಂದ್ಮೇಲೆ ಕ್ಯಾಬ್ ಗೆ ಕೊಡಲು ಅವರಿಗೆ ದುಡ್ಡು ಎಲ್ಲಿಂದ ಬರಬೇಕು.  ರಿಪೋರ್ಟರ್ಸ್ ಎಲ್ಲಿಂದ ದುಡ್ಡು ತರಬೇಕು. ರಿಪೋರ್ಟರ್ಸ್ ಅಂತೂ ದಿಕ್ಕು ತೋಚದಂತಾಗಿದ್ದಾರಂತೆ. 

ರೊಚ್ಚಿಗೆದ್ದ ಕ್ಯಾಮೆರಾಮನ್..ಸಂಬಳ ಕಕ್ಕಿದ ಮ್ಯಾನೇಜ್ಮೆಂಟ್..! : ಹೊಸ ಹೂಡಿಕೆದಾರರಿಗೆ ಹುಡುಕಾಟ.. ! ನಿಮ್ಮ ದಾರಿ ನೀವು ನೋಡಿಕೊಳ್ಳಬಹುದು ಎಂಬ ವರಸೆ..!?:

ಮೊದಲೇ ಹೇಳಿದಂತೆ  ಚಾನೆಲ್ ನ ಸ್ಥಿತಿಗೆ ಹೆದರಿ ಅನೇಕರು ಅದಾಗಲೇ ಕೆಲಸ ಬಿಡ್ತಿದಾರಂತೆ. ಸಂಬಳ ಕೊಡ್ಲಿಕ್ಕಾಗದ ಸ್ಥಿತಿಯಲ್ಲಿರುವ ಸಂಸ್ಥೆಗೆ ಮೊನ್ನೆ ಒಬ್ಬ ಕ್ಯಾಮೆರಾಮನ್ ಹಿಡಿಶಾಪ ಹಾಕಿ ಅವಾಜ್ ಹಾಕಿದ್ಮೇಲೇ ಅಂತೆ ಸಂಬಳ ಕೊಟ್ಟಿದ್ದು.ಕೆಲಸ ಬಿಡಲು ಉದ್ದೇಶಿಸಿರುವವರು ಕೂಡ ನಾವು ಇಂತದ್ದೇ ಮಾರ್ಗ ಅನುಸರಿಸಿದ್ರೆ ನಮಗೂ ಸಂಬಳ ಬರಬಹುದೇನೋ ಎನ್ನುವ ಲೆಕ್ಕಾಚಾರ ಹಾಕಿಕೊಂಡಿದ್ದಾರಂತೆ.ಎಲ್ಲಾ ರೀತಿಯಲ್ಲಿ ಕೇಳಿ, ಇಲ್ಲ ಎಂದೆನಿಸಿಕೊಂಡ ಮೇಲೆ ಪಾಪ ಸಿಬ್ಬಂದಿಗೆ ಇದನ್ನು ಬಿಟ್ಟು ಇನ್ನ್ಯಾವ ಮಾರ್ಗ ಉಳಿದೀತು ಅಲ್ವಾ..!? ಆ ಪರಿಸ್ತಿತಿಗೆ   ಮ್ಯಾನೇಜ್ಮೆಂಟೇ ಕಾರಣ ಅಲ್ಲವೇ..?!

ಇದೆಲ್ಲದರ ನಡುವೆಯೇ ಮ್ಯಾನೇಜ್ಮೆಂಟ್ ಸಂಬಳ ಕೇಳಲು ಏರುದ್ವನಿಯಲ್ಲಿ ಮಾತನಾಡಿದವರಿಗೆ ಇಷ್ಟವಿದ್ದರೆ ನಮ್ಮ ಜತೆ ಇರಿ.ನಮ್ಮ ಸಮಸ್ಯೆ ಇನ್ನೂ ಒಂದಷ್ಟು ತಿಂಗಳು ಹೀಗೆಯೇ ಇರುತ್ತದೆ.ಮುಂದೆ ಸರಿಯಾಗಬಹುದು ಎನ್ನುತ್ತಿದೆಯಂತೆ.ಆಗೊಲ್ಲ ಎಂದ್ರೆ ಒತ್ತಾಯವಿಲ್ಲ..ನಿಮ್ಮ ದಾರಿ ನೀವು ನೋಡಿಕೊಳ್ಳಬಹುದು ಎನ್ನಲಾಗ್ತಿದೆಯಂತೆ.ಪಾಪ ಸಿಬ್ಬಂದಿಗೆ ಈ ಮಾತು ಕೇಳಿಸಿಕೊಂಡು ಶಾಪ ಹಾಕೋದು ಬಿಟ್ಟರೆ ಬೇರೇನೂ ಉಳಿದಿಲ್ಲವಂತೆ.

ಇನ್ನು ಮ್ಯಾನೇಜ್ಮೆಂಟ್ ಅನೇಕ ಸನ್ನಿವೇಶಗಳಲ್ಲಿ ಚಾನೆಲ್ ಸಂಕಷ್ಟದಲ್ಲಿರುವ ಕಾರಣಕ್ಕೆ ಹೊಸ ಹೂಡಿಕೆದಾರರನ್ನು ಹುಡುಕಲಾಗ್ತಿದೆ ಎಂದು ಹೇಳಿದೆಯಂತೆ.ಚಾನೆಲ್ ಆರ್ಥಿಕವಾಗಿ ಸುಸ್ತಿತಿಯಲ್ಲಿರುವಾಗ ಹೂಡಿಕೆದಾರರನ್ನು ಹುಡುಕುವ ಅವಶ್ಯಕತೆ ಏನಿದೆ ಎನ್ನುವುದು ಅಲ್ಲಿನ ಸಿಬ್ಬಂದಿಯ ಪ್ರಶ್ನೆ.ಇದೆಲ್ಲಾ ತಮ್ಮನ್ನು ಮಕ್ಕಾರ್ ಮಾಡುವ ಪೂರ್ವನಿಯೋಜಿತ ತಂತ್ರನಾ ಎಂದು ಅನೇಕರು ಮಾತನಾಡಿಕೊಳ್ತಿದಾರಂತೆ.ಹೂಡಿಕೆದಾರರು ಯಾರಾದ್ರೂ ಬಂದ್ರೆ ತಮ್ಮ ಸಮಸ್ಯೆ ಆಗಲಾದ್ರೂ ದೂರವಾಗ್ತದಲ್ಲ ಎಂಬ ಆಲೋಚನೆ ಅನೇಕರದ್ದು.

18 ತಿಂಗಳಿಂದ ಪಿಎಫ್ ಕಟ್ಟಿಲ್ಲವಂತೆ..!:

ಅಲ್ಲಿನ ಸಿಬ್ಬಂದಿಗೆ  ಸಂಬಳವಷ್ಟೇ ಅಲ್ಲ ಪ್ರತಿ ತಿಂಗಳು ಪಾವತಿಸಬೇಕಾದ ಪಿಎಫ್ ಕೂಡ ಪಾವತಿಯಾಗಿಲ್ಲವಂತೆ.ಒಂದು ಮೂಲದ ಪ್ರಕಾರ ಅನೇಕ ಸಿಬ್ಬಂದಿಗೆ ಕಳೆದ 18 ತಿಂಗಳಿಂದಲೂ ಪಿಎಫ್ ಕಟ್ಟಿಲ್ಲವಂತೆ.ಸಿಬ್ಬಂದಿಯ ದುಡಿಮೆಯಲ್ಲಿ ಏನಾದರೊಂದಷ್ಟು ಉಳಿತಾಯ ಎಂದ್ರೆ ಅದು ಕೇವಲ ಪಿಎಫ್.ಅದನ್ನೂ ಕಟ್ಟದಿರುವುದು ಯಾವ ನ್ಯಾಯ..ಸ್ಯಾಲರಿಯನ್ನು ಕೊಟ್ಟಿಲ್ಲ..ಅಟ್ಲೀಸ್ಟ್ ಪಿಎಫ್ ನ್ನಾದ್ರೂ ಕಟ್ಟಿರಿ ಸ್ವಾಮಿ ಎಂದು ಕೇಳಲು ಹೋದರೆ ಪಾಪ ಮೊದಲೇ ಸಮಸ್ಯೆಯಲ್ಲಿರುವ ಎಚ್ ಆರ್ ವಿಭಾಗದವರು ನಕ್ಕು ಸುಮ್ಮನಾಗ್ತಾರಂತೆ..ನಮ್ಮ ಪಿಎಫ್ ಗೂ ಎಲ್ಲಿ ಮೋಸವಾಗ್ತದೋ ಎನ್ನುವ ಅಳುಕು ಅಲ್ಲಿನ ಸಿಬ್ಬಂದಿಯದ್ದಂತೆ.

ಬೇರೆ ಚಾನೆಲ್ ಗಳಿಗೆ ರಿಪೋರ್ಟರ್ಸ್.!-ಕ್ಯಾಮೆರಾಮನ್ ಗುಳೆ..?!: 

ಎಲ್ಲಾ ಚಾನೆಲ್ ಗಳಿಗಿಂತ ವಿಭಿನ್ನವಾಗಿ ಮೂಡಿಬರುತ್ತಿದ್ದ ಕಾಲಘಟ್ಟದಲ್ಲಿ ನ್ಯೂಸ್ ಫಸ್ಟ್ ನಲ್ಲಿ ಕೆಲಸ ಮಾಡೊಕ್ಕೆ ಎಲ್ಲರೂ ಇಷ್ಟಪಡುತ್ತಿದ್ದರು.ಟಿವಿ9 ನಲ್ಲಿನ ವೃತ್ತಿಪರತೆಯನ್ನೇ ಮಾರುತಿ,ರವಿಕುಮಾರ್ ಜೋಡಿ ನ್ಯೂಸ್ ಫಸ್ಟ್ ನಲ್ಲಿ ಅಳವಡಿಸಿಕೊಂಡಿತ್ತೆನ್ನುವುದೇ ಇದಕ್ಕೆ ಕಾರಣವಾಗಿತ್ತು.ಅದರಂತೆ ನಡೆಯಿತು ಸಹ.ಆದರೆ ಕಳೆದೊಂದು ವರ್ಷದಿಂದ  ಸೃಷ್ಟಿಯಾಯ್ತೆಂದು ಹೇಳಲಾಗುತ್ತಿರುವ ಆರ್ಥಿಕ ಸಂಕಷ್ಟದ ಪರಿಣಾಮವೇನೋ ಚಾನೆಲ್ ಸಹವಾಸವೇ ಬೇಡ ಎಂದು ಅನೇಕರು ಬೇರೆ ಕಡೆ ಹೋಗಲು ಪ್ರಾರಂಭಿಸಿದ್ರು.ಇತ್ತೀಚೆಗಂತೂ ರಿಪೋರ್ಟರ್ಸ್-ಕ್ಯಾಮೆರಾಮನ್ಸ್ ಹಾಗೂ ವಿವಿಧ ವಿಭಾಗಗಳ ಸಿಬ್ಬಂದಿ ಬೇರೆಡೆ ಗುಳೆ ಹೋಗ್ತಿದಾರಂತೆ.ಅವರೆಲ್ಲರ ಕಂಪ್ಲೆಂಟ್ ಸಂಬಳ ಎನ್ನಲಾಗ್ತಿದೆ.

ಚಾನೆಲ್ ನಲ್ಲಿ ಎಲ್ಲವೂ ಸರಿಯಾಗಿದಿದ್ದರೆ ಅಥವಾ ಎಲ್ಲರಿಗೂ ಮುಖ್ಯವಾಗಿರುವ ಸಂಬಳ ಸರಿಯಾಗಿ ನೀಡಿದಿದ್ದರೆ ಯಾಕೆ ಅವರೆಲ್ಲಾ ಬೇರೆ ಕಡೆ ಹೋಗ್ತಿದ್ದರು.ಅದು ಕೂಡ ಶಾಪ ಹಾಕಿಕೊಳ್ತಾ..!?ಇದಕ್ಕ ಮೊದಲು ಮ್ಯಾನೇಜ್ಮೆಂಟ್ ಉತ್ತರ ಕಂಡುಕೊಳ್ಳಬೇಕಿದೆ.ಸಮಸ್ಯೆ ಗೆ ಮೂಲ ಏನು ಎನ್ನುವುದು ತಮಗೇ ಗೊತ್ತಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ನಮ್ಮ ತೇಜೋವಧೆ ಮಾಡಲಾಗ್ತಿದೆ ಎಂದು ಬೊಬ್ಬೆ ಹೊಡೆದುಕೊಳ್ಳುವುದು ಯಾವ ನ್ಯಾಯ ಹೇಳಿ..?!

ಇದನ್ನೂ ಓದಿ| ಟಿಆರ್‌ಪಿ ಕುಸಿತಕ್ಕೆ ಸಿಬ್ಬಂದಿಯ ವೇತನ ಕಡಿತ, ನಾಯಕತ್ವದ ವೈಫಲ್ಯಕ್ಕೆ ಮ್ಯಾನೇಜ್ಮೆಂಟ್ ಕೆಂಗಣ್ಣು!

ಚಾನೆಲ್ ಗೆ ಹಣದ ಮೂಲವೇ ಇಲ್ಲ ಎನ್ನುವುದು ಎಷ್ಟು ಸತ್ಯ.!? 

ಚಾನೆಲ್ ಸಂಕಷ್ಟಕ್ಕೆ ಸಿಲುಕಿರುವುದಕ್ಕೆ ಹಣದ ಹರಿವು ನಿಂತೋಗಿರುವುದೇ ಕಾರಣ ಎಂದು ಹೇಳಲಾಗ್ತಿದೆಯಂತೆ.ಇದು ಎಷ್ಟರ ಮಟ್ಟಿಗೆ ಸತ್ಯ. ಟಿಆರ್ ಪಿಯಲ್ಲಿ ಒಳ್ಳೆಯ ಸ್ಥಾನ ಗಿಟ್ಟಿಸಿಕೊಂಡಿರುವ ಚಾನೆಲ್ ಗೆ ಮಾರ್ಕೆಟಿಂಗ್ ಮೂಲಕ ಒಳ್ಳೆಯ ಜಾಹಿರಾತು ಸಿಗ್ತಿದೆಯಂತೆ.ಕಮರ್ಷಿಯಲ್ಸ್ ಕೂಡ ಬರ್ತಿದೆಯಂತೆ.ಮೊನ್ನೆ ಇವಿ ವೆಹಿಕಲ್ ಗಳ ಬೃಹತ್ ಇವೆಂಟ್ ನಡೆಸಲಾಗಿದೆಯಂತೆ.ಇದರಿಂದ ಚಾನೆಲ್ ಗೆ ಒಳ್ಳೆಯ ಆದಾಯವೇ ಬಂದಿದೆಯಂತೆ.ಇಷ್ಟೆಲ್ಲಾ ಇರುವಾಗ ನಾವು ಕಷ್ಟದಲ್ಲಿದ್ದೇವೆ ಎಂದು ಸುದ್ದಿಮನೆ ಸಿಬ್ಬಂದಿಗೆ ಹೇಳಿದ್ರೆ ಅವರಿಗೆ ಎಷ್ಟರ ಮಟ್ಟಿಗೆ ಆಕ್ರೋಶ-ಅಘಾತ ಆಗಬಹುದು ಅಲ್ವಾ..? ಆರ್ಥಿಕವಾಗಿ ಚಾನೆಲ್ ಸುಸ್ಥಿತಿಯಲ್ಲಿದ್ದರೂ ನಮ್ಮ ಹಕ್ಕಿನ ಸಂಬಳ ಕೊಡದೆ ಸತಾಯಿಸುತ್ತಿದ್ದಾರೆನ್ನುವುದೇ ಸುದ್ದಿಮಿತ್ರರ ಆಕ್ರೋಶಕ್ಕೆ ಕಾರಣವಾಗಿದೆ.ಅಲ್ಲಿನ ಸಿಬ್ಬಂದಿಯೇ ಹೇಳುವ ಪ್ರಕಾರ ಚಾನೆಲ್ ಗೆ ಬರುತ್ತಿರುವ ಹಣದಲ್ಲಿ ನಮಗೆ ಕೊಡಬೇಕಾದ ಸಂಬಳವನ್ನೂ ಅವರವರ ಹೂಡಿಕೆ-ಉಳಿತಾಯಕ್ಕೆ ಬಳಸಿಕೊಳ್ಳುತ್ತಿದ್ದಾರಂತೆ.ನಮ್ಮನ್ನು ಸಂಕಷ್ಟಕ್ಕೆ ದೂಡಿ ಅವರು ಮಾತ್ರ ಚೆನ್ನಾಗಿರುವುದು ಯಾವ ನ್ಯಾಯ ಸರ್..? ಅವರು ನಿಜಕ್ಕೂ ಸಂಕಷ್ಟದಲ್ಲಿದ್ದರೆ ಅವರು ಕೊಡುವ ಕಾರಣಕ್ಕೆ ಅರ್ಥವಿರುತ್ತಿತ್ತು.ಆದರೆ ಚಾನೆಲ್ ಉತ್ತಮ ಸ್ತಿತಿಯಲ್ಲಿದ್ದ ಹೊರತಾಗ್ಯೂ ಆರ್ಥಿಕ ಸಂಕಷ್ಟದ ಕಾರಣವೊಡ್ಡಿ ಸುದ್ದಿಮಿತ್ರರ ಸಂಬಳ ಸ್ಥಗಿತಗೊಳಿಸುವುದು ಯಾವ ನ್ಯಾಯ..ಯಾವ ಮಾನವೀಯತೆ ಎನ್ನುವುದಷ್ಟೇ ನಮ್ಮ ಪ್ರಶ್ನೆ.

ನ್ಯೂಸ್ ಫಸ್ಟ್ ವಿಷಯದಲ್ಲಿ ಎಂತದ್ದೇ ದೂರುಗಳಿದ್ದರೂ,,ಆಕ್ಷೇಪಗಳಿದ್ದರೂ ವೃತ್ತಿಪರತೆ ವಿಷಯದಲ್ಲಿ ಅದರ ಬಗ್ಗೆ ಪ್ರಶ್ನೆ ಮಾಡುವಂತಿಲ್ಲ..ಅದೇ ವೃತ್ತಿಪರತೆಯನ್ನು ಚಾನೆಲ್ ಉಳಿಸಿಕೊಂಡು ಬಂದಿದೆ.ಇದಕ್ಕೆ ಕಾರಣ ಮಾರುತಿ-ರವಿಕುಮಾರ್ ಅವರ ಕಾರ್ಯವೈಖರಿ.ಹಾಗಂತ ಸಿಬ್ಬಂದಿ ವಿಷಯದಲ್ಲಿ ಅವರ ವರ್ತನೆ-ಧೋರಣೆಯನ್ನು ಒಪ್ಪಿಕೊಳ್ಳಲಿಕ್ಕಾಗೊಲ್ಲ.ಸಂಸ್ಥೆಗಾಗಿ ಶಿಫ್ಟ್ ಎನ್ನದೆ..ಮನೆ ಎನ್ನದೆ ದುಡಿಯುವ ಸಿಬ್ಬಂದಿಗೆ ಅವರ ಹಕ್ಕಿನ ಸಂಬಳ ಕೊಡದ್ದನ್ನು ಖಂಡಿಸಲೇಬೇಕಾಗುತ್ತದೆ.ಏಕೆಂದರೆ ಅವರು  ಮ್ಯಾನೇಜ್ಮೆಂಟ್ ನಿಂದ ನಿರೀಕ್ಷಿಸುವುದು ಸಂಬಳವನ್ನು ಮಾತ್ರ..ಅದನ್ನೇ ಕೊಡದೆ ಹೋದರೆ ಅದಕ್ಕಿಂತ ದೊಡ್ಡ ಅನ್ಯಾಯ ಮತ್ತೊಂದಿದೆಯೇ..? ಅಲ್ಲಿನ ಅವ್ಯವಸ್ಥೆ ಸರಿ ಹೋಗಬೇಕು..ಸಮಸ್ಯೆ ಬಗೆಹರಿಯಬೇಕು..ಸಿಬ್ಬಂದಿಗೆ ನಿಯತವಾಗಿ ಸಂಬಳ ಆಗುವಂತಾಗಬೇಕು.. ಸುದ್ದಿ ಹಾಗೂ ವೃತ್ತಿಪರತೆ ವಿಚಾರದಲ್ಲಿ ಬೆಳೆದಿರುವ ನ್ಯೂಸ್ ಫಸ್ಟ್ ಆರ್ಥಿಕವಾಗಿ ಮತ್ತಷ್ಟು ಸದೃಢವಾಗಬೇಕು ಎನ್ನುವುದಷ್ಟೇ ಕನ್ನಡ ಫ್ಲ್ಯಾಶ್ ನ್ಯೂಸ್ ನ ಕಾಳಜಿ-ಕಳಕಳಿ..


Political News

RSS-RAW ಗೆ ಅಮೆರಿಕ ಶಾಕ್: ಟ್ರಂಪ್‌ಗೆ ಯುಎಸ್‌ ಆಯೋಗ ನೀಡಿದ ಶಿಫಾರಸಿನಲ್ಲಿ ಏನಿದೆ?

ಶಾಸಕರ ಪ್ರಶ್ನೆಗಳಿಗೆ ಬೆಲೆ ಇಲ್ಲವೇ? ಕರ್ತವ್ಯ ಲೋಪ ಎಸಗಿದ 3 ಅಧಿಕಾರಿಗಳು ಸಸ್ಪೆಂಡ್!

ರಾಜ್ಯಸಭೆಗೆ ಇಂದು ಹೈವೋಲ್ಟೇಜ್ ಎಲೆಕ್ಷನ್: 11 ಸ್ಥಾನಗಳಿಗಾಗಿ ಶಾಸಕರ ಹಣಾಹಣಿ!

ನೆಹರೂ ಬದುಕಿದ್ದರೆ ಕಾನ್ಶಿರಾಮ್ ಅವರನ್ನೇ ಸಿಎಂ ಮಾಡುತ್ತಿದ್ದರು: ರಾಹುಲ್ ಗಾಂಧಿ 

ನನ್ನ ದೇಹದಲ್ಲಿ ಪ್ರಾಣವಿರುವವರೆಗೂ ಜನರ ಸೇವೆ ಮಾಡುತ್ತೇನೆ : ಸಿದ್ದರಾಮಯ್ಯ

ಅಡುಗೆ ಅನಿಲ ಬಿಕ್ಕಟ್ಟು: ಬಿಜೆಪಿ ಸಂಸದರ ಮೌನ ಖಂಡಿಸಿ, ಸಂಸತ್ತಿನಲ್ಲಿ ಧ್ವನಿ ಎತ್ತಲು ಡಿಕೆಶಿ ಆಗ್ರಹ!

ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗುಗಳಿಗೆ ‘ಗ್ರೀನ್ ಸಿಗ್ನಲ್’ ಕೊಟ್ಟ ಇರಾನ್!

ಮಾರ್ಚ್ ಅಂತ್ಯಕ್ಕೆ ಕರ್ನಾಟಕದ ಗದ್ದುಗೆ ಬದಲಾವಣೆ ಪಕ್ಕಾ?! ಡಿಕೆಶಿಗೆ ಸಿಎಂ ಪಟ್ಟ ಕಟ್ಟಲು ಸಜ್ಜಾದ ಹೈಕಮಾಂಡ್!

Scroll to Top