BMTC EXCLUSIVE…ಯುವತಿ ದೂರಿಗೆ ರಾತ್ರೋರಾತ್ರಿ“ಕಾಮುಕ” ಕಳಂಕ ಹೊತ್ತುಕೊಂಡ ಕಂಡಕ್ಟರ್ ಕೆಂಪಣ್ಣ..!?
ಸಾಕ್ಷ್ಯಗಳಿಲ್ಲದೆ, ಬೆದರಿಸಿ ಬರೆಯಿಸಿಕೊಂಡ ಮುಚ್ಚಳಿಕೆ ಆಧಾರದ ಮೇಲೆ ಸಸ್ಪೆಂಡ್ ಮಾಡಿದ್ರಾ ಪ್ರಭಾಕರ ರೆಡ್ಡಿ-ರಮ್ಯ..?!:ಕೆಂಪಣ್ಣ ಪತ್ನಿಯಿಂದ ಪೊಲೀಸ್ ಸ್ಟೇಷನ್- ಸರ್ಕಾರಕ್ಕೆ ದೂರು.. ಮಾಡದ ತಪ್ಪಿಗೆ ಕಾಮುಕನಾಗಿಬಿಟ್ಟೆ ಸಾರ್.. ಸಾಕ್ಷ್ಯ ಸಿಕ್ಕರೆ ಕುತ್ತಿಗೆ ಕೊಯ್ದುಕೊಂಡು ಸತ್ತೋಗುತ್ತೇನೆ ಸಾರ್..: ಕೆಂಪಣ್ಣ ಕಣ್ಣೀರು ಬೆಂಗಳೂರು:ಅಂದುಕೊಂಡಂತೆ ನಡೆದಿದ್ದೇ ಅದಲ್ಲಿ ಮಾತ್ರ ಇದನ್ನು ನಿಜಕ್ಕೂ ಅಮಾನವೀಯ ಎನ್ನಲೇಬೇಕಾಗು ತ್ತದೆ. ದೂರು ಬಂದಾಕ್ಷಣ ಅಧಿಕಾರಿಗಳೆನಿಸಿಕೊಂಡವರು ಪರಿಶೀಲಿಸಬೇಕು..ತನಿಖೆ ನಡೆಸಬೇಕು. ತಪ್ಪನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ ಸಾಕ್ಷ್ಯಗಳನ್ನು ಕ್ರೋಢೀಕರಿಸಬೇಕು. ಒಬ್ಬನನ್ನು ತಪ್ಪಿತಸ್ಥ ಎಂದು ನಿರ್ಧರಿಸುವ ಮುನ್ನ ಹತ್ತಾರು ಬಾರಿ ಆಲೋಚಿಸಬೇಕು. ಕರ್ತವ್ಯದಾಚೆಗೂ … Read more




