BMTCಯಲ್ಲೊಬ್ಬ ಪರೋಪಕಾರಿ ಡ್ರೈವರ್‌ ವೆಂಕಟರಾಮಯ್ಯ….

ಪರೋಪಕಾರಾರ್ಥ ಇದ ಮಿತ್ತಂ ಶರೀರಂ…ಸಹಾಯ ದೊಡ್ಡ ಮಟ್ಟದಲ್ಲಿ ಮಾಡಬೇಕೆಂದೇನಿಲ್ಲ..ಅದರ ಪ್ರಯೋಜನ ತಲುಪಬೇಕಾದವರಿಗೆ ತಲುಪಬೇಕಷ್ಟೆ..ಇಂತದ್ದೊಂದು ಕೆಲಸವನ್ನು ಮಾಡುತ್ತಿರುವ ಬಿಎಂಟಿಸಿ ಡ್ರೈವರ್‌ ಎಲ್ಲರಿಗೂ ಮಾದರಿಯಾಗಿದ್ದಾರೆ.ಅವರ ಅಳಿಲು ಸೇವೆ ಬಿಎಂಟಿಸಿ ಸಿಬ್ಬಂದಿಗೆ ಸಹಕಾರವಾಗುತ್ತಿದೆ ಎನ್ನುವುದು ಸ್ವಾಗತಾರ್ಹ.ಅಂದ್ಹಾಗೆ ತಮ್ಮ ಸಂಬಳದಲ್ಲಿ ಉಳಿತಾಯ ಮಾಡಿದ ಹಣವನ್ನು ಕೂಡಿಟ್ಟು ವರ್ಷಕ್ಕೊಮ್ಮೆ ಅದನ್ನೆಲ್ಲಾ ಸೇರಿಸಿ ಡಿಪೋಗೆ ಅನುಕೂಲವಾಗುವ ವಸ್ತುವನ್ನು ಖರೀದಿಸಿ ನೀಡುವುದು ಈ ಚಾಲಕನ ಸ್ಪೆಷಾಲಿಟಿ.ಅಂದ್ಹಾಗೆ ಈ ಬಾರಿ ಅವರು ಎರಡು ದೊಡ್ಡ ಸಿಂಟೆಕ್ಸ್‌ ಗಳನ್ನು ಡಿಪೋಗೆ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಂದ್ಹಾಗೆ ಬಿಎಂಟಿಸಿಯ ಈ … Read more

ಬಿಡಿಭಾಗ ಖರೀದಿಯಲ್ಲಿ ಕೋಟ್ಯಾಂತರ ಗೋಲ್ಮಾಲ್‌,ಬಿಎಂಟಿಸಿಯ 8 ಕಳಂಕಿತ ಅಧಿಕಾರಿ-ಸಿಬ್ಬಂದಿ ಸಸ್ಪೆಂಡ್.

ಬೆಂಗಳೂರು: ಬಿಎಂಟಿಸಿಯಲ್ಲಿ ಮತ್ತೊಂದು ಬೃಹತ್‌ ಅಕ್ರಮ ಪತ್ತೆಯಾಗಿದೆ. ಬಿಡಿಭಾಗಗಳ ಖರೀದಿಯಲ್ಲಿ ಕೋಟ್ಯಾಂತರ ಅಕ್ರಮ ನಡೆದಿರುವುದು ದೃಢಪಟ್ಟಿರುವುದರಿಂದ ಉಗ್ರಾಣ ವಿಭಾಗದ 8 ಅಧಿಕಾರಿ-ಸಿಬ್ಬಂದಿ ಅಮಾನತ್ತು ಮಾಡಲಾಗಿದೆ. ಶಿಸ್ತುಪಾಲನಾಧಿಕಾರಿಯೂ ಆಗಿರುವ  ಕೆಎಸ್‌ ಆರ್‌ ಟಿಸಿ ಎಂಡಿ ಶಿವಕುಮಾರ್‌ ಆದೇಶ ಹೊರಡಿಸಿದ್ದಾರೆ. ಬಿಎಂಟಿಸಿಯಲ್ಲಿ ಕಣ್ಣಾಯಿಸಿದೆಡೆಯಲ್ಲೆಲ್ಲಾ ಅಕ್ರಮವಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವುದೇ. ಸಾಲು ಸಾಲು ಅಕ್ರಮಗಳಲ್ಲಿ ಇಲ್ಲಿನ ಅಧಿಕಾರಿ ಸಿಬ್ಬಂದಿ ಶಾಮೀಲು ಆಗಿರುತ್ತಾರೆ.ಸುಳ್ಳು ಲೆಕ್ಕ ಕೊಟ್ಟು ನಿಗಮಕ್ಕೆ ಪಂಗನಾಮ ಹಾಕುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ.ತಮ್ಮ  ವಂಚನೆಯಿಂದಲೇ ಕೋಟ್ಯಾಂತರ ಹಣ ಕಮಾಯಿಸುತ್ತಿದ್ದಾರೆ.ಇವರ ಅಕ್ರಮಗಳಿಂದ ನಷ್ಟದಲ್ಲಿರುವ ನಿಗಮಕ್ಕೆ … Read more

EXCLUSIVE:”ಸಾರಿಗೆ ನಿಗಮ”ಗಳಿಗೆ ಸರ್ಕಾರವೇ “ಸಾಲಗಾರ”.. ಉಚಿತ ಪ್ರಯಾಣ ಸೇವೆ ನೀಡಿದ 4 ಸಾರಿಗೆ ನಿಗಮಗಳಿಗೆ ನೀಡಬೇಕಿರುವ “ಬಾಕಿ”ಯೇ 5418 ಕೋಟಿ…!

ಬೆಂಗಳೂರು:ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯಿಂದ ಕೋಟ್ಯಾಂತರ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆಯೇನೋ ಆಗಿದೆ.ಆದರೆ ಆರ್ಥಿಕ ಹೊರೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.ಯೋಜನೆಗೆ ಅಗತ್ಯವಿರುವ ಅನುದಾನವನ್ನು ಕಾಲಕಾಲಕ್ಕೆ ನೀಡುವುದಾಗಿ ಹೇಳಿದ್ದ ರಾಜ್ಯ ಸರ್ಕಾರ ಮಾತು ತಪ್ಪಿದೆ ಎನ್ನುವುದು ದಾಖಲೆಗಳಿಂದಲೇ ಬಯಲಾಗಿದೆ.ರಾಜ್ಯ ಸರ್ಕಾರದ ಮಾತು ಕೇಳಿ ಸೇವೆ ಒದಗಿಸಿದ್ದ ಸಾರಿಗೆ ನಿಗಮಗಳು ತಮ್ಮ ಮೇಲೆ ಸೃಷ್ಟಿಯಾಗಿರುವ ಆರ್ಥಿಕ ಹೊರೆ ಸಹಿಸಿಕೊಳ್ಳಲಿಕ್ಕಾಗದೆ ಕುಗ್ಗಿ ಹೋಗಿದೆ.ನೀವು ನಮಗೆ ಬರಬೇಕಿರುವ ಬಾಕಿಯನ್ನು ಪಾವತಿಸದಿದ್ದರೆ ಸೇವೆ ಮುಂದುವರೆಸುವುದು ಕಷ್ಟ ಎನ್ನುವ ದಾಟಿಯಲ್ಲಿ ಅನುದಾನಕ್ಕೆ ಮೊರೆ … Read more

ದುಡುಕಿಬಿಟ್ರಾ ಸಚಿವ ಭೈರತಿ ಸುರೇಶ್..?”ಉಗುರಿ”ನಲ್ಲಿ ಹೋಗೋದಕ್ಕೆ “ಕೊಡಲಿ” ತಗೊಂಡ್ ಬಿಟ್ರಾ..?

ಸಾರಿಗೆ ಸಚಿವ ಭೈರತಿ ಸುರೇಶ್‌(TRANSPORT MINISTER BYRATHI SURESH) ಗೆ ಇದಕ್ಕಿಂತ ದೊಡ್ಡ  ಮುಖಭಂಗ ಮತ್ತೊಂದಿಲ್ವೇನೋ..? ಅವರಿಗೆ ಕೊನೆಗೂ ನಮ್ಮ ಸಾರಿಗೆ ಸಿಬ್ಬಂದಿಯ ಅಸಲಿತನ ಅರಿವಾಯ್ತಲ್ಲ..ಸಾರಿಗೆ ನಿಗಮಗಳಲ್ಲಿ ಹೀಗೊಂದು ಅಭಿಪ್ರಾಯ ವ್ಯಕ್ತವಾಗ್ತಿದೆ. ಇಡೀ ಸಾರಿಗೆ ಇಲಾಖೆ(TRANSPORT DEPARTMENT)ಯೇ ನನ್ನ ಕುಟುಂಬವಿದ್ದಂತೆ ಎಂದು ಹೇಳಿಕೊಳ್ಳುವ ಸಚಿವರಿಗೆ, ತನ್ನ  ಕುಟುಂಬದ ಸದಸ್ಯರ ಬಗ್ಗೆ ಕನಿಷ್ಟ ಕಾಳಜಿ-ಮಾನವೀಯತೆ ಖಂಡಿತಾ ಇರಬೇಕಿತ್ತು.ಇದೀಗ ಆತ ನಿರಪರಾಧಿ ಸತ್ಯ ಮನವರಿಕೆ ಆದಂತಿದೆ.ಹಾಗಾಗಿ ಆತನ ಸಸ್ಪೆಂಡ್‌ ಆದೇಶ ವಾಪಸ್‌ ಪಡೆಯುವಂತೆ ಆದೇಶಿಸಿದ್ದಾರೆನ್ನುವುದು ವರ್ತಮಾನ.ಆದರೆ  ಈಗ ಚರ್ಚೆ ಆಗುತ್ತಿರುವ … Read more

ಡಿಪೋ ಮ್ಯಾನೇಜರ್ ಕಿರುಕುಳಕ್ಕೆ ಕೆಎಸ್ ಆರ್ ಟಿಸಿ  ಡ್ರೈವರ್ ಬಲಿ..!?

ಶಿವಮೊಗ್ಗ ಜಿಲ್ಲೆ ಸಾಗರ ಡಿಪೋದ ಶ್ರೀಶೈಲ ಬಿರಾದಾರ್ ಕಿರುಕುಳಕ್ಕೆ ಡ್ರೈವರ್ ನಾಗಪ್ಪ ಬಲಿ..! ಶಿವಮೊಗ್ಗ/ಬೆಂಗಳೂರು: ಸಚಿವ ರಾಮಲಿಂಗಾರೆಡ್ಡಿ ಅವರು ಸಾರಿಗೆ ನಿಗಮಗಳಲ್ಲಿ ಏನೆಲ್ಲಾ ಬದಲಾವಣೆ ಮಾಡಿದ್ರೂ ಅದೆಲ್ಲಕ್ಕಿಂತ ಮೊದಲು ಅಮೂಲಾಗ್ರ ಬದಲಾವಣೆ ಆಗಬೇಕಿರುವುದು ಅಧಿಕಾರಿಗಳ ಆಡಳಿತ ವೈಖರಿ-ಸಿಬ್ಬಂದಿ ಜತೆಗಿನ ವ್ಯವಹಾರದಲ್ಲಿ..ಕೆಳ ಹಂತದ ಸಿಬ್ಬಂದಿಯನ್ನು ಕಾಲಕಸಕ್ಕಿಂತ ಕಡೆಯಾಗಿ ನೋಡುವ ಅಧಿಕಾರಿಗಳ ದೌರ್ಜನ್ಯ-ಆಟಾಟೋಪಕ್ಕೆ ಶಿವಮೊಗ್ಗ ವಿಭಾಗೀಯ ಕಚೇರಿಯ ಸಾಗರ ಡಿಪೋದ ಡ್ರೈವರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಆಪಾದನೆ ಕೇಳಿಬಂದಿದೆ. ಶಿವಮೊಗ್ಗ ವಿಭಾಗೀಯ ಕಚೇರಿಗೆ ಶಿವಮೊಗ್ಗ, ಸಾಗರ,ಶಿಕಾರಿಪುರ, ಭದ್ರಾವತಿ ಸೇರಿದಂತೆ ಐದು … Read more

ಬಿಎಂಟಿಸಿ ಸಿಬ್ಬಂದಿಗೆ “ಹಬ್ಬದ ರಜೆ” ಯಲ್ಲಿ ಘೋರ ಅನ್ಯಾಯ..!?

ಹಿಂದೂಗಳಿಗೆ ಮುಸ್ಲಿಂ-ಕ್ರಿಶ್ಚಿಯನ್  ಹಬ್ಬಗಳಂದು ರಜೆ….! ಮುಸ್ಲಿಂರಿಗೆ ಹಿಂದೂ-ಕ್ರಿಶ್ಚಿಯನ್‌ ಹಬ್ಬಗಳಂದು ರಜೆ….! ಇದೆಂಥಾ ವ್ಯವಸ್ಥೆ… ಇಂತದ್ದೊಂದು ವ್ಯವಸ್ಥೆ ಬಿಎಂಟಿಸಿಯಲ್ಲಿ ಇದೆ ಎಂದು ಕೇಳಿಯೇ ಮೈ ಉರಿದು ಹೋಗುತ್ತೆ..ಕಾಲ ಬದಲಾಗುತ್ತಿದ್ದರೂ ಇನ್ನೂ ಹೊಸತನಕ್ಕೆ ಇಲ್ಲಿನ ಆಡಳಿತ ತೆರೆದುಕೊಂಡಿಲ್ಲ ಎಂದ್ರೆ ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ ಎನ್ನಿಸುತ್ತೆ.ಅಂದ್ಹಾಗೆ ಈ ಕೆಟ್ಟ ವ್ಯವಸ್ಥೆಯ ಮಾಹಿತಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಇಲ್ಲ ಎಂದರೆ  ಕ್ಷಮಿಸಿ ಬಿಡಬಹುದೇನೋ..? ಆದರೆ ಒಂದ್ವೇಳೆ  ಮಾಹಿತಿ ಇದ್ದಾಗ್ಯೂ ಇದನ್ನು ರದ್ದು ಮಾಡದೆ ಇರುವುದೇ ಸತ್ಯವಾದರೆ ಅವರ ನಿಲುವು-ಧೋರಣೆಗೂ ನಮ್ಮ ವಿರೋಧವಿದೆ. … Read more

“ಆರ್ಥಿಕ ಸಂಕಷ್ಟ”ದ ನಡುವೆಯೇ bmtc ಅಧ್ಯಕ್ಷ-ಉಪಾಧ್ಯಕ್ಷರಿಗೆ “ಕಾರ್ ಕ್ರೇಜ್”!

ಬೆಂಗಳೂರು: ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಎನ್ನುವ ಗಾಧೆ ನೆನಪಿಸುತ್ತದೆ ಬಿಎಂಟಿಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹಠಮಾರಿ ಧೋರಣೆ. ಬಿಎಂಟಿಸಿ ಎನ್ನುವ ಸಂಸ್ಥೆ ಮುನ್ನಡೆಸಿಕೊಂಡು ಹೋಗಲು ಖಜಾನೆಯಲ್ಲಿ ಹಣದ ಕೊರತೆ ಬಾಧಿಸುತ್ತಿರುವಾಗಲೇ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಹೊಸ ಹಾಗೂ ದುಬಾರಿ ಕಾರಿನ ಕ್ರೇಜ್ ಶುರುವಾಗಿದೆಯಂತೆ ನೋಡಿ..ತನಗೆ ಐಷಾರಾಮಿ ಹಾಗೂ ದುಬಾರಿ ಬೆಲೆಯ ಕಾರು ಬೇಕೇ, ಬೇಕೆಂದು ಹಠ ಮಾಡಿ ಅಧ್ಯಕ್ಷ ಆರಾಧ್ಯ ಅದನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿ ದ್ದಾರಂತೆ.ಅಧ್ಯಕ್ಷರಿಗೆ ಹೊಸ ಕಾರು ಸಿಗುತ್ತಿದ್ದಂತೆ ಉಪಾಧ್ಯಕ್ಷ ನಿಕೇತ್ ಮೌರ್ಯ ಕೂಡ … Read more

ಬಿಎಂಟಿಸಿ ಸಿಬ್ಬಂದಿ ಯೂನಿಫಾರ್ಮ್ ಗೆ ಪುಡಿಗಾಸು..!

ಊಟಕ್ಕಿಲ್ಲದ ಉಪ್ಪಿನಕಾಯಿ,… ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ..ಆನೆ ಬಾಯಿಗೆ ಹಪ್ಪಳ..ಎನ್ನುವ ಗಾಧೆಗಳನ್ನು ನೆನಪಿಸುವಂತಿದೆ ಬಿಎಂಟಿಸಿ ಆಡಳಿತದ ಧೋರಣೆ.ಕಾರ್ಮಿಕ ಸಿಬ್ಬಂಧಿಯ ಕಲ್ಯಾಣಕ್ಕಾಗಿ ಜಾರಿಗೊಳಿಸುತ್ತಿರುವ ಕಾರ್ಯಕ್ರಮ ಹಾಗೂ ಯೋಜನೆಗಳು ಅವರ ಪ್ರಯೋಜನಕ್ಕೆ ಬಾರದಂತಾಗ್ತಿದೆ..ಇದಕ್ಕೆ ಸಾಕ್ಷಿಯಾಗುತ್ತಾ ಬಂದಿರುವುದು ಸಮವಸ್ತ್ರದ ಯೋಜನೆ.ದುರಂತ ಎಂದ್ರೆ ಈ ಬಾರಿಯೂ ಆ ಅಮಾನವೀಯ ಪರಂಪರೆ ಮುಂದುವರೆದಿದೆ. ಜಗತ್ತಿಗೆ ಜಗತ್ತೇ ಬದಲಾಗುತ್ತಿದೆ.ನಮ್ಮ ಜೀವನಶೈಲಿಗಳು ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ರೂಪಾಂತರಗೊಳ್ಳುತ್ತಿವೆ.ಹಾಗೆಯೇ ನಾವು ಬಳಸುತ್ತಿದ್ದ ಎಲ್ಲಾ ವಸ್ತುಗಳ ದರವೂ ದುಬಾರಿಯಾಗುತ್ತಿದೆ.ಆದರೆ ಎಲ್ಲಾ ಬದಲಾದರೂ ಬಿಎಂಟಿಸಿಯ ಆಡಳಿತದ ಮನಸ್ಥಿತಿ ಮಾತ್ರ ಬದಲಾದಂತೆ ಕಾಣುತ್ತಿಲ್ಲ … Read more

“eV ಬಸ್‌” ಡ್ರೈವರ್‌ ಗಳಿಗೆ “ಗೇಟ್‌ ಪಾಸ್”..! “ಕಿಲ್ಲರ್‌” ಕಳಂಕ ತೊಡೆದುಕೊಳ್ಳಲು “ಪ್ಲ್ಯಾನ್‌”.!

ಸಚಿವ್ರೇ..!ನಿಮ್ಮೆ ಕಾಳಜಿ ಇದ್ರೆ ಮೊದಲು ಹಾಗೆ ಮಾಡಿ… ಬೆಂಗಳೂರು: ಅಪಘಾತಗಳ ಕಾರಣಕ್ಕೆ BMTC (bengaluru metopolitan transport corporatio)ಗೆ ಮೊದಲೆಲ್ಲಾ “ಕಿಲ್ಲರ್‌” ಎನ್ನುವ ಕಳಂಕ ಮೆಟ್ಟಿಕೊಳ್ತಿತ್ತು..ಅದನ್ನು ಸರಿಪಡಿಸುವ ಸಾಕಷ್ಟು ಕೆಲಸಗಳನ್ನು ನಿಗಮದ ಮಾಡಿದ ಕಾರಣಕ್ಕೇನೋ ಗೊತ್ತಿಲ್ಲ, ಅಪಘಾತಗಳ ಸಂಖ್ಯೆ ಕಡ್ಮೆಯಾಯ್ತು..ಸಾಯೋರ ಪ್ರಮಾಣ ವೂ ಕ್ಷೀಣಿಸ್ತು.ಆದರೆ ಕೆಲ ವರ್ಷಗಳ ಈಚೆಗೆ ನಡೀತಿರೋ ಅಪಘಾತಗಳು-ಅದಕ್ಕೆ ಕಾರಣವಾಗ್ತಿರುವ ಸಂಗತಿಗಳನ್ನು ಗಮನಿಸಿದ್ರೆ ಆತಂಕವಾಗುತ್ತೆ..ಕಿಲ್ಲರ್‌ ಎನ್ನುವ ಹಣೆಪಟ್ಟಿ ಮತ್ತೆ ಅಂಟಿಸಿಕೊಳ್ಳೊಕ್ಕೆ ನಿಗಮನೇ ಪ್ರಯತ್ನಿಸ್ತಿದೆಯಾ ಎನ್ನುವ ಶಂಕೆ ಕಾಡ್ತಿದೆ.ಇದಕ್ಕೆ ಕಾರಣ ಇವಿ ಬಸ್‌ ಗಳಿಂದಾಗುತ್ತಿರುವ ಅಪಘಾತ … Read more

80 ಸಾವುಗಳಿಗೆ ಕಾರಣವೇ bMTC ಎಂಡಿ…!ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಖ್ಯಮಂತ್ರಿಗೆ ದೂರು..

ಬೆಂಗಳೂರು: ಬಹುಷಃ ಬೆಂಗಳೂರು ಮಹಾನಗರ ಸಾರಿಗೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಂತದ್ದೊಂದು ಘಟನೆ ನಡೆದಿದೆ ಎನ್ನಿಸುತ್ತದೆ.ಏಕೆಂದರೆ ನಿಗಮದ ವ್ಯಾಪ್ತಿಯಲ್ಲಿನ ಬೆಳವಣಿಗೆಗಳ ಇತಿಹಾಸದ ಬಗ್ಗೆ ನಮಗಿರುವ ಮಾಹಿತಿ ಪ್ರಕಾರ ಈವರೆಗೂ ನಿಗಮದ ವ್ಯವಸ್ಥಾಪಕ ನಿರ್ದೇಶಕರೆನಿಸಿಕೊಂಡ ಯಾರ ಬಗ್ಗೆಯೂ ಮುಖ್ಯಮಂತ್ರಿಗಳ ಮಟ್ಟದಲ್ಲಿ ದೂರು ನೀಡಿದ್ದ ನಿದರ್ಶನಗಳೇ ಇಲ್ಲ.ಆದರೆ ಇದೇ ಮೊದಲ ಬಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ವಿರುದ್ಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ ದೂರನ್ನು ಕೊಟ್ಟಿದೆ.ಅಷ್ಟೇ ಅಲ್ಲ. ಬಿಎಂಟಿಸಿ ಎಂಡಿ ವಿರುದ್ಧ ಕ್ರಮ … Read more