advertise here

“ಪ್ರಯಾಣಿಕ”ನ ಸಾವಿಗೆ ಆ ಇಬ್ರು “ಡ್ರೈವರ್ಸ್” ಗಳು ಮಾತ್ರ “ಕಾರಣ”ನಾ.?! ಇದ್ರಲ್ಲಿ “ಅಧಿಕಾರಿ”ಗಳ “ಹೊಣೆ”ನೇ ಇಲ್ವಾ..!?


ಅಪಘಾತದಲ್ಲಿ ಕೈ ಕಳೆದುಕೊಂಡು, ತೀವ್ರರಕ್ತಸ್ರಾವದಿಂದ ಮೃತಪಟ್ಟವನ ಸಾವಿಗೆ, ಶಿವಮೊಗ್ಗ ವಿಭಾಗದ ವಿಜಯ್ ಕುಮಾರ್ , ದಿನೇಶ್ ಕುಮಾರ್  “ನಿರ್ಲಕ್ಷ್ಯ”ವೂ ಕಾರಣವಲ್ವೇ..?!

ಬೆಂಗಳೂರು/ಶಿವಮೊಗ್ಗ:ಇದಕ್ಕಿಂತ ದೊಡ್ಡ ದುರಂತ ಹಾಗೂ ವಿಪರ್ಯಾಸ ಇನ್ನೊಂದಿರಲಾರದೇನೋ..? ಅಪಘಾತದಲ್ಲಿ ಪ್ರಯಾಣಿಕನೊಬ್ಬ ಕೈ ಕಳೆದುಕೊಂಡು ಚಿಕಿತ್ಸೆ ಕೊರತೆಯಿಂದ ಪ್ರಾಣಬಿಟ್ಟ ಕಾರಣಕ್ಕೆ ಚಾಲಕರಿಬ್ಬರು ಅಮಾನತ್ತಾಗಿದ್ದಾರೆ.ಆದರೆ ಪ್ರಯಾಣಿಕನ ಜೀವ ಹೋಗ್ಲಿಕ್ಕೆ ನೈತಿಕವಾಗಿ ಕಾರಣಕರ್ತರಾದ ಅಧಿಕಾರಿಗಳು ಮಾತ್ರ ಆರಾಮಾಗಿ ಅಡ್ಡಾಡಿಕೊಂಡಿದ್ದಾರೆ.ದುರಂತ ಸಂಭವಿಸಿದಾಗ ಸಂತ್ರಸ್ಥರ ಕ್ಷೇಮ-ಕಲ್ಯಾಣಗಳೆರೆ ಡೂ ಅಧಿಕಾರಿಗಳ ಹೊಣೆಯಾಗಿರುತ್ತೆಂದು ಗೊತ್ತಿದ್ರೂ ಸಾರಿಗೆ ಆಡಳಿತ ಮಾತ್ರ, ಅಧಿಕಾರಿಗಳು ಮಾಡಿದ್ದೇ ಸರಿ ಎನ್ನುವಂತೆ ಸುಮ್ಮನಿರುವುದು ಯಾವ ಸೀಮೆಯ ನ್ಯಾಯ ಎಂದು ಮಾತನಾಡಿಕೊಳ್ಳುವಂತಾಗಿದೆ.

ಶಿವಮೊಗ್ಗ ವಿಭಾಗಕ್ಕೆ ಸೇರಿದ ಬಸ್ ಗಳೆರೆಡು ಮುಖಾಮುಖಿಯಾಗಿ ಸಂಭವಿಸಿದ ಅಪಘಾತದ ವಿಚಾರದಲ್ಲಿ ಸಂವೇದನಾಹಿರತವಾಗಿ ನಡೆದುಕೊಂಡಿರುವ ಶಿವಮೊಗ್ಗ ವಿಭಾಗದ ಅಧಿಕಾರಿಗಳ ವರ್ತನೆ ತೀವ್ರ ಖಂಡನೆಗೆ ಗುರಿಯಾಗಿದೆ.ಚಾಲಕರಿಬ್ಬರನ್ನು ಅಮಾನತುಗೊಳಿಸುವ ವಿಚಾರದಲ್ಲಿ ತೋರಿದ ಅವಸರವನ್ನು ಆಡಳಿತ ಘಟನೆಗೆ ಹೆಚ್ಚು ಹೊಣೆಗಾರರಬೇಕಿರುವ ಅಧಿಕಾರಿಗಳ ವಿಚಾರದಲ್ಲಿ ತೋರದಿರುವುದು ಸಾರಿಗೆ ಆಡಳಿತದ ಬಗ್ಗೆ ಇಡೀ ಸಾರಿಗೆ ಸಮೂಹ ಕೆಂಡಾಮಂಡಲವಾಗುವಂತೆ ಮಾಡಿದೆ.ಅಧಿಕಾರಿಗಳಿಗೊಂದು ನ್ಯಾಯ…ಡ್ರೈವರ್ಸ್-ಕಂಡಕ್ಟರ್ಸ್ ಗೊಂದು ಕಾನೂನಾ ಎಂದು ಸಿಬ್ಬಂದಿ ಮಾತನಾಡಿಕೊಳ್ಳುವಂತೆ ಮಾಡಿದೆ.ಸಾರಿಗೆ ನಿಗಮಗಳಲ್ಲಿ ಯಾವತ್ತಿದ್ರೂ ಅಡಳಿತ ವ್ಯವಸ್ಥೆ, ಅಧಿಕಾರಿಗಳ ಪರವಾಗೇ ಇರುತ್ತೆ ಎಂಬ ಅಪವಾದಕ್ಕೆ ಮತ್ತಷ್ಟು  ಪುಷ್ಟಿ ದೊರೆಯುವಂತೆ ಮಾಡಿದೆ.

ವಿಭಾಗೀಯ ಸಂಚನಲನಾಧಿಕಾರಿ ದಿನೇಶ್ ಕುಮಾರ್ ಚನ್ನಗಿರಿ
ವಿಭಾಗೀಯ ಸಂಚನಲನಾಧಿಕಾರಿ ದಿನೇಶ್ ಕುಮಾರ್ ಚನ್ನಗಿರಿ

ಹೌದು…ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಕರಡಿ ಎಂಬ ಗ್ರಾಮದ ಬಳಿ  ಕೆಎಸ್ ಆರ್ ಟಿಸಿ ಶಿವಮೊಗ್ಗ  ವಿಭಾಗಕ್ಕೆ ಸೇರಿದ ಬಸ್ ಗಳೆರೆಡು ಮುಖಾಮುಖಿಯಾಗಿ ಅದರಲ್ಲಿ ಕೈ ಕಳೆದುಕೊಂಡ ಪ್ರಯಾಣಿಕನ ವಿಚಾರದಲ್ಲಿ ಅಧಿಕಾರಿಗಳು ವಿವೇಚನೆ ಹಾಗೂ ಮಾನವೀಯವಾಗಿ ವರ್ತಿಸಿದ್ದೇ ಆಗಿದ್ರೆ ಆ ಅಮಾಯಕನ ಪ್ರಾಣ ಉಳಿಯತ್ತಿತ್ತೇನೋ..?ಆದ್ರೆ ಅನಗತ್ಯ ಕಾಲಹರಣದಿಂದಾಗಿ ನರಳಿ ನರಳಿ ಸತ್ತಿದ್ದಾನೆ.ಅಪಘಾತಕ್ಕೊಳಗಾದ ಪ್ರಯಾಣಿಕರಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕೆನ್ನುವುದು ನಿಗಮದ ಸುತ್ತೋಲೆಯಲ್ಲಿ ಸ್ಪಷ್ಟವಾಗಿದ್ರೂ ಇಲ್ಲಿನ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ.ಆದ್ರೆ ತಮ್ಮ ತಪ್ಪು ಮುಚ್ಚಿ ಹಾಕೊಕ್ಕೆ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ.ನಿಯಮದ ಪ್ರಕಾರ ಶಿಕ್ಷೆಗೊಳಗಾಗ ಬೇಕಿರುವ ಅಧಿಕಾರಿಗಳು ಆರಾಮಾಗಿ ಅಡ್ಡಾಡಿಕೊಂಡಿದ್ದಾರೆನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತೆ.

ಆಗಿದ್ದೇನು…?ಘಟನೆಗೆ ಸಂಬಂಧಿಸಿದಂತೆ ಕೆಲವು ಮೂಲಗಳು ನೀಡಿದ ಮಾಹಿತಿಯಂತೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಶಿವಮೊಗ್ಗ ವಿಭಾಗದ ಬಸ್ ಗಳು 19/02/2024 ರಂದು ತಿಪಟೂರು ತಾಲ್ಲೂಕಿನ ಕರಡಿ ಎಂಬ ಗ್ರಾಮದಲ್ಲಿ ಪರಸ್ಪರ ಮುಖಾಮುಖಿಗೊಂಡು ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ  ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ಓರ್ವ ಪ್ರಯಾಣಿಕನ ಕೈ ತುಂಡಾಗಿದೆ.ಅತೀವ ರಕ್ತಸ್ರಾವದಿಂದ ಬಳಲುತ್ತಿದ್ದ ಆತ ಚಿಕಿತ್ಸೆಗಾಗಿ ಪರದಾಡುತ್ತಿದ್ದರೆ, ಡ್ರೈವರ್ಸ್-ಕಂಡಕ್ಟರ್ಸ್ ಗಳು ಪರಸ್ಪರ ಗಲಾಟೆ ಮಾಡಿಕೊಳ್ಳುತ್ತಿದ್ದರಂತೆ.ಪ್ರಯಾಣಿಕರು ಬೈಯ್ದ ಮೇಲೆ ಆತನನ್ನು ತಿಪಟೂರು ಆಸ್ಪತ್ರೆಗೆ ದಾಖಲಿಸಲಾಯಿತಂತೆ.

ಶಿವಮೊಗ್ಗ   ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯ್ ಕುಮಾರ್ .ಜಿ
ಶಿವಮೊಗ್ಗ   ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯ್ ಕುಮಾರ್ .ಜಿ

ಈ ವಿಷಯವನ್ನು ಸಿಬ್ಬಂದಿ ಶಿವಮೊಗ್ಗ   ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯ್ ಕುಮಾರ್ .ಜಿ-  ಹಾಗೂ ವಿಭಾಗೀಯ ಸಂಚನಲನಾಧಿಕಾರಿ ದಿನೇಶ್ ಕುಮಾರ್ ಚನ್ನಗಿರಿ ಅವರ ಗಮನಕ್ಕೆ ತರಲಾಗಿದೆ.ತಕ್ಷಣಕ್ಕೆ ಕಾರ್ಮಿಕ ಕಲ್ಯಾಣಾಧಿಕಾರಿಗಳನ್ನು ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಿಸಲಾಗಿದೆ.ಆದರೆ ಅಪಘಾತದ ತೀವ್ರತೆಯಿಂದಾಗಿ ರಕ್ತಸ್ರಾವ ನಿಲ್ಲಲೇ ಇಲ್ಲವಂತೆ.ಆ ವೇಳೆ ಇಬ್ಬರು ಅಧಿಕಾರಿಗಳು ಸಮಯಪ್ರಜ್ನೆ ಮೆರೆದು  ವಿವೇಚನೆಯಿಂದ ವರ್ತಿಸಿದ್ದರೆ ಗಾಯಾಳುವಿಗೆ ತುಮಕೂರು ಅಥವಾ ಹತ್ತಿರದ ಬೆಂಗಳೂರಿನಲ್ಲಿರುವ ಉತ್ತಮ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಕೊಡಿಸಲು ಸಾಧ್ಯವಿತ್ತು.( ಅಪಘಾತದಲ್ಲಿ ಗಾಯಾಳುವಾದ ಸಾರ್ವಜನಿಕರು ಹಾಗೂ ಪ್ರಯಾಣಿಕರಿಗೆ ರಾಜ್ಯದ ಯಾವುದೇ ಆಸ್ಪತ್ರಗಳಲ್ಲಿ ಬೇಕಾದರೂ ಚಿಕಿತ್ಸೆ ಕೊಡಿಸಲು ಅವಕಾಶವಿದೆ.ಅಧಿಕಾರಿಗಳು ಈ ವಿಷಯದಲ್ಲಿ ನಿರ್ದಾರ ಕೈಗೊಳ್ಳಲು ಸ್ವತಂತ್ರರಾಗಿರುತ್ತಾರೆ ಎಂದು ಸರ್ಕ್ಯೂಲರ್ ಹೇಳುತ್ತದಂತೆ)

ಇದು ವಿಜಯ್ ಕುಮಾರ್ .ಜಿ , ದಿನೇಶ್ ಕುಮಾರ್ ಚನ್ನಗಿರಿ ಅವರಿಗೂ ಗೊತ್ತಿರದ ವಿಚಾರವೇನೂ ಅಲ್ಲ.ಅವರು ಕೂಡ ಈ ನಿಟ್ಟಿನಲ್ಲಿ ವಿವೇಚನೆಯಿಂದ ಇಟ್ಟುಕೊಂಡು ಕೆಲಸ ಮಾಡಬಹುದಿತ್ತು.ಆದರೆ ಅತಿಯಾದ ಆತ್ಮವಿಶ್ವಾಸಕ್ಕೆ ಒಳಗಾಗಿ ಗಾಯಾಳು ಹೇಳಿದಂತೆ ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರಂತೆ.ಇದಕ್ಕೆ ಕಾರಣ ಗಾಯಾಳು ಮನೆ ತರಿಕೆರೆ ತಾಲೂಕಿನ   ಎಂ.ಸಿ. ಹಳ್ಳಿಯಲ್ಲಿದ್ದು ತನ್ನನ್ನು ಉಪಚರಿಸೊಕ್ಕೆ ಅನುಕೂಲವಾಗುತ್ತೆ ಎಂದು ಆತ ಕೊಟ್ಟ ಸಲಹೆಯಂತೆ.ಆದ್ರೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತರಲು ಕನಿಷ್ಟ 5-6 ಗಂಟೆ ಬೇಕಾಗುತ್ತೆ.ಈ ವೇಳೆ ಅಪಾರ ಪ್ರಮಾಣದ ರಕ್ತಸ್ರಾವವಾಗುತ್ತದೆ.ಇದು ಆತನ ಜೀವಕ್ಕೇ ಮಾರಕವಾಗಬಹುದೆನ್ನುವ ಸಣ್ಣ ಆಲೋಚನೆನೂ ಆ ಅಧಿಕಾರಿಗಳಿಬ್ಬರಿಗೆ ಬರಲಿಲ್ವಾ ಎನ್ನುವುದೇ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ.

ಸಾರಿಗೆ ನಿಗಮದ ಅಧಿಕಾರಿಗಳು ಎಡವಿದ್ದು ಎಲ್ಲಿ…ಏನ್ ಮಾಡಬಹುದಿತ್ತು..?ಏಕೆ ಮಾಡಲಿಲ್ಲ..?

-ಗಾಯಾಳುವಿಗೆ ಅಪಘಾತ ಸಂಭವಿಸಿದ ವ್ಯಾಪ್ತಿಯಲ್ಲಿರುವ ತಿಪಟೂರಿನಲ್ಲಿಯೇ ಸಂಪೂರ್ಣ ಚಿಕಿತ್ಸೆ ನೀಡಬಹುದಿತ್ತು.

-ತಿಪಟೂರಿನಲ್ಲಿ ಆಗದಿದ್ದರೆ ಪಕ್ಕದ ತುಮಕೂರು ಅಥವಾ ಬೆಂಗಳೂರಿನಲ್ಲಿರುವ ಆಸ್ಪತ್ರೆಗಳಿಗೆ ದಾಖಲಿಸಬಹುದಿತ್ತು.

-ಗಾಯಾಳು ಮಾತಿಗೆ ಕಟ್ಟುಬಿದ್ದು ತಿಪಟೂರಿನಿಂದ ಶಿವಮೊಗ್ಗಕ್ಕೆ ಕರೆತಂದಿದ್ದು ಎಷ್ಟು ಸರಿ,,?

-ಮೆಗ್ಗಾನ್ ಆಸ್ಪತ್ರೆಯಲ್ಲೆ ಮೂರ್ನಾಲ್ಕು ದಿನ ಚಿಕಿತ್ಸೆಗಿಟ್ಟುಕೊಂಡಿದ್ದು ಎಷ್ಟು ಸರಿ..?

-ಗಾಯಾಳುವಿನ ಆರೋಗ್ಯಸ್ಥಿತಿಯ ಸಂಪೂರ್ಣ ಮಾಹಿತಿ ಪಡೆಯದೇ ಅಲ್ಲೇ ಬೀಡುಬಿಟ್ಟಿದ್ದು ಎಷ್ಟು ಸರಿ..?

-ವೈದ್ಯರು ಕೈ ಚೆಲ್ಲಿದ ಮೇಲೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸೇರಿಸಲು ಕೊಂಡೊಯ್ದಿದ್ದು ಎಷ್ಟು ಸರಿ..?

-ಗಾಯಾಳು ಜೀವನ್ಮರಣಗಳ ನಡುವ ಹೋರಾಡುವಾಗ ಜೀವ ಉಳಿಸಲು  ನಿರ್ದಾರ ಕೈಗೊಳ್ಳದೆ ಹೋಗಿದ್ದು ಎಷ್ಟು ಸರಿ..?

ಗಾಯಾಳುವಿನ ಮನವಿಯಂತೆ ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.ಕೆಲವು ಮೂಲಗಳ ಪ್ರಕಾರ ಅಲ್ಲೇ ಒಂದೆರೆಡು ದಿನಗಳಿದ್ದನೆನ್ನುವ ಮಾತಿದೆ.ಆದ್ರೆ ದೇಹದಲ್ಲಿನ ರಕ್ತ ತೀವ್ರ ಪ್ರಮಾಣದಲ್ಲಿ ಸೋರಿಕೆಯಾಗಿದ್ದರಿಂದ ವೈದ್ಯರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ರೆಫರ್ ಮಾಡಿದ್ದಾರೆ.ವೆನ್ಲಾಕ್ ಆಸ್ಪತ್ರೆಗೆ ಸೇರಿಸಲು ತೆರಳುವಾಗ ಮಾರ್ಗಮದ್ಯೆ ಅತ ಸಾವನ್ನಪ್ಪಿದ್ದಾನೆ.

ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರು ಅನ್ಬುಕುಮಾರ್
ಅನ್ಬುಕುಮಾರ್, KSRTC ವ್ಯವಸ್ಥಾಪಕ ನಿರ್ದೇಶಕ 
ಶ್ರೀಮತಿ ಅಂಬಿಕಾ, ಶಿವಮೊಗ್ಗ ವಿಭಾಗದ ಕಾರ್ಮಿಕ ಕಲ್ಯಾಣ ಅಧಿಕಾರಿ
ಶ್ರೀಮತಿ ಅಂಬಿಕಾ, ಶಿವಮೊಗ್ಗ ವಿಭಾಗದ ಕಾರ್ಮಿಕ ಕಲ್ಯಾಣ ಅಧಿಕಾರಿ

ಗಾಯಾಳು ಜೀವನ್ಮರಣಗಳ ನಡುವೆ ಹೋರಾಡುವಾಗ ಆತನ ಪ್ರಾಣ ಉಳಿಸೊಕ್ಕೆ ಏನ್ ಮಾಡಬೇಕೆನ್ನುವ ಸ್ಷಷ್ಟ ಪರಿಕಲ್ಪನೆ ಅವರಿಗಿದ್ದರೂ ಗಾಯಾಳು ಮನವಿ ಮಾಡಿಕೊಂಡ ಎಂಬ ಕಾರಣಕ್ಕೆ ದೂರದ ತಿಪಟೂರಿನಿಂದ ಶಿವಮೊಗ್ಗಕ್ಕೆ ಕರೆತಂದಿದ್ದೇ  ಅಧಿಕಾರಿಗಳು ಮಾಡಿದ ಮೊದಲ ತಪ್ಪು.! ಮೆಗ್ಗಾನ್ ನಲ್ಲಿ ಎರಡ್ಮೂರು ದಿನ ಇಟ್ಟುಕೊಳ್ಳೋದಕ್ಕಿಂತ ಸೇಫಾದ ಇನ್ನೊಂದು ಅವಕಾಶದ ಬಗ್ಗೆ ಅಧಿಕಾರಿಗಳು ಎಲ್ಲೂ ಆಲೊಚನೆ ಮಾಡಲೇ ಇಲ್ಲ. ಬದುಕೋದು ಡೌಟ್ ಎನಿಸಿದ ಮೇಲೆ ಕೊನೇ ಪ್ರಯತ್ನ ಎನ್ನುವಂತೆ ಮಂಗಳೂರಿಗೆ ಕೊಂಡೊಯ್ಯುವ ನಿರ್ದಾರ ಮಾಡಿದ್ದು ಎಷ್ಟು ಸರಿ ಎನ್ನುವುದು ಘಟನೆಯನ್ನು ಗಮನಿಸುವ ಎಂಥವರನ್ನೂ ಕಾಡುವ ಪ್ರಶ್ನೆ.

ಡ್ರೈವರ್ಸ್ ಮಾತ್ರ ಸಸ್ಪೆಂಡಾ..-ಅಧಿಕಾರಿಗಳೇಕೆ ಇಲ್ಲ: ಕೆಎಸ್ ಆರ್ ಟಿಸಿ ಒಂದೇ ಅಲ್ಲಾ ಎಲ್ಲಾ ನಾಲ್ಕೂ ನಿಗಮಗಳಲ್ಲಿ ಸಹಜವಾಗಿ ಆಗೋದೇ ಹೀಗೆ..! ಈ ಪ್ರಕರಣದಲ್ಲೂ ಇದೇ ರಿಪೀಟ್ ಆಗಿದೆ.ಘಟನೆಗೆ ಇಬ್ಬರು ಡ್ರೈವರ್ಸ್ ಕಾರಣರಾದರೆನ್ನುವ  ಕಾರಣಕ್ಕೆ ಇಬ್ಬರನ್ನು ಸಸ್ಪೆಂಡ್ ಮಾಡಲಾಯಿತು.ಹಾಗೆಂದು ಗಾಯಾಳುವಿನ ಸಾವಿಗೆ ಅವರಿಬ್ಬರೇ ಕಾರಣನಾ..? ಸೂಕ್ತ ಚಿಕಿತ್ಸೆ ಕೊಡಿಸುವ ವಿಚಾರದಲ್ಲಿ ಸರಿಯಾದ ನಿರ್ದಾರ ಕೈಗೊಳ್ಳದೆ ನಿರ್ಲಕ್ಷ್ಯ ಮಾಡಿದ ಅಧಿಕಾರಿಗಳೂ ತಪ್ಪಿತಸ್ಥರಲ್ಲವೇ..? ಬಹುಷಃ ಅವರು ಸಮಯಪ್ರಜ್ನೆಯಿಂದ ತಮ್ಮ ವಿವೇಚನೆಯಲ್ಲಿ ನಿರ್ದಾರ ಕೈಗೊಂಡಿದ್ದೇ ಆದಲ್ಲಿ ಆತ ಬದುಕುಳಿಯಬಹುದಿತ್ತಲ್ಲವೇ..? ಮೂರ್ನಾಲ್ಕು ದಿನಗಳವರೆಗೂ ಕಾಲಹರಣ ಮಾಡಿದ್ದರಿಂದಲೇ ತೀವ್ರರಕ್ತಸ್ರಾವದಿಂದ ಆತ ಸಾವನ್ನಪ್ಪಿರುವ ಸಾಧ್ಯತೆಗಳಿರಬಹುದಲ್ಲವೇ..? ಈ ಘಟನೆಯಲ್ಲಿ ಇಬ್ಬರು ಡ್ರೈವರ್ ಗಳಿಗಿಂತ ಹೆಚ್ಚಿನ ತಪ್ಪು-ಪ್ರಮಾದ  ವಿಜಯ್ ಕುಮಾರ್ .ಜಿ , ದಿನೇಶ್ ಕುಮಾರ್ ಚನ್ನಗಿರಿ ಅವರಿಂದಲೂ ನಡೆದಿದೆ ಎನ್ನುವುದು ಮೇಲ್ನೋಟಕ್ಕೆ ತಿಳಿದುಬರುವ ವಿಚಾರ.

ಆದರೆ ಅಧಿಕಾರಿಗಳನ್ನು ಬಚಾವು ಮಾಡುವ ಏಕೈಕ ಕಾರಣದಿಂದ ಡ್ರೈವರ್ಸಗಳನ್ನಷ್ಟೇ ಶಿಕ್ಷಿಸಿ ಪ್ರಕರಣ ಮುಚ್ಚಾಕುವ ಯತ್ನ ನಡೆಸಿದ್ದಾರೆನ್ನುವ ಆಪಾದನೆ ಆಡಳಿತ ವ್ಯವಸ್ಥೆ ವಿರುದ್ದ ಕೇಳಿಬಂದಿದೆ. ಎಂಡಿ ಅನ್ಬುಕುಮಾರ್ ಅವರಿಗೆ ತಪ್ಪಿತಸ್ಥರು ಯಾರೆನ್ನುವುದು ಸ್ಪಷ್ಟವಾಗಿ ಗೊತ್ತಿದ್ದರೂ ಅಧಿಕಾರಿಗಳನ್ನು ಬಚಾವು ಮಾಡಿರುವುದು ಎಷ್ಟು ಸರಿ.? ಡ್ರೈವರ್ಸ್ ಗಳನ್ನು ಸಸ್ಪೆಂಡ್ ಮಾಡಿದ ನೀವು ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕಿತ್ತು.ಅದನ್ನು ಬಿಟ್ಟು ಅಧಿಕಾರಿಗಳು ತಪ್ಪೇ ಮಾಡಿಲ್ಲ ಎಂದು ಪ್ರೂವ್ ಮಾಡೊಕ್ಕೆ ಡ್ರೈವರ್ಸ್ ಗಳನ್ನು ಶಿಕ್ಷಿಸುವುದು ಯಾವ ನ್ಯಾಯ ಎಂದು ಸಾರಿಗೆ ಸಮೂಹ ಪ್ರಶ್ನಿಸ್ತಿದೆ.ಇದಕ್ಕೆ ಅನ್ಬುಕುಮಾರ್ ಅವರೇ ಸ್ಪಷ್ಟನೆ ಕೊಡಬೇಕಷ್ಟೆ…


Political News

EDUCATION EXCLUSIVE….PU ಶಿಕ್ಷಣ ಇಲಾಖೆಯಲ್ಲಿ, ನಿರ್ದೇಶಕರನ್ನೇ “ದಾರಿ” ತಪ್ಪಿಸುವ, ತಪ್ಪೆಸಗುವಂತೆ ಪ್ರಚೋದಿಸುವ “ಹಿತಾಸಕ್ತಿ”ಗಳಿವೆಯಾ..?!

BTV MAKEUP MAN CHETHAN NOMORE..”ಬಣ್ಣ”ಗಳಲ್ಲಿ ಲೀನವಾದ BTV ಮೇಕಪ್ ಮ್ಯಾನ್ ಚೇತನ್..

EXCLUSIVE….INDISCIPLINE IN PU BOARD..?! ಅಕ್ರಮ-ಅವ್ಯವಸ್ಥೆಯ ಗೂಡಾಯ್ತಾ ಪಿಯು ಇಲಾಖೆ..?! ಏನ್ ಮಾಡುತ್ತಿದ್ದಿರಾ ಶಿಕ್ಷಣ ಸಚಿವರೇ..?!

BMTC STAFF THEMSELVES CLEANS THE BUSES..!?…ಬಿಎಂಟಿಸಿ ಸಿಬ್ಬಂದಿಯಿಂದಲೇ ಬಸ್ ಕ್ಲೀನಿಂಗ್..ಸ್ವಚ್ಚತೆಗೆಂದೇ ಕೊಟ್ಟ ಟೆಂಡರ್ ಹಣ ಎಲ್ಲೋಯ್ತು..?

SAHYADRI SCIENCE COLLEGE ALUMNI MEET: ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳ “ಮಹಾಸಮಾಗಮ”ಕ್ಕೆ ಮುಹೂರ್ತ ಫಿಕ್ಸ್

PUNEETH RAJKUMAR AWARD FOR KANNADA NEWS CHANNEL CAMERAMANS… ನ್ಯೂಸ್ ಚಾನೆಲ್ ಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಕ್ಯಾಮೆರಾಮನ್ ಮಿತ್ರರಿಗೆ “ಪುನೀತ್ ರಾಜ್ ಕುಮಾರ್” ಪ್ರಶಸ್ತಿ.

DEEPAWALI BUMPER TO KSRTC: ದೀಪಾವಳಿ ಬಂಪರ್- KSRTC ಗೆ 18.62 ಕೋಟಿ ಗಳಿಕೆ-ಒಂದೇ ದಿನ ಸಾರ್ವಕಾಲಿಕ ದಾಖಲೆಯ 85,462 ಟಿಕೆಟ್ ಬುಕ್ಕಿಂಗ್

EVEN DEEPAVALI CRACKERS MENACE POLLUTION DECREASE…! ಬೆಂಗಳೂರಿಗೆ ಬೆಂಗಳೂರೇ ಪಟಾಕಿ ಹೊಗೆಯಲ್ಲಿ ಕಳೆದೋದರೂ ಕಳೆದ ವರ್ಷದಷ್ಟು ವಾಯುಮಾಲಿನ್ಯ ವಾಗಿಲ್ವಂತೆ..?!

Scroll to Top