ಚುನಾವಣೆ ದಿನ ಮತ ಚಲಾಯಿಸಲು ಕೇವಲ ಮತದಾನದ ಗುರುತಿನ ಚೀಟಿ ಇದ್ದರೆ ಸಾಕಾ..? ಅದಿಲ್ಲದಿದ್ದರೆ ಮತದಾನಕ್ಕೆ ಅವಕಾಶ ನೀಡೊಲ್ವೆ..? ಹಾಗಾದ್ರೆ ನನ್ನ ಹಕ್ಕು ಚಲಾವಣೆಯ ಅವಕಾಶ ತಪ್ಪಿ ಹೋಗುತ್ತಾ.,,? ಹೀಗೆಲ್ಲಾ ಅನುಮಾನ-ಆತಂಕ ಪಡುವವರಿಗೆ ಅನುಕೂಲವಾಗಲೆಂದು ಚುನಾವಣಾ ಆಯೋಗ ಪರ್ಯಾಯ ಕೆಲವು ವ್ಯವಸ್ಥೆ ಮಾಡಿದೆ.ಈ ದಾಖಲೆ ತೋರಿಸಿ ಮತ ಚಲಾಯಿಸಬಹುದೆಂದು ತಿಳಿಸಿದೆ.

ಅಂದ್ಹಾಗೆ ಯಾವೆಲ್ಲಾ ದಾಖಲೆಗಳು ಮತ ಚಲಾವಣಗೆ ಅವಕಾಶ ಕಲ್ಪಿಸುತ್ತವೆ ಎನ್ನುವುದನ್ನು ನೋಡುವುದಾದರೆ

ಆಧಾರ್‌ ಕಾರ್ಡ್‌

ಎಂಎನ್‌ ಇಆರ್‌ ಜಿ ಕಾರ್ಡ್‌

ಬ್ಯಾಂಕ್/‌ ಪೋಸ್ಟ್‌ ಆಫೀಸ್‌ ನೀಡಿದ ಭಾವಚಿತ್ರ ಇರುವ  ಪಾಸ್‌ ಬುಕ್‌ ಗಳು

ಕಾರ್ಮಿಕ ಸಚಿವಾಲಯದ ಯೋಜನೆಯ  ಅಡಿಯಲ್ಲಿ ನೀಡಲಾದ ಆರೋಗ್ಯ ವಿಮಾ ಸ್ಮಾರ್ಟ್‌ ಕಾರ್ಡ್‌

 ಚಾಲನಾ ಪರವಾನಗಿ

 ಪ್ಯಾನ್‌ ಕಾರ್ಡ್‌

 ಎನ್‌ ಪಿಆರ್‌ ಅಡಿಯಲ್ಲಿ ಆರ್‌ ಜಿಐ ನೀಡಿದ ಸ್ಮಾರ್ಟ್‌ ಕಾರ್ಡ್‌

 ಭಾರತೀಯ ಪಾಸ್‌ ಪೋರ್ಟ್‌

 ಭಾವಚಿತ್ರ ಹೊಂದಿರುವ ಪಿಂಚಣಿ ದಾಖಲೆ

 ಕೇಂದ್ರ/ರಾಜ್ಯ/ ಪಿಎಸ್‌ ಯು/ಪಬ್ಲಿಕ್‌  ಲಿಮಿಟೆಡ್‌ ಕಂಪೆನಿಗಳು ಉದ್ಯೋಗಿಗಳಿಗೆ ನೀಡಿರುವ  ಭಾವಚಿತ್ರ ಸಹಿತದ ಸೇವಾ ಗುರುತಿನ ಚೀಟಿ

 ಸಾಮಾಜಿಕ,ನ್ಯಾಯ ಮತ್ತು ಸಬಲೀಕರಣ ಭಾರರ ಸರ್ಕಾಋ  ನೀಡಿರುವ  ವಿಶಿಷ್ಟ ಅಂಗವೈಕಲ್ಯ ಕಾರ್ಡ್

ನೆನಪಿಡಿ ಈ ದಾಖಲೆಗಳಲ್ಲಿ ಯಾವುದಾದರೊಂದನ್ನು ತೋರಿಸಿ ಮತ ಚಲಾಯಿಸಲು ಅವಕಾಶ ನೀಡಲಾಗಿದೆ.ಅಂದು ಈ ದಾಖಲೆಗಳಲ್ಲಿ ಯಾವುದಾದರೊಂದರ ಮೂಲಕ ಕಡ್ಡಾಯವಾಗಿ ಮತ ಚಲಾವಣೆ ಮಾಡುವುದನ್ನು ಮರೆಯಬೇಡಿ.

Spread the love

Leave a Reply

Your email address will not be published. Required fields are marked *