ಬೆಂಗಳೂರು:ಬೀದಿ ಬೀದಿಗಳಲ್ಲಿ ಕಾಲಿಗೆ ಎಡತಾಕುವಂತೆ ಸಿಗುತ್ತಿರುವ ಹಸಿ ಹಸಿ ಕಾಮಕೇಳಿಯ ದೃಶ್ಯ ಗಳನ್ನೊಳ ಗೊಂಡ ಸಾವಿರಾರು ಪೆನ್ ಡ್ರೈವ್ ಗಳು ಹಾಸನದಂಥ ಸಂಭಾವಿತರ ಜಿಲ್ಲೆಯನ್ನೇ ನಾಚಿಕೆಯಿಂದ ತಲೆ ತಗ್ಗಿಸು ವಂತೆ ಮಾಡಿದೆಯಂತೆ. ಪೆನ್ ಡ್ರೈವ್ ನಲ್ಲಿದೆ ಎನ್ನಲಾಗುತ್ತಿರುವ ಸಾವಿರಕ್ಕೂ ಹೆಚ್ಚು ಪರಮ ಪೋಲಿ,ಕೊಳಕು, ಅಸಹ್ಯ, ಅಸಭ್ಯವಾದ ದೃಶ್ಯಗಳು ಜಿಲ್ಲೆಯ ಜನತೆಯ ನ್ನು ಮುಜುಗರಪಟ್ಟಿಕೊಳ್ಳುವಂತೆ ಮಾಡಿದೆಯಂತೆ. ಸಧ್ಯ… ಈ ಪೆನ್ ಡ್ರೈವ್ ಗಳು ತಮ್ಮ ಮಕ್ಕಳ ಕೈಗೆ ಸಿಗದಿದ್ದರೆ ಸಾಕಪ್ಪ ಎಂದು ಜನ ದೇವರಲ್ಲಿ ಕೇಳಿಕೊಳ್ಳುತ್ತಿದ್ದಾರಂತೆ.

ಹಾಸನ ಜಿಲ್ಲೆಯಲ್ಲಿ ಸಧ್ಯಕ್ಕೆ ದೊಡ್ಡಮಟ್ಟದಲ್ಲಿ ಸುದ್ದಿ ಮಾಡುತ್ತಿರುವುದೇ ಪೆನ್ ಡ್ರೈವ್ ಗಳು.ಬೀದಿ ಬದಿಗಳಲ್ಲಿ ಕಸದಂತೆ ಬಿಸಾಡಲಾಗಿರುವ ಪೆನ್ ಡ್ರೈವ್ ಗಳನ್ನು ಸಿಸ್ಟಮ್-ಲ್ಯಾಪ್ ಟಾಪ್ ಗಳಿಗೆ ಹಾಕಿ ವೀಕ್ಷಿಸುತ್ತಿರುವವರು ಒಂದ್ ಕ್ಷಣ ಬೆಚ್ಚಿಬಿದ್ದಿದ್ದಾರಂತೆ.ಅಲ್ಲಿವೆ ಎನ್ನಲಾಗುತ್ತಿರುವ ನಗ್ನವಾದ ಹಸಿಬಿಸಿಯ ದೃಶ್ಯಗಳು ನೋಡುಗರ ರಕ್ತದೊತ್ತಡವನ್ನು ಏರುಪೇರಾಗಿಸಿದೆಯಂತೆ.ಅದೆಲ್ಲಕ್ಕಿಂತ ಹೆಚ್ಚಾಗಿ ಆ ದೃಶ್ಯಗಳಲ್ಲಿರುವ ಅನೇಕ ಹೆಣ್ಣುಗಳು ಹಾಸನದ ಯಾವುದೋ ಒಂದು ಪ್ರದೇಶದಲ್ಲಿ ಕಂಡ ಪರಿಚಿತ ಮುಖಗಳೆನ್ನುವುದು ಅಘಾತವನ್ನೇ ಸೃಷ್ಟಿಸಿದೆಯಂತೆ,

ಅಂದ್ಹಾಗೆ ಎಷ್ಟೇ ಪ್ರಯತ್ನಗಳ ಹೊರತಾಗ್ಯೂ ಎಲ್ಲೆಡೆ ಸಿಗುತಿರುವ ಸಾವಿರಾರು ಪೆನ್ ಡ್ರೈವ್ ಗಳ ನ್ನು ಅಸಲಿಗೆ ಯಾರು ಬಿಸಾಡಿದರು..? ಅದರಿಂದೆ ಇರುವವರು ಯಾರು.? ಅವರ ಉದ್ದೇಶವೇನು,,? ಅದರಲ್ಲಿರುವವರು ಯಾರ್ಯಾರು..? ಯಾರು ಇದನ್ನೆಲ್ಲಾ ರೆಕಾರ್ಡ್ ಮಾಡಿಕೊಂಡರು..? ಮೊಬೈಲ್ ನಲ್ಲಿ ಪಾಸ್ ವರ್ಡ್ ಕೊಟ್ಟು ಗೌಪ್ಯವಾಗಿ ಕಾಪಾಡಿಕೊಂಡಿದ್ದ ದೃಶ್ಯಗಳನ್ನು ವೈರಲ್ ಮಾಡಿದವರು ಯಾರು..? ಅವರಿಂದೆ ಯಾರು ಕೆಲಸ ಮಾಡಿದ್ದಾರೆ..?  ಎಲೆಕ್ಷನ್ ಹೊಸ್ತಿಲಲ್ಲೇ ಇದನ್ನೆಲ್ಲಾ ಬಿಡುಗಡೆ ಮಾಡೊಕ್ಕೆ ಕಾರಣವೇನು..? ಹೀಗೆ ದಂಡಿಯಾದ ಪ್ರಶ್ನೆಗಳು ಎಲ್ಲರನ್ನೂ ಕಾಡಲಾರಂಭಿಸಿದೆ.ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ತುಂಬಾ ಗಂಭೀರವಾಗಿ ತನಿಖೆಯನ್ನೂ ಶುರುಮಾಡಿವೆ.ನಿರ್ದಿಷ್ಟ ಸಮಯದಲ್ಲಿ ಎಲ್ಲವೂ ತನಿಖೆಯಿಂದ ಬಯಲಾಗಲಿದೆ ಎನ್ನುವ ಸಂಗತಿ ನಡುವೆಯೂ ಪೆನ್ ಡ್ರೈವ್ ದೊಡ್ಡ ಕೋಲಾಹಲವನ್ನೇ ಎಬ್ಬಿಸಿದೆ.

ಬಹುತೇಕ ಪರಿಚಿತರ ಮುಖಗಳೇ ಹೆಚ್ಚಂತೆ..?! ಅರರೆ ಇವ್ಳು ಅವಳಲ್ವಾ..? ಅವರ ಮನೆಯಲ್ಲಿ ಕೆಲಸ ಮಾಡ್ತಿದ್ದವರಲ್ಲ..? ಅವಳನ್ನು ಆ ಮನೆಯ ಸುತ್ತಲೆಲ್ಲೂ ನೋಡಿದಂಗಿದೆಯೆಲ್ಲಾ..? ಅವಳೇ ಇವಳಲ್ವಾ..? ಹೀಗೆಂದು ಮಾತನಾಡಿಕೊಳ್ಳುವಷ್ಟು ಚಿರಪರಿತವಾದ ಮುಖಗಳು ಪೆನ್ ಡ್ರೈವ್ ನಲ್ಲಿ ಬೆತ್ತಲಾಗಿವೆಯಂತೆ. ಮೊಬೈಲ್ ನಲ್ಲಿ ಗೌಪ್ಯವಾಗಿದ್ದ ದೃಶ್ಯಗಳು ಬಟಾಬಯಲಾಗಿರುವುದು ಆ ಹೆಣ್ಣುಗಳ ಜೀವಕ್ಕೇನೆ ಬೆಲೆ ಇಲ್ಲದಂತೆ ಮಾಡಿವೆಯಂತೆ.ಆದ್ರೆ ಈ ದೃಶ್ಯಗಳನ್ನು ಯಾರು ಸೆರೆ ಹಿಡಿದು ತಮ್ಮ ಮೊಬೈಲ್ ನಲ್ಲಿ ಇರಿಸಿಕೊಂಡು ಮಜಾತೆಗೆದು ಕೊಂಡಿದ್ರೋ ಅವರ ವಿಕೃತಿ-ವಿಕ್ಷಿಪ್ತತೆ-ಮನೋವೈಕಲ್ಯ ಜಗಜ್ಜಾಹೀರಾಗಿರೋದಂತೂ ಸತ್ಯ. ಒಂದಲ್ಲ..ನೂರಲ್ಲ,,ಸಾವಿರಾರು ವೀಡಿಯೋ ತುಣುಕುಗಳನ್ನು ವರ್ಷಗಳಿಂದಲೂ ಜೋಪಾನ ಮಾಡುತ್ತಾ ಬಂದಿರೋ “”ಅವರ”” ವಿಕೃತಿಗೆ ಹಾಸನದ ಜನತೆ ಛೀ..ಥೂ ಎನ್ನುತ್ತಿದೆಯಂತೆ.

ಪೆನ್ ಡ್ರೈವ್ ನಲ್ಲಿರುವ ದೃಶ್ಯಗಳ ಸೃಷ್ಟಿಕರ್ತ ಯಾರೆನ್ನುವುದು ತನಿಖೆಯ ಭಾಗವಾಗಿ ಶೀಘ್ರವೇ ತಿಳಿದುಬರಲಿದೆ ಎನ್ನುವುದು ಎರಡನೇ ಮಾತು.ಆದ್ರೆ ಅಷ್ಟೊಂದು ಹೆಣ್ಣುಗಳ ದೃಶ್ಯಗಳನ್ನು ಮನವೊಲಿಸಿಯೋ, ಬಲವಂತವಾಗಿ ಪೀಡಿಸಿ ತೆಗೆದಿರುವುದು ಮಾತ್ರ ಅವರ ವಿಕೃತಿಗೆ ಹಿಡಿದ ಕೈ ಗನ್ನಡಿಯಂತಿದೆ.ಸೆಕ್ಸ್ ವಿಚಾರದಲ್ಲಿ ಜಗತ್ತಿನಲ್ಲೇ ಮನುಷ್ಯನಷ್ಟು ವಿಕೃತ ಇನ್ನೊಬ್ಬನಿರಲಾರ ಎನ್ನುವ ಮಾತು ಈ ದೃಶ್ಯಗಳ ಸೃಷ್ಟಿಕರ್ತನಿಗೆ ಸರಿಯಾಗೇ ಒಪ್ಪುತ್ತದೆ ಎನಿಸುತ್ತೆ.ಆತ ಸಮಾಜದಲ್ಲಿ ಎಷ್ಟೇ ದೊಡ್ಡ ವ್ಯಕ್ತಿಯಾಗಿರಬಹುದು..ಎಂತದ್ದೇ ಪ್ರತಿಷ್ಟಿತ ಹಿನ್ನಲೆಯುಳ್ಳವನಾ ಗಿದ್ದರೂ,ಹಾಸನ ಜನತೆ ದೃಷ್ಟಿಯಲ್ಲಿ ಅತ್ಯಂತ ಕೆಟ್ಟ ಕಾರಣಕ್ಕೆ ಮಾಸದ ಕಹಿ ನೆನಪಾಗಿ ದಾಖಲಾಗಿದ್ದಂತೂ ಸತ್ಯ.

ಪೆನ್ ಡ್ರೈವ್ ನಲ್ಲಿರುವ ಹೆಣ್ಣುಗಳು ಯಾವ ಕಾರಣಕ್ಕೆ ಮೊಬೈಲ್ ನಲ್ಲಿ ಸೆರೆ ಹಿಡಿಯಲ್ಪಟ್ಟವೋ ಗೊತ್ತಿಲ್ಲ.ಆ ಸತ್ಯವನ್ನು ಸೆರೆ ಹಿಡಿದವರು ಹಾಗೆಯೇ ಸೆರೆಯಾದವರೇ ಸ್ಪಷ್ಟಪಡಿಸಬೇಕು.ಆದರೆ ಪೆನ್ ಡ್ರೈವ್ ನೋಡಿ ಆ ಮಾಹಿತಿಯನ್ನು ಪಸರ್ ಮಾಡುತ್ತಿರುವವರ ಬಗ್ಗೆ ಮಾದ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿ ಗಮನಿಸಿದಾಗ ಬಹುತೇಕ ಬಲವಂತಕ್ಕೆ ಕೆಲವು ಸ್ವಇಚ್ಛೆಯಿಂದ ಸೆರೆಯಾದಂತವೆನ್ನುವುದು ಗೊತ್ತಾಗುತ್ತದೆಯಂತೆ.ಯಾವ ಅಸಹಾಯಕ-ಅನಿವಾರ್ಯ ಕಾರಣಗಳಿಂದ ಮೊಬೈಲ್ ನಲ್ಲಿ ಸೆರೆಯಾದರೆನ್ನುವುದನ್ನು ಅವರವರೇ “ಆತ್ಮಾವಲೋಕನ” ಮಾಡಿಕೊಂಡು ಹೇಳಬೇಕಷ್ಟೆ.

“ಚುನಾವಣಾ ಆಯೋಗ ಕೂಡ ಈ ವಿಷಯದಲ್ಲಿ ಗಂಭೀರವಾಗಿದೆ. ಚುನಾವಣೆ ಹೊಸ್ತಿಲಲ್ಲಿ ನಡೆದಿರುವ ಪ್ರಕರಣ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.ಈ ಬಗ್ಗೆ ಆಯೋಗ ಗಂಭೀರವಾದ ತನಿಖೆ ಕೈಗೊಳ್ಳ ಲಿದೆ.ಇದೇ ವೇಳೆ ಪೆನ್ ಡ್ರೈವ್ ನಲ್ಲಿರುವ ದೃಶ್ಯಗಳು ಒಂದು ಮೊಬೈಲ್ ನಿಂದ ಇನ್ನೊಂದು ಮೊಬೈಲ್ ಗೆ ಹರಿದಾಡಿದ್ರೆ,ಅದನ್ನು ಫಾರ್ವರ್ಡ್ ಮಾಡಿದವರು ಯಾರೇ ಇರಲಿ ಅವರ ವಿರುದ್ದ ಕ್ರಮ ಕೈಗೊಳ್ಳಲಿದ್ದೇವೆ.ಈ ಬಗ್ಗೆ ನಮಗೆ ದೂರು ಕೂಡ ಬಂದಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ”

ಪೆನ್ ಡ್ರೈವ್ ನಲ್ಲಿ ಸಾವಿರಾರು ಹೆಣ್ಣುಗಳ ಹಸಿಬಿಸಿ ದೃಶ್ಯಗಳಿವೆ ಎನ್ನುವ ಸುದ್ದಿ ಬಯಲಾಗುತ್ತಿದ್ದಂತೆ ಅನೇಕರಿಗೆ ಒಳಗೊಳಗೆ ಭಯ ಸೃಷ್ಟಿಯಾಗಿದೆಯಂತೆ.ಅದು ಸಹಜ ಬಿಡಿ.ಅನೇಕರು ಹಳೆಯ ನೆನಪುಗಳನ್ನು ಮೆಲಕು ಹಾಕಿ ಕೊಳ್ಳಕ್ಕೂ ಶುರುಮಾಡಿದ್ದಾರಂತೆ.ಆ ಪೆನ್ ಡ್ರೈವ್ ನ್ನು ಹೇಗಾದ್ರೂ ಪಡೆದುಕೊಂದು ಪರಿಶೀಲಿಸುವ ಕೆಲಸಕ್ಕೂ ಕೈ ಹಾಕಿದ್ದಾರಂತೆ.ಹಾಸನದವರಷ್ಟೇ ಅಲ್ಲ ಬೆಂಗಳೂರಿನ ಹೆಣ್ಣುಗಳು ಕೂಡ ಮೊಬೈಲ್ ನಲ್ಲಿ ಸೆರೆಯಾಗಿದ್ದಾರಂತೆ. ಅವರೊಳಗೆ ವಿವಿಧ ಕ್ಷೇತ್ರಗಳಲ್ಲಿರುವವರು ಇದ್ದಾರಂತೆ.ಅವರಲ್ಲಿ ಕೆಲವರು ಯಾರು ಇದನ್ನೆಲ್ಲಾ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದರೋ ಅವರನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಳ್ಳಲಾರಂಭಿಸಿದ್ದಾರಂತೆ.

ಈ ಪರಮ ಕೊಳಕು ಹಾಗೂ ಅಸಹ್ಯಕರವಾದ ಯಾವುದೇ ಮಾದ್ಯಮಗಳಲ್ಲಿ ಪ್ರಸಾರವಾಗದಂತೆ ಕಾನೂನಾತ್ಮಕ ವಾಗಿ ತಡೆಯಾಜ್ಞೆ ತರಲಾಗಿದೆ ಎನ್ನುವ ಸುದ್ದಿ ಕೂಡ ಚರ್ಚೆ ಹುಟ್ಟುಹಾಕಿದೆ.ಆದರೂ ಕೆಲವು ಮಾದ್ಯಮಗಳು ಯಾರನ್ನೂ ನಿರ್ದಿಷ್ಟವಾಗಿ ಹೆಸರಿಸದೆ ಸುದ್ದಿಯನ್ನು ಬಿತ್ತರಿಸಲಾರಂಭಿಸಿವೆ.ಹಾಸನಕ್ಕೆ ಹಾಸನವೇ ಈ ಪೆನ್ ಡ್ರೈವ್ ಸೆಕ್ಸ್ ಸ್ಕ್ಯಾಮ್ ಹಿಂದೆ ಯಾರೆಲ್ಲಾ ಇದ್ದಾರೆನ್ನುವುದು ಗೊತ್ತಿದ್ದರೂ ಅದನ್ನು ಅನೇಕ ಕಾರಣಗಳಿಂದ ಬಹಿರಂಗವಾಗಿ ಮಾತನಾಡಿಕೊಳ್ಳಲು ಹೆದರುತ್ತಿದೆ.ಯಾವುದೂ ಸ್ಪಷ್ಟವಾಗದೆ ನಿರ್ದಿಷ್ಟವಾಗಿ ಯಾರ ಕಡೆಯೂ ಬೊಟ್ಟು ಮಾಡಿ ತೋರಿಸಬಾರದೆನ್ನುವ ಕಾನೂನಾತ್ಮಕ ಸೂಕ್ಷ್ಮವೇ ಇದಕ್ಕೆಲ್ಲಾ ಕಾರಣ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು.

ಅದೇನೇ ಆಗಲಿ ಹಾಸನದ ಹಾದಿಬೀದಿಗಳಲ್ಲಿ ಕೈ ಕಾಲಿಗೆ ಎಡತಾಕುವಂತೆ ಎಲ್ಲರ ಕೈಗೂ ಸಿಗುತ್ತಿರುವ ಪೆನ್ ಡ್ರೈವ್ ನಲ್ಲಿರುವ ದೃಶ್ಯಗಳು ನೋಡಲಿಕ್ಕೂ ಸಾಧ್ಯವಾಗದಷ್ಟು ಅಸಹ್ಯಕರವಾಗಿವೆಯಂತೆ. ಅದನ್ನು “ಸಮಾಜದ ಸ್ವಾಸ್ಥ್ಯ” ದ ಕಾರಣಕ್ಕೆ ಕಾನೂನಾತ್ಮಕವಾಗಿ ನಿರ್ಬಂಧಿಸುವ ಕೆಲಸಕ್ಕೆ ಸ್ಥಳೀಯ ಆಡಳಿತ ಮುಂದಾಗಿವೆ,ಅದು ಒಳ್ಳೇದು ಕೂಡ.ಅದರಲ್ಲಿರುವ ದೃಶ್ಯಗಳನ್ನು ಶೇರ್ ಮಾಡಿದ್ರೆ ಸೈಬರ್ ಕ್ರೈಮ್ ಸೆಕ್ಷನ್ ಅಡಿಯಲ್ಲಿ ಕೇಸ್ ಹಾಕುವ ಎಚ್ಚರಿಕೆಯನ್ನೂ ನೀಡಲಾಗಿದೆಯಂತೆ.ಈ ಮೂಲಕವಾದ್ರೂ ಆ ದೃಶ್ಯಗಳು ಶೇರ್ ಆಗೋದು ತಪ್ಪುತ್ತದಲ್ವಾ ಎನ್ನುವುದೇ ಸಮಾಧಾನಕರ.

Spread the love

Leave a Reply

Your email address will not be published. Required fields are marked *