ಬೆಂಗಳೂರು: ಸದಾ ಒಂದಿ‍ಲ್ಲೊಂದು ರಾಜಕೀಯ ಬೆಳವಣಿಗೆಗಳಿಗೆ  ಹೆಡ್ ಕ್ವಾರ್ಟರ್ಸ್ ಆಗಿರುತ್ತಿದ್ದ ಮಾಜಿ ಪ್ರಧಾನಿ ದೇವೇಗೌಡರ ಬೆಂಗಳೂರಿನ ಪದ್ಮನಾಭನಗರದ ನಿವಾಸ ಇವತ್ತು ಕೆಟ್ಟ ಕಾರಣಕ್ಕೆ ಸುದ್ದಿಗೆ ಗ್ರಾಸವಾಯ್ತು.ಇದಕ್ಕೆ ಕಾರಣ ಮಾಜಿ  ಸಚಿವ ಎಚ್ ಡಿ ರೇವಣ್ಣರ ಬಂಧನ.ತನ್ನ ಮನೆ ತನ್ನ ಮಗನ ಬಂಧನಕ್ಕೆ ಸಾಕ್ಷಿಯಾಗುತ್ತದೆ ಎಂದು ದೇವೇಗೌಡರಾಗಲಿ,ಕುಮಾರಸ್ವಾಮಿ ಅವರಾಗಲಿ ಕನಸಿನಲ್ಲಿಯೂ ನೆನಸಿರಲಿಲ್ಲವೇನೋ..ಆದರೆ ರಾಜ್ಯದ ಜನತೆ ಇದಕ್ಕೆ ಕೊಡುವ ವ್ಯಾಖ್ಯಾನ ಮಾಡಿದ್ಡುಣ್ಣೋ ಮಹರಾಯ.

ಯೆಸ್…ಈ ನೆಲದ ಕಾನೂನು ಎಲ್ಲರಿಗೂ ಒಂದೇ…ಅನ್ಯಾಯ ಮೆರೆದಾಡಬಹುದು ಆದ್ರೆ ಅದಕ್ಕೆ ಅಂತ್ಯವಿರದೆ ಇರಲಿಕ್ಕಿಲ್ಲ.ಅಂತಿಮವಾಗಿ ಗೆಲ್ಲೋದೇ ನ್ಯಾಯ..ಎನ್ನುವುದು ಮಾಜಿ ಸಚಿವ,ಹಾಸನ ಜಿಲ್ಲೆ ಹೊಳೆನರಸೀಪುರ ಜೆಡಿಎಸ್ ಶಾಸಕ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಕುಟುಂಬದ ಕುಡಿ ಎಚ್ ಡಿ ರೇವಣ್ಣರ ವಿಷಯದಲ್ಲಿ ಸಾಬೀತಾಗಿದೆ. ದೇವೇಗೌಡರ ಕುಟುಂಬವನ್ನು  ಯಾರೂ ಟಚ್ ಮಾಡಲಿಕ್ಕೆ ಆಗೋದೆ ಇಲ್ಲ..ಅದಾಗಬೇಕಿದ್ದರೆ ದೇವೇಗೌಡ ಎಂಬ ದೈತ್ಯ ವ್ಯಕ್ತಿತ್ವವನ್ನು ದಾಟಿಯೇ ಬರಬೇಕು ಎಂದುಕೊಂಡಿದ್ದ ಜನರ ಆಲೋಚನೆಗಳು ತಪ್ಪು ಎನ್ನುವುದನ್ನು ಎಸ್ ಐ ಟಿ ಪೊಲೀಸರು ಬಂಧನದ ಮೂಲಕ  ತೋರಿಸಿಕೊಟ್ಟಿದ್ದಾರೆ.ಈ ಬೆಳವಣಿಗೆ ಈ ನೆಲದ ಕಾನೂನಿನ ಬಗ್ಗೆ ಸಾಮಾನ್ಯ ಜನರಿಗಿರುವ ನಂಬಿಕೆ ಹಾಗೂ ವಿಶ್ವಾಸ ಹೆಚ್ಚಿಸಿರುವ ಜತೆಗೆ ನ್ಯಾಯಾಂಗ ವ್ಯವಸ್ಥೆ ಬಗ್ಗೆ ನಂಬಿಕೆ-ವಿಶ್ವಾಸ ಹೆಚ್ಚಾಗುವಂತೆ ಮಾಡಿದೆ.

ಹಾಸನದ ಜೆಡಿಎಸ್  ಸಂಸದ ಪ್ರಜ್ವಲ್ ರೇವಣ್ಣರದ್ದು ಎನ್ನಲಾಗಿರುವ ಪೆನ್ ಡ್ರೈವ್ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಸದ್ದು ಮಾಡಿದ್ದಕ್ಕೆ ಪೂರಕವಾಗಿ ಅವರ ತಂದೆ ಎಚ್ ಡಿ ರೇವಣ್ಣರ ವಿರುದ್ಧವೂ ಎಫ್ ಐ ಆರ್ ದಾಖಲಾಗಿತ್ತು.ಸಂತ್ರಸ್ಥ ಮಹಿಳೆಯ ಕಿಡ್ನ್ಯಾಪ್ ಪ್ರಕರಣದಲ್ಲಿ ದೂರು ದಾಖಲಾಗಿ ಅದರ ವಿಚಾರಣೆ ಕೋರ್ಟ್ ನಲ್ಲಿ ನಡೆದು ಬೇಲಾ..ಜೈಲಾ ಎನ್ನುವ ಜಿಜ್ಞಾಸೆ ಶುರುವಾಗಿದ್ದಾಗಲೇ ಜೈಲ್ ಫಿಕ್ಸ್ ಎನ್ನುವುದು ಮದ್ಯಾಹ್ನದಿಂದಲೇ ಕೋರ್ಟ್ ಅಂಗಳದಲ್ಲಿ ಕೇಳಿಬರುತ್ತಿತ್ತು. ವಿದೇಶದಲ್ಲಿ ಬಂಧನದ ಭೀತಿಯಿಂದ ತಲೆಮರೆಸಿಕೊಂಡಿರುವ ಮಗನನ್ನು ಎಳೆದು ತರುವ ಕೆಲಸ ನಡೆಯುತ್ತಿರುವಾಗ್ಲೇ ರೇವಣ್ಣರಿಗೆ ಬೇಲ್ ರಿಜೆಕ್ಟ್ ಆದ ವಿಚಾರ ಹೊರಬಿದ್ದಿದೆ.

ಜೈಲ್ ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳ್ಳುತ್ತಿದ್ದಂತೆ ಬಂಧನದ ಭೀತಿಯಿಂದ ತಂದೆ ದೇವೇಗೌಡರ ಪದ್ಮನಾಭನಗರದ ನಿವಾಸಕ್ಕೆ ಝೂಟ್ ಹೇಳಿದ ರೇವಣ್ಣ ಅಲ್ಲಿಂದಲೇ ಬಚಾವಾಗ್ಲಿಕ್ಕೆ ಏನಾದ್ರೊಂದು ದಾರಿಗಳಿವೆಯಾ ಎಂದು ಆಲೋಚಿಸತೊಡಗಿದರು.ಅವರ ತಂದೆ  ರಾಜಕೀಯ ಲೆಕ್ಕಾಚಾರ ಹಾಕಲಿಕ್ಕೆ ಶುರುಮಾಡಿದ್ರು.ಅಪ್ಪ-ಮಕ್ಕಳು ತಲೆಕೆಡಿಸಿಕೊಂಡು ಏನೆಲ್ಲಾ ಮಾಡಿದರೂ ಅದರಿಂದ ಏನೂ ಪ್ರಯೋಜನವಿಲ್ಲ ಎನ್ನುವುದು ಗೊತ್ತಾಗುತ್ತಿದ್ದಂತೆ ಅಡಗಿಕೊಂಡು ಪ್ರಯೋಜನವಿಲ್ಲ ಎಂದು ದೇವೇಗೌಡರು ನೀಡಿದ ಸಲಹೆ ಹಿನ್ನಲೆಯಲ್ಲಿ ಪೊಲೀಸರಿಗೆ ಶರಣಾದ್ರು.

ಈಗ ಶರಣಾಗು..ನಂತರ ನೋಡೋಣ: ಮನೆಯಲ್ಲಿ ಚಿಂತಾಕ್ರಾಂತರಾಗಿ ಕೂತಿದ್ದ ದೇವೇಗೌಡಪ್ಪಾಜಿ ಮಗನಿಗೆ ಅಂತಿಮವಾಗಿ ನೀಡಿದ ಸಲಹೆ ಇದೇ ಅಂತೆ.ನಿಮ್ಮಗಳ ಕರ್ಮವನ್ನು ನಾವು ನೋಡಬೇಕಾಗಿ ಅನುಭವಿಸಬೇಕಾಗಿ ಬಂತಲ್ರೋ..? ಸಾಯುವ ವಯಸ್ಸಿನಲ್ಲಿ ಇದನ್ನೆಲ್ಲಾ ನಾನು ನೋಡುವಂತಾಯ್ತಲ್ಲ..ಎಲ್ಲಿಗಾದ್ರೂ ಹೋಗಿ ಸಾಯಿ ಎಂದು ಸಿಟ್ಟಿನಿಂದ ಅಬ್ಬರಿಸಿದ್ರಂತೆ.ಕೊನೆಗೆ ಎಷ್ಟಾದ್ರೂ ನನ್ನ ಮಕ್ಕಳಲ್ವೇ ಎನ್ನುವ ಮಮಕಾರಕ್ಕೆ ಮೊದಲು ಸೆರೆಂಡರ್ ಆಗು..ಆಮೇಲೆ ನೋಡೋಣ..ಈಗಲೂ ತಪ್ಪಿಸಿಕೊಳ್ಳುವ ಯತ್ನ ಮಾಡಿದ್ರೆ ಅಳಿದುಳಿದ ವಿಶ್ವಾಸವನ್ನು ಜನತೆ ಕಳೆದುಕೊಳ್ತಾರೆ.ನನ್ನ ಪಕ್ಷ ಹಾಗೂ ಕಾರ್ಯಕರ್ತರನ್ನು ಹಾಗೆ ಆಲೋಚಿಸ್ಲಿಕ್ಕೆ ಬಿಡಲು ನಾನು ಸಿದ್ದನಿಲ್ಲ..ಮೊದಲು ಸರೆಂಡರ್ ಆಗು ಎಂದು ನಿಟ್ಟುಸಿರು ಬಿಡ್ತಲೇ ದೇವೇಗೌಡ್ರು ಸಲಹೆ ಕೊಟ್ಟರಂತೆ.

ಅಪ್ಪಾಜಿನೇ ಹೀಗೆಂದ ಮೇಲೆ ಇನ್ನೇನ್ ಮಾಡೋದೆಂದು ಆಲೋಚಿಸಿ ಒಳ್ಳೆಯ ಸಮಯ ನೋಡಿಕೊಂಡು ಮನೆಯಿಂದ ಹೊರಬಂದು, ಎಸ್ ಐಟಿ ಪೊಲೀಸರಿಗೆ ನಸುನಗುತ್ತಲೇ ಸೆರೆಂಡರ್ ಆಗಿದ್ದಾರೆ ರೇವಣ್ಣಅದನ್ನು ಬಿಟ್ಟು ಅವರಿಗೆ ಬೇರೆ ಪರ್ಯಾಯಗಳೂ ಇರಲಿಲ್ಲ ಬಿಡಿ..ಆದ್ರೆ ರಾಜಕೀಯ ಚಟುವಟಿಕೆಗಳ ಹೆಡ್ ಕ್ವಾರ್ಟರ್ ಆಗಿದ್ದ ಪದ್ಮನಾಭನಗರದ ನಿವಾಸ ಇವತ್ತು ಅತ್ಯಂತ ಕೆಟ್ಟ ಹಾಗೂ ವಿಷಮ ಕ್ಷಣಕ್ಕೆ ಸಾಕ್ಷಿಯಾದದ್ದು ಮಾತ್ರ ದುರಂತ.ಬಹುಷಃ ಈ ಒಂದು ಘಟನೆಯನ್ನು ಇತಿಹಾಸ ಎಂದೂ ಮರೆಯೊಕ್ಕೆ ಸಾಧ್ಯವಿಲ್ಲ.ದೇವೇಗೌಡರಿಗಂತೂ ಇಂದು ನಡೆದ ಈ ವಿದ್ಯಾಮಾನದಿಂದ ಗಾಬರಿ,ಅಘಾತ ಆಗಿದ್ದಂತೂ ಸತ್ಯ.

ಆದರೆ ಮೇಲ್ಕಂಡ ಘಟನೆಯನ್ನು ಅತ್ಯಂತ ಲಘುವಾಗಿ ಪರಿಗಣಿಸ್ಲಿಕ್ಕೆ ಸಾಧ್ಯವಿದೆಯಾ..? ಖಂಡಿತಾ ಇಲ್ಲ.ಮುಳುಗೋ ಹಡಗಿನಂತಾಗಿರುವ,ನೇಪಥ್ಯಕ್ಕೆ ಸರಿಯುವ ಸಾಮ್ರಾಜ್ಯದಂತಿರುವ ಜೆಡಿಎಸ್ ಪಕ್ಷದ ಅಸ್ಥಿತ್ವಕ್ಕೆ ಇದು ಮತ್ತೊಂದು ತಡೆಯಲಾರದ ಪೆಟ್ಟು.ಎಂಥಾ ಆರೋಪಗಳಿಗೆ ಬೇಕಾದ್ರೂ ಸ್ಪಷ್ಟನೆ-ಸಮರ್ಥನೆ ಕೊಟ್ಟು ಸುಮ್ಮನಾಗಬಹುದು..ಅದಕ್ಕೆ ತೇಪೆ ಹಚ್ಚಬಹುದು.ಆದ್ರೆ ರೇಪ್-ಲೈಂಗಿಕ ವ್ಯವಹಾರದಂಥ ಆರೋಪಗಳಿಗೆ ಸ್ಪಷ್ಟನೆ ಕೊಟ್ಟು ಬಚಾವಾಗ್ಲಿಕ್ಕೆ ಸಾಧ್ಯವೇ  ಇಲ್ಲ ಎನ್ನುವುದು ರಾಜಕೀಯ ಘಟನೆಗಳಿಂದಲೇ ಸಾಬೀತಾಗಿದೆ.ಅದಕ್ಕೆ ಈ ಘಟನೆ ಕೂಡ ಹೊರತಾಗೇನೂ ಇಲ್ಲ.

ಇತ್ತೀಚಿನ ವರ್ಷಗಳಲ್ಲಿ ಜೆಡಿಎಸ್ ಬಗ್ಗೆ ಕಾರ್ಯಕರ್ತರು ಹಾಗೂ ಪಕ್ಷ ಬೆಳೆಸಿದ ಮುಖಂಡರು ದಳಪತಿಗಳ ನಿರ್ದಾರದಿಂದ ಬೇಸತ್ತಿದ್ದರು..ರೋಸಿ ಹೋಗಿದ್ದರೆನ್ನುವುದು ಜಗಜ್ಜಾಹೀರಾದ ವಿಚಾರ.ಅದರಲ್ಲೂ ತಮ್ಮನ್ನ್ಯಾರನ್ನು ಕೇಳದೆ.,ವಿಶ್ವಾಸಕ್ಕೆ ತೆಗೆದುಕೊಳ್ಳದೆ ಜೆಡಿಎಸ್ ನ್ನು ಬಿಜೆಪಿ ಜತೆ ವಿಲೀನ ಮಾಡಿದ ಮೇಲಂತೂ ಶೇಕಡಾ 50 ರಷ್ಟು ವಿಶ್ವಾಸವನ್ನು ಕಳೆದುಕೊಂಡೇ ಬಿಟ್ಟರು.ಕರ್ನಾಟಕಕ್ಕೆ ರಾಜಕೀಯ ಪರ್ಯಾಯ ನೀಡಿದ ಪ್ರಾದೇಶಿಕ ಪಕ್ಷ ಎನ್ನುವ ಒಂದೇ ಒಂದು ಕಾರಣಕ್ಕೆ ಜೆಡಿಎಸ್ ಹಾಗೂ ದಳಪತಿ ಗಳನ್ನು ಎಷ್ಟೇ ವಿರೋಧಗಳ ನಡುವೆಯೂ ಬೆಂಬಲಿಸುತ್ತಾ ಬಂದಿದ್ದ ಕಾರ್ಯಕರ್ತರು ಹಾಗೂ ಮುಖಂಡರು ಬಿಜೆಪಿ ಜತೆಗಿನ ಕೂಡುಕೊಳ್ಳುವಿಕೆ ಮೇಲಂತೂ ಮಾನಸಿಕವಾಗಿ ದೂರ ಉಳಿಯೊಕ್ಕೆ ಪ್ರಾರಂಭಿಸಿದ್ದನ್ನು ಮತ್ತೆ ಹೇಳಬೇಕಿಲ್ಲ.

ರಾಜಕೀಯವಾಗಿ ತೀರಾ ಸಂಕಷ್ಟಕ್ಕೆ ಸಿಲುಕಿದ ಜೆಡಿಎಸ್ ಗೆ ಮರ್ಮಾಘಾತ ನೀಡಿದ್ದೇ ಪ್ರಜ್ವಲ್ ರೇವಣ್ಣರದ್ದೆಂದು ಹೇಳಲಾದ ಪೆನ್ ಡ್ರೈವ್.ಇದು ಯಾವ್ ಮಟ್ಟದಲ್ಲಿ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸ್ತು ಎಂದ್ರೆ ನೈತಿಕವಾಗಿ ಮಾತನಾಡುವ ಹಕ್ಕು ಹಾಗೂ ಅಧಿಕಾರವನ್ನೇ ದಳಪತಿಗಳು ಕಳೆದುಕೊಂಡು ಬಿಟ್ರು. ಜೆಡಿಎಸ್ ವರಿಷ್ಟ-ಭೀಷ್ಮ ದೇವೇಗೌಡರಂತೂ ಕಂಗಾಲಾಗಿಬಿಟ್ರು.ಅನ್ನಾಹಾರವನ್ನೇ ಬಿಟ್ರು.ಅತ್ಯಂತ ಪ್ರೀತಿಯ ಮೊಮ್ಮಗ ಪ್ರಜ್ವಲ್  ರೇವಣ್ಣನನ್ನು ರಾಜ್ಯದ ಮುಖ್ಯಮಂತ್ರಿಯಾಗಿ ನೋಡಬೇಕೆನ್ನುವ ಹಿರಿದಾಸೆ ಹೊಂದಿದ್ದ ಹಿರಿಜೀವ ಕನಲಿ ಹೋಯ್ತು.ಮನೆಯಿಂದ ಹೊರ ಬರೊದನ್ನೇ ಬಿಟ್ಟು ಮೂಲೆಯಲ್ಲಿ ಕೂತುಬಿಟ್ಟಿದ್ದಾರೆ.ಮಾತು ಕಡಿಮೆಯಾಗಿದೆ.ಉತ್ಸಾಹ-ಲವಲವಿಕೆಯಂತೂ ಉಡುಗಿ ಹೋಗಿದೆ.ಕೊನೆಗಾಲದಲ್ಲಿ ಇಂತದ್ದನ್ನೆಲ್ಲಾ ನೋಡಬೇಕಾಯ್ತಲ್ಲಾ ಎಂದು ಪತ್ನಿ ಚೆನ್ನಮ್ಮ ಜತೆ ನೋವು ತೋಡಿಕೊಳ್ಳಲಾರಂಬಿಸಿದ್ದಾರಂತೆ.

ಇನ್ನು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಪಕ್ಷ ಹಾಗೂ ಕುಟುಂಬ ರಕ್ಷಿಸಿಕೊಳ್ಳುವ ಪ್ರಯತ್ನ ಮಾಡಿ ವಿಫಲರಾಗುತ್ತಿದ್ದಾರೆ.ಅವರನ್ನು ನೋಡಿದರೆ ಬೇಸರ-ಅಯ್ಯೋ ಎನಿಸುತ್ತದೆ.ಪ್ರಕರಣ ಸಮರ್ಥಿಸಿಕೊಳ್ಳುವ ಪ್ರಯತ್ನದಲ್ಲಿ ಸಾಧ್ಯವಾಗದೆ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ.ಮಾದ್ಯಮಗಳ ಮೇಲೆ ಎಗರಾಡುತ್ತಿದ್ದಾರೆ.ಕಾಂಗ್ರೆಸ್  ನವರ ಕೈವಾಡ ಎಂದು ಆರೋಪಿಸುವ ಮೂಲಕ ಮುಜುಗರದಿಂದ ತಪ್ಪಿಸಿಕೊಳ್ಳೊಕ್ಕೆ ಯತ್ನಿಸ್ತಿದ್ದಾರೆ.ಆದ್ರೆ ಅದೆಲ್ಲವೂ ನಿಷ್ಪಲವಾಗುತ್ತಿದೆ.ಪಕ್ಷ ಉಳಿಸಿಕೊಳ್ಳೋದರ ಜತೆಗೆ ಸಾರ್ವಜನಿಕವಾಗಿ ದೇವೇಗೌಡರ ಕುಟುಂಬಕ್ಕೆ ಆಗುತ್ತಿರುವ ಅಪಮಾನ-ಮುಜುಗರದಿಂದ ತಪ್ಪಿಸುವುದಕ್ಕೆ  ಪಾಪ ಕುಮಾರಸ್ವಾಮಿದು ಒಂಟಿ ಹೋರಾಟವಾಗಿಬಿಟ್ಟಿದೆ.

ಸೋ..ಈ ಎಲ್ಲಾ ಬೆಳವಣಿಗೆ ಗಮನಿಸಿದ್ರೆ ರೇವಣ್ಣರ ಬಂಧನದ ನಂತರ ಪ್ರಜ್ವಲ್ ಬಂಧನವಾಗುವುದು ಬಹುತೇಕ ನಿಕ್ಕಿಯಾದಂತಾಗಿದೆ.ಇದು ದೇವೇಗೌಡ್ರ ಕುಟುಂಬದ ಮಾನವನ್ನು ಸಾರ್ವಜನಿಕವಾಗಿ ಹರಾಜಾಕುವುದ‍ರಲ್ಲಿ ಅನುಮಾನವಿಲ್ಲ.ಎದೆಯುಬ್ಬಿಸಿ ನಡೆಯುತ್ತಿದ್ದ ಗೌಡ್ರ ಕುಟುಂಬ ತಲೆ ತಗ್ಗಿಸಿಕೊಂಡು ನಡೆಯುವಂತೆ ಮಾಡಿದೆ.ಯಾವುದಕ್ಕೂ ಕೇರ್ ಮಾಡದಿದ್ದ ಕುಟುಂಬದ ಗತ್ತು ಸತ್ತು ಹೋಗಿದೆ.ದೊಡ್ಡ ಗೌಡ್ರ ಕುಟುಂಬದ ಮಾನ ರೇವಣ್ಣ ಅಂಡ್ ಫ್ಯಾಮಿಲಿ ಮಾಡಿಕೊಂಡ ಯಡವಟ್ಟೊಂದು ಹೀಗೆ ನಿಕೃಷ್ಟವಾಗಿ ಹರಾಜಾಗುತ್ತದೆ ಎಂದು ರಾಜ್ಯದ ಜನತೆ ನಿರೀಕ್ಷಿಸಲೇ ಇರಲಿಲ್ಲ..ಜೆಡಿಎಸ್ ಪಕ್ಷದ ಅವಸಾನಕ್ಕೆ ಅವರ ಕುಟುಂಬದವರೇ ಕಾರಣವಾದ ದುರಂತವನ್ನು ಈ ಇತಿಹಾಸ ಬಹುಷಃ ಮರೆಯಲಿಕ್ಕೆ ಸಾಧ್ಯವೇ ಇಲ್ಲವೇನೋ..ಅಲ್ವಾ

Spread the love

Leave a Reply

Your email address will not be published. Required fields are marked *

You missed