ಅವ್ರು ಕೊಡೊಲ್ಲ..ಇವ್ರ್ ಬಿಡೊಲ್ಲ: ಮಂತ್ರಿ ಮಾಲ್ ಜತೆ BBMP ಜೂಟಾಟ..ಈ ಮಕ್ಕಳಾಟಕ್ಕೆ ಕೊನೆ ಎಂದು..!

ಬೆಂಗಳೂರು: ಹೀಗೆಯೇ ಆಗ್ಹೋಗಿದೆ ಬಿಬಿಎಂಪಿ ಮತ್ತು ಮಂತ್ರಿ ಮಾಲ್ ನಡುವಿನ ಹಗ್ಗಜಗ್ಗಾಟ.62 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರೋ ಮಂತ್ರಿಮಾಲ್ ಗೆ ತಿಂಗಳಿಗೊಮ್ಮೆಯಂತೆ ಬಿಬಿಎಂಪಿ ಬೀಗ ಹಾಕೋದು ಮಾಮೂಲಾಗಿ ಹೋ್ಗಿದಂತೆ ಕಾಣಿಸುತ್ತೆ.ಬಿಬಿಎಂಪಿ ಮನಸು ಬಂದಾಗಲೆಲ್ಲಾ ಮಾಲ್ ಗೆ ಬೀಗ ಜಡಿಯುತ್ತೆ.ಅವ್ರು ಕೋರ್ಟ್ ಹೋಗಿ ಸ್ಟೇ ತರುತ್ತಾರೆ.ಒಂದರೆಡು ಕೋಟಿ ತೀರಿಸಿ ಮತ್ತೆ ಮಾಲ್ ಓಪನ್ ಮಾಡಲಾಗ್ತಿದೆ.ಈ ಮಕ್ಕಳಾಟ ನೋಡುದ್ರೆ ಬಿಬಿಎಂಪಿನೇ ಒಂದು ದೊಡ್ಡ ಬೀಗ ರೆಡಿ ಮಾಡಿ ಮಾಲ್ ನವ್ರಿಗೆ ಕೊಟ್ಟು ನಾವು ಹೇಳಿದಾಗ್ಲೆಲ್ಲಾ ಬೀಗ ಹಾಕ್ಕೊಳ್ಳಿ ಎಂದು ಹೇಳೋದೆ ಒಳ್ಳೆದೆನಿಸುತ್ತದೆ.

ನಾಚಿಕೆಯಾಗಬೇಕು ಬಿಬಿಎಂಪಿ ಆಡಳಿತಕ್ಕೆ. ಲಕ್ಷಗಳಲ್ಲಿ ಹಾಳಾಗಿ ಹೋಗಲಿ, ಸಾವಿರಗಳಲ್ಲಿ ಆಸ್ತಿ ತೆರಿಗೆ ಉಳಿಸಿಕೊಂಡವರನ್ನು ಸತಾಯಿಸಿ ಅವರ ಮಾನಸಿಕ ನೆಮ್ಮದಿ ಕೆಡಿಸಿ,ಮಾನ ಮರ್ಯಾದೆ ಹರಾಜಾಗುವಂತೆ ಮಾಡುವ ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳಿಗೆ ಕೋಟಿಗಳಲ್ಲಿ ಆಸ್ತಿ ತೆರಿಗೆ ಉಳಿಸಿಕೊಂಡು ರಾಜಾರೋಷವಾಗಿ ಅಡ್ಡಾಡುವ ತೆರಿಗೆ ವಂಚಕರ ವಿರುದ್ದ ಕ್ರಮ ಕೈಗೊಳ್ಳುವ ತಾಕತ್ತೇ ಬಿಬಿಎಂಪಿಗೆ ಇಲ್ಲವಾಗಿದೆ. ಆಸ್ತಿ ತೆರಿಗೆ ವಿಚಾರದಲ್ಲಿ ಏನೇನೆಲ್ಲಾ ಸುಧಾರಣೆ ತರುತ್ತಿರುವ ವಿಶೇಷ ಆಯುಕ್ತ ಮನಿಷ್ ಮೌದ್ಗಿಲ್ ಅವರಿಗೆ ಮಂತ್ರಿ ಮಾಲ್ ನ ವಿಚಾರದಲ್ಲಿ ಕಠಿಣಾತೀಕಠಿಣ ಕ್ರಮ ಕೈಗೊಳ್ಳುವ ತಾಕತ್ತಿಲ್ಲವೇ..? ಬೆಂಗಳೂರಿನ ಪ್ರಾಮಾಣಿಕ ತೆರಿಗೆದಾರರ ಆಕ್ರೋಶದ ಪ್ರಶ್ನೆಗಳಿವು.

“ಅಸಹಾಯಕರಾಗಿಬಿಟ್ರಾ ಮೌದ್ಗಿಲ್”. “ಕಂದಾಯ ವಿಭಾಗದ ವಿಶೇಷ ಆಯುಕ್ತ ಮನಿಷ್ ಮೌದ್ಗಿಲ್ ಬಿಬಿಎಂಪಿಗೆ ಬರಬೇಕಿರುವ ತೆರಿಗೆ ಬಾಕಿ ವಿಚಾರದಲ್ಲಿ ತಲೆಕೆಡಿಸಿ ಕೊಂಡು ಕೆಲಸ ಮಾಡ್ತಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.ಆದ್ರೆ ಬಿಬಿಎಂಪಿಯಲ್ಲಿರುವ ಆಡಳಿತವೇ ಎಲ್ಲೋ ಒಂದೆಡೆ ಅವರ ಪ್ರಯತ್ನಕ್ಕೆ ಬೆಂಬಲವಾಗಿ ನಿಂತಿಲ್ಲ ಎನ್ನುವುದು ದೌರ್ಭಾಗ್ಯಪೂರ್ಣ.ಅವರೇ ಅನೇಕ ಬಾರಿ ತಮಗೆ ಬಿಬಿಎಂಪಿ ಆಡಳಿತದ ಅಸಹಕಾರದ ಬಗ್ಗೆ ಬೇಸರ ತೋಡಿಕೊಂಡಿದ್ದಾರೆ.ನಾವೇನೇ ಮಾಡಿದ್ರೂ ತೆರಿಗೆ ವಂಚಕರೆಲ್ಲಾ ಕೋರ್ಟ್ ಗೆ ಹೋಗಿ ಸ್ಟೇ ತಂದುಬಿಡ್ತಿದಾರೆ.ಕೋರ್ಟ್ ಗಳೇ ತೆರಿಗೆ ಬಾಕಿಯನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡಿ ಅನ್ತಾವೆ.ಇನ್ನೊಂದೆಡೆ ಸ್ಟೇ ಕೊಡುತ್ತವೆ. ಪರಿಸ್ತಿತಿ ಹೀಗಾದ್ರೆ ಹೇಗೆ ಕೆಲಸ ಮಾಡೋದು.ಕೋರ್ಟ್ ಗಳು ನಮಗೆ ಸಹಕಾರ ನೀಡಿದ್ರೆ ಸಾವಿರಾರು ಕೋಟಿ ತೆರಿಗೆ ಬಾಕಿ ವಸೂಲಿ ಮಾಡ್ತೇವೆ ಎನ್ನುತ್ತಲೇ ಬಂದಿದ್ದಾರೆ. ಅವರೇ ಹೇಳುವಂತೆ ಮಂತ್ರಿ ಮಾಲ್ ಗಿಂತ ಹೆಚ್ಚು ಅಂದ್ರೆ ನೂರಾರು ಕೋಟಿಗಳ ಲೆಕ್ಕದಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ದೊಡ್ಡ ಪಟ್ಟಿಯೇ ಅವರ ಬಳಿಯಿದೆ ಯಂತೆ.ಇದೆನ್ನೆಲ್ಲಾ ವಸೂಲಿ ಮಾಡಿದ್ರೆ ಬಿಬಿಎಂಪಿನೇ ಸರ್ಕಾರಕ್ಕೆ ದೊಡ್ಡಮೊತ್ತದ ಸಾಲ ಕೊಡಬಹುದು ಎನ್ತಾರೆ.ಆದ್ರೆ ಮನಿಷ್ ಮೌದ್ಗಿಲ್ ಅವರು ಅಂದುಕೊಂಡಂತೆ ಬಿಬಿಎಂಪಿಯಲ್ಲಿ ಏನೂ ಆಗೊಲ್ಲ ಎನ್ನುವುದೆ ವಾಸ್ತವ”

ಮಂತ್ರಿ ಮಾಲ್ ನ ವಿಚಾರವನ್ನೇ ತೆಗದುಕೊಳ್ಳಿ..ಆಸ್ತಿ ತೆರಿಗೆ ಕೆಲವು ಕೋಟಿಗಳಲ್ಲಿ ಬಾಕಿ ಉಳಿಸಿಕೊಂಡಿದ್ದಾಗ್ಲೇ ಬಿಬಿಎಂಪಿ ಆಡಳಿತ ಮಾಲ್ ವಿರುದ್ದ ಕ್ರಮಕ್ಕೆ ಮುಂದಾಗಬಹುದಿತ್ತು.ಆದ್ರೆ ಕಂದಾಯ ವಿಭಾಗದಲ್ಲಿರುವ ಕೆಲವು ಅಪ್ರಾಮಾಣಿಕ ಹಾಗೂ ನಾಲಾಯಕ್ ಅಧಿಕಾರಿ ಸಿಬ್ಬಂದಿನೇ ಮಂತ್ರಿ ಆಡಳಿತದೊಂದಿಗೆ ಮಂತ್ಲಿ ಫಿಕ್ಸ್ ಮಾಡಿಕೊಂಡು ಅಡ್ಜೆಸ್ಟ್ಮೆಂಟ್ ವ್ಯವಹಾರ ಮಾಡಿಕೊಂಡ್ರೆ ಹೊರತು ಕಠಿಣವಾದ ಕ್ರಮ ಕೈಗೊಳ್ಲಲೇ ಇಲ್ಲ.ಕಂದಾಯ ವಿಭಾಗದಲ್ಲಿರುವವರೇ ಬೀಸೋ ದೊಣ್ಣೆಯಿಂದ ಹೇಗೆ ತಪ್ಪಿಸಿಕೊಳ್ಳಬೇಕೆನ್ನುವುದರ ಐಡ್ಯಾ ಕೊಡುತ್ತಾ ಬಂದ್ರೆನ್ನುವುದು ಅಘಾತಕಾರಿಯಾದ್ರೂ ಸತ್ಯ.

ಇದರ ನಡುವೆ ಕಾನೂನುಕೋಶದ ಪಾತ್ರವೂ ಮಂತ್ರಿ ಮಾಲ್ ತನ್ನ ಕಳ್ಳಾಟ ಮುಂದುವರೆಸೊಕ್ಕೆ ಸಹಕಾರಿಯಾಯಿತೆನ್ನುವ ಮಾತುಗಳಿವೆ.ಕೋರ್ಟ್ ಮಟ್ಟದಲ್ಲಿ ಹೇಗೆ ಕಾನೂನಿನ ಮೊರೆ ಹೋಗಬೇಕೆ ನ್ನುವ ಐಡ್ಯಾವನ್ನು ಮಂತ್ರಿ ಸಂಸ್ಥೆಯವರಿಗೆ ಕೊಟ್ಟಿದ್ದೇ ಅಡ್ವೋಕೇಟ್ ಪ್ಯಾನಲ್ ನಲ್ಲಿರುವ ಕೆಲವು ಕಾನೂನು ಸಲಹೆಗಾರರು.( ಲೀಗಲ್ ಸೆಲ್ ಅಲ್ಲ,ಅದು ಇಲ್ಲೀಗಲ್ ಸೆಲ್ ಎನ್ನುವ ಆಪಾದನೆ ಮೊದಲಿಂದ ಲೂ ಕಾನೂನುಕೋಶಕ್ಕಿದೆ).ಮಾಲ್ ಗೆ ಬೀಗ ಹಾಕುವಾಗಲೆಲ್ಲಾ ಅವರಿಗೆ ಕಾನೂನು ಕುಣಿಕೆಯಿಂದ ಹೇಗೆ ತಪ್ಪಿಸಿಕೊಳ್ಳಬೇಕೆನ್ನುವ ಐಡ್ಯಾವನ್ನು ನೀಡುವವರೇ ಇವ್ರಂತೆ. ಬಿಬಿಎಂಪಿ ಯಲ್ಲಿರುವ ಪ್ಯಾನಲ್ ಆಫ್ ಅಡ್ವೋಕೇಟ್ಸ್ ಸ್ಟ್ರಾಂಗ್ ಆಗಿದಿದ್ರೆ ಮಂತ್ರಿ ಮಾಲ್ ನಿಂದ 62 ಕೋಟಿ ಬಾಕಿ ವಸೂಲಿ ಮಾಡಿಸುವುದು ದೊಡ್ಡ ಕಷ್ಟದ ಕೆಲಸವೇನಾಗಿರಲಿಲ್ಲ.ಅಷ್ಟೇ ಅಲ್ಲ ಸಾಕಷ್ಟು ಪ್ರಕರಣಗಳಲ್ಲಿ ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಳ್ಳುವಂತ ದಯನೀಯ ಸ್ಥಿತಿ ಬಿಬಿಎಂಪಿಗೆ ಬರುತ್ತಿರಲಿಲ್ಲವೇನೋ ಎನ್ನುವುದು ಪಾಲಿಕೆ ಕ್ಯಾಂಪಸ್ ನಲ್ಲಿ ಕೇಳಿಬರುತ್ತಿರು ಮಾತು.

ಮಂತ್ರಿ ಮಾಲ್ ಗೆ ಬೀಗ ಹಾಕುವಂತ ಪ್ರಹಸನದ ಭಾಗವಾಗಿ ಮತ್ತೊಂದು ಘಟನೆ ನಡೆದಿದೆ.ಇದಕ್ಕೆ ಕೊನೆ ಎಂದೋ ಎನ್ನುವುದು ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿದಿದೆ.ಕೆಲವು ಮೂಲಗಳ ಪ್ರಕಾರ ಇದು ಮುಗಿಯದ ಅಧ್ಯಾಯ ಎನಿಸುತ್ತದೆ.ಮಾಲ್ ಗೆ ಹಾಕಿರುವ ಬೀಗ ಶೀಘ್ರವೇ ತೆರೆಯುವ ಸಾಧ್ಯತೆಗಳಿವೆ.ಈ ಬಗ್ಗೆ ಮಾಲ್ ಆಡಳಿತ ಕೋರ್ಟ್ ಮೊರೆ ಹೋಗಲು ಸಿದ್ಧತೆ ಮಾಡಿಕೊಂಡಿದೆ ಕೂಡ.ಇದು ಇವತ್ತಷ್ಟೆ ಅಲ್ಲ ನಾಳೆಯು ಮುಂದುವರೆಯಲಿದೆ ಎನ್ನುವುದು ಕೂಡ ಸ್ಪಷ್ಟ. ಬಿಬಿಎಂಪಿ ಮತ್ತು ಮಂತ್ರಿ ಮಾಲ್ ಆಡಳಿತದ ನಡುವೆ ನಡೆಯುತ್ತಿರುವ ಈ ಹಗ್ಗಜಗ್ಗಾಟ ಹಾಗು ಮಕ್ಕಳಾಟಕ್ಕೆ ಅಂತ್ಯ ಸಿಗಬೇಕು ಎಂದ್ರೆ ಕಟ್ಟುನಿಟ್ಟಾದ ಕ್ರಮ ಜಾರಿಯಾಗಬೇಕು ಅಷ್ಟೇ.

Spread the love

Leave a Reply

Your email address will not be published. Required fields are marked *