BBMP ಯುಗಾಂತ್ಯ-ಗ್ರೇಟರ್ ಬೆಂಗಳೂರು ಯುಗಾರಂಭ..GBA ಗೆ ತುಷಾರ ಗಿರಿನಾಥ್ ಬಾಸ್…!

ಬೆಂಗಳೂರಿಗರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ ) ಜತೆಗೆ ಕಾಯ್ದುಕೊಂಡಿದ್ದ ದಶಕದವರೆಗಿನ  ಭಾವನಾತ್ಮಕ ಸಂಬಂಧದ ಕೊಂಡಿ ಇವತ್ತೇ ಶಾಶ್ವತವಾಗಿ ಕಳಚಿ ಬೀಳಲಿದೆ.ನಾಳೆಯಿಂದ ಎಲ್ಲವೂ ಹೊಸ ಹೊಸದು…ಯಾವ ಹಳೆಯ ಆಡಳಿತಾತ್ಮಕ ವಿಚಾರಗಳು ಅಸ್ಥಿತ್ವದಲ್ಲಿ ಇರುವುದೇ ಇಲ್ಲ.. ಏಕೆಂದರೆ ನಾಳೆಯಿಂದ ಬೆಂಗಳೂರಿನ ನಾಗರಿಕರ ಪಾಲಿಗೆ ಬಿಬಿಎಂಪಿ ಒಂದು ಕನಸಾಗಿಯೇ ಉಳಿಯಲಿದೆ. ಶಾಶ್ವತಕ್ಕೂ ನೇಪಥ್ಯಕ್ಕೆ ಸರಿಯಲಿದೆ ಬಿಬಿಎಂಪಿ ಇತಿಹಾಸ. ನಾಳೆಯಿಂದ ಬಿಬಿಎಂಪಿ ಹೆಸರೇಳಲು ಅವಕಾಶ ಸಿಗುವುದಿಲ್ಲ.ಕಾರಣ, ಬಿಬಿಎಂಪಿಯ ಯುಗಾಂತ್ಯ-ಹೊಸ ಆಡಳಿತದ ಯುಗಾರಂಭ. ಹೌದು..ಬೆಂಗಳೂರಿನ ಆಡಳಿತದಲ್ಲಿ  ಹೊಸ ಅಧ್ಯಾಯ ಶುರುವಾಗಲಿದೆ. ಹಳೆಯ ಆಡಳಿತ … Read more

bBMP ಅಂಗಳದಲ್ಲಿ 24 ಕೋಟಿ ಹಗರಣದ ಸದ್ದು-ಅಕ್ರಮ ಸಾಬೀತಾದ್ರೆ ಜೈಲ್  ಫಿಕ್ಸ್..!

ಕೆಲಸ ಮಾಡದೆಯೇ 25 ಕೋಟಿ ಬಿಲ್ ಮಂಜೂರು: ದಾಸರಹಳ್ಳಿ ವಲಯ ಕಾರ್ಯಪಾಲಕ ಅಭಿಯಂತರ( EXECUTIVE ENGINEER) ಯದುಕೃಷ್ಣ,ಗುತ್ತಿಗೆದಾರರಾದ ( CONTRACTORS) ಅಭಿಜಿತ್, ತೇಜೇಗೌಡ ಮತ್ತು ನಾರಾಯಣ ಗೌಡ ಸಂಕಷ್ಟ..! ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಂಗಳದಲ್ಲಿ ಮತ್ತೊಂದು ಬೃಹತ್ ಹಗರಣ ಸುದ್ದಿ ಮಾಡಿದೆ.ಬಿಬಿಎಂಪಿ ದಾಸರಹಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ 25 ಕೋಟಿ ಮೊತ್ತದ  ಬೃಹತ್ ಹಗರಣದ ಸಂಬಂಧ ತನಿಖೆಗೆ ಆದೇಶಿಸಲಾಗಿದೆ. ಕೆಲಸವನ್ನೇ ಮಾಡದೆ ಗುತ್ತಿಗೆದಾರರಿಗೆ ಬಿಲ್ ಪಾವತಿಸಿದ್ದ ಆಪಾದನೆ ದಾಸರಹಳ್ಳಿ ವಲಯದ ಎಕ್ಸಿಕ್ಯೂಟಿವ್ ಎಂಜಿನಿಯರ್ ಯದುಕೃಷ್ಣ … Read more

EXCLUSIVE…ಜನರ ದುಡ್ಡು…ಕಾಂಗ್ರೆಸ್ ಸರ್ಕಾರದ ಜಾತ್ರೆ…ಗ್ಯಾರಂಟಿ ಅನುಷ್ಟಾನ ಸಮಿತಿಯ ತಿಂಗಳ ಖರ್ಚು 17, 30,800 ರೂ..

ಬೆಂಗಳೂರು:ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು. ರಾಜ್ಯದ ಬೊಕ್ಕಸವನ್ನು ಬರಿದು ಮಾಡಿರುವುದಷ್ಟೇ ಅಲ್ಲ ಆರ್ಥಿಕತೆಯನ್ನು ದಿವಾಳಿ ಮಾಡಿವೆ ಎನ್ನುವ ಆಪಾದನೆ ವಿಪಕ್ಷಗಳಿಂದಷ್ಟೇ ಅಲ್ಲ, ಅದಕ್ಕಾಗಿ ತಮ್ಮ ಜೇಬಿನಿಂದ ಹಣ ಪಾವತಿಸುತ್ತಿರುವ ತೆರಿಗೆದಾರನಿಂದಲೂ ಕೇಳಿಬಂದಿದೆ.ಗ್ಯಾರಂಟಿಗೇ ಜನರ ತೆರಿಗೆ ಹಣದ ರೂಪದಲ್ಲಿ ನೂರಾರು ಕೋಟಿ ಖರ್ಚಾಗುತ್ತಿರುವ ವೇಳೆಯೇ ಮತ್ತೊಂದು ಸ್ಪೋಟಕ ಎನ್ನುವಂತ ಸುದ್ದಿ ಹೊರಬಿದ್ದಿದೆ.ಇದನ್ನು ಕೇಳಿ ತೆರಿಗೆದಾರರು ಮತ್ತಷ್ಟು ಶಾಕ್ ಆದರೂ ಆಶ್ವರ್ಯವಿಲ್ಲ.ಏಕೆಂದರೆ ಇದು ಗ್ಯಾರಂಟಿ ಯೊಜನೆ ಅನುಷ್ಟಾನಕ್ಕೇನೆ ಒಂದು ಕಮಿಟಿ..ಅದಕ್ಕೊಬ್ಬ ಅಧ್ಯಕ್ಷ..ಅದಕ್ಕೆ ಒಂದಷ್ಟು ಉಪಾಧ್ಯಕ್ಷರು,ಅವರ ಕೆಳಗೆ ಇನ್ನೊಂದಷ್ಟು ಜನ,….ಹೀಗೆ ಹನುಮನ … Read more

“ವೈದೇಹಿ ಆಸ್ಪತ್ರೆ” ಆಸ್ತಿ ತೆರಿಗೆ ಕಡತ ಗೌಪ್ಯ ಪ್ರಕರಣ: ಕಂದಾಯಾಧಿಕಾರಿ ಬಸವಾಚಾರಿಗಿಂತ ಮುನ್ನ ಕಡತ ಮುಚ್ಚಿಟ್ಟಿದ್ರಂತೆ AC ಬಸವರಾಜ ಮಗಿ..!?

2024ರ ಅಂತ್ಯದಲ್ಲಿ ಕಂದಾಯಾಧಿಕಾರಿಯಾಗಿ ಬಸವಾಚಾರಿ ಚಾರ್ಜ್ …ಅದಕ್ಕೂ  ಮುನ್ನ ಆ ಹುದ್ದೆಯಲ್ಲಿದ್ದವರು ಬಸವರಾಜ ಮಗಿ ಅಂತೆ..ತನಿಖೆಯಲ್ಲಿ ದೃಢ.. ಬೆಂಗಳೂರು:50 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡತವನ್ನು ಬಚ್ಚಿಟ್ಟು ಕರ್ತವ್ಯಲೋಪ ಎಸಗಿದ ವೈಟ್ ಫೀಲ್ಡ್ ಕಂದಾಯಾಧಿಕಾರಿ ಬಸವಾಚಾರಿ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಮನಿಷ್ ಮೌದ್ಗಿಲ್ ಅವರು ಪತ್ತೆ ಮಾಡಿದ ಈ ಪ್ರಕರಣದಲ್ಲಿ ಕಡತವನ್ನು ಬಚ್ಚಿಟ್ಟಿದ್ದು ಬಸವಾಚಾರಿ ಮಾತ್ರವಲ್ಲ ಅವರ ಸ್ಥಾನದಲ್ಲಿ ಹಿಂದೆ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಅಧಿಕಾರಿಯು ಭಾಗಿಯಾಗಿರುವುದು ಗೊತ್ತಾಗಿದೆ.ಈ ಹಿನ್ನಲೆಯಲ್ಲಿ ಬಸವಾಚಾರಿ … Read more

EXCLUSIVE: IAS ಮನಿಷ್ ಮೌದ್ಗಿಲ್ ಬಲೆಗೆ ಬಿದ್ದ BBMP ಬೃಹತ್ ತಿಮಿಂಗಲ rOಬಸವಾಚಾರಿ..

50 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ವೈದೇಹಿ ಆಸ್ಪತ್ರೆ ಕಡತವನ್ನೇ 1 ವರ್ಷದಿಂದ ಬಚ್ಚಿಟ್ಟುಕೊಂಡಿದ್ದ ಖತರ್ನಾಕ್ ಕಂದಾಯಾಧಿಕಾರಿ ಬಸವಾಚಾರಿ..!! ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬೊಕ್ಕಸ ತುಂಬೊಕ್ಕೆ ಕಂದಾಯ ವಿಭಾಗದ ವಿಶೇಷ ಆಯುಕ್ತ ಮನಿಷ್ ಮೌದ್ಗಿಲ್ ಅಹಿರ್ನಿಷಿ ಪ್ರಯತ್ನ ಮಾಡ್ತಿದಾರೆ.ಇದರಿಂದ ಪಾಲಿಕೆ ಬೊಕ್ಕಸಕ್ಕೆ ಸಾವಿರಾರು ಕೋಟಿ ಸಂದಾಯವಾಯಿತು. ಮನಿಷ್ ಮೌದ್ಗಿಲ್ ಅವರ ಕಾರ್ಯಕ್ಷಮತೆಯಿಂದ ಪಾಲಿಕೆ ಇತಿಹಾಸದಲ್ಲೇ ಸಂಗ್ರಹವಾಗದಷ್ಟು ಆಸ್ತಿ ತೆರಿಗೆ   ಬೊಕ್ಕಸ ಸೇರಿತು.ದಶಕಗಳಿಂದಲೂ ಎಮ್ಮೆ ಚರ್ಮ ದಂತಾಗಿದ್ದ ಕಂದಾಯ ವಿಭಾಗದ ಅಧಿಕಾರಿಗಳು ಮೈ ಕೊಡವಿ ನಿಲ್ಲುವಂತೆ … Read more

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ 830 ವಾಣಿಜ್ಯ ಕಟ್ಟಡಗಳು ಸೀಜ್..

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ 830 ವಸತಿಯೇತರ ಕಟ್ಟಡಗಳಿಗೆ ಬೀಗ ಮುದ್ರೆ ಹಾಕಲಾಗಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತರಾದ  ಮುನೀಶ್ ಮೌದ್ಗಿಲ್ ರವರು ತಿಳಿಸಿದ್ದಾರೆ. ಪಾಲಿಕೆಯ 8 ವಲಯಗಳಲ್ಲಿ ಅತಿ ಹೆಚ್ಚು ಬಾಕಿ ಆಸ್ತಿ ತೆರಿಗೆ ಪಾವತಿಸದ ಸುಸ್ತಿದಾರರಿಂದ ತ್ವರಿತಗತಿಯಲ್ಲಿ ಆಸ್ತಿ ತೆರಿಗೆಯನ್ನು ಸಂಗ್ರಹಿಸಬೇಕು. ಈ ಪೈಕಿ ಆಯಾ ವಲಯಗಳಲ್ಲಿ ಹೆಚ್ಚು ಬಾಕಿ ಉಳಿಸಿಕೊಂಡಿರುವ ವಸತಿಯೇತರ ಕಟ್ಟಡಗಳಿಗೆ ಬೀಗ ಮುದ್ರೆ ಹಾಕಿ ತ್ವರಿತಗತಿಯಲ್ಲಿ ಬಾಕಿ ಆಸ್ತಿ ತೆರಿಗೆಯನ್ನು ಸಂಗ್ರಹಿಸಲು … Read more

Puneeth rajkumar award: ನ್ಯೂಸ್ ಚಾನೆಲ್‌ಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 12 ಕ್ಯಾಮೆರಾಮನ್ ಮಿತ್ರರಿಗೆ ಪುನೀತ್ ರಾಜ್‌ಕುಮಾರ್ ಪ್ರಶಸ್ತಿ

ಕನ್ನಡದ ವಿವಿಧ ನ್ಯೂಸ್ ಚಾನೆಲ್ ಗಳ 12 ಕ್ಯಾಮೆರಾಮನ್ ಗಳಿಗೆ ನಾಳೆ ಪ್ರಶಸ್ತಿ ಪ್ರಧಾನ ಬೆಂಗಳೂರು: ಕ್ಯಾಮೆರಾದ ಮುಂದೆ ರಿಪೋರ್ಟರ್ ಗಳನ್ನು ಸುಂದರವಾಗಿ ಆಕರ್ಷಕವಾಗಿ ಎಲ್ಲಕ್ಕಿಂತ ಪರಿಣಾಮಕಾರಿಯಾಗಿ ತೋರಿಸುವಂಥ ನಿರ್ಣಾಯಕ ಹಾಗು ಮಹತ್ವದ ಕೆಲಸ ಮಾಡುವಂಥವರು ನಮ್ಮ ನ್ಯೂಸ್ ಚಾನೆಲ್ ನ ಕ್ಯಾಮೆರಾಮನ್ ಗಳು.ಆದರೆ ದುರಾದೃಷ್ಟಕ್ಕೆ ರಿಪೋರ್ಟರ್ ಗಳನ್ನು ಗುರುತಿಸಿ ಸನ್ಮಾನಿಸುವ ಕೆಲಸ ನಡೆಯುತ್ತಲೇ ಇದೆ.ಆದ್ರೆ ಕ್ಯಾಮೆರಾಮನ್ ಗಳನ್ನು ಗುರುತಿಸುವವರೇ ಇಲ್ಲವಾಗಿದೆ.ಹಾಗಾಗಿ ಅವರಲ್ಲಿ ಪ್ರತಿಭೆ ಇದ್ದರೂ ಅದು ಕಾಡ ಬೆಳದಿಂಗಳಂತೆ ನಿಷ್ಪ್ರಯೋಜಕವಾಗುತ್ತಿದೆ. ಆದರೆ ನ್ಯೂಸ್ ಚಾನೆಲ್ ಕ್ಯಾಮೆರಾಮನ್ … Read more

EXCLUSIVE… BBMP ಯಿಂದ “ಬೀದಿ ನಾಯಿ ಕಲ್ಯಾಣ” ವೋ..!! “ಲೂಟಿ”ಯೋ..?! 1 ಮೈಕ್ರೋಚಿಪ್-195 ರೂ: 1,84,671 ಬೀದಿನಾಯಿ: 3 ಕೋಟಿ 81 ಲಕ್ಷ ವೆಚ್ಚ.

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಂಗಳದಲ್ಲಿ ಹಗರಣದ ಸ್ವರೂಪ ಪಡೆಯುವ ಶಂಕೆ ಮೂಡಿಸಿರುವ  ಮತ್ತೊಂದು ಸುದ್ದಿ ಸದ್ದು ಮಾಡಿದೆ. ಬೀದಿನಾಯಿಗಳಿಗೆ ಅಳವಡಿಸಲು ಹೊರಟಿರುವ ಮೈಕ್ರೋಚಿಪ್ ಈಗ ಹಗರಣದ ಸ್ವರೂಪ ಪಡೆದುಕೊಳ್ಳುತ್ತಿದೆ.ಅನಗತ್ಯ ಹಾಗೂ ಅಪಾಯಕಾರಿಯಾಗಿರುವ ಮೈಕ್ರೋಚಿಪ್ ಅಳವಡಿಕೆ ನಿಯಮಬಾಹಿರ ಕೃತ್ಯ ಎಂದು ಪ್ರಾಣಿಪ್ರಿಯರು ಈಗ ವರಾತ ತೆಗೆದಿದ್ದಾರೆ. ನಾಯಿಗಳ ಸೆನ್ಸಸ್ ನಲ್ಲಿ ನಡೆಯಿತೆನ್ನಲಾದ ಹಗರಣದ ನಂತರ ಪಶುಪಾಲನಾ ಇಲಾಖೆಯಲ್ಲಿ ನಡೆಯೊಕ್ಕೆ ಹೊರಟಿರುವ ಹಗರಣ ಇದೆನ್ನಲಾಗಿದೆ. ಬೃಹತ್ತಾಗಿ ಬೆಳೆದಿರುವ ಬೆಂಗಳೂರಿನಲ್ಲಿ  ಬೀದಿನಾಯಿಗಳು ಎಷ್ಟಿವೆ ಎಂದು ಕೇಳಿದ್ರೆ ಕರಾರುವಕ್ಕಾಗಿ ಹೇಳೊಕ್ಕೆ … Read more