ನಾಳೆ ಪತ್ರಕರ್ತ ಪುಟ್ಟಪ್ಪ ಸಾರಥ್ಯದ “ಪೊಲಿಟಿಕಲ್-360” ಲಾಂಚ್

ಮೈಸೂರಿನ ಪತ್ರಕರ್ತ ಮಿತ್ರ ಪುಟ್ಟಪ್ಪ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾನೆ.ಮೊದಲು ಆತನಿಗೊಂದು ಆಲ್ ದಿ ಬೆಸ್ಟ್…ಅಂದ್ಹಾಗೆ ಪೊಲಿಟಿಕಲ್ 360 ಎನ್ನುವ ಡಿಜಿಟಲ್ ಫ್ಲಾಟ್ ಫಾರ್ಮ್ ನ್ನೇ ಚಾನೆಲ್ ಮಾಡ್ಲಿಕ್ಕೆ ಹೋಗಿ ತನ್ನದಲ್ಲದ ತಪ್ಪಿಗೆ ವಿರೋಧ-ವಿವಾದ ಎಲ್ಲವನ್ನು ಮೈಮೇಲೆ ಎಳೆದುಕೊಂಡು, ಬೈಗುಳ-ಹಿಡಿಶಾಪ ಪಡೆದುಕೊಂಡು ಕೆಲಕಾಲ ಅಜ್ನಾತವಾಸಕ್ಕೆ ತೆರಳಿದ್ದ ಪುಟ್ಟಪ್ಪ ಅದು ಕಲಿಸಿಕೊಟ್ಟ ಜೀವನಾನುಭವದಿಂದ ಸಾಕಷ್ಟು ಮಾಗಿ ಇದೀಗ ಮೈ ಕೊಡವಿ ಎದ್ದುನಿಂತಿದ್ದಾನೆ.ಈ ಬಾರಿ ಗೆಲ್ಲಲೇಬೇಕೆನ್ನುವ ಮಹತ್ವಾಕಾಂಕ್ಷೆ-ಛಲ-ಆತ್ಮವಿಶ್ವಾಸ-ಉಮೇದು-ಇರಾದೆ-ಕನಸು ಎಲ್ಲವನ್ನು ಇಟ್ಟುಕೊಂಡು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾನೆ.ಅದು ನಾಳೆಯೇ( 08-05-2026) ಉಡ್ಡಯನಗೊಳ್ಳಲಿದೆ..ಅಂದ್ಹಾಗೆ ಆತನ … Read more

INSIDE THE TRUTH….ಮುರಿದುಬಿದ್ದ ಮಾತುಕತೆ- ಬೇಡಿಕೆಗಳಿಗೆ ಸೊಪ್ಪಾಕದ ಸರ್ಕಾರ-14 ತಿಂಗಳ ಹಿಂಬಾಕಿ 700 ಕೋಟಿ ಬಿಡುಗಡೆಗಷ್ಟೇ ಸರ್ಕಾರ ಒಪ್ಪಿಗೆ…

ಸಾರಿಗೆ ಹೋರಾಟಗಳ ಇತಿಹಾಸದಲ್ಲಿ ಕರಾಳ ಅಧ್ಯಾಯ- ವೇತನ ಪರಿಷ್ಕರಣೆಯೂ ಇಲ್ಲ:ಬೇಡಿಕೆ ಡಿಕೆಗಳ ಈಡೇರಿಕೆನೂ ಇಲ್ಲ..ಪರಸ್ಪರರ ಮೇಲೆ ದೂರು-ಸಂಘಟನೆಗಳಲ್ಲಿನ ಒಡಕಿಗೆ ಸಿಎಂ ಅಚ್ಚರಿ..ಮಾತುಕತೆ ವೈಫಲ್ಯಕ್ಕೆ ಸಂಘಟನೆಗಳ ನಡುವಿನ ಬಿರುಕು-ಭಿನ್ನಾಭಿಪ್ರಾಯ-ಸಂಘರ್ಷವೇ ಕಾರಣವಾಗಿದ್ದು ದುರಂತ-ದೌರ್ಭಾಗ್ಯಪೂರ್ಣ. ಬೆಂಗಳೂರು: ಸಾರಿಗೆ ಮುಷ್ಕರ ನಡೆಯೋದಾಗ್ಲಿ, ನಡೆದರೂ ಹೆಚ್ಚಿನ ಸಂಖ್ಯೆಯ ಸಾರಿಗೆ ಸಿಬ್ಬಂದಿ ಅದರಲ್ಲಿ ಪಾಲ್ಗೊಳ್ಳುವುದಾಗಲಿ ಬಹುತೇಕ ಡೌಟ್‌ ಎನಿಸ್ತದೆ.ಮುರಿದುಬಿದ್ದ ಮಾತುಕತೆ, ಹೈಕೋರ್ಟ್ ನ ಕಟ್ಟಪ್ಪಣೆ ಕೂಡ ಇದಕ್ಕೆ ಪ್ರಮುಖ.ಅದೆಲ್ಲವನ್ನು ಮೀರಿ  ಮಾತುಕತೆಯ ವೈಫಲ್ಯಕ್ಕೆ ಕಾರಣವಾಯಿತೆನ್ನಲಾದ ಸಂಗತಿಗಳು  ಸಾರಿಗೆ ಹೋರಾಟದ ಇತಿಹಾಸದಲ್ಲಿ ಅತ್ಯಂತ ಕೆಟ್ಟದಾಗಿ ನೆನಪಿಸಿಕೊಳ್ಳಬೇಕಾದ ಕ್ಷಣಗಳಾಗಿ … Read more

ಶೇಕಡಾ 25 ಕೊಡ್ಲೇಬೇಕು…ಶೇಕಡಾ 8-10 ಕ್ಕೆ ನಾವ್ ರೆಡಿ…ಶೇಕಡಾ 12ಕ್ಕೆ ಫೈನಲ್ ಸಾಧ್ಯತೆಯಂತೆ..!?

ಬೆಂಗಳೂರು:ನಾಳೆಯಿಂದ ಸಾರಿಗೆ ಮುಷ್ಕರ ನಡೆಯುತ್ತಾ..? ಸಂಚಾರಿ ನಾಡಿ ಸಾರಿಗೆ ವ್ಯವಸ್ಥೆ ಸ್ಥಬ್ದವಾಗುತ್ತಾ..? 23 ಸಾವಿರ ಬಸ್ ಗಳು ರಸ್ತೆಗಿಳಿಯೊಲ್ವಾ..? 1.2 ಲಕ್ಷ ಸಿಬ್ಬಂದಿ ಕೆಲಸ ಮಾಡೊಲ್ವಾ… ಕೋಟ್ಯಾಂತರ ಗಳಿಕೆ ಖೋತವಾಗುತ್ತಾ..? ಇಷ್ಟೆಲ್ಲಾ ಪ್ರಶ್ನೆಗಳಿಗೆ ಇವತ್ತೆ ಸ್ಪಷ್ಟ ಚಿತ್ರಣ ದೊರೆಯಲಿದೆ.ಈ ನಡುವೆ ಶೇಕಡಾ 25 ರಷ್ಟು ವೇತನ ಪರಿಷ್ಕರಣೆ ಮಾಡಲೇಬೇಕೆನ್ನುವುದು ಸಾರಿಗೆ ಸಂಘಟನೆಗಳ ಬಿಗಿಪಟ್ಟಾಗಿದ್ರೆ ಶೇಕಡಾ 8 ರಿಂದ 10ಕ್ಕೆ ನಾವ್ ರೆಡಿ ಅನ್ತಿದೆಯಂತೆ ಸರ್ಕಾರ..ಇಂದು ಸಂಜೆ-ರಾತ್ರಿವರೆಗೆ ಜಗ್ಗಾಡಿ, ತೂಗಿ ಅಳೆದು ಶೇಕಡಾ 12-13 ಕ್ಕೆ ವೇತನ ಪರಿಷ್ಕರಣೆ … Read more

EXCLUSIVE…ಜನರ ದುಡ್ಡು…ಕಾಂಗ್ರೆಸ್ ಸರ್ಕಾರದ ಜಾತ್ರೆ…ಗ್ಯಾರಂಟಿ ಅನುಷ್ಟಾನ ಸಮಿತಿಯ ತಿಂಗಳ ಖರ್ಚು 17, 30,800 ರೂ..

ಬೆಂಗಳೂರು:ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು. ರಾಜ್ಯದ ಬೊಕ್ಕಸವನ್ನು ಬರಿದು ಮಾಡಿರುವುದಷ್ಟೇ ಅಲ್ಲ ಆರ್ಥಿಕತೆಯನ್ನು ದಿವಾಳಿ ಮಾಡಿವೆ ಎನ್ನುವ ಆಪಾದನೆ ವಿಪಕ್ಷಗಳಿಂದಷ್ಟೇ ಅಲ್ಲ, ಅದಕ್ಕಾಗಿ ತಮ್ಮ ಜೇಬಿನಿಂದ ಹಣ ಪಾವತಿಸುತ್ತಿರುವ ತೆರಿಗೆದಾರನಿಂದಲೂ ಕೇಳಿಬಂದಿದೆ.ಗ್ಯಾರಂಟಿಗೇ ಜನರ ತೆರಿಗೆ ಹಣದ ರೂಪದಲ್ಲಿ ನೂರಾರು ಕೋಟಿ ಖರ್ಚಾಗುತ್ತಿರುವ ವೇಳೆಯೇ ಮತ್ತೊಂದು ಸ್ಪೋಟಕ ಎನ್ನುವಂತ ಸುದ್ದಿ ಹೊರಬಿದ್ದಿದೆ.ಇದನ್ನು ಕೇಳಿ ತೆರಿಗೆದಾರರು ಮತ್ತಷ್ಟು ಶಾಕ್ ಆದರೂ ಆಶ್ವರ್ಯವಿಲ್ಲ.ಏಕೆಂದರೆ ಇದು ಗ್ಯಾರಂಟಿ ಯೊಜನೆ ಅನುಷ್ಟಾನಕ್ಕೇನೆ ಒಂದು ಕಮಿಟಿ..ಅದಕ್ಕೊಬ್ಬ ಅಧ್ಯಕ್ಷ..ಅದಕ್ಕೆ ಒಂದಷ್ಟು ಉಪಾಧ್ಯಕ್ಷರು,ಅವರ ಕೆಳಗೆ ಇನ್ನೊಂದಷ್ಟು ಜನ,….ಹೀಗೆ ಹನುಮನ … Read more

ಈ ಸುದ್ದಿ ನಮ್ಮಲ್ಲಿ ಮಾತ್ರ…POLITICAL EXCLUSIVE… ಕಾಂಗ್ರೆಸ್ ಗೆ ಗುಡ್ ಬೈ..! ಬಿಜೆಪಿಗೆ ಜೈ..ಜೈ.. ! 60 ಶಾಸಕರಿಗೆ ಗಾಳ….! 42 ಶಾಸಕರ ಲೀಸ್ಟ್ ರೆಡಿ..! ನವೆಂಬರ್ ಗೆ “ಡಿಕೆಶಿ” ಜಂಪಿಂಗ್ ಪಕ್ಕಾ..!

ಬೆಂಗಳೂರು:ಎಲ್ಲವೂ  ಅಂದಾಜಿಸುತ್ತಿರುವ  ರೀತಿಯೇ ಆದಲ್ಲಿ….ಹಾಕಲಾಗುತ್ತಿರುವ ಲೆಕ್ಕಾಚಾರಗಳ ಪ್ರಕಾರವೆ ನಡೆದರೆ…ರಾಜ್ಯ ರಾಜಕೀಯ ಇತಿಹಾಸದಲ್ಲಿ ಇದೊಂದು ದೊಡ್ಡ ಸ್ಪೋಟಕ ಸುದ್ದಿಯಾಗೋದರಲ್ಲಿ ಅನುಮಾನವೇ ಇಲ್ಲ..ಏಕಂದ್ರೆ ಸುದ್ದಿಯ ಸ್ವರೂಪವೇ ಅಷ್ಟೊಂದು ಅಚ್ಚರಿ-ಗಾಬರಿ-ಸಂಶಯದ ಅಂಶಗಳನ್ನು ಒಳಗೊಂಡಿದೆ.ರಾಜಕೀಯದಲ್ಲಿ ಏನ್ ಬೇಕಾದ್ರೂ ಆಗಬಹುದು..ಆಗಿದೆ ಕೂಡ ಎನ್ನುವಂತ ಸನ್ನಿವೇಶದಲ್ಲಿ ಅಂದಾಜಿಸುತ್ತಿರುವ ರೀತಿಯಲ್ಲಿಯೇ ಎಲ್ಲಾ ನಡೆದರೂ ಅಚ್ಚರಿ ಪಡಬೇಕಿಲ್ಲವೇನೋ..?   ರಾಜಕೀಯವೇ ಹೀಗೆ…ಹಾಗೆ…ಯಾವ್ ಸನ್ನಿವೇಶದಲ್ಲಿ ಏನ್ ಆಗ್ತದೆನ್ನುವುದನ್ನು ಊಹಿಸಲಿಕ್ಕೆ ಆಗೊಲ್ಲ..ಹೀಗೆಯೇ ಆಗುತ್ತೆ ಎಂದು ಖಚಿತವಾಗಿ ಹೇಳಲಿಕ್ಕೂ ಬರೊಲ್ಲ..ಇಲ್ಲಿ ಎಲ್ಲವೂ ಆಕ್ಷಿಡೆಂಡಲ್.. ಅನಿರೀಕ್ಷಿತ..ಆದರೆ ಆಗೋದೆಲ್ಲದರ ಹಿಂದೆ ಪೂರ್ವಭಾವಿ ಸಿದ್ಧತೆ ಇದ್ದೇ ಇರುತ್ತದೆ.ಅದು … Read more

EXCLUSIVE.. ಹೊಸ ವರ್ಷದಂದೇ ಸರ್ಕಾರದಿಂದ 4 ಸಾರಿಗೆ ನಿಗಮಗಳಿಗೆ 2,000 ಕೋಟಿ ಬಂಪರ್ ಗಿಫ್ಟ್..

ವಾ. ಸಾರಿಗೆ-646 ಕೋಟಿ, ಕ.ರಾ.ರ.ಸಾ.ನಿಗಮ-623.80 ಕೋಟಿ, ಬೆಂ.ಮ.ಸಾ.ಸಂಸ್ಥೆ-589.20 ಕೋಟಿ, ಕ.ಕ.ರಾ.ರ.ಸಾರಿಗೆಗೆ 141 ಕೋಟಿ ಬಂಪರ್. ಬೆಂಗಳೂರು: ಬಿಎಂಟಿಸಿ,ಕೆಎಸ್ ಆರ್ ಟಿಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಗೆ ಸರ್ಕಾರ ಹೊಸ ವರ್ಷದ ಬಂಪರ್ ಗಿಫ್ಟ್ ನೀಡಿದೆ. 2025ನ್ನು ಸಂಭ್ರಮದಿಂದ ಆಚರಿಸಿಕೊಳ್ಳಲು ಅನುವಾಗುವಂತೆ ನಾಲ್ಕು ನಿಗಮಗಳಿಗೆ 2000 ಕೋಟಿ ಹಣ ಬಿಡುಗಡೆ ಮಾಡಿದೆ.ಈ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.ಪರಿಸ್ಥಿತಿ ಹೀಗೆಯೇ ಮುಂದುವ ರುದ್ರೆ … Read more

POLITICAL EXCLUSIVE..”ಡಿ.ಕೆ” ಗೆ “ಠಕ್ಕರ್” ಕೊಡಲು “ಸತೀಶ್ ಜಾರಕಿಹೊಳಿ” ಹೆಸ್ರು “ತೇಲಿ”ಬಿಟ್ಟವರು “ಇವರೇ”ನಾ..? ಏಕೆ..?

ಬೆಂಗಳೂರು:ರಾಜ್ಯ ರಾಜಕಾರಣ ದಿನಕ್ಕೊಂದು ತಿರುವು ಪಡೆಯುತ್ತಿದೆ..ಮಗ್ಗಲು ಬದಲಿಸುತ್ತಿದೆ.ದಸರಾ ಮುಗಿದ ಮೇಲೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆಯುತ್ತಿದೆ ಎಂಬ ಭವಿಷ್ಯವಾಣಿ ಬಗ್ಗೆನೇ ಎಲ್ಲರ ಕುತೂಹಲ ನೆಟ್ಟಿದೆ.ಆ ಕ್ಷಿಪ್ರ ರಾಜಕೀಯ ಬೆಳವಣಿಗೆ ಏನು ಎನ್ನುವ ಕುತೂಹಲದ ಬಗ್ಗೆ ಎಲ್ಲರೂ ತಲೆಕೆಡಿಸಿಕೊಂಡಿ ರುವಾಗಲೆ ಮತ್ತೊಂದು ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ದಸರಾ ಬಳಿಕ ರಾಜ್ಯ ರಾಜಕಾರಣ ಮತ್ತೊಂದು ಮಗ್ಗಲು ಬದಲಿಸಲಿದೆ ಎನ್ನುವ  ಭವಿಷ್ಯ ವಾಣಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರಾ..? ಅಥವಾ ಬಲವಂತವಾಗಿ ಅವರಿಂದ ಕೊಡಿಸಲಾಗುತ್ತಾ ಎನ್ನುವುದರತ್ತಲೇ … Read more

ಸಿಂ ಅಂಕಲ್, ನಮ್ಗೆ ಶಾಲೆಗೆ ಹೋಗ್ಲಿಕ್ಕೆ ಬಸ್ ಬಿಡಿಸಿ.ಶಾಲಾ ಬಾಲಕಿಯಿಂದ ಮುಖ್ಯಮಂತ್ರಿಗೆ ಭಾವನಾತ್ಮಕ ಮನವಿ

 ಬೆಂಗಳೂರಿನ ಹೊರವಲಯದಿಂದ ಅದೆಷ್ಟೋ ಪ್ರದೇಶಗಳಿಗೆ ಇನ್ನೂ BMTC ಬಸ್ ಇಲ್ಲವಂತೆ..? ಬೆಂಗಳೂರು: ಇದು ನಿಜಕ್ಕೂ ಮನಕಲಕುವ ಸುದ್ದಿ.ಓದುವ ಹಂಬಲ ಬೆಟ್ಟದಷ್ಟಿದ್ದರೂ ಸರಿಯಾದ ಸಾರಿಗೆ ವ್ಯವಸ್ಥೆಯಿಲ್ಲದೆ ಪರಿತಪಿಸುತ್ತಿರುವ ವಿದ್ಯಾರ್ಥಿನಿಯೋರ್ವಳು ತನ್ನಂತದ್ದೇ ಸಮಸ್ಯೆ ಎದುರಿಸುತ್ತಿರುವ ಹತ್ತಾರು ಮಕ್ಕಳ ಸಮಸ್ಯೆ ಬಗೆಹರಿಸಿಕೊಡಿ ಎಂದು ಮಾನ್ಯ ಮುಖ್ಯಮಂತ್ರಿ, ಬಿಎಂಟಿಸಿ ಎಂಡಿಗೆ ಬರೆದಿರುವ ವಿದ್ಯಾರ್ಥಿ ಕಾಳಜಿಯ ಪತ್ರ ಬರೆದಿರುವ ಸ್ಟೋರಿ. ಇದು ಏಕೆ ಬಹುಮುಖ್ಯ ಎನಿಸುತ್ತೆ ಎಂದ್ರೆ ಬಿಎಂಟಿಸಿ ಬಸ್ ಸೌಕರ್ಯ ಇದ್ದ ಹೊರತಾಗ್ಯೂ ಈ ಭಾಗಕ್ಕೆ ಮಾತ್ರ ಬಸ್ ಸೌಕರ್ಯ ಕಲ್ಪಿಸಲಾಗಿಲ್ಲ. ವಿದ್ಯಾರ್ಥಿಗಳಿಗೆ … Read more

MLA N.A. HARRIS NEW CHAIRMAN TO BDA..!? BDA ಅಧ್ಯಕ್ಷಗಾದಿಗೆ MLA ಎನ್.ಎ ಹ್ಯಾರೀಸ್ ಹೆಸರು ಫೈನಲ್..?!

CM ಸಿದ್ದರಾಮಯ್ಯ, DCM ಡಿ.ಕೆ.ಶಿವಕುಮಾರ್ ಗೆ ಅತ್ಯಾಪ್ತರಾಗಿರುವ ಹ್ಯಾರೀಸ್. ಬೆಂಗಳೂರು: ಎಲ್ಲಾ ನಿರೀಕ್ಷೆಯಂತಾದ್ರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ( ಬಿಡಿಎ)ದ ಅಧ್ಯಕ್ಷಗಾಧಿ ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ ಹ್ಯಾರೀಸ್ ಗೆ ಒಲಿಯಬಹುದೆನ್ನಲಾಗ್ತಿದೆ ನಿಗಮ ಮಂಡಳಿಗಳ ನೇಮಕ ವಿಚಾರದಲ್ಲಿ ಸರ್ಕಾರ ಕೊಡುತ್ತಾ ಬಂದಿದ್ದ ಡೆಡ್ ಲೈನ್ ಎಲ್ಲಾ ಮುಗಿದಿದ್ದು ಯಾವ್ ಕ್ಷಣದಲ್ಲಿ ಬೇಕಾದ್ರೂ  ನಿಗಮ ಮಂಡಳಿಗಳ ನೇಮಕಾತಿ ಪಟ್ಟಿ ಹೊರಬೀಳಬಹುದೆಂದು ಹೇಳಲಾಗುತ್ತಿದೆ.ಅನುಭವಿಗಳಿಗೆ ಆಯಕಟ್ಟಿನ ಹುದ್ದೆಗಳು ಸಿಗುವ ಸಾಧ್ಯತೆ ದಟ್ಟವಾಗಿರುವ ಜತೆಗೇನೆ ಪ್ರಮುಖ ನಿಗಮಮಂಡಳಿಗಳಲ್ಲಿ ಒಂದಾದ ಬಿಡಿಎ ಅಧ್ಯಕ್ಷರಾಗಿ … Read more

ಪ್ರೆಸ್‌ ಕ್ಲಬ್-2023 ಪ್ರಶಸ್ತಿ ಪ್ರಕಟ: ಡಿಕೆ ಶಿವಕುಮಾರ್ “ವರ್ಷದ ವ್ಯಕ್ತಿ”-ಶಾಮನೂರು ಶಿವಶಂಕರಪ್ಪಗೆ  “ಪ್ರೆಸ್‌ಕ್ಲಬ್ ವಿಶೇಷ ಪ್ರಶಸ್ತಿ”-ಕಾರ್ಮಿಕ ಸಚಿವ  ಸಂತೊಷ್ ಲಾಡ್ ,ಡಾ. ಕೆ. ಗೋವಿಂದರಾಜುಗೆ “ಪ್ರೆಸ್‌ಕ್ಲಬ್ ಪ್ರಶಸ್ತಿ”

29 ಪತ್ರಕರ್ತರಿಗೆ “ಪ್ರೆಸ್‌ಕ್ಲಬ್ ಜೀವಮಾನ ಸಾಧನೆ” ಪ್ರಶಸ್ತಿ:ಡಿಸೆಂಬರ್ 31 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ   ಕಾರ್ಯಕ್ರಮ  ಉದ್ಘಾಟನೆ-ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ರಿಂದ  ಪ್ರಶಸ್ತಿ ಪ್ರಧಾನ   ಬೆಂಗಳೂರು:ಪ್ರತಿ ವರ್ಷದಂತೆ ಈ ಬಾರಿಯೂ  ಪ್ರೆಸ್‌ಕ್ಲಬ್ ಆಫ್ ಬೆಂಗಳೂರು  ತನ್ನ ವಾರ್ಷಿಕ ಪ್ರಶಸ್ತಿ ಘೋಷಿಸಿದೆ.ಹಾಗೆಯೇ ಪತ್ರಿಕೋದ್ಯಮದಲ್ಲಿ  ಗಣನೀಯ ಸಾಧನೆ ಮಾಡಿದ ಪತ್ರಕರ್ತರನ್ನು ಗೌರವಿಸುವ ಸಂಪ್ರದಾಯ ಮುಂದುವರೆಸಿದೆ. ಈ ಪೈಕಿ   ಕಾಂಗ್ರೆಸ್  ಅಧಿಕಾರಕ್ಕೆ ಬರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಚುನಾವಣಾ ಚಾಣಕ್ಯ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ  … Read more