ಚೆನ್ನಪಟ್ಟಣ ಉಪಸಮರ-2024: ಸಿ.ಪಿ ಯೋಗೇಶ್ವರ್ ಎದುರು ಕಣಕ್ಕಿಳಿಯಲು ನಿಖಿಲ್ ಹಿಂದೇಟು..?! ಲೆಕ್ಕಾಚಾರ ಕೆಳಗಾಗಿ ಸೋತರೆ “ಐರನ್ ಲೆಗ್” ಕಳಂಕ ಹೊತ್ತುಕೊಳ್ಳುವ ಆತಂಕ..?!
ಚನ್ನಪಟ್ಟಣ: ಬೊಂಬೆಗಳ ನಗರಿ ಚನ್ನಪಟ್ಟಣದ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ನಿಗದಿಯಾಗಿರುವ ಡೆಡ್ ಲೈನ್ ಮುಗಿಯೊಕ್ಕೆ ಕೆಲ ಗಂಟೆಗಳಷ್ಟೇ ಬಾಕಿ ಇದೆ.ಆದ್ರೂ ಅಖಾಡದಲ್ಲಿ ಏನಾಗಲಿದೆ ಎನ್ನೋದು ಗೊತ್ತಾಗುತ್ತಲೇ ಇಲ್ಲ.ಎಲ್ಲವೂ ಅಚ್ಚರಿ-ನಿಗೂಢದಂತೆ ಕಾಣಿಸುತ್ತದೆ.ನಿನ್ನೆಯವರೆಗೂ ಕಾಂಗ್ರೆಸ್ ನಿಂದ ಅಂತರ ಕಾಯ್ದುಕೊಂಡಿದ್ದ ಸಿ.ಪಿ ಯೋಗೇಶ್ವರ್ ನಿನ್ನೆ ರಾತ್ರಿ ಕೈ ಸೇರುವ ಮುನ್ಸೂಚನೆ ನೀಡಿ ಇಂದು ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಮುಖಂಡರ ನೇತೃತ್ವದಲ್ಲಿ ಕೈ ಸೇರಿದ್ದಾಗಿದೆ.ಕಾಂಗ್ರೆಸ್ ನಿಂದಲೇ ಸ್ಪರ್ದಿಸ್ತಾರೆನ್ನುವ ಮಾತುಗಳು ಬಲವಾಗಿವೆ.ಆದರೆ ಕಡೇ ಕ್ಷಣದಲ್ಲಿ ಏನಾಗುತ್ತದೋ ಗೊತ್ತಾಗುತ್ತಿಲ್ಲ. ಸ್ಪರ್ದೆ ಮಾಡೋದಿದ್ರೆ ಅದು ಕೇವಲ ಬಿಜೆಪಿಯಿಂದ … Read more