shivamogga politics exclusive..talkwar over kseshwarappa from mla chennabasappa(chenni) “ಶಿಷ್ಯನಿಂದಲೇ “ಗುರು”ವಿಗೆ “ಗುನ್ನಾ”..ಕೆಎಸ್‌ ಈಶ್ವರಪ್ಪ ವಿರುದ್ಧ ಎಮ್ಮೆಲ್ಲೆ ಚನ್ನಬಸಪ್ಪ ಹರಿಹಾಯ್ದಿದ್ದೇಕೆ..? ಹತಾಷೆಯ ಹೇಳಿಕೆಯೋ..!ಸೋಲಿನ ಭೀತಿಯ ಮುನ್ಸೂಚನೆನೋ..?

ಶಿವಮೊಗ್ಗ:ರಾಜಕಾರಣದಲ್ಲಿ ಎಲ್ಲವೂ ಸಹ್ಯ..ಸಾಧ್ಯ ಎನ್ನುವ ಮಾತಿದೆ..ಜತೆಗಿದ್ದವರು ದೂರವಾಗ್ತಾರೆ..ಶತೃಗಳು ಮಿತ್ರರಾಗ್ತಾರೆ..ಹಾಗೆಯೇ ಮಿತ್ರರ ನಡುವೆ ವೈರತ್ವ ಬೆಳೆದುಬಿಡುತ್ತೆ..ಆದರೆ ಇದು ಶಾಶ್ವತವಲ್ಲ ಎನ್ನೋದು ಮಾತ್ರ ಸತ್ಯ.ಪಕ್ಷ-ನಾಯಕರು ಎಂದುಕೊಂಡು ಕಾರ್ಯಕರ್ತರು ಕಚ್ಚಾಡಿಕೊಳ್ತಿದ್ರೆ ನಾಯಕರು ಮಾತ್ರ ತಮ್ಮ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ತಿರ್ತಾರೆ..ಇದು ರಾಜಕೀಯದ ಭಾಗ ಬಿಡಿ.. ಇದಕ್ಕೆ ಶಿವಮೊಗ್ಗದ ರಾಜಕಾರಣವೂ ಹೊರತಲ್ಲ..ಏಕಂದ್ರೆ, ಯಾವ ಶಿಷ್ಯನಿಗೆ ಯಾರು, ರಾಜಕೀಯ ಗುರು ಅಂಥ ಕರೆಸಿಕೊಂಡಿದ್ರೋ ಅದೇ ಗುರುವನ್ನು ಇವತ್ತು ಅವರ ಶಿಷ್ಯೋತ್ತಮ ಎನಿಸಿಕೊಂಡಿದ್ದವರೇ ಸಾರ್ವಜನಿಕವಾಗಿ ವಾಚಾಮಗೋಚರವಾಗಿ ಟೀಕಿಸುವ,ಎಚ್ಚರಿಸುವ ಮಾತನ್ನಾಡಿದ್ದಾರೆ.ಇದು ಶಿವಮೊಗ್ಗ ರಾಜಕಾರಣದ ಮಟ್ಟಿಗೆ ಮಾತ್ರ ಅತ್ಯಂತ ಗಂಭೀರ ಹಾಗೂ … Read more

“ಚಿಂತಕರ ಚಾವಡಿ”(ವಿಧಾನಪರಿಷತ್‌) ಗೆ ಕ್ರೇಜಿಸ್ಟಾರ್‌ ರವಿಚಂದ್ರನ್‌..ಅಧಿಕಾರಕ್ಕೆ ಆಸೆಪಡದ “ಕನಸುಗಾರ”ನಿಗೆ MLC ಭಾಗ್ಯ..!

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ಮಾಪಕ ನಿರ್ದೇಶಕ ಹಾಗೂ ತಂತ್ರಜ್ಞ ವಿ. ರವಿಚಂದ್ರನ್ ಅವರಿಗೆ ವಿಧಾನ ಪರಿಷತ್ ಪ್ರವೇಶಿಸುವ ಅವಕಾಶಗಳು ದಟ್ಟವಾಗಿವೆ. ಕಾಂಗ್ರೆಸ್ ಹೈಕಮಾಂಡ್ ರವಿಚಂದ್ರನ್ ಅವರ ನಾಮನಿರ್ದೇಶನಕ್ಕೆ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದೆ. ಇದರ ಜೊತೆಗೆ ಇನ್ನಿಬ್ಬರಿಗೂ ವಿಧಾನ ಪರಿಷತ್ ಪ್ರವೇಶಿಸುವ ಅವಕಾಶ ಬಹುತೇಕ ನಿಕ್ಕಿಯಾಗಿದೆಯಂತೆ. ಇತ್ತೀಚೆಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ರವಿಚಂದ್ರನ್ ಅವರ ನಡುವೆ ಒಂದಷ್ಟು ಸುತ್ತಿನ ಮಾತುಗಳು ಮಾತುಕತೆಗಳು ನಡೆದಿದ್ದರ ಇಂದಿನ ರಹಸ್ಯವೇನು ಎನ್ನುವುದು ಈ ನಾಮನಿರ್ದೇಶನದಿಂದ ಸ್ಪಷ್ಟವಾಗಿದೆ. … Read more

EXCLUSIVE:”ಅಪ್ಪ” “ಕಾಂಗ್ರೆಸ್” ನಲ್ಲಿ……”ಮಗ” “ಬಿಜೆಪಿ”ಗೆ …ಪೊಲಿಟಿಕಲ್‌ ಗೇಮ್‌ ನಲ್ಲಿ ಆರ್‌.”ಅಶೋಕ್” ಸಕ್ಸೆಸ್..!

ರಾಜಕೀಯವೇ ಹಾಗೆ..ಇಲ್ಲಿ ಎಲ್ಲವೂ ಹೀಗೆಯೇ ನಡೆಯುತ್ತೆ ಎಂದು ಹೇಳೊಕ್ಕೆ ಸಾಧ್ಯವೇ ಇಲ್ಲ…ಈಗ ಇದ್ದ ಸ್ಥಿತಿ ಮರುಕ್ಷಣ ಇರೊಲ್ಲ..ಈಗಿನ ಶತೃ ಮರುಕ್ಷಣ ಮಿತ್ರನಾಗುತ್ತಾನೆ..ಮಿತ್ರ ಮರುಕ್ಷಣದಲ್ಲಿ ಶತೃವಾಗಿಬಿಡುತ್ತಾನೆ…ಶತೃವಿನ ಶತೃ..ಮಿತ್ರನಾಗಿಬಿಡ್ತಾನೆ..ಇದನ್ನೆಲ್ಲಾ ಹೇಳೊಕ್ಕೆ ಕಾರಣವೂ ಇದೆ..ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ರಾಜಕೀಯ ಪ್ರಹಸನ ಈ ಬಗ್ಗೆ ಬರೆಯುವಂತೆ ಮಾಡಿದೆ.ತನ್ನ ರಾಜಕೀಯ ಚಾಣಾಕ್ಷತನದಿಂದ ಆರ್.‌ಅಶೋಕ್‌ ತನ್ನ ರಾಜಕೀಯ ಭವಿಷ್ಯಕ್ಕೆ ಸವಾಲಾಗಬಹುದಾಗಿದ್ದ ಸಮಸ್ಯೆಯೊಂದನ್ನು ಅನಾಯಾಸವಾಗಿ ಬಗೆಹರಿಸಿಕೊಂಡಿದ್ದಾರೆ. ಅದ್ಹೇಗೆ ಅನ್ತೀರಾ.. ಅದರ ರೋಚಕ ಕಥಾನಕ ನೀವೇ ಓದ್ಬಿಡಿ.. ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಪ್ರಹಸನ … Read more

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಲೀಸ್ಟ್ ನ ಆ ಮುಂಚೂಣಿ ಹೆಸರು..ರೇಸ್ ನಲ್ಲಿರೋರು ಯಾರ್ ಗೊತ್ತಾ..!?

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಕಸರತ್ತು ಹೈಕಮಾಂಡ್ ಗೆ  ಪಕ್ಷದ ಇತಿಹಾಸದಲ್ಲೇ ಹಿಂದೆಂದು ಇಷ್ಟೊಂದು ಕಷ್ಟಕರವಾಗಿರಲಿಲ್ಲವೇನೋ ಅನ್ನಿಸುತ್ತೆ.ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಗೊಂದಲಕ್ಕೆ ಸಿಲುಕಿಕೊಂಡಿದೆ.ಯತ್ನಾಳ್ ಬಣದ ಬೇಡಿಕೆಯಂತೆ ಬಸವರಾಜ್ ಬೊಮ್ಮಾಯಿ ಅವರನ್ನು ನೇಮಿಸಬೇಕೋ, ಬಿವೈ ವಿಜಯೇಂದ್ರ ಅವರನ್ನೇ ಮುಂದುವರೆಸಬೇಕೋ ಎನ್ನುವ ಪ್ರಶ್ನೆ ತೀವ್ರವಾಗಿ ಕಾಡಲಾರಂಭಿಸಿದೆ.ಇದೆಲ್ಲದರ ನಡುವೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಎಲ್ಲವನ್ನು ಸರಿದೂಗಿಸಬಲ್ಲ ಕೆಪಾಸಿಟಿ ಇರುವ ಲೀಡರ್ಸ್ ಗಳು ಯಾರೆನ್ನುವ ಪ್ರಶ್ನೆಗೆ ಹೈಕಮಾಂಡ್ ಬಳಿ ಇರುವ ಕೆಲವೇ ಕೆಲವು ಹೆಸರುಗಳಲ್ಲಿ ಸಿ.ಟಿ ರವಿ,ಅರವಿಂದ ಬೆಲ್ಲದ್ ಮುಂಚೂಣಿಯಲ್ಲಿವೆ … Read more

EXCLUSIVE..ಹಿರಿಯ “ಪತ್ರಕರ್ತ ದಿಗ್ಗಜ”ರೊಬ್ಬರಿಗೆ ಬಿಜೆಪಿ ಗಾಳ..!- ಆಯಕಟ್ಟಿನ ಹುದ್ದೆಗೆ ಡಿಮ್ಯಾಂಡ್..!

ಬೆಂಗಳೂರು: ಇದು ಎಷ್ಟರ ಮಟ್ಟಿಗೆ ಸತ್ಯವೋ..ಸುಳ್ಳೋ ಗೊತ್ತಿಲ್ಲ.ಆದರೆ ರಾಜಕೀಯ ಪಡ ಸಾಲೆಯಲ್ಲಿ ಇಂತದ್ದೊಂದು ಮಾತು ತುಂಬಾ ಗಂಭೀರವಾಗಿ ಕೇಳಿಬರುತ್ತಿದೆ. ಬಣಜಗಳ ದಿಂದ ದಿಕ್ಕೆಟ್ಟು ಹೋಗಿರುವ ಬಿಜೆಪಿ ಪಕ್ಷವನ್ನು ಹಳಿಗೆ ತರೊಕ್ಕೆ ಪಕ್ಷದಲ್ಲಿ ಸಮರ್ಥ ನಾಯಕರೇ ಇಲ್ಲ ಎನ್ನುವ ಪರಿಸ್ತಿತಿ ನಿಜಕ್ಕೂ ಇದೆಯೇ..? ಆ ಪತ್ರಿಕಾ ದಿಗ್ಗಜರನ್ನೇ ಕರೆತಂದು ಸರಿ ಮಾಡ ಬೇಕೆನಿಸುವ ವಿಚಾರ ಏಕೆ ಬಂದಿದೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡಲಾರಂಭಿಸಿವೆ. ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಎನ್ನುವುದಕ್ಕಿಂತ ಏನೂ ಸರಿಯಿಲ್ಲ ಎನ್ನುವಂಥ ಪರಿಸ್ತಿತಿಯಿದೆ.ಬಣ ಜಗಳ ಸರಿ … Read more

ಸಿ.ಪಿ. ಯೋಗೇಶ್ವರ್ ಹೆಸರು ಫೈನಲ್ ಆದ ಮೇಲೂ, ಡಿಕೆಶಿ ಇಬ್ಬರ ಹೆಸರನ್ನು ಹೈಕಮಾಂಡ್ ಗೆ ಕಳುಹಿಸಿದ್ದೇಕೆ..?!

ಬೆಂಗಳೂರು: ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಗೆ ಸೇರಿದ್ದಾಗಿದೆ.ಅವರನ್ನೇ ಕಣಕ್ಕಿಳಿಸುವುದು ಕೂಡ ನಿಕ್ಕಿಯಾಗಿದೆ.ಹೀಗಿದ್ರೂ ಇಬ್ಬರ ಹೆಸರನ್ನು ಹೈಕಮಾಂಡ್ ಗೆ ಕಳುಹಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿರುವುದು ಸಾಕಷ್ಟು ಅಚ್ಚರಿ-ಅನುಮಾನ ಮೂಡಿಸಿದೆ. ಯೋಗೇಶ್ವರ್ ಬಿಟ್ಟು ಹೈಕಮಾಂಡ್ ಗೆ ಕಳುಹಿಸಿರಬಹುದಾದ ಮತ್ತೊಂದು ಹೆಸ್ರು ಯಾರದು..? ಎನ್ನುವುದೇ ಈಗ ಮಿಲಿಯನ್ ಡಾಲರ್ ಪ್ರಶ್ನೆ. ಮೊನ್ನೆ ಮೊನ್ನೆಯವರೆಗೂ ಡಿಕೆ ಬ್ರದರ್ಸ್ ಹಾಗೂ ಕಾಂಗ್ರೆಸ್ ಪಕ್ಷವನ್ನು ಸಿಕ್ಕಾಪಟ್ಟೆ ಬೈಯ್ಯುತ್ತಿದ್ದವರು ಸಿ.ಪಿ ಯೋಗೇಶ್ವರ್. ಬಿಜೆಪಿ ಟಿಕೆಟ್ ಕೊಡುವುದಾಗಿ ಹೇಳಿದ್ರೂ..ಜೆಡಿಎಸ್ ನೀವೇ ಸ್ಪರ್ದಿಸಿ ಎಂದು ಅಂಗಲಾಚಿದ್ರೂ ನಿಮ್ ಸಹವಾಸವೇ … Read more

ಚೆನ್ನಪಟ್ಟಣ ಉಪಸಮರ-2024: ಸಿ.ಪಿ ಯೋಗೇಶ್ವರ್ ಎದುರು ಕಣಕ್ಕಿಳಿಯಲು ನಿಖಿಲ್ ಹಿಂದೇಟು..?! ಲೆಕ್ಕಾಚಾರ ಕೆಳಗಾಗಿ ಸೋತರೆ “ಐರನ್ ಲೆಗ್” ಕಳಂಕ ಹೊತ್ತುಕೊಳ್ಳುವ ಆತಂಕ..?!

ಚನ್ನಪಟ್ಟಣ: ಬೊಂಬೆಗಳ ನಗರಿ ಚನ್ನಪಟ್ಟಣದ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ನಿಗದಿಯಾಗಿರುವ ಡೆಡ್ ಲೈನ್ ಮುಗಿಯೊಕ್ಕೆ  ಕೆಲ ಗಂಟೆಗಳಷ್ಟೇ ಬಾಕಿ ಇದೆ.ಆದ್ರೂ ಅಖಾಡದಲ್ಲಿ ಏನಾಗಲಿದೆ ಎನ್ನೋದು ಗೊತ್ತಾಗುತ್ತಲೇ ಇಲ್ಲ.ಎಲ್ಲವೂ ಅಚ್ಚರಿ-ನಿಗೂಢದಂತೆ ಕಾಣಿಸುತ್ತದೆ.ನಿನ್ನೆಯವರೆಗೂ ಕಾಂಗ್ರೆಸ್ ನಿಂದ ಅಂತರ ಕಾಯ್ದುಕೊಂಡಿದ್ದ ಸಿ.ಪಿ ಯೋಗೇಶ್ವರ್ ನಿನ್ನೆ ರಾತ್ರಿ ಕೈ ಸೇರುವ ಮುನ್ಸೂಚನೆ ನೀಡಿ ಇಂದು ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಮುಖಂಡರ ನೇತೃತ್ವದಲ್ಲಿ ಕೈ ಸೇರಿದ್ದಾಗಿದೆ.ಕಾಂಗ್ರೆಸ್ ನಿಂದಲೇ ಸ್ಪರ್ದಿಸ್ತಾರೆನ್ನುವ ಮಾತುಗಳು ಬಲವಾಗಿವೆ.ಆದರೆ ಕಡೇ ಕ್ಷಣದಲ್ಲಿ ಏನಾಗುತ್ತದೋ ಗೊತ್ತಾಗುತ್ತಿಲ್ಲ. ಸ್ಪರ್ದೆ ಮಾಡೋದಿದ್ರೆ ಅದು ಕೇವಲ ಬಿಜೆಪಿಯಿಂದ … Read more

ಬಿಜೆಪಿ ವಿಧಾನಪರಿಷತ್ ಸ್ಥಾನಕ್ಕೆ ಸಿಪಿ ಯೋಗೇಶ್ವರ್ ರಾಜೀನಾಮೆ: ಕಾಂಗ್ರೆಸ್ ನಿಂದ ಸ್ಪರ್ಧೆ?

ಬಿಜೆಪಿ ವಿಧಾನಪರಿಷತ್ ಸ್ಥಾನಕ್ಕೆ ಸಿಪಿ ಯೋಗೇಶ್ವರ್ ರಾಜೀನಾಮೆ ನೀಡುವ ಮೂಲಕ ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆ ಕುತೂಹಲ ಘಟ್ಟ ತಲುಪಿದೆ. ಚನ್ನಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಸ್ಪರ್ಧಿಸಲು ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೆ. ಜೆಡಿಎಸ್ ನಿಂದ ಸ್ಪರ್ಧಿಸಿದರೆ ಗೆಲುವು ಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು. ಸಿಪಿ ಯೋಗೇಶ್ವರ್ ಹೇಳಿಕೆ ನೀಡಿದ ಬೆನ್ನಲ್ಲೇ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದ್ದು, ಸ್ಪೀಕರ್ ಭೇಟಿ ಮಾಡಿ ಸೋಮವಾರವೇ ರಾಜೀನಾಮೆ ಸಲ್ಲಿಸುವ … Read more

POLITICAL EXCLUSIVE..”ಡಿ.ಕೆ” ಗೆ “ಠಕ್ಕರ್” ಕೊಡಲು “ಸತೀಶ್ ಜಾರಕಿಹೊಳಿ” ಹೆಸ್ರು “ತೇಲಿ”ಬಿಟ್ಟವರು “ಇವರೇ”ನಾ..? ಏಕೆ..?

ಬೆಂಗಳೂರು:ರಾಜ್ಯ ರಾಜಕಾರಣ ದಿನಕ್ಕೊಂದು ತಿರುವು ಪಡೆಯುತ್ತಿದೆ..ಮಗ್ಗಲು ಬದಲಿಸುತ್ತಿದೆ.ದಸರಾ ಮುಗಿದ ಮೇಲೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆಯುತ್ತಿದೆ ಎಂಬ ಭವಿಷ್ಯವಾಣಿ ಬಗ್ಗೆನೇ ಎಲ್ಲರ ಕುತೂಹಲ ನೆಟ್ಟಿದೆ.ಆ ಕ್ಷಿಪ್ರ ರಾಜಕೀಯ ಬೆಳವಣಿಗೆ ಏನು ಎನ್ನುವ ಕುತೂಹಲದ ಬಗ್ಗೆ ಎಲ್ಲರೂ ತಲೆಕೆಡಿಸಿಕೊಂಡಿ ರುವಾಗಲೆ ಮತ್ತೊಂದು ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ದಸರಾ ಬಳಿಕ ರಾಜ್ಯ ರಾಜಕಾರಣ ಮತ್ತೊಂದು ಮಗ್ಗಲು ಬದಲಿಸಲಿದೆ ಎನ್ನುವ  ಭವಿಷ್ಯ ವಾಣಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರಾ..? ಅಥವಾ ಬಲವಂತವಾಗಿ ಅವರಿಂದ ಕೊಡಿಸಲಾಗುತ್ತಾ ಎನ್ನುವುದರತ್ತಲೇ … Read more

ಯಶವಂತಪುರ ಬೈ ಎಲೆಕ್ಷನ್‌ ಕನ್ಫರ್ಮ್….? S.T.ಸೋಮಶೇಖರ್‌ ಪಕ್ಕಾ..ಆದ್ರೆ ಎದುರಾಳಿ ಮೈತ್ರಿ ಅಭ್ಯರ್ಥಿ ಯಾರು…? ಜವರಾಯಿಗೌಡ/ನಿಖಿಲ್‌ ಕುಮಾರಸ್ವಾಮಿನಾ..?!

*3 ಬಾರಿ ಸೋತರೂ ಮತ್ತೊಂದು ಗೆಲುವಿನ ಅವಕಾಶದ ನಿರೀಕ್ಷೆಯಲ್ಲಿ ಜವರಾಯಿಗೌಡ.. *ಜವರಾಯಿಗೌಡರನ್ನೇ ಅಭ್ಯರ್ಥಿಯನ್ನಾಗಿಸಿ ದಳಪತಿಗಳು ಕೊಟ್ಟ ಮಾತನ್ನು ಉಳಿಸಿಕೊಳ್ತಾರಾ..? *ಜವರಾಯಿಗೌಡರಿಗಿಂತ ಸಮರ್ಥ ಅಭ್ಯರ್ಥಿ ಹುಡುಕಾಟದಲ್ಲಿದ್ದೇವೆ ಎಂದು ಶಾಕ್‌ ಕೊಡ್ತಾರಾ..? *ಬಿಜೆಪಿ ಜವರಾಯಿಗೌಡ ಅವರನ್ನೇ ತಮ್ಮ ಮೈತ್ರಿ ಅಭ್ಯರ್ಥಿ ಎಂದು ಒಪ್ಪಿಕೊಳ್ಳುತ್ತಾ..? *ದಳಪತಿಗಳು ಕೈ ಕೊಟ್ರ ಜವರಾಯಿಗೌಡ ನಿಲುವೇನು..? ಬೇರೆ ಅಭ್ಯರ್ಥಿಯನ್ನು ಒಪ್ಪಿಕೊಳ್ತಾರಾ..? ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಇಬ್ಬರು ಶಾಸಕರು ಪಕ್ಷದ ಸಿದ್ದಾಂತಕ್ಕೆ ವಿರುದ್ಧವಾಗಿ ಮತ ಚಲಾಯಿಸುತ್ತಿದ್ದಂತೆ ಆಯಾ ಕ್ಷೇತ್ರ ಗಳಲ್ಲಿ ಬೈ ಎಲೆಕ್ಷನ್ ಆಗೋದು ಪಕ್ಕಾ … Read more