advertise here

Search

EXCLUSIVE..ಹಿರಿಯ “ಪತ್ರಕರ್ತ ದಿಗ್ಗಜ”ರೊಬ್ಬರಿಗೆ ಬಿಜೆಪಿ ಗಾಳ..!- ಆಯಕಟ್ಟಿನ ಹುದ್ದೆಗೆ ಡಿಮ್ಯಾಂಡ್..!


ಬೆಂಗಳೂರು: ಇದು ಎಷ್ಟರ ಮಟ್ಟಿಗೆ ಸತ್ಯವೋ..ಸುಳ್ಳೋ ಗೊತ್ತಿಲ್ಲ.ಆದರೆ ರಾಜಕೀಯ ಪಡ ಸಾಲೆಯಲ್ಲಿ ಇಂತದ್ದೊಂದು ಮಾತು ತುಂಬಾ ಗಂಭೀರವಾಗಿ ಕೇಳಿಬರುತ್ತಿದೆ. ಬಣಜಗಳ ದಿಂದ ದಿಕ್ಕೆಟ್ಟು ಹೋಗಿರುವ ಬಿಜೆಪಿ ಪಕ್ಷವನ್ನು ಹಳಿಗೆ ತರೊಕ್ಕೆ ಪಕ್ಷದಲ್ಲಿ ಸಮರ್ಥ ನಾಯಕರೇ ಇಲ್ಲ ಎನ್ನುವ ಪರಿಸ್ತಿತಿ ನಿಜಕ್ಕೂ ಇದೆಯೇ..? ಆ ಪತ್ರಿಕಾ ದಿಗ್ಗಜರನ್ನೇ ಕರೆತಂದು ಸರಿ ಮಾಡ ಬೇಕೆನಿಸುವ ವಿಚಾರ ಏಕೆ ಬಂದಿದೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡಲಾರಂಭಿಸಿವೆ.

ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಎನ್ನುವುದಕ್ಕಿಂತ ಏನೂ ಸರಿಯಿಲ್ಲ ಎನ್ನುವಂಥ ಪರಿಸ್ತಿತಿಯಿದೆ.ಬಣ ಜಗಳ ಸರಿ ಮಾಡಲು ಹೈಕಮಾಂಡೇ ಹೆಣಗುವಂತ ಸ್ತಿತಿಯಿದೆ.ಏನ್ ಮಾಡಿದ್ರೆ ಎಲ್ಲಾ ಸರಿ ಹೋಗುತ್ತೆ ಎನ್ನುವ ಪ್ರಶ್ನೆ ಸೃಷ್ಟಿಯಾಗಿರುವಾಗಲೇ ಕೆಲವು ಮುಖಂಡರಿಂದ ಆ ಒಬ್ಬ ಪತ್ರಿಕಾ ದಿಗ್ಗಜನನ್ನು ಕರೆಯಿಸಿದ್ರೆ ಸರಿ ಆಗಬಹುದೆನ್ನುವ ವಿಚಿತ್ರ ಸಲಹೆಯೊಂದು ಹೊರಬಿದ್ದಿದೆ ಎನ್ನಲಾಗಿದೆ.ಆದರೆ ಆ ಪತ್ರಕರ್ತ ದಿಗ್ಗಜರಿಂದ ಅದು ಸಾಧ್ಯನಾ..? ಪಕ್ಷ ಸರ್ವಾನುಮತದಿಂದ ಈ ಚಿಂತನೆಯನ್ನು ಪುರಸ್ಕರಿಸುತ್ತಾ ಎನ್ನುವುದು ಪ್ರಶ್ನೆಯಾಗಿ ಕಾಡುತ್ತಿದೆ.

ಆ ಪತ್ರಕರ್ತ ದಿಗ್ಗಜ ಯಾರು..? ಬಿಜೆಪಿಯ ಕೆಲವು ಆಪ್ತ ಮೂಲಗಳನ್ನು ಬಿಟ್ಟರೆ ಬಹುತೇಕ ಪಕ್ಷಕ್ಕೇನೆ ಆ ಪತ್ರಕರ್ತ ದಿಗ್ಗಜ ಯಾರು ಎನ್ನುವುದು ಗೊತ್ತಿಲ್ಲವಂತೆ.ಅವರು ಬಂದರೆ ಅದ್ಹೇಗೆ ಪಕ್ಷದೊಳಗಿನ ಭಿನ್ನಮತ ಉಪಶಮನವಾಗುತ್ತೆ..ಎಲ್ಲಾ ಸರಿ ಹೋಗುತ್ತೆ ಎನ್ನುವ ನಿರ್ದಾರಕ್ಕೆ ಮುಖಂಡರು ಹೇಗೆ ಬಂದರು..? ನಿಜಕ್ಕೂ ಅವರಿಗೆ ಅಂತದ್ದೊಂದು ಶಕ್ತಿ ಇದೆಯಾ..? ಪಕ್ಷದಲ್ಲಿರೋ ಘಟಾನುಘಟಿಗಳೇ ತಿಪ್ಪರಲಾಗ ಹಾಕುತ್ತಿದ್ದರೂ ಅಸಾಧ್ಯವಾದುದನ್ನು ಸಾಧ್ಯ ಮಾಡಿಬಿಡುತ್ತಾರಾ..? ಎನ್ನುವ ಪ್ರಶ್ನೆಗಳು ಪಕ್ಷದಲ್ಲಿರುವವರನ್ನೇ ಕಾಡುತ್ತಿದೆಯಂತೆ.

ಅಂದ್ಹಾಗೆ ಬಿಜೆಪಿ ಸೆಳೆಯೊಕ್ಕೆ ಹೊರಟಿರುವ ಆ ಪತ್ರಕರ್ತ ದಿಗ್ಗಜ ಯಾರು ಎನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಕನ್ನಡ ಫ್ಲ್ಯಾಶ್ ನ್ಯೂಸ್ ಕೂಡ ಒಂದಷ್ಟು ಮಾಹಿತಿ ಕಲೆ ಹಾಕಲು ಯತ್ನಿಸಿದಾಗ ಅವರು  ಸಧ್ಯ ದೃಶ್ಯ ಮಾದ್ಯಮದಲ್ಲೇ ಅಗ್ರಗಣ್ಯ ಸ್ಥಾನದಲ್ಲಿದ್ದಾರೆ ಎನ್ನುವ ಕ್ಲ್ಯೂ ಬಿಟ್ಟರೆ ಬೇರೇನು ಸಿಗಲಿಲ್ಲ.ಅವರನ್ನು ಸೆಳೆಯುವ ಪ್ರಯತ್ನ ಗಂಭೀರವಾಗಿ ನಡೆಯುತ್ತಿರುವುದರಿಂದ ಯಾವುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಒಂದಷ್ಟು  ಮೂಲಗಳು ತಿಳಿಸಿವೆ.ನಿಮಗೇ ಅವರ್ಯಾರು ಎನ್ನುವುದು ತಿಳಿಯುತ್ತೆ..ಸ್ವಲ್ಪ ಕಾದಿರಿ ಎಂದ್ಹೇಳಿ ಹುಬ್ಬಾರಿಸಿ ಬಿಟ್ಟರು ಆ ಲೀಡರ್..

ALSO READ :  Exclusive: ಅಕ್ರಮ-ಅವ್ಯವಸ್ಥೆಯ ಗೂಡಾಯ್ತಾ ಪಿಯು ಇಲಾಖೆ? ಏನ್ ಮಾಡುತ್ತಿದ್ದೀರಾ ಶಿಕ್ಷಣ ಸಚಿವರೇ!?

ಘಟಾನುಘಟಿಗಳಿಂದಲೇ ಪಕ್ಷದ ಸ್ತಿತಿ ಬದಲಿಸಲು ಸಾಧ್ಯವಾಗದೆ ಇರುವಾಗ ಪಕ್ಷದ ಕೆಲವರು ಹೇಳುತ್ತಿರುವ ಆ ಪತ್ರಕರ್ತ ದಿಗ್ಗಜರಿಂದ ಎಲ್ಲವನ್ನು ಸರಿ ಮಾಡಲಿಕ್ಕೆ ಆಗಿಬಿಡುತ್ತಾ.? ದೊಡ್ಡವರ ಮಾತನ್ನೇ ಕೇಳದಿರುವ ಲೀಡರ್ಸ್ ಈ ಹಿರಿಯ ಪತ್ರಕರ್ತರ ಮಾತನ್ನು ಕೇಳಿಬಿಡ್ತಾರಾ..ಅದು ಸಾಧ್ಯವಿದೆಯಾ..? ಎಂಬ ಪ್ರಶ್ನೆ ನಮಗು ಕಾಡಿದ್ದಿದೆ.ಆದರೆ ತಮ್ಮ ವೃತ್ತಿಯಲ್ಲಿ ಎಂತೆಂಥವರನ್ನೋ ಜಾಡಿಸಿಬಿಟ್ಟಿರುವ ಅವರಿಂದ ಇದು ಆಗಿಯೇ ಆಗುತ್ತದೆ ಎನ್ನುವ ನಂಬಿಕೆ ನಮ್ಮದು..ಹಾಗಾಗಿಯೇ  ಇಂತದ್ದೊಂದು ಪ್ರಯತ್ನಕ್ಕೆ ಕೈ ಹಾಕಿದ್ದೇವೆ. ಪ್ರಯತ್ನ ನಡೆಯುತ್ತಿದೆ ಕೆಲವು ದಿನಗಳಲ್ಲಿ ನಾವಂದುಕೊಂಡಂತೆ ಎಲ್ಲವೂ ಆಗುತ್ತದೆ ಎಂದು ಇದರ ಉಸ್ತುವಾರಿ ಹೊತ್ತಿರುವ ಕೆಲವು ಲೀಡರ್ಸ್ ತುಂಬಾ ಆತ್ಮವಿಶ್ವಾಸದಿಂದಲೇ ಹೇಳುತ್ತಿದ್ದಾರೆ.

ಆ ಪತ್ರಿಕಾ ದಿಗ್ಗಜರನ್ನು ಕರೆ ತರಲು ನಡೆಸುತ್ತಿರುವ ಪ್ರಯತ್ನದ ನಡುವೆಯೇ ಆ ಹಿರಿಯ ಪತ್ರಕರ್ತರು ದೊಡ್ಡ ಸ್ಥಾನದ ಮೇಲೆಯೇ ಕಣ್ಣಿಟ್ಟಿದ್ದಾರೆನ್ನುವ ಮಾತಿದೆಯಂತೆ.ಆ ಸ್ಥಾನ ಕೊಟ್ಟರಷ್ಟೆ ಬರೋ ಆಲೋಚನೆ ಮಾಡೋಣ ಎಂದಿದ್ದಾರಂತೆ.ಆರಂಭದಲ್ಲಿ ಸ್ವಲ್ಪ ಕಷ್ಟವಾಗುತ್ತದಲ್ಲಾ ಸಾರ್ ಎಂದರೂ ನೋಡೋಣ ಬನ್ನಿ ಎಂಬ ಅಭಯ ನೀಡಿದ್ದಾರಂತೆ. ಅವರು ಬಂದರೆ ಎಲ್ಲವೂ ಸರಿಯಾಗುತ್ತೆ ಎನ್ನುವ ನಂಬಿಕೆ ಬಂದಿರೋದೇ ಅಚ್ಚರಿ ಮೂಡಿಸುತ್ತೆ.

ಪತ್ರಿಕಾಕ್ಷೇತ್ರದ ಲ್ಲಿಆ ದಿಗ್ಗಜನ  ರಾಜಕೀಯ ಎಂಟ್ರಿ ಸಾಕಷ್ಟು ಅಚ್ಚರಿ ಜತೆಗೆ ಪ್ರಶ್ನೆಯನ್ನು ಮೂಡಿಸಿದೆ.ಇದು ಸಾಧ್ಯವಾಗುವ ವಿಚಾರವೆಂದೆನೂ ಅನಿಸುತ್ತಿಲ್ಲ ಎಂದು ಮಾತನಾಡಿಕೊಳ್ಳುವಂತಾಗಿದೆ.ಯಡಿಯೂರಪ್ಪ,ಸದಾನಂದಗೌಡ,ಅಶೋಕ್ ಅವರಂಥವರ ಮಾತುಗಳನ್ನೇ ಕೇಳದ ಸ್ತಿತಿಯಲ್ಲಿರುವ ಪಕ್ಷದ ಮುಖಂಡರು  ಮಾದ್ಯಮದಲ್ಲಿ ರಾಜಕೀಯವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುವ ಪತ್ರಿಕಾ ದಿಗ್ಗಜನ ಮಾತನ್ನು ಕೇಳಿಬಿಡ್ತಾರಾ…? ಚಾನ್ಸೇ ಇಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.ಇದೆಲ್ಲಕ್ಕಿಂತ ಹೆ್ಚ್ಚಾಗಿ ಹೈಕಮಾಂಡ್ ಇದಕ್ಕೆ ಮೊದಲು ಒಪ್ಪಿಗೆ ಕೊಟ್ಟಿದೆಯಾ ಎನ್ನುವುದು ಗೊತ್ತಾಗಬೇಕಿದೆ ಎಂದು ಹೇಳುತ್ತಿದ್ದಾರೆ.

ಆದರೆ ರಾಜಕೀಯದಲ್ಲಿ ಏನ್ ಬೇಕಾದ್ರೂ ಆಗಬಹುದು..ಪತ್ರಕರ್ತರು ರಾಜಕೀಯವನ್ನು ಪ್ರವೇಶಿಸಬಾರದು..ಆಯಕಟ್ಟಿನ ಹುದ್ದೆಅಲಂಕರಿಸಬಾರದು ಎಂದೇನಿಲ್ಲವಲ್ಲ.ಎಷ್ಟೋ ಪತ್ರಕರ್ತರು ರಾಜಕೀಯದಲ್ಲಿ ನೆಲೆ ಕಂಡುಕೊಂಡು ಹೆಸರು ಮಾಡಿಲ್ಲವೇ..? ಹಾಗೆಯೇ ಈ ಪತ್ರಕರ್ತ ದಿಗ್ಗಜನ ವಿಷಯದಲ್ಲೂ ಇತಿಹಾಸ  ಪುನರಾವರ್ತನೆ ಆಗಬಾರದು ಅಂತೇನೂ ಇಲ್ಲವಲ್ಲ..ಅಲ್ವಾ..?!


Political News

ಈ ಸುದ್ದಿ ನಮ್ಮಲ್ಲಿ ಮಾತ್ರ…POLITICAL EXCLUSIVE… ಕಾಂಗ್ರೆಸ್ ಗೆ ಗುಡ್ ಬೈ..! ಬಿಜೆಪಿಗೆ ಜೈ..ಜೈ.. ! 60 ಶಾಸಕರಿಗೆ ಗಾಳ….! 42 ಶಾಸಕರ ಲೀಸ್ಟ್ ರೆಡಿ..! ನವೆಂಬರ್ ಗೆ “ಡಿಕೆಶಿ” ಜಂಪಿಂಗ್ ಪಕ್ಕಾ..!

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಲೀಸ್ಟ್ ನ ಆ ಮುಂಚೂಣಿ ಹೆಸರು..ರೇಸ್ ನಲ್ಲಿರೋರು ಯಾರ್ ಗೊತ್ತಾ..!?

EXCLUSIVE..ಹಿರಿಯ “ಪತ್ರಕರ್ತ ದಿಗ್ಗಜ”ರೊಬ್ಬರಿಗೆ ಬಿಜೆಪಿ ಗಾಳ..!- ಆಯಕಟ್ಟಿನ ಹುದ್ದೆಗೆ ಡಿಮ್ಯಾಂಡ್..!

EXCLUSIVE…ಅಧಿಕಾರ ವಹಿಸಿಕೊಂಡ ದಿನವೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿಗೆ ಬಿಗ್ ಶಾಕ್..!

ಅಕ್ರಮ ಖಾತಾ ವರ್ಗಾವಣೆ ಆರೋಪಕ್ಕೆ ತುತ್ತಾದ AC ದುರ್ಗಶ್ರೀ,ತಹಸೀಲ್ದಾರ್ ವಿಭಾ ರಾಠೋಡ್ ವಿರುದ್ಧ ಮತ್ತೆರೆಡು ದೂರು…ಸಾಕ್ಷ್ಯವಿದ್ರೂ ಕ್ರಮ ಕೈಗೊಳ್ಳದೆ ಸಚಿವ ಕೃಷ್ಣ ಭೈರೇಗೌಡ ಮೌನ..?!

DCM ಆಪ್ತ ಬಿ.ಎಸ್ .ಪ್ರಹ್ಲಾದ್ ಕಚೇರಿ ಮೇಲೆ ಇ.ಡಿ ರೇಡ್ ಗೆ ಬೆಚ್ಚಿಬಿದ್ದ ಭ್ರಷ್ಟರು: ನಿಟ್ಟುಸಿರು ಬಿಟ್ಟ ಸಂತ್ರಸ್ಥ ಅಧಿಕಾರಿ ಸಿಬ್ಬಂದಿ..

ಪೋಡಿ ಇಲ್ಲ,ಪ್ರತ್ಯೇಕ ಸರ್ವೆ ಸ್ಕೆಚ್ ಆಗಿಲ್ಲ-ಸರ್ವೆ ನಂಬರ್ ಕೊಟ್ಟಿಲ್ಲ, GPA ಮೇಲೆ ಖಾಸಗಿ ಬಿಲ್ಡರ್ಸ್ ಗೆ ಎಸಿ, ತಹಸೀಲ್ದಾರ್ ರಿಂದ ಖಾತಾ ವರ್ಗಾವಣೆ.!

ಬಣ್ಣಗಳಲ್ಲಿ ಲೀನವಾದ Btv ಮೇಕಪ್‌ಮ್ಯಾನ್‌ ಚೇತನ್

Scroll to Top