“ಪಬ್ಲಿಕ್ ಟಿವಿ”ಯಿಂದ ಹೊರನಡೆದೇ ಬಿಟ್ರಾ ಸಿನಿಮಾ ಪತ್ರಿಕೋದ್ಯಮದ “ಅಕ್ಷರಬ್ರಹ್ಮ” ಮಹೇಶ್ ದೇವಶೆಟ್ಟಿ ..!?

“ಪಬ್ಲಿಕ್ ಟಿವಿ”ಯಿಂದ ಹೊರನಡೆದೇ ಬಿಟ್ರಾ ಸಿನಿಮಾ ಪತ್ರಿಕೋದ್ಯಮದ “ಅಕ್ಷರಬ್ರಹ್ಮ” ಮಹೇಶ್ ದೇವಶೆಟ್ಟಿ ..!?

ಪಬ್ಲಿಕ್ ತೊರೆದು “ಫ್ರೀಡಂ” ಸೇರುತ್ತಿರುವುದಾಗಿ ಮಹೇಶ್ ದೇವಶೆಟ್ಟಿ ಪೋಸ್ಟ್-ಪಬ್ಲಿಕ್ ಟಿವಿಗೆ ದೊಡ್ಡ ಅಘಾತ..!!  

ಪಬ್ಲಿಕ್ ಟಿವಿ ಸಿನೆಮಾ ವಿಭಾಗದ ಮುಖ್ಯಸ್ಥ ಮಹೇಶ್ ದೇವಶೆಟ್ಟಿ
ಪಬ್ಲಿಕ್ ಟಿವಿ ಸಿನೆಮಾ ವಿಭಾಗದ ಮುಖ್ಯಸ್ಥ ಮಹೇಶ್ ದೇವಶೆಟ್ಟಿ

ಬೆಂಗಳೂರು:ಕನ್ನಡದ ಪ್ರಮುಖ ನ್ಯೂಸ್ ಚಾನೆಲ್ ಗಳ‍ಲ್ಲೊಂದಾದ ಪಬ್ಲಿಕ್ ಟಿವಿ ಯಿಂದ ಸಿನೆಮಾ ವಿಭಾಗದ ಮುಖ್ಯಸ್ಥರಾದ ಮಹೇಶ್ ದೇವಶೆಟ್ಟಿ ಹೊರನಡೆದಿದ್ದಾರಾ..?! ಹಾಗೊಂದು ಅನುಮಾನ ಕಾಡಲು ಕಾರಣ, ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅವರು ಹಾಕಿಕೊಂಡಿರುವ ಸ್ಟೇಟಸ್ .

ಅದನ್ನು ಗಮನಿಸಿದಾಗ ಹಿತಕರವಲ್ಲದ ಹಾಗೆಯೇ ಸಮಂಸಜಸವಲ್ಲದ ಯಾವುದೋ ಕಾರಣಕ್ಕೆ ಚಾನೆಲ್ ನ್ನು ತೊರೆದಿದ್ದಾರೆನ್ನುವ ಅನುಮಾನ ಮತ್ತಷ್ಟು ಬಲವಾಗುತ್ತೆ. ಅವರು ಬರೆದುಕೊಂಡಿರುವ ರೀತಿ ಗಮನಿಸಿದಾಗ  ಅದು ಅವರ ತೀರಾ ವೈಯುಕ್ತಿಕವಾದ ವಿಷವಿದ್ದಂತೆ ತೋರುತ್ತದೆ. ಅದರ ಬಗ್ಗೆ ಹೆಚ್ಚು ಚರ್ಚೆ ಮಾಡದೆ ಮಹೇಶ್ ದೇವಿಶೆಟ್ಟಿ ಎನ್ನುವಂಥ ಅಗಾಧ ಪ್ರತಿಭೆಯ ತಾಕತ್ತು-ಸ್ವಾಭಿಮಾನ-ಕಾರ್ಯಕ್ಷಮತೆ-ಬದ್ಧತೆ-ನಿಷ್ಟೆ-ಪ್ರಾಮಾಣಿಕತೆ-ಮೌಲ್ಯಾಧಾರಿತ  ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲುವಂಥ ಕೆಲಸವನ್ನಷ್ಟೇ ಮಾಡುತ್ತದೆ ಕನ್ನಡ ಫ್ಲ್ಯಾಶ್ ನ್ಯೂಸ್.

ಮಹೇಶ್ ದೇವಶೆಟ್ಟಿ  ಪಬ್ಲಿಕ್ ಟಿವಿಯನ್ನು ತೊರೆದಿರುವುದನ್ನು ಅವರೇ ಅಧೀಕೃತವಾಗಿ ತಮ್ಮ ಫೇಸ್ ಬುಕ್ ನಲ್ಲಿ ಪ್ರಕಟಿಸಿಕೊಂಡಿದ್ದಾರೆ.ತಮ್ಮ 8 ವರ್ಷಗಳ ಸುಧೀರ್ಘ ಒಡನಾಟದ ಕರುಳನ್ನು ಕತ್ತರಿಸಿ ಕೊಂಡಿರುವುದಾಗಿ ತಿಳಿಸಿದ್ದಾರೆ.( ಅದೇ ಚಾನೆಲ್ ನಲ್ಲಿ ಕೆಲಸ ಮಾಡುತ್ತಿರುವ ಶರಣು ಹುಲ್ಲೂರು  ಸಿನೆಮಾ ವಿಭಾಗ ಹಾಗೆಯೇ ಡಿಜಿಟಲ್ ವಿಭಾಗದ ಉಸ್ತುವಾರಿ ವಹಿಸಿಕೊಳ್ಳಲಿರುವುದು ಬಹುತೇಕ ಖಚಿತ) ಚಾನೆಲ್ ಜತೆಗಿನ ಭಾವನಾತ್ಮಕ ಪಯಣವನ್ನು ಮುಗಿಸುತ್ತಿರುವುದಾಗಿ ಹೇಳಿದ್ದಾರೆ.ಮುಂದಿನ ಪಯಣ ಫ್ರೀಡಂ ಟಿವಿ ಜತೆ ಎಂದು ಮುಂದಿನ ಆಯ್ಕೆಯೇ ನು ಎನ್ನುವುದನ್ನು ಅಧೀಕೃತವಾಗಿ ಘೋಷಿಸಿಕೊಂಡಿದ್ದಾರೆ.ಆದ್ರೆ  ಚಾನೆಲ್ ಜತೆಗಿನ ಅವರ ಭಾವನಾತ್ಮಕ ಒಡನಾಟ ಅಸಮಧಾನಪೂರ್ವಕವಾಗಿ ಕೊನೆಯಾಗುತ್ತಿರುವುದನ್ನು ತಮ್ಮ ನೋವು-ಆಕ್ರೋಶ-ಬೇಸರ-ದುಃಖದಿಂದ ಕೂಡಿದ ಪದಗಳ ಮೂಲಕ ಹೇಳಿರುವುದು ಬೇಸರ ಮೂಡಿಸುತ್ತದೆ.ಹಾಗಾಗಬಾರದಿತ್ತು ಎನ್ನುವ ವಿಷಾದ ಮಹೇಶ್ ದೇವಿಶೆಟ್ಟಿ ಅವರನ್ನು ಅವರೊಳಗಿರುವ ರಣಕೆಲಸಗಾರನ ಬಗ್ಗೆ ಬಲ್ಲ ಎಲ್ಲರಿಗೂ ಅನಿಸದೆ ಇರೊಲ್ಲ.

ಏನೇ ಇರಬಹುದು..ಯಾರು ಏನೇ ಅಂದುಕೊಳ್ಳಬಹುದು.. ದೇವಶೆಟ್ಟಿ ಅವರ ವಿದಾಯ, ಪಬ್ಲಿಕ್ ಟಿವಿ ಮಟ್ಟಿಗೆ ತುಂಬಲಾರದ ನಷ್ಟ ಎನ್ನುವುದರಲ್ಲಿ ಯಾವುದೇ  ಉತ್ಪ್ರೇಕ್ಷೆಯಿಲ್ಲ. ಇದು ಕಟುವಾಸ್ತವ. ಏಕೆಂದರೆ  ಮಹೇಶ್ ದೇವಶೆಟ್ಟಿ ಅವರಂಥ ಕಸುವುಳ್ಳಂಥ , ರಣವಾಗಿ ಕೆಲಸ ಮಾಡುವ ದೈತ್ಯ ಶ್ರಮಜೀವಿ-ಅಕ್ಷರ ಮೋಡಿಗಾರ, ಎಲ್ಲಕ್ಕಿಂತ ಹೆಚ್ಚಾಗಿ ಸಿನೆಮಾ ಜಗತ್ತಿನ ಒಳಹೊರಗನ್ನು ಎಲ್ಲರಿಗಿಂತಲೂ ಹೆಚ್ಚಾಗಿಯೇ ಬಲ್ಲ-ಸಿನಿ ದಿಗ್ಗಜರ ಜತೆ ಆತ್ಮೀಯವಾದ ಒಡನಾಟವುಳ್ಳ “ಸುದ್ದಿಮೂಲ”ವೊಂದನ್ನು ಪಬ್ಲಿಕ್ ಟಿವಿ ಕಳೆದುಕೊಂಡಿದ್ದು ಸತ್ಯ, ಸತ್ಯ…ಈ ನಡುವೆ ಮಹೇಶ್ ದೇವಶೆಟ್ಟಿ ಅವರಂಥ ನೂರು ಜನ ಬರ್ತಾರೆ..ಹೋಗ್ತಾರೆ..ಸ್ವಂತದ್ದೊಂದು ಐಡೆಂಟಿಟಿಗೆ ಅವರಿಗೆ ಚಾನೆಲ್ ಮುಖ್ಯವಾಗಿತ್ತೇ ಹೊರತು, ಚಾನೆಲ್ ಗೆ ಅವರೇನು ಅನಿವಾರ್ಯವಲ್ಲ.ಅವರಿಲ್ಲದೆ ಸ್ವಲ್ಪ ದಿನ ಕಷ್ಟವಾಗಬಹುದು-ಏರುಪೇರಾಗಬಹುದು..ಹಾಗಂತ ವ್ಯವಸ್ಥೆ ಹಾಗೆಯೇ ಇರುತ್ತೆ ಎಂದೇನಲ್ವಲಾ..? . ಪಬ್ಲಿಕ್ ಟಿವಿ ಹೆಸರೇಳಿದ್ರೆ ಅಪ್ಲಿಕೇಷನ್ ಹಿಡಿದು ಕ್ಯೂ ನಿಲ್ಲೋರ ಸಂಖ್ಯೆ ನೂರಾರು..ಹೀಗೆಲ್ಲಾ ಮಾತನಾಡಿಕೊಳ್ಳುವ ವರಿಗೇನು ಕಡಿಮೆಯಿಲ್ಲ..ಆದ್ರೆ ನೂರು ಜನ ಬರಬಹುದು..ಆದ್ರೆ ಅವರೆಲ್ಲಾ ಮಹೇಶ್ ದೇವಿಶೆಟ್ಟಿ ಅವರಂಥ ಕೆಲಸಗಾರರಾಗಿರೊಲ್ವಲ್ಲ ಎನ್ನುವುದೇ ಬಹುಮುಖ್ಯ ಪ್ರಶ್ನೆ.

ಕೆಲಸ ಮಾಡುವ ಚಾನೆಲ್ ಅಥವಾ ಪತ್ರಿಕೆಯಲ್ಲಿ ಕೆಲಸ ಮಾಡುವ ಕೆಲವೊಬ್ಬರು ಆ ಸಂಸ್ಥೆಯನ್ನು ತೊರೆದಾಗ ಅವರ ಬಗ್ಗೆ ಬರೆಯಲೇಬೇಕೆನಿಸುತ್ತದೆ.ಅಂಥಾ ಪತ್ರಕರ್ತರ ಪೈಕಿ ಮಹೇಶ‍್ ದೇವಶೆಟ್ಟಿ ಕೂಡ ಒಬ್ಬರು( ಇದೇ ಪಬ್ಲಿಕ್ ಟಿವಿಯ ಬದ್ರುದ್ದೀನ್ ಮಾಣಿ ಅವರು ಚಾನೆಲ್ ಬಿಟ್ಟಾಗಲೂ ಕನ್ನಡ ‍ಫ್ಲ್ಯಾಶ್ ನ್ಯೂಸ್ ಅದರ ಬಗ್ಗೆ ವಿಸ್ತ್ರತವಾಗಿ ಬರೆದಿತ್ತು.ಹಾಗೆ ಬರೆಯಬೇಕಿರುವುದು ನಮ್ಮ ವೃತ್ತಿಧರ್ಮ ಹಾಗೂ ಬದ್ಧತೆ ಎನ್ನುವುದು ನಮ್ಮ ನಂಬಿಕೆ).ಮಹೇಶ್ ದೇವಶೆಟ್ಟಿ ಅವರ ಬಗ್ಗೆ ಬರೆಯಬೇಕೆನಿಸುವುದಕ್ಕೆ ಅದರದೇ ಕಾರಣಗಳಿವೆ.ಸಿನೆಮಾದ ವಿಚಾರಕ್ಕೆ ಬಂದ್ರೆ ಟಿವಿ9, ಸುವರ್ಣದಂಥ ಚಾನೆಲ್ ಗಳಿಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಪಬ್ಲಿಕ್ ಟಿವಿಯನ್ನು ಪ್ರೇಕ್ಷಕರು ಸತತ 8 ವರ್ಷಗಳ ಕಾಲ ನಿರಂತರವಾಗಿ ನೋಡುವಂತೆ ಅಲ್ಲಿನ ಸಿನೆಮಾ ಸುದ್ದಿಗಳನ್ನು ರೂಪಿಸಿ, ಬಿಂಬಿಸಿದ್ದು ಮಹೇಶ್ ದೇವಶೆಟ್ಟಿ  ಅವರ ತಾಕತ್ತು.ಸಿನೆಮಾ ಸುದ್ದಿಗಳು ಪಬ್ಲಿಕ್ ಟಿವಿಯಲ್ಲಿ ಬಂದರೇನೆ ವಸ್ತುನಿಷ್ಟ-ಸತ್ಯ ಎನ್ನುವ ಮಟ್ಟಕ್ಕೆ ವೀಕ್ಷಕರಲ್ಲಿ ವಿಶ್ವಾಸಾರ್ಹತೆ ಮೂಡಿಸಿದ ಹೆ್ಗ್ಗಳಿಕೆ ದೇವಿಶೆಟ್ಟಿ ಅವರದು.ಆ ತಾಕತ್ತನ್ನು ಯಾವುದೇ ಸನ್ನಿವೇಶಗಳಲ್ಲೂ ರಾಜಿಗೆ ಬಲಿಗೊಡದೆ ನಂಬಿದ ವಸ್ತುನಿಷ್ಟ ಪತ್ರಿಕೋದ್ಯಮವನ್ನು ಉಸಿರಾಡಿದ ದೇವಿಶೆಟ್ಟಿ ಅವರನ್ನು ಪಬ್ಲಿಕ್ ಟಿವಿ ಉಳಿಸಿಕೊಳ್ಳಬೇಕೆತ್ತೇನೋ ಎಂದೆನಿಸುವುದು ಕೂಡ ಇದೇ ಕಾರಣಕ್ಕೆ.

ಮಹೇಶ್ ದೇವಶೆಟ್ಟಿ ನೋಡೊಕ್ಕೆ ಗರ್ವಿಷ್ಟ-ಕೋಪಿಷ್ಟ-ಮುಂಗೋಪಿ-ಹುಂಭ..ಹೀಗೆ ಎಂದೆನಿಸುವುದು ಸಹಜ.ಪತ್ರಿಕೋದ್ಯಮದಲ್ಲಿ ಅವರ ಬಗ್ಗೆ ವಿಶ್ಲೇಷಣೆ-ವ್ಯಾಖ್ಯಾನಗಳಿರುವುದೇ ಹೀಗೆ.ಆದ್ರೆ ಅದನ್ನು ಮೀರಿ ಅವರಲ್ಲಿರುವ ಅಪ್ರತಿಮ ಪ್ರತಿಭಾಶಾಲಿ,ಅಸಾಧಾರಣ ಬರಹಗಾರ-ಸಿನೆಮಾ ಸುದ್ದಿಗಳಿಗೆ ವಿಭಿನ್ನವಾದ ದೃಷ್ಟಿಕೋನ ನೀಡಿ ವೀಕ್ಷಕರು ಒಪ್ಪಿ-ಅಪ್ಪುವಂತೆ ಮಾಡುವ ಸೃಜನಶೀಲನನ್ನು ಸಹಿಸಿಕೊಳ್ಳಬಹುದಿತ್ತಲ್ಲ .ಸಿಟ್ಟು ಸೆಡವಿನಾಚೆಗೆ ಮಹೇಶ್ ದೇವಶೆಟ್ಟಿ ದೈತ್ಯವಾಗಿ-ರಣವಾಗಿ ಕೆಲಸ ಮಾಡುತ್ತಿದ್ದ ಸಂಗತಿ ಗೊತ್ತಿದ್ದರೂ ಅವರು ಬೇಸರ-ಆಕ್ರೋಶದಿಂದ, ಕೆಲಸ ಮಾಡಿದ ಸಂಸ್ಥೆಗೇನೆ ಹತಾಷೆಯಿಂದ ಹಿಡಿಶಾಪ ಹಾಕುವ ಮಟ್ಟದಲ್ಲಿ  ಅವರನ್ನು ನಡೆಸಿಕೊಂಡಿದ್ದೇಕೊ ಸರಿಯೆನಿಸುತ್ತಿಲ್ಲ ಎನ್ನುವುದು ಅವರನ್ನು ಹತ್ತಿರದಿಂದ ಬಲ್ಲ ಎಷ್ಟೋ ಪತ್ರಿಕೋದ್ಯಮ ಒಡನಾಡಿಗಳ ಮಾತು.

ಶರಣು ಹುಲ್ಲೂರು
ಶರಣು ಹುಲ್ಲೂರು

ಸಿನೆಮಾ ಜಗತ್ತನ್ನು ತೀರಾ ಹತ್ತಿರದಿಂದ ಬಲ್ಲ ಕೆಲವೇ ಕೆಲವು ಪತ್ರಕರ್ತರಲ್ಲಿ ದೇವಶೆಟ್ಟಿ ಕೂಡ ಒಬ್ಬರು.ಆ ಕೆಲವೇ ಕೆಲವು ಪತ್ರಕರ್ತರಲ್ಲೂ ದೇವಿಶೆಟ್ಟಿ ಏಕೆ ವಿಭಿನ್ನವಾಗಿ ,ನೆನಪಿನಲ್ಲಿ ಉಳಿಯುವಂಥ ಪತ್ರಕರ್ತರಾಗಿ ಏಕೆ ನೆನಪಾಗುತ್ತಾರೆಂದರೆ, ಸಿನಿ ಪತ್ರಿಕೋದ್ಯಮದಲ್ಲೂ ಅನ್ನ ನೀಡುವ ಅಕ್ಷರವನ್ನು ಅಡವಿಟ್ಟುಕೊಂಡು ಬದುಕುವವರೇ ಹೆಚ್ಚಾಗಿರುವಾಗ, ಅನ್ನಕ್ಕಷ್ಟೇ ಅದನ್ನು ಸೀಮಿತಗೊಳಿಸಿಕೊಂಡ “ಶುದ‍್ಧಹಸ್ತ”ದ ಕಾರಣಕ್ಕೆ..

ಹೌದು,ಇವತ್ತು  ಸಿನೆಮಾ ವಿಮರ್ಷೆ ಬರೆಯೊಕ್ಕೆ ನಿರ್ಮಾಪಕರು,ನಿರ್ದೇಶಕರ ಬಳಿ ವೀಕ್ಲಿ-ಮಂತ್ಲಿ ಫಿಕ್ಸ್ ಮಾಡಿಕೊಂಡಿರುವ, ಸಿನಿ ಲೋಕದಲ್ಲಿ ಬೆಳೆಯುವ ಉಮೇದಿನೊಂದಿಗೆ ಗಾಂಧೀನಗರಕ್ಕೆ ಕಾಲಿಡುವ ಅದೆಷ್ಟೋ ಉದಯೋನ್ಮುಖರನ್ನು ಹಣ ಪಡೆದು ಹೈಲೈಟ್ ಮಾಡುವ,ಅದೇ ಕಸುಬುದಾರಿಕೆಯಲ್ಲಿ ಹಣ-ಮನೆ ಮಾಡಿಕೊಂಡಿರುವ ಕೆಲವು ಸಿನಿ ಪತ್ರಕರ್ತರ ನಡುವೆ ಇದ್ಯಾವುದಕ್ಕೂ ಅಕ್ಷರವನ್ನು ಅಡವಿಟ್ಟುಕೊಳ್ಳದೆ ವಸ್ತುನಿಷ್ಟ ಪತ್ರಿಕೋದ್ಯಮ ಮಾಡಿಕೊಂಡು ಬಂದವರು ಮಹೇಶ್ ದೇವಶೆಟ್ಟಿ.. ತತ್ವ ಸಿದ್ದಾಂತದ ವಿಚಾರಕ್ಕೆ,ಕೆಲಸದ ವಿಚಾರಕ್ಕೆ ಎಗರಾಡುವುದು-ಅರಚಾಡಿ ರಂಪಾಟ ಮಾಡುವುದನ್ನು ಬಿಟ್ಟರೆ, ಹಣದ ವಿಚಾರದಲ್ಲಿ ಎಂದೂ ಕೈಗೆ ಕೆಸರು-ಹೆಸರಿಗೆ ಕಳಂಕ ಹತ್ತಿಸಿಕೊಳ್ಳದ ಪತ್ರಕರ್ತ ದೇವಶೆಟ್ಟಿ.ಅವರ ಬಗ್ಗೆ ಎಲ್ಲಾ ಗೊತ್ತಿದ್ದೂ, ಇಂಥಾ ಬದ್ಧತೆಯುಳ್ಳ ಪತ್ರಕರ್ತನನ್ನು ಪಬ್ಲಿಕ್ ಟಿವಿ ಉಳಿಸಿಕೊಳ್ಳಲಿಲ್ಲವಲ್ಲ ಎನ್ನುವುದಷ್ಟೇ ಬೇಸರ.

ತಮ್ಮ ಆಕರ್ಷಣೀಯ ಬರವಣಿಗೆ- ವಿಭಿನ್ನ ನಿರೂಪಣಾ ಶೈಲಿಯಿಂದಲೇ ಪಬ್ಲಿಕ್ ಟಿವಿ ಸಿನೆಮಾ ಸುದ್ದಿಗಳನ್ನು ವೀಕ್ಷಕರು ಇಷ್ಟಪಟ್ಟು ನೋಡುವಂತೆ ಮಾಡಿದ್ದವರು ಮಹೇ್ಶ್ ದೇವಶೆಟ್ಟಿ 8 ವರ್ಷಗಳ ಕಾಲ ಪಬ್ಲಿಕ್ ಟಿವಿ ಪ್ರಮುಖ ಚಾನೆಲ್ ಗಳಿಗೆ  ನಿರಂತರ ಪೈಪೋಟಿ ನೀಡುವಂತೆ ಮಾಡಿದ್ದ ದಿಗ್ಗಜ ಪತ್ರಕರ್ತನೇ ತನಗಿಷ್ಟವಿಲ್ಲದ ಕಾರಣಕ್ಕೆ ಪಬ್ಲಿಕ್ ಟಿವಿಯಿಂದ ಹೊರಬಿದ್ದರೋ,ಅಥವಾ ಸಂಸ್ಥೆಯೇ ಅವರಿಗೆ ಗೇಟ್ ಪಾಸ್ ಕೊಡ್ತೋ ಅದು ಚಾನೆಲ್ ನ ಆಡಳಿತ ಹಾಗೂ ಮಹೇಶ್ ದೇವಶೆಟ್ಟಿ ಅವರಿಗೆ ಮಾತ್ರ ಗೊತ್ತಿರುವ ವಿಚಾರ.ಆದ್ರೆ ತನ್ನ ಮುಂದಿನ ಪಯಣ ಪ್ರೀಡಂ ಟಿವಿಯೊಂದಿಗೆ ಎಂದು ಹೇಳಿಕೊಂಡಿರುವುದು ಮಾತ್ರ ಅವರ ನಿರ್ಗಮನವನ್ನು ದೃಢೀಕರಿಸುವಂತಿದೆ.

ಎಲ್ಲೇ ಇರಲಿ,ಯಾವುದೇ ಚಾನೆಲ್ ಗೇ ಹೋಗಲಿ ತಾನು ನಂಬಿದ ಸಿದ್ದಾಂತಕ್ಕೇ ಬದ್ದನಾಗಿದ್ದುಕೊಂಡು ಕೆಲಸ ಮಾಡುವ ವೃತ್ತಿನಿಷ್ಟೆಯ ಹಿರಿಯ ಪತ್ರಕರ್ತ ಮಹೇಶ್ ದೇವಶೆಟ್ಟಿ ಅವರ ಮುಂದಿನ ಪಯಣ ಅವರೇ ಹೇಳಿಕೊಂಡಿರುವಂತೆ ಫ್ರೀಡಂ ಟಿವಿಯಲ್ಲಿದ್ದಂತಿದೆ.ಅವರ ಹೊಸ ಪಯಣಕ್ಕೆ ಶುಭವಾಗಲಿ, ಹತ್ತಾರು ನಿರೀಕ್ಷೆಗಳೊಂದಿಗೆ ಹೊಸ ಹುರುಪಿನಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಎಂಡಿ ನಾಗರಾಜ್ ಅವರ ಕೈ ಬಲಪಡಿಸುವಂತ ಕೆಲಸ ಮಹೇಶ್ ದೇವಶೆಟ್ಟಿ ಅವರಿಂದಾಗಲಿ..ಪಬ್ಲಿಕ್ ಟಿವಿಯಲ್ಲಿ ಸಿಗದೇ ಹೋಗಿರಬಹುದಾದ ನೆಮ್ಮದಿ “ಫ್ರೀಡಂ”ನಲ್ಲಾದರೂ ಸಿಗುವಂತಾಗಲಿ.ಆದ್ರೆ ಒಂದಂತೂ ಸತ್ಯ..ಮಹೇಶ್ ದೇವಿಶೆಟ್ಟಿ ಇದ್ದಲ್ಲಿ ಹೊಸತನ ಇದ್ದೇ ಇರುತ್ತೆ.ಎಲ್ಲಕ್ಕಿಂತ ಹೆಚ್ಚಾಗಿ ಸಿನೆಮಾ ಸುದ್ದಿಗಳಲ್ಲೂ  ಫ್ರೀಡಂ ನ ವರ್ಚಸ್ಸು ಬದಲಾಗುವ ಸಾಧ್ಯತೆಗಳಿವೆ…ಮಹೇಶ್ ದೇವಶೆಟ್ಟಿ ಅವರಿಗೆ ಒಳ್ಳೆಯದಾಗಲಿ.ಅವರು ಅಂದುಕೊಂಡಿದ್ದು ಫ್ರೀಡಂನಲ್ಲಿ ಕಾರ್ಯರೂಪಕ್ಕೆ ಬರುವಂತಾಗಲಿ ಎನ್ನುವುದೇ ಕನ್ನಡ ಫ್ಲ್ಯಾಶ್ ‍ನ್ಯೂಸ್ ನ ಆರೈಕೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *