”ಆಂಕರ್ಸ್” ಗಳು ಹಸಿಬಿಸಿ ದೃಶ್ಯ-ಚಿತ್ರಗಳಲ್ಲಿರೋದೇ ನಿಜವಾದ್ರೆ, ಪ್ರಜ್ವಲ್ ಜತೆಗೆ ಅಂತದ್ದೊಂದು ಸಂಬಂಧ ಸೃಷ್ಟಿಯಾಗಿದ್ದೇಗೆ..? ವಿವೇಚನೆಯನ್ನೇ ಮರೆತು “ಆಪ್ತ”ವಾಗುವಷ್ಟು ಗಾಢವಾಗಿದ್ದೇಗೆ.,?
ಇದು ನಿಜವೇ ಆಗಿದ್ದರೆ ಮಾದ್ಯಮ ಲೋಕಕ್ಕೆ ಇದೊಂದು ಕಪ್ಪು ಚುಕ್ಕೆಯಾಗಬಲ್ಲಂಥ ವಿದ್ಯಾಮಾನ ಆಗಬಹು ದೇನೋ..? ಏಕೆಂದರೆ ಪೋಲಿ ಹಾಗೂ ಅಸಹ್ಯಕರವಾದ ದೃಶ್ಯಗಳಲ್ಲಿ ಲಾಕ್ ಆಗುವಂಥ ಅಸಹಾಯಕ ಸನ್ನಿ ವೇಶವೇನೂ ನಮ್ಮ ಆಂಕರ್ಸ್ ಗಳಿಗೆ ಬಂದಿರಲು ಸಾಧ್ಯವೇ ಇಲ್ಲ.ಇದು ಗೊತ್ತಿದ್ದೇ ನಡೆದಿರಬಹುದಾದ ಪ್ರಜ್ಞಾ ಪೂರ್ವಕ ಪ್ರಮಾದ ಬಿಟ್ಟರೆ ಬೇರೆನೋ ಆಗಿರಲು ಸಾಧ್ಯವೇ ಇಲ್ಲ..ಹೀಗೆ ಮಾತನಾಡಿಕೊಳ್ಳುತ್ತಿದೆ ಮಾದ್ಯಮ ಜಗತ್ತು.
ಸಂಸದ ಪ್ರಜ್ವಲ್ ರೇವಣ್ಣನದ್ದು ಎನ್ನಲಾಗುತ್ತಿರುವ ಆ ಪೆನ್ ಡ್ರೈವ್ ನಲ್ಲಿರುವ ಪೋಲಿ–ಅಸಹ್ಯಕರ ದೃಶ್ಯಾವಳಿಗಳಲ್ಲಿ ಆಂಕರ್ಸ್ ಗಳಿದ್ದಾರೆನ್ನುವ ಸುದ್ದಿ ಕೆಲದಿನಗಳಿಂದ ಹರಿದಾಡುತ್ತಲಿದೆ.ಆಕ್ಟರ್ಸ್–ಆಫೀಸರ್ಸ್ ಗಳ ಜತೆಗೆ ಆಂಕರ್ಸ್ ಗಳ ಹೆಸರು ಕೂಡ ಥಳಕು ಹಾಕಿಕೊಳ್ಳುತ್ತಿದೆ.ಪ್ರಜ್ವಲ್ ರೇವಣ್ಣ ಸಂಬಂಧಿ ಪೆನ್ ಡ್ರೈವ್ ನ ವಿಚಾರದ ಬಗ್ಗೆ ವರದಿ ಮಾಡುತ್ತಿರುವ ನ್ಯೂಸ್ ಚಾನೆಲ್ ಗಳಲ್ಲಿನ ಕೆಲವು ಆಂಕರ್ಸ್ ಗಳೇ ಪೆನ್ ಡ್ರೈವ್ ನಲ್ಲಿ ಬಂಧಿಯಾಗಿದ್ದಾರೆನ್ನುವುದು ಆಶ್ವರ್ಯದೊಂದಿಗೆ ಅಸಹ್ಯವನ್ನೂ ಮೂಡಿಸಿದೆ.
ಸುದ್ದಿ ಓದುವವರೇ ಸುದ್ದಿಯಾಗುತ್ತಿರುವುದು ಇದೇ ಮೊದಲೇನಲ್ಲ.ಈ ಹಿಂದೆ ಅನೇಕ ವಿದ್ಯಾಮಾನ ಗಳಲ್ಲಿ ಇದು ನಡೆದೋಗಿದೆ.ಆದರೆ ಸಂದರ್ಭ–ಸನ್ನಿವೇಶಕ್ಕೆ ವ್ಯತ್ಯಾಸವಿದೆ.ಇದನ್ನು ಮಾಮೂಲು ಘಟನೆ ಎಂದು ತಳ್ಳಿಹಾಕೊಕ್ಕೆ ಸಾಧ್ಯವಿಲ್ಲ.ಸುದ್ದಿಕ್ಷೇತ್ರಕ್ಕೆ ಸಂಬಂಧಿಸಿದ್ದೆಂದು ಮುಚ್ಚಿ ಹಾಕಲಿಕ್ಕೂ ಸಾಧ್ಯವಿಲ್ಲ.ರಾಜ್ಯಾದ್ಯಂತ ಕೋಲಾಹಲವನ್ನೇ ಸೃಷ್ಟಿಸಿರುವುದರಿಂದ ಎಲ್ಲಾ ವೀಡಿಯೋ–ಫೋಟೋಗಳಂತೆ ಇದು ಕೂಡ ಬಹಿರಂಗವಾಗುವುದನ್ನೇ ರಾಜ್ಯ ಕುತೂಹಲದಿಂದ ಕಾಯುತ್ತಿದೆ. ಮಾದ್ಯಮಗಳಲ್ಲೂ ಕೂಡ ಆ ಮಹಾನ್ ಆಂಕರ್ಸ್ ಗಳು ಯಾರೆನ್ನುವ ಕೌತುಕವಿದೆ.ಆದರೆ ಪೆನ್ ಡ್ರೈವ್ ನಲ್ಲಿ ಬೆತ್ತಲಾಗಿರಬಹುದಾದ ಆಂಕರ್ಸ್ ಗಳಿಗೆ ಮಾತ್ರ ಎದೆಯಲ್ಲಿ ಢವ ಢವ ಶುರುವಾಗಿದೆ.
ಇದು ನಿಜವೇ ಆಗಿದ್ದರೆ, ಪ್ರಜ್ವಲ್ ರೇವಣ್ಣನ ಖಾಸಗಿ ಪ್ರಪಂಚದಲ್ಲಿ ನಮ್ಮ ಆಂಕರ್ಸ್ ಗಳಿಗೇನು ಕೆಲಸ…? ತೆರೆ ಮೇಲೆ ನ್ಯೂಸ್ ಓದಿಕೊಂಡು ಇರಬೇಕಾದ ಇವರು ಹೇಗೆ ಎಂಟ್ರಿ ಹೊಡೆದ ರೆನ್ನುವುದೇ ಆಶ್ಚರ್ಯ…! ಅನೇಕ ರಾಜಕಾರಣಿಗಳಿಗೆ ಅನೇಕ ಪತ್ರಕರ್ತೆಯರು ತೀರಾ ಸನಿಹ–ಸಾಮೀಪ್ಯ ದಲ್ಲಿರುವ ಬೆಳವಣಿಗೆಗಳ ಬಗ್ಗೆ ಹಿಂದಿನಿಂದಲೂ ಕೇಳಿದ್ದೇವೆ.ರಾಜಕಾರಣಿಗಳ ಖಾಸಗಿ ದರ್ಬಾರ್ ನಲ್ಲಿ ಸಖಿಯರಾಗಿ ಮೆರೆದು ಅವರಿಂದ ಎಲ್ಲಾ ರೀತಿಯ ಸೌಲಭ್ಯ–ಸವಲತ್ತು ಪಡೆದು ಬದುಕನ್ನು ಭದ್ರಮಾಡಿಕೊಂಡ ಮಹಿಳಾ ಪತ್ರಕರ್ತೆಯರ ನೂರಾರು ಗಾಸಿಪ್ ಗಳು ಇವತ್ತಿಗೂ ಪತ್ರಿಕೋದ್ಯಮ ದಲ್ಲಿ ಪಡಸಾಲೆಯಲ್ಲಿ ಕೇಳುತ್ತಲೇ ಇರುತ್ತೆ. (ಪ್ರತಿಷ್ಟಿತ ಇಂಗ್ಲೀಷ್ ಪತ್ರಿಕೆಯ “ವರದಿಗಾರ್ತಿ” ಯೋರ್ವರು ಬೆಂಗಳೂರಿನ ಅತ್ಯಂತ ಸಂಭಾವಿತ–ಸುಶಿಕ್ಷಿತ ವಿಧಾನಸಭಾ ಕ್ಷೇತ್ರವೊಂದರ ಶಾಸಕರಾಗಿದ್ದವರ ಖಾಸಗಿ ದರ್ಬಾರ್ ನಲ್ಲಿ ಮರೆದ ಸನ್ನಿವೇಶ ಮಾದ್ಯಮದಲ್ಲಿ ಇಂದಿಗೂ ಚರ್ಚೆಯಾಗುತ್ತಲೇ ಇರುತ್ತದೆ).
ಪೆನ್ ಡ್ರೈವ್ ನಲ್ಲಿ ಆಂಕರ್ಸ್ ಗಳ ಹಸಿಬಿಸಿ ದೃಶ್ಯ-ಚಿತ್ರಗಳಿವೆ ಎನ್ನುವುದು ತನಿಖೆಯಿಂದ ದೃಢಪಟ್ಟಿದ್ದೇ ಆದಲ್ಲಿ ,ಪ್ರಜ್ವಲ್ ಗೂ.,ಆಂಕರ್ಸ್ ಗೂ ಏನ್ ಸಂಬಂಧ..ಅವರ ನಡುವೆ ಸಂಪರ್ಕ ಸೃಷ್ಟಿಯಾಗಿದ್ದಾದರೂ ಹೇಗೆ..ಯಾವಾಗ..? ಅಂತದ್ದೊಂದು ಸಲಿಗೆ-ಆತ್ಮೀಯತೆ ಬೆಳೆಯೊಕ್ಕೆ ಕಾರಣವಾದ ಸನ್ನಿವೇಶವಾದ್ರೂ ಏನಿರಬಹುದು..ಆ ಸಂಬಂಧ-ಸಂಪರ್ಕ ಎಷ್ಟು ವರ್ಷಗಳದ್ದಾಗಿರಬಹುದು.,? ಎಷ್ಟರ ಮಟ್ಟಿಗೆ ಗಾಢವಾಗಿದ್ದಿದಿರಬಹುದು..? ಅದು ಕೊಡುಕೊಳ್ಳುವಿಕೆ ವರೆಗೆ ಮುಂದುವರೆಯುತ್ತೆ ಎನ್ನುವುದಾದ್ರೆ ಅದು ಬೆಳೆದ್ದಾದರೂ ಹೇಗೆ.? ಹೀಗೆ ಸಾಕಷ್ಟು ಪ್ರಶ್ನೆಗಳು ಮೂಡೋದು ಸಹಜ.ಪೆನ್ ಡ್ರೈವ್ ನಲ್ಲಿ ಆಂಕರ್ಸ್ ಗಳದ್ದೂ ಇದೆ ಎನ್ನುವ ಸುದ್ದಿ ಪಸರ್ ಆಗುತ್ತಿದ್ದಂತೆ ಇಡೀ ಮಾದ್ಯಮ ನಾಚಿಕೆಯಿಂದ ಕೇಳುತ್ತಿರುವುದೇ ಇಂತದೊಂದಿಷ್ಟು ಪ್ರಶ್ನೆಗಳನ್ನು..ಆದ್ರೆ ಅವರೆಲ್ಲಾ ಯಾರು ಎನ್ನುವುದು ಬಹಿರಂಗವಾದ ಮೇಲೆ ಅದಕ್ಕೆ ಸಂಬಂಧಿಸಿದಂತೆ ನಡೆಯುವ ತನಿಖೆಯಿಂದಲೇ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಬಹುದೇನೋ…?
ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಸಿಕ್ಕಿರುವ ಒಂದಷ್ಟು ಮೂಲಗಳ ಮಾಹಿತಿ ಪ್ರಕಾರ ಈ ಆಂಕರ್ಸ್ ಗಳ ಜತೆಗೆ ಪ್ರಜ್ವಲ್ ಗೆ ಆತ್ಮೀಯವಾದ ಒಡನಾಟ-ಸಲಿಗೆ-ಆತ್ಮೀಯತೆ ಇರೋದು ಸತ್ಯವಂತೆ..ಅವರ್ಯಾರು ಆತನ ಕಾಮತೃಷೆಗೆ ಬಲಿಯಾಗುವಷ್ಟು ಅಸಹಾಯಕತೆಗೇನೂ ಒಳಪಟ್ಟಿರಲಿಲ್ಲ ಎನ್ನಲಾಗುತ್ತಿದೆ.ಎಲ್ಲರೂ ಒಪ್ಪಿಗೆ ಮೇರೆಗೆ ಆತನೊಂದಿಗೆ ಕೊಡುಕೊಳ್ಳುವಿಕೆಯಲ್ಲಿ ಪಾಲ್ಗೊಂಡಿದ್ದರೂ ಆಶ್ವರ್ಯವಿಲ್ಲ ಎನ್ನಲಾಗುತ್ತಿದೆ.ಆದರೆ ಪ್ರಜ್ವಲ್ ಗೆ ಹೇಗೆ ಈ ಆಂಕರ್ಸ್ ಗಳು ಸಂಪರ್ಕಕ್ಕೆ ಬಂದರೆನ್ನುವುದೇ ಇಲ್ಲಿ ಎಲ್ಲರನ್ನು ಕಾಡುತ್ತಿರುವ ಮೂಲಭೂತ ಪ್ರಶ್ನೆ.
ಟಿವಿ ಪರದೆಗಳ ಮೇಲೆ ತಮ್ಮದೇ ಆದ ಸ್ಟೈಲ್-ಮ್ಯಾನರಿಸಂ ಮೂಲಕ ನೋಡುಗರನ್ನು ಆಕರ್ಷಿಸುವ ಆಂಕರ್ಸ್ ಗಳು ಹಿಂದೆಯೂ ಇದ್ದರು..ಈಗಲೂ ಇದ್ದಾರೆ..ಮುಂದೆಯೂ ಇರಲಿದ್ದಾರೆ.ಅವರ ಪೈಕಿ ಆ ಆಕರ್ಷಣೆಯನ್ನು ಕೇವಲ ತೆರೆಯ ಮೇಲಿನ ಕರ್ತವ್ಯಕ್ಕಷ್ಟೇ ಸೀಮಿತಗೊಳಿಸಿಕೊಂಡು ಕೆಲಸ ಮಾಡುವವರೊಂದು ವರ್ಗವಾದ್ರೆ, ಇನ್ನು ಕೆಲವರು ಹಳ್ಳಕ್ಕೆ ಬೀಳಿಸಿಕೊಳ್ಳೋವರೆಗಿನ ಹಿತಾಸಕ್ತಿಗೂ ಬಳಸಿಕೊಳ್ಳುವ ವರ್ಗ ಮತ್ತೊಂದು. ಬಹುಷಃ ಪ್ರಜ್ವಲ್ ಪೆನ್ ಡ್ರೈವ್ ನಲ್ಲಿದ್ದಾರೆನ್ನಲಾಗುತ್ತಿರುವ ಆಂಕರ್ಸ್ ಗಳು ಎರಡನೇ ಕೆಟಗರಿಗೆ ಸೇರುವವರಾಗಿರಬಹುದೆನ್ನುವುದರಲ್ಲಿ ಯಾವುದೇ ಅತಿಶಯವಿಲ್ಲ.
ಪೆನ್ ಡ್ರೈವ್ ನಲ್ಲಿ ಕೆಲ ಆಂಕರ್ಸ್ ಗಳ ಬಂಡವಾಳ ಅಡಗಿದೆ ಎನ್ನುವ ಸುದ್ದಿ ಹರಡುತ್ತಿದ್ದಂತೆ ಆ ಸುದ್ದಿಗೆ ರೆಕ್ಕೆಪುಕ್ಕ ಕಟ್ಟುವ ಕೆಲಸವೂ ನಡೆಯುತ್ತಿದೆ. ಮಾದ್ಯಮಗಳಲ್ಲಂತೂ ಯಾರಿರಬಹುದು ಆ ಮಾಯಾಂಗನೆಯರು ಎಂಬ ಕುತೂಹಲ ಮೂಡಿದೆ.ಅವರವರಲ್ಲೇ ಕೆಲವರ ಹೆಸರುಗಳು ಪ್ರಸ್ತಾಪಿಸಲ್ಪಡುತ್ತಿವೆ,ಆದರೆ ಯಾವುದಕ್ಕೂ ಖಚಿತತೆ ಇಲ್ಲದಿರುವುದರಿಂದ ಯಾವುದನ್ನೂ ಬಹಿರಂಗ ಮಾಡುತ್ತಿಲ್ಲ.ಕೆಲವು ವಿಕೃತ ಮನಸ್ತಿತಿಯವರು ಯಾರ ವೀಡಿಯೋ ಸಿಗದಿದ್ದರೂ ಪರ್ವಾಗಿಲ್ಲ,ಆಂಕರ್ಸ್ ಗಳ ವೀಡಿಯೋ ಅಥವಾ ಫೋಟೋಸ್ ಇದ್ರೆ ಹೇಗಾದ್ರೂ ಮಾಡಿ ಕಳುಹಿಸಿ ಎಂದು ಹಾಸನದ ಕೆಲ ಪತ್ರಕರ್ತರನ್ನು ರಿಕ್ವೆಸ್ಟ್ ಮೇಲೆ ರಿಕ್ವೆಸ್ಟ್ ಮಾಡಿಕೊಳ್ಳುತ್ತಿದ್ದಾರೆನ್ನುವುದು ಕೂಡ ಅಷ್ಟೇ ಸತ್ಯ.
ಈ ಪೆನ್ ಡ್ರೈವ್ ಪುರಾಣದಿಂದ ಲೇಡಿ ಆಂಕರ್ಸ್ ಗಳ ಸಮೂಹದ ಮೇಲೆ ಕೆಟ್ಟ ಅಭಿಪ್ರಾಯ ಮೂಡಿರುವುದಂತೂ ಸತ್ಯ.ಯಾರೋ ಕೆಲವರು ತಮ್ಮ ಸ್ವಾರ್ಥಹಿತಾಸಕ್ತಿಗಳಿಗೆ ಮಾಡಿಕೊಳ್ಳುವ ರಂಪಾಟ-ಯಡವಟ್ಟಿಗೆ ಇಡೀ ಆಂಕರ್ಸ್ ಗಳ ಬಗ್ಗೆ ಜನ ಕೆಟ್ಟದಾಗಿ ಮಾತನಾಡುವಂತಾಗಿದೆ.ಎಲ್ಲಾ ಆಂಕರ್ಸ್ ಗಳೂ ಹೀಗೇನಾ ಎಂದು ಜನ ಮಾತನಾಡುವಂತಾಗಿದೆ.ಎಲ್ಲರಿಗೂ ಗೊತ್ತಿರುವಂತೆ ಇವತ್ತು ಮಾದ್ಯಮಗಳಲ್ಲಿ ಕೆಲಸ ಮಾಡುವ ನಮ್ಮ ಹೆಣ್ಣು ಮಕ್ಕಳಿಗೆ ಕೊಡಲಾಗುತ್ತಿರುವ ಅಗೌರವ ಕೂಡ ಅಷ್ಟಕ್ಕಷ್ಟೆ.ಅಂತದ್ದರಲ್ಲಿ ಇಂಥ ಘಟನೆಗಳಾದಾಗ ಮಹಿಳಾ ಸಿಬ್ಬಂದಿಯನ್ನು ತೀರಾ ತುಚ್ಛವಾಗಿ ನೋಡುವಂತ ಪರಿಸ್ತಿತಿ-ಸನ್ನಿವೇಶ ನಿರ್ಮಾಣವಾಗಿಬಿಡುತ್ತೆ ಎನ್ನುವುದು ಕೂಡ ಸತ್ಯ.
ಆಂಕರ್ಸ್ ಗಳ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ವೇದಿಕೆ ಕಲ್ಪಿಸಿಕೊಟ್ಟಿರುವ ಈ ಪೆನ್ ಡ್ರೈವ್ ನಲ್ಲಿರುವವರ ಹೆಸರುಗಳು ಆದಷ್ಟು ಶೀಘ್ರ ಬಯಲಾಗಲೇಬೇಕಿದೆ. ಇಲ್ಲವಾದಲ್ಲಿ ಒಂದಿಬ್ಬರು ಮಾಡಿಕೊಂಡ ಯಡವಟ್ಟಿನಿಂದ ಎಲ್ಲಾ ಆಂಕರ್ಸ್ ಸಮುದಾಯದ ಮೇಲೂ ಕೆಟ್ಟ ಹೆಸರು ಬರುವಂತಾಗಬಹುದು.ತಾವಾಯ್ತು ತಮ್ಮ ಕೆಲಸವಾಯ್ತೆಂದು ಪ್ರಾಮಾಣಿಕತೆ ಹಾಗೂ ಶೃದ್ಧೆಯಿಂದ ಕೆಲಸ ಮಾಡುತ್ತಿರುವ ಬಹುತೇಕ ಆಂಕರ್ಸ ಗಳು ತಲೆ ಎತ್ತಿಕೊಂಡು ಅಡ್ಡಾಡದಂಥ ಸ್ತಿತಿ ನಿರ್ಮಾಣವಾಗಬಹುದು(ಈಗಾಗಲೇ ಬಹುತೇಕ ಆಂಕರ್ಸ್ ಕೆಲವರ ಕಾರಣಕ್ಕೆ ತೀವ್ರ ಮುಜುಗರಕ್ಕೆ ಈಡಾಗಿದ್ದಾರೆ).
ಒಂದ್ವೇಳೆ ಕೆಲವು ಆಂಕರ್ಸ್ ಗಳು ಅಸಹಾಯಕತೆಯಿಂದಲೋ, ಸ್ವಯಂಪ್ರೇರಿತವಾಗೋ ಪೋಲಿ ದೃಶ್ಯ ಅಥವಾ ಚಿತ್ರಗಳಲ್ಲಿ ಕಾಣಿಸಿಕೊಂಡಿರಬಹುದೆನ್ನುವುದು ತನಿಖೆ ವೇಳೆ ಬಹಿರಂಗಗೊಂಡು,ಅವರ ಮುಖಗಳೇನಾದ್ರೂ ಅನಾವರಣಗೊಂಡರೆ, ಸುದ್ದಿ ವಾಹಿನಿಗಳ ಮ್ಯಾನೇಜ್ಮೆಂಟ್ ಅಂಥಾ ಆಂಕರ್ಸ್ ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದು ಸೂಕ್ತ ಹಾಗೂ ಸಮರ್ಥವಾದ ನಿರ್ದಾರವಾಗಬಹುದು. ಇಲ್ಲವಾದಲ್ಲಿ ಸಮಾಜ ಮಾದ್ಯಮ ಜಗತ್ತನ್ನು ಯಾವ ಪದಗಳಲ್ಲಿ ನಿಂದಿಸುತ್ತೋ..ಅಪಮಾನಿಸುತ್ತೋ ಆ ದೇವರೇ ಬಲ್ಲ.