WOMEN JOURNALIST RADHA HIRAGAUDER JOINES SPEED NEWS.. “ಸ್ಪೀಡ್‌ ನ್ಯೂಸ್‌” ಗೆ ರಾಧಾ ಹಿರೇಗೌಡರ್‌ ಸಾರ‍ಥ್ಯ..ಇಂದಿನಿಂದಲೇ “ರಾಧಾ ದರ್ಬಾರ್‌” ಶುರು..

ಕನ್ನಡ ಸುದ್ದಿ ವಾಹಿನಿಗಳಲ್ಲಿ ಜ್ಞಾಪಕದಲ್ಲಿಡಬಹುದಾದ ಬೆರಳೆಣಿಕೆಯ ನಿರೂಪಕರಲ್ಲಿ ರಾಧಾ ಹಿರೇಗೌಡರ್‌ ಮುಂಚೂಣಿಯಲ್ಲಿ ನಿಲ್ಲಬಲ್ಲಂಥ ತೂಕ ಇರುವಂತ ಪತ್ರಕರ್ತೆ.ಕೇವಲ ಅಂದ ಚೆಂದ ಎನ್ನೋದೇ ನಿರೂಪಕರ ಮಾನದಂಡವಾಗಿರುವ ಸನ್ನಿವೇಶದಲ್ಲಿ ಇದೆಲ್ಲಕ್ಕೂ ಅಪವಾದ ಎನ್ನುವಂತೆ ಸ್ವಯಂ ಪ್ರತಿಭೆ-ಸಾಮರ್ಥ್ಯ-ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆದಿಡುವಂಥ ಮಾತುಗಾರಿಕೆ ಮೂಲಕ ಜನಪ್ರಿಯರಾದವರು ರಾಧಾ ಹಿರೇಗೌಡರ್..ಟೆಲಿಪ್ರಾಂಪ್ಟರ್‌ ನಲ್ಲಿ ಬರೋದನ್ನಷ್ಟೇ ಗಿಳಿಪಾಠದಂತೆ ಪ್ರೇಕ್ಷಕರಿಗೆ ಒಪ್ಪಿಸುವುದೇ ಆಂಕರ್‌ ಗಳ ಕಾಯಕವಾಗಿರುವ ಸಂದರ್ಭದಲ್ಲಿ ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಜ್ಞಾನವನ್ನಿಟ್ಟುಕೊಂಡು ವಿಚಾರ ಮಂಡಿಸುವ ವಿಶಿಷ್ಟತನದಿಂದಲೇ ರಾಧಾ ಹಿರೇಗೌಡರ್‌  ಹೆಸರಾದವರು..ಇಂಥಾ ರಾಧಾ ಹಿರೇಗೌಡರ್‌ ಗ್ಯಾರಂಟಿ ನ್ಯೂಸ್‌ ನ … Read more

EXCLUSIVE…ARNAB, “KARNATAKA WANTS TO kNOW” ಏನಾಗಲಿದೆ ಕರ್ನಾಟಕದಲ್ಲಿ “ರಿಪಬ್ಲಿಕ್ ಕನ್ನಡ”  ಭವಿಷ್ಯ..!?

ಕರ್ನಾಟಕದಲ್ಲಿ ತಲೆಕೆಳಗಾಯ್ತಾ, ಆರಕ್ಕೇರದ,ಮೂರಕ್ಕೆ ಇಳಿಯದ ಅರ್ನಾಬ್ ಕನಸಿನ “ರಿಪಬ್ಲಿಕ್ ಕನ್ನಡ”(republic kannada) ಚಾನೆಲ್ ನ   ಲೆಕ್ಕಾಚಾರ..! ಬೆಂಗಳೂರು:ಮಾದ್ಯಮ ಕ್ಷೇತ್ರದ ದೈತ್ಯ-ದಿಗ್ಗಜ ಅರ್ನಾಬ್ ಗೋಸ್ವಾಮಿ(arnab goswami) ತುಂಬಾ ಮಹಾತ್ವಾಕಾಂಕ್ಷೆ-ಕನಸು-ನಿರೀಕ್ಷೆಯಲ್ಲಿ ಕಟ್ಟಿದ ರಿಪಬ್ಲಿಕ್ ನ್ಯೂಸ್ ಚಾನೆಲ್(republic news channel) ಅವರ ಲೆಕ್ಕಾಚಾರಗಳಂತೆ ನಡೆಯುತ್ತಿದೆ.ಅದರಿಂದ ಅರ್ನಾಬ್ ಸಂತುಷ್ಟರಾಗಿದ್ದಾರೆ ಕೂಡ.ಆದರೆ ಕರ್ನಾಟಕ(karnataka)ದಲ್ಲೇಕೋ ಮಾತ್ರ ಅವರ ಲೆಕ್ಕಾಚಾರ-ಗಣಿತ-ಗುಣಿತ ಯಾವುದೂ ವರ್ಕೌಟ್ ಆದಂತೆ ಕಾಣ್ತಿಲ್ಲ.ಯಾವ ಭರವಸೆ-ನಿರಿಕ್ಷೆ ಇಟ್ಟುಕೊಂಡು ಕೋಟ್ಯಾಂತರ ಸುರಿದು ರಿಪಬ್ಲಿಕ್ ಸುದ್ದಿ ಸಾಮ್ರಾಜ್ಯ ವಿಸ್ತರಿಸ ಬೇಕೆಂದುಕೊಂಡಿದ್ರೋ ಅದ್ಯಾವುದು ಅಂದುಕೊಂಡಂತೆ ಆಗುತ್ತಿಲ್ಲ ಎನ್ನುವ ಸ್ಪೋಟಕ-ಅಘಾತಕಾರಿ ಸುದ್ದಿ … Read more