ಬೆಂಗಳೂರು/ತೀರ್ಥಹಳ್ಳಿ/ ಪಶ್ಚಿಮ  ಬಂಗಾಳ: ಅಂತೂ ಇಂತೂ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ(Rameshwaram Cafe Bomb Blast) ದಲ್ಲಿ ಎನ್ ಐಎ ತಂಡಕ್ಕೆ ಮಹತ್ವದ ಯಶಸ್ಸು ದೊರೆತಿದೆ.ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದವರೆನ್ನಲಾದ ಇಬ್ಬರು ಶಂಕಿತರನ್ನು ಪೊಲೀಸರು ಕೊಲ್ಕತ್ತಾದಲ್ಲಿ ಬಂದಿಸಿದ್ದಾರೆ.

ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಮುಸಾವಿರ್ ಶಾಜೀನ್ ಹುಸೇನ್ ನನ್ನು (Mussavir Hussain Shazib) ಹಾಗೂ ಆತನಿಗೆ ಸಹಕಾರ ನೀಡಿದ್ದ ಆರೋಪದ ಮೇಲೆ ಅಬ್ದುಲ್ ಮತೀನ್‌ನನ್ನು (Abdul Matin) ಅರೆಸ್ಟ್‌ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಎಎನ್‌ ಐ ಅಧಿಕಾರಿಗಳು ಪ್ರಕರಣದ ಶಂಕಿತ ಉಗ್ರ ಮುಸಾವಿರ್ ಶಾಜೀನ್ ಹುಸೇನ್ ನನ್ನು (Mussavir Hussain Shazib ) ಬಂಧಿಸಿದ್ದರು.ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ವೇಳೆ ಮತ್ತೊಬ್ಬನ ಬಗ್ಗೆ ಮಾಹಿತಿ ನೀಡಿದ್ದನು.

ಅಬ್ದುಲ್‌ ಮತಿನ್‌  ಹಾಗೂ ತಾಹ ಪಶ್ಚಿಮ ಬಂಗಾಳದ ದಿಫಾ ಎಂಬ ಗ್ರಾಮದಲ್ಲಿ ಮನೆಯೊಂದರಲ್ಲಿ ಅಡಗಿ ಕೂತಿದ್ದರೆನ್ನುವ ಮಾಹಿತಿ ದೊರೆತ ಹಿನ್ನಲೆಯಲ್ಲಿ ನಿದ್ದೆಯಲ್ಲಿದ್ದ ವೇಳೆಯೇ ಎಸ್ ಐಟಿ ಪೊಲೀಸರು ಖೆಡ್ಡಾಕ್ಕೆ ಕೆಡವಿಕೊಂಡಿದ್ದಾರೆ.ಕೋಡ್ ವರ್ಡ್ ನಲ್ಲಿ ಪರಸ್ಪರ ಮಾತನಾಡಿಕೊಳ್ಳುತ್ತಿದ್ದ ಉಗ್ರರ ಕೋಡ್ ವರ್ಡನ್ನೇ ಎನ್ ಐ ಎ ಡಿಕೋಡ್ ಮಾಡಿ ವಶಕ್ಕೆ ಪಡೆದಿದೆ,

ಎನ್‌ ಐಎ ಅಧಿಕಾರಿಗಳು ಉಗ್ರರನ್ನು ಸೆರೆ ಹಿಡಿಯಲು ತಡವಾಗಿದ್ದರೆ ಶಂಕಿತ ಉಗ್ರರು ಬಾಂಗ್ಲಾದೇಶಕ್ಕೆ ಎಸ್ಕೇಪ್ ಆಗಲು ತಯಾರಿ  ನಡೆಸಿದ್ದರಂತೆ.ಇಬ್ಬರಿಗೂ ISIS ಜೊತೆ ನಂಟು ಇತ್ತೆನ್ನುವುದು ಕೂಡ ಗೊತ್ತಾಗಿದೆ.ಪರಸ್ಪರ ಸಂಪರ್ಕಕ್ಕೆ ಬಂದರೆ ಸಿಕ್ಕಾಕೊಳ್ಳಬಹುದೆನ್ನುವ ಕಾರಣಕ್ಕೆ ದೂರದ ಪಶ್ಚಿಮಬಂಗಾಳಕ್ಕೆ ಪರಾರಿಯಾಗಿದ್ದರಂತೆ.ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಕೇವಲ  ಕೋಡ್‌ವರ್ಡ್‌ (Code Word) ನಲ್ಲೇ ಮಾತನಾಡಿಕೊಳ್ಳುತ್ತಿದ್ದ ತಮ್ಮ ಮುಂದಿನ ಪ್ಲ್ಯಾನ್‌ ಗಳ ಬಗ್ಗೆ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದ ಶಂಕಿತ ಉಗ್ರರನ್ನು  ಎನ್‌ ಐಎ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದೇ ರೋಚಕ ಕಹಾನಿ.

ಬೆಂಗಳೂರಿನಲ್ಲಿ ಶಂಕಿತ ಬಾಂಬ್‌ ಸ್ಪೋಟದ  ಕೃತ್ಯ ಎಸಗಿದ್ದ ಮುಸಾವೀರ್ ಹುಸೇನ್ ನ ಉದ್ದೇಶ ಏನಾಗಿತ್ತೆನ್ನುವುದು ಈವರೆಗೂ ಯಾರಿಗೂ ತಿಳಿದುಬಂದಿಲ್ಲ.ತನಿಖೆ ವೇಳೆ ಇದು ಬಯಲಾಗುವ ಸಾಧ್ಯತೆಗಳಿವೆ.

ಸಿಕ್ಕಿ ಬಿದ್ದಿದ್ದು ಹೇಗೆ: ಅಂದ್ಹಾಗೆ ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಕೂತು ದೂರದ ಬೆಂಗಳೂರಿನಲ್ಲಿ ರಾಮೇಶ್ವರ ಕೆಫೆ ಸ್ಪೋಟಕ್ಕೆ ಸಂಚು ರೂಪಿಸಿ ಆ ಸಂಚಿನಲ್ಲಿ ಯಶಸ್ವಿಯಾದನೆನ್ನುವ ಭ್ರಮೆಯಲ್ಲಿ ಸಾವಿರಾರು ಕಿಲೋಮೀಟರ್‌ ದೂರದ ಪಶ್ಚಿಮ ಬಂಗಾಳಕ್ಕೆ ಓಡಿ ಹೋಗಿ ತಲೆಮರೆಸಿಕೊಂಡು ಸ್ವಲ್ಪ ಯಾಮಾರಿದ್ರೂ ದೇಶದ ಗಡಿಯಾಚೆಗಿನ ಬಾಂಗ್ಲಾದೇಶಕ್ಕೆ ಓಡಿ ಹೋಗುವ ಹುನ್ನಾರ ನಡೆಸಿದ್ದ ಉಗ್ರರು ಎನ್‌ ಐ ಎ ಆಪರೇಷನ್‌ ನಲ್ಲಿ ಸಿಕ್ಕಿ ಬಿದ್ದಿದ್ದೇ ಒಂದು ರಣರೋಚಕ ಕಹಾನಿ.ರಾಮ್‌ ಗೋಪಾಲ್‌ ವರ್ಮಾ ಅವರಂಥ ಡೈರೆಕ್ಟರ್‌ ಕೈನಲ್ಲಿ ಸಿನೆಮಾ ಆಗಬಲ್ಲಷ್ಟು ಸರಕನ್ನು ಹೊಂದಿರುವ ಕಥೆಯಿದು.

ರಾಮೇಶ್ವರ ಕೆಫೆನಲ್ಲಿ ಸ್ಪೋಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಶಿವಮೊಗ್ಗ ತುಂಗಾ ನದಿ ತೀರದ ತೀರ್ಥಹಳ್ಳಿ ತಾಲೂಕಿನ ಮಾಝ್‌ ಮುನೀರ್‌ನನ್ನು (Maaz Muneer) ಎನ್‌ಐಎ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿತ್ತು. ಆತನ ಬಳಿ ಇರುವ ಮೊಬೈಲ್‌ ಸೆಲ್‌ ನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾ ಮೆಮೋರಿ ಕಾರ್ಡ್ ಪತ್ತೆಯಾಗಿತ್ತು. ಈ ಮೆಮೋರಿ ಕಾರ್ಡ್‌ ಪರಿಶೀಲಿಸಿದಾಗ ಹಲವು ಕೋಡ್‌ ವರ್ಡ್‌ ಸಿಕ್ಕಿದ್ದವು.

ಆರಂಭದಲ್ಲಿ ಈ ಕೋಡ್‌ ವರ್ಡ್‌ ಗಳನ್ನು ಡಿ ಕೋಡ್‌ ಮಾಡೊಕ್ಕೆ ಪೊಲೀಸರಿಗೆ ಸಾಧ್ಯವಾಗಲಿಲ್ಲ. ಮುನೀರ್‌ ನನ್ನು ಆಪರೇಟ್‌ ಮಾಡಿದ್ರೂ ಆತ ಸತ್ಯ ಒಪ್ಪಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ.ಎಷ್ಟೇ ಬಾಯಿಬಿಡಿಸಿದರೂ ಆತನಿಂದ ಆರಂಭದಲ್ಲಿ ಒಂದೇ ಒಂದು ಮಾಹಿತಿ ಪಡೆಯಲು ಸಾಧ್ಯವಾಗಿರಲಿಲ್ಲ.ಪೊಲೀಸರಿಗೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.ಹೇಗೆ ಬಾಯಿ ಬಿಡಿಸಿಕೊಳ್ಳುವುದು ಎಂದು ಗೊತ್ತಾಗದೆ ಒದ್ದಾಡುವಂತಾಗಿತ್ತು.

ಆದರೆ ಎನ್‌ ಐ ಎ ಪೊಲೀಸರ ಕೆಪಾಸಿಟಿ ಗೊತ್ತಲ್ಲ,ಅಂದುಕೊಂಡಿದ್ದನ್ನು ಸಾಧಿಸದೆ ಬಿಡೋ ಜಾಯಮಾನ ಅವರದೇ ಅಲ್ಲವೇ ಅಲ್ಲ.ಸ್ವಲ್ಪ ದಿನ ಸುಮ್ಮನಿದ್ದು ಅವನಿಗೆ ಹೇಳಬೇಕಾದ್ ರೀತಿಯಲ್ಲೆಲ್ಲಾ ಹೇಳಿ ಆತ ಬಾಯಿ ಬಿಡೊಲ್ಲ ಎಂದು ಗೊತ್ತಾದ ಮೇಲೆ ತಮ್ಮದೇ ರೀತಿಯಲ್ಲಿ ಶಂಕಿತನ ಬಾಯಿ ಬಿಡಿಸಿಕೊಳ್ಳಲು ಮುಂದಾಗಿದ್ದಾರೆ.ಆಮೇಲೆ ಹೊರಬಿದ್ದ ಮಾಹಿತಿಗಳು ಎನ್‌ ಐ ಎ ಅಧಿಕಾರಿಗಳನ್ನೇ ತಬ್ಬಿಬ್ಬುಗೊಳಿಸಿತು.

ದಾಳಿಯ ಹಿಂದಿನ ಉದ್ದೇಶ ಏನಾಗಿತ್ತು..? ಅದರಿಂದ ಜಗತ್ತಿಗೆ ಯಾವ ಸಂದೇಶ ಕೊಡೊಕ್ಕೆ ನಿರ್ದರಿಸಿದ್ದರು..? ಅದರಿಂದ ಅಂತಿಮವಾಗಿ ಏನನ್ನು ಗಳಿಸೋ ಉದ್ದೇಶವಿತ್ತು ಎನ್ನುವುದರ ಬಗ್ಗೆ ಸಮಗ್ರ ಮಾಹಿತಿ ಕೊಟ್ಟಿದ್ದಾನೆ.ಮುಂದುವರೆದು

ಆರೋಪಿಗಳು ಪಶ್ಚಿಮ ಬಂಗಾಳದಲ್ಲೇ ತಲೆ ಮರೆಸಿಕೊಂಡಿದ್ದರ ಬಗ್ಗೆ ಬಾಯು ಬಿಟ್ಟಿದ್ದಾನೆ.ಯಾಮಾರಿಸೊಕ್ಕೆ ಸುಳ್ಳು ಹೇಳುತ್ತಿರಬಹುದಾ ಎಂದು ಮತ್ತೆ ಮತ್ತೆ ವಿಚಾರಿಸಿ ಆತನ ಕೋಡ್‌ ವರ್ಡ್‌ ಲಾಂಗ್ವೇಜ್‌ ಮೂಲಕ ಪರಿಶೀಲನೆ ನಡೆಸಿದಾಗ ಆತ ಹೇಳುತ್ತಿರುವುದರಲ್ಲಿ ಸತ್ಯಾಂಶವಿದೆ ಎಂದು ಖಾತ್ರಿ ಪಡಿಸಿಕೊಂಡ ಮೇಲೆಯೇ ಅವರು ಪಶ್ಚಿಮ ಬಂಗಾಳದ ಕಡೆ ಹೊರಟಿದ್ದು.

ಪಶ್ಚಿಮ ಬಂಗಾಳದ ನಿರ್ದಿಷ್ಟ ಪ್ರದೇಶ ತಲುಪವರೆಗೂ ಆತನ ಸಂಪರ್ಕ ಹಾಗೂ ಉಗ್ರರ ನಡುವೆ ನಯಾಪೈಸೆ ಸಂಪರ್ಕ ಕಡಿದು ಹೋಗದಂತೆ ಎನ್‌ ಐಎ ಅಧಿಕಾರಿಗಳು ಎಚ್ಚರ ವಹಿಸಿದ್ದರು.ಏಕೆಂದರೆ ಈ ಆಪರೇಷನ್‌ ನಲ್ಲಿ ಕೊಂಚ ಯಾಮಾರಿದ್ರೂ ಗಮ್ಯ ತಲುಪಲಿಕ್ಕೆ ಆಗುವುದಿಲ್ಲ ಎನ್ನುವ ಮಾಹಿತಿ ಅವರಿಗೆ ಗೊತ್ತಿತ್ತು.ಹಾಗಾಗಿಯೇ ಮುನೀರ್‌  ತಮ್ಮ ಜತೆ ಇದ್ದಾನೆನ್ನುವ ವಿಚಾರ ಶಂಕಿತರ ಗಮನಕ್ಕೆ ಬಾರದೆ ಸೂಕ್ಷ್ಮವಾಗಿ ಆಪರೇಷನ್‌ ಮಾಡಿದ್ದಾರೆ.

ಮುನೀರ್‌ ಸಹಾಯದಿಂದ ಪಶ್ಚಿಮ ಬಂಗಾಳ ತಲುಪಿ ಆತನ ಹೆಡೆಮುರಿ ಕಟ್ಟಿ ಬಂದಿದ್ದಾರೆ ಎನ್‌ ಐ ಎ ಅಧಿಕಾರಿಗಳು.ಇಬ್ಬರು ಶಂಕಿತರನ್ನು ಬಂಧಿಸಿರುವ ಪೊಲೀಸರು ಸಧ್ಯಕ್ಕೆ ಅವರನ್ನು ಮೆಡಿಕಲ್‌ ಟೆಸ್ಟ್‌ ಗೆ ಒಳಪಡಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.ಸಾಕಷ್ಟು ಸ್ಪೋಟಕ ಮಾಹಿತಿಗಳು ಗೊತ್ತಾಗಬೇಕಿರುವುದರಿಂದ ಶಂಕಿತರನ್ನು ಎನ್‌ ಐಎ ತನ್ನ ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ.

ಒಟ್ಟಿನಲ್ಲಿ ರಾಮೇಶ್ವರ ಕೆಫೆ ಸ್ಪೋಟ ಪ್ರಕರಣ ನಡೆದು ಕೆಲವೇ ದಿನಗಳಲ್ಲಿ ಎನ್‌ ಐಎ ತನ್ನ ಆಪರೇಷನ್‌ ನಲ್ಲಿ ಯಶಸ್ಸು ಕಂಡಿದೆ.ಆ ಮೂಲಕ ತನ್ನ ಕೆಪಾಸಿಟಿಯನ್ನು ಮತ್ತೆ ಪ್ರೂವ್‌ ಮಾಡಿದೆ.ಉಗ್ರರ ಬಾಯಿಂದ ಬಿಡಿಸಲಿರುವ ವಿಚಾರಗಳ ಬಗ್ಗೆ ದೇಶದ ಕಣ್ಣು ನೆಟ್ಟಿದೆ.ಎನ್‌ ಐಎ ಕಾರ್ಯಾಚರಣೆಗೆ ಹ್ಯಾಟ್ಸಾಫ್‌ ಹೇಳಲೇಬೇಕು.

Spread the love

Leave a Reply

Your email address will not be published. Required fields are marked *