EXCLUSIVE..ಕುಡಿಯೊಕ್ಕೆ..ಶೌಚಕ್ಕೆ ನೀರಿಲ್ಲವಂತೆ..!? ಆದ್ರೆ  7400 BMTC ಬಸ್ ಗಳ ಸ್ವಚ್ಛತೆಗೆ 14,86,000 ಲೀಟರ್‌ ನೀರು ಪೋಲಾಗುತ್ತಿದೆಯಂತೆ.!?

EXCLUSIVE..ಕುಡಿಯೊಕ್ಕೆ..ಶೌಚಕ್ಕೆ ನೀರಿಲ್ಲವಂತೆ..!? ಆದ್ರೆ 7400 BMTC ಬಸ್ ಗಳ ಸ್ವಚ್ಛತೆಗೆ 14,86,000 ಲೀಟರ್‌ ನೀರು ಪೋಲಾಗುತ್ತಿದೆಯಂತೆ.!?

ಬೆಂಗಳೂರು: ಇದು ನಿಜಕ್ಕೂ ಅಮಾನವೀಯ ಹಾಗೂ ಮಾನವಹಕ್ಕುಗಳ ಉಲ್ಲಂಘನೆಗೆ ಸಾಕ್ಷಿಯಾಗುತ್ತಿರಬಹುದಾದ ಪ್ರಕರಣ ಎನ್ನಬಹುದೇನೋ..?!  ಬೆಂಗಳೂರು ಮಹಾನಗರ ಸಾರಿಗೆ ನಿಗಮದಲ್ಲಿ ಕೆಲಸ ಮಾಡುವ ಸಿಬ್ಬಂದಿ ಬೇಸಿಗೆಯ ಹೊಡೆತಕ್ಕೆ ಸಿಲುಕಿ ನಲುಗುತ್ತಿದ್ದಾರೆನ್ನುವ ಅಘಾತಕರ ಸುದ್ದಿ ಹೊರಬಿದ್ದಿದೆ.

ಕುಡಿಯೊಕ್ಕೆ ಸರಿಯಾಗಿ ನೀರು ಸಿಗುತ್ತಿಲ್ಲವಂತೆ ..ಶೌಚಕ್ಕೂ ನೀರಿನ ಕೊರತ ಎದುರಾಗಿದೆಯಂತೆ.ಆದ್ರೆ ಇಂಥಾ ಸಮಸ್ಯೆ ನಡುವೆ ಪ್ರತ್ಯೇಕ ಘಟಕಗಳಲ್ಲಿ ಬಸ್‌ ಗಳ ಸ್ವಚ್ಛತೆಗೆ ಸಾವಿರಾರು ಲೀಟರ್‌ ನೀರನ್ನು ಪೋಲು ಮಾಡಲಾಗುತ್ತಿದೆ ಎಂದು ಸ್ವತಃ ಬಿಎಂಟಿಸಿ ಸಿಬ್ಬಂದಿನೇ ಫೋಟೋ-ವೀಡಿಯೋಗಳನ್ನು ವೈರಲ್‌ ಮಾಡಿ ನಿಗಮದ ದಯನೀಯ ‍ಸ್ಥಿತಿಯನ್ನು ಸಾರ್ವಜನಿಕಗೊಳಿಸ್ತಿದಾರೆ.

ಕೇಳೊಕ್ಕೆ ವಿಚಿತ್ರ ಹಾಗೂ ಆಶ್ಚರ್ಯ ಎನಿಸಬಹುದು.ಒಂದ್‌ ಕ್ಷಣ ಕೋಪನೂ ಬರಬಹುದು.ಏಕೆಂದ್ರೆ ಬೇಸಿಗೆಯಲ್ಲಿ ವಾಹನಗಳ ವಾಷಿಂಗ್‌ ಗೆ ನೀರನ್ನು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಳಸಿದ್ರೆ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಲಮಂಡಳಿ ಈಗಾಗಲೇ ಸೂಚನೆ ನೀಡಿದೆ.ಆದ್ರೆ ಬಿಎಂಟಿಸಿ ಘಕಟಗಳಲ್ಲಿ ಪ್ರತಿ ಬಸ್‌ ನ ಸ್ವಚ್ಛತೆಗೂ 200 ರಿಂದ 250 ಲೀಟರ್‌ ನೀರನ್ನು ಬಳಸಲಾಗುತ್ತಿದೆ ಎನ್ನುವ ಮಾಹಿತಿ ದೊರೆತಿದೆ.ಇದೆಲ್ಲಾ ಬೋರ್ವೆಲ್‌ ಗಳ ಮೂಲಕ ಬಳಕೆಯಾಗ್ತಿದೆಯಾದ್ರೂ ಆ ನೀರನ್ನು ಕಾಯ್ದಿಡುವುದು ಬೇಸಿಗೆ ಕಾರಣಕ್ಕೆ ಅಗತ್ಯದಷ್ಟೇ ಅನಿವಾರ್ಯ ಕೂಡ.

ಅಂದ್ಹಾಗೆ ಬಿಎಂಟಿಸಿಯ ಸುಮಾರು 50 ಡಿಪೋಗಳಲ್ಲಿ   6500 ಬಸ್‌ ಗಳಿವೆ.  930 ಎಲೆಕ್ಟ್ರಿಕಲ್‌ ಬಸ್‌ ಸೇರಿಸಿದ್ರೆ ಇವುಗಳ ಸಂಖ್ಯೆ 7400 ಆಗಬಹುದು.ಎಲ್ಲರಿಗೂ ಗೊತ್ತಿರುವಂತೆ ರಾಜಧಾನಿ ಜನರಿಗೆ  ಕುಡಿಯಲಿಕ್ಕೆ ಹಾಗೂ ಬೇರೆ ಉದ್ದೇಶಗಳಿಗೆ ನೀರು ಸಿಗ್ತಿಲ್ಲ..ಅಂತದ್ದರಲ್ಲಿ ಬಿಎಂಟಿಸಿಯ ಈ 7430 ಬಸ್‌ ಗಳಿಗೆ ಪ್ರತಿ ಬಸ್‌ ಗೆ 200 ರಿಂದ 250 ಲೀಟರ್‌ ನೀರನ್ನು ಸ್ವಚ್ಛತೆಗೆ ಬಳಸಲಾಗುತ್ತಿದೆಯಂತೆ. ಅಂದಾಗೆ ಇದಿಷ್ಟನ್ನು ಲೆಕ್ಕ ಹಾಕಿದ್ರೆ 14 ಲಕ್ಷದ 86 ಸಾವಿರ ಲೀಟರ್‌ ನಷ್ಟು ನೀರು ಬಸ್‌ ಗಳ ಸ್ವಚ್ಛತೆಗೆ ಖರ್ಚು ಮಾಡಲಾಗುತ್ತಿದೆ.ಪ್ರತಿ ಡಿಪೋಗಳಲ್ಲಿ ಕನಿಷ್ಟ 1 ಗರಿಷ್ಟ 2 ಬೋರ್ವೆಲ್‌ ಗಳಿದ್ದು ಅವುಗಳ ಮೂಲಕವೇ ನೀರನ್ನು ಬಸ್‌ ಗಳ ಸ್ವಚ್ಚತೆಗೆ ಬಳಸಲಾಗುತ್ತಿದೆ. ಮಳೆ ನೀರು ಕೊಯ್ಲು ಯಾವ ಡಿಪೊಗಳಲ್ಲಿ ಇಲ್ಲ. ಬಹುತೇಕ ಕಡೆ ಮರುಶುದ್ಧೀಕರಣ ಘಟಕಗಳೂ ಇಲ್ಲ.ನೀರನ್ನು ನೇರವಾಗಿ ಚರಂಡಿಗೆ ಬಿಡಲಾಗುತ್ತಿದೆ.ಆದರೆ ಹೀಗೆ ಚರಂಡಿಗೆ ಬಿಡಲಾಗುತ್ತಿರುವ ನೀರನ್ನೇನಾದ್ರೂ ಮರುಶುದ್ಧೀಕರಣ ಮಾಡಿದ್ದಲ್ಲಿ ಅಷ್ಟೇ ಪ್ರಮಾಣದ ನೀರನ್ನು ಬಸ್‌ ಗಳ ಸ್ವಚ್ಛತೆ ಹಾಗೂ ಡಿಪೋಗಳಲ್ಲಿರುವ ಮರಗಿಡಗಳಿಗೆ ಬಳಸಿಕೊಳ್ಳುವ ಅವಕಾಶವಿರುತ್ತಿತ್ತು.

ಬಿಎಂಟಿಸಿ ಸಿಬ್ಬಂದಿನೇ ಘಟಕಗಳಲ್ಲಿ ಎದುರಾಗಿರುವ ಸಮಸ್ಯೆಯ ಧಾರುಣ ಚಿತ್ರಣವನ್ನು ಬಿಡಿಸೇಳುವಂತೆ, ಬಹುತೇಕ ಡಿಪೋಗಳಲ್ಲಿ ಮರುಶುದ್ಧೀಕರಣ ಘಟಕವೇ ಇಲ್ಲವಂತೆ.ಕೆಲವೆಡೆ ಇದ್ದರೂ ಪ್ರಯೋಜನವಾ ಗುತ್ತಿಲ್ಲ.ಎಲ್ಲಕ್ಕೂ  ಬೋರ್ವೆಲ್‌ ನ್ನೇ ಆಶ್ರಯಿಸಲಾಗಿದೆ.ಬೇರೆ ಪರ್ಯಾಯಗಳೇ ಇಲ್ಲ. ಮಳೆ ನೀರು ಕೊಯ್ಲು ಹಾಗೂ ಮರುಶುದ್ಧೀಕರಣ ಘಟಕಗಳು ಯಾವ್‌ ರೀತಿ ಕಲಸ ಮಾಡುತ್ತಿವೆ ಎನ್ನುವುದನ್ನು ಜಲಮಂಡಳಿ ನಿಯತವಾಗಿ ಡಿಪೋಗಳಿಗೆ ಭೇಟಿ ಕೊಟ್ಟು ಪರಿಶೀಲಿಸಬೇಕಿತ್ತು.ಆದರೆ ಜಲಮಂಡಳಿ ಈವರೆಗೂ ಅಂಥಾ ಯಾವುದೇ ಕೆಲಸವನ್ನೂ ಮಾಡಿಲ್ಲ.

ಕುಡಿಯಲು ನೀರಿಲ್ಲ.ಬಿಬಿಎಂಪಿಯ ಟ್ಯಾಂಕ್‌ ಗಳಲ್ಲಿರುವ ನೀರನ್ನೇ ಕುಡಿಯುತ್ತಿದ್ದಾರೆ. ಜತೆಗೆ ಶೌಚಾಲಯಕ್ಕೂ ನೀರಿಲ್ಲವಂತೆ. ಅದರಲ್ಲೂ ಮಹಿಳಾ ಸಿಬ್ಬಂದಿ ಸುಲಭ ಶೌಚಾಲಯಗಳನ್ನು ಆಶ್ರಯಿಸಬೇಕಿದೆ. ಪುರುಷ ಸಿಬ್ಬಂದಿಯಾದ್ರೆ ಜಲಬಾಧೆ-ಉದರಭಾಧೆಯನ್ನು ಸಲೀಸಾಗಿ ಸಿಕ್ಕ ಜಾಗಗಳಲ್ಲಿ ತೀರಿಸಿಕೊಳ್ಳಬಹುದು.ಆದರೆ ಮಹಿಳಾ ಸಿಬ್ಬಂದಿ ಡಿಪೊಗಳಲ್ಲಿ ಶೌಚಾಲಯಗಳಿದ್ದರೂ ಅಲ್ಲಿ ಶೌಚಕ್ಕೆ ನೀರಿಲ್ಲದಿರುವುದರಿಂದ ತೀರಾ ಮುಜುಗರಕ್ಕೆ ಒಳಗಾಗಬೇಕಾದ ಸನ್ನಿವೇಶಗಳಿವೆ.ಬಹುತೇಕ ಮಹಿಳಾ ಸಿಬ್ಬಂದಿ ನಿತ್ಯವೂ ಘಟಕಾಧಿಕಾರಿಗಳಿಗೆ ಹಿಡಿಶಾಪ ಹಾಕೋದು ಕಾಮನ್‌ ಆಗೋಗಿದೆ.ಇದು ಮಾನವಹಕ್ಕೂಗಳ ಉಲ್ಲಂಘನೆಯೂ ಹೌದು ಎನ್ನುತ್ತಾರ ಬನಶಂಕರಿ ಡಿಪೋದ ಚಾಲಕರು.

EXCLUSIVE..ಕುಡಿಯೊಕ್ಕೆ..ಶೌಚಕ್ಕೆ ನೀರಿಲ್ಲವಂತೆ..!? ಆದ್ರೆ 7400 BMTC ಬಸ್ ಗಳ ಸ್ವಚ್ಛತೆಗೆ 14,86,000 ಲೀಟರ್‌ ನೀರು ಪೋಲಾಗುತ್ತಿದೆಯಂತೆ.!?

ದುರಂತವೆಂದ್ರೆ  ನಿಗಮದ ಕೇಂದ್ರ ಕಚೇರಿಗಳಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿ ಯಾವುದೇ ತೊಂದರೆಯಿಲ್ಲದೆ ಶೌಚಾಲಯಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಅವರಿಗೆ ಆ ಬಾಧೆಗಳ ಅನುಭವವೂ ಆಗುತ್ತಿಲ್ಲ.ಆದರೆ  ಘಟಕಗಳಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿ ಕುಡಿಯಲಿಕ್ಕೂ ನೀರಿಲ್ಲದೆ.ಶೌಚಕ್ಕೂ ನೀರಿಲ್ಲದೆ ಒದ್ದಾಡುವ ಪರಿಸ್ತಿತಿಯಿದೆ. ಮಹಿಳಾ ಸಿಬ್ಬಂದಿಗೆ ಎದುರಾಗುತ್ತಿರುವ ಸಮಸ್ಯೆಗೆ ಪರಿಹಾರ ಸೂಚಿಸುವ ಕೆಲಸವನ್ನೇ ಮಾಡುತ್ತಿಲ್ಲ ಎಂದು ಡಿಪೋ7ರ ಅನೇಕ ಮಹಿಳಾ ಸಿಬ್ಬಂದಿ ತಮ್ಮ ನೋವು-ಆಕ್ರೋಶ ವ್ಯಕ್ತಪಡಿಸ್ತಾರೆ.

ಏನ್‌ ಮಾಡಬಹುದಾಗಿತ್ತು: ಕಾದಕಾವಲಿಯಂತಾಗಿರುವ ಬೆಂಗಳೂರಿನಲ್ಲಿ ಉದ್ಭವವಾಗಿರುವ ನೀರಿನ ತತ್ವಾರದ ನಡುವೆ 7430 ಬಸ್‌ ಗಳಿಗೆ ಲಕ್ಷಾಂತ ರಲೀಟರ್‌ ನೀರನ್ನು ಬಳಸಬೇಕಾಗಿ ಬಂದಿರುವ ಪರಿಸ್ತಿತಿಯನ್ನು ದೂರ ಮಾಡಬೇಕಿದ್ದರೆ ಬೋರ್ವೆಲ್‌ ಗಳನ್ನು ಆಶ್ರಯಿಸದೆ ಡ್ರೈ ವಾಶ್‌ ಗೆ ಮೊರೆ ಹೋಗುವುದು ಸೂಕ್ತ.,ಹಾಗೆಯೇ   ತಾಂತ್ರಿಕ ದೋಷದಿಂದ ಎಷ್ಷ್ಟೋ ವರ್ಷಗಳಿಂದ ಹಾಳಾಗಿ ಹೋಗಿರುವ  ಮರುಶುದ್ಧೀಕರಣ ಘಟಕಗಳನ್ನು ದುರಸ್ತಿಗೊಳಿಸಿದ್ರೆ ಸಮಸ್ಯೆ ಗಂಭೀರವಾಗುತ್ತಲೇ ಇರಲಿಲ್ಲ.ಬೇಸಿಗೆ ಸೃಷ್ಟಿಸಿರುವ ಸಮಸ್ಯೆಯಿಂದ ಬಿಎಂಟಿಸಿ ಆಡಳಿತ ಇನ್ನಾದ್ರೂ ಬುದ್ದಿಕಲಿಯಬೇಕಿದೆ.ಇಲ್ಲವಾದಲ್ಲಿ ಸಮಸ್ಯೆ ದಿನೇ ದಿನೇ ಬಿಗಡಾಯಿಸುವುದರಲ್ಲಿ ಅನುಮಾನವೇ ಇಲ್ಲ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *