ಉದ್ಯಮಿ ರತನ್ ಟಾಟಾ ನಿಧನದ ಹಿನ್ನೆಲೆಯಲ್ಲಿ ಟಾಟಾ ಟ್ರಸ್ಟ್ ನೂತನ ಅಧ್ಯಕ್ಷರಾಗಿ ನೊಯೆಲ್ ಟಾಟಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಶನಿವಾರ ನಡೆದ ರತನ್ ಟಾಟಾ ಅವರ ಸೋದರ ಸಂಬಂಧಿ ನೊಯೆಲ್ ಟಾಟಾ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ನೊಯೆಲ್ ಟಾಟಾ 4 ದಶಕದಿಂದ ಟಾಟಾ ಸಮೂಹ ಕಂಪನಿಯೊಂದಿಗೆ ಒಡನಾಟ ಹೊಂದಿದ್ದು, ಸಾಕಷ್ಟು ಅನುಭವಿ ಉದ್ಯಮಿಯಾಗಿದ್ದಾರೆ.
ನೊಯೆಲ್ ಟಾಟಾ ಸೇರ್ಪಡೆಯಾದ ನಂತರ 2000ದಿಂದ ಟಾಟಾ ಅಭಿವೃದ್ಧಿ ಏರುಗತಿಯಲ್ಲಿ ಸಾಗಿದ್ದು, ಟಾಟಾ ಯಶಸ್ಸಿನ ಹಿಂದೆ ನೊಯೆಲ್ ಪಾತ್ರ ಕೂಡ ಮುಖ್ಯ ಎಂದು ಹೇಳಲಾಗಿದೆ.
ಟಾಟಾ ಟ್ರಸ್ಟ್ 14 ಟ್ರಸ್ಟ್ ಗಳ ಸಮೂಹಗಳ ಟ್ರಸ್ಟ್ ಆಗಿದೆ. ಟಾಟಾ ಸಮೂಹದ ಎಲ್ಲಾ ಟ್ರಸ್ಟ್ ಗಳ ಆಡಳಿತ ಉಸ್ತುವಾರಿ ಆಗಿದೆ. ರತನ್ ಟಾಟಾ ಅವರ ಸೋದರ ಕೌಟುಂಬಿಕ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ವಹಿಸದೇ ದೂರ ಉಳಿದಿದ್ದಾರೆ. ಮುಂಬೈನ ಕೊಲಾಬಾದಲ್ಲಿ ಡಬಲ್ ಬೆಡ್ ರೂಮ್ ಮನೆಯಲ್ಲಿ ಸರಳ ಜೀವನ ನಡೆಸುತ್ತಿದ್ದಾರೆ.










