ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ,ಮಠ,ಎದ್ದೇಳು ಮಂಜುನಾಥ ಖ್ಯಾತಿಯ ಗುರುಪ್ರಸಾದ್ ಸಾಲದ ಬಾಧೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನ ತಮ್ಮ ಅಪಾರ್ಟ್ಮೆಂಟ್ ನಲ್ಲಿ ನೇಣು ಬಿಗಿದು ಸ್ಥಿತಿಯಲ್ಲಿ ಗುರುಪ್ರಸಾದ್ ಶವ ಪತ್ತೆಯಾಗಿದೆ.ಹಣಕಾಸಿನ ಮುಗ್ಗಟ್ಟಿನಿಂದ ಜರ್ಝರಿತವಾಗಿದ್ದ ಗುರುಪ್ರಸಾದ್ ಅಪಾರ ಸಾಲ ಮಾಡಿಕೊಂಡಿದ್ದರೆನ್ನಲಾಗಿದೆ.ಈ ಕಾರಣದಿಂದಲೇ ಆತ್ಮಹತ್ಯೆ ಮಾಡಿಕೊಂಡಿರಬಹುದೆನ್ನಲಾಗುತ್ತಿದೆ.
ನೆಲಮಂಗಲ ಬಳಿ ಮಾದನಾತಕನಹಳ್ಳಿಯ ಅಪಾರ್ಟ್ಮೆಂಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಸಾವು ಅಘಾತವನ್ನುಂಟುಮಾಡಿದೆ.
ಮಠ,ಎದ್ದೇಳು ಮಂಜುನಾಥ್,ಡೈರೆಕ್ಟರ್ ಸ್ಪೆಷಲ್, ಎರಡನೇ ಸಲ,ರಂಗನಾಯಕ ದಂಥ ಚಿತ್ರಗಳನ್ನು ನಿರ್ದೇಶಿಸಿದ್ದ ಗುರುಪ್ರಸಾದ್ ಇತ್ತೀಚೆಗೆ ಚಿತ್ರರಂಗದಿಂದ ದೂರ ಉಳಿದಿದ್ದರು.
ಗುರುಪ್ರಸಾದ್ ಸಾವಿಗೆ ಕನ್ನಡ ಚಿತ್ರರಂಗ ದಿಗ್ಬ್ರಾಂತಿ,ಶೋಕ ವ್ಯಕ್ತಪಡಿಸಿದೆ.