**ಡಾ.ಪಿ ನಿರಂಜನ್ ಅವರ ನೇಮಿಸಿಕೊಳ್ಳಲಿಕ್ಕೆ ಅಧ್ಯಕ್ಷ ನರೇಂದ್ರಸ್ವಾಮಿ ನಿಯಮಗಳನ್ನೆಲ್ಲಾ ಗಾಳಿಗೆ ತೂರಿದ್ದೇಕೆ..?!
**ಮಂಡಳಿಯಲ್ಲೇ ಅರ್ಹರಿರುವಾಗ ನಿವೃತ್ತರನ್ನೇ ನೇಮಿಸಿಕೊಳ್ಳುವ ಅಗತ್ಯವೇನಿದೆ..?!
**ಮಂಡಳಿ ಸಭೆಯೇ ನಡೆದಿಲ್ಲ,ಅದ್ಹೇಗೆ ಡಾ.ಪಿ ನಿರಂಜನ್ ಅವರ ನೇಮಕಕ್ಕೆ ಅಂಕಿತ ಸಿಕ್ತು..!?
**ಸರ್ಕಾರದ ಗಮನಕ್ಕೆ ತಾರದೆ ನೇಮಕ ನಡೆದಿದ್ದೇಗೆ..? ಸದಸ್ಯ ಕಾರ್ಯದರ್ಶಿ ಲಿಂಗರಾಜ್ ಸುಳ್ಳು ಹೇಳುತ್ತಿದ್ದಾರಾ..?!

ಬೆಂಗಳೂರು:ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ(KARNATAKA POLLUTION CONTROLE BOARD) ಗೆ ನೂತನ ಸಾರಥಿಯಾಗಿರುವ ಮಳವಳ್ಳಿ ಶಾಸಕ ಎಂ.ನರೇಂದ್ರ ಸ್ವಾಮಿ(CHAIRMAN NARENDRASWAMY) ಅವಸರವಸರವಾಗಿ ತೆಗೆದುಕೊಳ್ಳುತ್ತಿರುವ ನಿರ್ದಾರಗಳು ಅವರಿಗೇನೆ ಮುಳುವಾಗುವ ಸಾಧ್ಯತೆಗಳಿವೆ ಎನ್ನಿಸುತ್ತೆ.ಈಗಾಗಲೇ ಅವರ ನೇಮಕಾತಿಯೇ ಕಾನೂನು ವ್ಯಾಪ್ತಿಯಲ್ಲಿ ಪ್ರಶ್ನಿಸಲ್ಪಟ್ಟಿದೆ. ಅದರ ನಡುವೆಯೇ ಅವರ ಸೂಚನೆ ಮೇರೆಗೆ ನಡೆದಿದೆ ಎನ್ನಲಾದ ನಿಯೋಜನೆಯೊಂದು ಸರ್ಕಾರಿ ನಿಯಾಮವಳಿಗೆ ವಿರುದ್ಧವಾಗಿರುವುದು ಸ್ಪಷ್ಟವಾಗಿದೆ.ಇದು ಅಧ್ಯಕ್ಷರಾದಿಯಾಗಿ ಸದಸ್ಯ ಕಾರ್ಯದರ್ಶಿ ಗಳಿಗೆ ಸಂಚಕಾರ ತರುವ ಸಾಧ್ಯತೆಯಿದೆ.ಇದರ ಬಗ್ಗೆ ಪರಿಸರವಾದಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಸರ್ಕಾರಕ್ಕೆ ದೂರು ನೀಡಲು ನಿರ್ದರಿಸಿದ್ದಾರೆ.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷಗಾಧಿ ಅಲಂಕರಿಸಿರುವ ನರೆಂದ್ರಸ್ವಾಮಿ ಅವರಿಗೆ ನಿರುಮ್ಮಳರಾಗಿ ಸೀಟಿನ ಮೇಲೆ ಕುಳಿತುಕೊಂಡು ಅಧಿಕಾರ ಚಲಾವಣೆ ಮಾಡಲಿಕ್ಕೆ ಆಗದಂಥ ಇಕ್ಕಟ್ಟೊಂದು ಸೃಷ್ಟಿಯಾಗಿದೆ.ಅವರು ಅಧ್ಯಕ್ಷರಾಗ್ತಿದ್ದಂಗೆ ಅಲರ್ಟ್ ಆದ ಪರಿಸರವಾದಿಗಳು ಹಾಗು ಸಾಮಾಜಿಕ ಕಾರ್ಯಕರ್ತರು ಕಾನೂನು ಸಮರಕ್ಕೆ ಸಿದ್ದತೆ ಮಾಡಿಕೊಂಡರು. ನರೇಂದ್ರಸ್ವಾಮಿ ಅವರ ನೇಮಕಾತಿಯೇ ವಾಟರ್ ಆಕ್ಟ್-1974 (ಪ್ರಿವೆನ್ಷನ್ ಅಂಡ್ ಕಂಟ್ರೋಲ್ ಆಫ್ ಪೊಲ್ಯೂಷನ್ ) ಸೆಕ್ಷನ್ 4(2) ಎ ಹಾಗೂ ಏರ್ ಆಕ್ಟ್ -1981(1974 (ಪ್ರಿವೆನ್ಷನ್ ಅಂಡ್ ಕಂಟ್ರೋಲ್ ಆಫ್ ಪೊಲ್ಯೂಷನ್ )ಸೆಕ್ಷನ್ 5(2) ಎ ಪ್ರಕಾರ ಕಾನೂನುಬಾಹಿರ ಎಂದು ಕೋರ್ಟ್ ಗೆ ಅಫಿಡವಿಟ್ ಕೂಡ ಸಲ್ಲಿಸಿದ್ದಾರೆ.ಇದು ನರೇಂದ್ರಸ್ವಾಮಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಅವರ ಹುದ್ದೆಗೇನೆ ಸಂಕಷ್ಟ ಬಂದೊದಗಿರುವಾಗ ಏನೇ ಮಾಡಿದ್ರೂ, ಏನೇ ನಿರ್ದಾರ ತೆಗೆದುಕೊಂಡ್ರೂ ಅದನ್ನು ಅತ್ಯಂತ ಎಚ್ಚರಿಕೆ ಹಾಗೂ ಸೂಕ್ಷ್ಮವಾಗಿ ತೆಗೆದುಕೊಳ್ಳಬೇಕಾಗುತ್ತದೆ ಎನ್ನುವ ವಿವೇಚನೆ ರಾಜಕೀಯದ ಎಲ್ಲಾ ಪಟ್ಟುಗಳನ್ನು ಕರಗತ ಮಾಡಿಕೊಂಡ ಶ್ರೀಯುತ ನರೇಂದ್ರಸ್ವಾಮಿ ಅವರಿಗೆ ಇರಬೇಕಿತ್ತು.ಆದರೆ ಅವರು ಮಾಡಿರುವ ಮತ್ತೊಂದು ಕೆಲಸ ನೋಡಿದ್ರೆ ಎಲ್ಲಾ ಗೊತ್ತಿದ್ದೇ ಹೀಗೆ ಮಾಡುತ್ತಿದ್ದಾರಾ..? ಅಥವಾ ಯಾರು ಏನು ಮಾಡಿಕೊಂಡಾರು ಎನ್ನುವ ಭಾವನೆಯಿಂದ ಮಾಡುತ್ತಿದ್ದಾರೋ ಗೊತ್ತಾಗ್ತಿಲ್ಲ. ಅವರು ಮಾಡಿದ್ದಾರೆನ್ನಲಾಗಿರುವ ಆ ಯಡವಟ್ಟಿನ ಸಂಪೂರ್ಣ ವಿವರವನ್ನು ಸಾಕ್ಷ್ಯ ಸಮೇತ ಕನ್ನಡ ಫ್ಲ್ಯಾಶ್ ನ್ಯೂಸ್ ಅನಾವರಣ ಮಾಡುತ್ತಿದೆ.
ಫೆಬ್ರವರಿ 10,2025 ರಂದು ಸದಸ್ಯ ಕಾರ್ಯದರ್ಶಿಗಳ ಸಹಿಯನ್ನು ಒಳಗೊಂಡಿರುವ ಕಚೇರಿ ಆದೇಶವೊಂದು ಹೊರಬೀಳುತ್ತದೆ.ಆ ಆದೇಶದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಮುಖ್ಯ ಪರಿಸರಾಧಿಕಾರಿಯಾಗಿ ಕೆಲಸ ಮಾಡಿ ನಿವೃತ್ತರಾದ ಡಾ.ಪಿ ನಿರಂಜನ್(DR.P.NIRANJAN) ಅವರನ್ನು ಅಧ್ಯಕ್ಷರ ತಾಂತ್ರಿಕ ಸಲಹೆಗಾರರ( TECHNICAL ADVISOR)ನ್ನಾಗಿ ನೇಮಿಸಲಾಗಿದೆ.ತಕ್ಷಣಕ್ಕೆ ಜಾರಿಗೆ ಬರುವಂತೆ ಮಾಡಲಾಗಿರುವ ಆದೇಶದಲ್ಲಿಯೇ ಅವರಿಗೆ ಪಾವತಿಸಲಾಗುವ ಗೌರವಧನ ಹಾಗೂ ಭತ್ಯೆಗಳ ಬಗ್ಗೆಯೂ ಉಲ್ಲೇಖ ಮಾಡಲಾಗಿರುತ್ತೆ.ಪೆಬ್ರವರಿ 12,202025 ರಂದು ಅಂದ್ರೆ ಮೊದಲ ಆದೇಶ ಹೊರಡಿಸಲಾದ 2 ದಿನಗಳ ಬಳಿಕ ಅದೇ ಸದಸ್ಯ ಕಾರ್ಯದರ್ಶಿಗಳ ಸಹಿ ಒಳಗೊಂಡಿರುವ ಮತ್ತೊಂದು ಕಚೇರಿ ಆದೇಶವೊಂದು ಹೊರಬೀಳುತ್ತದೆ.
ಅದರಲ್ಲಿ ಡಾ.ಪಿ ನಿರಂಜನ್ ಅವರಿಗೆ ದೈನಂದಿನ ಕೆಲಸ ಕಾರ್ಯಗಳ ನಿಮಿತ್ತ ಕೆಎ-03-ಎಂಎಸ್-8336 ಮಾರುತಿ ಸ್ವಿಫ್ಟ್ ಡಿಸೈರ್ ಕಾರನ್ನು ಅವರಿಗೆ ಸೋಮಶೇಖರ್ ಎನ್ನುವ ಗುತ್ತಿಗೆ ಚಾಲಕನನ್ನು ನೀಡಲಾಗುತ್ತಿದೆ ಎನ್ನುವ ಬಗ್ಗೆ ಉಲ್ಲೇಖವಿರುತ್ತದೆ.ಇದೆಲ್ಲವೂ ನಿಯಮಬದ್ಧವಾಗಿ ನಡೆದಿದ್ದರೆ ಯಾವುದೇ ಆಕ್ಷೇಪ ಇರಲಿಲ್ಲ.ಆದ್ರೆ ಅಧ್ಯಕ್ಷರಾಗಿ ನೇಮಕಗೊಂಡು ವಾರವೇ ಕಳೆದಿಲ್ಲ.ಮಂಡಳಿ ಹೇಗೆ ಕೆಲಸ ಮಾಡುತ್ತೆ.ಅಲ್ಲಿನ ವ್ಯವಸ್ಥೆ ಹೇಗಿದೆ ಎನ್ನುವುದರ ಮಾಹಿತಿಯೂ ಇಲ್ಲದ ಸನ್ನಿವೇಶದಲ್ಲಿ ಅಧ್ಯಕ್ಷ ನರೇಂದ್ರಸ್ವಾಮಿ ಅವರಿಗೆ ತಾಂತ್ರಿಕ ಸಲಹೆಗಾರರನ್ನು ಮಾತ್ರ ತುರ್ತಾಗಿ ನೇಮಿಸಿಕೊಳ್ಳುವ ಅವಸರವೇನಿತ್ತು ಎನ್ನುವುದು ಸಾಮಾಜಿಕ ಕಾರ್ಯಕರ್ತ ಗಂಗಾಧರ್ ಅವರ ಪ್ರಶ್ನೆ.
ಮಂಡಳಿಯಲ್ಲಿ ಕೆಲಸ ಮಾಡುತ್ತಿರುವವರನ್ನು ನೇಮಿಸಿಕೊಂಡರೆ ತಮ್ಮನ್ಜು ತಪ್ಪು ದಾರಿಗೆ ಎಳೆಯಬಹದು ಎನ್ನುವ ಅನುಮಾನ-ಅಳುಕಿನಿಂದಲೇ ತಮ್ಮ ಪರಿಚಯದ, ನಂಬಿಗಸ್ಧ ನಿವೃತ್ತ ಪರಿಸರಾಧಿಕಾರಿಯನ್ನೇ ನೇಮಿಸಿಕೊಂಡಿರಬಹುದು ಎಂದೇ ಇಟ್ಟುಕೊಳ್ಳೋಣ.ಅದಾದ್ರೂ ಸರಿಯಾದ ರೀತಿಯಲ್ಲಿ ನಿಯಮಬದ್ದವಾಗಿ ನಡೆದಿದೆಯೇ.? ಖಂಡಿತಾ ಇಲ್ಲ ಎನ್ನುತ್ತವೆ ಮೂಲಗಳು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಮುಖ್ಯ ಪರಿಸರಾಧಿಕಾರಿಯಾಗಿದ್ದು ಕಳೆದ ತಿಂಗಳಷ್ಟೇ ನಿವೃತ್ತವಾಗಿರುವ ಡಾ.ಪಿ.ನಿರಂಜನ್ ಅವರು ತಾಂತ್ರಿಕವಾಗಿ ನಿಪುಣರು,ಅನುಭವಿಗಳು ಎನ್ನುವುದರಲ್ಲಿ ಎರಡು ಮಾತಿಲ್ಲ.ಆದ್ರೆ ಅವ್ರನ್ನೇ ನೇಮಿಸಿಕೊಳ್ಳಬೇಕೆನ್ನುವುದಿದ್ದರೂ ಅದಕ್ಕೆಂದೆ ಇರುವ ನಿಯಮಗಳನ್ನಾದ್ರು ಪಾಲಿಸಬೇಕಲ್ವಾ..? ಆ ಕೆಲಸವೇ ನಡೆದಿಲ್ಲ ಎನ್ನುವುದು ವಿವಾದ ಸೃಷ್ಟಿಸಿದೆ.
ಡಾ.ಪಿ.ನಿರಂಜನ್ ಅವರನ್ನು ಅಧ್ಯಕ್ಷರ ತಾಂತ್ರಿಕ ಸಲಹೆಗಾರರನ್ನಾಗಿ ನೇಮಿಸಿಕೊಳ್ಳುವ ಮುನ್ನ ಸಾಕಷ್ಟು ನಿಯಮಗಳನ್ನು ಪಾಲಿಸಲೇಬೇಕೆನ್ನುತ್ತದೆ ಎನ್ನುತ್ತದಂತೆ ನಿಯಮಗಳು.
ನಿಯಮಗಳು ಏನನ್ನುತ್ತವೆ:ಆದರೆ ಆಗಿರುವುದೇನು..?
1-ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮೂಲಗಳೇ ಪ್ರಕಾರವೇ ಯಾವುದೇ ನೇಮಕಾತಿಗೆ ಸಂಬಂಧಿಸಿದ ವಿಚಾರಗಳಾಗಲಿ,ಆಡಳಿತಾತ್ಮಕವಾದ ವಿಷಯಗಳಾಗಲಿ ಮಂಡಳಿ ಸಭೆಯಲ್ಲಿ ಮಂಡನೆಯಾಗಲೇಬೇಕು.
2-ಮಂಡನೆಯಾದ ವಿಚಾರಗಳ ಬಗ್ಗೆ ತೆಗೆದುಕೊಂಡ ನಿರ್ದಾರ/ನಿರ್ಣಯವನ್ನು ಸರ್ಕಾರದ ಅವಗಾಹನೆಗೆ ತರಬೇಕು. ಸರ್ಕಾರ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಸಮರ್ಪಕ ಎನಿಸಿದರೆ ಗ್ರೀನ್ ಸಿಗ್ನಲ್ ಕೊಡುತ್ತೆ ಇಲ್ಲವಾದ್ರೆ ನಿರಾಕರಿಸುತ್ತೆ
3-ನೇಮಕಾತಿಗೆ ಸಂಬಂಧಿಸಿದ ಗೌರವಧನ/ಭತ್ಯೆ/ವಾಹನ ಭತ್ಯೆಯನ್ನು ನಿರ್ದರಿಸುವಂತದ್ದೂ ಸರ್ಕಾರವೇ. ಸರ್ಕಾರ ಅನುಮೋದನೆ ಕೊಡದ ಹೊರತು ಯಾವುದೂ ಅಂತಿಮವಾಗೊಲ್ಲ.
ಆದ್ರೆ ಡಾ.ಪಿ.ನಿರಂಜನ್ ಅವರ ನೇಮಕಾತಿ ವಿಚಾರದಲ್ಲಿ ಯಾವುದೂ ಕೂಡ ಪಾಲನೆಯಾಗಿಲ್ಲ.ಇವರನ್ನು ತಾಂತ್ರಿಕ ಸಲಹೆಗಾರರನ್ನಾಗಿ ತೆಗೆದುಕೊಳ್ಳುತ್ತಿರುವ ವಿಚಾರ ಮಂಡಳಿ ಸಭೆಯಲ್ಲಿ ಮಂಡನೆಯಾಗಿಲ್ಲ.ಆಶ್ಚರ್ಯದ ವಿಚಾರವೆಂದರೆ ನರೇಂದ್ರಸ್ವಾಮಿ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಮಂಡಳಿಯ ಸಭೆನೇ ನಡೆದಿಲ್ಲ.(ಹೊಸ ಸದಸ್ಯರು/ನಿರ್ದೇಶಕರ ಆಯ್ಕೆಯೇ ಇನ್ನು ನಡೆದಿಲ್ಲದಿರುವಾಗ ಹೇಗೆ ಸಭೆ ನಡೆಯೊಕ್ಕೆ ಸಾಧ್ಯವೇಳಿ..?).ಸಭೆಯೇ ನಡೆದಿಲ್ಲ ಎಂದ ಮೇಲೆ ಡಾ.ಪಿ ನಿರಂಜನ್ ಅವರನ್ನು ನೇಮಿಸಿಕೊಳ್ಳಲಾಗುತ್ತಿದೆ ಎನ್ನುವ ವಿಚಾರವನ್ನು ಸರ್ಕಾರದ ಅವಗಾಹನೆಗೆ ತರೊಕ್ಕೆ ಹೇಗೆ ಸಾಧ್ಯ..? ತನ್ನ ಅವಗಾಹನೆಗೇನೆ ವಿಚಾರ ಬಂದಿ್ಲ್ಲ ಎಂದ ಮೇಲೆ ಸರ್ಕಾರ ಹೇಗೆ ಅನುಮೋದನೆ ಕೊಡಲಿಕ್ಕೆ ಸಾಧ್ಯವೇಳಿ..?
4-ಇನ್ನೊಂದು ಮುಖ್ಯ ವಿಚಾರವೆಂದರೆ ಸರ್ಕಾರವೇ ಹೊರಡಿಸಿರುವ ಸುತ್ತೋಲೆ ಪ್ರಕಾರ ನಿವೃತ್ತರ ಮರುನಿಯೋಜನೆ ಮಾಡಬಾರದೆನ್ನುವ ನಿಯಮವಿದೆ.(2001 ರಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿದ್ದ ಉಪೇಂದ್ರ ತ್ರಿಪಾಠಿ ( ಆಗಿನ ಸದಸ್ಯ ಕಾರ್ಯದರ್ಶಿ ಮಣಿವಣ್ಣನ್) ಅವರೇ ಈ ಆದೇಶ ಹೊರಡಿಸಿದ್ದರು.
ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಡಾ.ಪಿ.ನಿರಂಜನ್ ಅವರು ಎಷ್ಟೇ ಅರ್ಹತೆ-ಸಾಮರ್ಥ್ಯ-ಅನುಭವಿ ಇದ್ದ ಹೊರತಾಗ್ಯೂ ನಿಯಮಗಳನ್ನು ಮೀರಿ ನಿಯೋಜನೆಗೊಳ್ಳುವ ಅವಕಾಶಗಳೇ ಇಲ್ಲ..ಹೀಗಿರುವಾಗ ಅವರ ನಿಯೋಜನೆ ಹೇಗಾಯ್ತು ಎನ್ನುವ ಪ್ರಶ್ನೆ ಮುಂದಿಟ್ಟುಕೊಂಡು ನೋಡಿದ್ರೆ ಇದೆಲ್ಲವೂ ಅಧ್ಯಕ್ಷ ನರೇಂದ್ರಸ್ವಾಮಿ ಅವರ ಸ್ವಹಿತಾಸಕ್ತಿಯಲ್ಲದೆ ಇನ್ನೇನು ಎನ್ನುವ ಅನುಮಾನ ಕಾಡುವುದು ಸಹಜ.

ಡಾ.;ಪಿ.ನಿರಂಜನ್ ಅವರನ್ನು ಬಿಟ್ಟರೆ ಅರ್ಹರೇ ಇಲ್ವಾ..ನಿವೃತ್ತರ ಗಂಜಿಕೇಂದ್ರವಾಗಿದೆಯಾ ಮಂಡಳಿ: ಪ್ರಶ್ನೆ ಸೃಷ್ಟಿಯಾಗಿರುವುದೇ ಅಲ್ಲಿ. ಮಂಡಳಿಯಲ್ಲಿ ಈಗಿನವರೆಗೂ ಅಧ್ಯಕ್ಷರಾದವರೆಲ್ಲಾ ಸಹಜವಾಗಿ ಮಂಡಳಿಯಲ್ಲೇ ಇರುವ ಅನುಭವಿಗಳನ್ನು ತಾಂತ್ರಿಕ ಸಲಹೆಗಾರರನ್ನಾಗಿ ನಿಯೋಜಿಸಿ ಕೊಳ್ಳುತ್ತಿದ್ದರು. ಹೊರಗಿನವರನ್ನು ನೇಮಿಸಿಕೊಂಡರೆ ಲಕ್ಷಾಂತರ ಹೆಚ್ಚುವರಿ ಆರ್ಥಿಕ ಹೊರೆ.ಎಲ್ಲಕ್ಕಿಂತ ಮುಖ್ಯವಾಗಿ ಮಂಡಳಿಯಲ್ಲಿರುವವರಿಗಿಂತ ಹೆಚ್ಚು ತಾಂತ್ರಿಕವಾಗಿ ಅವರೇನು ನಿಪುಣರಿರುವುದಿಲ್ಲ ಎ ನ್ನುವ ಕಾರಣಗಳಿರುತ್ತಿದ್ದವು.ಇದೇ ಸಂಪ್ರದಾಯ ಬಹುತೇಕ ಪಾಲನೆ ಆಗುತ್ತಿತ್ತು.ಆದರೆ ನರೇಂದ್ರ ಸ್ವಾಮಿ ಅವರು ಅಧ್ಯಕ್ಷರಾಗುತ್ತಿದ್ದಂತೆ ಅದ್ಯಾವ ಕಾರಣಕ್ಕೆ ಉಳಿದೆಲ್ಲಾ ವಿಚಾರ ಬಿಟ್ಟು, ಡಾ.ಪಿ ನಿರಂಜನ್ ಅವರನ್ನು ತಾಂತ್ರಿಕ ಸಲಹೆಗಾರರನ್ನಾಗಿ ನೇಮಿಸುವ ವಿಚಾರವನ್ನೇ ಪ್ರಿಯಾರಿಟಿಯನ್ನಾಗಿ ಭಾವಿಸಿದ್ರೋ ಗೊತ್ತಾಗ್ತಿಲ್ಲ.ಉಳಿದೆಲ್ಲಾ ಕೆಲಸಕ್ಕಿಂತ ನಿರಂಜನ್ ಅವರ ನೇಮಕವೇ ಅಧ್ಯಕ್ಷರಿಗೆ ಅಷ್ಟೊಂದು ತುರ್ತೆನಿಸಿದ್ದು ಏಕೆ ಎನ್ನುವುದಕ್ಕೆ ಅವರೇ ಉತ್ತರಿಸಬೇಕು.
ಸತ್ಯ ಮರೆಮಾಚಿದ್ರಾ ಮಂಡಳಿಯ ಸದಸ್ಯ ಕಾರ್ಯದರ್ಶಿ ಲಿಂಗರಾಜ್:ಈ ಬಗ್ಗೆ ಮಾದ್ಯಮ ಸ್ನೇಹಿತರು ಸ್ಪಷ್ಟನೆ ಕೇಳಲು ಮಂಡಳಿ ಸದಸ್ಯ ಕಾರ್ಯದರ್ಶಿ ಆಗಿರುವ ಲಿಂಗರಾಜ್ ಅವರನ್ನು ಸಂಪರ್ಕಿಸಿದಾಗ ಅವರು ಕೂಡ ಅಡ್ಡಗೋಡೆ ಮೇಲೆ ದೀಪ ಇಟ್ಟವರಂತೆ ಮಾತನಾಡಿದ್ದಾರೆ. ಮಂಡಳಿ ಸಭೆ ನಡೆದೇ ಈ ತೀರ್ಮಾನ ಕೈಗೊಳ್ಳಾಗಿದೆ.ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಿದ್ದೇವೆ. ಸರ್ಕಾರ ಅನುಮತಿ ಕೊಟ್ಟ ಮೇರೆಗೆ ನೇಮಕಾತಿ ನಡೆದಿದೆ ಎಂದೆಲ್ಲಾ ಹೇಳಿದ್ದಾರಂತೆ.ಆದ್ರೆ ವಾಸ್ತವ ದಲ್ಲಿ ಮಂಡಳಿ ಸಭೆಯೇ ನಡೆದಿಲ್ಲ ಎನ್ನುವುದು ಲಿಂಗರಾಜ್ ಅವರಿಗೆ ಗೊತ್ತಿಲ್ಲವೆ.ಮಾಡಿದ ತಪ್ಪನ್ನು ಮುಚ್ಚಾಕಿಕೊಳ್ಳೊಕ್ಕೆ ಒಂದ್ ಸುಳ್ಳನ್ನು ಹೇಳಿ..ಅದನ್ನು ಮುಚ್ಚಾಕಿಕೊಳ್ಳೊಕ್ಕೆ ಮತ್ತೊಂದು ಸುಳ್ಳು ಹೇಳುತ್ತಿದ್ದಾರಾ ಎಂದೆನಿಸುತ್ತದೆ. ಎಲ್ಲವೂ ನಿಯಾಮವಳಿ ವಿರುದ್ದವಾಗಿ ನಡೆದಿದ್ದರೆ ಲಿಂಗರಾಜ್ ಅವರಿಗೆ ಸಂಕಷ್ಟ ಕಟ್ಟಿಟ್ಟಬುತ್ತಿ.
ಡಾ.ಪಿ.ನಿರಂಜನ್ ಗು ನರೇಂದ್ರಸ್ವಾಮಿಗೂ ಏನ್ ಸಂಬಂಧ:ಅಧಿಕಾರ ವಹಿಸಿಕೊಂಡ ಮೇಲೆ ಎಲ್ಲದನ್ನು ಬದಿಗೊತ್ತಿ,ಡಾ.ಪಿ ನಿರಂಜನ್ ಅವರ ನೇಮಕವನ್ನೇ ಪ್ರಾಶಸ್ತ್ಯದ ವಿಷಯವನ್ನಾಗಿ ಹೇಗೆ ಮಾಡಿಕೊಂಡರೋ ಗೊತ್ತಾಗ್ತಿಲ್ಲ.ಆದರೆ ವಿಷಯದ ಆಳಕ್ಕೆ ಇಳಿದು ನೋಡಿದಾಗ ಡಾ.ಪಿ,.ನಿರಂಜನ್ ಹಾಗೂ ನರೇಂದ್ರಸ್ವಾಮಿ ಅವರು ಆತ್ಮೀಯರು.ಮೊದಲಿಂದಲೂ ಪರಸ್ಪರ ಬಲ್ಲವರು.ಆ ಆತ್ಮೀಯತೆ ಹಾಗೂ ಗಾಢತೆಯಿಂದಲೇ ನರೇಂದ್ರಸ್ವಾಮಿ ತಮ್ಮ ತಾಂತ್ರಿಕ ಸಲಹೆಗಾರರನ್ನಾಗಿ ಡಾ.ಪಿ ನಿರಂಜನ್ ಅವರನ್ನು ನೇಮಿಸಿಕೊಂಡಿದ್ದಾರೆನ್ನುವ ಮಾತುಗಳಿವೆ.
ಅಧ್ಯಕ್ಷರಾಗಿ ನರೇಂದ್ರಸ್ವಾಮಿ ಅವರು ಒಬ್ಬ ತಾಂತ್ರಿಕ ಸಲಹೆಗಾರರನ್ನು ತಮ್ಮ ವಿವೇಚನಾಯುತ ಅಧಿಕಾರ ಬಳಸಿ ನಿಯೋಜಿಸಿಕೊಳ್ಳಲು ಶಕ್ತರಿಲ್ಲವೇ..? ಅವರಿಗೆ ಆ ಅಧಿಕಾರವಿಲ್ಲವೇ..? ಎಂದು ಕೇಳಬಹುದು, ಖಂಡಿತಾ ಇದೆ.ಆದ್ರೆ ಅದೆಲ್ಲಕ್ಕೂ ಒಂದು ರೀತಿನೀತಿ ಅನ್ನೋದು ಇರುತ್ತಲ್ವಾ..! ಅದನ್ನು ಮೀರುವ ಅಧಿಕಾರ ಯಾರಿಗೂ ಇಲ್ಲ..ನರೇಂದ್ರಸ್ವಾಮಿ ಅವರ ಮೇಲೆ ಕೇಳಿಬಂದಿರುವ ಆರೋಪವೂ ಇಂತದ್ದೆ.ಅಲ್ಲದೇ ಡಾ.ಪಿ ನಿರಂಜನ್ ಅವರು ತುಂಬಾ ಅನುಭವಿಗಳು,ಈ ಹುದ್ದೆಗೆ ನಿಜಕ್ಕು ಅರ್ಹರೆನ್ನುವುದರಲ್ಲಿ ಎರಡು ಮಾತಿಲ್ಲ.ಅದಕ್ಕೆ ನಮ್ಮ ತಗಾದೆಯೂ ಇಲ್ಲ,ಆಕ್ಷೇಪವೂ ಇಲ್ಲ.ಆದ್ರೆ ಅವರ ನೇಮಕ ಕೂಡ ನಿಯಮಬದ್ಧವಾಗಿ ಆಗಿಲ್ಲ ಎನ್ನುವುದು ಆರೋಪ.ಈ ಗೊಂದಲಕ್ಕೆ ಸರ್ಕಾರವೇ ತೆರೆ ಎಳೆಯಬೇಕಿದೆ.