advertise here

Search

ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ: 5 ಲಕ್ಷ ಲಂಚ ಪಡೆಯುವಾಗ ಅರೆಸ್ಟ್!

lokayukta arrests shirahatti mla

ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಲೋಕಾಯುಕ್ತ) ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಗುತ್ತಿಗೆದಾರರೊಬ್ಬರಿಂದ ಲಕ್ಷಾಂತರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಶಾಸಕರ ಆಪ್ತ ಸಹಾಯಕನನ್ನು ವಶಕ್ಕೆ ಪಡೆಯಲಾಗಿದ್ದು, ಶಾಸಕರ ವಿರುದ್ಧವೂ ಗಂಭೀರ ಕ್ರಮ ಕೈಗೊಳ್ಳಲಾಗಿದೆ.

ಲಕ್ಷ್ಮೇಶ್ವರ ತಾಲೂಕಿನ ಸಂಕದಾಳ ಗ್ರಾಮದಲ್ಲಿ ಅಂದಾಜು ಒಂದು ಕೋಟಿ ರೂಪಾಯಿ ವೆಚ್ಚದ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಈ ಭ್ರಷ್ಟಾಚಾರ ನಡೆದಿದೆ ಎನ್ನಲಾಗಿದೆ. ಈ ಕಾಮಗಾರಿಯನ್ನು ನೀಡಲು ಶಾಸಕ ಡಾ. ಚಂದ್ರು ಲಮಾಣಿ ಅವರು ಗುತ್ತಿಗೆದಾರ ವಿಜಯ ಪೂಜಾರ ಅವರಿಂದ 10 ಲಕ್ಷ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ.

ಆಸ್ಪತ್ರೆಯಲ್ಲಿ ನಡೆದ ಹೈಡ್ರಾಮಾ: ಹಣ ಎಸೆದು ಓಡಿದ ಆಪ್ತ ಸಹಾಯಕ!

ಲಂಚದ ಹಣದಲ್ಲಿ ಮೊದಲ ಕಂತಾಗಿ 5 ಲಕ್ಷ ರೂಪಾಯಿಗಳನ್ನು ಪಡೆಯಲು ಶಾಸಕರ ಆಪ್ತ ಸಹಾಯಕ ಮಂಜು ವಾಲ್ಮೀಕಿ, ಲಕ್ಷ್ಮೇಶ್ವರ ಪಟ್ಟಣದ ಬಾಲಾಜಿ ಆಸ್ಪತ್ರೆಗೆ ಆಗಮಿಸಿದ್ದನು. ಗುತ್ತಿಗೆದಾರ ವಿಜಯ ಪೂಜಾರ ಅವರಿಂದ ಹಣ ಪಡೆಯುತ್ತಿದ್ದಾಗಲೇ ಹೊಂಚು ಹಾಕಿದ್ದ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು.

ALSO READ :  "ಅಡ್ಡಮತದಾನ"ಕ್ಕೆ ಕೋಟ್ಯಾಂತರ ಆಮಿಷ: ಮೈತ್ರಿ ಅಭ್ಯರ್ಥಿ ಸೇರಿ ನಾಲ್ವರ ವಿರುದ್ಧ FIR

ಲೋಕಾಯುಕ್ತ ಪೊಲೀಸರನ್ನು ಕಂಡ ತಕ್ಷಣ ಮಂಜು ವಾಲ್ಮೀಕಿ ಸ್ಥಳದಿಂದ ಓಡಿಹೋಗಲು ಪ್ರಯತ್ನಿಸಿದ್ದಾನೆ. ತನ್ನ ಬಳಿ ಇದ್ದ ಲಂಚದ ಹಣದ ಬ್ಯಾಗ್ ಅನ್ನು ಆಸ್ಪತ್ರೆಯ ಹಿಂಭಾಗಕ್ಕೆ ಎಸೆದು ಪರಾರಿಯಾಗಲು ಯತ್ನಿಸಿದಾಗ, ಪೊಲೀಸರು ಅವನನ್ನು ಬೆನ್ನಟ್ಟಿ ಹಿಡಿದು ವಶಕ್ಕೆ ಪಡೆದಿದ್ದಾರೆ. ಎಸೆದಿದ್ದ ಹಣವನ್ನೂ ಸಹ ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ | ಲಕ್ಕುಂಡಿ ನಿಧಿ ರಹಸ್ಯ ಬಯಲು: ಚಿನ್ನದ ಬಿಸ್ಕಿಟ್ ಹೆಸರಲ್ಲಿ ‘ಚಾಕಲೇಟ್’ ಆಟ! ಮೌಲ್ವಿ ಅರೆಸ್ಟ್

ಲಂಚದ ಬೇಡಿಕೆ ಇಟ್ಟಿದ್ದು ಮತ್ತು ಆಪ್ತ ಸಹಾಯಕನ ಮೂಲಕ ಹಣ ಪಡೆದ ಆರೋಪದ ಹಿನ್ನೆಲೆಯಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಅವರ ಮೇಲೆ ಲೋಕಾಯುಕ್ತ ದಾಳಿ ಮುಂದುವರಿದಿದೆ. ಸದ್ಯ ಆಪ್ತ ಸಹಾಯನನ್ನು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದ್ದು, ಈ ಪ್ರಕರಣದಲ್ಲಿ ಶಾಸಕರ ಪಾತ್ರದ ಬಗ್ಗೆ ಹೆಚ್ಚಿನ ಪುರಾವೆಗಳನ್ನು ಸಂಗ್ರಹಿಸಲಾಗುತ್ತಿದೆ.


Political News

ಮಾರ್ಚ್ ಅಂತ್ಯಕ್ಕೆ ಕರ್ನಾಟಕದ ಗದ್ದುಗೆ ಬದಲಾವಣೆ ಪಕ್ಕಾ?! ಡಿಕೆಶಿಗೆ ಸಿಎಂ ಪಟ್ಟ ಕಟ್ಟಲು ಸಜ್ಜಾದ ಹೈಕಮಾಂಡ್!

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಐತಿಹಾಸಿಕ ಪಯಣಕ್ಕೆ ಸಿಎಂ ಅಭಿನಂದನೆ

ಸಂವಿಧಾನ ರಕ್ಷಣೆಗೆ ಸ್ಪೀಕರ್ ಪೀಠಕ್ಕೆ ಸವಾಲು: ಓಂ ಬಿರ್ಲಾ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ನಿರ್ಣಯ

ವಾಣಿಜ್ಯ ಎಲ್‌ಪಿಜಿ ಕೊರತೆ: ಕೇಂದ್ರಕ್ಕೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ಹೊಸ ನಾಯಕನ ಆಯ್ಕೆಯ ಬೆನ್ನಲ್ಲೇ ತೀವ್ರಗೊಂಡ ಯುದ್ಧ: ಆಪರೇಶನ್ ಎಪಿಕ್ ಫ್ಯೂರಿಗೆ 10ನೇ ದಿನ

‘ಹೈಕಮಾಂಡ್ ನಿರ್ಧಾರವೇ ಅಂತಿಮ’: ನಾಯಕತ್ವದ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಫುಲ್ ಸ್ಟಾಪ್!

‘ಖಾಲಿ ಚೊಂಬು’ ಕೊಟ್ಟ ಕಾಂಗ್ರೆಸ್: ಬಜೆಟ್ ದಿನದಂದು ಬಿಜೆಪಿ ನಾಯಕರ ಪ್ರತಿಭಟನೆ

16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧ!

Scroll to Top