advertise here

Search

“ಡಾಲಿ” ಧನಂಜಯ್ ಮದುವೆಯಲ್ಲಿ ಅಂಡರ್ ವರ್ಲ್ಡ್ ಡಾನ್ “ಸೈಲೆಂಟ್ ಸುನೀಲ” ಪ್ರತ್ಯಕ್ಷ


ಬೆಂಗಳೂರು: ಸೈಲೆಂಟ್ ಆಗಿದ್ದ ಸುನೀಲ ಮತ್ತೆ ಪ್ರತ್ಯಕ್ಷನಾಗಿದ್ದಾನೆ.. ನೇಪಥ್ಯಕ್ಕೆ ಸರಿದೇ ಹೋದನೆಂದುಕೊಂಡಿದ್ದ ಆತ ಮುನ್ನಲೆಗೆ ಬಂದಿದ್ದೇನೆ. ಅಂದ್ಹಾಗೆ ಆತ ದಿಢೀರ್ ಪ್ರತ್ಯಕ್ಷನಾಗಿ ಅಚ್ಚರಿ ಮೂಡಿಸಿದ್ದು, ಜತೆಗೆ ಗಾಬರಿ ಸೃಷ್ಟಿಗೂ ಕಾರಣವಾಗಿದ್ದು ಕನ್ನಡದ ಸಿನೆಮಾ ಸ್ಟಾರ್ ಡಾಲಿ ಧನಂಜಯ್ ಅವರ ಮದುವೆಯಲ್ಲಿ.. ಯಾರೂ ಎಕ್ಸ್ ಪೆಕ್ಟ್ ಮಾಡದ ಹೊತ್ತಲ್ಲಿ ಮದುವೆ ಮನೆಯಲ್ಲಿ ಪ್ರತ್ತಕ್ಷನಾದ ಸುನೀಲ ಎಲ್ಲರನ್ನೂ ತಬ್ಬಿಬ್ಬುಗೊಳಿಸಿಬಿಟ್ಟಿದ್ದು ಮಾತ್ರ ಸುಳ್ಳಲ್ಲ.

ಭೂಗತ ಪಾತಕಿ, ಬೆಂಗಳೂರು ಅಂಡರ್ ವರ್ಲ್ಡ್ ನ ಡಾನ್ ಸೈಲೆಂಟ್ ಸುನೀಲ ಸುಮ್ಮನಿದ್ರು ಸುದ್ದಿನೇ..ಸ್ವಲ್ಪ ಕೊಸರಾಡಿದ್ರೂ ಸುದ್ದಿನೇ..ಕಳೆದ ಕೆಲ ದಿನಗಳಿಂದೆ ರೌಡಿ ಬಲರಾಮನ ತಿಥಿ ಕಾರ್ಯಕ್ರಮಕ್ಕೆ ಬಂದಾಗ ಪೊಲೀಸರ ಜತೆ ಕಿರಿಕ್ ಮಾಡಿಕೊಂಡು ಕೇಸ್ ಹಾಕಿಸಿಕೊಂಡ ಮೇಲೆ ಸ್ವಲ್ಪ ಸೈಲೆಂಟಾಗಿಯೇ ತೆರೆಮರೆಗೆ ಸರಿದಿದ್ದ. ಅವನ ಖಬರ್ ಇಲ್ಲದಿದ್ದರಿಂದ ಪೊಲೀಸರು ಕೂಡ ನಿರಾಳರಾಗಿದ್ರು. ಕಸದ ಕಾಂಟ್ರ್ಯಾಕ್ಟರ್..ಲ್ಯಾಂಡ್ ಡೀಲಿಂಗ್ ನಲ್ಲೇ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದ..ಇಂಥಾ ಸುನೀಲ ಮೈಸೂರಿನಲ್ಲಿ ನಡೆದ ನಟ ಡಾಲಿ ಧನಂಜಯ ಅವರ ಮದುವೆಯ ಅರತಕ್ಷತೆ ಕಾರ್ಯಕ್ರಮದಲ್ಲಿ ದಿಢೀರ್ ಪ್ರತ್ಯಕ್ಷನಾಗಿ ತಬ್ಬಿಬ್ಬುಗೊಳಿಸಿಬಿಟ್ಟ.

ಸುನೀಲ ತನ್ನ ಪಟಾಲಂನೊಂದಿಗೆ ಮದುವೆಯ ಮನೆಯಲ್ಲಿ ಪ್ರತ್ಯಕ್ಷವಾದಾಗ ಅಲ್ಲಿದ್ದವರೆಲ್ಲಾ ತಬ್ಬಿಬ್ಬಾಗಿದ್ದಾರೆ. ಒಂದ್ರೀತಿ ಆಶ್ಚರ್ಯ ಇನ್ನೊಂದೆಡೆ ಗಾಬರಿ..ಆದರೆ ಮದುವೆ ಮನೆಯಾದ್ದರಿಂದ ಅಲ್ಲಿ ಒಳ್ಳೇಯದೆ ಬಿಟ್ಟು ಕೆಟ್ಟದೇನು ನಡೆಯೊಲ್ಲ ಎನ್ನುವ ಕಾನ್ಫಿಡೆನ್ಸ್ ಇದ್ದಿದ್ಗದರಿಂದ ಯಾರೊಬ್ಬರೂ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಮದುವೆ ಮನೆಯಲ್ಲಿ ಪ್ರತ್ಯಕ್ಷನಾದವನು ಡಾಲಿ ಹಾಗೂ ದಂಪತಿಗೆ ಎಲ್ಲರಂತೆ ಶುಭ ಹಾರೈಸಿ ಒಂದಷ್ಟು ಕ್ಷಣ ಇದ್ದು ಅಲ್ಲಿಂದ ನಾಪತ್ತೆಯಾದ.

ಸೈಲೆಂಟ್ ಸುನೀಲ ಈ ರೀತಿ ಮದುವೆ ಮನೆಯಲ್ಲಿ ಪ್ರತ್ಯಕ್ಷವಾದದ್ದು ಎಲ್ಲರಿಗೂ ಆಶ್ಚರ್ಯ ಮೂಡಿಸಿತ್ತು.ಏಕೆಂದರೆ ಸಹಜವಾಗಿ ಸೈಲೆಂಟ್ ಸುನೀಲ ಕೆಲವೇ ಕೆಲವು ಬೆರಳೆಣೆಯಷ್ಟು ಆತ್ಮೀಯರ ಮನೆ-ಸಮಾರಂಭಗಳಿಗೆ ಹೋ್ಗುವುದನ್ನು ಬಿಟ್ಡರೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕಡಿಮೆನೆ.ಇದಕ್ಕೆ ಕಾರಣವು ಇದೆ. ಸೈಲೆಂಟ್ ಗೆ ಅನೇಕ ರೌಡಿ ಸಿಂಡಿಕೇಟ್ ಗಳಿಂದ ಥ್ರೆಟ್ ಇದೆ.ಯಾವ ಸಮಯದಲ್ಲಿ ಏನಾಗಬಹುದೋ ಎಂದು ಊಹಿಸಲಿಕ್ಕಾಗದಂಥ ಘಟನೆಗಳು ನಡೆಯಬಹುದು.ಅದರಲ್ಲು ಲಕ್ಷಾಂತರ ಜನ ಸೇರುವ ಇಂಥಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾನೆಂದರೆ ಎದುರಾಳಿಗಳಿಗೆ ತಮ್ಮ ಕೆಲಸ ಮುಗಿಸುವುದು ಸಲೀಸು ಹಾಗೂ ಅನಾಯಾಸ.ಹಾಗಾಗಿ ಸುನೀಲ ಹೆಚ್ಚು ಜನ ಸೇರುವ ಸಮಾರಂಭಗಳಿಗೆ ಹೋಗೋದೆ ಕಡಿಮೆಯಂತೆ.

ALSO READ :  LIFE STORY OF ACTRESS DR.LEELAVATHI... "ಕಿತ್ತು ತಿನ್ನುವ ಬಡತನದಿಂದ ಅಭಿಜಾತ ಕಲಾವಿದೆವರೆಗೂ": ಯಾವ ಹೋರಾಟಕ್ಕೂ ಕಡಿಮೆ ಇರ್ಲಿಲ್ಲ ಲೀಲಾವತಿ "ಜೀವನಗಾಥೆ"

ಪರಿಸ್ತಿತಿ ಹೀಗಿರುವಲ್ಲಿ ಡಾಲಿ ದನಂಜಯ್ ಅವರ ಮದುವೆಗೆ ಆಗಮಿಸಿ ಅವರಿಗೆ ಶುಭ ಕೋರಿದ್ದು ಆಶ್ವರ್ಯ ಮೂಡಿಸಿದೆ. ಕಾರ್ಯಕ್ರಮದಲ್ಲಿ ಇದ್ದವರು ಒಂದ್ ಕ್ಷಣ ಸೈಲೆಂಟ್ ಸುನೀಲನ ಬಿಲ್ಡಪ್ ನೋಡಿ ಗಾಬರಿಯಾಗಿದ್ದರೂ ಆಶ್ಚರ್ಯವಿಲ್ಲ,ಇನ್ನು ಕೆಲವರು ಆತನ ಸ್ಟೈಲ್ ಗೆ ಫಿದಾ ಆಗಿದ್ರೂ ಆಶ್ಚರ್ಯ ಪಡಬೇಕಿಲ್ಲ.ಸುನೀಲನನ್ನು ಆತನ ಮ್ಯಾನರಿಸಂ-ಸ್ಟೈಲ್ ನಿಂದ ಇಷ್ಟಪಡುವ ಪಡ್ಡೆಗಳಂತೂ ಅಲ್ಲಿಂದಲೇ ಬಾಸ್ ಬಾಸ್ ಎಂದು ಕೂಗಿದ್ದರೂ ಆಶ್ಚರ್ಯವಿಲ್ಲ.ಆದರೆ ಯಾವುದಕ್ಕೂ ರಿಯಾಕ್ಟ್ ಮಾಡದೆ ತಾನು ಬಂದ ಕೆಲಸವನ್ನು ಸೈಲೆಂಟಾಗಿಯೇ ಮುಗಿಸಿಕೊಂಡು ಯಾರಿಗೂ ಗೊತ್ತಾಗದ ರೀತಿಯಲ್ಲಿ ಸುನೀಲ ಅಂಡ್ ಹಿಸ್ ಗ್ಯಾಂಗ್ ಮಾಯವಾಗಿದೆ. ಹೆಚ್ಚು ಹೊತ್ತು ಇದ್ದರೆ ಪರಿಸ್ತಿತಿ ಏನಾದ್ರೂ ಆಗಬಹುದೆನ್ನುವ ಎಚ್ಚರಿಕೆಯಿಂದಲೇ ಸುನೀಲ ಸೈಲೆಂಟಾಗಿಯೇ ಗಾಯಬ್ ಆಗಿದ್ದಾನೆ.

ಡಾಲಿ ಮದುವೆಗೆ ಪಾತಕಿ ಸೈಲೆಂಟ್ ಸುನೀಲ ಆಗಮಿಸಿದ ವಿಚಾರ ತುಂಬಾ ಜನಕ್ಕೆ ಗೊತ್ತಾಗಿಲ್ಲ.ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ಮದುವೆ ಸಮಾರಂಭದ ಫೋಟೋಗಳು ವೈರಲ್ ಆಗುತ್ತಿದ್ದಂತೆ ಪಾಸಿಟಿವ್ ಹಾಗು ನೆಗೆಟಿವ್ ಕಾಮೆಂಟ್ ಗಳು ಬರಲಾರಂಭಿಸಿವೆಯಂತೆ.ಕೆಲವರು ಡಾಲಿಯಂಥ ಸಂಭಾವಿತ ನಟನ ಮದುವೆಯಲ್ಲಿ ಪಾತಕಿಗೇನು ಕಲಸ ಎಂದು ಪ್ರಶ್ನಿಸಲಾರಂಭಿಸಿದ್ರೆ ಜೈ ಬಾಸ್..ನಿಮ್ಮ ಖದರ್ ಗೆ ನಾವು ಫಿದಾ ಆದ್ವಿ ಎಂದು ಬರೆದುಕೊಂಡಿದ್ದಾರಂತೆ.

ಅಂದ್ಹಾಗೆ ಡಾಲಿ ತನ್ನ ಮದುವೆಗೆ ಸೈಲೆಂಟ್ ಸುನೀಲನನ್ನು ಆಮಂತ್ರಿಸಿದ್ದರಾ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಡಾಲಿ ಅವರೇ ಸೈಲೆಂಟ್ ಗೆ ಆಮಂತ್ರಣ ನೀಡಿದ್ರಾ ಅಥವಾ ಸೈಲೆಂಟೇ ಆತ್ಮೀಯತೆಯಿಂದ ಬಂದಿದ್ನೋ ಗೊತ್ತಾಗುತ್ತಿಲ್ಲ.ಡಾಲಿಗು ಸೈಲೆಂಟ್ ಗೂ ಏನ್ ಸಂಬಂಧ..ಅವರಿಬ್ಬರಿಗೆ ಪರಿಚಯ ಆಗಿದ್ದಾದ್ರೂ ಹೇಗೆ ಎನ್ನುವ ಚರ್ಚೆ ಕೂಡ ಶುರುವಾಗಿದೆ,ಇದಕ್ಕೆ ಕೆಲವರು ಬಹುಷಃ ಡಾನ್ ಜಯರಾಜ್ ಆಧರಿಸಿದ ಹೆಡ್ ಬುಷ್ ಚಿತ್ರ ಮಾಡುವಾಗ ಸೈಲೆಂಟ್ ನ ಗುರು ಅಗ್ನಿ ಶ್ರೀಧರ್ ಮೂಲಕ ಡಾಲಿಗೆ ಸುನೀಲನ ಪರಿಚಯವಾಗಿರಬಹುದು ಎಂದು ವಿವರಣೆ ನೀಡಿದ್ದಾರೆ. ಅದೇನೇ ಆಗಲಿ ರೌಡಿ ಎಂದಾಕ್ಷಣ ತಮ್ಮ ಆತ್ಮೀಯರ ಮದುವೆ ಅಥವಾ ಇತರೆ ಸಮಾರಂಭಗಳಿಗೆ ಹಾಜರಾಗಲೇ ಬಾರದು ಎನ್ನುವ ನಿಯಮವೇನಿಲ್ಲವಲ್ಲ. ಹಾಗಾಗ ಡಾಲಿ ಮದುವೆಯಲ್ಲಿ ಸೈಲೆಂಟ್ ಆಗಮಿಸಿ ಶುಭ ಹಾರೈಸಿದ್ದಕ್ಕೆ ಹೆಚ್ಚಿನ ಅರ್ಥ ಕಲ್ಪಿಸಬೇಕಿಲ್ಲ ಅಲ್ವಾ..?!


Political News

ಈ ಸುದ್ದಿ ನಮ್ಮಲ್ಲಿ ಮಾತ್ರ…POLITICAL EXCLUSIVE… ಕಾಂಗ್ರೆಸ್ ಗೆ ಗುಡ್ ಬೈ..! ಬಿಜೆಪಿಗೆ ಜೈ..ಜೈ.. ! 60 ಶಾಸಕರಿಗೆ ಗಾಳ….! 42 ಶಾಸಕರ ಲೀಸ್ಟ್ ರೆಡಿ..! ನವೆಂಬರ್ ಗೆ “ಡಿಕೆಶಿ” ಜಂಪಿಂಗ್ ಪಕ್ಕಾ..!

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಲೀಸ್ಟ್ ನ ಆ ಮುಂಚೂಣಿ ಹೆಸರು..ರೇಸ್ ನಲ್ಲಿರೋರು ಯಾರ್ ಗೊತ್ತಾ..!?

EXCLUSIVE..ಹಿರಿಯ “ಪತ್ರಕರ್ತ ದಿಗ್ಗಜ”ರೊಬ್ಬರಿಗೆ ಬಿಜೆಪಿ ಗಾಳ..!- ಆಯಕಟ್ಟಿನ ಹುದ್ದೆಗೆ ಡಿಮ್ಯಾಂಡ್..!

EXCLUSIVE…ಅಧಿಕಾರ ವಹಿಸಿಕೊಂಡ ದಿನವೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿಗೆ ಬಿಗ್ ಶಾಕ್..!

ಅಕ್ರಮ ಖಾತಾ ವರ್ಗಾವಣೆ ಆರೋಪಕ್ಕೆ ತುತ್ತಾದ AC ದುರ್ಗಶ್ರೀ,ತಹಸೀಲ್ದಾರ್ ವಿಭಾ ರಾಠೋಡ್ ವಿರುದ್ಧ ಮತ್ತೆರೆಡು ದೂರು…ಸಾಕ್ಷ್ಯವಿದ್ರೂ ಕ್ರಮ ಕೈಗೊಳ್ಳದೆ ಸಚಿವ ಕೃಷ್ಣ ಭೈರೇಗೌಡ ಮೌನ..?!

DCM ಆಪ್ತ ಬಿ.ಎಸ್ .ಪ್ರಹ್ಲಾದ್ ಕಚೇರಿ ಮೇಲೆ ಇ.ಡಿ ರೇಡ್ ಗೆ ಬೆಚ್ಚಿಬಿದ್ದ ಭ್ರಷ್ಟರು: ನಿಟ್ಟುಸಿರು ಬಿಟ್ಟ ಸಂತ್ರಸ್ಥ ಅಧಿಕಾರಿ ಸಿಬ್ಬಂದಿ..

ಪೋಡಿ ಇಲ್ಲ,ಪ್ರತ್ಯೇಕ ಸರ್ವೆ ಸ್ಕೆಚ್ ಆಗಿಲ್ಲ-ಸರ್ವೆ ನಂಬರ್ ಕೊಟ್ಟಿಲ್ಲ, GPA ಮೇಲೆ ಖಾಸಗಿ ಬಿಲ್ಡರ್ಸ್ ಗೆ ಎಸಿ, ತಹಸೀಲ್ದಾರ್ ರಿಂದ ಖಾತಾ ವರ್ಗಾವಣೆ.!

ಬಣ್ಣಗಳಲ್ಲಿ ಲೀನವಾದ Btv ಮೇಕಪ್‌ಮ್ಯಾನ್‌ ಚೇತನ್

Scroll to Top