advertise here

Search

ಪತ್ರಕರ್ತನಿಂದಲೇ ಪತ್ರಕರ್ತನ ಮೇಲೆ ಎಣ್ಣೆ ಏಟಲ್ಲಿ ಕೊಲೆ ಯತ್ನ..!ಬದುಕುಳಿದಿದ್ದೇ ಪವಾಡ..?


ಬೆಂಗಳೂರು: ಸಮಾಜಕ್ಕೆ ಮಾದರಿಯಾಗಬೇಕಾದ ಪತ್ರಿಕೋದ್ಯಮ(JOURNALISM) ಹಳ್ಳ ಹಿಡಿದು ಎಷ್ಟೋ ವರ್ಷ ಆಗೋಗಿದೆ ಬಿಡಿ.ಪತ್ರಕರ್ತರ(JOURNALIST)ನ್ನು ಕಂಡ್ರೆ ಅಸಹ್ಯದಿಂದ ಮಾತನಾಡುವ ಸ್ಥಿತಿಗೆ ಸಮಾಜ ಬಂದು ಬಿಟ್ಟಿದೆ. ಸಮಾಜದಲ್ಲಿರುವ ಹುಳುಕುಗಳನ್ನು ಎತ್ತಿ ತೋರಿಸಬೇಕಿದ್ದ ಮಾದ್ಯಮಗಳೇ ಗೆದ್ದಲು ಕಟ್ಟಲಾರಂಭಿಸಿದೆ. ಬದ್ಧತೆ-ನೈತಿಕತೆ-ಮೌಲ್ಯಾಧಾರಿತ ಎನ್ನುವಂತ ಪದಗಳೇ ಸವಕಲಾಗಿ ಹೋಗಿವೆ.ಇಂಥಾ ದುರಿತ ಹಾಗೂ ಪ್ರಕ್ಷುಬ್ಧ ಸನ್ನಿವೇಶದಲ್ಲೇ ಮಾದ್ಯಮಗಳ ಬಗ್ಗೆ ಹೊರಗಿನವರಲ್ಲ,

ಸುದ್ದಿ ಮನೆಯಲ್ಲಿ ಕೆಲಸ ಮಾಡುವ ಮಾದ್ಯಮ ಮಿತ್ರರುಗಳೇ ಮುಜುಗರ-ಅವಮಾನ ಪಟ್ಟುಕೊಳ್ಳು ವಂಥ ಘಟನೆಗಳು ನಡೆಯಲಾರಂಭಿಸಿದೆ.ಇದಕ್ಕೆ ಮೊನ್ನೆ ನಡೆಯಿತೆನ್ನಲಾದ ಅಹಿತಕರ ಘಟನೆಯೇ ಸಾಕ್ಷಿ.ಈ ಘಟನೆ ಪತ್ರಕರ್ತರು ಇಷ್ಟೊಂದು ಹೀನ ಮಟ್ಟಕ್ಕೆ ಇಳಿಯಬಲ್ಲರಾ ಎನ್ನುವಂತ ಅನುಮಾನ ವನ್ನು ಸಾರ್ವಜನಿಕವಾಗಿ ಮೂಡಿಸಿಬಿಟ್ಟಿದೆ.ಅದರ ಎಕ್ಸ್ ಕ್ಲ್ಯೂಸಿವ್ ವರದಿಯನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ನಿರ್ಭಿಡೆಯಿಲ್ಲದೆ ಮಾಡುತ್ತಿದೆ.

ಮಾದ್ಯಮಗಳ ಮಾನ ಹರಾಜಾಕುವಂಥ ಘಟನೆ ಏನ್ ನಡೀತೆನ್ನುವ ಕುತೂಹಲ ಸ್ವತಃ ನಮ್ಮ ಮಾದ್ಯಮ ಸ್ನೇಹಿತರಲ್ಲೇ ಸೃಷ್ಟಿಯಾಗಬಹುದು.10-07-2025 ರ ನಡುರಾತ್ರಿ ನಡೆದ ಘಟನೆ ಇದಕ್ಕೆ ಸಾಕ್ಷಿಯಂತಿದೆ.ಅಂದ್ಹಾಗೆ ಈ ಘಟನೆ ನಡೆದಿರುವುದು ಪ್ರಜಾ ಟಿವಿ(PRAJA TV) ಮತ್ತು ಸಮಯ ಟಿವಿ(SAMAYA TV)( ಮೊದಲು ಪ್ರತ್ಯೇಕವಾಗಿ ನಡೆಯುತ್ತಿದ್ದ ಚಾನೆಲ್ ಗಳು ಈಗ ಒಬ್ಬರ  ಮಾಲೀಕತ್ವದಲ್ಲಿ ನಡೆಯುತ್ತಿದೆ) ಆಯೋಜಿಸಿದ್ದ ಕಾರ್ಯಕ್ರಮ ವೊಂದರಲ್ಲಿ.ಅದೇ ಚಾನೆಲ್ ನ ಇಬ್ಬರು ರಿಪೋರ್ಟರ್ ಗಳು ತಮಾಷೆಯಲ್ಲಿ ಶುರುವಿಟ್ಟುಕೊಂಡ ಮಾತುಕತೆ ವಾಗ್ವಾದಕ್ಕೆ ತಿರುಗಿ, ಬಾಟಲಿಯಲ್ಲಿ ಚುಚ್ಚಿ ಕೊಲೆ ಮಾಡುವ ಯತ್ನದವರೆಗೆ ಮುಂದುವರೆದಿದ್ದು ಮಾತ್ರ ದುರಂತ.ಈ ಬಗ್ಗೆ  ಚಾನೆಲ್ ನ ಕ್ರೈಂ ರಿಪೋರ್ಟರ್ ಮಂಜುನಾಥ್( CRIME REPORTER MANJUNATH) ಎನ್ನುವವರು ಸುಬ್ರಮಣ್ಯನಗರ ಪೊಲೀಸ್ ಠಾಣೆ( SUBRAMANYA NAGARA POLICE STATION)ಗೆ ದೂರು ನೀಡಿದ್ದಾರೆ.

ಅದು  10-07-2025 ರ  ಸಂಜೆ ಆಯೋಜನೆ ಗೊಂಡಿದ್ದ ಕಾರ್ಯಕ್ರಮ.ನಗರದ ಪ್ರತಿಷ್ಟಿತ ಶೆರ್ಟಾನ್ ಹೊಟೇಲ್( SHERTON HOTEL) ನಲ್ಲಿ ಚಾನೆಲ್ ನ ಮುಖ್ಯಸ್ಥ ವಿಜಯ ತಾತಾ( VIJAYA THATHA) ಅವರು ( ಅವರು ಸ್ವತಃ ಚಲನಚಿತ್ರ ನಿರ್ಮಾಪಕರು ಎಂದು ಹೇಳಲಾ ಗುತ್ತಿದೆ).ತಮ್ಮ 5 ಹೊಸ ಚಲನಚಿತ್ರಗಳ( FILM LAUNCH) ಘೋಷಣೆ ಕಾರ್ಯಕ್ರಮ ವನ್ನು ಅಮೃತಸಂಭ್ರಮ ಶೀರ್ಷಿಕೆಯಡಿಯಲ್ಲಿ ಆಯೋಜಿಸಿದ್ದರು.ಆ ಕಾರ್ಯಕ್ರಮ ದಲ್ಲಿ  ಚಾನೆಲ್ ನ  ಅಸೋಸಿಯೇಟೆಡ್ ಎಡಿಟರ್ ಆಗಿ ಕೆಲಸ ಮಾಡುತ್ತಿರುವ ಭವಿತ್  ದೊನಾಗುಡಿಗ( BAVITH DONAGUDIGA) ಸೇರಿದಂತೆ ಅದೇ ಚಾನೆಲ್ ನಲ್ಲಿ ಆಯಕಟ್ಟಿನ ಹುದ್ದೆ ಯಲ್ಲಿ ಕೆಲಸ ಮಾಡುತ್ತಿದ್ದ ವಿಜಯ್ (VIJAY) ಹಾಗೂ ಕುಮಾರ್ ಕೂಡ ಪಾಲ್ಗೊಂಡಿದ್ದರು.

ಸಿನೆಮಾ ಘೋಷಣೆ ಕಾರ್ಯಕ್ರಮ ಮುಗಿದ ತರುವಾಯ ಅದೇ  ಹೊಟೇಲ್ ನ ಎರಡನೇ ಮಹಡಿಯಲ್ಲಿ  ಆಯೋಜನೆ ಮಾಡಲಾಗಿದ್ದ ಸಂತೋಷ ಕೂಟದಲ್ಲಿ ಪಾಲ್ಗೊಂಡಿ ದ್ದಾರೆ. ಪಾರ್ಟಿ ಎಂದರೆ ಕೇಳಬೇಕಾ..? ಪೆಗ್ ಮೇಲೆ ಪೆಗ್ ಪೇರಿಸಲಾರಂಭಿಸಿದ್ದಾರೆ.ಆಗ ಶುರುವಾಗಿದೆ ಭವಿತ್ ಹಾಗೂ ವಿಜಯ್ ನಡುವೆ ಮಾತಿನ ವಾಗ್ಯುದ್ಧ.ಆರಂಭದಲ್ಲಿ ತಮಾಷೆಯಲ್ಲೇ ಶುರುವಾದ ಮಾತುಕತೆ ಗಂಭೀರವಾಗಿದೆ.ಅದು ಎಷ್ಟರ ಮಟ್ಟಿಗೆ ಗಂಭೀರ ಎಂದರೆ ಪರಸ್ಪರ ಕೆಟ್ಟಕೆಟ್ಟದಾಗಿ ಬೈಯ್ದಾಡಿಕೊಳ್ಳುವವರೆಗೂ. ಮದ್ಯದಲ್ಲಿದ್ದವರು ಅವರಿಬ್ಬರನ್ನು ಸಮಾಧಾನಿಸಲು ಯತ್ಬಿಸಿದ್ದಾರೆ.

ಆದರೆ ಅವರಿಬ್ಬರು ಪರಸ್ಪರ ಕೈ ಕೈ ಮಿಲಾಯಿಸಿಕೊಳ್ಳಲಾರಂಭಿಸಿದ್ದಾರೆ.ಅದು ಅಲ್ಲಿಗೆ ಕೊನೆಯಾಗಿದಿದ್ದರೆ ಸಮಸ್ಯೆ ಇರುತ್ತಿರಲಿಲ್ಲವೇನೋ..? ಇವರಿಬ್ಬರ ಸಂಭಾಷಣೆ ನಡುವೆ ವಿಜಯ್ ಗೆ ಅದ್ಯಾವ ರೀತಿಯಲ್ಲಿ ಸಿಟ್ಟು ಬಂತೋ ಗೊತ್ತಿಲ್ಲ..ಅಥವಾ ವಿಜಯ್ ಸಿಟ್ಟು ನೆತ್ತಿಗೇರಿಸುವಂಥ ಯಾವ್ ಮಾತನ್ನಾಡಿದ್ನೋ ಗೊತ್ತಿಲ್ಲ. ಟೇಬಲ್ ನಿಂದ ಮೇಲೆದ್ದವನೇ ಕೈ ಯಲ್ಲಿದ್ದ ಬೀರು ಬಾಟಲಿಯನ್ನು ಹೊಡೆದು ಏಕಾಏಕಿ ಭವಿತ್ ಕುತ್ತಿಗೆ ಭಾಗಕ್ಕೆ ಚುಚ್ಚಿಯೇ ಬಿಟ್ಟಿದ್ದಾನೆ,

ALSO READ :  ರಾಷ್ಟ್ರಧ್ವಜಕ್ಕೆ 21 ಬಾರಿ ಸೆಲ್ಯೂಟ್ ಮಾಡಲು ಯುವಕನಿಗೆ ಶಿಕ್ಷೆ!

ಕುಡಿದ ಮತ್ತಿನಲ್ಲಿ ಏನ್ ಮಾಡಿದೆನ್ನುವುದು ಗೊತ್ತಾಗದೆ ವಿಜಯ್ ಪರಿತಪಿಸಿದ್ದಾನೆ. ಬಾಟಲಿಯಿಂದ ಚುಚ್ಚಿದ ರಭಸಕ್ಕೆ ರಕ್ತ ಸುರಿಯಲಾರಂಭಿಸಿದೆ.ಈ ದೃಶ್ಯ ಕಂಡು ವಿಜಯ್ ಬೆವರಿದ್ದಾನೆ.ಕುಡಿದ ನಶೆಯೆಲ್ಲಾ ಇಳಿದು ಹೋಗಿದೆ.ತಕ್ಷಣಕ್ಕೆ ಭವಿತ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ವೈದ್ಯರ ಪ್ರಕಾರ ಬಾಟಲಿಯಿಂದ ಚುಚ್ಚಿದ ವೇಗದಿಂದ ಕೊರಳಿನ ಸುತ್ತಲಿನ ಸೂಕ್ಷ್ಮ ನರಗಳಿಗೆ ಘಾಸಿಯಾಗಿದೆಯಂತೆ.ಸಧ್ಯಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ಭವಿತ್ ಚಿಕಿತ್ಸೆ ಪಡೆಯುತ್ತಿದ್ದಾನೆ.

ಹೊಟೇಲ್ ನಲ್ಲಿ ನಡೆದ ಈ ಘಟನೆ ಕಾಡ್ಗಿಚ್ಚಿನಂಎತೆ ಹರಡಿದೆ.ತಕ್ಷಣ ಸುಬ್ರಮಣ್ಯ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ  ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಾಡಿದ್ದು ಮಾಡಿ ಏನೂ ಗೊತ್ತಾಗದೆ ಅಲ್ಲೇ ಕುಳಿತುಕೊಂಡಿದ್ದ ವಿಜಯ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಭವಿತ್ ಸ್ಥಿತಿ ಗಂಭೀರವಾಗಿದ್ರೂ  ಜೀವಕ್ಕೆ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರಂತೆ.

ಇಬ್ಬರೂ ಆತ್ಮೀಯರೇ..ಆದ್ರೆ ಹೊಡೆದಾಡಿಕೊಳ್ಳುವಂತದ್ದೇನಾಯ್ತು::ಅಂದ್ಹಾಗೆ ಭವಿತ್ ಹಾಗೂ ವಿಜಯ್ ಇಬ್ಬರೂ ಒಳ್ಳೆಯ ಸ್ನೇಹಿತರೇ.ಅವರಿಬ್ಬರ ನಡುವೆ ಗಾಢವಾದ ಸ್ನೇಹವಿತ್ತು. ವಿಜಯ್ ತಾತಾ ಅವರ ಚಾನೆಲ್ ಗೆ ಬಲಗೈ ಭಂಟರಂತೆ ಇದ್ದವರು. ತಾತಾ ಅವರ ಅತ್ಯಂತ ವಿಶ್ವಾಸ ಪಾತ್ರ ಭಂಟರಾಗಿದ್ದರು.ಇವರಿಬ್ಬರನ್ನು ನಂಬಿಕೊಂಡೇ ತಾತಾ ಚಾನೆಲ್ ಮಾಡಿದ್ದು,ಅವರಿಬ್ಬರ ಮೇಲಿನ ಭರವಸೆಯಿಂದಲೇ ನಿರುಮ್ಮಳರಾಗಿದ್ದರು.

ಅದಲ್ಲದೇ ಇವರಿಬ್ಬರು ಸ್ವಭಾವತಃ ದುಷ್ಟರೇನಲ್ಲ.ಇಬ್ಬರು ಒಳ್ಳೆಯ ಹುಡುಗರು.ಅವರವರ ಕೆಪಾಸಿಟಿ ಯಲ್ಲಿ ಚಾನೆಲ್ ನ್ನು ನಡೆಸಿಕೊಂಡು ಹೋಗುತ್ತಿದ್ದರು. ಭವಿತ್ ಅನೇಕ ಸ್ಯಾಟಲೈಟ್ ಚಾನೆಲ್ ಗಳಲ್ಲಿ ಕೆಲಸ ಮಾಡಿದ ಅನುಭವಿ.ಹಾಗೆಯೇ ವಿಜಯ್ ಕೂಡ ಅನೇಕ ಚಾನೆಲ್ ಗಳಲ್ಲಿ ಕೆಲಸ ಮಾಡಿದ್ದಾನೆ. ಸಧ್ಯ ಅವರಿಬ್ಬರು ವಿಜಯ್ ತಾತಾರ ಚಾನೆಲ್ ಅಷ್ಟೆ ಅಲ್ಲ ಅವರ ಬ್ಯುಸಿನೆಸ್ ನ್ನು ನೋಡಿಕೊಂಡು ಹೋಗುತ್ತಿದ್ದರು.

ಇಬ್ಬರ  ನಡುವೆ ಒಳ್ಳೆಯ ಬಾಂಧವ್ಯವಿರುವಾಗಲೇ ಚುಚ್ಚಿ ಕೊಲ್ಲುವಂಥ ಸನ್ನಿವೇಶ ಏನ್ ಸೃಷ್ಟಿ ಯಾಯ್ತೆನ್ನುವುದು ದೊಡ್ಡ ಪ್ರಶ್ನೆ. ಚಾನೆಲ್ ನಡೆಸುವ ವಿಚಾರದಲ್ಲಿ ಅವರಿಬ್ಬರ ನಡುವೆ ಗೊಂದಲ ಗಳಿದ್ದವಾ..? ದ್ವೇಷದ ಭಾವನೆ ಇತ್ತಾ..? ಯಾವುದಾದ್ರೂ ವಿಷಯಗಳಲ್ಲಿ ಸಂಘರ್ಷ ಗಳಿದ್ದವಾ..? ಈ ರೀತಿಯ ಪ್ರಶ್ನೆಗಳು ಕಾಡುತ್ತಿವೆ,ಆದರೆ  ಪೊಲೀಸರ ವಶದಲ್ಲಿರುವ  ವಿಜಯ್ ನನಗೆ ಭವಿತ್ ಒಳ್ಳೆಯ ಸ್ನೇಹಿತ.ನಮ್ಮಿಬ್ಬರ ಸಾರಥ್ಯದಲ್ಲೇ ಚಾನೆಲ್ ನಡೆದುಕೊಂಡು ಹೋಗುತ್ತಿತ್ತು.ಆದ್ರೆ ಅದ್ಯಾವ ವಿಷಮ ಗಳಿಗೆಯಲ್ಲಿ ಹೀಗಾಯ್ತೋ ಗೊತ್ತಿಲ್ಲ.ಆದರೆ ನನಗೆ ಬಾಟಲಿಯಿಂದ ಚುಚ್ಚಿ ಕೊಲೆ ಮಾಡುವ ಯಾವುದೇ ಉದ್ದೇಶವಿರಲಿಲ್ಲ.ಕುಡಿದ ಅಮಲಿನಲ್ಲಿ ವಿವೇಚನೆ ಕಳೆದುಕೊಂಡು ಈ ರೀತಿ ನಡೆದಿದೆ ಎಂದು ವಿವರಣೆ ನೀಡಿದ್ದಾನಂತೆ..  

ಮೇಲ್ಕಂಡ ಘಟನೆ ಪ್ರಜಾಟಿವಿ-ಸಮಯ ಟಿವಿಯಲ್ಲಿ ಕೋಲಾಹಲ ಹಾಗೂ ಭಯದ ವಾತಾವರಣ ಸೃಷ್ಟಿಸಿದೆಯಂತೆ. ಭವಿತ್ ಸ್ಥಿತಿ  ಇನ್ನೂ ಅಪಾಯದಿಂದ ಹೊರಬಂದಿಲ್ಲ. ಭವಿತ್ ಜೀವಕ್ಕೇನು ಅಪಾಯವಾಗದಿರಲಿ ಎಂದು ಜೈಲಿನಲ್ಲಿರುವ ವಿಜಯ್ ಪ್ರಾರ್ಥಿಸಲಾರಂಭಿಸಿದ್ದಾನಂತೆ.ಭವಿತ್ ವಿಷಯದಲ್ಲಿ ಏನಾದ್ರೂ ಆಗಬಾರದ್ದು ಆಯ್ತೆಂದರೆ ವಿಜಯ್ ವೃತ್ತಿ-ಲೈಫ್-ಭವಿಷ್ಯ ಎಲ್ಲವೂ ಬರ್ಬಾದ್ ಆಗೋದು ಸತ್ಯ..ವಿಜಯ್ ತಾತಾ ಕೂಡ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ ಎನ್ನಲಾಗ್ತಿದೆ.

ಒಟ್ಟಿನಲ್ಲಿ ವಿಜಯ್ ತಾತಾ ಅವರ ಐದು ಚಿತ್ರಗಳ ಘೋಷಣೆಯ ಸಂತೋಷದ ಸಮಾರಂಭ, ಪ್ರಜಾ-ಸಮಯ ಇತಿಹಾಸದಲ್ಲಿ ಒಂದು ಕರಾಳ ನೆನಪಾಗಿ ಉಳಿದೋಗಿತ್ತು ಮಾತ್ರ ದುರಂತ. ಗುಂಪಿನಲ್ಲಿ ಕುಡಿಯೊಕ್ಕೆ ಕುಳಿತುಕೊಳ್ಳುವವರಿಗೆ ಈ ಒಂದು ಘಟನೆ ಎಚ್ಚರಿಕೆ ಕರೆಗಂಟೆಯಾದ್ರೆ ಸಾಕು..


Political News

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

ಜೋಗ್-ಕಾರ್ಗಲ್ ನಲ್ಲಿ ಮಟ್ಕಾ ದಂಧಗೆ ಬಲಿಯಾಯ್ತು ಜೀವ…!

INSIDE THE TRUTH….ಮುರಿದುಬಿದ್ದ ಮಾತುಕತೆ- ಬೇಡಿಕೆಗಳಿಗೆ ಸೊಪ್ಪಾಕದ ಸರ್ಕಾರ-14 ತಿಂಗಳ ಹಿಂಬಾಕಿ 700 ಕೋಟಿ ಬಿಡುಗಡೆಗಷ್ಟೇ ಸರ್ಕಾರ ಒಪ್ಪಿಗೆ…

ನಾಳೆ ಸಾರಿಗೆ ಮುಷ್ಕರ ಇಲ್ಲ, ಒಂದು ದಿನ ಮುಂದೂಡಿಕೆ :ಹೈಕೋರ್ಟ್ ಆದೇಶ

“ಅವರಿಬ್ಬರು” ಒಂದಾದ್ರೆ ಆಗಸ್ಟ್ 5 ರ ಸಾರಿಗೆ ಮುಷ್ಕರ “ಯಶಸ್ವಿ”ನಾ.?!

ಬಿಗ್ ಇಂಪ್ಯಾಕ್ಟ್..kSRTC ಎಂಡಿ ಸಹಿ ನಕಲು ಮಾಡಿದ್ದಾತ ಸಸ್ಪೆಂಡ್…

eXCLUSIVE….ಕೆಎಸ್ ಆರ್ ಟಿಸಿ MD ಸಹಿ ನಕಲು..!-ಲಕ್ಷಾಂತರ ಸುಲಿಗೆ..! ತನಿಖೆಯಾದರೆ ಮತ್ತಷ್ಟು ಅಕ್ರಮ ಬಹಿರಂಗ..

Scroll to Top