ಬೆಂಗಳೂರು: ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ನಿರ್ದೇಶಕರಾದ ಗಾಯತ್ರಿ ಅವರ ಮೇಲೆ ಜಾತಿನಿಂದನೆ ಆರೋಪ ಕೇಳಿಬಂದಿದೆ. ಜನಪದ ಗಾಯಕ ಜೋಗಿಲ ಸಿದ್ದರಾಜು ಅವರು ಸಲ್ಲಿಸಿದ ದೂರಿನ ಮೇಲೆ ಬೆಂಗಳೂರಿನ ಎಸ್ ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜನಪದ ಗಾಯಕರಾಗಿರುವ ಜೋಗಿಲ ಸಿದ್ಧರಾಜು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ವಿವಿಧ ಕಾರ್ಯಕ್ರಮವನ್ನ ನಡೆಸಿಕೊಡುತ್ತಿದ್ದರು. ಕಳೆದ ಮೂರು ವರ್ಷದಿಂದ ಅವರು ನಡೆಸಿಕೊಟ್ಟ ಕಾರ್ಯಕ್ರಮಕ್ಕೆ ಹಣ ಸಂದಾಯವಾಗಬೇಕಿತ್ತು
ಈ ಹಿನ್ನಲೆಯಲ್ಲಿ ಇದೇ ಜುಲೈ 11 ರಂದು ಸಂಭಾವನೆಯ ಹಣ ಕೇಳಲು ತೆರಳಿದ್ದರಂತೆ. ಈ ವೇಳೆ ಇಲಾಖೆ ನಿರ್ದೇಶಕಿ ಆಗಿರುವ ಗಾಯತ್ರಿಯವರು ಸಿದ್ಧರಾಜುಗೆ ಅವಾಚ್ಯ ಶಬ್ಧದಿಂದ ನಿಂದಿಸಿ ಜಾತಿ ನಿಂದನೆ ಮಾಡಿದ್ದರೆನ್ನಲಾಗಿದೆ.

ಈ ಸಂಬಂಧ ಜೋಗಿಲ ಸಿದ್ಧರಾಜು ಜಾತಿನಿಂದನೆ ಪ್ರಕರಣ ದಾಖಲಸಿದ್ದಾರೆ SJ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಹಿನ್ನಲೆಯಲ್ಲಿ ನಿರ್ದೇಶಕಿ ಗಾಯತ್ರಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.