advertise here

Search

ರಾಷ್ಟ್ರವಾದಿ ಚಿಂತಕ ಚಕ್ರವರ್ತಿ ಸೂಲಿಬೆಲೆಗೆ ಕ್ಯಾನ್ಸರ್..!?


ಸಾಮಾಜಿಕ ಜಾಲತಾಣಗಳಲ್ಲಿ ಸೂಲಿಬೆಲೆ ಆರೋಗ್ಯದ ಬಗ್ಗೆ ಊಹಾಪೋಹ-ಸ್ಪಷ್ಟನೆ ನೀಡದ ಸೂಲಿಬೆಲೆ

ಬೆಂಗಳೂರು: ತಾತ್ವಿಕ ಭಿನ್ನಾಭಿಪ್ರಾಯ, ಸೈದ್ದಾಂತಿಕ ವೈರುದ್ಧ್ಯಗಳಾಚೆಗೆ ಕರ್ನಾಟಕ ಕಂಡ ಒಬ್ಬ  ಉತ್ತಮ ವಾಗ್ಮಿ ,ಚಿಂತಕ, ರಾಷ್ಟ್ರವಾದಿ ಹೋರಾಟಗಾರ ಎಂದೇ ಬಿಂಬಿಸಿಕೊಂಡಿರುವ  ಚಕ್ರವರ್ತಿ ಸೂಲಿಬೆಲೆ ಆರೋಗ್ಯಕ್ಕೆ ಸಂಬಂಧಪಟ್ಟಂತೆ ದೊಡ್ಡ ಶಾಕಿಂಗ್ ಎನ್ನುವಂತ ಸುದ್ದಿಯೊಂದು ಹರಿದಾಡುತ್ತಿದೆ.

ಚಕ್ರವರ್ತಿ ಸೂಲಿಬೆಲೆ ಆರೋಗ್ಯವನ್ನು ಮಾರಕವಾದ ಮಾರಿ ಆವರಿಸಿಕೊಂಡಿದೆ ಎನ್ನಲಾಗ್ತಿದೆ.ಈ ಮಹಾಮಾರಿಯನ್ನು ಗಂಟಲು ಕ್ಯಾನ್ಸರ್ ಎನ್ನಲಾಗ್ತಿದೆ.ಸಾಮಾಜಿಕ ಕಾರ್ಯಕರ್ತ ಹಾಗೂ ಕನ್ನಡಪರ ಹೋರಾಟಗಾರರಾದ ಭೈರಪ್ಪ ಹರೀಶ್ ಕುಮಾರ್ ಎನ್ನುವವರು ಇದನ್ನು ತಮ್ಮ ಫೇಸ್ ಬುಕ್ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದಾರೆ.ಅವರು ಈ ಬಗ್ಗೆ ಮಾತನಾಡಿ ದ್ದಾರೆನ್ನಲಾಗಿದ್ದು, ಸೂಲಿಬೆಲೆಗೆ ಕ್ಯಾನ್ಸರ್ ಇರುವ ಬಗ್ಗೆ ಸಾಕಷ್ಟು ಮಾಹಿತಿಗಳು ಬಹಿರಂಗವಾಗುತ್ತಿದ್ದು ನನ್ನ ಮತ್ತು ಅವರ ನಡುವೆ ಏನೇ ಭಿನ್ನಾಭಿಪ್ರಾಯಗಳಿದ್ದರೂ ನನ್ನ ಗೆಳೆಯ ಸೂಲಿಬೆಲೆಗೆ ಏನೂ ಆಗದಿರಲಿ ಎಂಬ ಒಳ್ಳೆಯ ಮಾತನ್ನಾಡಿದ್ದಾರಂತೆ.ಅವರ ಹೇಳಿಕೆಯ ಸ್ಟೇಟಸ್ ಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಭೈರಪ್ಪ ಹರೀಶ್ ಕುಮಾರ್ ಬಹಿರಂಗಪಡಿಸಿರುವ ಕ್ಯಾನ್ಸರ್ ವಿಚಾರದ ಬಗ್ಗೆ ಸಾಕಷ್ಟು ಪರ ವಿರೋಧದ ಚರ್ಚೆಗಳು ಕೂಡ ನಡೆಯಲಾರಂಭಿಸಿವೆ. ಕೆಲವರು ಸೂಲಿಬೆಲೆಯ ವ್ಯಕ್ತಿತ್ವ ಹಾಗೂ ಬದುಕನ್ನು ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸುವ-ವಿಶ್ಲೇಷಿಸುವ ರೀತಿಯ ಚರ್ಚೆ ನಡೆದಿವೆ.ಭೈರಪ್ಪ ಹರೀಶ್ ಕುಮಾರ್ ಅವರ ಬಗ್ಗೆಯೂ ಕೂಡ ಸೂಲಿಬೆಲೆ ಬೆಂಬಲಿಗರು ಆಕ್ಷೇಪಾರ್ಹವಾದ ರೀತಿಯಲ್ಲಿ ಹೇಳಿಕೆ ನೀಡುತ್ತಿರುವ ಬಗ್ಗೆಯೂ ಕೂಡ  ವರದಿಯಾಗಿದೆ.

ALSO READ :  EXCLUSIVE...ARNAB, "KARNATAKA WANTS TO kNOW" ಏನಾಗಲಿದೆ ಕರ್ನಾಟಕದಲ್ಲಿ "ರಿಪಬ್ಲಿಕ್ ಕನ್ನಡ"  ಭವಿಷ್ಯ..!?

ಅದೇನೇ ಇರಲಿ, ಸೂಲಿಬೆಲೆ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ರೀತಿಯಲ್ಲಿ ಚರ್ಚೆ ನಡೆಯುತ್ತಿದೆ. ಅಂದ್ಹಾಗೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿರುವ ಸುದ್ದಿಯ ಸತ್ಯಾಸತ್ಯತೆ ಬಗ್ಗೆ ಈವರೆಗೂ ಯಾವುದೇ ಸ್ಪಷ್ಟನೆ ದೊರೆತಿಲ್ಲ.ಖುದ್ದು ಸೂಲಿಬೆಲೆ ಅವರೇ ಈ ಬಗ್ಗೆ ಈವರೆಗೂ ಹೇಳಿಕೆ ನೀಡಿಲ್ಲ.ಅವರು ಸ್ಪಷ್ಟನೆ ನೀಡುವವರೆಗೂ ಅವರ ಆರೋಗ್ಯದ ಬಗ್ಗೆ ಇರುವ ಊಹಾಪೋಹಗಳಿಗೆ ತೆರೆ ಬೀಳುವುದಿಲ್ಲ ಎನ್ನಿಸುತ್ತಿದೆ.ಈ ಬಗ್ಗೆ ಶೀಘ್ರವೇ ಸೂಲಿಬೆಲೆ ಇದಕ್ಕೆ ಸ್ಪಷ್ಟನೆ ನೀಡಬೇಕೆಂದು ಸೂಲಿಬೆಲೆ ಅಭಿಮಾನಿಗಳು ಒತ್ತಾಯಿಸಿದ್ದಾರೆ.  

ಕನ್ನಡ ಫ್ಲ್ಯಾಶ್ ನ್ಯೂಸ್ ಕೂಡ ಈ ಬಗ್ಗೆ ಸ್ಪಷ್ಟನೆ ಕೇಳಲು ಸೂಲಿಬೆಲೆ ಅವರ ಆತ್ಮೀಯ ಬಳಗವನ್ನು ಸಂಪರ್ಕಿಸುವ ಪ್ರಯತ್ನ ಮಾಡಿತು.ಬಹುತೇಕ ಇದೆಲ್ಲಾ ಸುಳ್ಳು-ಊಹಾಪೋಹ, ಅವರಿಗೆ ಆಗದವರು ಇಂತದ್ದೊಂದು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ.ಅಂಥಾ ವಿಕೃತ ಮನಸ್ಥಿತಿಯವರ ಬಗ್ಗೆ ಏನೂ ಹೇಳಬಾರದು.ಅವರ ಆರೋಗ್ಯ ಚೆನ್ನಾಗಿದೆ.ದೇವರ ದಯೆಯಿಂದ ಅವರು ಆರೋಗ್ಯವಾಗಿದ್ದಾರೆ ಎನ್ನುವ ಉತ್ತರ ದೊರೆಯಿತು.ಕನ್ನಡ ಫ್ಲ್ಯಾಶ್ ನ್ಯೂಸ್ ಕೂಡ ಅವರ ಉತ್ತಮ ಆರೋಗ್ಯಕ್ಕಾಗಿ ಆಶಿಸುತ್ತದೆ.


Political News

“ಅಧಿಕಾರಿ”ಗಳು ಕೆಲಸ ಬಿಟ್ಟು ರಸ್ತೆಗಿಳಿದ್ರೆ ಮಾತ್ರ “ಇವ್ರು” ಬಸ್ ಓಡಿಸೊಲ್ಲವಂತೆ!

“ವರ್ಗಾವಣೆ” ಲೀಸ್ಟ್ ನಿಂದಲೇ ಹೆಸ್ರು ಡಿಲೀಟ್ ಮಾಡಿಸಿಕೊಂಡ್ ಬಿಟ್ರಾ ddpu ಮನೋಹರ್ ಕೊಳ್ಳಾ..?!

“ಬಿಕ್ಲ ಶಿವು” ಮರ್ಡರ್‌-MLA ಭೈರತಿ ಬಸವರಾಜ್‌ ರಾಜಕೀಯ ಭವಿಷ್ಯ ಅತಂತ್ರ.!?

ರಾಷ್ಟ್ರವಾದಿ ಚಿಂತಕ ಚಕ್ರವರ್ತಿ ಸೂಲಿಬೆಲೆಗೆ ಕ್ಯಾನ್ಸರ್..!?

ಎಲೆನ್ (allen) ಅಕ್ರಮದ ಸಕ್ರಮಕ್ಕೆ ಮುಂದಾಯ್ತಾ ಶಿಕ್ಷಣ ಇಲಾಖೆ..? ಕ್ರಮಕ್ಕೆ ಶಿಫಾರಸ್ಸು ಮಾಡಿದ್ದ  ಡಿಡಿಪಿಯು(ddpu) ಮನೋಹರ್  ಕೊಳ್ಳಾ “ಯೂ ಟರ್ನ್” ಹಿಂದಿದ್ಯಾ “ಮೆಗಾ ಪ್ಲ್ಯಾನ್”-“ಬಿಗ್ ಡೀಲ್”..!?

EXCLUSIVE….. ಯಾವ ಕ್ಷಣದಲ್ಲೂ ಎಲೆನ್‌ (ALLEN) ಟ್ಯೂಷನ್‌ ಸೆಂಟರ್ಸ್‌ ಗಳಿಗೆ ಬೀಗ..?!

BBMP ಯುಗಾಂತ್ಯ-ಗ್ರೇಟರ್ ಬೆಂಗಳೂರು ಯುಗಾರಂಭ..GBA ಗೆ ತುಷಾರ ಗಿರಿನಾಥ್ ಬಾಸ್…!

“ಯುದ್ಧಭೂಮಿ”ಯಲ್ಲಿ ಪ್ರಾಣದ ಹಂಗು ತೊರೆದ “ಮಾದ್ಯಮಯೋಧರು”

Scroll to Top