advertise here

Search

ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಥಾನಕ್ಕೆ ಕುತ್ತು..!


ರಾಜ್ಯಪಾಲರಿಗೆ ಸಾಕ್ಷ್ಯ ಸಮೇತ ದೂರು ನೀಡಿದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ

ಬೆಂಗಳೂರು/ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮ(malal mahadeshwara wildlife sanctury) ದ ಹೂಗ್ಯಂ ವನ್ಯಜೀವಿ ವಲಯದ ಮೀಣ್ಯಂ ಪ್ರದೇಶದಲ್ಲಿ ಸಂಭವಿಸಿದ್ದ ತಾಯಿ ಹುಲಿ ಮತ್ತು ಮರಿಗಳ ಅಸಹಜ ಸಾವಿನ ( mother tiger and its cubs un natural death)ಪ್ರಕರಣದ ಅದ್ಹೇಕೋ ಅರಣ್ಯ ಸಚಿವ ಈಶ್ವರ ಖಂಡ್ರೆ ( forest minister eshwar khandre)ಅವರ ಕೊರಳು ಸುತ್ತಿಕೊಳ್ಳುವ ಲಕ್ಷಣ ಗೋಚರಿಸುತ್ತಿದೆ. ದುರಂತಕ್ಕೆ ಅಧಿಕಾರಿಗಳೇ ಕಾರಣ ಎಂದು ಘೋಷಿಸಿ ಆ ಪೈಕಿ ಕೆಲವರಿಗೆ ಅಮಾನತು ಶಿಕ್ಷೆ ನೀಡಿ ಕೈ ತೊಳೆದುಕೊಂಡಿದ್ದ ಸಚಿವ ಈಶ್ವರ ಖಂಡ್ರೆ ಅವರಿಗೇ ಈಗ ಸಂ ಚಕಾರ ಬಂದೊದ ಗಿದಂತೆ ಕಾಣ್ತಿದೆ.ಅವರೇ ಎಲ್ಲಾ ದುರಂತಕ್ಕೆ ನೈತಿಕ ಹೊಣೆಗಾರರನ್ನಾಗಿ ಪರಿಗಣಿಸಿ ಅವರ ವಿರುದ್ದ ಕ್ರಮ ಕೈಗೊಳ್ಳಬೇ ಕೆಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ( social activist dinesh kallahallii) ಅವರು ರಾಜ್ಯಪಾಲ(governer thavar chand gehlot)ರಿಗೆ ದೂರು ಸಲ್ಲಿಸಿದ್ದಾರೆ.

26-06-2025 ರಂದು ತಾಯಿ ಹುಲಿ ಹಾಗೂ 4 ಹುಲಿ ಮರಿಗಳು ವಿಷಪೂರಿತ ಆಹಾರದ ಸೇವನೆಯಿಂದ ಸಾವನ್ನಪ್ಪಿದ್ವು. ಈ ದುರಂತ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂಬ ನಿರ್ದಾರಕ್ಕೆ ಬಂದ ಸಚಿವ ಈಶ್ವರ ಖಂಡ್ರೆ ತನಿಖೆ ನಡೆಸಿ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಂಡಿದ್ರು.ತಮ್ಮ ಕರ್ತವ್ಯ ಮುಗೀತು ಎಂದು ಸುಮ್ಮನಾದ್ರು. ಆದರೆ ವಿಷಯವ ನ್ನು ಗಂಭೀರವಾ್ಗಿ ಅವಲೋಕಿಸಿದ್ರೆ ಇದರ ನೈತಿಕ ಹೊಣೆಯನ್ನು ಅರಣ್ಯ ಸಚಿವರೇ ಹೊತ್ತುಕೊಳ್ಳಬೇಕು.ಅದನ್ನು ಬಿಟ್ಟು ಇಡೀ ದುರಂತದ ಹೊಣೆಯನ್ನು ಅಧಿಕಾರಿಗಳ ಬೆನ್ನಿಗೆ ತಗುಲಾಕಿ ಕೈತೊಳೆದುಕೊಂಡಿದ್ದಾರೆ ಎಂಬುದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರ ವಾದ ಹಾಗೂ ಆಪಾದನೆ.

ದುರಂತವನ್ನು ಅವಲೋಕಿಸಿದರೆ ಇದು Project Tiger ಹಾಗೂ NTCA ಮಾರ್ಗಸೂಚಿಗಳ ಉಲ್ಲಂಘನೆ, ಗಸ್ತು ಶಿಬಿರದ ನಿರ್ವಹಣೆ ಯಲ್ಲಿನ ವೈಫಲ್ಯ, ಸಿಬ್ಬಂದಿಗೆ ನಿರಂತರ ವೇತನ ಪಾವತಿಯಲ್ಲಿ ತೀವ್ರ ತೊಂದರೆ ಮತ್ತು ಮೇಲ್ವಿ ಚಾರಣಾ ದೌರ್ಬಲ್ಯಗಳಿಂದ ಉಂಟಾದ ಈ ಅನಾಹುತವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ನೇರ ಕಾರಣರಾದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ವಿರುದ್ಧ ಕಾನೂನಾತ್ಮಕ ಹಾಗೂ ಆಡಳಿತಾತ್ಮಕ ಹೊಣೆಗಾರಿಕೆ ನಿಗದಿಪಡಿಸ ಬೇಕಿತ್ತು.

ಜೊತೆಗೆ, ತಮ್ಮ ಸಂವಿಧಾನಾತ್ಮಕ ಮತ್ತು ನೈತಿಕ ಜವಾಬ್ದಾರಿಗಳನ್ನು ನಿರ್ಲಕ್ಷಿಸಿ, ಇಲಾಖೆಯೊಳಗಿನ ಸ್ವಜನಪಕ್ಷಪಾತ ಹಾಗೂ ಅಧಿಕಾರಶಾಹಿ ಆಶಿಸ್ತಿನ ಪ್ರವೃತ್ತಿಗಳಿಗೆ ಕಡಿವಾಣ ಹಾಕುವಲ್ಲಿ ಸಚಿವರೇ ವಿಫಲರಾಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.ಹಾಗಾಗಿ ಪ್ರಕರಣದಲ್ಲಿ ಅವರನ್ನೂ ತಪ್ಪಿತಸ್ಥರನ್ನಾಗಿ ಮಾಡದೆ ಹೋದರೆ ದುರಂತಕ್ಕೆ ನ್ಯಾಯ ಸಿಗುವುದಿಲ್ಲ.ಈ ಹಿನ್ನಲೆಯಲ್ಲಿ ಭಾರತೀಯ ಸಂವಿಧಾನದ ವಿಧಿ 164(1) ಅಡಿಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ವಿರುದ್ಧ ತಕ್ಷಣದ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿರುವ ದಿನೇಶ್, ರಾಜ್ಯಪಾಲರು ತಮ್ಮ ವೈಯಕ್ತಿಕ ವಿವೇಚನಾಧಿಕಾರವನ್ನು ಬಳಸಿಕೊಂಡು ಈಶ್ವರ ಖಂಡ್ರೆ ಅವರ ವಿರುದ್ಧ ತಕ್ಷಣದ ಸಂವಿಧಾನಬದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ALSO READ :  ಗುರುಪ್ರಸಾದ್ ಬಗ್ಗೆ ಜಗ್ಗೇಶ್ ಹಾಗೆ ಹೇಳಿದ್ದು ಸರಿನಾ..?!

ಮಲೆ ಮಹದೇಶ್ವರ ವನ್ಯಧಾಮದ ಹೂಗ್ಯಂ ವನ್ಯಜೀವಿ ವಲಯದ ಮೀಣ್ಯಂ ಪ್ರದೇಶದಲ್ಲಿ ತಾಯಿ ಹುಲಿ ಹಾಗೂ ನಾಲ್ಕು ಹುಲಿ ಮರಿಗಳು ಸಾವಿಗೀಡಾದ ಘಟನೆ ರಾಜ್ಯದ ವನ್ಯಜೀವಿ ಸಂರಕ್ಷಣಾ ಇತಿಹಾಸ ದಲ್ಲಿ ಅತ್ಯಂತ ಕಪ್ಪು ಅಧ್ಯಾಯ.. ಈ ಹುಲಿಗಳು ವಿಷಪ್ರಾಶನದಿಂದ ಮೃತ ಪಟ್ಟಿದ್ದು ಇದೊಂದು ಗಂಭೀರ ಅಪರಾಧವಾಗಿರುವುದಷ್ಟೇ ಅಲ್ಲ ಸರ್ಕಾರದ ನಿರ್ಲಕ್ಷ್ಯವನ್ನೂ ಪ್ರತಿಬಿಂಬಿಸುತ್ತಿದೆ. ಐದು ಹುಲಿಗಳ ಮೃತದೇಹಗಳು ಪತ್ತೆಯಾದ ಸ್ಥಳದಿಂದ ಕೇವಲ
870 ಮೀಟರ್ ದೂರದಲ್ಲೇ ಕಳ್ಳ ಬೇಟೆ ನಿಗ್ರಹ ಶಿಬಿರವಿದ್ದು ಅಲ್ಲಿ, ಗಸ್ತು ಸಿಬ್ಬಂದಿ ಇದ್ಸದರೂ ಅವರು ಸಮಯಕ್ಕೆ ಸರಿಯಾಗಿ ಹಾಜರಾಗದಿರುವುದರಿಂದಲೇ ದುರ್ಘಟನೆ ನಡೆದಿದೆ ಎಂದು ದಿನೇಶ್ ಕಲ್ಲಹಳ್ಳಿ ವಿವರಿಸಿದ್ದಾರೆ.

ದುರಂತಕ್ಕೆ ಮಲೈ ಮಹದೇಶ್ವರ ವನ್ಯಜೀವಿ ವಿಭಾಗದ DFO ಹಾಗು ಇತರ ಅಧಿಕಾರಿಗಳ ಕರ್ತವ್ಯ ಲೋಪಗಳು ಸ್ಪಷ್ಟವಾಗಿದ್ದರು ಸಹ, ಈವರೆಗೆ ಯಾವುದೇ ಅಧಿಕಾರಿಗಳನ್ನು ಅಮಾನತು ಮಾಡಿಲ್ಲಇದಕ್ಕೆ ಕಾರಣವೇನು ಎನ್ನುವುದನ್ನು ಖುದ್ದು ಅರಣ್ಯ ಸಚಿವರೇ ಹೇಳಬೇಕುಇದು ಅವರ ನಿರ್ಲಕ್ಷ್ಯವಷ್ಟೇ ಅಲ್ಲ ನೈತಿಕ, ಆಡಳಿತಾತ್ಮಕ ಮತ್ತು ಸಂವಿಧಾನಾತ್ಮಕ ಹೊಣೆಗಾರಿಕೆ ನಿರ್ಲಕ್ಷ್ಯ.ಇಲಾಖೆಯ ನಿರ್ಲಕ್ಷ್ಯದಿಂದಲೇ ಪ್ರತಿನಿತ್ಯ ಕರ್ನಾಟಕದ ಹಲವು ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳ ಅಕ್ರಮ ಬೇಟೆ, ಹತ್ಯೆ ಹಾಗೂ ಅವುಗಳ ಅಂಗಾಗಳ ಕಳ್ಳಸಾಗಣೆ ಪ್ರಕರಣಗಳು ಆತಂಕಕಾರಿಯಾಗಿ ಏರಿಕೆಯಾಗುತ್ತಿವೆ.

 ಇಲಾಖೆ ವ್ಯಾಪ್ತಿಯಲ್ಲಿ  ವಾಚರ್‌ಗಳು, ಗಾರ್ಡ್‌ಗಳು ಮತ್ತು ಇತರ ಮುಂಚೂಣಿ ಸಿಬ್ಬಂದಿ, ತಮ್ಮ ಜೀವದ ಹಂಗು ತೆಗೆದುಕೊಂಡು ಕಾಡು ಸಂರಕ್ಷಣೆಯಲ್ಲಿ ನಿರತರಾಗಿರುವಂತಹ ನೈಜ ರಕ್ಷಕರಾಗಿದ್ದಾರೆ. ಆಗಿದ್ದರೂ ಸಹ, ಅವರಿಗೆ ಅತ್ಯಂತ ಕಡಿಮೆ ವೇತನ, ನಿರ್ದಿಷ್ಟವಾಗಿ ಅನುಕೂಲವಿಲ್ಲದ ಕೆಲಸದ ಸಮಯ, ಹಾಗೂ ಮೂಲಭೂತ ಇನ್‌ಫ್ರಾಕ್ಟರ್ ಇಲ್ಲದ ಪರಿಸ್ಥಿತಿಯಲ್ಲಿ ಕೆಲಸ ಮಾಡಬೇಕಾದ ಸ್ಥಿತಿ ಎದುರಾಗುತ್ತಿದೆ. ಮೂರು ನಾಲ್ಕು ತಿಂಗಳ ಕಾಲ ಸಂಬಳವಿಲ್ಲದ ಸ್ಥಿತಿಯಲ್ಲಿ ಜೀವನ ನಿರ್ವಹಣೆಯ ಹೋರಾಟ ನಡೆಸುವ ಮುಂಚೂಣಿ ನೌಕರರ ಕುಟುಂಬಗಳ ಸ್ಥಿತಿಗತಿಯು ಮಾನವೀಯ ಹಕ್ಕುಗಳ ಉಲ್ಲಂಘನೆಯಷ್ಟೇ ಅಲ್ಲದೆ, ಶ್ರಮಜೀವಿಗಳ ದುರ್ಬಳಕೆಯಾದೆಯೂ ಹೌದು ಎಂದು ಇಲಾಖೆಯ ಧಾರುಣತೆಯನ್ನು ಬಿಚ್ಚಿಟ್ಟಿದ್ದಾರೆ.

ಅರಣ್ಯ ಸಚಿವರಾದವರು ತಮ್ಮ ಇಲಾಖೆಯ ಮೇಲ್ವಿಚಾರಣಾ ಕರ್ತವ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಬೇ ಕಿತ್ತು. ಆದರೆ ಈಶ್ವರ ಖಂಡ್ರೆ ತಮ್ಮ ತಪ್ಪನ್ನು ಮರೆ ಮಾಚಿ ಅದನ್ನು ತಮ್ಮ ಅದಿಕಾರಿಗಳ ತಲೆಗೆ ಕಟ್ಟಿ ಕೈ ತೊಳೆದು ಕೊಳ್ಳಲು ಯತ್ನಿಸಿದ್ದಾರೆ. ಭಾರತೀಯ ಸಂವಿಧಾನದ ವಿಧಿ 166(3) ಅಡಿಯಲ್ಲಿ ಪ್ರತಿ ಸಚಿವನು ತನ್ನ ಇಲಾಖೆಯ ಕಾರ್ಯಚಟುವಟಿಕೆಗಳಿಗೆ ಸಂಪೂರ್ಣ ಹೊಣೆಗಾರರಾಗಬೇಕೆನ್ನುತ್ತದೆ.ಇಂತಹ ವೈಫಲ್ಯವು ಕೇವಲ ಆಡಳಿತಾತ್ಮಕ ಲೋಪವಲ್ಲದೆ,   ಎಂಬ ಮೂಲ ತತ್ವದ ಉಲ್ಲಂಘನೆಯೂ ಹೌದು. ಈ ಎಲ್ಲಾ ಹಿನ್ನಲೆಯಲ್ಲಿ ಸಚಿವ ಖಂಡ್ರೆ ಅವರನ್ನ ಕೂಡ ದುರಂತಕ್ಕೆ ಹೊಣೆಗಾರರನ್ನಾಗಿ ಮಾಡಿ ಅವರ ವಿರುದ್ಧ ತಮ್ಮ ವಿವೇಚನೆಯುತ ಅಧಿಕಾರದ ವ್ಯಾಪ್ತಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ದಿನೇಶ್ ಕಲ್ಲಹಳ್ಳಿ ರಾಜ್ಯಪಾಲರನ್ನು ವಿನಂತಿಸಿದ್ದಾರೆ.

ದಿನೇಶ್ ಕಲ್ಲಹಳ್ಳಿ ಅವರ ಈ ಪತ್ರ ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸುವ ಸಾಧ್ಯತೆಗಳಿವೆ.ಎಲ್ಲಾ ಮುಗೀತು ಎಂದು ತಮ್ಮ ತಪ್ಪನ್ನು ಬೇರೆಯವರ ಮೇಲೆ ಹೊರಿಸಿ ನಿರುಮ್ಮಳರಾಗುವ ಸನ್ನಾಹದಲ್ಲಿದ್ದ ಸಚಿವ


Political News

“ಅಧಿಕಾರಿ”ಗಳು ಕೆಲಸ ಬಿಟ್ಟು ರಸ್ತೆಗಿಳಿದ್ರೆ ಮಾತ್ರ “ಇವ್ರು” ಬಸ್ ಓಡಿಸೊಲ್ಲವಂತೆ!

“ವರ್ಗಾವಣೆ” ಲೀಸ್ಟ್ ನಿಂದಲೇ ಹೆಸ್ರು ಡಿಲೀಟ್ ಮಾಡಿಸಿಕೊಂಡ್ ಬಿಟ್ರಾ ddpu ಮನೋಹರ್ ಕೊಳ್ಳಾ..?!

“ಬಿಕ್ಲ ಶಿವು” ಮರ್ಡರ್‌-MLA ಭೈರತಿ ಬಸವರಾಜ್‌ ರಾಜಕೀಯ ಭವಿಷ್ಯ ಅತಂತ್ರ.!?

ರಾಷ್ಟ್ರವಾದಿ ಚಿಂತಕ ಚಕ್ರವರ್ತಿ ಸೂಲಿಬೆಲೆಗೆ ಕ್ಯಾನ್ಸರ್..!?

ಎಲೆನ್ (allen) ಅಕ್ರಮದ ಸಕ್ರಮಕ್ಕೆ ಮುಂದಾಯ್ತಾ ಶಿಕ್ಷಣ ಇಲಾಖೆ..? ಕ್ರಮಕ್ಕೆ ಶಿಫಾರಸ್ಸು ಮಾಡಿದ್ದ  ಡಿಡಿಪಿಯು(ddpu) ಮನೋಹರ್  ಕೊಳ್ಳಾ “ಯೂ ಟರ್ನ್” ಹಿಂದಿದ್ಯಾ “ಮೆಗಾ ಪ್ಲ್ಯಾನ್”-“ಬಿಗ್ ಡೀಲ್”..!?

EXCLUSIVE….. ಯಾವ ಕ್ಷಣದಲ್ಲೂ ಎಲೆನ್‌ (ALLEN) ಟ್ಯೂಷನ್‌ ಸೆಂಟರ್ಸ್‌ ಗಳಿಗೆ ಬೀಗ..?!

BBMP ಯುಗಾಂತ್ಯ-ಗ್ರೇಟರ್ ಬೆಂಗಳೂರು ಯುಗಾರಂಭ..GBA ಗೆ ತುಷಾರ ಗಿರಿನಾಥ್ ಬಾಸ್…!

“ಯುದ್ಧಭೂಮಿ”ಯಲ್ಲಿ ಪ್ರಾಣದ ಹಂಗು ತೊರೆದ “ಮಾದ್ಯಮಯೋಧರು”

Scroll to Top