ಬೆಂಗಳೂರು:ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ವಲ್ಪ ಎಚ್ಚರತಪ್ಪಿದ್ರೂ ಬಹುಷಃ ಅವರನ್ನೇ ಯಾಮಾರಿಸಬಹುದು ಎನ್ನಿಸುತ್ತೆ ಅವರು ಪ್ರತಿನಿಧಿಸುವ ಸಾರಿಗೆ ಇಲಾಖೆಯ ಕೆಲ ಖದೀಮ-ಕಳ್ಳರು.ಈ ಮಾತನ್ನು ಹೇಳೊಕ್ಕೆ ಕಾರಣವೂ ಇದೆ.. ಬಿಎಂಟಿಸಿ ಎಂಡಿ ಆಗಿದ್ದ ಸತ್ಯವತಿ ಅವರ ವಿಷಯದಲ್ಲಿ ಯಾವ ಯಡವಟ್ಟು ನಡೆದಿತ್ತೋ ಅದೇ ಯಟವಟ್ಟು ಮೊನ್ನೆ ಮೊನ್ನೆಯವರೆಗೂ ಕೆಎಸ್ ಆರ್ ಟಿಸಿಯಲ್ಲಿ ಎಂಡಿ ಆಗಿ ಹಾಲಿ ಚುನಾವಣಾ ಆಯೋಗದಲ್ಲಿ ಆಯುಕ್ತರಾಗಿರುವ ಅನ್ಬುಕುಮಾರ್ ಅವರ ವಿಚಾರದಲ್ಲಿಯು ನಡೆದೋಗಿದೆ ಎನ್ನುವ ಮಾತುಗಳು ಕೇಳಿಬರಲಾರಂಭಿಸಿವೆ.ಇದರ ಇನ್ ಡೀಟೈಲ್ ಸ್ಟೊರಿಯನ್ನು ದಾಖಲೆ ಸಮೇತ ಹೊತ್ತು ತಂದಿದೆ ಕನ್ನಡ ಫ್ಲ್ಯಾಶ್ ನ್ಯೂಸ್.


ಯೆಸ್..ಇದು ವಿಚಿತ್ರ..ಆಶ್ಚರ್ಯ..ಅಘಾತಕಾರಿ ಎನ್ನಿಸಿದ್ರೂ ಸತ್ಯ…ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿಕಟಪೂರ್ವ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅವರ ಸಹಿಯನ್ನೇ ನಕಲು ಮಾಡಿರುವ ಬಗ್ಗೆ ದೂರು ಕೇಳಿಬಂದಿದೆ.ಹಿಂದೆ ಅವರು ಎಂಡಿ ಆಗಿ ಕೆಲಸ ಮಾಡುವಾಗ ಅವರ ಆಪ್ತ ಸಹಾಯಕನಾಗಿದ್ದ ರಿಚರ್ಡ್ ಎಂಬಾತನೇ ಅನ್ಬುಕುಮಾರ್ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ನಿಗಮದ ಸಿಬ್ಬಂದಿಯಿಂದ ಲಕ್ಷಾಂತರ ರೂ ವಸೂಲಿ ಮಾಡಿದ್ದಾನೆಂದು ಹೇಳಲಾಗಿದೆ.ತಮಗೆ ಅನ್ಯಾಯವಾಗಿದೆ ಎಂದು ಸಂತ್ರಸ್ಥ ಸಿಬ್ಬಂದಿ ಬೊಬ್ಬೆ ಹೊಡೆದುಕೊಳ್ಳುವುದನ್ನು ಗಮನಿಸಿ ತಲೆ ಮರೆಸಿಕೊಂಡಿದ್ದಾನೆ ಎನ್ನಲಾಗುತ್ತಿದೆ.
ಆಗಿದ್ದೇನು..?! ಶಿವಮೊಗ್ಗ ವಿಭಾಗದ ಸಾಗರ ಡಿಪೋದಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್ ಕುಗ್ವೆ ಕೆಲ ಕಾರಣಗಳಿಂದ ಕೆಲಸ ಕಳೆದುಕೊಂಡಿದ್ದ. 7 ವರ್ಷಗಳಿಂದ ಮರುನೇಮಕಾತಿಗೆ ಯತ್ನಿಸಿದ್ರೂ ಸಾಧ್ಯವಾ್ಗಿರಲಿಲ್ಲ.ಹಾಗಂತ ಪ್ರಯತ್ನವನ್ನು ಬಿಟ್ಟಿರಲಿಲ್ಲ.ಬೆಂಗಳೂರಿನ ಕೇಂದ್ರ ಕಚೇರಿಗೆ ಚಪ್ಪಲಿ ಸವೆಸುತ್ತಲೇ ಇತ್ತ. ಶಿವಮೊಗ್ಗದ ಹಳೇ ಪರಿಚಯದವನಾಗಿದ್ದ ಜೂನಿಯರ್ ಅಸಿಸ್ಟೆಂಟ್ ರಿಚರ್ಡ್ ಆ ವೇಳೆ ಸಿಕ್ಕಿದ್ದಾನೆ. ವಿಷಯ ತಿಳಿದುಕೊಂಡವನೇ ನಾಗರಾಜ್ ನನ್ನು ಖೆಡ್ಡಾಕ್ಕೆ ಬೀಳಿಸೊಕ್ಕೆ ಮುಂದಾಗಿದ್ದಾನೆ..ಆಗ ಶುರುವಾಗಿದ್ದೇ ಅಂಥೆ ಈ ನಕಲಿ ಸಹಿಯ ಐಡ್ಯಾ. ಸಿಎಓ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೂ ಎಂಡಿ ಅನ್ಬುಕುಮಾರ್ ನನಗೆ ಸಿಕ್ಕಾಪಟ್ಟೆ ಕ್ಲೋಸ್. ಅವರಿಂದ ಕೆಲಸ ಮಾಡಿಸಿಕೊಡುವುದಾಗಿ ಹೇಳಿ ಆತನಿಂದ ಹಂತ ಹಂತವಾಗಿ ದುಡ್ಡನ್ನು ಡಿಜಿಟಲ್ ಮನಿ ಟ್ರಾನ್ಸ್ ಫರ್ ಮೂಲಕ ತನಗೆ ವರ್ಗಾಯಿಸಿಕೊಂಡಿದ್ದಾನೆ( ಟ್ರೂ ಕಾಲರ್ ನಲ್ಲಿ 98865-06637 ನಂಬರ್ ನಲ್ಲಿ ಕೆಎಸ್ ಆರ್ ಟಿಸಿ ಡಿಜಿಜನಲ್ ಆಫೀಸ್ ಎಂದು ಡಿಸ್ ಪ್ಲೇ ಆಗ್ತಿದೆ.) .ಜತೆಗೆ ಟೇಬಲ್ ಟು ಟೇಬಲ್ ಎಲ್ಲರಿಗು ಹಣ ಕೊಡಬೇಕೆಂದೂ ಕಥೆ ಕಟ್ಟಿದ್ದಾನೆ( ಹಾಗೆಂದು ಈ ರಿಚರ್ಡ್ ಹೇಳಿರುವುದು ಸುಳ್ಳೆಂದು ಹೇಳಲಿಕ್ಕು ಬರೊಲ್ಲ..ಅದರಲ್ಲಿ ಸತ್ಯವೂ ಇರಬಹುದು..ಎಲ್ಲಾ ಇಲಾಖೆಗಳಲ್ಲು ಮಾಮೂಲಾಗಿರುವಂತೆ ಇಲ್ಲಿಯೂ ಆ ವ್ಯವಸ್ಥೆ ಇದ್ದಿರಲು ಸಾಧ್ಯವಿದೆ.ರಿಚರ್ಡ್ ಜತೆಗೆ ಇಲಾಖೆಯಲ್ಲಿರುವ ಇನ್ನ್ಯಾರಾದ್ರೂ ಇದ್ದಾರಾ ಎನ್ನುವುದಕ್ಕೆ ತನಿಖೆ ನಡೆಯಬೇಕು ಅಷ್ಟೆ..!?)

ಅಂದ್ಹಾಗೆ ನಾಗರಾಜ್ ಕುಗ್ವೆ ಅವರಿಂದ ರಿಚರ್ಡ್ ಪೀಕಿದ ಹಣ 1 ಲಕ್ಷದ 35 ಸಾವಿರ ಎನ್ನಲಾಗಿದೆ.ಅಂದ್ಹಾಗೆ ಈ ಮೊದಲು ಶಿವಮೊಗ್ಗ ಡಿಪೋದಲ್ಲಿ ಕೆಲಸ ಮಾಡುತ್ತಿದ್ದ ರಿಚರ್ಡ್ ಬೆಂಗಳೂರಿನ ಕೇಂದ್ರ ಕಚೇರಿಗೆ ಬಂದ ಮೇಲೆ ಶುರುವಿಟ್ಟುಕೊಂಡ ಈ ಅಡ್ಡಕಸುಬಿತನದ ಪರಿಣಾಮವಾಗಿ ಈ ರೀತಿ ಎಷ್ಟು ಸಿಬ್ಬಂದಿಯಿಂದ ಎಷ್ಟು ಪ್ರಮಾಣದ ಹಣವನ್ನು ಪಡೆದು ವಂಚಿಸಲಾಗಿದೆ ಎನ್ನುವುದು ನಿಖರವಾಗಿ ತಿಳಿದುಬಂದಿಲ್ಲ.ಆಪಾದನೆ ಹಿನ್ನಲೆಯಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿರುವ ರಿಚರ್ಡ್ ಸಿಕ್ಕರೆ ಎಷ್ಟು ಸಿಬ್ಬಂದಿಗೆ ಎಷ್ಟು ಪ್ರಮಾಣದ ಹಣ ವಂಚಿಸಲಾಗಿದೆ ಎನ್ನುವುದು ಗೊತ್ತಾಗಬಹುದೇನೊ..?

ಹೀಗೆ ಒಂದಷ್ಟು ದಿನ ಕಳೆದ ಮೇಲೆ ರಿಚರ್ಡ್ ನಿನ್ನ ಕೆಲಸ ಆಗಿದೆ. ಎಂಡಿ ಸಾಹೇಬ್ರು ಸಹಿ ಮಾಡಿದ್ದಾರೆ ಎಂದ್ಹೇಳಿ ಒಂದು ಪತ್ರವನ್ನು ವಾಟ್ಸಪ್ ನಲ್ಲಿ ಕಳುಹಿಸಿದ್ದಾನಂತೆ.7 ವರ್ಷಗಳ ಶ್ರಮ ಕೊನೆಗೂ ಫಲ ಕೊಟ್ಟಿತೆನ್ನುವ ಖುಷಿಯಲ್ಲಿ ಆತ ಮಗುವಿನಂತೆ ಕುಪ್ಪಳಿಸಿದ್ದಾನೆ.ಆದ್ರೆ ಆ ಖುಷಿ ತುಂಬಾ ದಿನ ಇರಲಿ್ಲ್ಲ.ತನ್ನ ಆತ್ಮೀಯರು ಹಾಗು ಹಳೆಯ ಸಹದ್ಯೋಗಿಗಳಿಗೆ ಈ ಪತ್ರ ತೋರಿಸಿದಾಗ ಇಲಾಖೆಯ ಯಾವುದೇ ಆದೇಶ ಪತ್ರ ವಾಟ್ಸಪ್ ನಲ್ಲಿ ಬರೊಕ್ಕೆ ಸಾಧ್ಯವೇ ಇಲ್ಲ..ಅದೇನಿದ್ದರೂ ಪೋಸ್ಟ್ ನಲ್ಲೇ ಬರೋದು ಎಂದ್ಹೇಳಿ ಕ್ರಾಸ್ ಚೆಕ್ ಮಾಡಿದಾಗ ಅದು ಅಸಲಿಯಲ್ಲ, ನಕಲಿ ಸಹಿ ಎನ್ನುವುದು ಗೊತ್ತಾಗಿದೆ.ಈ ಮಾತನ್ನು ಕೇಳಿ ನಾಗರಾಜ್ ಕುಸಿದುಬಿದ್ದಿದ್ದಾರೆ. ಕೇಂದ್ರ ಕಚೇರಿಗೆ ಬಂದು ಪರಿಶೀಲಿಸಿದಾಗಲೂ ಅದು ನಕಲಿ ಎನ್ನುವುದು ಗೊತ್ತಾಗಿದೆ. ಸ್ಪಷ್ಟನೆ ಕೇಳಲು ರಿಚರ್ಡ್ ಗೆ ಕರೆ ಮಾಡಿದ್ರೆ ನಾಟ್ ರೀಚಬಲ್. ಕೆಲಸ ಸಿಗೋದು ಬೇಡ..ಅಟ್ಲೀಸ್ಟ್ ನನ್ನ ಹಣವನ್ನಾದ್ರೂ ವಾಪಸ್ ಕೊಡಿಸಿ ಎಂದು ಸೆಕ್ಯೂರಿಟಿ ವಿಭಾಗಕ್ಕೆ ಅಲೆಯಲಾರಂಭಿಸಿದ್ದಾರಂತೆ.

ತನಿಖೆ ಮಾಡುವ ಬದಲು,ಅಸಡ್ಡೆ ಪ್ರದರ್ಶಿಸುತ್ತಿರುವ ಸೆಕ್ಯೂರಿಟಿ ಆಫೀಸರ್ ಲಿಂಗರಾಜ್: ಆದರೆ ದುರಂತ ಏನ್ ಗೊತ್ತಾ, ಸೆಕ್ಯೂರಿಟಿ ವಿಭಾಗದ ಮುಖ್ಯಸ್ಥ ಎನಿಸಿಕೊಳ್ಳುವ ಲಿಂಗರಾಜ್ ಎನ್ನುವ ಅಧಿಕಾರಿ ಅಸಡ್ಡೆ-ನಿರ್ಲಕ್ಷ್ಯ ಪ್ರದರ್ಶಿಸಿದ್ದಾರಂತೆ. ಸರ್ ಎಂಡಿ ಸಿಗ್ನೇಚರ್ ಫೋರ್ಜರಿ ಆಗಿದೆ..ನನಗೆ ಅನ್ಯಾಯವಾಗಿದೆ ಸರಿಪಡಿಸಿಕೊಡಿ ಎಂದು ಕೇಳಿದ್ರೆ ಈ ಅಧಿಕಾರಿ ಏನೂ ನಡೆದೇ ಇಲ್ಲ ಎನ್ನುವಂತೆ ರಿಯಾಕ್ಟ್ ಮಾಡಿದ್ದಾರಂತೆ.ಎಫ್ ಐ ಆರ್ ಮಾಡಿ ಆತನ ವಿರುದ್ದ ಕ್ರಮ ಕೈಗೊಳ್ಳಿ ಎಂದ್ರೆ ಆ ಕೆಲಸ ನನ್ನದಲ್ಲ ಎಂದು ಅಬ್ಬರಿಸಿದ್ದಾರೆ.

ನೀನೇ ಕಂಪ್ಲೆಂಟ್ ಕೊಟ್ಟು ಎಫ್ ಐ ಆರ್ ಮಾಡಿಸು ಎಂದ್ಹೇಳಿದ್ದಾರಂತೆ. ಮಾದ್ಯಮಗಳು ಕೆಎಸ್ ಆರ್ ಟಿಸಿ ಎಂಡಿ ಅಕ್ರಂ ಪಾಷಾ ಅವರ ಬಳಿ ನಾಗರಾಜ್ ಪ್ರಕರಣ ಕೊಂಡೊಯ್ದ ಮೇಲೆ ಲಿಂಗರಾಜ್ ತನ್ನ ವರಸೆಯನ್ನೇ ಬದಲಿಸಿದ್ದಾರೆ. ಯಾವ್ ನಾಹರಾಜ್ ನನ್ನು ಕಂಡರೆ ಸಿಡಿಮಿಡಿಗೊಳ್ಳುತ್ತಿದ್ದರೋ ಅದೇ ನಾಗರಾಜ್ ನನ್ನು ಭಕ್ತಿಪೂರ್ವಕವಾಗಿ,ವಿನಯಪೂರ್ವಕವಾಗಿ ಕೊಂಡೊಯ್ದು ಹೇಳಿಕೆ ಪಡೆದುಕೊಂಡಿದ್ದಾರೆ. ಇಂಥ ಅಧಿಕಾರಿಯಿಂದ ಅದೆಂಥಾ ನ್ಯಾಯ ನಿರೀಕ್ಷಿಸಬಹುದೋ ಗೊತ್ತಾಗ್ತಿಲ್ಲ.ಅಂದ್ಹಾಗೆ ಇನ್ನೊಂದು ಅಘಾತಕಾರಿ ಸುದ್ದಿ ಎಂದರೆ ಈ ರಿಚರ್ಡ್ ಮಾಡಿರುವ ಅಕ್ರಮದ ಮಾಹಿತಿ ಲಿಂಗರಾಜ್ ಗೆ ಗೊತ್ತಿರಲಿಲ್ಲ ಎಂದೇನಿಲ್ಲ.ಮೊದಲೇ ನಾಗರಾಜ್ , ಅವರ ಗಮನಕ್ಕೆ ವಿಷಯ ತಂದಿದ್ದಾರೆ.ಆದರೆ ಉಡಾಫೆತನದಿಂದ ವರ್ತಿಸಿದ್ದಾರೆ.ಬಹುಷಃ ಇದನ್ನು ಗಮನಿಸಿದ್ರೆ ರಿಚರ್ಡ್ ಎನ್ನುವ ವಂಚಕನನ್ನು ರಕ್ಷಿಸುವ ಕೆಲಸ ಈ ಲಿಂಗರಾಜ್ ಎನ್ನುವ ಅಧಿಕಾರಿಯಿಂದಲೇನಾದ್ರೂ ನಡೆಯುತ್ತಿದೆಯ..? ಗೊತ್ತಿಲ್ಲ..ಈ ಬಗ್ಗೆಯೂ ತನಿಖೆ ನಡೆಯಬೇಕಿದೆ.


ಸಹಿ ನಕಲಿಯಾಗಿದೆಯಲ್ಲಾ ಸರ್ ಎಂದ್ರೆ ಅನ್ಬುಕುಮಾರ್ ಮಾತ್ರ ಕೂಲ್ ,,ಕೂಲ್..? ತಮ್ಮ ಸಹಿಯನ್ನು ಅವರದೇ ಸಿಬ್ಬಂದಿಯೋರ್ವ ನಕಲು ಮಾಡಿ ಹಲವರಿಗೆ ವಂಚಿಸಿರುವ ಬಗ್ಗೆ ಸ್ಪಷ್ಟನೆ ಕೇಳೊಕ್ಕೆ ಖುದ್ದು ಅನ್ಬುಕುಮಾರ್ ಅವರನ್ನು ಸಂಪರ್ಕಿಸಿದ್ರೆ ಸಾಹೇಬ್ರು ನಾನು ಇದರ ಬಗ್ಗೆ ರಿಯಾಕ್ಟ್ ಮಾಡೊಲ್ಲ..ನಾನೀಗ ಅಲ್ಲಿಲ್ಲ ಎಂದ್ರು.ದಾಖಲೆ ಕಳುಹಿಸಿಕೊಟ್ಟರೂ ಪ್ರತಿಕ್ರಿಯಿಸಲು ನಿರಾಕರಿಸಿದ್ದನ್ನು ಗಮನಿಸಿದ್ರೆ ಏನೋ ಎಲ್ಲೋ ಯಡವಟ್ಟಾಗಿದೆ ಎನ್ನುವ ಶಂಕೆ ಮೂಡುತ್ತದೆ. ತನ್ನ ಸಹಿಯನ್ನು ನಕಲು ಮಾಡಲಾಗಿದೆ ಎನ್ನುವ ಸಂಗತಿಗೆ ತುಂಬಾ ಗಂಭೀರವಾಗಿ ಪ್ರತಿಕ್ರಿಯಿಸಬೇಕಿದ್ದ ಅನ್ಬುಕುಮಾರ್ ಅಷ್ಟೊಂದು ಕೂಲ್ ಆಗಿ ಇದ್ದುದ್ದೇ ಆಶ್ಚರ್ಯ ಹಾಗೂ ಅನುಮಾನ ಮೂಡಿಸುವಂತಿತ್ತು.
ಅಕ್ರಮದ ತನಿಖೆಗೆ ಆದೇಶ:ಆದರೆ ಈ ಪ್ರಕರಣದ ಬಗ್ಗೆ ಹೊಸದಾಗಿ ಎಂಡಿ ಆಗಿ ಅಧಿಕಾರ ಸ್ವೀಕರಿಸಿರುವ ಅಕ್ರಂ ಪಾಷಾ ಮಾತ್ರ ಗಂಭೀರವಾಗಿ ಪ್ರತಿಕ್ರಿಯಿಸಿದ್ದಾರೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಭದ್ರತಾಧಿಕಾರಿ ಲಿಂಗರಾಜ್ ಅವರಿಗೆ ಆದೇಶಿಸಿದ್ದಾರೆ.ಇನ್ಮುಂದೆ ಇಂಥಾ ಅಕ್ರಮಗಳು ನಡೆಯಬಾರದೆನ್ನುವ ಹಿನ್ನಲೆಯಲ್ಲಿ ಡಿಜಿಟಲ್ ಸಿಗ್ನೇಚರ್ ಕಾನ್ಸೆಪ್ಟ್ ಜಾರಿ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ಅಕ್ರಮದಲ್ಲಿ ರಿಚರ್ಡ್ ಜತೆ ಕೇಂದ್ರ ಕಚೇರಿಯ ಸಿಬ್ಬಂದಿನೂ ಭಾಗಿಯಾಗಿದ್ದಾರಾ,,? ಕೆಎಸ್ ಆರ್ ಟಿಸಿ ಮುಖ್ಯಸ್ಥರ ಸಹಿಯನ್ನೆ ರಿಚರ್ಡ್ ಎನ್ನುವಂಥ ಸಿಬ್ಬಂದಿ ನಕಲು ಮಾಡಿ ಸಿಬ್ಬಂದಿಯಿಂದ ಹಣ ವಸೂಲಿ ಮಾಡ್ತಾನೆಂದ್ರೆ ಇದು ಸಾಮಾನ್ಯವಾದ ಸಂಗತಿಯಲ್ಲ.ಆದರೆ ಲಿಂಗರಾಜ್ ಅವರ ಧೋರಣೆ ಗಮನಿಸಿದಾಗ ಎಂಡಿ ಅಕ್ರಂ ಪಾಷಾ ಅವರ ಆದೇಶದ ಹೊರತಾಗ್ಯೂ ರಿಚರ್ಡ್ ನ್ನು ರಕ್ಷಿಸುವ ಕೆಲಸ ಮಾಡಿಬಿಡ್ತಾರಾ ಎನ್ನುವ ಶಂಕೆ ಕಾಡ್ತದೆ.ದೂರು ಕೊಟ್ಟ ಸಂತ್ರಸ್ಥನಿಗೆ ನ್ಯಾಯ ದೊರಕಿಸಿಕೊಡಬೇಕಾದುದ್ದನ್ನು ಬಿಟ್ಟು ನೀನೇ ದೂರು ಕೊಟ್ಟು ಎಫ್ ಐಆರ್ ಮಾಡಿಸಿ ತೆಗೆದುಕೊಂಡು ಬಾ..ತನಿಖೆ ಮಾಡೋಣ ಎಂಬ ಧಾಟಿಯಲ್ಲಿ ಮಾತನಾಡ್ತಾರೆ ಎಂದ್ರೆ ಇದರ ಹಿಂದೆ ಬೇರೆ ಉದ್ದೇಶ ಇದೆ ಎನ್ನುವ ಅನುಮಾನ ಕಾಡದೆ ಇರೊಲ್ಲ.ಅದೆಲ್ಲಕ್ಕಿಂತ ಹೆಚ್ಚಾಗಿ ಸಿಬ್ಬಂದಿಯಿಂದ ಹಣ ಪಡೆಯುವ ವೇಳೆಯಲ್ಲಿ ಮೇಲಿನವರಿಂದ ಹಿಡಿದು ಕೆಳಗಿನವರನ್ನೆಲ್ಲಾ ನೋಡಿಕೊಳ್ಳಬೇಕು.ಅವರ ಕೈ ಬೆಚ್ಚಗೆ ಮಾಡಿದರೇನೇ ಕೆಲಸ ಆಗೋದು ಎಂದು ಹೇಳಿರುವುದನ್ನು ಹಗರುವಾಗಿ ಪರಿಗಣಿಸೊಕ್ಕೆ ಸಾಧ್ಯವೇ ಇಲ್ಲ. ರಿಚರ್ಡ್ ನ್ನು ವಿಚಾರಣೆಗೊಳಪಡಿಸಿದ್ರೆ ಆ ಸತ್ಯವೂ ಹೊರಬರುವ ಸಾಧ್ಯತೆಗಳಿವೆ.ಆದರೆ ಸರ್, ನಿಮ್ಮ ಸಹಿ ನಕಲಾಗಿದೆಯಲ್ಲಾ ಎಂದು ಕೇಳಿದ್ರೆ ಎಫ್ ಐ ಆರ್ ಮಾಡಿಸೋದನ್ನು ಬಿಟ್ಟು, ಐಎಎಸ್ ಅನ್ಬುಕುಮಾರ್ ಸಾಹೇಬ್ರು, ಏನೂ ನಡೆದೇ ಇಲ್ಲ ಎನ್ನುವಂತೆ ಕೂಲ್ ಕೂಲ್ ಆಗಿ ರಿಯಾಕ್ಟ್ ಮಾಡ್ತಿರೋದು ಮಾತ್ರ ದುರಂತ ಹಾಗೂ ದುರಾದೃಷ್ಟಕರ..ಅಲ್ವಾ..?!