advertise here

Search

“ನ್ಯೂಸ್ ಫಸ್ಟ್” ಚಾನೆಲ್ ಗೆ ನಿಜಕ್ಕೂ “ಆರ್ಥಿಕ ಸಂಕಷ್ಟ”ನಾ..? ಬಹುತೇಕ ಸಿಬ್ಬಂದಿಗೆ ತಿಂಗಳುಗಳಿಂದಲೂ “ಸಂಬಳವೇ” ಕೊಟ್ಟಿಲ್ವಂತೆ ಸತ್ಯನಾ..?!


ಬೆಂಗಳೂರು: ಕನ್ನಡದ ಪ್ರಮುಖ ಹಾಗೂ ಪ್ರತಿಷ್ಟಿತ ಸುದ್ದಿವಾಹಿನಿಯೊಂದರ ಬಗ್ಗೆ  ಬರೆಯಲೇಬೇಕಿದೆ ನೋಡಿ… ಬರೆಯಬೇಕೆನ್ನುವ ಯಾವುದೇ ಇರಾದೆ ಇಲ್ಲದಿದ್ದರೂ,  ಅಲ್ಲಿನ ಬಹುಸಂಖ್ಯಾತ ಮಾದ್ಯಮಮಿತ್ರರಿಗೆ ಆಗುತ್ತಿದೆ ಎನ್ನಲಾಗಿರುವ ನೋವು-ಅನ್ಯಾಯದ ಕಾರಣಕ್ಕೆ ಬರೆಯಲೇಬೇಕಿದೆ. ಏಕೆಂದರೆ ಕನ್ನಡ ಫ್ಲ್ಯಾಶ್ ನ್ಯೂಸ್  ಸದಾ  ನೋವುಂಡ-ಅನ್ಯಾಯಕ್ಕೊಳಗಾದ ಮಾದ್ಯಮಿತ್ರರ ಬೆನ್ನಿಗೆ ಇದ್ದೇ ಕೆಲಸ ಮಾಡುತ್ತಿದೆ..ಆ ವಿಷಯದಲ್ಲಿ ನೋ ಮುಲಾಜು..ನೋ ರಾಜಿ…ಇದರಿಂದ ಒಂದಷ್ಟು ಜನರಿಗೆ ಬೇಜಾರಾಗಬಹುದು..ಆದರೆ ಅನ್ಯಾಯವಾದೆಡೆ ಕನ್ನಡ ಫ್ಲ್ಯಾಶ್ ನ್ಯೂಸ್ ಪ್ರತಿಭಟನೆಯ ದ್ವನಿಯಾಗಿ ಇರುತ್ತದೆ..(DISCIMILAR:ಈ ಸುದ್ದಿಯ ಉದ್ದೇಶ ಚಾನೆಲ್ ಮತ್ತು ಅದರ ಮ್ಯಾನೇಜ್ಮೆಂಟ್ ನ  ತೇಜೋವಧೆ ಖಂಡಿತಾ ಅಲ್ಲವೇ ಅಲ್ಲ.ಇದು ಕೇವಲ ಅಲ್ಲಿನ ಮಾದ್ಯಮಸ್ನೇಹಿತರ ವೃತ್ತಿ ಹಾಗೂ ಬದುಕಿನ ನಿರ್ವಹಣೆಯ ಕಾಳಜಿ-ಕಳಕಳಿಯ ಉದ್ದೇಶ ಹೊಂದಿದೆ ಅಷ್ಟೆ.)

ಆರಂಭದಲ್ಲೇ ಹೇಳಿದಂತೆ,ಈ ಸುದ್ದಿ ವಾಹಿನಿ ಬಗ್ಗೆ ಬರೆಯಬೇಕೆನ್ನುವ ಉದ್ದೇಶವೇ ನಮಗೆ ಖಂಡಿತಾ ಇರಲಿಲ್ಲ.. (Disclaimer: ಖುದ್ದು ಮಾದ್ಯಮದಲ್ಲಿ ಕೆಲಸ ಮಾಡುವವರಾಗಿ ಮತ್ತೊಂದು ಮಾದ್ಯಮದ ಬಗ್ಗೆ ಬರೆಯುವಾಗ ಆಗುವ ಜಿಗುಪ್ಸೆ-ಯಾತನೆ ಎಂತದ್ದೆನ್ನುವುದು ನಮಗೆ ಮಾತ್ರ ಗೊತ್ತು..ಆದರೆ ನೈತಿಕ ಪ್ರಜ್ನೆ ಎನ್ನೋದೊಂದು ಇರುತ್ತಲ್ವಾ..ಅದು ಅನ್ಯಾಯವೆನಿಸುವ ಕೆಲವೊಂದು  ಸಂಗತಿಗಳ ಮೇಲೆ ಬೆಳಕು ಚೆಲ್ಲುವಂತೆ ಮಾಡುತ್ತದೆ.ಈ ವರದಿ ಕೂಡ ಅದರ ಭಾಗ ಅಷ್ಟೇ..?.) ಆದರೆ ಅಲ್ಲಿನ ಸಾಕಷ್ಟು ಮಾದ್ಯಮಮಿತ್ರರು ತೋಡಿಕೊಂಡ ಅಳಲು, ಮಾಡಿದ ಆರೋಪ ಸುಮ್ಮನಿರಿಸಲಿಲ್ಲ.

ಸರ್..!  ನಮಗೆ ಅನ್ಯಾಯವಾಗ್ತಿದೆ..ನಮಗೆ ತಿಂಗಳುಗಳಿಂದಲೂ ಸಂಬಳವನ್ನೇ ಸಂಬಳವನ್ನೇ ಕೊಟ್ಟಿಲ್ಲ..ಅವರು ಏನೇ ಮಾಡಿಕೊಳ್ಳಲಿ,ನಮಗೆ ಅದು ಅನಾವಶ್ಯಕ, ಆದರೆ ಇವರಿಂದಾಗಿ ನಮ್ಮ ಬದುಕುಗಳು ಬೀದಿಗೆ ಬೀಳುವ ಸನ್ನಿವೇಶ ಸೃಷ್ಟಿ ಯಾಗಿದೆ ಎಂದು ಅಳಲು ತೋಡಿಕೊಂಡಾಗ ಅದನ್ನು ಪ್ರತಿನಿಧಿಸುವ ನೈತಿಕ ಹಾಗೂ ಜವಾಬ್ದಾರಿಯುತ ಮಾದ್ಯಮದ ಹೊಣೆ ನಮ್ಮದೆನಿಸಿತು.ಅದಕ್ಕಾಗಿ ಈ ಸುದ್ದಿಯ ಮೇಲೆ ಬೆಳಕು ಚೆಲ್ಲಲು ಮುಂದಾಯ್ತು ಕನ್ನಡ ಫ್ಲ್ಯಾಶ್ ನ್ಯೂಸ್. (Disclaimer: ನಿಮಗೆ ಗೊತ್ತಿರಲಿ, ಎಷ್ಟೋ ಮಾದ್ಯಮಗಳಲ್ಲಿ ನಡೆಯುತ್ತಿರುವ ಕ್ರೌರ್ಯ-ಅನ್ಯಾಯ-ದೌರ್ಜನ್ಯದ ವಿರುದ್ಧ ದ್ವನಿ ಹೊತ್ತಿ ನ್ಯಾಯ ದೊರಕಿಸಿಕೊಡುವ ಕೆಲಸವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ದಂಥ ಮಾದ್ಯಮದ ಪ್ರಾತಿನಿಧಿಕ ಸಂಸ್ಥೆ ಹಾಗು ಇತರೆ ಒಕ್ಕೂಟ-ಸಂಘಟನೆಗಳು ಮಾಡಿದಿದ್ದರೆ ಇವತ್ತು ಕೆಲವು ಮಾದ್ಯಮಗಳಲ್ಲಿ ಅನ್ಯಾಯ-ದೌರ್ಜನ್ಯ ನಿರಂತರ ನಡೆಯುತ್ತಿರಲಿಲ್ಲವೇನೋ..?ಕನ್ನಡ ಫ್ಲ್ಯಾಶ್ ನ್ಯೂಸ್ ಗೂ ಇಂಥಾ ಸುದ್ದಿಗಳನ್ನು ಬರೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿರ ಲಿಲ್ಲವೇನೋ. .ಅಲ್ವಾ..?) ಆ ಹೊಣೆಗಾರಿಕೆ ನಿಭಾಯಿಸುವುದಷ್ಟೆ ನಮ್ಮ ಕಳಕಳಿ. ಇಲ್ಲಿ ಯಾರನ್ನೂ ವೈಯುಕ್ತಿಕವಾಗಿ ಟಾರ್ಗೆಟ್ ಮಾಡುವು ದಾಗಲಿ, ತೇಜೋವಧೆ ಮಾಡುವುದು ನಮ್ಮ ಉದ್ದೇಶ ಖಂಡಿತಾ ಇಲ್ಲ..ಸಮಸ್ಯೆ ಬಗೆಹರಿದು ಮಾದ್ಯಮ ಮಿತ್ರರ ಮುಖದ ಲ್ಲಿ ನಗು ಅರಳಿದರೆ,ಅವರ ಬದುಕುಗಳು ಹಸನಾದರೆ  ಅದೇ ನಮ್ಮ ಸ್ಟೋರಿಯ ಮೆಗಾ ಇಂಪ್ಯಾಕ್ಟ್..! ಇದು ನಮ್ಮ ಸ್ಪಷ್ಟೀಕರಣ)

ಕನ್ನಡದ ಪ್ರತಿಷ್ಟಿತ ಹಾಗೂ ಪ್ರಮುಖ ನ್ಯೂಸ್ ಚಾನೆಲ್ ಗಳಲ್ಲಿ ಒಂದಾದ ನ್ಯೂಸ್ ಫಸ್ಟ್ ನ ಅಂಗಳದಿಂದ  ಸುದ್ದಿ ಯೊಂದು ಸಿಕ್ಕಾಪಟ್ಟೆ ಪಸರ್ ಆಗ್ತಿದೆ.ಅದು ಊಹಾಪೋಹವೋ..ಸತ್ಯವೋ ಸಂಸ್ಥೆಯ ಮುಖ್ಯಸ್ಥರು ಹಾಗು ಅಲ್ಲಿನ ಮಾದ್ಯಮ ಸಿಬ್ಬಂದಿ ವಿವೇಚನೆಗೆ ಬಿಟ್ಟಂತ ವಿಚಾರ. ಇರಲಿ,ತಮ್ಮ ವಿಶಿಷ್ಟ ಶೈಲಿಯ ಸುದ್ದಿಯ ಪ್ರಸಾರದಿಂದ ಹೆಸರಾಗಿರುವ ನ್ಯೂಸ್ ಫಸ್ಟ್ ಚಾನೆಲ್ ನಲ್ಲಿ ಕೆಲಸ ಮಾಡ್ತಿರುವ ಸಿಬ್ಬಂದಿಗೆ ತಿಂಗಳುಗಳಿಂದಲೂ ಸಂಬಳವಾಗಿಲ್ಲವಂತೆ ಎನ್ನುವುದೇ ಆ ಸುದ್ದಿ.ಹೆಸರು ಹೇಳಲಿಚ್ಚಿಸದ ಸಾಕಷ್ಟು ಸಿಬ್ಬಂದಿ ಈ ವಿಷಯವನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ನ ಗಮನಕ್ಕೆ ತಂದಿದ್ದಾರೆ.ನಾವು ಕೇಳಿದ್ದು..ನಮ್ಮ ಗಮನಕ್ಕೆ ಬಂದಿದ್ದು ಸುಳ್ಳಾದರೆ ಅದಕ್ಕಿಂತ ಶುಭ ಸುದ್ದಿ ಮತ್ತೊಂದಿರಲಾರದೇನೋ..?

ಮಾದ್ಯಮ ಲೋಕದ ದಿಗ್ಗಜರೆನಿಸಿಕೊಂಡ ಶ್ರೀಯುತ ಮಾರುತಿ ಹಾಗೂ ರವಿಕುಮಾರ್( ಇವರಿಬ್ಬರ ಬಗ್ಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಬಳಗಕ್ಕೆ ಅಪಾರ ಗೌರವವಿದೆ.. ಟಿವಿ9 ನಂಥ ಸಂಸ್ಥೆಯೊಂದನ್ನು ಕರ್ನಾಟಕದ ಪ್ರತಿಯೊಂದು ಮನೆ-ಮನಗಳಿಗೆ ತಲುಪಿಸುವುದರಲ್ಲಿ ಈ ಜೋಡೆತ್ತುಗಳ ಪಾತ್ರ ಅಪಾರ..) ಟಿವಿ9 ನಿಂದ ಹೊರಬಂದ ಮೇಲೆ ಒಂದಷ್ಟು ಕಸರತ್ತು-ಸರ್ಕಸ್-ಪರಿಶ್ರಮದ ಮೂಲಕ ಆರಂಭಿಸಿದ್ದೇ ನ್ಯೂಸ್ ಫಸ್ಟ್…ಟಿವಿ9 ನ ಅನುಭವವನ್ನೇ ಬಂಡವಾಳವಾಗಿಟ್ಟುಕೊಂಡು ಪ್ರಾರಂಭಿಸಿದ ಫಸ್ಟ್ ನ್ಯೂಸ್ ಅವರು ಅಂದುಕೊಂಡಂತೆ ನಡೆಯಲೇ ಇಲ್ಲ.ಅಲ್ಲಿ ಕೆಲಸ ಮಾಡಿ ಅಲ್ಲಿನ ಆಡಳಿತ ವ್ಯವಸ್ಥೆಯಿಂದ ಬೇಸತ್ತು ಹೊರಬಂದ ಸಾಕಷ್ಟು ಮಾದ್ಯಮ ಸ್ನೇಹಿತರೇ ಹೇಳುವಂತೆ ಸುಮಾರು ವರ್ಷವಾದ್ರೂ ಚಾನೆಲ್ ಆನ್ ಆಗ್ಲೂ ಇಲ್ವಂತೆ..ಆನ್ ಏರ್ ಗೂ ಹೋಗ್ಲಿಲ್ಲವಂತೆ..ಅದು ಹಾಳಾಗಿ ಹೋಗ್ಲಿ ಸಿಬ್ಬಂದಿಗೆ ಸಂಬಳ-ಪಿಎಫ್-ಇಎಸ್ ಐನ್ನಾದ್ರೂ ಕೊಟ್ರಾ..ಅದು ಇಲ್ಲವಂತೆ. ಆ ವೇಳೆ ಕೆಲಸ ಮಾಡಿ ಮೋಸ ಹೋದರೆನ್ನಲಾದ ಟಿವಿ9 ನ ಓರ್ವ ಮಾಜಿ ಹಾಗೂ ಹಿರಿಯ ಉದ್ಯೋಗಿ ಒಬ್ಬರೇ ಹೇಳುವಂತೆ 3 ವರ್ಷವೂ ಸುಮಾರು 50 ಸಿಬ್ಬಂದಿಗೆ ಪಿಎಫ್-ಇಎಸ್ ಐ ಕೊಡಲೇ ಇಲ್ವಂತೆ.ಕೆಲವರು ಇವರ ಧೋರಣೆಗೆ ಬೇಸತ್ತು ಕೆಲಸ ಬಿಟ್ರಂತೆ.. ಕೆಲವ್ರನ್ನು ಬೇಕೆಂತಲೇ ಕೆಲಸದಿಂದ ಬಿಡಿಸಲಾಯಿತಂತೆ..! .ಇವರನ್ನು ನಂಬಿಕೊಂಡು ಬಂಡವಾಳ ಹಾಕಿದ್ದರೆನ್ನಲಾದ ಓರ್ವ ರಾಜಕಾರಣಿ ಕೈ ಕೂಡ ಸುಟ್ಟಿತ್ತಂತೆ.!.ಅವರನ್ನು ಕೂಡ ಸೌಜನ್ಯಯುತವಾಗಿ ಇವರು ನಡೆಸಿಕೊಳ್ಳಲಿಲ್ಲ ಎನ್ನುವ ಮಾತು ಫಸ್ಟ್ ನ್ಯೂಸ್ ಬಾಗಿಲು ಹಾಕಿದ ದಿನಗಳಲ್ಲೇ ಕೇಳಿಬಂದಿತ್ತು.

ಅದೆಲ್ಲಾ ಈಗ ಇತಿಹಾಸ ಬಿಡಿ..ಅದರ ಬಗ್ಗೆ ಹೇಳುತ್ತಾ ಹೋದ್ರೆ ಸರಣಿ ವರದಿಗಳನ್ನೇ ಬರೆಯ ಬೇಕಾಗುತ್ತದೆ.ಪಸ್ಟ್ ನ್ಯೂಸ್ ನ ಅಕಾಲಿಕ ಸಾವಿನ ನಂತರ ಇವರಿಬ್ಬರು ತಮ್ಮ ಜತೆಗಿದ್ದ ವೃತ್ತಿಪರ ತಂಡ (Disclaimer..ಇವರ ಬಗ್ಗೆ ಏನೇ ಅಪವಾದಗಳಿದ್ದರೂ ಇವರ ಜತೆಗಿರುವ ತಂಡದ ವೃತ್ತಿಪರರ ಅನುಭವ ಹಾಗೂ ಕಾರ್ಯವೈಖರಿ ಯನ್ನು ಅಲ್ಲಗೆಳೆಯುವಂತಿಲ್ಲ..) ನಂಬಿಕೊಂಡು ಪ್ರಾರಂಭಿಸಿದ್ದೇ ನ್ಯೂಸ್ ಫಸ್ಟ್.. ಟಿವಿ9,ಸುವರ್ಣ,ಪಬ್ಲಿಕ್ ಟಿವಿಗೆ ಕಾಂಪಿಟೇಷನ್ ಕೊಡುವ ರೇಂಜ್ ನಲ್ಲಿ ಆರಂಭವಾದ ನ್ಯೂಸ್ ಫಸ್ಟ್, ಅಂದುಕೊಂಡಿದ್ದನ್ನು ಸಾಧಿಸಲಾಗ ದಿದ್ದರೂ ಆ ಚಾನೆಲ್ ಗಳಿಗೆ ಪೈಪೋಟಿ ಕೊಡುವ ಮಟ್ಟದಲ್ಲಿ ಬೆಳದಿದ್ದು ಮಾತ್ರ ಸತ್ಯ.ಸುದ್ದಿಯ ಆಯ್ಕೆ ಅದಕ್ಕೆ ವಿಭಿನ್ನ ಆಯಾಮ ಕೊಡುವ ರೀತಿ ಹಾಗು ಅದನ್ನು ಜನರು ನೋಡುವಂತೆ ಪ್ರಸಾರ ಮಾಡುವ ವಿಷಯದಲ್ಲಿ ನ್ಯೂಸ್ ಫಸ್ಟ್ ಅತ್ಯದ್ಭುತ ರೀತಿಯಲ್ಲಿ ಕೆಲಸ ಮಾಡುತ್ತಲೇ ಬಂದಿದೆ ಎನ್ನುವುದ ರಲ್ಲಿ ಅನುಮಾನವೇ ಇಲ್ಲ.

ALSO READ :  ತರಬೇತಿ ವೇಳೆ ಸ್ಫೋಟದಿಂದ ಇಬ್ಬರು ಅಗ್ನಿವೀರ್ ಯೋಧರ ದುರ್ಮರಣ

ನ್ಯೂಸ್ ಫಸ್ಟ್ ನಲ್ಲಿ ಕೆಲಸ ಮಾಡುವ ಕೆಲ ಸಿಬ್ಬಂದಿಯೇ ತಿಂಗಳುಗಳಿಂದ ಸಂಬಳವಾಗಿಲ್ಲ ಎಂದು ಆಪಾದಿಸಿದ್ದಾ ರೆ.ಇದಕ್ಕೆ ಸಕಾರಣವನ್ನೂ ಎಚ್ ಆರ್ ಡಿಪಾರ್ಟ್ಮೆಂಟ್ ನೀಡಿಲ್ಲವಂತೆ.ಸಂಬಳದ ಬಗ್ಗೆ ಕೇಳಲು ಹೋಗುವ ಪ್ರತಿಯೊಬ್ಬ ಉದ್ಯೋಗಿಗೂ ಮ್ಯಾನೇಜ್ಮೆಂಟ್ ನಿಂದ ಇನ್ಸ್ ಟ್ರಕ್ಷನ್ ಬಂದಿಲ್ಲ ಎನ್ನುವ ಉತ್ತರ ಸಿಗುತ್ತಿದೆಯಂತೆ. ಸಂಬಳ ನೀಡುವಲ್ಲಿಯೂ ಕೆಲವೊಂದು ಸ್ಲ್ಯಾಬ್ ಮಾಡಿದ್ದು ಸ್ಲ್ಯಾಬ್ ವೈಸ್ ಕೆಲವರಿಗೆ ನೀಡಲಾಗಿದ್ರೂ ಸಂಸ್ಥೆಯ ಒಟ್ಟಾರೆ ಸಿಬ್ಬಂದಿಗೆ ಪರಿಪೂರ್ಣ ಪ್ರಮಾಣದಲ್ಲಿ ಸಂಬಳವೇ ಆಗಿಲ್ಲ ಎನ್ನುವ ಸುದ್ದಿ ಹೊರಬಿದ್ದಿದೆ.

ಸಿಬ್ಬಂದಿಗೆ ಸಂಬಳ ನೀಡುವ ವಿಚಾರದಲ್ಲಿ ಸಂಸ್ಥೆಯ ಆಡಳಿತದ್ದೇ ಅಂತಿಮ ನಿರ್ದಾರ ಎನ್ನುವುದು ಎಷ್ಟು ಸತ್ಯವೋ ಅದನ್ನು ಅದೇ ಆಡಳಿತ , ನಿಷ್ಪಕ್ಷಪಾತವಾಗಿ, ಪಾರದರ್ಶಕವಾಗಿ ನೀಡಬೇಕೆನ್ನುವುದು ಕೂಡ ಅಷ್ಟೇ ನಿಜವಲ್ಲವೇ..? ಒಂದಷ್ಟು ಜನರಿಗೆ ಸ್ಯಾಲರಿ ಕೊಟ್ಟು ಇನ್ನೊಂದಷ್ಟು ಜನರಿಗೆ ಪೆಂಡಿಂಗ್ ಇಡಲಾಗುತ್ತಿದೆ ಎನ್ನುವುದು ಕೂಡ ಎಷ್ಟು ಸರಿ..? ಇದು ಸಂಸ್ಥೆಯಲ್ಲಿರುವ ಉದ್ಯೋಗಿಗಳ ಮದ್ಯೆಯೇ ಸಂಘರ್ಷ-ಮಿಸ್ ಅಂಡರ್ ಸ್ಟ್ಯಾಂಡಿಂಗ್ ಉಂಟಾಗಲು ಕಾರಣವಾಗುವುದಿಲ್ಲವೇ..? ನ್ಯೂಸ್ ಫಸ್ಟ್ ನಲ್ಲಿ ಸಧ್ಯಕ್ಕೆ ಅಂತಹದೊಂದು ವಾತಾವರಣ ಇದೆ ಎನ್ನಲಾಗುತ್ತಿದೆ..ಇದು ನಿಜನೋ ಅಥವಾ ಅಲ್ಲಿನ ಸಿಬ್ಬಂದಿಯೇ ಇಂತದ್ದೊಂದು ಪುಕಾರು ಸೃಷ್ಟಿಸುತ್ತಿದ್ದಾರೋ..? ಅದನ್ನು ಶ್ರೀಯುತ ರವಿಕುಮಾರ್ ಮತ್ತು ಮಾರುತಿ ಸರ್ ಅವರೇ ಹೇಳಬೇಕಿದೆ. ನಿಯತವಾಗಿ ಹಾಗು ನೀಯತ್ತಾಗಿ ಸಂಬಳ ಕೊಡುತ್ತಿದ್ದರೂ ಇಂತಹ ರೂಮರ್ಸ್ ಗಳನ್ನೆಲ್ಲಾ ಏಕೆ ಅಲ್ಲಿನ ಸಿಬ್ಬಂದಿಯೇ ಹಬ್ಬಿಸುತ್ತಿದ್ದಾರೆ ಎನ್ನುವುದರ ಬಗ್ಗೆಯೂ ಅವಲೋಕನ ಮಾಡಿ ಕ್ರಮ ಕೈಗೊಳ್ಳುವ ಅವಕಾಶವೂ ಅವರ ಕೈಯಲ್ಲಿದೆ.

ನ್ಯೂಸ್ ಫಸ್ಟ್ ಬೆಳೆಯೊಕ್ಕೆ. ಸುದ್ದಿ ಮಾದ್ಯಮ ಕ್ಷೇತ್ರದಲ್ಲಿ ಒಂದಷ್ಟು ಹೆಸರು,ಸದ್ದು ಮಾಡೊಕ್ಕೆ ರವಿಕುಮಾರ್-ಮಾರುತಿ ಮತ್ತು ಅವರ ಜತೆಗಿರುವ ವೃತ್ತಿಪರರ ತಂಡ ಎಷ್ಟರ ಮಟ್ಟಿಗೆ ಕಾರಣವೋ ಅವರ ಜತೆ ಕೈ ಜೋಡಿಸಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ  ಸಿಬ್ಬಂದಿಯೂ ಅಷ್ಟೇ ಕಾರಣವಾಗಿರುತ್ತಾರಲ್ಲವೇ..? ಹಾಗಿದ್ದಾಗ್ಯೂ ಏಕೆ ಸಿಬ್ಬಂದಿಯನ್ನು ನೆಗ್ಲೆಕ್ಟ್ ಮಾಡಲಾಗ್ತಿದೆ..! ಅವರ ಸಂಬಳವನ್ನೇಕೆ ಕೊಡಲಾಗುತ್ತಿಲ್ಲ..? ಎನ್ನುವುದು ಪ್ರಶ್ನಾರ್ಹ.ಕೆಲವೊಬ್ಬರಿಗಷ್ಟೇ ಕೊಟ್ಟು  ಇನ್ನುಳಿದವರನ್ನೇಕೆ ನಿರ್ಲಕ್ಷ್ಯ ಮಾಡಲಾಗುತ್ತಿದೆ.! ಅವರವರ ನಡುವೆಯೇ ಕಂದಕ ಸೃಷ್ಟಿಸಲಾಗುತ್ತಿದೆ ಎನ್ನುವುದು ಸತ್ಯನಾ..? ಸಂಬಳ ಪಡೆದವರು ಮಾತ್ರ ಕೆಲಸ ಮಾಡ್ತಿದ್ದಾರೆ..ಇನ್ನುಳಿದವರೇನು ಓತ್ಲಾ ಹೊಡೆಯುತ್ತಿದ್ದಾರಾ..? ಇದಕ್ಕೂ ಉತ್ತರ ಅವರಿಬ್ಬರ ಬಳಿಯೇ ಇರಬಹುದಲ್ವಾ..?

ಮಾರುಕಟ್ಟೆಯಲ್ಲಿರುವ ಟಾಕ್ಸ್ ಪ್ರಕಾರ, ನ್ಯೂಸ್ ಫಸ್ಟ್ ಚಾನೆಲ್ ಈಗಲೂ ಆರ್ಥಿಕವಾಗಿ ಚೆನ್ನಾಗಿಯೇ ಇದೆಯಂತೆ. ಸಂಸ್ಥೆಗೆ ಆದಾಯವೂ ಹರಿದುಬರುತ್ತಿದೆ.ಜಾಹಿರಾತು ಮೂಲಕ ಇವೆಂಟ್ಸ್ ಮೂಲಕವೂ ಲಾಭ ಬರುತ್ತಿದೆಯಂತೆ.ಅಲ್ಲದೇ ಸಂಸ್ಥೆ ಆರ್ಥಿಕವಾಗಿ ನಷ್ಟದಲ್ಲಿದೆ ಎಂದು ಮ್ಯಾನೇಜ್ಮೆಂಟ್ ಕೂಡ ಎಲ್ಲಿಯೂ ತೋರಿಸಿಕೊಂಡಿಲ್ಲ, ತಮ್ಮ ಸಿಬ್ಬಂದಿ ಹತ್ತಿರ ಪರಿಸ್ತಿತಿ ಹೇಳಿಕೊಂಡಿಲ್ಲ(Disclaimer:ಯಾವೊಂದು ಚಾನೆಲ್ ಕೂಡ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಬಾರದು, ಸಿಲುಕಿದರೆ ಆಗಬಹುದಾದ ಸಮಸ್ಯೆಗಳು ಅದರಿಂದ ಸಿಬ್ಬಂದಿ ಬೀದಿಗೆ ಬಿದ್ದು ಅನುಭವಿಸುವ ಪಡಿಪಾಟಲನ್ನು  ಒಂದು ಚಾನೆಲ್ ನ ಉದ್ಯೋಗಿಯಾಗಿ ನಾನು ಬಲ್ಲೆ..ಸೋ, ನ್ಯೂಸ್ ಫಸ್ಟ್ ಸ್ತಿತಿ ಯಾವತ್ತೂ ಹಾಗೆ ಆಗದಿರಲಿ..).ಹಾಗಾದ್ರೆ ಬರುತ್ತಿರುವ ಆದಾಯ ಎಲ್ಲಿ ಹೋಗ್ತಿದೆ..? ಅಥವಾ  ಸಿಬ್ಬಂದಿಗೆ ಸಂಬಳ ಕೊಡಲಿಕ್ಕಾಗದಷ್ಟು ಆದಾಯವೂ ಚಾನೆಲ್ ಗೆ ಬರುತ್ತಿಲ್ಲವೇ..? ಎನ್ನುವ ಗೊಂದಲಕಾರಿ ಪ್ರಶ್ನೆ ಮೂಡುತ್ತದೆ.ಇದಕ್ಕು ರವಿಕುಮಾರ್-ಮಾರುತಿ ಅವರೇ ಉತ್ತರಿಸಬೇಕು.

ಚಾನೆಲ್ ನಲ್ಲಿ ಕೆಲಸ ಮಾಡುವ ಕೆಲವು ಮೂಲಗಳ ಪ್ರಕಾರ ಸಂಸ್ಥೆಗೆ ನಿರೀಕ್ಷೆಯಂತೆಯೇ ಆದಾಯ ಬರುತ್ತಿದೆಯಂತೆ.ಆದರೆ ಬರುವ ಆದಾಯ ಸಂಸ್ಥೆಯ ಸಿಬ್ಬಂದಿಯ ಸಂಬಳಕ್ಕಾಗಲಿ ಅದರ ಉದ್ದಾರಕ್ಕಾಗಲಿ ವಿನಿಯೋಗ ಆಗುತ್ತಿಲ್ಲ ಎನ್ನುವುದು ಅನೇಕರ ಆಪಾದನೆ.ಹೌದಾ..ಎಂದು ಕನ್ನಡ ಫ್ಲ್ಯಾಶ್ ನ್ಯೂಸ್ ಇದರ ಬಗ್ಗೆ ಇಂಟರ್ ನಲ್ ಇನ್ವಿಸ್ಟಿಗೇಷನ್ ಮಾಡಿದಾಗ ಹಣದ ಮೂಲ ನೆಲಮಂಗಲ-ದೇವನಹಳ್ಳಿಯತ್ತ ಕೇಂದ್ರೀಕೃತವಾಗುತ್ತಿರುವಂತೆ ಭಾಸವಾಯಿತು.ಅದರ ಹಿನ್ನಲೆ-ಕಾರಣಗಳನ್ನು ತಿಳಿದುಕೊಳ್ಳುವ ಉದ್ದೇಶವೂ ನಮ್ಮದಲ್ಲ..ಅದರ ಅವಶ್ಯಕತೆಯೂ ನಮಗಿಲ್ಲ. ಅದು ಅವರವರ ದುಡಿಮೆ-ಆದಾಯ-ಹೂಡಿಕೆ-ಖರ್ಚು ವೆಚ್ಚದ ವಿಚಾರ.ಆದರೆ ನಮ್ಮ ಪ್ರಶ್ನೆ ಇರೋದು ಒಂದೇ, ಸಿಬ್ಬಂದಿ ಆಪಾದಿಸುತ್ತಿರುವಂತೆ ಮ್ಯಾನೇಜ್ಮೆಂಟ್ ತನ್ನ ಹಿತಾಸಕ್ತಿಗಾಗಿ, ಸಂಸ್ಥೆಯ ಏಳಿಗೆಗೆ ಪ್ರಾಮಾಣಿಕವಾಗಿ ದುಡಿಯುತ್ತಿರುವ  ಸಿಬ್ಬಂದಿಯ ಸಂಬಳಕ್ಕೆ ಕೊಕ್ಕೆ ಹಾಕ್ತಿದೆ ಎನ್ನುವುದು ಎಷ್ಟರ ಮಟ್ಟಿಗೆ ಸರಿ..

ಕೇವಲ ತಿಂಗಳ ಸಂಬಳಕ್ಕಾಗಿ ಶಿಫ್ಟ್ ಗಳೆನ್ನುವ ಬ್ಯಾರಿಯರ್ ಹಾಕಿಕೊಳ್ಳದೆ, ಪ್ರಾಮಾಣಿಕವಾಗಿ ದುಡಿಯುವ ನಿಷ್ಪಾಪಿ (Disclaimer:ತಲೆ ಇರುವ ಕೆಲವರು ಎಲ್ಲಾ ಚಾನೆಲ್ ಗಳಲ್ಲೂ ಬೇರೆಯದೆ ರೀತಿಯಲ್ಲಿ ದುಡಿದುಕೊಂಡು ಆರಾಮಾಗಿರುತ್ತಾರೆ ಬಿಡಿ..ಕೆಲವು ಸೋ ಕಾಲ್ಡ್ ಪ್ರಾಮಾಣಿಕ ಪತ್ರಕರ್ತರ ದುಡಿಮೆಯ ನೈಜ ಗುಟ್ಟನ್ನು ಕೂಡ ಶೀಘ್ರವೇ  ಕನ್ನಡ ಫ್ಲ್ಯಾಶ್ ನ್ಯೂಸ್  ಬಟಾಬಯಲು ಮಾಡಲಿದೆ) ಮಾದ್ಯಮ ಸಿಬ್ಬಂದಿಗೆ ನಿಗಧಿತ ಅವಧಿಯಲ್ಲಿ ಸಂಬಳ ಕೊಡುವುದು ನ್ಯೂಸ್ ಫಸ್ಟ್ ಒಂದೇ ಅಲ್ಲ, ಎಲ್ಲಾ ಸಂಸ್ಥೆಗಳ ಬಾಧ್ಯಸ್ಥಿಕೆಯಲ್ಲವೇ..? ಸಂಬಳ ಬಿಟ್ಟರೆ ಬೇರೆನನ್ನು ಅಪೇಕ್ಷಿಸದ ಸಿಬ್ಬಂದಿಯ ಹಿತಾಸಕ್ತಿ ಕಾಪಾಡುವುದು ಕೂಡ ಪ್ರತಿಯೊಂದು ಸಂಸ್ಥೆಯ ಹೊಣೆಗಾರಿಕೆಯಲ್ಲವೇ..? ಇದನ್ನು ನ್ಯೂಸ್ ಫಸ್ಟ್ ಒಂದೇ ಅಲ್ಲಾ ಎಲ್ಲಾ ಚಾನೆಲ್ ಗಳು ಅರ್ಥ ಮಾಡಿಕೊಳ್ಳಬೇಕಷ್ಟೆ..! ಸಿಬ್ಬಂದಿಯ ಸಂಬಳ ಸಮಸ್ಯೆ ಮುಗಿದ್ರೆ ಈ ಸುದ್ದಿಗೆ ಇದಕ್ಕಿಂತ ಮೆಗಾ..ಮೇಜರ್ ಇಂಪ್ಯಾಕ್ಟ್ ಇನ್ನೇನು ಬೇಡ..


Political News

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

ಜೋಗ್-ಕಾರ್ಗಲ್ ನಲ್ಲಿ ಮಟ್ಕಾ ದಂಧಗೆ ಬಲಿಯಾಯ್ತು ಜೀವ…!

INSIDE THE TRUTH….ಮುರಿದುಬಿದ್ದ ಮಾತುಕತೆ- ಬೇಡಿಕೆಗಳಿಗೆ ಸೊಪ್ಪಾಕದ ಸರ್ಕಾರ-14 ತಿಂಗಳ ಹಿಂಬಾಕಿ 700 ಕೋಟಿ ಬಿಡುಗಡೆಗಷ್ಟೇ ಸರ್ಕಾರ ಒಪ್ಪಿಗೆ…

ನಾಳೆ ಸಾರಿಗೆ ಮುಷ್ಕರ ಇಲ್ಲ, ಒಂದು ದಿನ ಮುಂದೂಡಿಕೆ :ಹೈಕೋರ್ಟ್ ಆದೇಶ

“ಅವರಿಬ್ಬರು” ಒಂದಾದ್ರೆ ಆಗಸ್ಟ್ 5 ರ ಸಾರಿಗೆ ಮುಷ್ಕರ “ಯಶಸ್ವಿ”ನಾ.?!

ಬಿಗ್ ಇಂಪ್ಯಾಕ್ಟ್..kSRTC ಎಂಡಿ ಸಹಿ ನಕಲು ಮಾಡಿದ್ದಾತ ಸಸ್ಪೆಂಡ್…

eXCLUSIVE….ಕೆಎಸ್ ಆರ್ ಟಿಸಿ MD ಸಹಿ ನಕಲು..!-ಲಕ್ಷಾಂತರ ಸುಲಿಗೆ..! ತನಿಖೆಯಾದರೆ ಮತ್ತಷ್ಟು ಅಕ್ರಮ ಬಹಿರಂಗ..

Scroll to Top