advertise here

Search

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”


ಬೆಂಗಳೂರು: ಪಿಓಪಿ( POP-ಪ್ಲಾಸ್ಟರ್ ಆಫ್ ಪ್ಯಾರೀಸ್) ಗಣಪತಿಗಳ ತಯಾರಿಕೆ ಮತ್ತು ಮಾರಾಟ ರಾಜಧಾನಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವುದನ್ನು ಗಮನಿಸಿದಾಗ  ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಆರ್ಭಟವೆಲ್ಲಾ ಉತ್ತರ ಕುಮಾರನ ಪೌರುಷ ಒಲೆ ಮುಂದೆನ ಎನ್ನುವ ಗಾಧೆ ನೆನಪಾಗುತ್ತದೆ..ಏಕೆಂದರೆ ಪಿಓಪಿ ದಂಧೆಗೆ ಬ್ರೇಕ್ ಹಾಕೋ ತಾಕತ್ತಾಗಲಿ,ಮನಸಾಗಲಿ ಸರ್ಕಾರಕ್ಕೂ ಇಲ್ಲ..ಮಾಲಿನ್ಯ ನಿಯಂತ್ರಣ ಮಂಡಳಿಗೂ ಇಲ್ಲ..ಪಿಓಪಿ ದಂಧೆಗೆ ಕಡಿವಾಣ ಹಾಕ್ತೇವೆನ್ನೋದೆಲ್ಲಾ  ಹಸಿ ಹಸಿ ಸುಳ್ಳು..

ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ನರೇಂದ್ರಸ್ವಾಮಿ ರಾಜ್ಯದ ಜನರಿಗೆ ಹಸಿ ಹಸಿ ಸುಳ್ಳುಗಳನ್ನು ಹೇಳಿದ್ದಲ್ಲದೇ ಜನರನ್ನು ಕೂಡ ವಂಚಿಸುತ್ತಿದ್ದಾರಾ.? ಇಂತದ್ದೊಂದು ಗಂಭೀರ ಆಪಾದನೆ ಮಾಡಲು ಕಾರಣ, ಸ್ಪಷ್ಟ. ಅವರಿಗೆ ನಿಜಕ್ಕೂ ಪರಿಸರದ ಬಗ್ಗೆ ಕಾಳಜಿ ಇದ್ದರೆ, ಎನ್ ಜಿಟಿ ಮತ್ತು ಸುಪ್ರಿಂ ಕೋರ್ಟ್ ಗಳ ಬಗ್ಗೆ ಕಿಂಚಿತ್ ಗೌರವವಿದ್ದರೆ ತಮ್ಮ ಒತ್ತಡದ ಶೆಡ್ಯೂಲ್ ನಡುವೆ ಒಂದಷ್ಟು ಬಿಡುವು ಮಾಡಿಕೊಂಡು ಬೆಂಗಳೂರಿನ ಮುಖ್ಯ ರಸ್ತೆಗಳಲ್ಲೇ ಸಂಚರಿಸಿ ನೋಡಲಿ.ತಾವೆಷ್ಟರ ಮಟ್ಟಿಗೆ ಸುಳ್ಳು ಹೇಳುತ್ತಿದ್ದೇವೆ್ನ್ನುವ ಸತ್ಯ ಅವರಿಗೇನೆ ಗೊತ್ತಾಗುತ್ತದೆ.ಅವರ ಅಧೀನದಲ್ಲಿ ಕೆಲಸ ಮಾಡುವ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಎಷ್ಟು ಹೊಣೆಗೇಡಿಗಳಾಗಿ ಕೆಲಸ ಮಾಡುತ್ತಿರಬಹುದೆನ್ನುವ ಮಾಹಿತಿ ಸಿಕ್ಕಿಬಿಡುತ್ತದೆ.

ಪಿಓಪಿ ದಂಧೆಗೆ ಕಡಿವಾಣ ಹಾಕಲಾಗಿದೆ ಎಂದು ಮಿನಿಸ್ಟರ್ ಹೇಳಿದ್ದೇ ಸುಳ್ಳಾ..?! ಮೊನ್ನೆ ವಿಕಾಸಸೌಧದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ನರೇಂದ್ರಸ್ವಾಮಿ ಇಬ್ರು  ಪತ್ರಿಕಾಗೋಷ್ಟಿ ಮಾಡಿ ಪಿಓಪಿ ಬ್ಯಾನ್ ಆಗಿದೆ.ದಂಧೆ ನಿಯಂತ್ರಣದಲ್ಲಿದೆ.ನಮ್ಮ ಅಧಿಕಾರಿಗಳು ಸುಮಾರು 207 ಪಾಯಿಂಟ್ಸ್ ಹುಡುಕಿದ್ದಾರೆ.ಆ ಪೈಕಿ ಬೆಂಗಳೂರಿನ ಕುಂಬಳಗೋಡಿನಲ್ಲೇ 11 ಸಾವಿರ ಪಿಓಪಿ ಗಣೇಶನ ಮೂರ್ತಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆನ್ನುವುದಾಗಿ ಹೇಳಿ ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಂಡಿದ್ದರು( ಆದರೆ ವಾಸ್ತವದಲ್ಲಿ ಆ ಎಲ್ಲಾ 11 ಸಾವಿರ ಪಿಓಪಿ ಗಣೇಶನ ಮೂರ್ತಿಗಳು ಇತ್ತೀಚೆಗೆ ವಶಪಡಿಸಿಕೊಂಡಿದ್ದಲ್ಲವೇ ಅಲ್ಲವಂತೆ..ಹಿಂದಿನ ವರ್ಷಗಳಲ್ಲಿ ಸೀಜ್ ಮಾಡಿಟ್ಟಿದ್ದ ಗಣೇಶಗಳನ್ನೇ ಈ ಬಾರಿ ತೋರಿಸಿ ಸಚಿವರು ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನು ಚೆನ್ನಾಗಿಯೇ ಯಾಮಾರಿಸಲಾಗಿದೆಯಂತೆ).

ಆದರೆ ವಾಸ್ತವದಲ್ಲಿ ನಡೆಯುತ್ತಿರುವ ಸತ್ಯವೇನು ಗೊತ್ತೆ..? ಅಸಲಿಗೆ ಈ ಬಾರಿ ಪಿಓಪಿ ಗಣೇಶ ಮೂರ್ತಿ ತಯಾರಿಸುವ ಮಾಫಿಯಾ ಅದರ ಕಿಂಗ್ ಪಿನ್ ಆದ ಶ್ರೀನಿವಾಸ್ ಅಲಿಯಾಸ್ ಮಾವಳ್ಳಿ ಶ್ರೀನಿವಾಸ್ ನ ಮುಂದಾಳತ್ವದಲ್ಲಿ ದೊಡ್ಡ ಪ್ಲ್ಯಾನನ್ನೇ ಮಾಡಿ ಸರ್ಕಾರ-ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಬೂದಿ ಎರಚಿದೆ.ಗಣೇಶನ ಹಬ್ಬದ ಹತ್ತಿರದಲ್ಲಿ ಪಿಓಪಿ ಬ್ಯಾನ್ ಕೂಗು ವ್ಯಾಪಕವಾಗಿ ಕೇಳಿಬರುತ್ತದೆ ಎನ್ನುವುದನ್ನು ಕನ್ಫರ್ಮ್ ಮಾಡಿಕೊಂಡೇ ಕೆಲ ತಿಂಗಳ ಹಿಂದೆಯೇ ಭಾರೀ ಗಾತ್ರದ ಗಣೇಶನ ಮೂರ್ತಿಗಳನ್ನು ರಾತ್ರೋರಾತ್ರಿ ಸಿದ್ದಪಡಿಸಿ ದೊಡ್ಡ ದೊಡ್ಡ ಲಾರಿಗಳಲ್ಲಿ ಸಾಗಾಕಲಾಗಿದೆ ಎನ್ನುವ ಸ್ಪೋಟಕ ಮಾಹಿತಿಯನ್ನು ದಂಧೆಯಲ್ಲಿ ಶಾಮೀಲಾಗಿದ್ದ ಸಾಕಷ್ಟು ಉದ್ಯೋಗಿಗಳು ಹೇಳಿದ್ದಾರೆ.

ತಿಂಗಳುಗಳ ಹಿಂದೆಯೇ ಸಾಗಾಟವಾಗಿರುವ ಪಿಓಪಿ ಗಣೇಶ ಮೂರ್ತಿ ಗಳು..!?ಪಿಓಪಿ ದಂಧೆಯಲ್ಲಿರುವ ಮಾಫಿಯಾಗೆ ಈ ಬಾರಿ ಬರಬೇಕಿದ್ದ ಲಾಭವೆಲ್ಲಾ ತಿಂಗಳುಗಳ ಹಿಂದೆಯೇ ಕೋಟಿಗಳ ಲೆಕ್ಕದಲ್ಲಿ ಜೇಬು ಸೇರಿದೆ ಯಂತೆ.ಹಬ್ಬಗಳು ಹತ್ತಿರ ಬರುತ್ತಿರುವ ವೇಳೆ ಒಂದಷ್ಟನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿರುವ ನಾಟಕ ಹೆಣೆಯಲಾಗ್ತಿದೆಯಂತೆ. ಇದೆಲ್ಲಾ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗಾಗಲಿ, ಪೊಲೀಸರಿಗಾಗಲಿ, ಜಿಲ್ಲಾಡಳಿತ ಕ್ಕಾಗಲಿ, ಸ್ಥಳೀಯ ತಹಸೀಲ್ದಾರ್ ಗೆ ಗೊತ್ತೇ ಇಲ್ಲವೇ..? ಖಂಡಿತಾ ಗೊತ್ತು.ಆಯಾ ಇಲಾಖೆಗಳಲ್ಲಿರುವ ಕೆಲವು ಅಪ್ರಮಾಣಿಕರೇ ಪಿಓಪಿ ದಂಧೆಕೋರರ ಜತೆ ಹಣದ ಆಸೆಗೆ ಕೈ ಜೋಡಿಸಿ ಗಣೇಶನ ಮೂರ್ತಿಗಳು ತಲುಪಬೇಕಾದ ಸ್ಥಳದವರೆಗೆ ತಾವೇ ಭದ್ರತೆ ಕೊಟ್ಟು ಬಂದಿದ್ದಾರೆನ್ನುವ ಮಾತುಗಳಿವೆ.ಇದೊಂದು ರೀತಿ ಬೇಲಿಯೇ ಎದ್ದು ಹೊಲ ಮೇಯ್ದಂಗೆ ಆಯಿತು ಎನ್ನುವಂತಿದೆ ಅಲ್ವಾ..?

ಪಿಓಪಿ ಬ್ಯಾನ್ ಮಾಡಲಾಗಿದ್ದರೂ ಬೆಂಗಳೂರಿನಲ್ಲೆಲ್ಲಾ ಪಿಓಪಿಗಳ ತಯಾರಿಕೆ ಮತ್ತು ಮಾರಾಟಕ್ಕೆ ಕೊಂಚವೂ ಬ್ರೇಕ್ ಬಿದ್ದಿಲ್ಲ.ಬಿದ್ದಿದ್ದರೆ ಇಂತಿಷ್ಟು ಪಿಒಪಿ ಗಣೇಶನ ಮೂರ್ತಿಗಳನ್ನು ವಶಪಡಿಸಿಕೊಳ್ಳಲಾ್ಗಿದೆ ಎನ್ನುವುದರ ಮಾಹಿತಿಯಾದ್ರೂ ಮಾದ್ಯಮಗಳಿಗೆ ಸಿಗಬೇಕಿತ್ತಲ್ವಾ..? ಆದರೆ ಅಂಥದ್ದ್ಯಾವುದೆ ಮಾಹಿತಿ ಈವರೆಗೂ ಪಿಸಿಬಿ ಕಚೇರಿಯಿಂದ ಹೊರಬಿದ್ದಿಲ್ಲ..ಹೀಗಿರುವಾಗ ಪಿಸಿಬಿ ಆಡಳಿತ ಕೆಲಸ ಮಾಡುತ್ತಿದೆಯೇ ಎನ್ನುವ ಅನುಮಾನ ಸಹಜವಾಗಿಯೇ ಕಾಡುತ್ತದಲ್ವೇ..?

ALSO READ :  ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: 35 IPS ವರ್ಗಾವಣೆ: ಅನುಚೇತ್ ಟ್ರಾನ್ಸ್ ಫರ್

ಪಿಓಪಿ ದಂಧೆಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯೇ ಕುಮ್ಮಕ್ಕು.?! ಪಿಓಪಿ ದಂಧೆಗೆ ಬಿಲ್ ಕುಲ್ ಅವಕಾಶ ನೀಡುವಂತಿಲ್ಲ ಎಂದು ಮಿನಿಸ್ಟರ್ ಬಾಯಿ ಬಡಿದುಕೊಳ್ಳುತ್ತಿದ್ದರೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಬಹುತೇಕ ಭ್ರಷ್ಟ ಅಧಿಕಾರಿಗಳೇ ಪಿಓಪಿ ದಂಧೆಕೋರರ ಜತೆ ಶಾಮೀಲಾಗಿ ದಿನನಿತ್ಯ ಲಕ್ಷಗಳಲ್ಲಿ ಲಂಚವನ್ನು ಜೇಬಿಗಿಳಿಸಿಕೊಂಡು ಹೋಗುತ್ತಿದ್ದಾರೆನ್ನುವ ಮಾತಿದೆ.ಸಾರ್ವಜನಿಕರು, ಹೋರಾಟಗಾರರು,ಮಾದ್ಯಮಗಳು ಪಿಓಪಿಗೆ ಬ್ರೇಕ್ ಬೀಳಲಿ ಎಂದು ಅಧಿಕಾರಿಗಳಿಗೆ ಮಾಹಿತಿ ಕೊಟ್ಟರೆ ಅದನ್ನೇ ಅಸ್ತ್ರವಾಗಿಸಿಕೊಂಡು ಕೆಲವು ಅಧಿಕಾರಿಗಳು ರೇಡ್ ನೆವದಲ್ಲಿ ದಾಳಿ ಮಾಡಿ ಹೆದರಿಸಿ,ಬೆದರಿಸಿ ಹಣ ಮಾಡಿಕೊಳ್ಳುತ್ತಿದ್ದಾರೆನ್ನುವ ಆರೋಪ ಹೊಸದೇನಲ್ಲ.ಇಂತದ್ದೊಂದು ದೂರು, ಸಚಿವರು ಮತ್ತು ಅಧ್ಯಕ್ಷರ ಗಮನಕ್ಕೆ ಬರುತ್ತಿರಬಹುದಾಗಿರುವುದು ಕೂಡ ಇದೇ ಮೊದಲನೇಲ್ಲ.ಅಂದರೆ ದೀಪಾವಳಿಯಂತೆ ಗಣೇಶ ಹಬ್ಬ ಬಂದ್ರೆ ಮಂಡಳಿಯ ಕೆಲವು ಭ್ರಷ್ಟರು ಪಿಓಪಿ ರೇಡ್ ನೆವದಲ್ಲಿ ಲಕ್ಷಗಟ್ಟಲೇ ಹಣ ಮಾಡಿಕೊಳ್ಳುವ ಸೀಸನ್ ಮಾಡಿಕೊಂಡಿದ್ದಾರೆನ್ನುವುದು ನಾಚಿಕೆಗೇಡಿನ ವಿಚಾರ.

ಎಷ್ಟೇ ದೂರು ಕೊಟ್ಟರೂ ಪರಿಸರಾಧಿಕಾರಿಗಳೇಕೆ ಸ್ಪಂದಿಸುತ್ತಿಲ್ಲ..ಪಿಓಪಿ ವಿಚಾರದಲ್ಲಿ ಎಷ್ಟೇ ದೂರು ಕೊಟ್ಟರೂ ಅಧಿಕಾರಿಗಳು ಸ್ಪಂದಿಸುತ್ತಲೇ ಇಲ್ಲ ಎನ್ನುವ ಆಪಾದನೆ ಇದೆ.ಗ್ರೀನ್ ಆರ್ಮಿ ಫೋರ್ಸ್ ನ ಕಿರಣ್ ಕುಮಾರ್ ಶೇಷಾದ್ರಿಪುರಂ ಮುಖ್ಯ ರಸ್ತೆಯಲ್ಲಿ ನೂರಾರು ಬೃಹತ್ ಪಿಓಪಿ ಗಣೇಶ ಮೂರ್ತಿಗಳನ್ನು ಮಾರುತ್ತಿರುವ ಮಾಹಿತಿಯನ್ನು ವಲಯದ ಪರಿಸರಾಧಿಕಾರಿ ಗೋಗಿ ಮತ್ತು ಮಂಡಳಿಯ ಸದಸ್ಯ ಕಾರ್ಯದರ್ಶಿ ಲಿಂಗರಾಜ್ ಅವರಿಗೆ ನೀಡಿದ್ರೆ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಉಡಾಫೆಯಿಂದ ವರ್ತಿಸಿದ್ದಾರಂತೆ.ವಲಯ ಪರಿಸರಾಧಿಕಾರಿ ಗೋಗಿ ಎನ್ನುವ ಮಹಾನುಭಾವನಂತೂ  ಕರೆಯನ್ನೇ ಸ್ವೀಕರಿಸಲಿಲ್ಲವಂತೆ. ಗಣೇಶನ ಹಬ್ಬದ ವೇಳೆ ಪಿಓಪಿ ದಂಧೆಗೆ ಸಂಬಂಧಿಸಿದಂತೆ ದೂರುಗಳು ಬರಬಹುದೆನ್ನುವ ಮಾಹಿತಿ ಸ್ಪಷ್ಟವಾಗಿ ಇದ್ದರೂ ಕರೆಯನ್ನೇ ಸ್ವೀಕರಿಸೊಲ್ಲ ಎಂದರೆ ಮಾಫಿಯಾ ಜತೆಗೆ ಅವರು ಶಾಮೀಲಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ ಎಂದು ಕಿರಣ್ ಆಪಾದಿಸಿದ್ದಾರೆ.ಅವರ ಆಪಾದನೆಯಲ್ಲೂ ಸತ್ಯಾಂಶವಿದೆ ಎನ್ನುವುದು ಕನ್ನಡ ಫ್ಲ್ಯಾಶ್ ನ್ಯೂಸ್ನ ಅನಿಸಿಕೆ.

ಎಂ.ಎಸ್ ಲಿಂಗರಾಜ್ ನಾಟ್ ರೀಚಬಲ್- ಗೋಗಿ ಸ್ವಿಚಾಫ್..!ಇದು ಕೇವಲ ಗೋಗಿ ಎನ್ನುವ ದುರಂಹಕಾರದ,ಉಡಾಫೆ ಮನಸ್ತಿತಿಯ ಪರಿಸರಾಧಿಕಾರಿಯ ಕಥೆಯಲ್ಲ.ಬಹುತೇಕ ಪರಿಸರಾಧಿಕಾರಿಗಳು ಹೀಗೆಯೇ ಇದ್ದಾರೆ.ಪಿಓಪಿ ದಂಧೆಗೆ ಕಡಿವಾಣ ಹಾಕೋದನ್ನು ಬಿಟ್ಟು ಉಳಿದೆಲ್ಲಾ ಕೆಲಸ ಮಾಡ್ತಾರೆ.ಈ ಹಿಂದೆ ರಾಜರಾಜೇಶ್ವರಿ ವಲಯದ ಶಿವಕುಮಾರ್( ಈಗ ದೊಡ್ಡಬಳ್ಳಾಪುರ ವಲಯದ ಪರಿಸರಾಧಿಕಾರಿ), ದಕ್ಷಿಣ ವಲಯದ ಪರಿಸರಾಧಿಕಾರಿಯಾಗಿದ್ದ ಸುನೀತಾ( ರಾಜರಾಜೇಶ್ವರಿ ವಲಯದ ಪರಿಸರಾಧಿಕಾರಿ) ಸೇರಿದಂತೆ ಇನ್ನು ಹಲವರು ಕೂಡ ಪಿಓಪಿ ದಂಧೆಕೋರರ ವಿಷಯದಲ್ಲಿ ಮೃಧು ಧೋರಣೆ ತಳೆದಿರುವ ಆಪಾದನೆಗೆ ಗುರಿಯಾಗಿದ್ದಾರೆ.ಪಿಓಪಿಗೆ ಕಡಿವಾಣ ಹಾಕದೆ ಅವರಿಂದಲೇ ಲಂಚದ ರೂಪದಲ್ಲಿ ಎಂಜಿಲು ತಿಂದಿದ್ದೇ ಆಗಿದ್ದಲ್ಲಿ  ಆ ಗಣೇಶನ ಶಾಪ ನಿಮಗೆ ತಟ್ಟದೆ ಇರೊಲ್ಲ ಎಂದು ಅನೇಕ ಪರಿಸರವಾದಿಗಳು ಹಿಡಿಶಾಪ ಹಾಕಿದ್ದಾರೆ. ಈ ಹಿ್ನ್ನೆಲೆಯಲ್ಲಿ ಸಾಕ್ಷ್ಯ ಸಮೇತ ನಾಳೆ ಕಿರಣ್ ಕುಮಾರ್ ಮಂಡಳಿಗೆ ದೂರು ಸಲ್ಲಿಸುತ್ತಿದ್ದು ನಿರ್ಲಕ್ಷ್ಯದ ಆಪಾದನೆ ಮೇರೆಗಾದ್ರೂ ಪರಿಸರಾಧಿಕಾರಿ ಗೋಗಿ ವಿರುದ್ಧ ಕ್ರಮ ಜಾರಿಯಾಗುತ್ತಾ ನೋಡಬೇಕಿದೆ.

ಮಂಡಳಿಯ ಕೆಲ ಭ್ರಷ್ಟರೇ ದಂಧೆ ಜತೆ ಶಾಮೀಲಾಗಿರುವುದು ನರೇಂದ್ರಸ್ವಾಮಿ ಅವರಿಗೇನು ಗೊತ್ತಿಲ್ವೇ,,!?ಕೆಲವು ಪರಿಸರಾಧಿಕಾರಿಗಳು ಪಿಓಪಿ ದಂಧೆಯಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಶಾಮೀಲಾಗಿರುವ ಮಾಹಿತಿ, ಮಂಡಳಿಯ ಅಧ್ಯಕ್ಷ ನರೇಂದ್ರಸ್ವಾಮಿ ಅವರಿಗೇನು ಗೊತ್ತಿಲ್ಲವೇ.? ಖಂಡಿತಾ ಗೊತ್ತಿದೆ..ಹಾಗಿದ್ದಾಗ್ಯೂ ಏಕೆ ಕ್ರಮ ಕೈಗೊಳ್ಳುತ್ತಿಲ್ಲ..? ಇದಕ್ಕೆ ಅವರೇ ಪ್ರತಿಕ್ರಿಯಿಸಬೇಕು.ಪಿಓಪಿ ದಂಧೆ ರಾಜಧಾನಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದರೂ ಕ್ರಮ ಕೈಗೊಳ್ಳದ  ಆರೋಪದ ಮೇಲೆಯೇ ಗೋಗಿ, ಸುನಿತಾ, ಶಿವಕುಮಾರ್ ಅವರಂಥ ಕೆಲವು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ರೆ ಉಳಿದ ಮೈಗಳ್ಳರು ಹೇಗೆ ಮೈ ಕೊಡವಿ ಎದ್ದು ಕೆಲಸ ಮಾಡ್ತಾರೆ ನೋಡಿ..ಆದರೆ ಇಂಥಾ ಯಾವುದೇ ಕಠಿಣ ಕ್ರಮಕ್ಕೆ ಮುಂದಾಗದೆ ಕೇವಲ ಎಚ್ಚರಿಕೆ ಕೊಡುತ್ತಾ ಹೋದರೆ ಅದರಿಂದ ಆಗೋ ಪ್ರಯೋಜನ ಶೂನ್ಯ ಅಲ್ಲವೇ,,?

ಪಿಓಪಿ ದಂಧೆ ವ್ಯವಸ್ಥಿತವಾಗಿ ಅಧಿಕಾರಿಗಳ ಕಣ್ಣಿಗೆ ರಾಚುವಂತ ರೀತಿಯಲ್ಲೇ ನಡೆಯುತ್ತಿದ್ದರೂ ಅದರ ಬಗ್ಗೆ ಕ್ರಮ ಕೈಗೊಳ್ಳುವ ಮಾತಿರಲಿ,ಅದರ ಮಾಹಿತಿಯನ್ನೂ ಪಡೆಯುವ ವ್ಯವಧಾನವಿಲ್ಲ ದವರಂತೆ ಆಗಿರುವ ಪರಿಸರಾಧಿಕಾರಿಗಳಿಂದ ಪಿಓಪಿ ಬ್ಯಾನ್ ಎನ್ನುವ ಮಹಾಕಲ್ಪನೆ ಮಾಡಲಿಕ್ಕಾಗುತ್ತಾ..? ನೋ ಚಾನ್ಸ್…ಮಿನಿಸ್ಟರ್ ಈಶ್ವರ್  ಖಂಡ್ರೆ, ಮಂಡಳಿಯ ಅಧ್ಯಕ್ಷ ನರೇಂದ್ರಸ್ವಾಮಿ ಅವರು ಜಾಗೃತರಾಗುವವರೆಗೂ,ಅವರಲ್ಲಿ ಈ ಬಗ್ಗೆ ಕಾಳಜಿ ಮೂಡುವವರೆಗೂ ನಾವು ಪರಿಸರಾಧಿಕಾರಿಗಳಿಂದ ದಿಟ್ಟಪ್ರಯತ್ನದ ನಿರೀಕ್ಷೆ ಮಾಡೋದು ನಮ್ಮ ಮೂರ್ಖತನವಾಗಬಹುದೇನೋ.,.?!  


Political News

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

ಜೋಗ್-ಕಾರ್ಗಲ್ ನಲ್ಲಿ ಮಟ್ಕಾ ದಂಧಗೆ ಬಲಿಯಾಯ್ತು ಜೀವ…!

INSIDE THE TRUTH….ಮುರಿದುಬಿದ್ದ ಮಾತುಕತೆ- ಬೇಡಿಕೆಗಳಿಗೆ ಸೊಪ್ಪಾಕದ ಸರ್ಕಾರ-14 ತಿಂಗಳ ಹಿಂಬಾಕಿ 700 ಕೋಟಿ ಬಿಡುಗಡೆಗಷ್ಟೇ ಸರ್ಕಾರ ಒಪ್ಪಿಗೆ…

ನಾಳೆ ಸಾರಿಗೆ ಮುಷ್ಕರ ಇಲ್ಲ, ಒಂದು ದಿನ ಮುಂದೂಡಿಕೆ :ಹೈಕೋರ್ಟ್ ಆದೇಶ

“ಅವರಿಬ್ಬರು” ಒಂದಾದ್ರೆ ಆಗಸ್ಟ್ 5 ರ ಸಾರಿಗೆ ಮುಷ್ಕರ “ಯಶಸ್ವಿ”ನಾ.?!

ಬಿಗ್ ಇಂಪ್ಯಾಕ್ಟ್..kSRTC ಎಂಡಿ ಸಹಿ ನಕಲು ಮಾಡಿದ್ದಾತ ಸಸ್ಪೆಂಡ್…

eXCLUSIVE….ಕೆಎಸ್ ಆರ್ ಟಿಸಿ MD ಸಹಿ ನಕಲು..!-ಲಕ್ಷಾಂತರ ಸುಲಿಗೆ..! ತನಿಖೆಯಾದರೆ ಮತ್ತಷ್ಟು ಅಕ್ರಮ ಬಹಿರಂಗ..

Scroll to Top