advertise here

Search

“ಅಕ್ರಮ”ದ ವಿರುದ್ಧ ಸಿಡಿದೆದ್ದ “ದಕ್ಷ-ಖಡಕ್” ಅಧಿಕಾರಿ “ಲೇಡಿ ಸಿಂಗಂ” ಆಶಾ ಪರ್ವಿನ್ ಎತ್ತಂಗಡಿ..?!


ವಿಕ್ಟೋರಿಯಾ ಆಸ್ಪತ್ರೆ “ನೆಫ್ರೋ ಯುರಾಲಜಿ” ಡೈರೆಕ್ಟರ್ ಡಾ.ಶಿವಲಿಂಗಯ್ಯ ಕರ್ಮಕಾಂಡ ಬಯಲಿಗೆಳೆದಿದ್ದಕ್ಕೆ ವರ್ಗಾವಣೆ ಬಹುಮಾನ..!

ಬೆಂಗಳೂರು: ರಾಜ್ಯದ ಅಡಳಿತ ನಿಜಕ್ಕೂ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳ ಬರ ಎದುರಿಸುತ್ತಿದೆ ..ಅದರಲ್ಲೂ ಆಯಕಟ್ಟಿನ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ “ಐಎಎಸ್-ಕೆಎಎಸ್” ನಂತ ಅಧಿಕಾರಿಗಳಲ್ಲಿ ಬಹುತೇಕ ರು ಭ್ರಷ್ಟರಾಗಿರುವ ಸಂಕಷ್ಟದ ಸನ್ನಿವೇಶದಲ್ಲಿ ಬೆರಳೆಣಿಕೆಯ ಅಧಿಕಾರಿಗಳು ನಮ್ಮ ನಡುವಿದ್ದಾರೆ ನ್ನು ವುದು ಸಮಾಧಾನದ ಸಂಗತಿ.ಆದರೆ ದುರಂತದ ಸಂಗತಿ ಏನಪ್ಪಾ ಅಂದ್ರೆ ಇಂಥಾ ಬೆರಳೆಣಿಕೆಯ ಅಧಿಕಾ ರಿಗಳಿಗೂ ಕೂಡ ಕೆಲಸ ಮಾಡಲಿಕ್ಕಾಗದಂಥ ಉಸಿರುಗಟ್ಟಿಸುವ ವಾತಾವರಣವನ್ನು ನಿರ್ಮಿಸ ಲಾಗ್ತಿದೆ.

ವ್ಯವಸ್ಥೆಯಲ್ಲಿ ನಡೆಯುವ ಬೆಳವಣಿಗೆಗಳ ಮೇಲೆ ಸೂಕ್ಷ್ಮ ದೃಷ್ಟಿಯಿಟ್ಟು ಕಾವಲುನಾಯಿಗಳಂತೆ ಕಾಯಿರಿ,ಲೋಪದೋಷಗಳಿದ್ದರೆ ತಕ್ಷಣಕ್ಕೆ ಗಮನಕ್ಕೆ ತನ್ನಿ ಎಂದು ಆದೇಶಿಸಿ,ಅಂತದ್ದೊಂದು ಅಧಿಕಾರ ನೀಡುವ ಸರ್ಕಾರಗಳೇ ಇನ್ನೊಂದೆಡೆ  ಎಷ್ಟೋ ಸವಾಲುಗಳನ್ನು ಮೆಟ್ಟಿ ನಿಂತು,ಎಲ್ಲರ ವಿರೋಧ ಕಟ್ಟಿಕೊಂಡು,ಜೀವವನ್ನೇ ಪಣಕ್ಕಿಟ್ಟು ಕೆಲಸ ಮಾಡುವ  ಅಂಥಾ ಅಧಿಕಾರಿಗಳನ್ನು ರಕ್ಷಿಸುವ ಬದಲು, ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಶಿಕ್ಷಿಸುವ ಕೆಲಸ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ.ಇದಕ್ಕೊಂದು ಜ್ವಲಂತ ಉದಾಹರಣೆ, ಕರ್ನಾಟಕ ಕಂಡ ಅತ್ಯಂತ ಖಡಕ್ ಹಾಗೂ ದಕ್ಷ ಕೆಎಎಸ್ ಅಧಿಕಾರಿಗಳಲ್ಲಿ ಒಬ್ಬರಾದ ಶ್ರೀಮತಿ ಆಶಾ ಪರ್ವಿನ್.ವಿಕ್ಟೋರಿಯಾ  ಆಸ್ಪತ್ರೆಯ ನೆಫ್ರೋ ಯುರಾಲಜಿ ವಿಭಾಗದ ಆಡಳಿತಾಧಿಕಾರಿಯಾಗಿರುವ ಆಶಾ ಪರ್ವಿನ್,ಅಲ್ಲಿನ ನಿರ್ದೇಶಕ ಡಾ.ಶಿವಲಿಂಗಯ್ಯ ಅವರ ಆಡಳಿತಾವಧಿಯಲ್ಲಿ ನಡೆಸಿದ್ದಾರೆನ್ನಲಾದ   ಅಂದಾದರ್ಬಾರ್, ಸರ್ವಾಧಿಕಾರಿ ವರ್ತನೆಯನ್ನು ಸಾಕ್ಷ್ಯ ಸಮೇತ ಸರ್ಕಾರದ ಗಮನಕ್ಕೆ ತಂದಿದ್ದಕ್ಕೆ ಪಡೆದ ಬಹುಮಾನ ಏನ್ ಗೊತ್ತಾ..!? ವರ್ಗಾವಣೆ..

ಕನ್ನಡ ಫ್ಲ್ಯಾಶ್ ನ್ಯೂಸ್ ಸದಾ ಅನ್ಯಾಯದ ವಿರುದ್ಧ ತನ್ನ ದ್ವನಿ ಎತ್ತುತ್ತಲೇ ಬಂದಿದೆ. ಕರ್ನಾಟಕ ಕಂಡ ಕೆಲವೇ ಕೆಲವು ದಕ್ಷ-ಪ್ರಾಮಾಣಿಕ ಕೆಎಎಸ್ ಅಧಿಕಾರಿಗಳಲ್ಲಿ ಒಬ್ಬರಾದ  ಆಶಾ ಪರ್ವಿನ್ ಅವರಂಥ ಅಧಿಕಾರಿಣಿಗೆ ಆಗಿರುವ ಅನ್ಯಾಯದ ಸನ್ನಿವೇಶದಲ್ಲೂ ಅವರ ಪರವಾಗಿ ನಿಲ್ಲುತ್ತಿದೆ.ಇದು ಒಂದು ಜವಾಬ್ದಾರಿಯುತ ಮಾದ್ಯಮವಾಗಿ ನಮ್ಮ ಕರ್ತವ್ಯ ಹಾಗೂ ಬದ್ಧತೆ ಕೂಡ.ವಿಕ್ಟೋರಿಯಾ ಅಸ್ಪತ್ರೆಯ ನೆಫ್ರೋ ಯುರಾಲಜಿ ವಿಭಾಗದ ಆಡಳಿತಾಧಿಕಾರಿಯಾಗಿ ಬಂದಾಗಿನಿಂದ ಆಸ್ಪತ್ರೆಯ ವ್ಯವಸ್ಥೆಯನ್ನು ಸರಿಪಡಿಸುವ ಕೆಲಸದಲ್ಲಿ ಆಶಾ ಪರ್ವಿನ್ ಅವರ ಕೊಡುಗೆ ನಿರ್ಣಾಯಕ ಮತ್ತು ಮಹತ್ವದ್ದು.ಹಿಂದಿನ ನಿರ್ದೆಶಕ ಹಾಗೂ ಹಾಲಿ ನಿರ್ದೇಶಕ ಡಾ.ಶಿವಲಿಂಗಯ್ಯ ಅವರ ಕಾಲಾವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ-ಅವ್ಯವಹಾರ-ಅವ್ಯವಸ್ಥೆಗಳನ್ನು ಪತ್ತೆ ಮಾಡಿದ್ದಲ್ಲದೇ ಅದಕ್ಕೆ ಪೂರಕವಾದ ಸಾಕ್ಷ್ಯಗಳನ್ನು ಕ್ರೋಢೀಕರಿಸಿ ಸರ್ಕಾರಕ್ಕೆ 31 ಪುಟಗಳ ವರದಿಯ ರೂಪದಲ್ಲಿ ಸಲ್ಲಿಸಿದ್ರೆ ಅದನ್ನು ಪುರಸ್ಕರಿಸುವ ಬದಲು ಸರ್ಕಾರ ಆಶಾ ಪರ್ವಿನ್ ಅವರಿಗೆ ಕೊಟ್ಟ ರಿವಾರ್ಡ್ ಏನ್ ಗೊತ್ತಾ, ಟ್ರಾನ್ಸ್ ಫರ್..ಇದು ಅನ್ಯಾಯವಲ್ಲದೇ ಇನ್ನೇನು ಅಲ್ವಾ..?

ಆಶಾ ಪರ್ವಿನ್ ಅಕ್ರಮ ಪತ್ತೆ ಮಾಡಿದ್ದೇ ತಪ್ಪಾ..?ಅದರಲ್ಲಿ ಅವರ ಲೋಪವೇನು..?ಅಷ್ಟಕ್ಕೂ ಆಶಾ ಪರ್ವಿನ್ ಮಾಡಿದ ಕೆಲಸವೇನು ಗೊತ್ತಾ..? 29-01-2025 ರಿಂದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಶಿವಲಿಂಗಯ್ಯ ಅವರು ಆಸ್ಪತ್ರೆ ವಾತಾವರಣವನ್ನು ಕುಲಗೆಡಿಸು ವಂತ ಕೆಲಸ ಮಾಡಿರುವುದನ್ನು ಸಾಕ್ಷ್ಯ ಸಮೇತ ಪತ್ತೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು..ಈ ವಿಷಯದಲ್ಲಿ ಅವರ ನಿಲುವು ಸ್ಪಷ್ಟ ಮತ್ತು ಅಚಲವಾಗಿತ್ತೆನ್ನುವುದು ಸ್ಪಷ್ಟ ನೆಫ್ರೋ ಯುರಾಲಜಿ ಸಂಸ್ಥೆಯ ಜವಾಬ್ದಾರಿಯುತ ನಿರ್ದೇಶಕರಾಗಿದ್ದುಕೊಂಡು ಡಾ.ಶಿವಲಿಂಗಯ್ಯ ಅದರ ಘನತೆ-ಮಹತ್ವ ಮರೆತು,ಪ್ರತಿಷ್ಟೆಯನ್ನು ಗಾಳಿಗೆ ತೂರುವ ಕೆಲಸ ಮಾಡಿದ್ದನ್ನು ಎಳೆ ಎಳೆಯಾಗಿ ಆಶಾ ಪರ್ವಿನ್ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದರು.ಶಿವಲಿಂಗಯ್ಯ ಹೇಗೆ..ಯಾವೆಲ್ಲಾ ರೀತಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ.ಸ್ವಜನ ಪಕ್ಷಪಾತ ನಡೆಸಿದ್ದಾರೆ.ಅರಾಜಕತೆ ಹಾಗೂ ಲಂಚಗುಳಿತನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎನ್ನುವುದನ್ನು ಸಾಕ್ಷ್ಯಗಳ ಸಮೇತ ರುಜುವಾತು ಪಡಿಸಿದ್ದರು ಅಶಾ ಪರ್ವಿನ್.

ALSO READ :  ಈ ಸುದ್ದಿ ನಮ್ಮಲ್ಲಿ ಮಾತ್ರ…POLITICAL EXCLUSIVE… ಕಾಂಗ್ರೆಸ್ ಗೆ ಗುಡ್ ಬೈ..! ಬಿಜೆಪಿಗೆ ಜೈ..ಜೈ.. ! 60 ಶಾಸಕರಿಗೆ ಗಾಳ....! 42 ಶಾಸಕರ ಲೀಸ್ಟ್ ರೆಡಿ..! ನವೆಂಬರ್ ಗೆ "ಡಿಕೆಶಿ" ಜಂಪಿಂಗ್ ಪಕ್ಕಾ..!

ನಾನೂ ಒಂದ್ರೀತಿ ಕನಕಪುರದ ಬಂಡೆಯಂತೆ..ಬಗ್ಗೊಲ್ಲ..ಜಗ್ಗೊಲ್ಲ:ಮಾತೆತ್ತಿದರೆ ನಾನು ಡಿಸಿಎಂ ಡಿಕೆಶಿವಕುಮಾರ್ ಅವರ ಕ್ಷೇತ್ರವಾದ ಕನಕಪುರದ ಸಾತನೂರಿನ ವನು.ನನಗೆ ಅವರ ಶ್ರೀರಕ್ಷೆ-ಕೃಪಕಟಾಕ್ಷವಿದೆ..ನನ್ನನ್ನು ಯಾರೂ ಮಾಡಿಕೊಳ್ಳಲಾಗೊಲ್ಲ.ನಾನು ಕೂಡ ಒಂದ್ರೀತಿ ಕನಕಪುರದ ಬಂಡೆ ಇದ್ದಂತೆ ಎಂದು ಹೇಳುತ್ತಲೇ ಎಲ್ಲರನ್ನು ಹೆದರಿಸಿ-ಬೆದರಿಸಿಕೊಂಡಿದ್ದಾರೆ ನ್ನುವ ಆಪಾದನೆ ಅವರ ಮೇಲಿದೆ.ಅವರ ಕೆಲಸಕ್ಕೆ ಅಡ್ಡ ಬರುವವರನ್ನು ಕಂಟ್ರೋಲ್ ನಲ್ಲಿಟ್ಟುಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರಂತೆ.ಇದನ್ನು ಕೂಡ ಆಶಾ ಪರ್ವಿನ್ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಕೆಳ ಹಂತದ ಸಿಬ್ಬಂದಿ ರೋಗಿಗಳನ್ನು ಸುಲಿಗೆ ಮಾಡುವ ಪ್ರವೃತ್ತಿಗೆ ಕಡಿವಾಣ ಹಾಕುವ ಸಾಧ್ಯತೆಗಳಿದ್ರೂ ಅದರ ಬಗ್ಗೆ ತುಟಿ ಬಿಚ್ಚಲೇ ಇಲ್ಲವಂತೆ ಡಾ.ಶಿವಲಿಂಗಯ್ಯ, .ಅಕ್ರಮಗಳು ಅವ್ಯಾಹತವಾಗಿ ನಡೆಯೊಕ್ಕೆ ಅವರ ಮೌನವೇ ಸಹಕಾರಿಯಾಯಿತೆ ನ್ನುವ ಸಂಗತಿಯನ್ನೂ ಕೂಡ ಮಾರ್ಮಿಕವಾಗಿ ಆಶಾ ಪರ್ವಿನ್ ವಿವರಿಸಿದ್ದಾರೆ.

ತಮ್ಮ  31 ಪುಟಗಳ ವರದಿಯಲ್ಲಿ ಡಾ.ಶಿವಲಿಂಗಯ್ಯ ಅವರ ವಿರುದ್ಧದ ಆಪಾದನೆಗಳನ್ನು ಸಾಕ್ಷ್ಯ ಸಮೇತ ಆಶಾ ಪರ್ವಿನ್ ಅವರು ಉಲ್ಲೇಖಿಸಿದ್ದಾರೆ.ಇದರಲ್ಲೆಲ್ಲಾ ನಿರ್ದೇಶಕರ ಅಕ್ರಮಗಳು, ಅವ್ಯವಹಾರಗಳು, ಅಧಿಕಾರ ದುರ್ಬಳಕೆ,ಸ್ವಜನ ಪಕ್ಷಪಾತ,ಭ್ರಷ್ಟಾಚಾರ ಎದ್ದು ಕಾಣುತ್ತವೆ. ಯಾವುದೋ ಪೂರ್ವಾಗ್ರಹಕ್ಕೆ ಒಳಗಾಗಿ ಆಪಾದನೆ ಮಾಡಿಲ್ಲ ಎನ್ನುವುದಕ್ಕೆ  ಪ್ರತಿಯೊಂದು  ಆಪಾದನೆಗೂ ಪೂರಕವಾ್ದ ಸಾಕ್ಷ್ಯವನ್ನು ಅವರು  ಒದಗಿಸಿದ್ದಾರೆ.ಸಿಬ್ಬಂದಿಯ ಲಂಚಗುಳಿತನಕ್ಕೆ ವೀಡಿಯೋ,ಆಡಿಯೋ ಸಾಕ್ಷ್ಯ ಒದಗಿಸಿದ್ದಾರೆ.ಕರ್ತವ್ಯಲೋಪ ಎಸಗಿರುವುದನ್ನು ತಮ್ಮ ಬಳಿ ಲಿಖಿತವಾಗಿಯೇ ಒಪ್ಪಿಕೊಂಡಿರುವುದನ್ನು ಕೂಡ ವರದಿಯಲ್ಲಿ ಅಡಕಗೊಳಿಸಿದ್ದಾರೆ.ಮಹಿಳಾ ಸಿಬ್ಬಂದಿ ಜತೆಗಿನ ಅವರ ನಡುವಳಿಕೆ-ವ್ಯವಹಾರದ ಬಗ್ಗೆಯೂ ಸಂ ತ್ರಸ್ಥರೆನಿಸಿಕೊಂಡವರ ಹೇಳಿಕೆಯನ್ನು ಆಧರಿಸಿ ದಾಖಲೆ ನೀಡಿದ್ದಾರೆ.

ಹೀಗೆ ಡಾ,ಶಿವಲಿಂಗಯ್ಯ ಅವರು ತಮ್ಮ ಅಧಿಕಾರವಧಿಯಲ್ಲಿ ನಡೆಸಿರುವ/ನಡೆಸುತ್ತಿರುವ ಅಕ್ರಮಕ್ಕೆ ದಾಖಲೆಗಳನ್ನು ನೀಡಿಯೇ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ವರದಿ ಸಲ್ಲಿಸಿದ್ದಾರೆ.ಆದರೆ ವರದಿಯನ್ನು ಅವಲೋಕಿಸುವ ಮೊದಲೇ ಆಶಾ ಪರ್ವಿನ್ ಅವರನ್ನು ಆಡಳಿತಾಧಿಕಾರಿ ಸ್ಥಾನದಿಂದ ಬಿಡುಗಡೆಗೊಳಿಸಿದೆ.ಅಂದರೆ ವರ್ಗಾವಣೆ ಮಾಡಿದೆ. ನಿರ್ದೇಶಕರು ನಡೆಸಿದ್ದಾರೆನ್ನಲಾಗುತ್ತಿರುವ ಅಕ್ರಮವನ್ನು ಸಾಕ್ಷ್ಯ ಸಮೇತ ಪತ್ತೆ ಮಾಡಿಕೊಟ್ಟಿದ್ದೇ ತಪ್ಪೆನ್ನುವ ರೀತಿಯ ಸಂದೇಶವನ್ನು ಇಲಾಖೆ ರವಾನಿಸಿದೆ ಎನ್ನುವುದು ಇದರಿಂದ ಸ್ಪಷ್ಟವಾದಂತಿದೆ.

ಹುದ್ದೆಯ ಗೌರವಕ್ಕೆ-ಪ್ರತಿಷ್ಟೆಗೆ ಚ್ಯುತಿ ಬರದಂತೆ ಕೆಲಸ ಮಾಡಿದ ತನ್ನನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಅಭಿನಂದಿಸಬೇಕಿತ್ತು,.ಆದರೆ ಬದಲಿಗೆ ವರ್ಗಾವಣೆ ಮಾಡಿರುವುದಕ್ಕೆ ಆಶಾ ಪರ್ವಿನ್ ಅಘಾತಕ್ಕೊಳಗಾಗಿ ದ್ದಾರೆ.ತಾನು ಮಾಡಿದ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.ಅದು ಸಹಜ ಕೂಡ. ಸರ್ಕಾರ ತನ್ನನ್ನು ನೇಮಿಸಿದ್ದೇ ಆಸ್ಪತ್ರೆಯಲ್ಲಿನ ಅಡಳಿತವನ್ನು ಸ್ವಚ್ಛ ಮತ್ತು ಪಾರದರ್ಶಕ ಗೊಳಿಸಲು. ಹಾಗೂ ಆಸ್ಪತ್ರೆಯ ಸೇವೆಗಳನ್ನು ಸಾರ್ವಜನಿಕರಿಗೆ ದೊರಕುವಂತೆ ಮಾಡಲು.ಆದರೆ ಆ ಪ್ರಯತ್ನ ಸರಿಯಾಗಿ ಆಗುತ್ತಿಲ್ಲ.. ನಿರ್ದೇಶಕರು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿಲ್ಲ ಎನ್ನುವುದನ್ನು ಸಾಕ್ಷ್ಯ ಸಮೇತ ಪತ್ತೆ ಮಾಡಿಕೊಟ್ಟರೆ ಸ್ಥಾನದಿಂದಲೇ ವರ್ಗಾವಣೆ ಮಾಡಿದ್ರೆ ಹೇಗೆ..?ಎಂದು ನೋವಿನಿಂದ ಪ್ರಶ್ನಿಸಿದ್ದಾರೆ.ಸುಳ್ಳು ಹೇಳುವವರು-ಅನ್ಯಾಯ ಮಾಡುವವರ ಬೆನ್ನಿಂದೆ ಸಾವಿರ ಜನ ಇರುತ್ತಾರೆ.ಆದರೆ ಸತ್ಯ –ಪ್ರಾಮಾಣಿಕತೆ ಇರೋರ ಜತೆ ಯಾರೂ ಇರೊಲ್ಲ ಎನ್ನುವ ಮಾತಿದೆ.ಅದು ಆಶಾ ಪರ್ವಿನ್ ಅವರ ವಿಷಯದಲ್ಲಿ ಸತ್ಯವಾಗಿದೆ.ಆದರೆ ಪರಿಸ್ಥಿತಿ ಹೀಗೆಯೇ ಇರುವುದಿಲ್ಲ..ಸತ್ಯದ ಹೋರಾಟಕ್ಕೆ ಜಯ ದೊರೆಯುವುದು ತಡವಾದ್ರೂ ಸತ್ಯ..

ನೂತನ ಅಧಿಕಾರಿಯ ನಿಯೋಜನೆ ಕೂಡ ತಾಂತ್ರಿಕವಾಗಿ ಕಾನೂನುಬಾಹಿರ..! ಆಶಾ ಪರ್ವಿನ್ ಅವರ ಹುದ್ದೆಗೆ ನಿಯೋಜನೆಗೊಂಡಿರುವ ಮಹಿಳಾ ಅಧಿಕಾರಿ ಕೂಡ ತಾಂತ್ರಿಕ ವಾಗಿ ಅರ್ಹರಲ್ಲ ಎನ್ನುವ  ಮಾತು ಕೇಳಿಬಂದಿದೆ.ಕೆಎಎಸ್ ಅಧಿಕಾರಿಯೇ ಆಡಳಿತಾಧಿಕಾರಿ ಯಾಗಿ ಕೆಲಸ ಮಾಡಬೇಕು.ಅದೇ ಆ ಹುದ್ದೆಗೆ ನಿಜವಾದ ಅರ್ಹತೆ ಎಂದು ನಿಯಮಗಳೇ ಹೇಳುತ್ತವಂತೆ.ಆದರೆ ಈಗ ಬಂದಿರುವ ಅಧಿಕಾರಿಣಿ ಕೆಎಂಎಎಸ್( ಕರ್ನಾಟಕ ಮುನ್ಸಿಪಾಲಿಟಿ ಅಡ್ಮಿನಿಸ್ಟ್ರೇಷನ್ ಸರ್ವಿಸ್) ಅಂತೆ.ಅಂಥವರನ್ನು ಆಡಳಿತಾಧಿಕಾರಿ ಹುದ್ದೆಗೆ ತಂದು ಕೂರಿಸಿರುವುದರ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.ಇವರ ನೇಮಕ ಕೂಡ ಕಾನೂನು ಬಾಹಿರ ಎಂದಿರುವ ಸಾಮಾಜಿಕ ಕಾರ್ಯಕರ್ತರು ಇದನ್ನು ಕೂಡ ಕಾನೂನಾತ್ಮಕವಾಗಿ ಪ್ರಶ್ನಿಸಲಾಗುವುದು ಎಂದಿದ್ದಾರೆ.ಆ ಅಧಿಕಾರಿಯ ದಿಢೀರ್ ಹಾಗೂ ಅವಸರದ ನಿಯೋಜನೆ ಹಿಂದೆಯೂ ಡಾ.ಶಿವಲಿಂಗಯ್ಯ ಅವರ ಕೈವಾಡ ಇರಬಹುದೆನ್ನುವುದು ಹೋರಾಟಗಾರ ಆಪಾದನೆ.


Political News

ಸವಾಲುಗಳ ನಡುವೆ ಬಿಎಂಟಿಸಿ ಅಧ್ಯಕ್ಷರಾಗಿ ನಿಕೇತ್ ರಾಜ್ ಮೌರ್ಯ ನೇಮಕ..

ಹುಡುಕಿಕೊಡಿ.! ಪರಿಶಿಷ್ಟರ “ಅಭ್ಯುದಯ”ಕ್ಕೆ ನಿರ್ಮಿಸಬೇಕಿದ್ದ “ಸಮುದಾಯ ಭವನ”ವೇ ಮಿಸ್…!

“ಸಾರಿಗೆ ಕೂಟ”ದ ಚಂದ್ರು ಅಕ್ಷರಶಃ ಒಂಟಿಯಾದ್ರಾ ..!ಜತೆಗಿದ್ದವರೆಲ್ಲಾ ದೂರ..ದೂರವಾದ್ರಾ..?

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

ಜೋಗ್-ಕಾರ್ಗಲ್ ನಲ್ಲಿ ಮಟ್ಕಾ ದಂಧಗೆ ಬಲಿಯಾಯ್ತು ಜೀವ…!

INSIDE THE TRUTH….ಮುರಿದುಬಿದ್ದ ಮಾತುಕತೆ- ಬೇಡಿಕೆಗಳಿಗೆ ಸೊಪ್ಪಾಕದ ಸರ್ಕಾರ-14 ತಿಂಗಳ ಹಿಂಬಾಕಿ 700 ಕೋಟಿ ಬಿಡುಗಡೆಗಷ್ಟೇ ಸರ್ಕಾರ ಒಪ್ಪಿಗೆ…

ನಾಳೆ ಸಾರಿಗೆ ಮುಷ್ಕರ ಇಲ್ಲ, ಒಂದು ದಿನ ಮುಂದೂಡಿಕೆ :ಹೈಕೋರ್ಟ್ ಆದೇಶ

Scroll to Top