
ಕೆಲವೇ ಕ್ಷಣಗಳ ಮುನ್ನ ಹೊರಬಿದ್ದ ಆದೇಶದಲ್ಲಿ ವಿವಾದಿತ ಐಎಫ್ ಎಸ್ ಅಧಿಕಾರಿ ಗೋಕುಲ್ ಅವರನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಹುದ್ದೆಗೆ ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ.ಇಷ್ಟು ದಿನ ಸದಸ್ಯ ಕಾರ್ಯದರ್ಶಿ ಯಾಗಿದ್ದ ಐಎಫ್ ಎಸ್ ಲಿಂಗರಾಜ್ ಅವರಿಗೆ ಹುದ್ದೆ ತೋರಿಸದೆ ವರ್ಗಾವಣೆ ಮಾಡಲಾಗಿದೆ.

ಅಕ್ರಮ-ಹಗರಣ-ಭ್ರಷ್ಟಾಚಾರಗಳ ಗೂಡಾಗಿರುವ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಯಲ್ಲಿ ಲಿಂಗರಾಜ್ ವರ್ಗಾವಣೆ ಬಗ್ಗೆ ಹಲವಾರು ರೀತಿಯ ವಿಶ್ಲೇಷಣೆ-ವ್ಯಾಖ್ಯಾನ ನೀಡಲಾಗುತ್ತಿದೆ.ಅಧ್ಯಕ್ಷ ನರೇಂದ್ರಸ್ವಾಮಿ ಅವರ ಜತೆ ಅಂಡರ್ ಸ್ಟ್ಯಾಂಡಿಂಗ್ ಸರಿಯಿರಲಿಲ್ಲ ಎನ್ನುವುದು ಮೊದಲ ಆಪಾದನೆಯಾದರೆ, ಮೇಲಾಧಿಕಾರಿಗಳ ಜತೆಗಿನ ಶೀತಲ ಸಮರದಿಂದಲೇ ವರ್ಗವಾಗಿದೆ ಎನ್ನಲಾಗ್ತಿದೆ.

ಅಧ್ಯಕ್ಷ ನರೇಂದ್ರಸ್ವಾಮಿ ಅವರ ಸ್ಪೀಡ್ ಗೆ ಲಿಂಗರಾಜ್ ಹೊಂದಾಣಿಕೆ ಆಗುತ್ತಿರಲಿಲ್ಲ. ಅವರು ಸೂಚನೆ ನೀಡಿದ ಕೆಲಸಗಳನ್ನು ಮಾಡುತ್ತಿರಲಿಲ್ಲ..ಇದರಿಂದ ಅಧ್ಯಕ್ಷರ ಜತೆಗಿನ ಸಂಬಂಧ ಹಳಸಿತ್ತು ಎನ್ನುವ ಮಾತುಗಳಿವೆ.ನನ್ನ ವೇವ್ ಲೆಂಥ್ ಗೆ ಅಡ್ಜೆಸ್ಟ್ ಆಗದ ಅಧಿಕಾರಿಯನ್ನು ಇಟ್ಟುಕೊಂಡು ಏನ್ ಮಾಡೋದೆಂದು ಸರ್ಕಾರದ ಲೆವಲ್ ನಲ್ಲಿ ಪ್ರಭಾವ ಬೀರಿ ಲಿಂಗರಾಜ್ ಅವರನ್ನು ವರ್ಗ ಮಾಡಲಾಗಿದೆ ಎನ್ನುವುದು ಬೋರ್ಡ್ ನಲ್ಲಿ ಕೇಳಿಬರುತ್ತಿರುವ ಮಾತು.
ಇನ್ನು ಕೆಲವು ಮೂಲಗಳ ಪ್ರಕಾರ ಇಲಾಖೆಯ ಮುಖ್ಯಾಧಿಕಾರಿಗಳ ಲೆವಲ್ ನಲ್ಲೇ ಲಿಂಗರಾಜ್ ಸರಿಯಾಗಿರಲಿಲ್ಲ. ತುಂಬಾ ಒರಟು ಒರಟಾಗಿ ವರ್ತಿಸ್ತಿದ್ದರು.ಅವರ ಕಾರ್ಯವೈಖರಿ ಮೇಲಾಧಿಕಾರಿಗಳಿಗೆ ಸರಿ ಬರುತ್ತಿರಲಿಲ್ಲವಂತೆ.ಇದರ ಜತೆಗೆ ಅವರ ಕಾರ್ಯವೈಖರಿ ಬಗ್ಗೆಯೂ ಸಾಕಷ್ಟು ಆರೋಪ-ದೂರುಗಳು ಬಂದಿದ್ವಂತೆ.ಇಲಾಖೆ ಅಧಿಕಾರಿಗಳಿಗೆ ಬೇಕಾಗಿದ್ದು ಇದೇ ಆದ್ದರಿಂದ ತಕ್ಷಣವೇ ಅವರಿಗೆ ಸ್ಥಳ ತೋರಿಸದೆ ವರ್ಗಾವಣೆ ಮಾಡಿದ್ದಾರೆನ್ನುವ ಸುದ್ದಿ ಪಸರ್ ಆಗ್ತಿದೆ.

ಲಿಂಗರಾಜ್ ಸ್ಥಾನಕ್ಕೆ ಹಿರಿಯ ಐಎಫ್ ಎಸ್ ಅಧಿಕಾರಿ ಗೋಕುಲ್ ಅವರನ್ನು ನಿಯೋಜಿಸಲಾಗಿದೆ.ಗೋಕುಲ್ ಸಾಕಷ್ಟು ವಿವಾದಗಳ ಕಾರಣಕ್ಕೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ಅಧಿಕಾರಿ.ಅಲ್ಲದೇ ತಮ್ಮ ವಿರುದ್ಧ ಆಪಾದನೆ ಮಾಡಿದವರ ವಿರುದ್ದವೇ ಸಿಬಿಐಗೆ ದೂರು ನೀಡಿ ಸುದ್ದಿಯಲ್ಲಿದ್ದರು.ಅವರನ್ನು ಕೂಡ ಅವರು ಕೆಲಸ ಮಾಡ್ತಿದ್ದ ಸ್ಥಳದಿಂದ ವರ್ಗ ಮಾಡಲಾಗಿತ್ತು.ಲಿಂಗರಾಜ್ ಅವರ ಸ್ಥಾನಕ್ಕೆ ಇವರೇ ಸೂಕ್ತ ಎಂದು ಭಾವಿಸಿ ತಕ್ಷಣಕ್ಕೆ ಜಾರಿಗೆ ಬರುವಂತೆ ಗೋಕುಲ್ ಅವರನ್ನು ನಿಯೋಜನೆ ಮಾಡಲಾಗಿದೆ.

ಗೋಕುಲ್ ಅವರ ಆಗಮನ ಮತ್ತು ಲಿಂಗರಾಜ್ ಅವರ ವರ್ಗಾವಣೆಯಿಂದ ಮಂಡಳಿಯಲ್ಲಿ ಕೋಲಾಹಲವೇ ಸೃಷ್ಟಿಯಾಗಿದೆ.ವಿವಾದಿತ ಅಧಿಕಾರಿ ತಮ್ಮ ಕಾರ್ಯವೈಖರಿಯಿಂದ ಇಲ್ಲಿಯೂ ವಿವಾದಗಳನ್ನು ಮುಂದುವರೆಸಿಕೊಂಡು ಹೋಗ್ತಾರೋ,ಅಥವಾ ಬದಲಾದ ಶೈಲಿಯಲ್ಲಿ ಕೆಲಸ ಮಾಡ್ತಾರೋ ಕಾದು ನೋಡಬೇಕಿದೆ.ಇವರ ಆಗಮನದಿಂದ ಅಧ್ಯಕ್ಷ ನರೇಂದ್ರಸ್ವಾಮಿ ಹಾಗೂ ಅವರ ಆಪ್ತ ವಲಯದಲ್ಲಿ ಸಂತಸ ಮನೆ ಮಾಡಿದೆ ಎನ್ನಲಾಗ್ತಿದೆ.
ಅ ಲಿಂಗರಾಜ್










