

ಬೆಂಗಳೂರು: ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಎನ್ನುವ ಗಾಧೆ ನೆನಪಿಸುತ್ತದೆ ಬಿಎಂಟಿಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹಠಮಾರಿ ಧೋರಣೆ. ಬಿಎಂಟಿಸಿ ಎನ್ನುವ ಸಂಸ್ಥೆ ಮುನ್ನಡೆಸಿಕೊಂಡು ಹೋಗಲು ಖಜಾನೆಯಲ್ಲಿ ಹಣದ ಕೊರತೆ ಬಾಧಿಸುತ್ತಿರುವಾಗಲೇ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಹೊಸ ಹಾಗೂ ದುಬಾರಿ ಕಾರಿನ ಕ್ರೇಜ್ ಶುರುವಾಗಿದೆಯಂತೆ ನೋಡಿ..ತನಗೆ ಐಷಾರಾಮಿ ಹಾಗೂ ದುಬಾರಿ ಬೆಲೆಯ ಕಾರು ಬೇಕೇ, ಬೇಕೆಂದು ಹಠ ಮಾಡಿ ಅಧ್ಯಕ್ಷ ಆರಾಧ್ಯ ಅದನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿ ದ್ದಾರಂತೆ.ಅಧ್ಯಕ್ಷರಿಗೆ ಹೊಸ ಕಾರು ಸಿಗುತ್ತಿದ್ದಂತೆ ಉಪಾಧ್ಯಕ್ಷ ನಿಕೇತ್ ಮೌರ್ಯ ಕೂಡ ತನಗೂ ಅವರಂತೆಯೇ ಹೊಸ ಹಾಗು ದುಬಾರಿ ಕಾರು ಬೇಕೆಂದು ಹಠ ಹಿಡಿದು ಕೂತಿದ್ದಾರೆನ್ನುವ ಮಾತು ಕೇಳಿಬರುತ್ತಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ( ಬಿಎಂಟಿಸಿ)ಯ ಸ್ಥಿತಿ ಹೇಗಿದೆ ಎನ್ನುವುದನ್ನು ನಾವ್ ಹೇಳಬೇಕಿಲ್ಲ.ಖಜಾನೆಯ ಪರಿಸ್ತಿತಿಯೇ ಇದನ್ನು ಸಾರಿ ಹೇಳುತ್ತದೆ. ಸಾರಿಗೆ ಸಿಬ್ಬಂದಿಗೆ ಸಂಬಳ-ಭತ್ಯೆ ಸೇರಿದಂತೆ ಅವರಿಗೆ ಸಿಗಬೇಕಾದ ಕನಿಷ್ಟ ಸೌಲಭ್ಯ ಪೂರೈಸ್ಲಿಕ್ಕಾಗದ ಸ್ಥಿತಿಯಲ್ಲಿ ಬಿಎಂಟಿಸಿಯಿದೆ.ಇದನ್ನು ಖಂಡಿಸಿ ಸಾರಿಗೆ ಸಿಬ್ಬಂದಿ ಮುಷ್ಕರಕ್ಕೆ ಸಿದ್ದರಾಗುತ್ತಿದ್ದಾರೆ.ಇದನ್ನು ಸರಿಪಡಿಸಬೇಕಾದ ಕೆಲಸ ಕೇವಲ ಸಚಿವ ರಾಮಲಿಂಗಾರೆಡ್ಡಿ ಅವರದ್ದು ಮಾತ್ರವಲ್ಲ.ಅದು ಅಧ್ಯಕ್ಷ-ಉಪಾಧ್ಯಕ್ಷರ ಹೊಣೆ ಕೂಡ.ಅದನ್ನು ಮಾಡಬೇಕಿರುವ ಆರಾಧ್ಯ ಮತ್ತು ನಿಕೇತ್ ಮೌರ್ಯ ತಮಗೆ ಕಾರು ಬೇಕೆನ್ನುವ ವ್ಯಥಾ ಪ್ರಲಾಪದಲ್ಲಿ ತೊಡಗಿದ್ದಾರೆ್ನ್ನುವ ಮಾಹಿತಿ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಲಭಿಸಿದೆ.

ಅಧ್ಯಕ್ಷ ಆರಾಧ್ಯ ಅವರು ಅಧಿಕಾರ ಸ್ವೀಕಾರ ಮಾಡಿ ಬಹಳಷ್ಟು ಸಮಯ ಆಗಿಲ್ಲ.ಬಿಎಂಟಿಸಿಯ ವ್ಯವಸ್ಥೆ ಮತ್ತು ಸಿಬ್ಬಂದಿಯ ಸಮಸ್ಯೆಯನ್ನು ಎಷ್ಟರ ಮಟ್ಟಿಗೆ ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವುದನ್ನು ಗಮನಿಸಿದರೆ ಶೂನ್ಯ ಎನ್ನುವ ಉತ್ತರ ದೊರೆಯುತ್ತದೆ. ಅವರ ಹೋಲಿಕೆಯಲ್ಲಿ ನಿಕೇತ್ ಮೌರ್ಯ ಅವರ ಫರ್ಫಾಮೆನ್ಸ್ ಸಹನೀಯ ಎನಿಸುತ್ತದೆ.ಹಾಗೆಂದು ಅವರ ಧೋರಣೆ ಕೂಡ ಖಂಡನಾರ್ಹ ಮತ್ತು ಪ್ರಶ್ನಾರ್ಹ.ಜ್ವಲಂತವಾಗಿರುವ ಸಾಕಷ್ಟು ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕಿರುವ ಇವರಿಬ್ಬರು ಸಧ್ಯಕ್ಕೆ ದುಬಾರಿ ಮತ್ತು ಐಷಾರಾಮಿ ಕಾರಿನ ಹಿಂದೆ ಬಿದ್ದಿದ್ದಾರೆ ಎನ್ನುವ ಮಾತಿದೆ.ಈ ಪೈಕಿ ಆರಾಧ್ಯ ಹೊಸ ಕಾರನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರಂತೆ.

ಅಧ್ಯಕ್ಷ ಆರಾಧ್ಯ ಅವರು ಅಧಿಕಾರ ವಹಿಸಿಕೊಂಡ ದಿನದಿಂದಲೂ ಹೊಸ ಕಾರು ಬೇಕೆನ್ನುವ ಹಠಕ್ಕೆ ಬಿದ್ದಿದ್ದರಂತೆ.ಅದು ಕೂಡ ಸಾಮಾನ್ಯ ಕಾರಲ್ಲ.ಇನ್ನೋವಾ ಕ್ರಿಸ್ಟಾನೇ ಬೇಕೆಂದ ಹಠ ಹಿಡಿದಿದ್ದರಂತೆ. ಅದಕ್ಕಾಗಿ ಇಡೀ ಆಡಳಿತದ ಬೆನ್ನಿಗೆ ಬಿದ್ದಿದ್ದರಂತೆ.ಅವರ ಒತ್ತಡ-ಹಠ ನೋಡಲಿಕ್ಕಾಗದೆ ಕೊನೆಗೂ ಕೆಎ 57-6609 ನೊಂದಣಿ ಸಂಖ್ಯೆಯ ಕಾರನ್ನು ಅವರಿಗೆ ಮಂಜೂರು ಮಾಡಿದ್ದಾರಂತೆ.ಹೊಸ ಕಾರು ಸಿಕ್ಕ ದಿನದಿಂದಲೂ ಸಾಹೇಬ್ರು ಝಾಮ್ ಝೂಮ್ ಅಂಥ ಅಡ್ಡಾಡುತ್ತಲೇ ಇದ್ದಾರಂತೆ.

ಅಧ್ಯಕ್ಷರು ಹೊಸ ಕಾರು ಪಡೆಯುತ್ತಿದ್ದಂತೆ ಉಪಾದ್ಯಕ್ಷ ನಿಕೇತ್ ಮೌರ್ಯ ಅವರ ಹೊಟ್ಟೆಗೂ ಖಾರ ಹಾಕಿದಂತಾಗಿರಬೇಕು.(ಮೊದಲೇ ತನ್ನಿಂದ ಅಧ್ಯಕ್ಷ ಸ್ಥಾನ ಕಸಿದುಕೊಂಡರೆನ್ನುವ ಕೋಪ ಬೇರೆ ಒಂದು ಕಡೆ) ಹಾಗಾಗಿ ಅವರಿಗಿಂತ ನಾನೇನು ಕಡ್ಮೆ ಎಂದುಕೊಂಡು ತನಗೂ ಹೊಸ ಕಾರು ಬೇಕೆಂದು ಹಠ ಹಿಡಿದಿದ್ದಾರಂತೆ.ಅದು ಕೂಡ ಇನ್ನೋವಾ ಕ್ರಿಸ್ಟಾನೇ ಬೇಕೆಂದು ಅಂತೆ.ಇರುವ ವ್ಯವಸ್ಥೆಯಲ್ಲಿ ಅಧ್ಯಕ್ಷರಿಗೇ ಹೊಸ ಕಾರು ಕೊಡಲು ಹರಸಾಹಸ ಪಟ್ಟ ಆಡಳಿತ ಉಪಾಧ್ಯಕ್ಷರ ಹೊಸ ಬೇಡಿಕೆಗೆ ಕಕ್ಕಾಬಿಕ್ಕಿಯಾಗಿದೆ ಎನ್ನುವ ಮಾತಿದೆ. ಅವರನ್ನು ಸಮಾಧಾನಪಡಿಸಲು ಯತ್ನಿಸಿದರೂ ಬೇಕೇ ಬೇಕು ಎಂದು ತಮ್ಮ ರಚ್ಚೆ ಮುಂದುವರೆಸಿದ್ದಾರೆನ್ನುವುದು ಬಿಎಂಟಿಸಿ ಅಧಿಕಾರಯೊಬ್ಬರ ಅಸಹನೆಯ ಮಾತು.
ಪ್ರಸ್ತುತ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆಂದೇ ಇರುವ ಕಾರುಗಳು ಸುಸ್ಥಿತಿಯಲ್ಲಿವೆ.ಇನ್ಜೊಂದಷ್ಟಯ ವರ್ಷ ಆರಾಮಾಗಿ ಅಡ್ಡಾಡೊಕ್ಕೆ ಯಾವುದೇ ತೊಂದರೆ ಕೂಡ ಇಲ್ಲ.ಅವುಗಳ ಕ್ವಾಲಿಟಿ ಮತ್ತು ಫರ್ಫಾಮೆನ್ಸ್ ನಲ್ಲಿ ಏನಾದ್ರೊಂದಷ್ಟು ಕೊರತೆ-ಸಮಸ್ಯೆ ಕಂಡುಬಂದಿದ್ದರೆ ಹೊಸ ಪ್ರಯತ್ನಕ್ಕೆ ಕೈ ಹಾಕಬಹುದಿತ್ತೇನೋ..ಆದರೆ ಏನೂ ಸಮಸ್ಯೆ ಇಲ್ಲದಿರುವಾಗ ಹೊಸ ಕಾರುಗಳಿಗೆ ಬೇಡಿಕೆ ಇಟ್ಟು ಅದರಲ್ಲಿ ಅಧ್ಯಕ್ಷರು ಯಶಸ್ವಿಯಾಗಿ ಈಗ ಉಪಾಧ್ಯಕ್ಷರಿಗು ಅದನ್ನು ನೀಡಬೇಕಾದ ಪರಿಸ್ತಿತಿ ಸೃಷ್ಟಿಯಾಗಿರುವುದರಿಂದ ಆಡಳಿತ ಮುನಿಸಿಕೊಂಡಿದೆ ಎನ್ನಲಾಗುತ್ತಿದೆ.
ಬಿಎಂಟಿಸಿಯ ಸ್ತಿತಿ ಸರಿಯಿಲ್ಲದ ಸಮಯದಲ್ಲಿ ಇಬ್ಬರೂ ಕಾರಿನ ಬೇಡಿಕೆ ಇಟ್ಟು ಅದನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವುದು( ಉಪಾಧ್ಯಕ್ಷರಿಗು ಮಂಜೂರಾಗುವುದು ಬಹುತೇಕ ಸತ್ಯ) ನಿಜಕ್ಕೂ ಬೇಸರದ ವಿಚಾರ.ಇವರಿಬ್ಬರಿಗು ಹೊಸ ಕಾರಿನ ಅವಶ್ಯಕತೆ ಖಂಡಿತಾ ಇರಲಿಲ್ಲ.ಆಧರೆ ಯಾರೇ ಆದರೂ ಅವರೊಂದು ಸ್ಥಾನಮಾನಕ್ಕೆ ಹೋದ್ಮೇಲೆ ಸರಳತೆ-ಸಜ್ಜನಿಕೆ ಮರೆಯಾಗೋದು ಸಹಜ.ಅದು ಇವರಿಬ್ಬರ ವಿಷಯದಲ್ಲೂ ಆಗಿದೆಯಷ್ಟೆ..ಬಿಎಂಟಿಸಿಯನ್ನು ಉದ್ದಾರ ಮಾಡೋದು,ಸಿಬ್ಬಂದಿ ಸಮಸ್ಯೆ ಬಗೆಹರಿಸೋದು ಯಾರಿಗೂ ಬೇಡವಾಗಿದೆ.ಬಂದವರೆಲ್ಲರೂ ತಮ್ಮ ತಮ್ಮ ಅನುಕೂಲಗಳನ್ನೇ ನೋಡುವಾಗ ಇವರೂ ಕೂಡ ಇದಕ್ಕೆ ಹೊರತಾಗಿಲ್ಲ ಬಿಡಿ ಎನ್ನುತ್ತಾರೆ ಓರ್ವ ಬಿಎಂಟಿಸಿ ಅಧಿಕಾರಿ.
ದುಬಾರಿ ಮತ್ತು ಐಷಾರಾಮಿ ಕಾರಿನ ಬೇಡಿಕೆ ವಿಷಯ ಕಾರ್ಮಿಕ ಸಮುದಾಯಗಳನ್ನು ಕೆಂಡಾಮಂಡಲಗೊಳಿಸಿದೆ.ಇವರಿಗೆಲ್ಲಾ ನೈತಿಕತೆಯಾಗಲಿ, ನಾಚಿಕೆಯಾಗಲಿ ಇದೆಯಾ ಸಾರ್..ಬಿಎಂಟಿಸಿ ಸಿಬ್ಬಂದಿಗೆ ಬರಬೇಕಿರುವ ಅನೇಕ ತಿಂಗಳ ಬಾಕಿ ಅದೆಷ್ಟೋ ಕೋಟಿ ಇದೆ. ಸಿಬ್ಬಂದಿ ಅನುಭವಿಸುತ್ತಿರುವ ಕಷ್ಟ ಕೇಳೊಕ್ಕಾಗೊಲ್ಲ.ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಇವರಿಬ್ಬರು ಕೊಟ್ಟ ಭರವಸೆ ನೋಡಿದ್ದಾಗ ಇವರ ಮೇಲೆ ನಂಬಿಕೆ ಇತ್ತು.ಆದರೆ ಈಗ ಹಣೇಬರಹ ಗೊತ್ತಾಗ್ತಿದೆ.ಬರೋರೆಲ್ಲಾ ಇದೇ ಮನಸ್ತಿತಿಯವರಾದ್ರೆ ನಮ್ಮ ಸಾರಿಗೆ ಸಿಬ್ಬಂದಿಯ ಗೋಳು ಕೇಳೋರ್ಯಾರು ಎಂದು ಪ್ರಶ್ನಿಸ್ತಾರೆ.ಇದೇ ನಿಲುವನ್ನು ಸಾರಿಗೆ ಸಿಬ್ಬಂದಿ ಕೂಡ ವ್ಯಕ್ತಪಡಿಸ್ತಿದಾರೆ.ಇವರಿಗೆ ನಿಜಕ್ಕೂ ನೈತಿಕತೆ ಇದ್ದರೆ ಕಾರನ್ನು ವಾಪಸ್ ಕೊಡಬೇಕು..ಆಗುತ್ತಾ ಎಂದು ಸವಾಲೆಸೆದಿದ್ದಾರೆ.
ಬಿಎಂಟಿಸಿಯ ಸ್ತಿತಿ ಗತಿಯನ್ನು ಗಮನಿಸಿದಾಗ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಹೊಸ ದುಬಾರಿ ಮತ್ತು ಐಷಾರಾಮಿ ಕಾರಿನ ಬೇಡಿಕೆ ನಿಜಕ್ಕೂ ಸಮಂಜಸವಲ್ಲ ಎನಿಸೋದು ಸತ್ಯ.ಇದನ್ನು ಹೇಗೆ ಮಂಜೂರು ಮಾಡಿದ್ರಿ ಎಂದು ಸಚಿವ ರಾಮಲಿಂಗಾರೆ್ಡ್ಡಿ ಅವರನ್ನು ಕೇಳೋದು ಅಭಾಸವಾಗುತ್ತದೆ.ಇದೆಲ್ಲಾ ಅವರವರ ವಿವೇಚನೆಗೆ ಬಿಟ್ಟ ವಿಚಾರ..ಬಾಯಲ್ಲಿ ವೇದಾಂತ-ಆದರ್ಶ ಹೇಳಿದಂತೆ ಅದನ್ನು ಕೃತಿಯಲ್ಲಿಯು ಆಚರಣೆಗೆ ತರೋದು ಒಳ್ಳೇದು.. ಅನ್ನಿಸುತ್ತೆ.










