

ಇದು ಅಧೀಕೃತವಾಗಿ ಘೋಷಣೆ ಆಗಿಲ್ಲವಾದರೂ, ಮಾದ್ಯಮ ಲೋಕದ ದಿಗ್ಗಜ ಅರ್ನಾಬ್ ಗೋಸ್ವಾಮಿ ಮಾಲೀಕತ್ವದ ರಿಪಬ್ಲಿಕ್ ಸುದ್ದಿಸಂಸ್ಥೆಯ ಆಡಳಿತ ಅಘಾತಕಾರಿಯಾದ ನಿರ್ದಾರವೊಂದನ್ನು ತೆಗೆದುಕೊಂಡಿದೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ತುಂಬಾ ನಿರೀಕ್ಷೆ ಹಾಗೂ ಕನಸು ಹೊತ್ತ ಕಟ್ಟಿದ್ದ ರಿಪಬ್ಲಿಕ್ ಕನ್ನಡದ ಹಾಲಿ ಪ್ರಧಾನ ಸಂಪಾದಕರಿಗೆ ಗೇಟ್ ಪಾಸ್ ನೀಡಿದೆಯಂತೆ.. ಹುದ್ದೆಯನ್ನು ಅಲಂಕರಿಸಿ ಒಂದು ವರ್ಷ ಕಳೆಯುವುದರೊಳಗೆ ಸಂಪಾದಕಿ ಶೋಭಾ ಮಳವಳ್ಳಿ ಅವರಿಗೆ ರಾಜೀನಾಮೆ ನೀಡಿ ಮನೆಗೆ ತೆರಳುವಂತೆ ಸೂಚನೆ ನೀಡಿದೆಯಂತೆ. ದಿಢೀರ್ ಬೆಳವಣಿಗೆಯಲ್ಲಿ ಬಲವಂತದ ರಾಜೀನಾಮೆ ಪಡೆಯುತ್ತಿರುವುದಕ್ಕೆ ಕಾರಣವೇನು ಎನ್ನುವುದು ಸಧ್ಯಕ್ಕೆ ಮಾದ್ಯಮ ಲೋಕದಲ್ಲಿ ನಡೆಯುತ್ತಿರುವ ಚರ್ಚೆ..ಇದಕ್ಕೆ ಕಾರಣಗಳನ್ನೂ ಮ್ಯಾನೇಜ್ಮೆಂಟ್ ನೀಡಿದೆಯಂತೆ.( ಸುದ್ದಿ ಖಚಿತಪಡಿಸಿಕೊಳ್ಳಲು ಕನ್ನಡ ಫ್ಲ್ಯಾಶ್ ನ್ಯೂಸ್ ಯತ್ನಿಸುತಿದೆಯಾದರೂ ಸಂಪರ್ಕ ಸಾಧ್ಯವಾಗಿಲ್ಲ.)
ಒಂದು ಪಕ್ಷ ಇದು ಸತ್ಯವೇ ಆಗಿದ್ದಲ್ಲಿ, ಕನ್ನಡ ಫ್ಲ್ಯಾಶ್ ನ್ಯೂಸ್ ಕೆಲ ತಿಂಗಳ ಹಿಂದೆಯೇ ನುಡಿದಿದ್ದ ಭವಿಷ್ಯ ಕೊನೆಗೂ ನಿಜವಾದಂತಾಗಲಿದೆ..ಸುವರ್ಣ ನ್ಯೂಸ್ ನಿಂದ ರಿಪಬ್ಲಿಕ್ ಗೆ ಜಿಗಿದ ಕೆಲ ತಿಂಗಳಲ್ಲಿಯೇ ಶೋಭಾ ಅವರ ಪರ್ಫಾಮೆನ್ಸ್ ಬಗ್ಗೆ ರಿಪಬ್ಲಿಕ್ ಆಡಳಿತ ನಿರಾಶೆ ವ್ಯಕ್ತಪಡಿಸಿತ್ತೆನ್ನುವ ಮಾತು ಕೇಳಿಬಂದಾಗ್ಲೇ ಹೆಚ್ಚು ದಿನ ಉಳಿಯೋದು ಡೌಟ್ ಎನ್ನುವ ಮಾತನ್ನು ಹೇಳಿತ್ತು.(ಅನೇಕ ಕಾರಣಗಳಿಂದಾಗಿ, ರಿಪಬ್ಲಿಕ್ ಕನ್ನಡದ ಮ್ಯಾನೇಜ್ಮೆಂಟ್ ನಿರೀಕ್ಷೆಗೆ ತಕ್ಕಂತೆ ಶೋಭಾ ಕೆಲಸ ಮಾಡಲಿಕ್ಕೂ ಆಗೊಲ್ಲ ಎನ್ನುವುದಷ್ಟೇ ಆ ಊಹೆಗೆ ಕಾರಣವಾಗಿತ್ತು.ಅದನ್ನು ಬಿಟ್ಟರೆ ಶೋಭಾ ಅವರ ಬಗ್ಗೆ ವೈಯುಕ್ತಿಕವಾಗಿ ನಮಗೇನೂ ಇರಲಿಲ್ಲ ) ಅದು ಅವರು ಅಧಿಕಾರ ವಹಿಸಿಕೊಂಡು ವರ್ಷ ಕಳೆಯುವುದರೊಳಗೆ ನಿಜವಾಗಿ ಹೋಗಿದೆ ಎನ್ನಿಸುತ್ತೆ .ಅಚ್ಚರಿಯ ಬೆಳವಣಿಗೆಗಳಲ್ಲಿ ಶೋಭಾ ಮಳವಳ್ಳಿ ಅವರ ಸೇವೆ ಇನ್ಮುಂದೆ ಚಾನೆಲ್ ಗೆ ಬೇಡ ಎನ್ನುವ ನಿರ್ದಾರ ಕೈಗೊಂಡಿದೆಯಂತೆ ಮ್ಯಾನೇಜ್ಮೆಂಟ್.ಇದು ಸಹಜವಾಗಿ ಶೋಭಾ ಅವರಿಗೆ ಅಷ್ಟೇ ಅಲ್ಲ ಮಾದ್ಯಮ ಲೋಕಕ್ಕೂ ಶಾಕ್ ನೀಡಿದೆ.

ಒಂದು ವರ್ಷ ಕಳೆಯುವುದರೊಳಗೆ ಕಹಿ ಅನುಭವ: ಸುವರ್ಣ ನ್ಯೂಸ್ ನಲ್ಲಿ ಯಾವುದೇ ತೊಂದರೆ ಇಲ್ಲದೆ ಇದ್ದ ಶೋಭಾ, ಅಷ್ಟರವರೆಗೆ ರಿಪಬ್ಲಿಕ್ ಕನ್ನಡದ ಸಂಪಾದಕರಾಗಿದ್ದ ಜಯಪ್ರಕಾಶ್ ಶೆಟ್ಟಿ ಅವರ ಸ್ಥಾನಕ್ಕೆ ದಿಢೀರ್ ಬಂದಿದ್ದರು( ರಿಪಬ್ಲಿಕ್ ಕನ್ನಡದ ತಂಡ ವನ್ನು ಕಷ್ಟಪಟ್ಟು ಕಟ್ಟಿದ್ದ ಜಯಪ್ರಕಾಶ್ ಶೆಟ್ಟಿ ಅವರನ್ನು ಕೂಡ ಅಚ್ಚರಿ-ಅಘಾತಕಾರಿ ಎನ್ನುವಂತ ರೀತಿಯಲ್ಲಿ ಕಳುಹಿಸಲಾಗಿತ್ತು).ಅಲ್ಲಿಂದ ಹಿಡಿದು ಇಲ್ಲಿವರೆಗೆ ಅವರಿಂದ ಚಾನೆಲ್ ಗೆ ಹೇಳಿಕೊಳ್ಳುವಂತ ಪ್ರಯೋಜನವೂ ಆಗಲಿಲ್ಲವಂತೆ.ಎಲ್ಲಾ ರೀತಿಯ ಸಂಪನ್ಮೂಲ ಮತ್ತು ಅನುಕೂಲಗಳನ್ನು ದೊರಕಿಸಿ ಕೊಟ್ಟ ಹೊರತಾಗ್ಯೂ ಟಿಆರ್ ಪಿಯಲ್ಲಿ ಒಂದಿಷ್ಟು ಆಶಾದಾಯಕ ಎನ್ನುವಂತ ಸುಧಾರಣೆ ಕಂಡುಬಾರದಿರುವುದಕ್ಕೆ ಆಡಳಿತ ಬೇಸರ-ಅತೃಪ್ತಿ ವ್ಯಕ್ತಪಡಿಸಿತ್ತಂತೆ.ಇದರ ಬಗ್ಗೆ ಆಗಾಗ ವಾರ್ನ್ ಮಾಡಿದ್ದೂ ಇದೆಯಂತೆ.ಆದರೂ ಮ್ಯಾನೇಜ್ಮೆಂಟ್ ನಿರ್ದೇಶನಕ್ಕೆ ತಕ್ಕಂತೆ ಚಾನೆಲ್ ರೂಪಿಸದಿರುವುದು ಎಲ್ಲೋ ಒಂದ್ಕಡೆ ಇಂತದ್ದೊಂದು ಕಠಿಣ ಎನ್ನುವಂತ ನಿರ್ದಾರಕ್ಕೆ ಕಾರಣವಾಯ್ತಾ..? ಗೊತ್ತಿಲ್ಲ.ಆದರೆ ಒಂದಂತೂ ಸತ್ಯ, ಶೋಭಾ ಅವರ ಫರ್ಪಾಮೆನ್ಸ್ ಮ್ಯಾನೇಜ್ಮೆಂಟ್ ನ ನಿರೀಕ್ಷೆಯ ಮಟ್ಟ ತಲುಪಿದಿರುವುದೇ ಅವರ ಎಕ್ಸಿಟ್ ಗೆ ಕಾರಣವಂತೆ.ಇದನ್ನು ರಿಪಬ್ಲಿಕ್ ಕನ್ನಡದಲ್ಲಿ ಕೆಲಸ ಮಾಡುತ್ತಿರುವ ಮಾದ್ಯಮಮಿತ್ರರೇ ಒಪ್ಪಿಕೊಳ್ಳುತ್ತಾರೆ.
ದಿಗ್ವಿಜಯ ಟು ರಿಪಬ್ಲಿಕ್ ಕನ್ನಡ: 9 ವರ್ಷಗಳ ಅವಧಿಯಲ್ಲೇ ಏನೇನೋ ನಡೆದೋಗಿಬಿಡ್ತು..!
ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದ ಮಾದ್ಯಮಮಿತ್ರರು ಅದ್ಹೇಕೋ ಹಿಂದಿನ ದಿಗ್ವಿಯ ಹಾಗೂ ಈಗಿನ ರಿಪಬ್ಲಿಕ್ ಕನ್ನಡದ ವಾಸ್ತುವೇ ಸರಿ ಇಲ್ಲವೇನೋ ಎನ್ನುವಂತೆ ಅನುಮಾನ ವ್ಯಕ್ತಪಡಿಸಿದ್ದಾರೆ.ಅಲ್ಲಿ ಕೆಲಸ ಮಾಡಿದ್ದ ಹಿರಿಯ ಸಹದ್ಯೋಗಿ ಹೇಳುವಂತೆ,ಅಲ್ಲಿ ಕೆಲಸ ಮಾಡಿದ ಸಂಪಾದಕರೆಲ್ಲಾ ಅಲ್ಪಾಯುಷಿಗಳೆನಿಸುತ್ತದೆ ಎನ್ನುತ್ತಲೇ ದೃಷ್ಟಾಂತವನ್ನೂ ನೀಡಿದ್ದಾನೆ.ಅವನೇ ಹೇಳುವಂತೆ 2016 ರಲ್ಲಿ ದಿಗ್ವಿಜಯ ಚಾನೆಲ್ ಆರಂಭವಾಯ್ತು.ಈ 9 ವರ್ಷಗಳೊಳಗೆ ಆಗಬಾರದ್ದೆಲ್ಲಾ ನಡೆದೋಗಿದೆ ಎನ್ನುತ್ತಾನೆ.ಅವನೇ ಹೇಳುವಂತೆ. ಹರಿ ಪ್ರಕಾಶ್ ಕೋಣಿಮನೆ ಅವರ ಮುಂದಾಳತ್ವದಲ್ಲಿ ಚಾನೆಲ್ ಆರಂಭವಾಯಿತಾದ್ರೂ ಖುದ್ದು ಕೋಣಿಮನಿಗೆ ಹೆಚ್ಚು ಅವಧಿಗೆ ಇರಲಿಲ್ಲ.ಅವರು ಹೊರ ನಡೆದ ಮೇಲೆ ಅವರ ಸ್ಥಾನಕ್ಕೆ ಶರತ್ ಎಂ.ಎಸ್ ಬಂದ್ರು.ಅವರೂ ಹೆಚ್ಚು ದಿನ ಉಳಿಯಲಿಲ್ಲ.ಅವರು ಹೊರ ಹೋಗುತ್ತಿದ್ದಂತೆ ಚೇತನ್ ಆರ್ ಬಂದ್ರು.ಅವರೂ ಹೆಚ್ಚು ದಿನ ಇರ್ಲಿಲ್ಲ.
ದಿಢೀರ್ ಬೆಳವಣಿಗೆಗಳಲ್ಲಿ ಅವರ ಸ್ಥಾನಕ್ಕೆ ಬಂದವರು ಅನುಭವಿ ಎಂ.ಆರ್ ಸುರೇಶ್..ಟಿಆರ್ ಪಿ ಮಾದ್ಯಮ ಲೋಕದಲ್ಲಿ ಸದ್ದು ಮಾಡಿದ ಪರಿಣಾಮ ಆ ವ್ಯವಸ್ಥೆಯೇ ವರ್ಷಗಳವರೆಗೆ ಬ್ಯಾನ್ ಆಗಿತ್ತು.ಅದೇ ಸಮಯದಲ್ಲಿ ಕೊರೊನಾ ಬೇರೆ ವಕ್ಕರಿಸಿಕೊಳ್ತು.ಈ ಅವಧಿಯಲ್ಲಿ ಹೆಚ್ಚು ಕಾಲ ಉಳಿದವರು ಎಂ.ಆರ್ ಸುರೇಶ್. ಸುಮಾರು 2 ರಿಂದ -2 ವರೆ ವರ್ಷಗಳವರೆಗೆ ಚಾನೆಲ್ ನಲ್ಲಿದ್ದ ಸುರೇಶ್ ರಾಜೀನಾಮೆ ಕೊಟ್ಟು ಹೊರಬಂದರು. ಅವರ ನಂತರ ಬಂದವರೇ ಸುಭಾಷ್ ಹೂಗಾರ್..ಪಾಪ ಸಂಭಾವಿತರಾಗಿದ್ದ ಸುಭಾಷ್ ಕೂಡ ಅಲ್ಲಿ ಹೆಚ್ಚು ದಿನ ಇರಲಿಲ್ಲ.ಆ ನಂತರ ಬಂದವರೇ ಸಿದ್ದು ಕಾಳೋಜಿ.ಅವರು ಒಂದಷ್ಟು ಕಾಲ ಇದ್ದಾಗ್ಲೇ ಆನಂದ ಸಂಕೇಶ್ವರ ಚಾನೆಲ್ ಮಾರುವ ಆಲೋಚನೆಯಲ್ಲಿ ಇದ್ರು. ಕರ್ನಾಟಕದಲ್ಲೂ ಚಾನೆಲ್ ಆರಂಭಿಸಬೇಕೆನ್ನುವ ಉಮೇದಿನಲ್ಲಿ ಇದ್ದ ಅರ್ನಾಬ್ ಜತೆಗೆ ಮಾತುಕತೆ ನಡೆದು ದಿಗ್ವಿಜಯ ರಿಪಬ್ಲಿಕ್ ಕನ್ನಡ ಆಗಿ ಲೋಕಾರ್ಪಣೆ ಆಯ್ತು.ಸಿದ್ದು ಕಾಳೋಜಿ ಅಲ್ಲಿಂದ ವಿಜಯವಾಣಿ ವೆಬ್ ಗೆ ಜಂಪ್ ಆದ್ರು.
ಅರ್ನಾಬ್ ಅವರ ನೀಲಿಗಣ್ಣಿನ ಹುಡುಗ ನಿರಂಜನ್ ಅವರ ಮುಂದಾಳತ್ವದಲ್ಲಿ ರಿಪಬ್ಲಿಕ್ ಕನ್ನಡ ಆರಂಭವಾಯ್ತು.ಕಾರ್ಯ ಒತ್ತಡದ ಕಾರಣಕ್ಕೆ ನಿರಂಜನ್ ಡೆಲ್ಲಿ-ಮುಂಬೈಗೆ ಓಡಾಡಿಕೊಂಡಿರಬೇಕಾಗಿದ್ದರಿಂದ ಉಸ್ತುವಾರಿಯನ್ನು ಜಯಪ್ರಕಾಶ್ ಶೆಟ್ಟಿಗೆ ಕೊಟ್ರು.ಶೆಟ್ಟಿ ಅವರು ಪ್ರಯತ್ನಿಸಿದಾದ್ರೂ ಹೆಚ್ಚು ಸಮಯ ಉಳಿಯಲಿಕ್ಕಾಗಲಿಲ್ಲ..ಆಗ ಬಂದವರೇ ಶೋಭಾ ಮಳವಳ್ಳಿ..ಹೀಗೆ ಕೇವಲ 9 ವರ್ಷಗಳ ಅವಧಿಯಲ್ಲಿ ಈ ಚಾನೆಲ್ ನಲ್ಲಿ ಏನೆಲ್ಲಾ ನಡೆದೋಗಿಬಿಟ್ಟಿದೆ..ಇದಕ್ಕೆ ವಾಸ್ತು ಕಾರಣವಾ..? ಖಂಡಿತಾ ಗೊತ್ತಿಲ್ಲ.

ಶೋಭಾ ಅವರಿಗೆ “ಮುಂದಾಳತ್ವ” ಅನುಭವದ ಕೊರತೆ ಮುಳುವಾಯ್ತಾ..!? ಶೋಭಾ ಒಬ್ಬ ಅದ್ಭುತ ಕೆಲಸಗಾರ್ತಿ ಎನ್ನುವುದರಲ್ಲಿ ಅನುಮಾನವಿಲ್ಲ.ಆ ಬಗ್ಗೆ ಅವರಿಗೆ ಒಳ್ಳೆಯ ಹೆಸರಿದೆ.ಅವರು ಕೆಲಸ ಮಾಡಿದ ಪೇಪರ್ ಹಾಗೂ ಚಾನೆಲ್ ಗಳಲ್ಲೇ ಇದು ಪ್ರೂವ್ ಆಗಿತ್ತು.ಕೆಲಸದಲ್ಲಿ ಆಕೆ “ರಾಕ್ಷಸಿ” ಎಂದೇ ಅವರ ಆತ್ಮೀಯರು ಪ್ರೀತಿಯಿಂದ ಹೇಳುವುದುಂಟು.ಅದೆಲ್ಲ ಸರಿ..ಆದರೆ ಈ ಅನುಭವ ಒಂದು ಚಾನೆಲ್ ಅದರಲ್ಲೂ ಅರ್ನಾಬ್ ಗೋಸ್ವಾಮಿಯಂಥವರ ಚಾನೆಲ್ ನ್ನು ಮುನ್ನಡೆಸ್ಲಿಕ್ಕೆ ಸಾಕೆನಿಸಿತ್ತಾ..? ಖಂಡಿತಾ ಇಲ್ಲ. ಒಂದು ಚಾನೆಲ್ ನಲ್ಲಿ ಒಂದು ಸೆಕ್ಷನ್ ನ ಮುಂದಾಳತ್ವ ವಹಿಸುವುದಕ್ಕೂ, ಒಂದು ಚಾನೆಲ್ ನ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ನಿಭಾಯಿಸುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಒಂದು ವಿಭಾಗದ ಮುಖ್ಯಸ್ಥೆಯಾಗಿ ಶೋಭಾ ಯಶಸ್ವಿಯಾದ್ರೆ, ರಿಪಬ್ಲಿಕ್ ಕನ್ನಡದ ಮುಖ್ಯಸ್ಥೆಯಾಗಿ ಯಶಸ್ವಿಯಾಗಲಿಲ್ಲ.ಅವರ ವೃತ್ತಿಜೀವನದ ಒಟ್ಟಾರೆ ಅನುಭವ ರಿಪಬ್ಲಿಕ್ ಕನ್ನಡವನ್ನು ಸಂಪಾದಕಿಯಾಗಿ ನಿಭಾಯಿಸುವುದಕ್ಕೆ ಸಾಕಾಗಲಿಲ್ಲವೇನೋ ಎಂದೆನಿಸುತ್ತದೆ. ಸದಾ ಕುತ್ತಿಗೆ ಮೇಲೆ ಮೊಣಭಾರ ನಿರೀಕ್ಷೆಯ ಕತ್ತಿಯನ್ನಿಟ್ಟುಕೊಂಡೇ ಕಾಯುವ ಅರ್ನಾಬ್ ಗೋಸ್ವಾಮಿಯಂತ ಮಾದ್ಯಮ ದಿಗ್ಗಜ ಹಾಗೂ ಆಡಳಿತಕ್ಕೆ ಶೋಭಾ ಈ ದೃಷ್ಟಿಯಲ್ಲಿ ಸಮರ್ಥೆ ಎಂದೆನಿಸಿರಲಿಕ್ಕಿಲ್ಲವೇನೋ..? ಹಾಗಾಗಿ ಅವರ ಸೇವೆ ಸಾಕೆನಿಸುವ ನಿರ್ದಾರ ಕೈಗೊಂಡಿತಾ ಗೊತ್ತಿಲ್ಲ..?!
ಶೋಭಾ ಅವರ ಕಾರ್ಯವೈಖರಿಯು ಕೂಡ ರಿಪಬ್ಲಿಕ್ ಕನ್ನಡದ ಆಡಳಿತಕ್ಕೆ ತೃಪ್ತಿ-ಸಮಾಧಾನ ತಂದಿರಲಿಲ್ಲ ಎನ್ನುವ ಮಾತಿದೆ.ಮ್ಯಾನೇಜ್ಮೆಂಟ್ ನ ನಿರ್ದೇಶನಗಳಿಗೆ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ..ನೇರ ನೇರವಾಗಿ ತನ್ನ ಅಭಿಪ್ರಾಯ-ಅನಿಸಿಕೆ ವ್ಯಕ್ತಪಡಿಸುತ್ತಿದ್ದರೆನ್ನುವುದು ಕೂಡ ಬೇಸರ ತರಿಸಿತ್ತಂತೆ.ಈ ಬಗ್ಗೆ ಅನೇಕ ಬಾರಿ ವಾರ್ನ್ ಮಾಡಿದ್ರೂ ಅದಕ್ಕೆ ತಲೆಕೆಡಿಸಿಕೊಂಡಿರಲಿಲ್ಲವಂತೆ ಶೋಭಾ ಮೇಡಮ್.ಅದರ ನಡುವೆ ಸ್ಟೋರಿಗಳ ಆಯ್ಕೆ-ನಿರೂಪಣೆಯಲ್ಲೂ ಸಾಕಷ್ಟು ಎಡವತ್ತುತ್ತಿದ್ದರೆನ್ನುವ ಆಪಾದನೆಯಿದೆ. ತಮ್ಮ ಮೂಗಿನ ನೇರಕ್ಕೆ ಸ್ಟೋರಿ ಮಾಡಿಸುತ್ತಿದ್ದರೆನ್ನುವ ಮಾತುಗಳಿವೆ.ಟಿಆರ್ ಪಿ ದೃಷ್ಟಿಯಿಂದ ಇವೆಲ್ಲವೂ ನಿಷ್ಪ್ರಯೋಜಕ ಸ್ಟೋರಿಗಳೆನ್ನುವುದು ಆಡಳಿತದ ಗಮನಕ್ಕೆ ಬಂದು ಅವರ ಸೇವೆ ಮುಂದುವರೆಸದ ನಿರ್ದಾರ ಕೈಗೊಂಡಿರಬಹುದೆನ್ನುವ ಮಾತುಗಳಿವೆ.
ಧರ್ಮಸ್ಥಳ ಸ್ಟೋರಿ ವಿಚಾರದಲ್ಲಿ ಏಕಪಕ್ಷೀಯವಾಗಿ ನಡೆದುಕೊಂಡ್ರಾ..!? ಧರ್ಮಸ್ಥಳದಂಥ ಧರ್ಮಸೂಕ್ಷ್ಮ ಸ್ಟೋರಿಯನ್ನು ಟೇಕ್ ಆಫ್ ಮಾಡುವ ವಿಚಾರದಲ್ಲಿ ಶೋಭಾ ತೆಗೆದುಕೊಂಡ ನಿರ್ದಾರಗಳ ಬಗ್ಗೆಯೂ ಮ್ಯಾನೇಜ್ಮೆಂಟ್ ಭಾರೀ ಆಕ್ಷೇಪ-ಅಸಮಾಧಾನ ವ್ಯಕ್ತಪಡಿಸಿತ್ತೆನ್ನುವ ಮಾತುಗಳಿವೆ. ಸ್ಟೋರಿಗೆ ಆಂಗಲ್ ಕೊಡುವ ವಿಚಾರದಲ್ಲಿ ಏಕಪಕ್ಷೀಯ ನಿರ್ದಾರ ಕೈಗೊಳ್ಳುತ್ತಿದ್ದರು. ಅನ್ ಬಯಾಸ್ಡ್ ಆಗಿ ಎಲ್ಲಾ ವರ್ಗದ ವೀಕ್ಷಕರಿಗೂ ಸರಿ ಎನಿಸುವ ರೀತಿಯಲ್ಲಿ ಸ್ಟೋರಿ ಬಿತ್ತರಿಸದೆ ಏಕಪಕ್ಷೀಯವಾಗಿ ವರ್ತಿಸಿದರೆನ್ನುವ ದೂರು ಅವರ ಮೇಲಿದೆಯಂತೆ..ಧರ್ಮಸ್ಥಳ ವಿಚಾರದಲ್ಲಿ ಒಂದು ವರ್ಗದ ಸಮುದಾಯವನ್ನು ಓಲೈಸುವುದಕ್ಕಾಗಿ ಇನ್ನೊಂದು ವರ್ಗದ ವೀಕ್ಷಕರನ್ನು ನೆಗ್ಲೆಕ್ಟ್ ಮಾಡಿದರೆನ್ನುವುದು ಅರ್ನಾಬ್ ಗೋಸ್ವಾಮಿ ಅವರ ಕಿವಿಗೆ ಬಿದ್ದಿತ್ತಂತೆ.ಇದರಿಂದ ಖುದ್ದು ಅರ್ನಾಬ್ ಕೆಂಡಾಮಂಡಲವಾಗಿ ರಿಯಾಕ್ಟ್ ಮಾಡಿದ್ದರಂತೆ.ಬುರುಡೆ ಗ್ಯಾಂಗ್ ಚಿನ್ನಯ್ಯನ ಪತ್ನಿಯನ್ನು ರಿಪಬ್ಲಿಕ್ ಬಿಟ್ಟರೆ ಬೇರೆ ಯಾವುದೇ ಮಾದ್ಯಮಗಳಿಗೂ ಸಿಗದಂತೆ ಮಾಡಿದರೆನ್ನುವುದು ಕೂಡ ಮ್ಯಾನೇಜ್ಮೆಂಟ್ ಗಮನಕ್ಕೆ ಹೋಗಿತ್ತಂತೆ.ಒಂದು ವಿಷಯದ ಬಗ್ಗೆ ಇಷ್ಟೊಂದು ವೈಯುಕ್ತಿಕ ಹಿತಾಸಕ್ತಿ ಮೆರೆಯುತ್ತಿರುವುದೇಕೆ ಎಂದು ಮ್ಯಾನೇಜ್ಮೆಂಟೇ ಪ್ರಶ್ನಿಸಿತ್ತೆನ್ನುವ ಮಾತಿದೆ.ಸೌಜನ್ಯ ಶಾಪ ರಿಪಬ್ಲಿಕ್ ಕನ್ನಡಕ್ಕೆ ತಟ್ಟದೆ ಇರೊಲ್ಲ ಎಂದು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದನ್ನು ಖುದ್ದು ಅರ್ನಾಬ್ ಗೋಸ್ವಾಮಿ ಅವರೇ ಗಮನಿಸಿದ್ದರಂತೆ.ಧರ್ಮಸ್ಥಳದಂಥ ಸೂಕ್ಷ್ಮ ವಿಚಾರವನ್ನು ಹ್ಯಾಂಡಲ್ ಮಾಡುವಲ್ಲಿ ಸೋತಿದ್ದು ಕೂಡ ಅವರಿಗೆ ಮುಳುವಾಗಿರಬಹುದೆನ್ನುವ ವರ್ತಮಾನಗಳಿವೆ.
ಶೋಭಾ ಅವರ ಸೇವೆ ಬೇಡ ಎನ್ನುವ ನಿರ್ದಾರ ತೆಗೆದುಕೊಂಡಿದೆ ಎನ್ನಲಾಗುತ್ತಿರುವ ರಿಪಬ್ಲಿಕ್ ಕನ್ನಡ ಮ್ಯಾನೇಜ್ಮೆಂಟ್, ಇದಕ್ಕೆ ಸೂಕ್ತ ಕಾರಣಗಳನ್ನೂ ನೀಡಿದೆಯಂತೆ ಎಂದು ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವವರ ಅಭಿಪ್ರಾಯ.ಅವು ಯಾವ ಕಾರಣಗಳೆನ್ನುವುದು ಶೋಭಾ ಅವರಿಗೇ ಗೊತ್ತಿದೆಯಂತೆ. ಯಾವುದೇ ಮುನ್ಸೂಚನೆ ನೀಡದೆ,ಸಣ್ಣ ಸುಳಿವು ನೀಡದೆ ಗೇಟ್ ಪಾಸ್ ಕೊಡಲಾಗಿದೆ ಎನ್ನುವುದು ಮಾತ್ರ ಶಾಕ್ ಮೂಡಿಸಿದೆ.ಯಾವುದೇ ಪತ್ರಕರ್ತನಿಗೂ ಇಂತದ್ದೊಂದು ಅನುಭವ ಅತ್ಯಂತ ಕಹಿ ಆಗಿರುತ್ತದೆ.ವೃತ್ತಿ ಜೀವನದುದ್ದಕ್ಕೂ ಅದು ಕಾಡುತ್ತದೆ.ಅದರಲ್ಲೂ ಸಂಪಾದಕರಂಥ ಸ್ಥಾನದಲ್ಲಿದ್ದವರಿಗೆ ಹೀಗೊಂದು ಅನುಭವಗಳಾಗುವಂತದ್ದಿದೆಯೆಲ್ಲಾ ಅದು ಇನ್ನಷ್ಟು ನೋವು-ಬೇಸರ ತರಿಸುತ್ತೆ.ಇಷ್ಟ್ ದಿನ ಕೆಲಸ ಮಾಡಿದ್ದು ಇದಕ್ಕೇನಾ.? ಇಷ್ಟೆಲ್ಲಾ ಆದ್ಮೇಲೂ ವೃತ್ತಿಯಲ್ಲಿ ಮುಂದುವರೆಯಬೇಕಾ..? ಎನ್ನುವಷ್ಟರ ಮಟ್ಟಿಗಿನ ಜಿಗುಪ್ಸೆ ಮೂಡಿಸುತ್ತೆ. ಶೋಭಾ ಅವರ ಮನಸ್ತಿತಿಯೂ ಇದಕ್ಕೆ ಹೊರತಲ್ಲ..ಇದೆಲ್ಲಾ ವೃತ್ತಿಯಲ್ಲಿ ಸಹಜ ಎಂದುಕೊಂಡ್ರೆ ಮಾತ್ರ ಬದುಕು-ವೃತ್ತಿ ಮುಂದೆ ಸಾಗೋದು..ಶೋಭಾ ಮೇಡಮ್ ಕೂಡ ಇಂಥಾ ಬೆಳವಣಿಗೆಗಳಿಂದ ವಿಚಲಿತರಾಗದೆ ಆಶಾವಾದಿಯಾಗಿ ಮುನ್ನಡೆಯಲಿ ಎನ್ನುವುದೇ ನಮ್ಮ ಹಾರೈಕೆ.








