ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಐಟಿ ಸಾಮಾಗ್ರಿ ಪೂರೈಕೆ ಅಕ್ರಮದ ಕಹಾನಿ-ತನಿಖೆಗೆ ಆಗ್ರಹಿಸುವಂತೆ ಅಜಿತ್ ಗೆ ಸವಾಲು..
ಬರೆಯುವ ಮುನ್ನಾ.. ಇದರ ಬಗ್ಗೆ ಬರೆಯಲೇಬೇಕೆನ್ನುವ ಉದ್ದೇಶ ಖಂಡಿತಾ ಇರಲಿಲ್ಲ..ಅಲ್ಲದೇ ಇದು ಪೂರ್ವಾಗ್ರಹ ವೂ ಅಲ್ಲ.ಏಕೆಂದರೆ ಅಜಿತ್ ಹನುಮಕ್ಕನವರ್ ಬಗ್ಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಗೌರವ-ಅಭಿಮಾನ ಎರಡೂ ಇದೆ. ಇವತ್ತಿನ ಕಾಲಮಾನದ ಪತ್ರಕರ್ತರಲ್ಲಿ ಅಜಿತ್ ಅವರಂಥ ಪತ್ರಕರ್ತರು(ನಿರೂಪಣೆ,ಭಾಷಾ ಪಾಂಡಿತ್ಯ.. ವೀಕ್ಷಕರನ್ನು ತಲುಪುವ,ಆಕರ್ಷಿಸುವ ವೈಖರಿ) ಸಿಗುವುದು ಅಪರೂಪ.ಹಾಗಾಗಿಯೇ ಅವರಿಗೊಂದು ದೊಡ್ಡ ಅಭಿಮಾನಿಗಳ ಬಳಗವೇ ಇದೆ..ಇದನ್ನು ನಾವು ಒಪ್ಪಿಕೊಳ್ಳುತ್ತೇವೆ.ಆದರೆ ಕೆಲವೊಂದು ಸನ್ನಿವೇಶಗಳಲ್ಲಿ ಕಠಿಣವಾದ ನಿರ್ದಾರಗಳ ನ್ನೂ ಕೈಗೊಳ್ಳಬೇಕಾಗುತ್ತದೆ.ಕನ್ನಡ ಫ್ಲ್ಯಾಶ್ ನ್ಯೂಸ್ ಆ ನಿಟ್ಟಿನಲ್ಲಿ ಸದಾ ಕಾರ್ಯೋನ್ಮುಖವಾಗಿದೆ. ಮಾದ್ಯಮ ಲೋಕದ ಒಳ ಹೊರಗನ್ನು ಬಿಚ್ಚಿಡುತ್ತಾ ಬಂದಿರುವ ಕನ್ನಡ ಫ್ಲ್ಯಾಶ್ ಇಂತದ್ದೊಂದು ಬೃಹತ್ ಹಾಗೂ ಗಂಭೀರ ಆಪಾದನೆ ಬಂದಾಗ ಅದರ ಮೇಲೆ ಬೆಳಕು ಚೆಲ್ಲಲೇಬೇಕಾಗಿತ್ತು.ಅದು ನಮ್ಮ ವೃತ್ತಿಧರ್ಮ..ಹಾಗಾಗಿ ನಿರ್ಭಿಡೆಯಿಂದ ಇದರ ಬಗ್ಗೆ ವರದಿ ಮಾಡಲಾಗ್ತಿದೆ.ಅಜಿತ್ ಅವರನ್ನಾಗಲಿ,ಅವರ ಧರ್ಮಪತ್ನಿಯವರ ಮನಸು ನೋಯಿಸುವುದು ನಮ್ಮ ಉದ್ದೇಶ ಅಲ್ಲವೇ ಇಲ್ಲ..ಈ ಆಪಾದನೆಯ ವಿಷವರ್ತುಲದಿಂದ ಅಜಿತ್ ಹನುಮಕ್ಕನವರ್ ಹೊರಬರಬೇಕೆ ನ್ನುವುದು ನಮ್ಮ ಆಶಯವೂ ಕೂಡ.. …. ಸಂಪಾದಕೀಯ
ಇದು ರಾಷ್ಟ್ರವಾದಿ ಪತ್ರಕರ್ತರೊಬ್ಬನ ಕುಟುಂಬಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯೊಂದಕ್ಕೆ ಸಂಬಂಧಿಸಿದ ಮುಂದುವರೆದ ಸ್ಟೋರಿ.ಜಗತ್ತಿನೆಲ್ಲಾ ಅಕ್ರಮ-ಅನ್ಯಾಯ-ಭ್ರಷ್ಟಾಚಾರಗಳ ಬಗ್ಗೆ ಗಟ್ಟಿದ್ವನಿಯಲ್ಲಿ ಪ್ರಶ್ನೆ ಮಾಡುವ ಆ ಪತ್ರಕರ್ತರೇ ಇವತ್ತು ಒಂದು ಕ್ಷಣ ಮುಜುಗರಕ್ಕೆ ಒಳಗಾಗುವಂತ ಬೆಳವಣಿಗೆ ಅವರ ಕುಟುಂಬದ ಸದಸ್ಯರಿಂದಲೇ ನಡೆದಿದೆ ಎನ್ನುವುದೇ ಸಧ್ಯಕ್ಕೆ ದೊಡ್ಡಮಟ್ಟದ ಸುದ್ದಿ.ಇದು ಅವರ ತೀರಾ ಖಾಸಗಿತನದ ವಿಚಾರವಾಗಿದ್ದರೆ ಕುಟುಂಬದ ವಿಷಯ ಎಂದು ಸುಮ್ಮನಿರಬಹು ದಿತ್ತೇನೋ..? ಆದರೆ ಇದು ನಮ್ಮ ತೆರಿಗೆ ಹಣದ ದುರುಪಯೋಗಕ್ಕೆ ನೇರಾನೇರ ಥಳಕು ಹಾಕ್ಕೊಂಡಿರುವುದರಿಂದ ಇದನ್ನು ಪ್ರಶ್ನೆ ಮಾಡಲೇಬೇಕಿದೆ.ಯಾರು ಏನೇ ಹೇಳಲಿ..ಏನೇ ಭಾವಿಸಲಿ..ಬದ್ಧತೆಯಿಂದ ಕೆಲಸಮಾಡುತ್ತಲೇ ಬಂದಿರುವ ಕನ್ನಡ ಫ್ಲ್ಯಾಶ್ ನ್ಯೂಸ್ ಕೂಡ ಈ ನಿಟ್ಟಿನಲ್ಲಿ ಪ್ರಶ್ನೆ ಮಾಡಲು ಹಿಂಜರಿಯುವುದಿಲ್ಲ.

ಮಾದ್ಯಮಗಳಲ್ಲಿ ಕೆಲಸ ಮಾಡುವ ಭಾರತದ ಪ್ರತಿಯೊಬ್ಬ ಪತ್ರಕರ್ತ ಕೂಡ ರಾಷ್ಟ್ರವಾದಿ ಪತ್ರಕರ್ತನೇ…. ಅದನ್ನು ಪ್ರತ್ಯೇಕಿಸಿ ನೋಡುವುದು ಮೂರ್ಖತನದ ಪರಮಾವಧಿ. ಏಕೆಂದರೆ ರಾಷ್ಟ್ರವಾದಿ ಎನ್ನುವ ಹಣೆಪಟ್ಟಿಯನ್ನು ಪ್ರತ್ಯೇಕವಾಗಿ ನೀಡುವಂತದ್ದು ಎಷ್ಟು ಅಪಾಯ ಕಾರಿನೋ,ಅದನ್ನು ಆಧರಿಸಿ ಪತ್ರಕರ್ತನನ್ನು ಗುರುತಿಸುವುದು ಕೂಡ ಕಳವಳಕಾರಿನೇ. ಅದನ್ನು ಬದಿಗೊತ್ತಿ ನೋಡಿದರೂ ಕೆಲವರ ಹೆಸರಿನೊಂದಿಗೆ ಅದು ಥಳಕು ಹಾಕಿಕೊಂಡಿ ರುತ್ತೆ.ಈ ಸಾಲಿನಲ್ಲಿ ಗುರುತಿಸಿಕೊಳ್ಳುವ ಪತ್ರಕರ್ತರ ಸಾಲಿನಲ್ಲಿ ಸುವರ್ಣ ನ್ಯೂಸ್‌ನ ಸಂಪಾದಕ ಅಜಿತ್ ಹನುಮಕ್ಕನವರ್ ಕೂಡ ಒಬ್ಬರು.ಕೆಲವೊಂದು ವಿಚಾರಗಳಲ್ಲಿ ಅಜಿತ್ ಅವರನ್ನು ಒಪ್ಪಿಕೊಳ್ಳಲಿಕ್ಕಾಗದಿದ್ದರೂ ಇನ್ನುಳಿದ ವಿಚಾರಗಳಲ್ಲಿ ಅವರನ್ನು ಆ ರೀತಿ ಸಂಬೋಧಿಸುವುದು ಸೂಕ್ತ- ಸಕಾಲಿಕ ಎನಿಸುತ್ತದೆ.
ಹೀಗೆ ರಾಷ್ಟ್ರವಾದಿ ಪತ್ರಕರ್ತ ಎಂದು ಗುರುತಿಸಿಕೊಂಡಿರುವ ಅಜಿತ್ ಹನುಮಕ್ಕನವರ್ ಬಗ್ಗೆ ಅನೇಕ ವಿಚಾರಗಳಿಗೆ ಸಂಬಂಧಿಸಿದಂತೆ ಕನ್ನಡ ಫ್ಲ್ಯಾಶ್ ನ್ಯೂಸ್ ಈ ಹಿಂದೆ ಸುದ್ದಿ ಮಾಡಿದೆ.ಅವೆಲ್ಲವೂ ಸುದ್ದಿಮನೆಗೆ ಸಂಬಂಧಪಟ್ಟ ವಿಚಾರಗಳಾಗಿದ್ದವು.ಆದರೆ ಈ ಬಾರಿ ಅವರು ಸುದ್ದಿಗೆ ಸಂಬಂಧಪಡದಿದ್ದರೂ ತಮ್ಮ ಕುಟುಂಬದ ಸದಸ್ಯರೊಬ್ಬರ ಮೇಲೆ ಕೇಳಿಬಂದಿರುವ ಆಪಾದನೆ ಕಾರಣಕ್ಕೆ ಸುದ್ದಿಯಾ ಗುತ್ತಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ಕಾರಣಕ್ಕೆ ಕನ್ನಡ ಫ್ಲ್ಯಾಶ್ ನ್ಯೂಸ್ ಈ ಬಗ್ಗೆ ಅನಿವಾರ್ಯ ವಾಗಿ ಬರೆಯಲೇಬೇಕಿದೆ.

ಸಂತೋಷ್ ಲಾಡ್ ಗೂ ಅಜಿತ್ ಗೂ “ಅತ್ಯಾಪ್ತತೆ” ಇದ್ದಿದ್ದೇ ಆ ವ್ಯವಹಾರದಿಂದಲಾ.? ವೃತ್ತಿಯನ್ನೇ ಮಿಸ್ಯೂಸ್ ಮಾಡಿಕೊಂಡ್ರಾ..?! …….ಈ ಪ್ರಕರಣದಲ್ಲಿ ಅದೇಕೋ, ಹಕ್ಕಿ ಹಾರುವುದಕ್ಕೂ..ಕೋಲು ಮುರಿಯೋದಕ್ಕೂ ಒಂದೇ ಆಯ್ತು ಎನ್ನುವ ಗಾಧೆ ನೆನಪಾಗುತ್ತಿದೆ.ಅಜಿತ್ ಅವರ ಶ್ರೀಮತಿ ಸಹನಾ ಅವರ ನಿರ್ದೇಶಕತ್ವದ ಕಂಪೆನಿ ವಿರುದ್ಧ ಕೇಳಿ ಬಂದಿರುವ ಆಪಾದನೆಗೂ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ ಅಜಿತ್ ,ಸಚಿವ ಸಂತೋಶ್ ಲಾಡ್ ಜತೆ ಅತ್ಯಾಪ್ತತೆ ಹೊಂದಿರುವುದಕ್ಕೂ ಏನಾದ್ರೂ ಸಂಬಂಧವಿದೆಯಾ ಎನ್ನುವ ಗುಮಾನಿ ವ್ಯಕ್ತವಾಗುತ್ತಿದೆ.ಏಕೆಂದ್ರೆ ಸಹನಾ ಅವರ ‘RIGHT MEDIA TECH’ ಕಂಪೆನಿ ಐಟಿ ಉಪಕರಣಗಳನ್ನು ಪೂರೈಸಿರುವುದು ಕೂಡ ಕಾರ್ಮಿಕ ಸಚಿವ ಸಂತೋಶ್ ಲಾಡ್ ಅವರು ಪ್ರತಿನಿಧಿಸುವ ಕಾರ್ಮಿಕ ಇಲಾಖೆ ಅಧೀನದಲ್ಲಿ ಕೆಲಸ ಮಾಡುವ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ….ಸೈದ್ದಾಂತಿಕವಾಗಿ ತಾಳೆಯೇ ಆಗದ ಯಾವುದಾದ್ರೂ ಅನ್ಯ ಪಕ್ಷದ ಜನಪ್ರತಿನಿಧಿಯನ್ನು ಹೆಚ್ಚು ಬಾರಿ ತಮ್ಮ ಚಾನೆಲ್ ನಲ್ಲಿ ಕರೆಸಿ, ಮಾತನಾಡಿಸಿದ್ದಾರೆ. ಇಂಟರ್ ವ್ಯೂವ್ ಮಾಡಿದ್ದಾರೆ ಎಂದ್ರೆ ಅದು ಸಂತೋಶ್ ಲಾಡ್ ಅವರೇ ಇರಬಹುದೇನೋ..?ಯಾಕೆ ಅಜಿತ್ ಹನುಮಕ್ಕನವರ್, ತಮ್ಮ ಸೈದ್ದಾಂತಿಕ ವಿರೋಧಿ ಸಂತೋಶ್ ಲಾಡ್ ಅವರನ್ನು ಆಗಾಗ ಸಂದರ್ಶಿಸುತ್ತಿದ್ದರು,ಅವರ ಜತೆ ಆತ್ಮೀಯವಾದ ಸಂಪರ್ಕ ಇಟ್ಟುಕೊಂಡಿದ್ದರು ಎನ್ನುವುದಕ್ಕೂ ಉತ್ತರ ಸಿಕ್ಕಿರಬಹುದೆಂಬ ಭಾವನೆ ನಮ್ಮದು..ವೃತ್ತಿ ಮತ್ತು ಸುದ್ದಿ ವಿಚಾರಕ್ಕಷ್ಟೇ ಅಜಿತ್ ಅವರು ಲಾಡ್ ಜತೆ ಒಡನಾಟ ಇಟ್ಟುಕೊಂಡಿದಿದ್ದರೆ ಯಾರ ಅಭ್ಯಂತರವೂ ಇರಲಿಲ್ಲ..ಆಕ್ಷೇಪವೂ ಇರುತ್ತಿರಲಿಲ್ಲ..ಆದರೆ ಈ ಅತ್ಯಾಪ್ತತೆ ಹಾಗೂ ಒಡನಾಟದ ಹಿಂದೆ, ತನ್ನ ಪತ್ನಿಯ ‘RIGHT MEDIA TECH’ ಕಂಪೆನಿ ಹಿತಾಸಕ್ತಿ ಅಡಗಿದ್ದೇ ಆಗಿದ್ದಲ್ಲಿ ಇದಕ್ಕಿಂತ ದೊಡ್ಡ ವೃತ್ತಿದ್ರೋಹ ಮತ್ತೊಂದಿರಲಾರದೇನೋ..? ಅನ್ನಿಸುತ್ತೆ.ಆದರೂ ಮೇಲ್ನೋಟಕ್ಕೆ ತನ್ನ ಧರ್ಮಪತ್ನಿಯ ಕಂಪೆನಿಗೆ ಸಹಾಯ ಆಗಲೆಂದು ಹೀಗೆಲ್ಲಾ ಮಾಡಿದ್ರಾ..? ಅಜಿತ್ ತಮ್ಮ ಆತ್ಮಸಾಕ್ಷಿಯನ್ನೇ ಕೇಳಿಕೊಳ್ಳಬೇಕಷ್ಟೆ.ಆದರೆ ಮೇಲ್ನೋಟಕ್ಕೆ ಇದು ವೃತ್ತಿ ಹಾಗೂ ಅಧಿಕಾರದ ಮಿಸ್ಯೂಸ್ ಎನಿಸದೆ ಇರದು.

ಕಳೆದ ಮೂರ್ನಾಲ್ಕು ದಿನಗಳಿಂದಲೂ ಅಜಿತ್ ಹನುಮಕ್ಕನವರ್ ಅವರ ಧರ್ಮಪತ್ನಿ ಸಹನಾಭಟ್ ಅವರಿಗೆ ಸಂಬಂಧಿಸಿದ ಸುದ್ದಿಯೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಅದು ಹಣಕಾಸಿನ ವಿಚಾರದಲ್ಲಿ ನಡೆದಿದೆ ಎನ್ನಲಾದ ಆರ್ಥಿಕ ಅಶಿಸ್ತಿಗೆ ಸಂಬಂಧಿಸಿದ ವಿಚಾರ.ಅದರಲ್ಲಿ ಅಜಿತ್ ಅವರ ಪತ್ನಿ ಸಹನಾ ಅವರ ಪಾತ್ರವಿದೆ ಎನ್ನುವುದನ್ನು ಸಾರಿ ಹೇಳುವ ದಾಖಲೆಗಳು ಕೂಡ ಹರಿದಾಡುತ್ತಿವೆ.ಕನ್ನಡ ಫ್ಲ್ಯಾಶ್ ನ್ಯೂಸ್‌ಗೆ ಈ ಮಾಹಿತಿ ತುಂಬಾ ದಿನಗಳ ಹಿಂದೆಯೇ ಲಭ್ಯವಾಗಿತ್ತಾದರೂ ಅಜಿತ್ ಅವರ ಕುಟುಂಬದ ಖಾಸಗಿತನಕ್ಕೆ ಗೌರವಕ್ಕೆ ಬೆಲೆ ಕೊಟ್ಟು ಸುಮ್ಮನಾಗಿದ್ದೆವು.ಆದರೆ ದಾಖಲೆಗಳ ಸಮೇತ ಮಾಹಿತಿ ಹರಿದಾಡುತ್ತಿರುವುದರಿಂದ ಅನಿವಾರ್ಯವಾಗಿ ವರದಿ ಬರೆಯಬೇಕಾಗಿದೆ.ವರದಿಯ ಉದ್ದೇಶ ಅಜಿತ್ ಹನುಮಕ್ಕನವರ್ ಅವರ ತೇಜೋವಧೆಯಾಗಲಿ,ಅವರ ಕುಟುಂಬದ ಘನತೆ ಕುಂದಿಸುವ ಉದ್ದೇಶವಂತೂ ಖಂಡಿತಾ ಇಲ್ಲ..ಅಂಥಾ ದರ್ದು ಕೂಡ ಕನ್ನಡ ಫ್ಲ್ಯಾಶ್ ನ್ಯೂಸ್‌ಗಿಲ್ಲ..ಸುದ್ದಿ ಹೇಳುವುದಷ್ಟೇ ನಮ್ಮ ಕೆಲಸ.ಅದನ್ನು ಮಾತ್ರ ಮಾಡುತ್ತಿದ್ದೇವೆ.

ಅಜಿತ್ ಹನುಮಕ್ಕನವರ್ ಅವರ ಶಾಮೀಲಾತಿ ಈ ಪ್ರಕರಣದಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅವರ ಧರ್ಮಪತ್ನಿ ಸಹನಾ ಭಟ್ ನಿರ್ದೇಶಕರಾಗಿದ್ದಾರೆನ್ನಲಾದ ‘RIGHT MEDIA TECH’ ಎನ್ನುವ ಸಂಸ್ಥೆಯು ಕೋಟ್ಯಾಂತರ ಅಕ್ರಮ ನಡೆಸಿರುವುದರ ಬಗ್ಗೆ ಮಾದ್ಯಮಗಳಲ್ಲಿ ಈಗಾಗಲೇ ವರದಿಯಾಗಿದೆ. ಅಜಿತ್ ಅವರ ನೈತಿಕತೆ ಮತ್ತು ಸೈದ್ದಾಂತಿಕತೆ ಎರಡೂ ಈ ಹಗರಣದ ಕಾರಣಕ್ಕೆ ಪ್ರಶ್ನೆಗೀಡಾಗುತ್ತಿದೆ. ಅಂದ್ಹಾಗೆ ಅಜಿತ್ ಅವರ ಪತ್ನಿ ಸಹನಾ ಭಟ್( ಅವರು ಕೂಡ ಪತ್ರಕರ್ತೆಯಾಗಿ ಟಿವಿ 9 ಸೇರಿದಂತೆ ಮಾದ್ಯಮ ರಂಗದಲ್ಲಿ ಕೆಲಸ ಮಾಡಿದ್ದಾರೆ). ಪಾಲುದಾರರಾಗಿರುವ ‘RIGHT MEDIA TECH’ ಎಂಬ ಸಂಸ್ಥೆಯ ಬಗ್ಗೆ ಐಟಿ ಸರಬರಾಜು ಹಗರಣ ಕೇಳಿಬಂದಿದೆ. ಸರ್ಕಾರಿ ಇಲಾಖೆಗಳಿಗೆ ಐಟಿ ಉಪಕರಣ ಸರಬರಾಜು ಮಾಡುವ ಗುತ್ತಿಗೆ ಪಡೆದ ‘RIGHT MEDIA TECH’ ಕಳಪೆ ಹಾಗೂ ಕಳಜೆ ದರ್ಜೆಯ ಉಪಕರಣ ಪೂರೈಸಿ ಕೋಟ್ಯಂತರ ರೂಪಾಯಿಗಳನ್ನು ಲೂಟಿ ಮಾಡಿದೆ ಎಂಬ ಆಪಾದನೆ ಕೇಳಿಬಂದಿವೆ.ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು.ಸಹನಾಭಟ್ ಅವರ ಶಾಮೀಲಾತಿ ಎಷ್ಟರ ಪ್ರಮಾಣದಲ್ಲಿದೆ ಎನ್ನುವುದು ಬಹಿರಂಗವಾಗಬೇಕಿದೆ.ಇದರಲ್ಲಿ ಅಜಿತ್ ಹನುಮಕ್ಕನವರ್ ಅವರ ಪರೋಕ್ಷ ಸಹಕಾರವಿದ್ದರೆ ಅವರನ್ನೂ ವಿಚಾರಣೆಗೊಳಪಡಿಸಬೇಕೆನ್ನುವ ವಾದ ಕೂಡ ಕೇಳಿಬರುತ್ತಿದೆ.

ಅಜಿತ್ ಹನುಮಕ್ಕನವರ್ ಅವರ ನೇರ ಶಾಮೀಲಾತಿ ಈ ಪ್ರಕರಣದಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅವರ ಧರ್ಮಪತ್ನಿ ಸಹನಾ ಭಟ್ ನಿರ್ದೇಶಕರಾಗಿದ್ದಾರೆನ್ನಲಾದ ‘RIGHT MEDIA TECH’ ಎನ್ನುವ ಸಂಸ್ಥೆಯು ಕೋಟ್ಯಾಂತರ ಅಕ್ರಮ ನಡೆಸಿರುವುದರ ಬಗ್ಗೆ ಮಾದ್ಯಮಗಳಲ್ಲಿ ಈಗಾಗಲೇ ವರದಿಯಾಗಿದೆ. ಅಜಿತ್ ಅವರ ನೈತಿಕತೆ ಮತ್ತು ಸೈದ್ದಾಂತಿಕತೆ ಎರಡೂ ಈ ಹಗರಣದ ಕಾರಣಕ್ಕೆ ಪ್ರಶ್ನೆಗೀಡಾಗುತ್ತಿದೆ.ಅಂದ್ಹಾಗೆ ಅಜಿತ್ ಅವರ ಪತ್ನಿ ಸಹನಾ ಭಟ್( ಅವರು ಕೂಡ ಪತ್ರಕರ್ತೆಯಾಗಿ ಟಿವಿ 9 ಸೇರಿದಂತೆ ಮಾದ್ಯಮ ರಂಗದಲ್ಲಿ ಕೆಲಸ ಮಾಡಿದ್ದಾರೆ). ಪಾಲುದಾರರಾಗಿರುವ ‘RIGHT MEDIA TECH’ ಎಂಬ ಸಂಸ್ಥೆಯ ಬಗ್ಗೆ ಐಟಿ ಸರಬರಾಜು ಹಗರಣ ಕೇಳಿಬಂದಿದೆ. ಸರ್ಕಾರಿ ಇಲಾಖೆಗಳಿಗೆ ಐಟಿ ಉಪಕರಣ ಸರಬರಾಜು ಮಾಡುವ ಗುತ್ತಿಗೆ ಪಡೆದ ‘RIGHT MEDIA TECH’ ಕಳಪೆ ಹಾಗೂ ಕಳಜೆ ದರ್ಜೆಯ ಉಪಕರಣ ಪೂರೈಸಿ ಕೋಟ್ಯಂತರ ರೂಪಾಯಿಗಳನ್ನು ಲೂಟಿ ಮಾಡಿದೆ ಎಂಬ ಆಪಾದನೆ ಕೇಳಿಬಂದಿವೆ.ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು.ಸಹನಾಭಟ್ ಅವರ ಶಾಮೀಲಾತಿ ಎಷ್ಟರ ಪ್ರಮಾಣದಲ್ಲಿದೆ ಎನ್ನುವುದು ಬಹಿರಂಗವಾಗಬೇಕಿದೆ.ಇದರಲ್ಲಿ ಅಜಿತ್ ಹನುಮಕ್ಕನವರ್ ಅವರ ಪರೋಕ್ಷ ಸಹಕಾರವಿದ್ದರೆ ಅವರನ್ನೂ ವಿಚಾರಣೆಗೊಳಪಡಿಸಬೇಕೆನ್ನುವ ವಾದ ಕೂಡ ಕೇಳಿಬರುತ್ತಿದೆ.
ವಾಸ್ತವದ ನೆಲೆಗಟ್ಟಿನಲ್ಲಿ ‘RIGHT MEDIA TECH’ ಕಂಪೆನಿ ಸರಬರಾಜು ಮಾಡಲಾದ ಪ್ರತಿಯೊಂದು ಉಪಕರಣದಲ್ಲೂ ಲೂಟಿಯ ಕರಿನೆರಳು ಕಾಣಿಸುತ್ತಿದೆಯಂತೆ.ಇದನ್ನು ಪುಷ್ಟೀಕರಿಸುವ ಒಂದಷ್ಟು ಝಲಕ್ ಇಲ್ಲಿದೆ ನೋಡಿ:
ಮಾರುಕಟ್ಟೆಯಲ್ಲಿ ಒಂದು ಬಯೋಮೆಟ್ರಿಕ್ ಯೂನಿಟ್ ಬೆಲೆ ಸುಮಾರು ₹8,000 ದಿಂದ ₹9,000 ಇದೆ ಎಂದುಕೊಂಡ್ರೆ ‘RIGHT MEDIA TECH’ ಸಂಸ್ಥೆ ಪ್ರತಿ ಯೂನಿಟ್‌ಗೆ ₹29,500 ಕೋಟ್ ಮಾಡಿದೆ.ಹೀಗೆ ಅಸಂಖ್ಯಾತ ಬಯೋಮೆಟ್ರಿಕ್ ಯೂನಿಟ್ ಗಳನ್ನು ಪೂರೈಸಿದೆಯಂತೆ.ಸುಳ್ಳು ಕೋಟೇಷನ್ ಕೊಟ್ಟು ಕಂಪೆನಿ ಲೂಟಿ ಮಾಡಿರಬಹುದಾದ ಮೊತ್ತ ಅದೆಷ್ಟೋ ಕೋಟಿಗಳಂತೆ.ವಿಚಿತ್ರ ಎಂದರೆ ‘RIGHT MEDIA TECH’ ₹1.05 ಕೋಟಿ ಮೌಲ್ಯದ ಆರ್ಡರ್ ಅನ್ನು ಫೈಲ್ ನಂಬರ್ 190 ಮತ್ತು 191ರ ಮೂಲಕ ಗಿಟ್ಟಿಸಿಕೊಂಡಿದೆಯಂತೆ.ಇನ್ನು ₹1.64 ಕೋಟಿ ಮೌಲ್ಯದ UPS ಮತ್ತು ಬ್ಯಾಟರಿ ಪೂರೈಕೆ(ವಹಿವಾಟು ಫೈಲ್ ನಂಬರ್ 184 ಮತ್ತು 185)ಯಲ್ಲೂ ಅಕ್ರಮ ನಡೆದಿದೆ ಎನ್ನಲಾಗಿದೆ.ಮಾರುಕಟ್ಟೆಯಲ್ಲಿ ₹90,000 ದಿಂದ ₹1,00,000 ವರೆಗೆ ಲಭ್ಯವಿರುವ UPS ಮತ್ತು ಬ್ಯಾಟರಿ ಸ್ಟ್ಯಾಂಡ್‌ಗಳನ್ನು ₹2,86,000 ರಂತೆ ಬಿಲ್ ಮಾಡಿ ಸಲ್ಲಿಸಿದೆ. ಹಾಗೆಯೇ ಮಾರುಕಟ್ಟೆ ಬೆಲೆ ಕೇವಲ ₹8,000 ರಿಂದ ₹9,000 ಇರುವ “ಬಯೋಮೆಟ್ರಿಕ್ ಘಟಕಗಳನ್ನು ಪ್ರತಿ ಯೂನಿಟ್‌ಗೆ ₹29,500 ರಂತೆ ಶುಲ್ಕ ವಿಧಿಸಿ ಪೂರೈಸಲಾಗಿದೆಯಂತೆ.
ಟೆಂಡರ್ ನಿಯಮಗಳಲ್ಲೂ ಸ್ಪಷ್ಟ ಉಲ್ಲಂಘನೆ: ಸರ್ಕಾರಿ ಖರೀದಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಲು ಟೆಂಡರ್ ಕರೆಯುವುದು ಕಡ್ಡಾಯ. ಆದರೆ ಈ ಕಾನೂನುಗಳನ್ನು ಗಾಳಿಗೆ ತೂರಲು ‘ಆರ್ಡರ್ ಸ್ಪ್ಲಿಟಿಂಗ್’ (Order Splitting) ಎಂಬ ಕುತಂತ್ರವನ್ನು ಬಳಸಲಾಗಿದೆ. ಈ ಮೂಲಕ ಬೃಹತ್ ಮೊತ್ತದ ಆರ್ಡರ್‌ಗಳನ್ನು ಸಣ್ಣ ತುಣುಕುಗಳಾಗಿ ವಿಭಜಿಸಿ ಟೆಂಡರ್ ಇಲ್ಲದೆ ನೇರವಾಗಿ ಕೆಲಸ ಗಿಟ್ಟಿಸಲಾಗಿದೆ.ಹಾಗೆಯೇ ಟೆಂಡರ್ ನಿಯಮಗಳಿಂದ ತಪ್ಪಿಸಿಕೊಳ್ಳಲು ₹3.68 ಕೋಟಿ ಮೌಲ್ಯದ ಕಂಪ್ಯೂಟರ್ ಸರಬರಾಜು ಆರ್ಡರ್ ನ್ನು ( ಫೈಲ್ ನಂಬರ್ 100, 101, 102 ಮತ್ತು 128 ರ ಅಡಿಯಲ್ಲಿ) 4 ಪ್ರತ್ಯೇಕ ಭಾಗಗಳಾಗಿ ವಿಭಜಿಸಲಾಗಿದೆ. 85 ‘ಆಲ್-ಇನ್-ಒನ್’ ಕಂಪ್ಯೂಟರ್‌ಗಳಿಗಾಗಿ ತಲಾ ₹95,000 ರಂತೆ ಒಟ್ಟು 1.65 ಕೋಟಿ ಮೊತ್ತದ ಆರ್ಡರ್ ಅನ್ನು (ಫೈಲ್ ನಂಬರ್ 233 ಮತ್ತು 234 ರ ಅಡಿಯಲ್ಲಿ) ನೀಡಲಾಗಿದೆ. ₹9.14 ಕೋಟಿ ಮೌಲ್ಯದ ಇಂಟರ್ನೆಟ್ ವೈಫೈ ರೂಟರ್ ಮತ್ತು ಇತರ ನೆಟ್‌ವರ್ಕಿಂಗ್ ಉಪಕರಣಗಳನ್ನು ಬರೋಬ್ಬರಿ 11 ಆರ್ಡರ್‌ಗಳಾಗಿ (ಫೈಲ್ ನಂಬರ್ 352 ರಿಂದ 362) ವಿಂಗಡಿಸಲಾಗಿದೆ. ಇದರ ಜೊತೆಗೆ ₹1.51 ಕೋಟಿ ಮೌಲ್ಯದ LAN ಇನ್ಫ್ರಾಸ್ಟ್ರಕ್ಚರ್ ಕಾರ್ಯವನ್ನು ಫೈಲ್ ನಂಬರ್ 61 ಮತ್ತು 62 ರ ಮೂಲಕ ವಿಭಜಿಸಿ ಹಣ ಲೂಟಿ ಮಾಡಲಾಗಿದೆ ಎನ್ನುವ ಆಪಾದನೆ ಕೇಳಿಬಂದಿದೆ.ಇದೆಲ್ಲಕ್ಕಿಂತ ಹೆಚ್ಚಾಗಿ ಇಲಾಖೆಗೆ ಉಪಕರಣಗಳ ಸರಬರಾಜು ಪೂರ್ಣಗೊಂಡ ನಂತರ ಟೆಂಡರ್ ಕರೆಯಲಾಗಿದೆ. ಅಂದರೆ, ವ್ಯವಹಾರ ಮೊದಲೇ ಮುಗಿದು ಹಣ ಹಂಚಿಕೆಯಾದ ಮೇಲೆ ಕಾನೂನುಬದ್ಧತೆಯ ಮುಖವಾಡ ಧರಿಸಲು ಈ ನಾಟಕವಾಡಲಾಗಿದೆ. ದುರಂತ ಎಂದ್ರೆ ಈ ಯಾವ ಪರಿಕರಗಳ ಸರಬರಾಜುಗಳಿಗೆ ಸಂಬಂಧಿಸಿದಂತೆ ಯಾವುದೇ ‘ಥರ್ಡ್-ಪಾರ್ಟಿ ಇನ್ಸ್ಪೆಕ್ಷನ್’ (Third-Party Inspection) ಮಾಡಲಾಗಿಲ್ಲವಂತೆ.ಹಗರಣ ನಡೆದಿರುವುದನ್ನು ಇದು ಬಲವಾಗಿ ಪುಷ್ಟೀಕರಿಸುತ್ತದೆಯಲ್ಲವೇ..?
ಇದರ ಬಗ್ಗೆ ಏಕೆ ತನಿಖೆ ಆಗಬೇಕು: ಪತ್ರಿಕೋದ್ಯಮವನ್ನು ಕೇವಲ ಅನ್ನ ನೀಡುವ ಉದ್ಯೋಗ ಎಂದು ಭಾವಿಸದೆ ಅದನ್ನು ಪವಿತ್ರ ವೃತ್ತಿ ಎಂದೇನಾದ್ರೂ ಅಜಿತ್ ಹನುಮಕ್ಕನವರ್ ಭಾವಿಸಿದ್ದರೆ ತಮ್ಮ ಪತ್ನಿ ನಿರ್ದೇಶಕರಾಗಿರುವ ‘RIGHT MEDIA TECH’ ವಿರುದ್ಧ ಅಷ್ಟೇ ಅಲ್ಲ,ತಾವೇ ಖುದ್ದು ಅಗ್ನಿಪರೀಕ್ಷೆಗೆ ಒಳಗಾಗುವುದು ಒಳ್ಳೆಯದು.ಅಜಿತ್ ಅವರಾಗಲಿ,ಅವರ ಪತ್ನಿಯಾಗಲಿ ಇದರಲ್ಲಿ ಭಾಗಿಯಾಗಿಲ್ಲ ಎನ್ನುವುದೇ ಸತ್ಯವಾದ್ರೆ ಇದರ ಬಗ್ಗೆ ತನಿಖೆ ಆಗಬೇಕೆಂದು ಅಜಿತ್ ಅವರೇ ಸಂಬಂಧಪಟ್ಟ ಇಲಾಖೆಗೆ ಅಥವಾ ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸುವುದು ನೈತಿಕತೆ ದೃಷ್ಟಿಯಿಂದ ಸೂಕ್ತ ಎನಿಸುತ್ತದೆ. “ಪತ್ರಿಕೋದ್ಯಮ”ವನ್ನಷ್ಟೇ ಅಲ್ಲ ಅವರ ಹೊಣೆಗಾರಿಕೆಯನ್ನೇ ಮಿಸ್ಯೂಸ್ ಮಾಡಿಕೊಳ್ಳಲಾಗಿದೆ ಎನ್ನುವ ಗುರುತರ ಆಪಾದನೆ ಸತ್ಯಕ್ಕೆ ದೂರವಾದದ್ದು ಎಂದು ಪ್ರೂವ್ ಮಾಡಿಕೊಳ್ಳಲು ಅಜಿತ್ ಗೆ ಇದಕ್ಕಿಂತ ದೊಡ್ಡ ಅವಕಾಶ ಮತ್ತೊಂದು ಇರಲಾರದೇನೋ..?ಅಜಿತ್ ಅವರ ಗಳಿಕೆ-ಆಸ್ತಿ ಸಂಪಾದನೆ ಬಗ್ಗೆ ಎದ್ದಿರುವ ಪುಕಾರುಗಳಿಗೆಲ್ಲಾ ಸ್ಪಷ್ಟನೆ ನೀಡಲು ಇದು ಅವರಿಗೆ ಅಗತ್ಯದಷ್ಟೇ ಅನಿವಾರ್ಯ ಮಾರ್ಗ ಎನಿಸುತ್ತದೆ.ತಮ್ಮನ್ನು ದ್ಯೇಯನಿಷ್ಟ-ತತ್ವನಿಷ್ಟ ಪತ್ರಕರ್ತ ಎಂದು ಕರೆಯಿಸಿಕೊಳ್ಳುವ ಅಜಿತ್ ಅವರಿಗೂ ಧರ್ಮಪತ್ನಿ ನಿರ್ದೇಶಕ ರಾಗಿರುವ ಕಂಪೆನಿಗೂ ಯಾವುದೇ ಸಂಬಂಧವಿಲ್ಲ ಎನ್ನುವುದು ಜಗಜ್ಜಾಹೀರಾ ಗಲು ಅಜಿತ್ ಅವರಿಗೆ ಇದೊಂದು ಸುವರ್ಣಾವಕಾಶ.ಅಜಿತ್ ಅವರಿಗೂ ಬಹುಷ ಇದು ಸರಿ ಎನಿಸುತ್ತಿರಬೇಕಲ್ವಾ..! ಎಲ್ಲಕ್ಕಿಂತ ಹೆಚ್ಚಾಗಿ ‘RIGHT MEDIA TECH’ ಸಂಸ್ಥೆ ಮೇಲೆ ಕೇಳಿಬಂದಿರುವ ಹಣ ಲೂಟಿಯು ಸಾರ್ವಜನಿ ಕರ ತೆರಿಗೆ ಹಣದ ದುರ್ಬಳಕೆಯಾಗಿದೆ. ಇದು ಕೆಲವು ಪಟ್ಟಭದ್ರರ ಪಾಲಾಗಲು ಏಕೆ ಬಿಡಬೇಕು.ಅದು ಸರ್ಕಾರಕ್ಕೆ ಸಂದಾಯವಾಗಲೇಬೇಕು.ದುರುಪಯೋಗವಾಗಿರುವ ಹಣವನ್ನು ವಾಪಸ್ ಬೊಕ್ಕಸಕ್ಕೆ ಸೇರಿಸುವುದು ಸರ್ಕಾರದ ಹೊಣೆಯಾಗಿದೆ.ಈ ಕೆಲಸ ಮಾಡಲು ಎಷ್ಟು ಪ್ರಮಾಣದ ಸಾರ್ವಜನಿಕರ ತೆರಿಗೆ ಹಣ ದುರ್ಬಳಕೆಯಾಗಿದೆ ಎನ್ನುವುದು ಸಾಬೀತಾಗಬೇಕಿದೆ. ಅದು ಸಾಬೀತಾಗಬೇಕಾದರೆ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆಯಾಗಲೇಬೇಕಿದೆ.ಇದರಲ್ಲಿ ಸಹನಾಭಟ್ ಅವರಾಗಲಿ, ಅಜಿತ್ ಹನುಮಕ್ಕನವರ್ ಅವರದಾಗಲಿ ಅಥವಾ ಖುದ್ದು ಸಂತೋಷ್ ಲಾಡ್ ಅವರ ಪಾತ್ರವಿದ್ದರೂ ಅವರ ವಿರುದ್ದ ಕ್ರಮ ಜಾರಿಯಾಗಲೇಬೇಕು..ನೈಸರ್ಗಿಕ ಹಾಗೂ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಇದು ಆಗಲೇಬೇಕಲ್ಲವೇ..
ಬಿಲ್ ಪಾವತಿಸದ್ದಕ್ಕೆ ಕಿಯೋನಿಕ್ಸ್ ವಿರುದ್ಧ ಸುವರ್ಣ ಟಿವಿಯಲ್ಲಿ ನೆಗೆಟಿವ್ ನ್ಯೂಸ್ ಮಾಡಲಾಯ್ತಾ,.?: . ‘RIGHT MEDIA TECH’ ಸಂಸ್ಥೆಯ ಕಾನೂನುಬಾಹಿರ ಕೆಲಸಗಳಿಗೆ ಸಂಬಂಧಿಸಿದಂತೆ ಬಿಲ್‌ಗಳನ್ನು ಪಾವತಿಸಲು (Keonics) ವ್ಯವಸ್ಥಾಪಕ ನಿರ್ದೇಶಕರು (MD) ನಿರಾಕರಿಸಿದ್ದರಂತೆ.ಆಗ ಸುವರ್ಣ ವಾಹಿನಿಯನ್ನೇ ಅಸ್ತ್ರವಾಗಿ ಬಳಸಿಕೊಂಡು ಕಿಯೋನಿಕ್ಸ್ ವಿರುದ್ಧ ಅಜಿತ್ ಸುದ್ದಿ ಮಾಡಿಸಿದ್ದರೆನ್ನುವ ಆಪಾದನೆಗಳಿವೆ.ಈ ರೀತಿ ನಡೆದಿದ್ದಲ್ಲಿ ಇದು ಮಾದ್ಯಮಶಕ್ತಿಯ ದುರುಪಯೋಗವಲ್ಲದೇ ಇನ್ನೇನಾದೀತು.? ಇನ್ನು ಅಜಿತ್ ಹನುಮಕ್ಕನವರ್ ಬಳಸುತ್ತಿರುವ ‘ಇನ್ನೋವಾ’ ಕಾರು ‘RIGHT MEDIA TECH’ ಸಂಸ್ಥೆಯ ಹೆಸರಿನಲ್ಲಿ ನೋಂದಣಿಯಾಗಿದೆ ಎನ್ನುವ ಮಾತುಗಳಿವೆ.ಸೈದ್ಧಾಂತಿಕವಾಗಿ ತಮ್ಮನ್ನು ಬದ್ಧತೆಯ ಪತ್ರಕರ್ತ ಎಂದು ಕರೆಯಿಸಿಕೊಳ್ಳುವ ಅಜಿತ್ ಹನುಮಕ್ಕನವರ್ ತನ್ನ ಧರ್ಮಪತ್ನಿಯ ಕಂಪೆನಿಯ ಅಕ್ರಮ-ಭ್ರಷ್ಟಾಚಾರ ಮುಚ್ಚಿ ಹಾಕೊಕ್ಕೆ ರಾಜೀವ್ ಚಂದ್ರಶೇಖರ್ ಅವರಂಥ ಸಂಭಾವಿತ ವ್ಯಕ್ತಿ ನಂಬಿಕೆ ನೀಡಿ ವಹಿಸಿಕೊಟ್ಟ ಸುವರ್ಣ ನ್ಯೂಸ್ ಎನ್ನುವ ಚಾನೆಲ್ ನ ಸಂಪಾದಕನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದು ಎಷ್ಟು ಸರಿ ಎನ್ನುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿರುವ ವಿಷಯ.ಸರ್ಕಾರದ ಮಟ್ಟದಲ್ಲೇ ಕೆಲಸ ಮಾಡುವ ಓರ್ವ ವಿಸ್ಲ್ ಬ್ಲೋವರ್ (Whistleblower) ಈಗಾಗಲೇ ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಎಲ್ಲಾ ದಾಖಲೆಗಳನ್ನು ಹೊರಹಾಕಿದ್ದಾರೆ ಎನ್ನುವ ಮಾತುಗಳಿವೆ.
ಅಜಿತ್ ಹನುಮಕ್ಕನವರ್ ಅವರ ಪಾತ್ರ ಈ ಅಕ್ರಮದಲ್ಲಿ ಇದೆ ಎನ್ನುವುದು ನಮ್ಮ ವಾದ ಅಲ್ಲವೇ ಅಲ್ಲ.. ಆದರೆ ಒಂದು ವೇಳೆ ಇರುವುದು ಸಾಬೀತಾದ್ರೆ ಅದು ಹೇಗೆ..ಎಷ್ಟು ಪ್ರಮಾಣದಲ್ಲಿ ಎನ್ನುವುದು ಗೊತ್ತಾಗಬೇಕು.ಒಂದು ವೇಳೆ ಅದೇ ಸತ್ಯವಾಗಿದ್ದಲ್ಲಿ ಎಲ್ಲರಂತೆ ಅವರು ಕಾನೂನಿನ ನಿಯಾಮವಳಿಗೆ ಬಾಧ್ಯಸ್ಥರಾಗಬೇಕಾಗುತ್ತದೆ ಎನ್ನುವುದಷ್ಟೇ ನಮ್ಮ ಅನಿಸಿಕೆ.









