advertise here

Search

ಬೆಂಗಳೂರು ಪೂರ್ವ ಬಜೆಟ್ 2026-27: ಮೂಲಸೌಕರ್ಯದ ಜೊತೆ ‘ಕಲ್ಯಾಣ’ ಮಂತ್ರ; ಬಡವರ ಮನೆಗೆ ಪಾಲಿಕೆ ಆಸರೆ!

bangalore east city corporation

ಬೆಂಗಳೂರು: ಸಿಲಿಕಾನ್ ಸಿಟಿಯ ವೇಗವಾಗಿ ಬೆಳೆಯುತ್ತಿರುವ ಪೂರ್ವ ವಲಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ₹3,889 ಕೋಟಿ ಮೊತ್ತದ ಬೃಹತ್ ಬಜೆಟ್‌ ಅನ್ನು ಬೆಂಗಳೂರು ಪೂರ್ವ ನಗರ ಪಾಲಿಕೆ ಇಂದು ಮಂಡಿಸಿದೆ. ಕೇವಲ ರಸ್ತೆ, ಫ್ಲೈಓವರ್‌ಗಳಿಗೆ ಸೀಮಿತವಾಗದೆ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಬಲೀಕರಣಕ್ಕೆ ಬಜೆಟ್‌ನಲ್ಲಿ ಒತ್ತು ನೀಡಿರುವುದು ವಿಶೇಷ.

ಈ ಬಜೆಟ್‌ನ ಅತ್ಯಂತ ಆಕರ್ಷಕ ಘೋಷಣೆ ಎಂದರೆ 1BHK ಮನೆ ಖರೀದಿಗೆ ನೀಡಲಿರುವ ₹5 ಲಕ್ಷ ಸಹಾಯಧನ. ನಗರದ ದುಬಾರಿ ಬಾಡಿಗೆ ಮನೆಯಲ್ಲಿ ವಾಸಿಸುವ ದುರ್ಬಲ ವರ್ಗದವರಿಗೆ ಇದು ಆಸರೆಯಾಗಲಿದೆ. ಇದರೊಂದಿಗೆ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಹಾಗೂ ವಿದೇಶಿ ವ್ಯಾಸಂಗಕ್ಕೆ ಪ್ರೋತ್ಸಾಹ ಧನ ನೀಡುವ ಮೂಲಕ ಶಿಕ್ಷಣ ಕ್ಷೇತ್ರಕ್ಕೂ ದೊಡ್ಡ ಕೊಡುಗೆ ನೀಡಲಾಗಿದೆ.

ಮಹಿಳಾ ಸಬಲೀಕರಣಕ್ಕೆ ‘ಇ-ಸ್ಕೂಟರ್’ ವೇಗ

ಉದ್ಯೋಗಸ್ಥ ಮಹಿಳೆಯರ ಸಂಚಾರ ಸುಗಮಗೊಳಿಸಲು ಉಚಿತ ಇ-ಸ್ಕೂಟರ್ ವಿತರಣೆ ಮತ್ತು ಸ್ವಯಂ ಉದ್ಯೋಗಕ್ಕೆ ಆಸಕ್ತಿ ಇರುವವರಿಗೆ ಹೊಲಿಗೆ ಯಂತ್ರ ಹಾಗೂ ತರಬೇತಿ ನೀಡುವ ಯೋಜನೆಗಳನ್ನು ಘೋಷಿಸಲಾಗಿದೆ. ಇದು ಪೂರ್ವ ಬೆಂಗಳೂರಿನ ಶ್ರಮಿಕ ವರ್ಗದ ಮಹಿಳೆಯರಲ್ಲಿ ಹೊಸ ಭರವಸೆ ಮೂಡಿಸಿದೆ.

ಡಿಜಿಟಲ್ ಕ್ರಾಂತಿ ಮತ್ತು ಪಾರದರ್ಶಕತೆ

ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಲು ಆಡಳಿತದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ:

  • ಬ್ಲಾಕ್‌ಚೈನ್ ತಂತ್ರಜ್ಞಾನ: 4.5 ಲಕ್ಷ ಖಾತೆಗಳ ಡಿಜಿಟಲೀಕರಣ ಮತ್ತು ಇ-ಖಾತಾ ವಿತರಣೆ.
  • AI ಹಾಜರಾತಿ: ಪಾಲಿಕೆ ಸಿಬ್ಬಂದಿಗಳ ಕಾರ್ಯವೈಖರಿ ಸುಧಾರಿಸಲು ಕೃತಕ ಬುದ್ಧಿಮತ್ತೆ ಆಧಾರಿತ ಹಾಜರಾತಿ ವ್ಯವಸ್ಥೆ.
  • ಆನ್‌ಲೈನ್ ಅನುಮತಿ: ಕಟ್ಟಡ ನಕ್ಷೆ ಅನುಮೋದನೆಗೆ ಇನ್ನು ಕಚೇರಿ ಅಲೆಯುವಂತಿಲ್ಲ.
ALSO READ :  ಐಪಿಎಲ್ 2026: ಉದ್ಘಾಟನಾ ಸಮಾರಂಭ ರದ್ದುಗೊಳಿಸಿದ ಬಿಸಿಸಿಐ!

ಮೂಲಸೌಕರ್ಯಕ್ಕೆ ಬರೋಬ್ಬರಿ ₹2,400 ಕೋಟಿ!

ಪೂರ್ವ ವಲಯದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲು ₹450 ಕೋಟಿ ವೆಚ್ಚದಲ್ಲಿ ರಸ್ತೆ, ಟನಲ್ ಹಾಗೂ ಫ್ಲೈಓವರ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ವಿಶೇಷವಾಗಿ ವರ್ತೂರು ಮತ್ತು ಬೆಳ್ಳಂದೂರು ಕೆರೆಗಳ ಪುನಶ್ಚೇತನಕ್ಕೆ ಶಾಸಕಿ ಮಂಜುಳಾ ಲಿಂಬಾವಳಿ ಅವರು ಒತ್ತಾಯಿಸಿದ್ದು, ಅದಕ್ಕೆ ಪೂರಕವಾಗಿ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದೆ.

ಇದನ್ನೂ ಓದಿ | ಡಾ. ಶಿವಲಿಂಗಯ್ಯನವರ ‘ವಿಕ್ಟೋರಿಯಾ ಹಗರಣ’: ಆಶಾ ಪರ್ವೀನ್ ವರ್ಗಾವಣೆಯ ಹಿಂದೆ ಸಚಿವರ ಕೈವಾಡವಿದೆಯೇ?

“ಪೂರ್ವ ಬೆಂಗಳೂರು ಕೇವಲ ತಾಂತ್ರಿಕ ಹಬ್ ಆಗಿ ಉಳಿಯಬಾರದು, ಇದು ಎಲ್ಲ ವರ್ಗದ ಜನರಿಗೂ ವಾಸಯೋಗ್ಯವಾಗಬೇಕು ಎನ್ನುವುದೇ ಈ ಬಜೆಟ್‌ನ ಆಶಯ.” ಡಿ.ಎಸ್. ರಮೇಶ್, ಆಯುಕ್ತರು, ಪೂರ್ವ ನಗರ ಪಾಲಿಕೆ.

ಪೂರ್ವ ವಲಯದಲ್ಲಿ ವಾಹನ ಸಂಚಾರ ಹೆಚ್ಚಿರುವುದರಿಂದ ರಸ್ತೆ ಹಾಳಾಗುತ್ತಿವೆ. ವರ್ತೂರು, ಬೆಳ್ಳಂದೂರು ಕೆರೆ ಅಭಿವೃದ್ಧಿ ವೇಗಗೊಳ್ಳಬೇಕು. ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ ಅಗತ್ಯ ಎಂದು ಶಾಸಕಿ ಮಂಜುಳ ಲಿಂಬಾವಳಿ ಒತ್ತಾಯಿಸಿದರು.

ಈ ಬಜೆಟ್ ಬೆಂಗಳೂರಿನ ಪೂರ್ವ ಭಾಗದ ಭವಿಷ್ಯದ ಚಿತ್ರಣವನ್ನು ಬದಲಿಸುವ ಶಕ್ತಿ ಹೊಂದಿದೆ. ಆದರೆ ಘೋಷಿತ ಯೋಜನೆಗಳು ಕಾಲಮಿತಿಯಲ್ಲಿ ಜಾರಿಯಾಗುತ್ತವೆಯೇ ಎಂಬುದು ಸಾರ್ವಜನಿಕರ ಕುತೂಹಲವಾಗಿದೆ.


Political News

ಕರಾವಳಿಗೆ ಬಂತು ‘ಅನಿಲ’ ಸಂಜೀವಿನಿ: ಮಂಗಳೂರು ಬಂದರಿಗೆ 16 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಹಡಗು ಆಗಮಿಸಿ!

ಸಾರಿಗೆ ನೌಕರರಿಗೆ ‘ದ್ರೋಹ’ದ ಆರೋಪ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ ಆನಂದ್!

ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: ರಷ್ಯಾದಿಂದ ‘ಡಬಲ್’ ತೈಲ ಆಮದು!

ಪಂಚ ಗ್ಯಾರಂಟಿ ಹೆಸರಲ್ಲಿ ಕೋಟಿ ಕೋಟಿ ಪೋಲು: ಇದು ಅನುಷ್ಠಾನವೋ ಅಥವಾ ಲೂಟಿಯೋ?

ದಾವಣಗೆರೆ ದಕ್ಷಿಣ ಉಪಸಮರ: ‘ಕೈ’ ಕೋಟೆಯಲ್ಲಿ ಬಂಡಾಯದ ಕಿಚ್ಚು! ಕಾಂಗ್ರೆಸ್‌ಗೆ ತಲೆನೋವು

ಕನ್ನಡಿಗರ ತೆರಿಗೆ ಕೇರಳ ಪಾಲು? ವಯನಾಡಿಗೆ 10 ಕೋಟಿ ನೀಡಿದ ಸಿದ್ದರಾಮಯ್ಯರಿಗೆ ‘ಕೇರಳ ಸಿಎಂ’ ಪಟ್ಟ ಕಟ್ಟಿದ ಆರ್. ಅಶೋಕ್!

ಉಪಸಮರದ ಅಖಾಡ ಸಿದ್ಧ: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ಕಮಲ-ಕೈ ಪಡೆಗಳ ಭರ್ಜರಿ ಶಕ್ತಿ ಪ್ರದರ್ಶನ!

ಪಶ್ಚಿಮ ಏಷ್ಯಾ ಯುದ್ಧದ ಭೀತಿ: ಸಂಸತ್‌ನಲ್ಲಿ ಪ್ರಧಾನಿ ಮೋದಿ ‘ಅಭಯ ಹಸ್ತ’; ಭಾರತದ ರಣತಂತ್ರವೇನು?

Scroll to Top