advertise here

Search

BMTC ಸಿಬ್ಬಂದಿ ಪಾಲಿಗೆ ಕತ್ತಲಾದ ದೀಪಾವಳಿ, KSRTC ಸಿಬ್ಬಂದಿಗೆ ಫುಲ್ ಸ್ಯಾಲರಿ!


ಬೆಂಗಳೂರು: ಎಲ್ಲಾ ನಿಗಮಗಳ ಸಾರಿಗೆ ಸಿಬ್ಬಂದಿಯನ್ನೂ ಒಂದೇ ರೀತಿ ಸರ್ಕಾರ ಟ್ರೀಟ್ ಮಾಡಬೇಕಾಗುತ್ತದೆ.ಅದು ಸ್ವಾಭಾವಿಕ ಅಷ್ಟೇ ಅಲ್ಲ ಸಾಮಾಜಿಕ ನ್ಯಾಯ ಕೂಡ ಹೌದು..ಆದ್ರೆ ಪರಸ್ಪರರು ಹಿಡಿಶಾಪ ಹಾಕಿಕೊಳ್ಳುವ ,ಬೈಯ್ದಾಡಿಕೊಳ್ಳುವ,ಆರೋಪ-ಪ್ರತ್ಯಾರೋಪಗಳಲ್ಲಿ ಸಂಘರ್ಷಕ್ಕಿಳಿಯುವ ಮಟ್ಟಕ್ಕೆ  ನಿಗಮಗಳ ಸಿಬ್ಬಂದಿಯ ನಡುವೆ ತಂದಿಟ್ಟು ತಮಾಷೆ ನೋಡುವ ಕೆಲಸವನ್ನು ಸರ್ಕಾರ ಮಾಡಿದ್ರೆ ಹೇಗೆ..? ಅದನ್ನು ಸಹಿಸಿಕೊಳ್ಳಲಿಕ್ಕೆ ಆಗುತ್ತಾ..? ಖಂಡಿತಾ ಇಲ್ಲ.

ಕೆಎಸ್ ಆರ್ ಟಿಸಿ(KSRTC) ಹಾಗೂ ಬಿಎಂಟಿಸಿ (BMTC) ಸಿಬ್ಬಂದಿ ಪರಿಸ್ತಿತಿ ಹಾಗೆಯೇ ಆಗಿದೆ.ಇದಕ್ಕೆಲ್ಲಾ ಕಾರಣ  ಬೆಳಕಿನ ಹಬ್ಬ ದೀಪಾವಳಿ(DEEPAVALI FESTIAVAL) ಆಚರಣೆಗೆ ಪೂರಕವಾಗಿ ನೀಡಲಾಗಿರುವ ವೇತನ ವಿಚಾರದಲ್ಲಿ ಆಗಿರುವ ತಾರತಮ್ಯ.ಕೆಎಸ್ ಆರ್ ಟಿಸಿ ಸಿಬ್ಬಂದಿಗೆ ಇಂದೇ ಪೂರ್ತಿ ಸಂಬಳವಾಗಿದ್ದರೆ, ಬಿಎಂಟಿಸಿ ಸಿಬ್ಬಂದಿಗೆ ಹಬ್ಬದ ಅಡ್ವಾನ್ಸ್ ರೂಪದಲ್ಲಿ ಅರ್ಧ ಸಂಬಳ ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ.ಇದು ಎರಡು ನಿಗಮಗಳ ಸಿಬ್ಬಂದಿ ನಡುವೆ ಸಂಘರ್ಷವನ್ನೇ ಸೃಷ್ಟಿಸಿದೆ.

ದೀಪಾವಳಿ ಸಂಭ್ರಮದ ಹಬ್ಬ..ಎಂಥಾ ಬಡವರು..ಕನಿಷ್ಟರು ಕೂಡ ಸಾಲ ಮಾಡಿಯಾದ್ರೂ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.ಆದರೆ ಬಿಎಂಟಿಸಿ ಸಿಬ್ಬಂದಿ ಪಾಲಿಗೆ ದೀಪಾವಳಿ ಮಾತ್ರ ಸೂತಕದ ಛಾಯೆ ಮೂಡಿಸಿಬಿಟ್ಟಿದೆ.ಯಾವೊಬ್ಬ ಸಿಬ್ಬಂದಿಯಲ್ಲೂ ಹಬ್ಬದಾಚರಣೆಯ ಸಂಭ್ರಮವಿಲ್ಲ.ಇದಕ್ಕೆ ಕಾರಣ ಪ್ರತಿ ವರ್ಷ ದೀಪಾವಳಿಗೆ ಪೂರ್ಣ ಸಂಬಳವನ್ನು ಹಬ್ಬದ ಅಡ್ವಾನ್ಸ್ ರೂಪದಲ್ಲಿ ಕೊಡಲಾಗುತ್ತಿತ್ತು.ಆದರೆ ಈ ಬಾರಿ  ಪೂರ್ಣ ಸಂಬಳದ ಬದಲಿಗೆ ಅರ್ಧ ಸಂಬಳ ಮಾತ್ರ ರಿಲೀಸ್ ಮಾಡಲಾಗಿದೆ.ಇದು ಬಿಎಂಟಿಸಿ ಅಂತೆ ನಾಲ್ಕು ನಿಗಮಗಳಿಗೂ ಒಂದೇ ರೀತಿಯಲ್ಲಿ ಅನ್ವಯವಾಗಿದ್ದರೆ ಸಮಸ್ಯೆ ಇರುತ್ತಿರಲಿಲ್ಲ.ಕೆಎಸ್ ಆರ್ ಟಿಸಿ ಸಿಬ್ಬಂದಿಗೆ  ಪೂರ್ಣ ಸಂಬಳ ಕೊಡಲಾಗಿದೆ. ಹಾಗಾದ್ರೆ ಬಿಎಂಟಿಸಿ ಸಿಬ್ಬಂದಿಯೇನು ಸಾರಿಗೆ ಸಿಬ್ಬಂದಿಯಲ್ಲವೇ..? ಅವರೇನು ಸಂಸ್ಥೆಗೆ ಕೆಲಸ ಮಾಡುತ್ತಿಲ್ಲವೇ..? ಒಬ್ಬರಿಗೊಂದು,,ಇನ್ನೊಬ್ಬರಿಗೊಂದು ನ್ಯಾಯ ಎಂದರೆ ಹೇಗೆ ಎನ್ನುವುದು ಬಿಎಂಟಿಸಿ ಸಿಬ್ಬಂದಿಯ ಪ್ರಶ್ನೆ.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಕೆಎಸ್ ಆರ್ ಟಿಸಿ ಸಿಬ್ಬಂದಿಗೆ ಶುಭ ದೀಪಾವಳಿಗೆ ಅವಕಾಶ ಕೊಟ್ಟ ಸರ್ಕಾರ ಬಿಎಂಟಿಸಿ ಸಿಬ್ಬಂದಿ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಿಸಿಬಿಟ್ಟಿದೆಯಂತೆ. ಹಬ್ಬದಾಚರಣೆಗೂ ಹಣವಿಲ್ಲದೆ  ಬಿಎಂಟಿಸಿ ಸಿಬ್ಬಂದಿ ಸಂಕಟ-ಸಂಕಷ್ಟ ಪಡುವಂತಾಗಿದೆ.ಆದರೆ ಕೆಎಸ್ ಆರ್ ಟಿಸಿ ಸಿಬ್ಬಂದಿಗೆ ಮಾತ್ರ ಹಬ್ಬದ ಅಡ್ವಾನ್ಸ್ ರೂಪದಲ್ಲಿ ಫುಲ್ ಸ್ಯಾಲರಿ ಕೊಡಲಾಗಿದೆ. ಆದರೆ ಬಿಎಂಟಿಸಿ ಸಿಬ್ಬಂದಿಗೆ ಮಾತ್ರ ಅರ್ಧ ಸಂಬಳ ಕೊಡಲಾಗಿದೆ. ತಿಂಗಳಾಂತ್ಯವೇ ಸಂಪೂರ್ಣ ಸಂಬಳ ಸಿಗುವ ನಿರೀಕ್ಷೆಯು ಹುಸಿಯಾಗಿದೆ. ಅರ್ಧ ಸಂಬಳ ಕೊಟ್ಟು ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಕೊಟ್ಟಿದೆ ಸರ್ಕಾರ  ಹಾಗೂ ಆಡಳಿತ ಮಂಡಳಿ ಎಂದು ಸಾರಿಗೆ ಮುಖಂಡರು ಕೆಂಡಾಮಂಡಲವಾಗಿದ್ದಾರೆ.

ALSO READ :  BMTC ಪತ್ತಿನ ಸಹಕಾರ ಸಂಘದ ಚುನಾವಣೆ..."ಹಣ-ಹೆಂಡ-ಬಾಡು-ಗಿಫ್ಟ್...ಅಬ್ಬರ..!? ಲಾಡ್ಜ್ ಗಳಲ್ಲೇ ಬೀಡುಬಿಟ್ಟಿರುವ ಕೆಲವು "ಆಕಾಂಕ್ಷಿ"ಗಳು..!?

ಬಿಎಂಟಿಸಿ ಸಿಬ್ಬಂದಿ ಪ್ರಕಾರವೇ ಪ್ರತಿ ವರ್ಷ ದೀಪಾವಳಿ ಹಬ್ಬಕ್ಕೆ ತಿಂಗಳಾಂತ್ಯವೇ ಬಿಎಂಟಿಸಿ ಸಿಬ್ಬಂದಿಗೆ ವೇತನ ಬಿಡುಗಡೆ ಆಗುತ್ತಿತ್ತಂತೆ. ಸಂಪೂರ್ಣ ವೇತನ ಕೊಟ್ಟು ಸರ್ಕಾರ ಎಲ್ಲರ ಮನೆ-ಮನಗಳಲ್ಲಿ ಸಂಭ್ರಮ ಮೂಡಿಸುತ್ತಿತ್ತಂತೆ. ಆದರೆ ಈ ಬಾರಿ ಸಾರಿಗೆ ಸಿಬ್ಬಂದಿಗೆ ಅರ್ಧ ಸಂಬಳ ಬಿಡುಗಡೆ ಮಾಡಿ ಅವರ ಮುಖದಲ್ಲಿನ ಮಂದಹಾಸವನ್ನೇ ಕಸಿದುಕೊಂಡಿದೆ. ಹಬ್ಬದಾಚರಣೆಗೆ ಈಗ ಅರ್ಧ ಬಿಡುಗಡೆ ಮಾಡಿ ಇನ್ನರ್ಧ ಸಂಬಳ ನವೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದೆಯಂತೆ. ಆದರೆ ಅರ್ಧ ಸಂಬಳದಿಂದಲೂ ಖುಷಿಪಡಲಾರದಂಥ ಸ್ಥಿತಿಯಲ್ಲಿ ಸಾರಿಗೆ ಸಿಬ್ಬಂದಿಯಿದ್ದಾರಂತೆ.

ಏಕೆ ಅರ್ಧ ಸಂಬಳದಿಂದಲೂ ಖುಷಿ ಪಡಲಿಕ್ಕಾಗದ ಸನ್ನಿವೇಶ: ಹೇಳಿ ಕೇಳಿ ಆರ್ಥಿಕ ಸಂಕಷ್ಟಕ್ಕೆ ಸಿಲುರುವ ಬಿಎಂಟಿಸಿ ಸಿಬ್ಬಂದಿ ತಮ್ಮ ಕುಟುಂಬ.ಮನೆ-ಮಕ್ಕಳು,ಅವರ ಶಿಕ್ಷಣ, ಮನೆ,ಸೈಟಿಗೆಂದು ಸಾಲ ಮಾಡಿಕೊಂಡಿರುತ್ತಾರೆ.ಅವರ ಖಾತೆ್ಗೆ ಈ ಅರ್ಧ ಸಂಬಳದ ಹಣ ಬರುತ್ತಿದ್ದಂತೆ  ಬ್ಯಾಂಕ್ ಗಳಲ್ಲಿ ಇಎಂಐ ರೂಪದಲ್ಲಿ ಹಣ ಜಮೆ ಆಗಿಬಿಡುತ್ತದೆ. ಸಿಬ್ಬಂದಿಯ ಖಾತೆಯಲ್ಲಿದ್ದ ಹಣ ಖೋತಾ ಆಗಿ ಹಬ್ಬದ ಹೊತ್ತಿನಲ್ಲಿ ಬರಿಗೈಯಾಗುತ್ತಾರಂತೆ.ಸಿಬ್ಬಂದಿ ಮನೆಗಳಲ್ಲಿ ಹಬ್ಬದಾಚರಣೆಗೆ ಹಣವಿಲ್ಲದೆ ಸೂತಕದ ವಾತಾವರಣ ನಿರ್ಮಾಣವಾಗುತ್ತದಂತೆ.ಆದರೆ ಕೆಎಸ್ ಆರ್ ಟಿಸಿ ಸಿಬ್ಬಂದಿ ವಿಚಾರದಲ್ಲಿ ಹೀಗೆ ಆಗುವುದಿಲ್ಲ.ಅವರೆಲ್ಲರು ಖುಷಿ ಖುಷಿಯಾಗಿ ಹಬ್ಬ ಆಚರಿಸುತ್ತಿದ್ದರೆ ಬಿಎಂಟಿಸಿ ಸಿಬ್ಬಂದಿ ಕುಟುಂಬದವರು ಅದನ್ನು ನೋಡಿ ಸಂಕಟ ಪಡುವಂತ ಸ್ತಿತಿ ನಿರ್ಮಿಸಿದ ಸರ್ಕಾರ ಹಾಗೂ ಬಿಎಂಟಿಸಿ ಆಡಳಿತದ ಧೋರಣೆಗೆ  ಸಾರಿಗೆ ಸಿಬ್ಬಂದಿ ಹಿಡಿಶಾಪ ಹಾಕುತ್ತಿದ್ದರೂ ಆಶ್ಚರ್ಯವಿಲ್ಲ.

ಹಬ್ಬದ ಹಿನ್ನಲೆಯಲ್ಲಿ ಅಡ್ವಾನ್ಸ್ ರೂಪದಲ್ಲಿ ಅರ್ಧ ಸಂಬಳ ನೀಡುತ್ತಿರುವುದಾಗಿ ಬಿಎಂಟಿಸಿ ಆಡಳಿತ ಹೊರಡಿಸಿರುವ ಸುತ್ತೋಲೆ ಪ್ರತಿ( ಇದೇ ಇದೀಗ ಬಿಎಂಟಿಸಿ ಸಿಬ್ಬಂದಿಯನ್ನು ಕೆಂಡಾಮಂಡಲಗೊಳಿಸಿದೆ)
ಹಬ್ಬದ ಹಿನ್ನಲೆಯಲ್ಲಿ ಅಡ್ವಾನ್ಸ್ ರೂಪದಲ್ಲಿ ಅರ್ಧ ಸಂಬಳ ನೀಡುತ್ತಿರುವುದಾಗಿ ಬಿಎಂಟಿಸಿ ಆಡಳಿತ ಹೊರಡಿಸಿರುವ ಸುತ್ತೋಲೆ ಪ್ರತಿ( ಇದೇ ಇದೀಗ ಬಿಎಂಟಿಸಿ ಸಿಬ್ಬಂದಿಯನ್ನು ಕೆಂಡಾಮಂಡಲಗೊಳಿಸಿದೆ)
ಹಬ್ಬದ ಹಿನ್ನಲೆಯಲ್ಲಿ ಅಡ್ವಾನ್ಸ್ ರೂಪದಲ್ಲಿ ಅರ್ಧ ಸಂಬಳ ನೀಡುತ್ತಿರುವುದಾಗಿ ಬಿಎಂಟಿಸಿ ಆಡಳಿತ ಹೊರಡಿಸಿರುವ ಸುತ್ತೋಲೆ ಪ್ರತಿ
ಹಬ್ಬದ ಹಿನ್ನಲೆಯಲ್ಲಿ ಅಡ್ವಾನ್ಸ್ ರೂಪದಲ್ಲಿ ಅರ್ಧ ಸಂಬಳ ನೀಡುತ್ತಿರುವುದಾಗಿ ಬಿಎಂಟಿಸಿ ಆಡಳಿತ ಹೊರಡಿಸಿರುವ ಸುತ್ತೋಲೆ ಪ್ರತಿ
ಹಬ್ಬದ ಹಿನ್ನಲೆಯಲ್ಲಿ ಅಡ್ವಾನ್ಸ್ ರೂಪದಲ್ಲಿ ಅರ್ಧ ಸಂಬಳ ನೀಡುತ್ತಿರುವುದಾಗಿ ಬಿಎಂಟಿಸಿ ಆಡಳಿತ ಹೊರಡಿಸಿರುವ ಸುತ್ತೋಲೆ ಪ್ರತಿ
ಹಬ್ಬದ ಹಿನ್ನಲೆಯಲ್ಲಿ ಅಡ್ವಾನ್ಸ್ ರೂಪದಲ್ಲಿ ಅರ್ಧ ಸಂಬಳ ನೀಡುತ್ತಿರುವುದಾಗಿ ಬಿಎಂಟಿಸಿ ಆಡಳಿತ ಹೊರಡಿಸಿರುವ ಸುತ್ತೋಲೆ ಪ್ರತಿ

ಅರ್ಧ ಸಂಬಳಕ್ಕೆ ಡಿಮ್ಯಾಂಡ್ ಇಡಲಾಗಿತ್ತಾ..? ಅಂದ್ಹಾಗೆ ಹಬ್ಬ ಇರುವುದರಿಂದ ಕೊಟ್ಟರೆ ಪೂರ್ಣ ಸಂಬಳವನ್ನೇ ಕೊಡಿ ಎನ್ನುವುದು ಬಿಎಂಟಿಸಿ ಸಿಬ್ಬಂದಿ ಡಿಮ್ಯಾಂಡ್ ಆಗಿತ್ತಂತೆ.ಆದರೆ  ಅರ್ಧ ಸಂಬಳ ಬೇಕಂತ ಯಾವೊಬ್ಬ ಸಾರಿಗೆ ಸಿಬ್ಬಂದಿಯು ಕೇಳಿರಲಿಲ್ಲವಂತೆ. ಆದರೆ ಸರ್ಕಾರವೇ ಆದೇಶ ಹೊರಡಿಸಿ ಹಬ್ಬದ ಬೋನಸ್ ಎಂದು  ಅರ್ಧ ಸಂಬಳ ಬಿಡುಗಡೆ ಮಾಡಿದೆಯಂತೆ. ನಾವೇನು ಅರ್ಧ ಸಂಬಳ ಬೇಕಂತ ಯಾವತ್ತೂ ಕೇಳಿರಲಿಲ್ಲ..ಡಿಮ್ಯಾಂಡೂ ಮಾಡಿರಲಿಲ್ಲ.ಸರ್ಕಾರವೇ ತಿಳಿದುಕೊಂಡು ಪೂರ್ಣ ಒಂದು ತಿಂಗಳ ಸಂಬಳ ಕೊಡಬಹುದೆಂದು ಸುಮ್ಮನಿದ್ದೆವು.ಆದರೆ ಅರ್ಧ ಸಂಬಳ ಕೊಟ್ಟು ನಮ್ಮ ಆಸೆ-ನಿರೀಕ್ಷೆಗಳಿಗೆಲ್ಲಾ ತಣ್ಣೀರೆರಚಿದೆ.ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ನಮ್ಮಲ್ಲೇ ಸಮನ್ವಯ-ಸಾಮರಸ್ಯ ಕದಡುವಂತೆ ಮಾಡಿದೆ ಎನ್ನುವ ಮಾತು ಕೇಳಿಬರಲಾರಂಭಿಸಿದೆ.ಅದೇನೇ ಆಗಲಿ ಸಂಬಳದ ವಿಚಾರದಲ್ಲಿ ಬಿಎಂಟಿಸಿಗೊಂದು, ಕೆಎಸ್ ಆರ್ ಟಿಸಿಗೊಂದು ನ್ಯಾಯ ಮಾಡಿರುವ ಸರ್ಕಾರದ ಧೋರಣೆ ಸಮಂಜಸಪೂರ್ಣ ಎನಿಸುತ್ತಲೇ ಇಲ್ಲ.


Political News

ಬಣ್ಣಗಳಲ್ಲಿ ಲೀನವಾದ Btv ಮೇಕಪ್‌ಮ್ಯಾನ್‌ ಚೇತನ್

Exclusive: ಅಕ್ರಮ-ಅವ್ಯವಸ್ಥೆಯ ಗೂಡಾಯ್ತಾ ಪಿಯು ಇಲಾಖೆ? ಏನ್ ಮಾಡುತ್ತಿದ್ದೀರಾ ಶಿಕ್ಷಣ ಸಚಿವರೇ!?

BMTC ಸಿಬ್ಬಂದಿಯಿಂದಲೇ ಬಸ್ ಕ್ಲೀನಿಂಗ್.. ಸ್ವಚ್ಛತೆಗೆಂದೇ ಕೊಟ್ಟ ಟೆಂಡರ್ ಹಣ ಎಲ್ಲೋಯ್ತು!?

Sahyadri science College alumni meet: ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳ ಮಹಾಸಮಾಗಮಕ್ಕೆ ಮುಹೂರ್ತ ಫಿಕ್ಸ್

Puneeth rajkumar award: ನ್ಯೂಸ್ ಚಾನೆಲ್‌ಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 12 ಕ್ಯಾಮೆರಾಮನ್ ಮಿತ್ರರಿಗೆ ಪುನೀತ್ ರಾಜ್‌ಕುಮಾರ್ ಪ್ರಶಸ್ತಿ

Deepavali pollution Decrease! ಬೆಂಗಳೂರಿಗೆ ಬೆಂಗಳೂರೇ ಪಟಾಕಿ ಹೊಗೆಯಲ್ಲಿ ಕಳೆದೋದರೂ ಕಳೆದ ವರ್ಷದಷ್ಟು ಮಾಲಿನ್ಯ ಆಗಿಲ್ವಂತೆ!?

Rajyotsava awards 2024: ರಾಜ್ಯೋತ್ಸವ ಪ್ರಶಸ್ತಿ ಪ್ರಕಟ- ಹೇಮಾ ಚೌಧರಿ, ಅರುಣ್ ಯೋಗಿರಾಜ್ ಸೇರಿ 69 ಸಾಧಕರಿಗೆ ಪ್ರಶಸ್ತಿಯ ಗರಿ

ದಸರಾ ನಂದಿಧ್ವಜದ ಮಹಾದೇವಣ್ಣರನ್ನು ಮರೆತೇ ಬಿಡ್ತಾ ಸರ್ಕಾರ? ಜೀವನ್ಮರಣ ಹೋರಾಟದಲ್ಲಿ ಮಹದೇವಣ್ಣ

Scroll to Top