
ಬೆಂಗಳೂರು: ಬಿಎಂಟಿಸಿ(bengaluru metropolitan transport corporation) ಎಂಡಿ ಆಗಿರುವ ರಾಮಚಂದ್ರನ್ ( managing director ramachandran) ಅವರಿಗೆ ಅವರ ಇಲಾಖೆ ಮೇಲೆ ಹಿಡಿತವಿಲ್ಲವೋ..? ಅಥವಾ ಇಲಾಖೆ ಬಗ್ಗೆನೇ ನಿರ್ಲಕ್ಷ್ಯ ಧೋರಣೆಯೋ, ತಾತ್ಸಾರ ಮನೋಭಾವನೋ ಗೊತ್ತಾಗ್ತಿಲ್ಲ..ಹೀಗೆ ಪ್ರಶ್ನೆ ಮಾಡ್ತಿರೋದು ಬೇರೆ ಯಾರು ಅಲ್ಲ..ಅವರದೇ ಇಲಾಖೆಯಲ್ಲಿ ಕೆಲಸ ಮಾಡ್ತಿರುವ ಸಾರಿಗೆ ಸಿಬ್ಬಂದಿ. ನಿಗಮದ ಕಚೇರಿಗಳನ್ನು ಬಿಟ್ಟುಬಿಡಿ ಅವರದೇ ಕಚೇರಿ ಇರುವ ಶಾಂತಿನಗರದ ಕೇಂದ್ರಕಚೇರಿ ಕಟ್ಟಡ ಭದ್ರತೆ-ಸುರಕ್ಷತೆಯ ಕೊರತೆ ಎದುರಿಸುತ್ತಿವೆ..ಇದಕ್ಕೆ ಸಾಕ್ಷ್ಯ ಏನು ಎನ್ನುವುದನ್ನು ಕೇಳುವುದಾದ್ರೆ ಕನ್ನಡ ಫ್ಲ್ಯಾಶ್ ನ್ಯೂಸ್ ಇದಕ್ಕೆ ಪುರಾವೆ ಒದಗಿಸಲು ಸಿದ್ದ.. ಕಳೆದ ಸುಮಾರು ಒಂದೂವರೆ ವರ್ಷದಲ್ಲಿ ಸಂಭವಿಸಿರುವ ಮೂರು ಅಸಹಜ ಸಾವುಗಳ ಬಗ್ಗೆ ಮಾಹಿತಿ ಇದ್ದರೆ ಅಥವಾ ತರಿಸಿಕೊಂಡ್ರೆ ಈ ಸತ್ಯ ಅವರಿಗೆ ಮನವರಿಕೆ ಆಗಬಹುದು ಎನಿಸುತ್ತದೆ.
ಕಳೆದ ಶನಿವಾರ ಅಂದ್ರೆ 9/08/2025 ರಂದು ಶಾಂತಿನಗರದ ಕೇಂದ್ರ ಕಚೇರಿ ಕಟ್ಟಡದಿಂದ ನೆಲಕ್ಕೆ ಜಿಗಿದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಳೆನ್ನುವ ಬಗ್ಗೆ ಸುದ್ದಿಯಾಯ್ತು.ಬಹುಷಹ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ಮಾರನೇ ದಿನ ಬೆಂಗಳೂರಿನಲ್ಲಿ ಇಲ್ಲದೇ ಹೋಗಿದಿದ್ದರೆ ಇದು ಅವತ್ತಿಗೆ ದೊಡ್ಡ ಮಟ್ಟದ ಸುದ್ದಿಯಾಗ್ತಿತ್ತೇನೋ..ಬಿಎಂಟಿಸಿ ಮಾನ ಹರಾಜಾಗ್ತಿತ್ತೇನೋ..ಆ ಕಾರ್ಯಕ್ರಮದ ಕಾರಣಕ್ಕೆ ಎಲ್ಲರೂ ಬಚಾವ್ ಆಗ್ಬಿಟ್ರು,.ಅವರೆಲ್ಲಾ ಪ್ರಧಾನಿ ಮೋದಿ ಅವರಿಗೆ ಥ್ಯಾಂಕ್ಸ್ ಹೇಳಬೇಕೆನಿಸುತ್ತದೆ.


ಆದರೆ .ವಿಷಯ ನಿಜಕ್ಕೂ ಗಂಭೀರವಾಗಿದೆ.ಸುಮಾರು ಒಂದೂವರೆ ವರ್ಷದಲ್ಲಿ ಮೂರು ಅಸಹಜ ಸಾವುಗಳು ಎಂಡಿ ಕಚೇರಿ ಇರುವ ಕೇಂದ್ರ ಕಚೇರಿ ಕಟ್ಟಡದಲ್ಲಿ ಆಗುತ್ತದೆ ಎಂದ್ರೆ ಅದು ಸಾಮಾನ್ಯ ಮಾತಾ..? ನೋ ಚಾನ್ಸ್..ಆದರೆ ಈ ಸಾವುಗಳನ್ನು ಬಿಎಂಟಿಸಿ ಆಡಳಿತವೇ ಗಂಭಿರವಾಗಿ ತೆಗೆದುಕೊಂಡಿಲ್ಲ ಎನ್ನಿಸುತ್ತದೆ. ಒಂದೊಮ್ಮೆ ಹಾಗೇನಾದ್ರೂ ಗಂಭೀರವಾಗಿ ಪರಿಗಣಿಸಿದಿದ್ರೆ ಇವತ್ತು ಆ ಕಟ್ಟಡಕ್ಕೆ ಸೂಕ್ತ ರಕ್ಷಣೆ ಒದಗಿಸುತ್ತಿದ್ರು.ಭದ್ರತಾ ಸಿಬ್ಬಂದಿಯನ್ನಾದ್ರೂ ನಿಯೋಜಿಸುತ್ತಿದ್ದರು..ಮೊನ್ನೆ ಶನಿವಾರ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನಾದ್ರೂ ತಪ್ಪಿಸಬಹುದಿತ್ತಲ್ವಾ..ಅದೆಲ್ಲಾ ಸಾಧ್ಯವಾಗಿಲ್ಲ ಎಂದ್ರೆ ಬಿಎಂಟಿಸಿ ಆಡಳಿತನೂ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎನ್ನುವಂತಾಯ್ತಲ್ಲ..
ಅಷ್ಟಕ್ಕೂ ಶನಿವಾರ ಸಂಭವಿಸಿದ ಆತ್ಮಹತ್ಯೆ..ನಿಜವಾಗಲೂ ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವ ಶಂಕೆ ಕೂಡ ಹಲವರನ್ನು ಕಾಡುತ್ತಿದೆ.ಅವತ್ತೇ ಆಕೆ ಆತ್ಮಹತ್ಯೆ ಮಾಡಿಕೊಂಡ್ಲಾ ಅಥವಾ ಕೊಲೆ ಮಾಡಿ ಯಾರಾದ್ರೂ ಅಲ್ಲಿಯೇ ಇಟ್ಟು ಮಾರನೇ ದಿನ ಮೇಲಿಂದ ಬಿಸಾಕಿ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ರಾ..? ಇಷ್ಟೊಂದು ಪ್ರಶ್ನೆಗಳು ಕಾಡಲಾರಂಭಿಸಿವೆ.ಏಕಂದ್ರೆ ಯುವತಿ ಆತ್ಮಹತ್ಯೆ ಮಾಡಿಕೊಂಡಿ ದ್ದಾಳೆನ್ನುವ ಸುದ್ದಿ ಬಿಎಂಟಿಸಿ ಆಡಳಿತಕ್ಕೆ ಗೊತ್ತಾಗಿದ್ದೇ ಮಾದ್ಯಮಗಳಲ್ಲಿ ಬಂದ ಮೇಲೆ..ಇದರಿಂದಲೇ ಬಿಎಂಟಿಸಿ ಆಡಳಿತ ಎಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡ್ತಿದೆ ಎನ್ನೋದು ಗೊತ್ತಾಗುತ್ತದೆ. ಯುವತಿ ಅಸಹಜ ಸಾವಿನ ಸುದ್ದಿ ಪ್ರಸಾರವಾದ ಮೇಲೆಯಾದ್ರೂ ಇದಕ್ಕೆ ಸಂಬಂಧಪಟ್ಟಂತ ಸ್ಪಷ್ಟನೆಯಾದ್ರೂ ಬರಬೇಕಿತ್ತು…ಅದೂ ಸಿಗಲಿಲ್ಲ ಎಂದ್ರೆ ಇದಕ್ಕೆ ಏನನ್ನಬೇಕೋ ಗೊತ್ತಾಗ್ತಿಲ್ಲ.ಯುವತಿ ಸಾವು ಆತ್ಮಹತ್ಯೆನೋ…ಅಥವಾ ಕೊಲೆಯೊ ಇದನ್ನು ಸ್ಪಷ್ಟಪಡಿಸಬೇಕಿರುವುದು ಪೊಲೀಸ್ ಇಲಾಖೆ.ದೂರು ದಾಖಲಿಸಿಕೊಂಡಿರುವ ವಿಲ್ಸನ್ ಗಾರ್ಡನ್ ಪೊಲೀಸ್ರೇ ಇದನ್ನು ಹೇಳಬೇಕಿದೆ.ಈಗಾಗಲೇ ತನಿಖೆ ಕೂಡ ಪ್ರಗತಿಯಲ್ಲಿದೆ ಎನ್ನುವುದು ಬಲ್ಲ ಮೂಲಗಳಿಂದ ಗೊತ್ತಾಗಿದೆ.

ಇದು ಶನಿವಾರ ಸಂಭವಿಸಿದ ದುರ್ಘಟನೆಯ ವಿಷಯವಾದ್ರೆ ಕಳೆದ ಒಂದೂವರೆ ವರ್ಷದಲ್ಲಿ ಸಂಭವಿಸಿದ ಇನ್ನೆರಡು ಸಾವುಗಳ ಬಗ್ಗೆಯು ಮಾತನಾಡಬೇಕಲ್ಲವೇ..?ಏಕಂದ್ರೆ ಇದೇ ಕಟ್ಟಡದಲ್ಲಿ ಇದೇ ಕಟ್ಟಡದಲ್ಲಿ ರುವ ಕಾರ್ ಪಾರ್ಕಿಂಗ್ ಕಟ್ಟಡದಿಂದ ಬಿದ್ದು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದನು.ಇದು ಆ ಸಮಯದಲ್ಲಿ ದೊಡ್ಡಮಟ್ಟದ ಸುದ್ದಿಯಾಗಿತ್ತು.ಆಗಲೇ ಕಟ್ಟಡದ ಸುರಕ್ಷತೆ ಹಾಗು ಭದ್ರತೆಗೆ ಏನಾದ ರೊಂದು ವ್ಯವಸ್ಥೆ ಮಾಡಬೇಕಿತ್ತು.ಆದರೆ ಅದ್ಯಾಕೆ ನಿರ್ಲಕ್ಷ್ಯ ಮಾಡಿದರೋ ಗೊತ್ತಾಗ್ತಿಲ್ಲ..ದುರಂತಗಳ ಸರಣಿ ಮುಂದುವರೆದುಬಿಡ್ತು.
ಇದಾದ ಕೆಲ ತಿಂಗಳಲ್ಲೇ ಇದೇ ಕಟ್ಟಡದ ರೆಕಾರ್ಡ್ ರೂಂನಲ್ಲಿಯೇ 12ರ ಡಿಪೋ ಸಿಬ್ಬಂದಿ ಮಹೇಶ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದ. ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಮಹೇಶ್ ಸಾವಿಗೆ ಆಡಳಿತ ವರ್ಗದ ಕಿರುಕುಳವೇ ಕಾರಣ ಎಂದೇಳಲಾಗಿತ್ತು.ಆಗಲೂ ಕಟ್ಟಡದ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬಹುದಾಗಿತ್ತು.ಆಗಲೂ ಅದೇ ನಿರ್ಲಕ್ಷ್ಯ-ಉದಾಸೀನ-ಅಸಡ್ಡೆ..ಅದರ ಪರಿಣಾಮವೇ ಶನಿವಾರ ಸಂಭವಿಸಿದ ಯುವತಿಯ ಮತ್ತೊಂದು ಅಸಹಜ ಸಾವು.
ಈ ಅಸಹಜ ಸಾವುಗಳಿಗೆ ಕಾರಣ ಏನನ್ನುವುದು ಗೊತ್ತಿಲ್ಲವಾದರೂ,ಆ ಎಲ್ಲಾ ಸಾವು ಸಂಭವಿಸಲು ಮುಖ್ಯ ಕಾರಣ ಕೇಂದ್ರ ಕಚೇರಿ ಕಟ್ಟಡಕ್ಕೆ ರಕ್ಷಣೆಯೇ ಇಲ್ಲ ಎನ್ನದಿರುವುದು ಮಾತ್ರ ಸತ್ಯವಲ್ಲವೇ.? ಒಂದು ವೇಳೆ ಕಟ್ಟಡಕ್ಕೆ ಸೂಕ್ತ ರಕ್ಷಣೆ ಮತ್ತು ಭದ್ರತೆ ಇದ್ದಿದ್ದರೆ ಅವರೆಲ್ಲಾ ತಮ್ಮ ಬದುಕುಗಳನ್ನು ದುರಂತದಲ್ಲಿ ಕೊನೆಗಾಣಿಸಿಕೊಳ್ಳಲಿಕ್ಕಾಗುತ್ತಿತ್ತಾ..? ಅಷ್ಟೇ ಅಲ್ಲ ಇದೇ ಕಟ್ಟಡ ಅನೈತಿಕ ಹಾಗೂ ಕಾನೂನುಬಾಹಿರ ಕೃತ್ಯಗಳಿಗೂ ತಾಣ ಆಗುತ್ತಿರುವ ಬಗ್ಗೆಯೂ ಆಪಾದನೆಗಳಿವೆ.
ಎಂಡಿ ರಾಮಚಂದ್ರನ್ ಅವರು ತಮ್ಮ ಎಸಿ ಕಚೇರಿಯಲ್ಲೇ ಕುಳಿತುಕೊಳ್ಳದೆ ಕಟ್ಟಡದ ಕೆಳಗೆ-ಮೇಲೆ,ಅಕ್ಕಪಕ್ಕದಲ್ಲಿ ಏನೆಲ್ಲಾ ಆಗ್ತಿದೆ.ಏನೆಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗ್ತಿದೆ ಎನ್ನುವುದರ ಬಗ್ಗೆಯೂ ಕಣ್ಣಾಯ್ಸಿ,ಲೋಪಗಳಿದ್ದರೆ ಅದನ್ನು ಸರಿಪಡಿಸುವ ಕೆಲಸ ಮಾಡಬೇಕಿದೆ.ಇಲ್ಲವಾದಲ್ಲಿ ಇಂಥಾ ಎಷ್ಟೇ ಸಾವುಗಳಾದ್ರೂ ಅದರ ದೋಷ ತಟ್ಟಬೇಕಾದವರಿಗೆ ತಟ್ಟದೆ ಎಂಡಿ ಅವರ ಹಣೆಗೇ ಕಟ್ಟಬೇಕಾಗುತ್ತಿರುತ್ತದೆ. ಅಲ್ವಾ..?!