ಬೆಂಗಳೂರು: ಸಾಮಾನ್ಯವಾಗಿ ಸಾರ್ವಜನಿಕರು ಪೊಲೀಸರ ವಿರುದ್ಧ ದೂರು ನೀಡುವುದನ್ನು ನಾವು ನೋಡಿದ್ದೇವೆ. ಆದರೆ, ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಇತಿಹಾಸದಲ್ಲೇ ಅತ್ಯಂತ ವಿರಳ ಎನ್ನಬಹುದಾದ ಘಟನೆಯೊಂದು ನಡೆದಿದೆ. ಅಲ್ಲಿನ ಇನ್‌ಸ್ಪೆಕ್ಟರ್ ರವಿ ಅವರ ಭ್ರಷ್ಟಾಚಾರದ ಅತಿಯಾದ ಕಿರುಕುಳ ತಾಳಲಾರದೆ, ಸ್ವಂತ ಠಾಣೆಯ ಸಿಬ್ಬಂದಿಯೇ ನೇರವಾಗಿ ರಾಜ್ಯಪಾಲರಿಗೆ ದೂರು ನೀಡುವ ಘಟನೆ ಬೆಳಕಿಗೆ ಬಂದಿದೆ. ಇನ್‌ಸ್ಪೆಕ್ಟರ್ ರವಿ ಅವರು ಕಳೆದ ಎರಡೂವರೆ ವರ್ಷಗಳಲ್ಲಿ ಬರೋಬ್ಬರಿ 15 ಕೋಟಿಗೂ ಹೆಚ್ಚು ಲಂಚದ ಹಣ ಗಳಿಸಿದ್ದಾರೆ ಎಂಬ ಮಾಹಿತಿ ಈ ದೂರಿನಲ್ಲಿ ಬಯಲಾಗಿದೆ.
ಪ್ರತಿ ಎಫ್‌ಐಆರ್‌ಗೂ 25 ಸಾವಿರ ‘ರೇಟ್ ಫಿಕ್ಸ್’!
ದೂರಿನಲ್ಲಿ ಉಲ್ಲೇಖಿಸಿರುವ ಪ್ರಕಾರ, ಪುಟ್ಟೇನಹಳ್ಳಿ ಠಾಣೆಯಲ್ಲಿ ಕಾನೂನು ಪಾಲನೆಗಿಂತ ಹೆಚ್ಚಾಗಿ ‘ವಸೂಲಿ’ಗೆ ಆದ್ಯತೆ ನೀಡಲಾಗುತ್ತಿದೆ. ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ (FIR) ದಾಖಲಿಸಬೇಕಾದರೆ ಇನ್‌ಸ್ಪೆಕ್ಟರ್‌ಗೆ ಕನಿಷ್ಠ 25 ಸಾವಿರ ರೂಪಾಯಿ ಲಂಚ ನೀಡಲೇಬೇಕು. ಹಣ ಕೊಡದಿದ್ದರೆ ಎಫ್‌ಐಆರ್ ಹಾಕದಂತೆ ಸಿಬ್ಬಂದಿಗೆ ಇನ್‌ಸ್ಪೆಕ್ಟರ್ ಒತ್ತಡ ಹೇರುತ್ತಿದ್ದರು ಎಂದು ಸಿಬ್ಬಂದಿ ಆರೋಪಿಸಿದ್ದಾರೆ.
ಡಿಸಿಎಂ ಹೆಸರು ದರ್ಬಳಕೆ!
ಇನ್ಸಪೆಕ್ಟರ್ ಹೆಚ್.ಕೆ. ರವಿಕುಮಾರ್ ರವರು ಇಗಾಗಲ ಎರಡುವರೆ(2.5)ವರ್ಷದಿಂದ ಪುಟ್ಟೇನ ಹಳ್ಳಿ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದು posting electronic city traffic police station ಗೆ ಹಾಗೂ electronic city police stationನ ಇನ್ಸಪೆಕ್ಟರ್ ನವೀನ್ ರವರು ಪುಟ್ಟೇನ ಹಳ್ಳಿ ಠಾಣೆಗೆ ವರ್ಗಾವಣೆ ಮಾಡಿಕೊಳ್ಳಲು ಇಬ್ಬರು ಸೇರಿಕೊಂಡು ಇಗಾಗಲೆ DCM ರವರಿಗೆ 1 ಕೋಟಿ ಹಣ ಕೊಟ್ಟಿದಾರಂತೆ ಇನ್ನೂ ಹಣ ಹೊಂದಿಸಬೇಕು ಎಂದು ಸಿಬ್ಬಂದಿಗೆ ಹೇಳುತ್ತಾರಂತೆ.
ವರ್ಗಾವಣೆ ದಂಧೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ರವರ ಹೆಸರು ಬಳಕೆ ಮಾಡಿಕೊಂಡು ವರ್ಗಾವಣೆಗಾಗಿ ದುಡ್ಡು ಹೊಂದಿಸಬೇಕೆಂದು ಇನ್ಸಪೆಕ್ಟರ್, ಪಿಎಸ್‌ಐ ಮತ್ತೆ ಸಿಬಂದಿಗಳ ಮೇಲೆ ಒತ್ತಡ ಹೇರಿ ವಸೂಲಿ ದಂಧೆಗೆ ಕಳುಹಿಸಿಕೊಡುತ್ತಿದ್ದರು. ಹಾಗೆಯೆ ಚಿಕ್ಕ ಪುಟ್ಟ ಸಿಗರೇಟ್, ಟೀ ಸ್ಟಾಲ್‌ನಿಂದ ಹಿಡಿದು ದೊಡ್ಡ ದೊಡ್ಡ ಬಾರ್, ಪಬ್‌ಗಳಿಗೆ ಕಳುಹಿಸುತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ರೌಡಿಶೀಟರ್‌ಗಳ ಜೊತೆ ಮೈತ್ರಿ:
ಇನ್ಸ್‌ಪೆಕ್ಟರ್ ರವಿ ಅವರು ರೌಡಿಶೀಟರ್‌ಗಳಿಂದ ಹಣ ಪಡೆದು ಅವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವ ‘ಬಿಸಿನೆಸ್’ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ದಡಿಯ ಮಹೇಶ್ ಪ್ರಕರಣ: ಲೇಡಿ ರೌಡಿಶೀಟರ್ ಯಶಸ್ವಿನಿ ಗೌಡಳ ಪತಿ ಮಹೇಶ್ ಅಲಿಯಾಸ್ ದಡಿಯ ಮಹೇಶ್‌ನ ಹೆಸರನ್ನು ರೌಡಿ ಪಟ್ಟಿಯಿಂದ ತೆಗೆಯಲು ಇನ್‌ಸ್ಪೆಕ್ಟರ್ ರವಿ ಬರೋಬ್ಬರಿ 20 ಲಕ್ಷ ರೂಪಾಯಿ ಲಂಚ, ಹಾಗೂ 2 ಲಕ್ಷ ಬೆಲೆ ಬಾಳುವ LED tv ( Devi electricals) ಮತ್ತೆ INNOVA cresta ಕಾರ್ ಗೆ ಬೇಡಿಕೆ ಇಟ್ಟಿರುತ್ತಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಮುಂಗಡ ಬುಕ್ಕಿಂಗ್: ಮತ್ತೊಬ್ಬ ರೌಡಿಶೀಟರ್ ಸಂಜೀವ ಎಂಬಾತನ ಹೆಸರನ್ನು ಪಟ್ಟಿಯಿಂದ ತೆಗೆಯಲು ಈಗಾಗಲೇ ಮುಂಗಡ ಹಣ (Advance) ಪಡೆದಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ತಿಂಗಳಿಗೆ 25 ಲಕ್ಷ ‘ಮಾಮೂಲಿ’ ವಸೂಲಿ:
ಇನ್‌ಸ್ಪೆಕ್ಟರ್ ಅವರು ನೇರವಾಗಿ ಹಣ ಪಡೆಯದೆ, ತಮ್ಮ ಎಸ್‌ಬಿ (SB) ಮತ್ತು ಅಧಿಕೃತ ಡ್ರೈವರ್ ಮೂಲಕ ಹಣ ವಸೂಲಿ ಮಾಡುತ್ತಿದ್ದಾರೆ. ಪ್ರತಿ ತಿಂಗಳು ಸುಮಾರು 25 ಲಕ್ಷ ರೂಪಾಯಿ ಮಾಮೂಲಿ ಹಣ ಸಂಗ್ರಹವಾಗುತ್ತಿದೆ. ಸಬ್ ಇನ್‌ಸ್ಪೆಕ್ಟರ್ ಮಟ್ಟದ ಅಧಿಕಾರಿಗಳು ಯಾವುದಾದರೂ ಅಕ್ರಮಗಳ ಮೇಲೆ ದಾಳಿ ಮಾಡಿದರೆ, ಅಲ್ಲಿಗೂ ಇವರು ಮಧ್ಯಪ್ರವೇಶಿಸಿ ಹಣ ಪಡೆದು ಪ್ರಕರಣವನ್ನು ಮುಚ್ಚಿಹಾಕುತ್ತಿದ್ದಾರೆ. ಪ್ರಾಮಾಣಿಕವಾಗಿ ವರದಿ ನೀಡುವ ಸಿಬ್ಬಂದಿಯ ವರದಿಗಳನ್ನು ಹರಿದು ಹಾಕಿ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ನೊಂದ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.
ವರ್ಗಾವಣೆಗೂ ‘ಡೀಲಿಂಗ್’ ತಂತ್ರ:
ಪ್ರಸ್ತುತ ಠಾಣೆಯಲ್ಲಿ ಅಕ್ರಮಗಳ ಮೂಲಕ ಕೋಟಿ ಕೋಟಿ ಸಂಪಾದಿಸಿರುವ ರವಿ, ಈಗ ಮುಂದಿನ ‘ಲಾಭದಾಯಕ’ ಠಾಣೆಗೆ ಹೋಗಲು ತಯಾರಿ ನಡೆಸುತ್ತಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಇನ್‌ಸ್ಪೆಕ್ಟರ್ ಜೊತೆ ಮಾತುಕತೆ ನಡೆಸಿ ‘ಮ್ಯೂಚುಯಲ್ ಟ್ರಾನ್ಸ್‌ಫರ್’ ಮಾಡಿಸಿಕೊಳ್ಳಲು ವ್ಯವಸ್ಥಿತ ಸಂಚು ರೂಪಿಸಿದ್ದಾರೆ ಎಂಬ ಮಾಹಿತಿ ರಾಜ್ಯಪಾಲರಿಗೆ ಸಲ್ಲಿಸಿರುವ ದೂರಿನಲ್ಲಿದೆ.
ಒಬ್ಬ ಪೊಲೀಸ್ ಅಧಿಕಾರಿಯ ವಿರುದ್ಧ ಅವರದೇ ಸಿಬ್ಬಂದಿ ಇಷ್ಟೊಂದು ಪುರಾವೆಗಳ ಸಮೇತ ದೂರು ನೀಡಿರುವುದು ಕರ್ನಾಟಕ ಪೊಲೀಸ್ ಇಲಾಖೆಗೆ ದೊಡ್ಡ ಮುಜುಗರ ತಂದಿದೆ. ರಾಜ್ಯಪಾಲರ ಕಚೇರಿಯಿಂದ ಈ ದೂರಿನ ಮೇಲೆ ಉನ್ನತ ಮಟ್ಟದ ತನಿಖೆ ನಡೆದರೆ, ಇನ್ನಷ್ಟು ಸ್ಫೋಟಕ ಸತ್ಯಗಳು ಹೊರಬೀಳುವುದರಲ್ಲಿ ಸಂಶಯವಿಲ್ಲ.










