ಬೆಂಗಳೂರು : ಹೀಗೆ ಖಂಡಿತಾ ಆಗದಿರಲಿ..ಒಂದೊಮ್ಮೆ ಆದರೆ ಇದಕ್ಕಿಂತ ದೊಡ್ಡ ಶೈಕ್ಷಣಿಕ ದುರಂತ ಮತ್ತೊಂದಿರಲಾರದೇನೋ..? ಏಕಂದ್ರೆ ಅಂತಹದೊಂದು ಅಕ್ರಮವನ್ನು ಸಕ್ರಮಗೊಳಿಸುವ ಕೆಲಸ ಮಲ್ಲೇಶ್ವರಂ ನಲ್ಲಿರುವ ಪದವಿಪೂರ್ವ ಶಿಕ್ಷಣ ಇಲಾಖೆ ಕಚೇರಿಯಲ್ಲಿ ನಡೆಯುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ.ದೊಡ್ಡ ಮೊತ್ತದ ಹಣದ ವ್ಯವಹಾರವೊಂದು ಸಕ್ಸೆಸ್ ಆಗುವ ಲಕ್ಷಣ ಗೋಚರಿಸುತ್ತಿದೆ ಹಾಗೇನಾದ್ರೂ ಹಾಗಿಬಿಟ್ಟರೆ ಶಿಕ್ಷಣ ಇಲಾಖೆಯೇ ತಲೆತಗ್ಗಿಸುವ ಸನ್ನಿವೇಶವೊಂದು ಸೃಷ್ಟಿಯಾದಂತಾಗಿಬಿಡುತ್ತದೆ.


ಯೆಸ್…ಶೈಕ್ಷಣಿಕ ಅಕ್ರಮವೊಂದನ್ನು ಸಕ್ರಮಗೊಳಿಸುವ ಮೆಗಾ ಪ್ಲ್ಯಾನ್, ಪಿಯು ಮಂಡಳಿ ಕಾರಿಡಾರ್ ನಲ್ಲಿ ನಡೆಯುತ್ತಿದೆ ಎನ್ನುವ ಆಪಾದನೆ ಕೇಳಿಬಂದಿದೆ.ಅದು ಅಂತಿಂಥ ಅಕ್ರಮವಲ್ಲ ಶಿಕ್ಷಣ ಇಲಾಖೆಯ ನೈತಿಕತೆ ಹಾಗೂ ಪಾವಿತ್ರ್ಯತೆಯನೇ ಹಾಳು ಮಾಡುವಂಥ ಅಕ್ರಮ.ಅದಕ್ಕೆ ಪಿಯು ಮಂಡಳಿಯಲ್ಲಿರುವ ಕೆಲವರೇ ಬೆಂಬಲವಾಗಿ ನಿಂತಿದ್ದಾರೆ ಎನ್ನುವ ಆಪಾದನೆ ಕೂಡ ಇದೆ. ಅಕ್ರಮ ವನ್ನು ಸಕ್ರಮಗೊಳಿಸುವ ಪ್ರಕ್ರಿಯೆ ನಿರ್ಣಾಯಕ ಹಂತ ಬಂದು ತಲುಪಿದೆ ಎನ್ನಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದೋದರೆ ಶಿಕ್ಷಣ ಇಲಾಖೆಯೇ ಸಾರ್ವಜನಿಕವಾಗಿ ತಲೆತಗ್ಗಿಸಿದಂತಾಗುವುದು ಖಂಡಿತಾ..

ಏನದು ಎಲೆನ್ ಕೆರಿಯರ್ ಇನ್ಸಿಟ್ಯೂಟ್.ನ ಅಕ್ರಮದ ಸಕ್ರಮೀಕರಣ.?! :ಅಂದ್ಹಾಗೆ ಪಿಯು ಬೋರ್ಡ್ ನ ಕಾರಿಡಾರ್ ನಲ್ಲಿ ನಡೆಯಬಹುದೆನ್ನಲಾಗುತ್ತಿರುವ ಆ ಸಂಭವನೀಯ ದುರಂತವೇ ಎಲೆನ್ ಕೆರಿಯರ್ ಇನ್ಸಿಟ್ಯೂಟ್.ನ ಅಕ್ರಮದ ಸಕ್ರಮೀಕರಣ. ಎಲೆನ್ ಅಕ್ರಮವಾಗಿ ಟ್ಯೂಷನ್ ಸೆಂಟರ್( ಜತೆಗೆ ಪಿಯು ಕಾಲೇಜನ್ನು ಕೂಡ) ನಡೆಸುತ್ತಿದೆ ಎಂದು ಪಾಠಶಾಲೆ ಶೈಕ್ಷಣಿಕ ಸಂಸ್ಥೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಡಿಡಿಪಿಯು ಮನೋಹರ್ ಕೊಳ್ಳಾ ಅವರು ತಿಂಗಳವರೆಗೂ ಪರಿಶೀಲನೆ ನಡೆಸಿ, ನೋಟೀಸ್ ನೀಡಿ ಅಕ್ರಮ ದೃಢಪಟ್ಟ ಬೆನ್ನಲ್ಲಿ ಅಂತಿಮವಾಗಿ ಎಲ್ಲಾ ಸೆಂಟರ್ಸ್ ಗಳನ್ನು ಮುಚ್ಚಬೇಕೆಂದು ಆದೇಶಿಸಿದ್ದರು.
ಹೀಗೆ ಆದೇಶಿಸಿದ್ದವರೇ ದಿಢೀರ್ ಯೂ ಟರ್ನ್ ಹೊಡೆದು ಇದೀಗ ಮೇಲ್ಮನವಿ ಪ್ರಾಧಿಕಾರವಾದ ಪಿಯು ನಿರ್ದೇಶಕರಲ್ಲಿ ಎಲೆನ್ ಆಡಳಿತ ಮರುಪರಿಶೀಲನೆ ಕೋರಿ ಅರ್ಜಿ ಸಲ್ಲಿಸುವಂತೆ ಸಲಹೆ-ಸಹಕಾರ-ಮಾರ್ಗದರ್ಶನ ನೀಡಿದ್ದರು. ನಿರ್ದೇಶಕರ ಕಚೇರಿಗೆ ತಾವೇ ಖುದ್ದು ಕಡತಗಳನ್ನು ತರುವ ಕೆಲಸ ಮಾಡುತ್ತಿದ್ದಾರಂತೆ.ಹೇಗಾದ್ರೂ ಮಾಡಿ ಎಲೆನ್ ಕೆರಿಯರ್ ಇನ್ಸಿಟ್ಯೂಟ್ ಗೆ ಎದುರಾಗಿರುವ ತೊಡಕನ್ನು ನಿವಾರಿಸಿಕೊಡುವ ಕೆಲಸವನ್ನು ಶೃದ್ಧೆಯಿಂದ ಮನೋಹರ್ ಕೊಳ್ಳಾ ಮಾಡುತ್ತಿದ್ದಾರಂತೆ.ಸರ್ಕಾರದ ಮಟ್ಟದಿಂದ ಒತ್ತಡ-ಲಾಭಿ-ಶಿಫಾರಸ್ಸು ಮಾಡಿಸುವ ಕೆಲಸವನ್ನು ಮಾಡಿಸುತ್ತಿದ್ದಾರಂತೆ.ಇದಕ್ಕಾಗಿ ದೊಡ್ಡ ಮೊತ್ತದ ಹಣವನ್ನು ಕೂಡ ನೀಡಲು ಎಲೆನ್ ಆಡಳಿತ ಸಿದ್ದವಾಗಿದೆ ಎನ್ನಲಾಗುತ್ತಿದೆ.ಏಲೆನ್ ನ ಅಕ್ರಮವನ್ನು ಸಕ್ರಮಗೊಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನಗಳು ಬಹುತೇಕ ನಿರ್ಣಾಯಕ ಹಂತ ತಲುಪಿದ್ದು ಕೆಲವೇ ದಿನಗಳಲ್ಲಿ ಅಕ್ರಮವೂ ಸಕ್ರಮವಾಗಬಹುದೆನ್ನುವ ಮಾತು ಕೇಳಿಬರುತ್ತಿದೆ..ಇದೇ ಪಿಯು ಬೋರ್ಡ್ ನ ಅಂಗಳದಲ್ಲಿ ನಡೆಯುತ್ತಿದೆ ಎನ್ನಲಾದ ಬಹುದೊಡ್ಡ ಮಾಸ್ಟರ್ ಗೇಮ್ ಅಂತೆ.

ತಾವು ಡಾಕ್ಟರ್ಸ್ ಎಂಜಿನಿಯರ್ಸ್ ಆಗಬೇಕೆನ್ನುವ ಕನಸನ್ನು ಹೊತ್ತ ಮಕ್ಕಳು,ಅವರ ಕನಸನ್ನು ಸಾಕಾರಗೊಳಿಸಲು ಮುಂದಾಗುವ ಬಹುತೇಕ ಪೋಷಕರಿಗೆ ಎಲೆನ್ ಕೆರಿಯರ್ ಇನ್ಸಿಟ್ಯೂಟ್ ಚಿರಪರಿಚಿತ. ನಿಮ್ಮ ಮಕ್ಕಳ ಭವಿಷ್ಯದ ಚಿಂತೆ ನಮಗೆ ಬಿಟ್ಟುಬಿಡಿ.ಅದನ್ನು ನಾವು ರೂಪಿಸುತ್ತೇವೆ ಎಂದು ಪತ್ರಿಕೆ-ಟಿವಿಗಳಲ್ಲಿ ಜಾಹಿರಾತು ನೀಡುವ ಗಿಮಿಕ್ ಗೆ ಲಕ್ಷಗಟ್ಟಲೇ ಹಣ ತೆರುವ ಪೋಷಕರು ನಮ್ಮ ನಡುವೆ ಎಷ್ಟೋ ಸಾವಿರದಷ್ಟಿದ್ದಾರೆ.ಆದರೆ ಆ ಕನಸುಗಳೆಲ್ಲಾ ಎಲೆನ್ ನಿಂದ ನನಸಾಗುತ್ತಿದೆಯೇ..? ಎಂದು ಲೆಕ್ಕ ಹಾಕಿದ್ರೆ ವಾಸ್ತವದಲ್ಲಿ ಫಲಿತಾಂಶ ನಿರಾಶಾದಾಯಕ.ಅದರ ಬಗ್ಗೆ ಹೇಳೊಕ್ಕೆ ನಿಂತರೆ ಅದೊಂದು ಕರ್ಮಕಾಂಡವಾಗಿ ತೆರೆದುಕೊಳ್ಳುತ್ತದೆ ಬಿಡಿ.

ಟ್ಯೂಷನ್ ಸೆಂಟರ್ ಆರಂಭಿಸಲು ನಿಯಮ ಬದ್ಧ ಅನುಮತಿಯನ್ನೇ ಪಡೆದಿಲ್ಲ-ದಾಖಲೆ ಸಲ್ಲಿಸಿಲ್ಲ:ಮುಖ್ಯವಾದ ವಿಷಯಕ್ಕೆ ಬರುವುದಾದ್ರೆ, ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಟ್ಯೂಷನ್ ಸೆಂಟರ್ ಗಳನ್ನು “ಕರ್ನಾಟಕ ಟ್ಯುಟೋರಿಯಲ್ ಸಂಸ್ಥೆಗಳು( ನೊಂದಣಿ ಮತ್ತು ನಿಯಂತ್ರಣ) ನಿಯಮಗಳು 2001”ರ ನಮೂದಿತ ಟ್ಯುಟೋರಿಯಲ್ ಸಂಸ್ಥೆಗಳ ನೊಂದಣಿ ಷರತ್ತುಗಳನ್ನು ಪಾಲಿಸಬೇಕಿರುವುದು ಕಡ್ಡಾಯ.ಆದರೆ ದುರಂತದ ವಿಷಯ ಏನಂದ್ರೆ ಬಹುತೇಕ ಟ್ಯೂಷನ್ ಸೆಂಟರ್ ಗಳು ಈ ನಿಯಮಗಳನ್ನು ಪಾಲಿಸದೆಯೇ ಇವತ್ತು ಶೈಕ್ಷಣಿಕವಾಗಿ ದಂಧೆಯನ್ನೇ ನಡೆಸುತ್ತಿವೆ.ಅಪಾರ ಪ್ರಮಾಣದ ಲಾಭ ಮಾಡಿಕೊಳ್ಳುತ್ತಿವೆ.ಆದರೆ ಸರ್ಕಾರ ಮಾತ್ರ ಇಂಥದ್ದ್ಯಾವುದೇ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.ನಿಯಮಗಳ ಪಾಲನೆ ಕಡ್ಡಾಯವಾಗಿ ನಡೆದಿದ್ದೆ ಆದಲ್ಲಿ ಸರ್ಕಾರ ಹಾಗೂ ಶಿಕ್ಷಣ ಇಲಾಖೆಗೂ ಅಪಾರ ಪ್ರಮಾಣದ ಆದಾಯ ಬರುವ ಅವಕಾಶಗಳಿವೆ.ಆದರೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಏಕೋ ಇದರ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.

ಬೆಂಗಳೂರಲ್ಲಿಅದರಲ್ಲೂ ಜಯನಗರದ ಆಸುಪಾಸು ಹಾಗೂ ದಕ್ಷಿಣ ಜಿಲ್ಲೆಯ ನಾನಾ ಕಡೆ ನಾಯಿ ಕೊಡೆಗಳಂತೆ ತಲೆ ಎತ್ತಿರುವ ಎಲೆನ್ ಟ್ಯುಟೋರಿಯಲ್ಸ್ “ಕರ್ನಾಟಕ ಟ್ಯುಟೋರಿಯಲ್ ಸಂಸ್ಥೆಗಳು( ನೊಂದಣಿ ಮತ್ತು ನಿಯಂತ್ರಣ) ನಿಯಮಗಳು 2001 ರ ಅನ್ವಯ ಯಾವುದೇ ಅನುಮತಿ ಅಥವಾ ಪರವಾನಗಿಯನ್ನೇ ಪಡೆದಿಲ್ಲ.ಇದು ನಾವ್ ಹೇಳ್ತಿರುವುದಲ್ಲ, ಖುದ್ದು ಬೆಂಗಳೂರು ದಕ್ಷೀಣ ಜಿಲ್ಲೆಯಮ ಡಿಡಿಪಿಯು ಆದ ಶ್ರೀಯುತ ಮನೋಹರ್ ಕೊಳ್ಳಾ (manohar kolla ddpu of bengaluru south) ಅವರೇ ದೃಢೀಕರಿಸಿದ್ದಾರೆ. ಅಷ್ಟೇ ಅಲ್ಲ, ಅವರೇ ಈ ಸಂಬಂಧ ಅಲೆನ್ ಸೆಂಟರ್ ಗಳಿಗೆಲ್ಲಾ ನೊಟೀಸ್ ಸರ್ವ್ ಮಾಡಿ ಎಲ್ಲಾ ಕೇಂದ್ರಗಳನ್ನು ತತ್ ಕ್ಷಣಕ್ಕೆ ಮುಚ್ಚುವಂತೆ ಆದೇಶವನ್ನೂ ನೀಡಿದ್ದರು.ಆದರೆ ದುರಂತ ನೋಡಿ,ಯಾವ ಮನೋಹರ್ ಕೊಳ್ಳಾ ಅವರು ಎಲೆನ್ ಟ್ಯೂಷನ್ ಸೆಂಟರ್ಸ್ ಗಳನ್ನು ಮುಚ್ಚುವಂತೆ ಸೂಚಿಸಿದ್ದರೋ ಅವರೇ ಮೇಲ್ಮನವಿ ಪ್ರಾಧಿಕಾರವಾದ ನಿರ್ದೇಶಕಿ ಸಿಂಧೂ ರೂಪೇಶ್ ಅವರಲ್ಲಿ ಪುನರ್ ಪರಿಶೀಲನೆ ಅರ್ಜಿ ಹಾಕಿಕೊಳ್ಳುವಂತೆ ಅಲೆನ್ ಗೆ ಎಲ್ಲಾ ರೀತಿಯ ಸಲಹೆ-ಮಾರ್ಗದರ್ಶನ-ಸಹಕಾರ ನೀಡುತ್ತಿದ್ದಾರೆನ್ನುವುದು ಇದರ ವಿರುದ್ದ ಹೋರಾಟ ನಡೆಸುತ್ತಿರುವ ಪಾಠಶಾಲೆ ಶೈಕ್ಷಣಿಕ ಸಂಸ್ಥೆಯ ಸಂಚಾಲಕ ಗಂಗಾಧರ್ ಅವರ ಗಂಭೀರ ಆಪಾದನೆ.

ಸೆಂಟರ್ ಗಳಿಗೆ ಬೀಗ ಜಡಿಯುವ ಡಿಡಿಪಿಯು ಮನೋಹರ್ ಕೊಳ್ಳಾ ಅವರ ಪುರುಷತ್ವ ಇದ್ದಕ್ಕಿದ್ದಂತೆ ಠುಸ್ ಆಗಿದ್ದೇಕೆ..?ಎಲೆನ್ ನ ಟ್ಯೂಷನ್ಸೆಂಟರ್ ಗಳನ್ನು ಮುಚ್ಚಿಸಿಯೇ ತೀರುತ್ತೇನೆ ಎಂದು ನನ್ನ ಮುಂದೆಯೇ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು ಸರ್ ಈ ಮನೋಹರ್ ಕೊಳ್ಳಾ.ನಾವು ಕೂಡ ಅವರನ್ನು ನಂಬಿದ್ದೆವು.ಈ ನಿಟ್ಟಿನಲ್ಲಿ ಅವರು ಮಾಡಿದ ಆರಂಭಿಕ ಪ್ರಯತ್ನಗಳನ್ನು ಕಂಡಾಗ ಇಲಾಖೆಯಲ್ಲಿ ಇಷ್ಟ ನಿಷ್ಟಾವಂತರೂ ಇರ್ತಾರಾ ಎಂದೆನಿಸಿತ್ತು.ಮುಂದುವರೆದು ಅಲೆನ್ ಸೆಂಟರ್ ಗಳಿಗೆ ಕಾರಣ/ವಿವರಣೆ ಕೇಳಿ ನೊಟೀಸ್ ನ್ನು ಹೊರಡಿಸಿದ್ದರು.ಆದರೆ ಅವರು ಕೊಡದಿದ್ದಾಗ ತಮ್ಮ ದಕ್ಷಿಣ ಜಿಲ್ಲೆ ವ್ಯಾಪ್ತಿಯಲ್ಲಿರುವ ಎಲ್ಲಾ ಸೆಂಟರ್ ಗಳನ್ನು ಮುಚ್ಚುವಂತೆ ಕೊನೆಯ ಆದೇಶ ಪತ್ರವನ್ನೂ ಹೊರಡಿಸಿದರು.
ಒಂದು ಹೆಜ್ಜೆ ಮುಂದ್ಹೋಗಿ ಸೆಂಟರ್ ಗಳನ್ನು ಮುಚ್ಚದಿದ್ದರೆ ಅವರ ಮೇಲೆ ಎಫ್ ಐ ಆರ್ ಮಾಡಿಸಿ ಪೊಲೀಸ್ ಬಿಗಿಭದ್ರತೆಯಲ್ಲಿ ಮುಚ್ಚಿಸುವ ಮಾತನ್ನಾಡಿದ್ದರು.ಆದರೆ ಕೆಲವೇ ದಿನಗಳಲ್ಲಿ ಅದೇನಾಯ್ತೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಉಲ್ಡಾ ಹೊಡೆಯಲಾರಂಭಿಸಿದರು.ಈ ಬಗ್ಗೆ ಮಾಹಿತಿ ಕೇಳಲು ಹೋದರೆ ನಮ್ಮನ್ನೇ ಬೈಯ್ಯಲು ಶುರು ಮಾಡಿದ್ರು.ಏಕೆ ಎಂದು ಅವಲೋಕಿಸಿದಾಗಲೇ ಗೊತ್ತಾಗಿದ್ದು ಯಾವ್ ಮನೋಹರ್ ಕೊಳ್ಳಾ ಪುರುಷತ್ವ ಪ್ರದರ್ಶಿಸಿದ್ದರೋ ಅವರೇ ಇವತ್ತು ಎಲೆನ್ ಆಡಳಿತದ ಮುಂದೆ ಮಂಡಿಯೂರಿದ್ದಾರೆ.ಅವರ ಬೆನ್ನಿಗೆ ನಿಂತು ಮೇಲ್ಮನವಿ ಪ್ರಾಧಿಕಾರಕ್ಕೆ ಮರುಪರಿಶೀಲನೆಗೆ ಅವಕಾಶ ಕೋರಿ ಅರ್ಜಿ ಹಾಕಲು ಸಲಹೆ ಕೊಡುತ್ತಿದ್ದಾರೆ.ತಾವೇ ಖುದ್ದು ನಿರ್ದೇಶಕರ ಕಚೇರಿಗೆ ತೆರಳಿ ಅರ್ಜಿಯನ್ನೂ ಹಾಕಿಸಿಬಂದಿದ್ದಾರೆ ಎನ್ನುವುದು ಗೊತ್ತಾಯ್ತೆನ್ನುತ್ತಾರೆ ದೂರುದಾರ ಗಂಗಾಧರ್.
ಗೊಂದಲಕಾರಿ-ಅನುಮಾನಾಸ್ಪದ ಪ್ರಶ್ನೆಗಳಿಗೆ ಉತ್ತರಿಸುತ್ತಾರಾ ಡಿಡಿಪಿಯು ಮನೋಹರ್ ಕೊಳ್ಳಾ..!?ಎಲೆನ್ ಸೆಂಟರ್ ಗಳ ಅಕ್ರಮದ ವಿಚಾರದಲ್ಲಿ ಎಲ್ಲವೂ ಸರಿಯಾಗಿದ್ದರೆ ಶ್ರೀಯುತ ಮನೋಹರ್ ಕೊಳ್ಳಾ ಅವರೇಕೆ ನೊಟೀಸ್ ಹೊರಡಿಸಬೇಕಿತ್ತು.? ಅವರು ನೊಟೀಸ್ ಹೊರಡಿಸಿದ್ದರ ಹಿಂದಿನ ಉದ್ದೇಶವೇ “ಕರ್ನಾಟಕ ಟ್ಯುಟೋರಿಯಲ್ ಸಂಸ್ಥೆಗಳು( ನೊಂದಣಿ ಮತ್ತು ನಿಯಂತ್ರಣ) ನಿಯಮಗಳು 2001ನ್ನು ಉಲ್ಲಂಘಿಸಿದ್ದಾರೆನ್ನುವುದಲ್ಲವೇ..? ಅದೆಲ್ಲವನ್ನೂ ಸ್ಪಷ್ಟಪಡಿಸಿಕೊಂಡ ಮೇಲೆಯೇ ಅವರು ಅಂತಿಮ ನೊಟೀಸ್ ನೀಡಿದ್ದಲ್ಲವೇ..? ಹೀಗಿರುವಾಗ ಎಲೆನ್ ಆಡಳಿತಕ್ಕೆ ಮರುಪರಿಶೀಲನೆ ಅರ್ಜಿಯನ್ನೇಕೆ ಹಾಕೊಕ್ಕೆ ಇದೇ ಮನೋಹರ್ ಕೊಳ್ಳಾ ಏಕೆ ಸಲಹೆ-ಸಹಕಾರ-ಮಾರ್ಗದರ್ಶನ ನೀಡಬೇಕು..?
ಹಾಗೆ ಮಾಡುವುದು ತಪ್ಪಲ್ಲವೇ..? ಅಗತ್ಯಕ್ಕಿಂತ ಹೆಚ್ಚಿನ ಆಸಕ್ತಿಯನ್ನೇಕೆ ಮನೋಹರ್ ಕೊಳ್ಳಾ ತೋರಿಸುತ್ತಿದ್ದಾರೆ..? ಹಾಗಿದ್ದರೆ ಅವರು ಹೊರಡಿಸಿದ ಆದೇಶವೇ ಸರಿಯಿಲ್ಲವೇ..? ಇವರೇ ಅವಸರಪಟ್ಟು-ದುಡುಕಿ ನೊಟೀಸ್ ನೀಡಿದರೇ..? ಹಾಗೆ ಆತುರಾತುರವಾಗಿ ನೊಟೀಸ್ ನೀಡುವುದರ ಹಿಂದೆ ನಿಜವಾದ ದುರುದ್ದೇಶವೇನಿತ್ತು..? ಎಲೆನ್ ನಂತ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯ ಪ್ರತಿಷ್ಟೆ-ಘನತೆ ಹಾಳು ಮಾಡುವುದಾ..? ಸುಖಾಸುಮ್ಮನೆ ತೊಂದರೆ ಕೊಡುವುದರ ಹಿಂದೆ ಬೇರೆ ಯಾವುದಾದ್ರೂ ಹಿತಾಸಕ್ತಿ ಇತ್ತಾ..? ಆ ಹಿತಾಸಕ್ತಿಯನ್ನು ಈಡೇರಿಸಲು ಎಲೆನ್ ನಿರಾಕರಿಸಿದ್ದಕ್ಕೆ ಮನೋಹರ್ ಕೊಳ್ಳಾ ಹೀಗೆ ಮಾಡಿದ್ರಾ..? ಎಲೆನ್ ಸೆಂಟರ್ಸ್ ಗಳನ್ನು ಮುಚ್ಚಿಸುವ ಖಡಕ್ ಆದೇಶ ಹೊರಡಿಸಿದ ಹಂತದಿಂದ ಹಿಡಿದು, ತಾನು ಹೊರಡಿಸಿದ ಆದೇಶ ದೋಷಪೂರಿತವಾಗಿದ್ದು ಅದನ್ನು ಮರುಪರಿಶೀಲಿಸುವಂತೆ ಮೇಲ್ಮನವಿ ಮಾಡಿಕೊಳ್ಳಲು ಸಹಕಾರ ನೀಡುವ ಹಂತಗಳವರೆಗಿನ ಬೆಳವಣಿಗೆಗಳಲ್ಲಿ ಮನೋಹರ್ ಕೊಳ್ಳಾ ಅವರ ಗೊಂದಲ-ಅನುಮಾನಾಸ್ಪದ ನಡೆ-ಧೋರಣೆ ಇಂತದೊಂದಿಷ್ಟು ಪ್ರಶ್ನೆಗಳನ್ನು ಮೂಡಿಸುವುದು ಸಹಜ.

ಎಲೆನ್ ಕೆರಿಯರ್ ಇನ್ಸಿಟ್ಯೂಟ್ ಪ್ರೈವೇಟ್ ಲಿಮಿಟೆಡ್( allen carrier institute private limited) ನ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎಲೆನ್ ಟ್ಯೂಷನ್ ಸೆಂಟರ್ ( tution centres)ಗಳ ವಿಚಾರದಲ್ಲಿ ಮನೋಹರ ಕೊಳ್ಳಾ ಸಂಪೂರ್ಣ ಕರ್ತವ್ಯಲೋಪ ವಹಿಸಿದ್ದಾರೆನ್ನುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ.ಅವರಲ್ಲಿ ನಿಜವಾಗಿಯೂ ಬದ್ಧತೆ-ನಿಷ್ಟೆ ಇದ್ದಿದ್ದರೆ ಯಾವ ಆದೇಶ ಹೊರಡಿಸಿದ್ದರೋ ಅದೇ ನಿರ್ದಾರಕ್ಕೆ ಬದ್ಧರಾಗಿರಬೇಕಿತ್ತು..? ಯಾವುದೇ ಪ್ರಲೋಭನೆ ಅಥವಾ ಒತ್ತಡ ಅಥಾ ವಶೀಲಿಬಾಜಿ ಅಥವಾ ಆಮಿಷಕ್ಕೆ ಒಳಗಾಗಬೇಕಾದ ಅವಶ್ಯಕತೆ ಇರ್ಲಿಲ್ಲವೇನೋ ..? ಆದರೆ ಮೊದಲು ಶೂರತ್ವ ಮೆರೆದು ನಂತರ ಅಧೀರರಾಗಿದ್ದು,ತಮ್ಮ ನಿರ್ದಾರದಲ್ಲಿ ದಿಢೀರ್ ಯೂ ಟರ್ನ್ ಹೊಡೆದಿದ್ದು ಎಷ್ಟು ಸರಿ ಎನ್ನುವ ಪ್ರಶ್ನೆ ಮೂಡುವುದು ಸಹಜ.ಅವರ ಧೋರಣೆ-ನಡತೆ-ಮಾತುಕತೆ ಗಮನಿಸಿದವರಿಗೆ ಎಲೆನ್ ಅಕ್ರಮ ಸಕ್ರಮಗೊಳಿಸಲು ಇವರೇ ಮುಂದೆ ನಿಂತು ಪ್ರಕ್ರಿಯೆಗಳನ್ನು ನಿರ್ವಹಿಸುತ್ತಿದ್ದಾರಾ..? ಎಂಬ ಅನುಮಾನ ಬಲವಾಗುತ್ತದೆ.
ಅಕ್ರಮದ ಸಕ್ರಮಕ್ಕೆ ನಡೀತಿದ್ಯಾ ದೊಡ್ಡ ಪ್ಲ್ಯಾನ್- ಬಿಗ್ ಡೀಲ್ ..? ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ದೊರೆತಿರುವ ಕೆಲವು ಮಾಹಿತಿಗಳ ಪ್ರಕಾರ ಎಲೆನ್ ತನ್ನ ಅಕ್ರಮವನ್ನು ಸಕ್ರಮಗೊಳಿಸಿಕೊಳ್ಳಲು ದೊಡ್ಡ ಮೊತ್ತದ ಹಣದ ಆಫರ್ ನ್ನು ಪಿಯು ಆಡಳಿತದ ಮುಂದಿಟ್ಟಿದೆಯಂತೆ. ಶತಾಯಗತಾಯ ಸಕ್ರಮ ಮಾಡಿಕೊಳ್ಳಲು ಎಲೆನ್ ಆಡಳಿತ ಮಂಡಳಿಯೇ ಟೊಂಕಕಟ್ಟಿ ನಿಂತಿದೆಯಂತೆ. ಇದಕ್ಕೆ ಎಷ್ಟ್ ಬೇಕಾದ್ರೂ ಹಣ ನೀಡುವ ಅಫರ್ ಕೂಡ ನೀಡಿದೆಯಂತೆ.ಸರ್ಕಾರದ ಮೇಲೂ ಸಾಕಷ್ಟು ರೀತಿಯಲ್ಲಿ ಒತ್ತಡ ಹೇರುವ ಕೆಲಸ ನಡೆಯುತ್ತಿದೆಯಂತೆ.ಸರ್ಕಾರದ ಮೂಲಕ ಪಿಯು ಮಂಡಳಿಯ ಮೇಲೆ ಪ್ರಭಾವ ಬೀರಿ ಅಕ್ರಮವನ್ನೂ ಹೇಗಾದ್ರೂ ಮಾಡಿ ಸಕ್ರಮಗೊಳಿಸಿಕೊಳ್ಳಲು ಅವಕಾಶಗಳಿವೆಯಾ ಎಂದು ಪರಿಶೀಲಿಸುವಂತೆ ಪ್ರಭಾವ ಬೀರುವ ಕೆಲಸವನ್ನೂ ಮಾಡಲಾಗುತ್ತಿದೆಯಂತೆ.
ನಿಗಧಿತ ಅವಧಿಯೊಳಗೆ ದಾಖಲೆ ಸಲ್ಲಿಸಲು ವಿಫಲವಾದರೂ ಏಕಿಲ್ಲ ಕಠಿಣ ಕ್ರಮ ..?!ಸಧ್ಯಕ್ಕೆ ಎಲೆನ್ ಅಕ್ರಮದ ಚೆಂಡು ಮೇಲ್ಮನವಿ ಪ್ರಾಧಿಕಾರವಾಗಿರುವ ನಿರ್ದೇಶಕಿ ಸಿಂಧೂ ರೂಪೇಶ್ ಅವರ ಅಂಗಳದಲ್ಲಿದೆ. ಒಂದು ಮೂಲದ ಪ್ರಕಾರ ಎಲೆನ್ ಗೆ ತಾವು ಸರಿಯಾಗಿದ್ದೇವೆ..ಎಲ್ಲೂ ನಿಯಮಮೀರಿ ಕೆಲಸ ಮಾಡಿಲ್ಲ.ಎಲ್ಲಾ ದಾಖಲೆ ಸಲ್ಲಿಸಿದ್ದೇವೆ.ನಾವು ಸಾಚಾಗಳು ಎಂದು ಪ್ರೂವ್ ಮಾಡಲು ನೀಡಿದ್ದ ಕಾಲಾವಕಾಶದಲ್ಲಿ ಕೆಲವಷ್ಟು ದಾಖಲೆ ಸಲ್ಲಿಸಿರುವುದನ್ನು ಬಿಟ್ಟರೆ ಬಹುಮುಖ್ಯವಾದ ದಾಖಲೆಗಳನ್ನು ನಿರ್ದೇಶಕಿ ಸಿಂಧೂ ಅವರಿಗೆ ಸಲ್ಲಿಸಿಲ್ಲ ಎನ್ನುವ ಮಾತಿದೆ. ಇಷ್ಟೆಲ್ಲಾ ಆದರೂ ಮೇಡಮ್ ಸಿಂಧೂ ಎಲೆನ್ ವಿಚಾರದಲ್ಲಿ ಏಕೆ ಕಠಿಣವಾದ ನಿರ್ಣಯ ಕೈಗೊಳ್ಳುತ್ತಿಲ್ಲವೋ ಗೊತ್ತಾಗುತ್ತಿಲ್ಲ.
ಈ ವಿಳಂಬ ಗಮನಿಸಿದರೆ ಅವರ ಮೇಲೂ ಎಲೆನ್ ಆಡಳಿತ ಸಾಕಷ್ಟು ಪ್ರಬಾವ ಬೀರುವ ಕೆಲಸ ಮಾಡಿರುವುದನ್ನು ಅಲ್ಲಗೆಳೆಯಲು ಸಾಧ್ಯವೇ ಇಲ್ಲ..ಆದರೆ ನಿಯಮ ಮೀರಿ ಕೆಲಸ ಮಾಡುವ ಧೈರ್ಯವಾಗಲಿ,ಅಕ್ರಮವನ್ನು ಸಕ್ರಮಗೊಳಿಸುವ ಮನಸ್ತಿತಿಯಾಗಲಿ ಅವರಲ್ಲಿಲ್ಲ.ಅಕ್ರಮದ ವಿರುದ್ಧ ದೂರುಗಳು ಬಂದಾಗ ಆ ಸ್ಪಾಟ್ ನಲ್ಲೇ ಖಡಕ್ ಎನಿಸುವಂಥ ನಿರ್ದಾರ ತೆಗೆದುಕೊಳ್ಳುವಲ್ಲಿ ಸ್ವಲ್ಪ ಸ್ಪೀಡ್ ಇಲ್ಲ ಎನ್ನುವುದನ್ನು ಬಿಟ್ಟರೆ ಸೇವಾವಧಿಯುದ್ದಕ್ಕೂ ಅಕ್ರಮಗಳಿಗೆ ಸಾಥ್ ಕೊಡುವುದಾಗಲಿ, ಅವುಗಳನ್ನು ಬೆಂಬಲಿಸಿ ಹೆಸರು ಹಾಳು ಮಾಡಿಕೊಂಡಿರದ ಒಳ್ಳೆಯ ಹಿನ್ನಲೆ ಸಿಂಧೂ ಅವರಿಗಿದೆ.ಹಾಗಾಗಿ ಎಲೆನ್ ಅಕ್ರಮದ ವಿಚಾರದಲ್ಲಿ ಯಾವುದೇ ಒತ್ತಡ-ಶಿಫಾರಸ್ಸು-ಆಮಿಷಕ್ಕೆ ಒಳಗಾಗದೆ ಖಡಕ್ ಆದ ನಿರ್ಣಯ ಕೈಗೊಳ್ಳುತ್ತಾರೆನ್ನುವ ವಿಶ್ವಾಸ ನಮ್ಮಲ್ಲಿದೆ.


ಮಾದ್ಯಮಗಳು ಪ್ರಶ್ನಿಸಿದ್ರೆ ದ್ಯಾಟ್ಸ್ ನನ್ ಆಫ್ ಯುವರ್ ಬ್ಯುಸಿನೆಸ್(thats non of your business) ಅಂತಾರಂತೆ ಮನೋಹರ್ ಕೊಳ್ಳಾ : ಎಷ್ಟೋ ಪುಣ್ಯಾತ್ಮರು-ದಕ್ಷರು-ನಿಷ್ಟಾವಂತ ಡಿಡಿಪಿಯು ಅವರನ್ನು ಕಂಡಿದೆ ಬೆಂಗಳೂರು ದಕ್ಷಿಣ ಜಿಲ್ಲೆ.ಆದರೆ ಮನೋಹರ್ ಕೊಳ್ಳಾ ಅವರಂತವರನ್ನು ಕಾಣಲಿಕ್ಕೆ ಸಾಧ್ಯವಿಲ್ಲವೇನೋ..? ಅದು ಪ್ರಾಮಾಣಿಕತೆ-ದಕ್ಷತೆ-ನಿಷ್ಟೆಯಲ್ಲಾಗಿದಿದ್ದರೆ ಅವರನ್ನು ಗೌರವಯುತವಾಗಿ ಕಾಣಬಹುದಾಗಿತ್ತು.ಆದರೆ ಎಲೆನ್ ವಿಚಾರದಲ್ಲಿ ಅವರ ಒಟ್ಟಾರೆ ನಡೆ-ನುಡಿ ಅವರ ಪ್ರಾಮಾಣಿಕತೆ-ದಕ್ಷತೆ-ನೀಯತ್ತನ್ನೇ ಪ್ರಶ್ನಿಸುತ್ತಿರುವುದು ಸ್ಪಷ್ಟ.ಈ ಬಗ್ಗೆ ಬಸವನಗುಡಿಯಲ್ಲಿರುವ ಅವರ ಕಚೇರಿಗೆ ಮಾದ್ಯಮಗಳು ಸ್ಪಷ್ಟನೆ ಕೇಳಲು ಹೋದರೆ ಅವರ ಜತೆಯೇ ಅನಾಗರಿಕ-ಅಮಾನವೀಯವಾಗಿ ನಡೆದುಕೊಂಡಿದ್ದಾರಂತೆ. ಎಲೆನ್ ಗೆ ನೊಟೀಸ್ ಕೊಟ್ಟವರು ನೀವೇನಾ ಎಂದು ಮಾದ್ಯಮಗಳು ಕೇಳಿದ್ರೆ ದ್ಯಾಟ್ಸ್ ನನ್ ಆಫ್ ಯುವರ್ ಬ್ಯುಸಿನೆಸ್..ದಿಸ್ ಈಸ್ ಮೈ ಆಫೀಸ್…ಇಯರ್ ಐ ಆಮ್ ಬಾಸ್.ಎಂದು ಗುಡುಗಿದ್ದಾರೆ.ತಾನು ಜನರ ತೆರಿಗೆ ಹಣದಲ್ಲಿ ಸಂಬಳ ಪಡೆಯುವ ಸರ್ಕಾರಿ ಸೇವಕರೆನ್ನುವುದನ್ನು ಬಹುಷಃ ಕೊಳ್ಳಾ ಮರೆತಂತಿದೆ.( ನೆನಪಿರಲಿ ಇದೇ ಮನೋಹರ್ ಕಕೊಳ್ಳಾ ಅವರ ನೇಮಕಾತಿಯೇ ಸಾಕಷ್ಟು ಅಕ್ರಮ-ಗೊಂದಲಗಳಿಂದ ತುಂಬಿ ಹೋಗಿರುವ ಸ್ಪೋಟಕ ಸುದ್ದಿಯೂ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಲಭಿಸಿದೆ.ದಾಖಲೆಗಳ ಕ್ರೋಢೀಕರಣದಲ್ಲಿದ್ದೇವೆ.ಸಾಕ್ಷ್ಯ ಸಿಗುತ್ತಿದ್ದಂತೆ ಆ ಸ್ಪೋರಿಯನ್ನು ಸ್ಪೋಟಿಸಲಿದೆ ಕನ್ನಡ ಫ್ಲ್ಯಾಶ್ ನ್ಯೂಸ್).

ಮನೋಹರ್ ಕೊಳ್ಳಾ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಗಾಡ್ ಫಾದರ್ ಅಂತೆ..?!ಇಡೀ ಇಲಾಖೆಯಲ್ಲಿ ಯಾರ ಅಂಕೆಗೂ ಸಿಗದಂತೆ ಮನೋಹರ್ ಕೊಳ್ಳಾ ಗರ್ವ-ದುರಂಹಕಾರದಿಂದ ಮೆರೆಯೊಕ್ಕೆ ಸಚಿವ ಪ್ರಿಯಾಂಕ ಖರ್ಗೆ(minister priyank kharge) ಅವರು ನನ್ನ ಬೆನ್ನಿಗಿದ್ದಾರೆನ್ನುವ ಭ್ರಮೆಯೇ ಕಾರಣ ಎನ್ನುವ ಮಾತಿದೆ.ಆದರೆ ಅಕ್ರಮ-ತಪ್ಪು ಮಾಡಿದಾಗಲೂ ಅವರೇ ರಕ್ಷಿಸುತ್ತಾರೆನ್ನುವ ಭರವಸೆ-ನಂಬಿಕೆಯಲ್ಲಿದ್ದರೆ ಅದು ಅವರ ಭ್ರಮೆಯಾಗಬಹುದು.ಏಕೆಂದರೆ ತಪ್ಪು-ಪ್ರಮಾದ- ಅಕ್ರಮ ಬೆಂಬಲಿಸುವುದು ಒಂದೇ, ಅವರೇ ಅಕ್ರಮ ನಡೆಸುವುದೂ ಒಂದೇ..ಇದರಿಂದ ಮುಜುಗರ-ಅಪಮಾನ-ಮುಖಭಂಗ ಆಗುವುದು ಮನೋಹರ್ ಕೊಳ್ಳಾ ಅವರನ್ನು ಬೆಂಬಲಿಸುತ್ತಾರೆನ್ನುವ ಪ್ರಿಯಾಂಕ್ ಖರ್ಗೆ ಅವರಿಗಲ್ಲವೇ..?
ಕೊಳ್ಳಾ ಅವರ ಮೇಲೆ ಗಂಭೀರ ಸ್ವರೂಪದ ಆರೋಪ ಬಂದಾಗ್ಲೂ ಅವರ ಬೆನ್ನಿಗೆ ನಿಂತು ಸಂಕಷ್ಟ ತಂದುಕೊಳ್ಳಲು ಪ್ರಿಯಾಂಕ್ ಖರ್ಗೆ ಸಿದ್ದವಿರುತ್ತಾರಾ..?ನೋ ಚಾನ್ಸ್..ಈ ಸತ್ಯ ತನ್ನೆಲ್ಲಾ ಕರ್ಮಕಾಂಡಗಳಿಗೆ ಅವರ ಹೆಸರೇಳಿಕಂಡು ರಕ್ಷಣೆ ಪಡೆಯುತ್ತಿರುವ ಕೊಳ್ಳ ಅವರಿಗೆ ಅರ್ಥವಾದರೆ ಒಳ್ಳೇದೆನಿಸುತ್ತದೆ ಅಲ್ವಾ..?!