advertise here

Search

ಕೊಟ್ಟ ಮಾತು ಉಳಿಸಿಕೊಂಡ “ಡಿ ಬಾಸ್” ಅಭಿಮಾನಿಗಳು


ಅನೇಕ ಕಾರಣಗಳಿಂದ ದರ್ಶನ್ ಅವರನ್ನು ದೂರವಿಟ್ಟಿದ್ದ ಮಾದ್ಯಮಗಳಿಂದಲೂ ಡೆವಿಲ್ ಗೆ “ಅಬ್ಬರ” ದ ಪ್ರಚಾರ

ಅನೇಕ ಕಾರಣಗಳಿಂದ ದೂರವಿಟ್ಟಿದ್ದ ಮಾದ್ಯಮಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಟಿವಿ ಪರದೆಗಳಲ್ಲಿ ತೋರಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿಬಿಡ್ತಾ.. ಇಂತದ್ದೊಂದು ಬೆಳವಣಿಗೆಗೆ ಕಾರಣವಾಗಿದ್ದು ಡೆವಿಲ್ ಚಿತ್ರ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್ ಅವರ ನಟನೆಯ ಡೆವಿಲ್ ಇಂದು ಚಿತ್ರಮಂದಿರಗಳಲ್ಲಿ ಸುನಾಮಿಯಾಗ ಅಪ್ಪಳಿಸಿದೆ.ಇದರ ಅಬ್ಬರವನ್ನು ಮಾದ್ಯಮಗಳು ಕೂಡ ಅನಿವಾರ್ಯವಾಗಿ ತೋರಿಸಬೇಕಾದ ಸನ್ನಿವೇಶ ನಿರ್ಮಾಣವಾಗಿತ್ತು.

ದರ್ಶನ್ ನಟನೆಯ ಡೆವಿಲ್ ಗೆ ಕರ್ನಾಟಕಾದ್ಯಂತ ಭರ್ಜರಿ ಓಪನಿಂಗ್ ಸಿಕ್ಕಿದೆ. ಚಿತ್ರದ ಅದ್ದೂರಿತನಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ನೀವು ಎಲ್ಲೇ ಇರಿ…ಹೇಗೆ ಇರಿ..ನೀವು ನಮ್ಮ ಆರಾಧ್ಯದೈವ ಎಂದು ಹೇಳುತ್ತಿದ್ದ ಅಭಿಮಾನಿಗಳು ಡೆವಿಲ್ ಚಿತ್ರವನ್ನು ಹೆಗಲ ಮೇಲೆ ಹೊತ್ತು ತಿರುಗಿಸುತ್ತೇವೆ..ಅದನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂದು ಕೊಟ್ಟ ಮಾತನ್ನು ಅವರ ಫ್ಯಾನ್ಸ್ ಉಳಿಸಿಕೊಂಡಿದ್ದಾರೆ ಎನ್ನಿಸುತ್ತದೆ.ಏಕೆಂದರೆ ಡೆವಿಲ್ ಚಿತ್ರ ಬಿಡುಗಡೆಗೆ ಅವರು ಮಾಡಿಕೊಂಡ ಸಿದ್ಗತೆಗಳು..ಅದಕ್ಕೆ ನೀಡಿದ ಪ್ರಚಾರ ಬಹುಷಃ ಕನ್ನಡ ಚಿತ್ರರಂಗದಲ್ಲಿ ನಾ ಭೂ ತೋ ನ ಭವಿಷ್ಯತೆ ಎನ್ನುವಂತಿತ್ತು ಎಂದು ಕನ್ನಡ ಚಿತ್ರರಂಗವನ್ನು ಅನೇಕ ವರ್ಷಗಳಿಂದ ನೋಡಿಕೊಂಡು ಬರುತ್ತಿರುವ ಹಿರಿಯ ನಿರ್ದೇಶಕರು ಹೇಳಿದ್ದಾರೆ.

ದರ್ಶನ್ ಜೈಲ್ ನಲ್ಲಿದ್ದರೂ ಅವರ ಅಭಿಮಾನ ಇನ್ನೂ ಕಡಿಮೆಯಾಗಿಲ್ಲ ಎನ್ನುವುದು ಡೆವಿಲ್ ಚಿತ್ರದ ಬಿಡುಗಡೆ ಹಾಗೂ ಅದರ ಮುನ್ನ ಕಂಡುಬಂದ ಸನ್ನಿವೇಶಗಳಿಂದಲೇ ವೇದ್ಯವಾಗಿದೆ.ಇತ್ತೀಚಿನ ವರ್ಷಗಳಲ್ಲಿ ಇಂತದ್ದೊಂದು ಅಭಿಮಾನದ ಅಬ್ಬರವನ್ನು ನೋಡಿದ್ದೇ ಕಡಿಮೆ.ಪ್ರೇಕ್ಷಕರನ್ನು ಬರವನ್ನು ಎದುರಿಸುತ್ತಿದ್ದ ಕನ್ನಡ ಚಿತ್ರಮಂದಿರಗಳತ್ತ ಪ್ರೇಕ್ಷಕರನ್ನು ಕರೆತರುವಲ್ಲಿ ದರ್ಶನ್ ಯಶಸ್ವಿಯಾಗಿದ್ದಾರೆ ಎಂದರೂ ತಪ್ಪಾಗದೇನೋ..? ಚಿತ್ರ ಬಿಡುಗಡೆಗೆ ಕಾದು ಕುಂತಿದ್ದ ಅಭಿಮಾನಿಗಳು ಡಿ ಬಾಸ್ ಚಿತ್ರಕ್ಕೆ ಭರ್ಜರಿ ಓಪನಿಂಗ್ ಕೊಡಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ ಎನ್ನುವುದರಲ್ಲಿ ಅನುಮಾನವಿಲ್ಲ. ಬೆಂಗಳೂರು ಸೇರಿದಂತೆ ರಾಜ್ಯದ್ಯಾಂತ 1000 ತೆರೆಗಳಲ್ಲಿ ಪ್ರದರ್ಶನ ಕಂಡ ಡೆವಿಲ್ ತುಂಬಿದ ಗೃಹಗಳಲ್ಲಿ ಪ್ರದರ್ಶನ ಕಂಡಿದೆ.

ALSO READ :  IAS‌ ಸಿಂಧೂ ಬಿ ರೂಪೇಶ್ ಎತ್ತಂಗಡಿ..!-ಕೇಂದ್ರ ಸೇವೆಗೆ ನಿಯೋಜನೆ...!

ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಕರೆತರುವಲ್ಲಿ ಇತ್ತೀಚಿನ ಚಿತ್ರಗಳು ವಿಫಲವಾಗಿದ್ದವು.ಥಿಯೇಟರ್ ಗಳು ಮುಚ್ಚುವ ಮಟ್ಟಕ್ಕೆ ಆರ್ಥಿಕ ನಷ್ಟವನ್ನು ಎದುರಿಸುತ್ತಿದ್ದವು. ಸ್ಟಾರ್ ಎನಿಸಿಕೊಂಡವರ ಚಿತ್ರಗಳು ಅಲ್ಲೊಂದು ಇಲ್ಲೊಂದು ಎನ್ನುವಂತೆ ರಿಲೀಸ್ ಅಗ್ತಿರುವುದು ಕೂಡ ಇದಕ್ಕೆ ಕಾರಣ ಇರಬಹುದೇನೋ..ಆದರೆ ಆ ಎಲ್ಲಾ ಕೊರಗನ್ನು ಡೆವಿಲ್ ದೂರ ಮಾಡಿದೆ. ಥಿಯೇಟರ್ ಗಳ ಮುಂದೆ ವರ್ಷದ ನಂತರ ಇಷ್ಟೊಂದು ಜನದಟ್ಟಣೆ ಕಾಣುವಂತ ಸನ್ನಿವೇಶ ಸೃಷ್ಟಿಯಾಗಿದ್ದಕ್ಕೆ ಥಿಯೆಟರ್ ಮಾಲೀಕರು ದರ್ಶನ್ ಗೆ ಥ್ಯಾಂಕ್ಸ್ ಹೇಳುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬರುತ್ತಿತ್ತು.

ಇದೆಲ್ಲದರ ನಡುವೆ ಮಾದ್ಯಮಗಳು ದರ್ಶನ್ ನಡುವಳಿಕೆ ಹಾಗೂ ಸ್ವಭಾವದ ಕಾರಣಕ್ಕೆ ಡೆವಿಲ್ ಚಿತ್ರಕ್ಕೆ ಕೊಟ್ಟ ಪ್ರಚಾರ ಅಷ್ಟಕ್ಕಷ್ಟೇ ಇತ್ತು.ಆದರೆ ಚಿತ್ರ ಬಿಡುಗಡೆ ನಂತರ ಪ್ರೇಕ್ಷಕರ ಅಬ್ಬರ-ಅದ್ದೂರಿತನಕ್ಕೆ ಮನಸೋತು ಅನಿವಾರ್ಯವಾಗಿ ಡೆವಿಲ್ ಬಗ್ಗೆ ಮಾತನಾಡುವಂತಾಗಿದ್ದು ವಿಶೇಷ.ಮಾದ್ಯಮಗಳಿಲ್ಲದೆಯೂ ಚಿತ್ರವನ್ನು ಗೆಲ್ಲಿಸಿಕೊಡ್ತೇವೆ.ಆ ತಾಕತ್ತು ನಮಗಿದೆ ಎನ್ನುತ್ತಿದ್ದ ಅಭಿಮಾನಿಗಳು ಡಿ ಬಾಸ್ ಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.ಅಷ್ಟೇ ಅಲ್ಲದೆ ದರ್ಶನ್ ಜೈಲಿನಲ್ಲೇ ಇದ್ದುಕೊಂಡು ಮಾಡಿಕೊಂಡಿರುವ ಮನವಿಯಂತೆ ಚಿತ್ರವನ್ನು ಯಶಸ್ಸಿನ ದಡಕ್ಕೆ ಕೊಂಡೊಯ್ದೇ ತೀರುತ್ತೇವೆ ಎಂದು ಪಣ ತೊಟ್ಟಿದ್ದಾರೆ.ಡಿ ಬಾಸ್ ಅಭಿಮಾನಿಗಳ ಅಬ್ಬರ ಗಮನಿಸಿದ್ರೆ ಅದು ಕೂಡ ಅಸಾಧ್ಯವೇನಿಲ್ಲ ಎನ್ನಿಸುತ್ತೆ.

ಅದೇನೇ ಇರಲಿ ಡೆವಿಲ್ ದೊಡ್ಡಮಟ್ಟದ ಓಪನಿಂಗ್ ಪಡೆದುಕೊಂಡಿದೆ.ಚಿತ್ರದ ಬಗ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ ನಮ್ಮ ಡಿ ಬಾಸ್ ಚಿತ್ರ ಗೆಲ್ಲಿಸಲೇಬೇಕೆನ್ನು ಹಠದಲ್ಲಿ ಅಭಿಮಾನಿ ಗಳಿದ್ದಾರೆ. ಚಿತ್ರ ಹಲವು ಕಾರಣಗಳ ಹೊರತಾಗಿಯೂ ಗೆದ್ದರೆ ಅದೊಂದು ಇತಿಹಾಸವಾಗಬಲ್ಲದೇನೋ..ಅಬಿಮಾನಿಗಳಿಂದಲೇ ಗೆದ್ದ ಚಿತ್ರ ಎನ್ನುವ ಹೆಗ್ಗಳಿಕೆಗೂ ಡಿ ಬಾಸ್ ಕಾರಣವಾಗಬಲ್ಲದೇನೋ..ಅಭಿಮಾನದ ಹೊಳೆಯಲ್ಲಿ ಮಿಂದೇಳುತ್ತಿರುವ ಅಭಿಮಾನಿಗಳ ಉತ್ಕಟತೆ ಬಹುಷಃ ದರ್ಶನ್ ಅವರನ್ನು ಮತ್ತಷ್ಟು ಭಾವುಕಗೊಳಿಸಿದ್ರೂ ಆಶ್ವರ್ಯವಿಲ್ಲ.ಏನೇ ಇರಲಿ ಕನ್ನಡ ಚಿತ್ರಗಳು ಗೆಲ್ಲಬೇಕು..ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರಬೇಕು..


Political News

“ಸುವರ್ಣ”ದಲ್ಲಿ ಬದಲಾವಣೆ “ಕ್ರಾಂತಿ”..!:- ಮ್ಯಾನೇಜ್ಮೆಂಟ್ “ರಂಗಪ್ರವೇಶ”..! ಉಳಿಯೋರು ಯಾರು..?

“eV ಬಸ್‌” ಡ್ರೈವರ್‌ ಗಳಿಗೆ “ಗೇಟ್‌ ಪಾಸ್”..! “ಕಿಲ್ಲರ್‌” ಕಳಂಕ ತೊಡೆದುಕೊಳ್ಳಲು “ಪ್ಲ್ಯಾನ್‌”.!

“ಅಕ್ರಮ”ದ ವಿರುದ್ಧ ಸಿಡಿದೆದ್ದ “ದಕ್ಷ-ಖಡಕ್” ಅಧಿಕಾರಿ “ಲೇಡಿ ಸಿಂಗಂ” ಆಶಾ ಪರ್ವಿನ್ ಎತ್ತಂಗಡಿ..?!

ಸವಾಲುಗಳ ನಡುವೆ ಬಿಎಂಟಿಸಿ ಅಧ್ಯಕ್ಷರಾಗಿ ನಿಕೇತ್ ರಾಜ್ ಮೌರ್ಯ ನೇಮಕ..

ಹುಡುಕಿಕೊಡಿ.! ಪರಿಶಿಷ್ಟರ “ಅಭ್ಯುದಯ”ಕ್ಕೆ ನಿರ್ಮಿಸಬೇಕಿದ್ದ “ಸಮುದಾಯ ಭವನ”ವೇ ಮಿಸ್…!

“ಸಾರಿಗೆ ಕೂಟ”ದ ಚಂದ್ರು ಅಕ್ಷರಶಃ ಒಂಟಿಯಾದ್ರಾ ..!ಜತೆಗಿದ್ದವರೆಲ್ಲಾ ದೂರ..ದೂರವಾದ್ರಾ..?

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

Scroll to Top