ಬೆಂಗಳೂರು:ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು. ರಾಜ್ಯದ ಬೊಕ್ಕಸವನ್ನು ಬರಿದು ಮಾಡಿರುವುದಷ್ಟೇ ಅಲ್ಲ ಆರ್ಥಿಕತೆಯನ್ನು ದಿವಾಳಿ ಮಾಡಿವೆ ಎನ್ನುವ ಆಪಾದನೆ ವಿಪಕ್ಷಗಳಿಂದಷ್ಟೇ ಅಲ್ಲ, ಅದಕ್ಕಾಗಿ ತಮ್ಮ ಜೇಬಿನಿಂದ ಹಣ ಪಾವತಿಸುತ್ತಿರುವ ತೆರಿಗೆದಾರನಿಂದಲೂ ಕೇಳಿಬಂದಿದೆ.ಗ್ಯಾರಂಟಿಗೇ ಜನರ ತೆರಿಗೆ ಹಣದ ರೂಪದಲ್ಲಿ ನೂರಾರು ಕೋಟಿ ಖರ್ಚಾಗುತ್ತಿರುವ ವೇಳೆಯೇ ಮತ್ತೊಂದು ಸ್ಪೋಟಕ ಎನ್ನುವಂತ ಸುದ್ದಿ ಹೊರಬಿದ್ದಿದೆ.ಇದನ್ನು ಕೇಳಿ ತೆರಿಗೆದಾರರು ಮತ್ತಷ್ಟು ಶಾಕ್ ಆದರೂ ಆಶ್ವರ್ಯವಿಲ್ಲ.ಏಕೆಂದರೆ ಇದು ಗ್ಯಾರಂಟಿ ಯೊಜನೆ ಅನುಷ್ಟಾನಕ್ಕೇನೆ ಒಂದು ಕಮಿಟಿ..ಅದಕ್ಕೊಬ್ಬ ಅಧ್ಯಕ್ಷ..ಅದಕ್ಕೆ ಒಂದಷ್ಟು ಉಪಾಧ್ಯಕ್ಷರು,ಅವರ ಕೆಳಗೆ ಇನ್ನೊಂದಷ್ಟು ಜನ,….ಹೀಗೆ ಹನುಮನ ಬಾಲದಂತೆ ಬೆಳೆಯುವ ಈ ಪಟ್ಟಿ ಕಂಡರೆ ಎಂಥವರಿಗೂ ಆಕ್ರೋಶ-ಅಸಮಾಧಾನ ಮೂಡೋದಂತೂ ಸಹಜ.


ಗ್ಯಾರಂಟಿ ಯೋಜನೆಗಳಿಗೆ ನೂರಾರು ಕೋಟಿ ಹಣವನ್ನು ಖರ್ಚು ಮಾಡುವ ರಾಜ್ಯ ಸರ್ಕಾರ ಅದರ ಅನುಷ್ಟಾನಕ್ಕೆ ಪ್ರತ್ಯೇಕ ಸಮಿತಿಗಳನ್ನು ರಚಿಸಿರುವ ಸುದ್ದಿ ತುಂಬಾ ಜನಕ್ಕೆ ಗೊತ್ತಿರಲಿಕ್ಕಿಲ್ಲ.ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅನುಷ್ಟಾನ ಸಮಿತಿಗಳನ್ನು ರಚಿಸಿರುವ ಮಾತುಗಳಿವೆ. ಯೋಜನೆ ಅನುಷ್ಟಾನ ಹೇಗೆ ಆಗುತ್ತಿದೆ ಎನ್ನುವದಷ್ಟನ್ನೇ ಮಾನಿಟರ್ ಮಾಡಿ, ಲೋಪಗಳಿದ್ದಲ್ಲಿ ಅದನ್ನು ಸರಿಪಡಿಸುವ ಕೆಲಸ ಮಾಡಿ ಸರ್ಕಾರಕ್ಕೆ ನಿಯತವಾಗಿ ವರದಿ ಕೊಡುವ ಕೆಲಸವನ್ನಷ್ಟೆ ಮಾಡುತ್ತಿವೆ ಎಂದು ಜನಸಾಮಾನ್ಯರು ತಿಳಿದುಕೊಳ್ಳಬಹುದು.
ಆದರೆ ಈಗ ನಾವು ಹೇಳೊಕ್ಕೆ ಹೊರಟಿರುವ ಸುದ್ದಿ ಕೇಳಿದ್ರೆ ಗಾಬರಿಯೊಂದಿಗೆ ಆಕ್ರೋಶ ಮೂಡುತ್ತದೆ. ನಮ್ಮ ತೆರಿಗೆ ಹಣದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಕಾರ್ಯಕರ್ತರನ್ನು ಸಾಕಿ ಸಲಹುವ ಕೆಲಸ ಮಾಡುತ್ತಿದೆ ಯೇ ಎಂಬ ಶಂಕೆ ಮೂಡುತ್ತದೆ.ಗ್ಯಾರಂಟಿ ಯೋಜನೆಗಳಿಗೇನೆ ಖರ್ಚು ಮಾಡುತ್ತಿರುವ ಸರ್ಕಾರಕ್ಕೆ ಈ ದುಂದುವೆಚ್ಚದ ಅಗತ್ಯವಿತ್ತೇ ಎನ್ನುವ ಪ್ರಶ್ನೆ ಕೂಡ ಮೂಡುತ್ತೆ.ಏಕೆಂದರೆ ಬೆಂಗಳೂರು ಜಿಲ್ಲೆಯನ್ನೇ ಕೇಂದ್ರವಾಗಿಟ್ಟುಕೊಂಡು ಗ್ಯಾರಂಟಿ ಯೋಜನಾ ಅನುಷ್ಟಾನ ಸಮಿತಿ ಮಾಡಿಕೊಂಡು ಅದಕ್ಕೆ ಮಾಡುತ್ತಿರುವ ಖರ್ಚಿನ ಲೆಕ್ಕ ನೋಡಿದ್ರೆ ಎಂಥವರಿಗೂ ಕಾಂಗ್ರೆಸ್ ಸರ್ಕಾರ ಧೋರಣೆ ಬಗ್ಗೆ ಆಕ್ರೋಶ-ಬೇಸರ ಮೂಡುತ್ತದೆ.

ಬೆಂಗಳೂರು ನಗರದಲ್ಲೇ ಅನುಷ್ಟಾನ ಸಮಿತಿ ಮಾಡಲಾಗಿದೆ.ಅದಕ್ಕೊಬ್ಬ ಅಧ್ಯಕ್ಷ, 5 ಉಪಾಧ್ಯಕ್ಷರು, ಕ್ಷೇತ್ರವಾರು ಅಧ್ಯಕ್ಷರು ಅವರ ಕೆಳಗೆ ಸದಸ್ಯರು ಹೀಗೆ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ.ಅಂದ್ಹಾಗೆ ಗ್ಯಾರಂಟಿ ಅನುಷ್ಟಾನ ಸಮಿತಿಗೆ ತಿಂಗಳಿಗೆ ಮಾಡಲಾಗುವ ಖರ್ಚು ಎಷ್ಟು ಗೊತ್ತಾ ಬರೋಬ್ಬರಿ 17 ಲಕ್ಷದ 30 ಸಾವಿರದ 800 ರೂ. ವಿಚಿತ್ರ ಏನ್ ಗೊತ್ತಾ ಇದೆಲ್ಲಕ್ಕೂ ಬಿಬಿಎಂಪಿನೇ ತನ್ನ ಬೊಕ್ಕಸದಿಂದ ಹಣವನ್ನು ನೀಡುತ್ತದೆ.
ಇದನ್ನು ಇನ್ನಷ್ಟು ವಿಸ್ತ್ರತವಾಗಿ ಹೇಳುವುದಾದರೆ ಬೆಂಗಳೂರು ನಗರದಲ್ಲಿ ಗ್ಯಾರಂಟಿ ಯೋಜನೆಗೆ ಅಧ್ಯಕ್ಷ ರೊಬ್ಬ ರನ್ನು ನೇಮಿಸಲಾಗಿದೆ.ಅವರ ಕೆಳಗೆ 5 ಉಪಾಧ್ಯಕ್ಷರು ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 28 ಅಧ್ಯಕ್ಷರು ಕೆಲಸ ಮಾಡುತ್ತಿದ್ದಾರೆ. ಈ 28 ಅಧ್ಯಕ್ಷರ ಕೆಳಗಡೆ 15 ಸಮಿತಿಯ ಸದಸ್ಯರು ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರಿಗೂ ಬಿಬಿಎಂಪಿಯಿಂದಲೇ ವೇತನ ಪಾವತಿ ಮಾಡಲಾಗುತ್ತಿದೆ. ವೇತನ ಜೊತೆ ಬಿಬಿಎಂಪಿಯಲ್ಲೇ ನೀಡಿರುವ ಕಚೇರಿ,ಅದಕ್ಕೆ ಸಿಬ್ಬಂದಿ,.ವಿದ್ಯುತ್,ನೀರಿನ ಬಿಲ್ ಎಲ್ಲ ವೆಚ್ಚವೂ ಬಿಬಿಎಂಪಿಯಿಂದಲೇ ಪಾವತಿ ಆಗುತ್ತಿದೆ
ಬೆಂಗಳೂರು ನಗರದ ಅಧ್ಯಕ್ಷರಿಗೆ ತಿಂಗಳಿಗೆ ವೇತನವಾಗಿ 40,000 ರೂ ನೀಡಲಾಗುತ್ತಿದೆ. ಪ್ರತಿ ಉಪಾಧ್ಯಕ್ಷರಿಗೆ 10 ಸಾವಿರದಂತೆ 5 ಉಪಾಧ್ಯಕ್ಷರಿಗೆ 50,000 ರೂ ನೀಡಲಾಗುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಸದಸ್ಯರಿಗೆ 25 ಸಾವಿರದಂತೆ 28 ಸದಸ್ಯರಿಗೆ 25000 ದಂತೆ 7 ಲಕ್ಷ ನೀಡಲಾಗುತ್ತಿದೆ.28 ವಿಧಾನಸಭಾ ಕ್ಷೇತ್ರದ ಅಧ್ಯಕ್ಷರ ವ್ಯಾಪ್ತಿಯಲ್ಲಿ 14 ಸದಸ್ಯರಿದ್ದು ಎಲ್ಲಾ 28 ವಿಧಾನಸಭಾ ಸಮಿತಿಯಲ್ಲಿ ಒಟ್ಟು 392 ಸದಸ್ಯರು ಕೆಲಸ ಮಾಡುತ್ತಿದ್ದಾರೆ. ಪ್ರತಿ ಸದಸ್ಯರಿಗೆ 2400 ರೂನಂತೆ 392 ಸದಸ್ಯರಿಗೆ 9,40,800 ರೂ ಪಾವತಿ ಮಾಡಲಾಗುತ್ತಿದೆ.ಹೀಗೆ ಪ್ರತಿ ತಿಂಗಳು ಗ್ಯಾರಂಟಿ ಯೋಜನೆಯ ಸಮಿತಿಗೆ 17,30.800 ರೂ ಪಾವತಿ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಸಾಕ್ಷ್ಯ ಸಮೇತ ದೊರೆತಿದೆ.

ಇದು ಗ್ಯಾರಂಟಿ ಸಮಿತಿಯಲ್ಲ ನಿರುದ್ಯೋಗಿ ಕೈ ಕಾರ್ಯಕರ್ತರಿಗೆ ಗಂಜಿಕೇಂದ್ರ:ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎನ್ ಆರ್ ರಮೇಶ್ ಹೇಳುವ ಪ್ರಕಾರ ಗ್ಯಾರಂಟಿ ಯೋಜನೆ ಎನ್ನುವುದು ರಾಜ್ಯದ ಜನತೆಯನ್ನು ಸೋಮಾರಿಯನ್ನಾಗಿ ಮಾಡಿದೆ.ಎಲ್ಲವನ್ನೂ ಸರ್ಕಾರವೇ ಫ್ರೀ ಆಗಿ ಕೊಡುತ್ತಿರುವುದರಿಂದ ರಾಜ್ಯದಲ್ಲಿ ಕೆಲಸಗಾರರೇ ಸಿಗುತ್ತಿಲ್ಲ.ಇದು ಒಂದು ಸಮಸ್ಯೆಯಾದ್ರೆ ಗ್ಯಾರಂಟಿ ಎನ್ನುವುದೆ ವೇಸ್ಟ್ ಆಗಿರುವಾಗ ಅದರ ಅನುಷ್ಟಾನಕ್ಕೊಂದು ಕಮಿಟಿ ಮಾಡಿರುವುದು ಮೂರ್ಖತನದ ಪರಮಾವಧಿ.ಅದಕ್ಕೊಬ್ಬ ಅಧ್ಯಕ್ಷ, 5 ಉಪಾಧ್ಯಕ್ಷರು, 28 ವಿಧಾನಸಭಾ ಕ್ಷೇತ್ರಕ್ಕೆ ಅಧ್ಯಕ್ಷರು, ಅವರ ಕೆಳಗೆ ಇನ್ನೊಂದಷ್ಟು ಸದಸ್ಯರು..ಇದೆಲ್ಲಾ ಬೇಕಿತ್ತಾ..ಪ್ರತಿ ತಿಂಗಳಿಗೆ 17 ಲಕ್ಷದಷ್ಟು ಹಣ ಖರ್ಚು ಮಾಡುವುದೆಂದರೆ ಅದಕ್ಕೆ ಲೆಕ್ಕ ಬೇಕಾ..ಸರ್ಕಾರಕ್ಕೇನು ತನ್ನ ಬೇಳೆ ಬೇಯಿಸಿಕೊಳ್ಳಲು ನೀರಿನಂತೆ ಹಣ ಖರ್ಚು ಮಾಡುತ್ತಿದೆ.ಆದರೆ ತೆರಿಗೆ ಪಾವತಿಸುತ್ತಿರುವವರ ಕಥೆ ಏನಾಗಬೇಡ..ಇದು ಕಾಂಗ್ರೆಸ್ ಸರ್ಕಾರದ ಮೂರ್ಖತನದ ಪರಮಾವಧಿ.ಕಾಂಗ್ರೆಸ್ ನಲ್ಲಿ ನಿರುದ್ಯೋಗಿ ಆಗಿರುವ ಸಾಕಷ್ಟು ಕಾರ್ಯಕರ್ತರಿಗೆ ನೆಲೆ ಕಲ್ಪಿಸೊಕ್ಕೆ ಗ್ಯಾರಂಟಿ ಅನುಷ್ಟಾನ ಸಮಿತಿ ಮಾಡಿಕೊಂಡು ಖರ್ಚು ಮಾಡಲಾಗುತ್ತಿದೆ.ರಾಜ್ಯವನ್ನು ಮತ್ತಷ್ಟು ದಿವಾಳಿ ಸ್ತಿತಿಗೆ ಕೊಂಡೊಯ್ಯುವುದಕ್ಕೆ ಇದನ್ನೆಲ್ಲಾ ಸರ್ಕಾರ ಮಾಡುತ್ತಿದೆ ಎನ್ನಿಸುತ್ತಿದೆ.
–ಎನ್ .ಆರ್ ರಮೇಶ್- ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ


ಈ ಕಾಂಗ್ರೆಸ್ ಸರ್ಕಾರದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ…ಹೇಳಿ..? ಸರ್ಕಾರಕ್ಕೆ ಗ್ಯಾರಂಟಿ ಯೋಜನೆ ಸರಿಯಾಗಿ ಅನುಷ್ಟಾನ ಆಗುತ್ತಿದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಬೇಕೆನ್ನುವ ಆಲೋಚನೆಯಿದ್ದರೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಸರ್ಕಾರದಲ್ಲಿರುವ ಸಚಿವರು,ಕೈ ಶಾಸಕರು ತಮ್ಮ ಜೇಬಿನಿಂದ ಖರ್ಚು ಮಾಡಿ ಹಣ ನೀಡಲಿ. ಅದನ್ನು ನಮ್ಮಂತ ಸಾಮಾನ್ಯ ತೆರಿಗೆದಾರರಿಂದ ಏಕೆ ಕಲೆಕ್ಟ್ ಮಾಡಬೇಕು.ರಾಜ್ಯದ ಜನರನ್ನು ಉದ್ದಾರ ಮಾಡೊಕ್ಕೆ ಗ್ಯಾರಂಟಿ ತಂದಿದ್ದೇವೆ ಎಂದು ಸರ್ಕಾರ ಬಡಾಯಿ ಕೊಚ್ಚಿ ಕೊಳ್ಳುತ್ತಿದೆ.ಇವರು ಹೇಳೋದ ನೋಡಿದ್ರೆ ತಮ್ಮ ಮನೆಯಿಂದ ಹಣ ತಂದು ಜನರನ್ನು ಉದ್ದಾರ ಮಾಡುತ್ತಿದ್ದಾರೆ ಎನ್ನುವಂತಿದೆ.ಆದರೆ ಇದೆಲ್ಲಾ ನಮ್ಮ ತೆರಿಗೆ ದುಡ್ಡು. ಕಾಂಗ್ರೆಸ್ ಸರ್ಕಾರದ ಬಗ್ಗೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ವಿ..ಆದರೆ ಇಷ್ಟೊಂದು ದರಿದ್ರವಾಗಿ ಆಡಳಿತ ನಡೆಸ್ತಾರೆ ಎನ್ನುವ ಕಲ್ಪನೆಯೂ ನಮಗಿರಲಿಲ್ಲ..ನಮ್ಮನ್ನಾಳುವ ಎಲ್ಲಾ ರಾಜಕೀಯ ಪಕ್ಷಗಳ ಕಥೇನೂ ಹೀಗೆಯೇ ಎನ್ನಿಸುತ್ತದೆ ಬಿಡಿ..ನಿರೀಕ್ಷೆ ಇಟ್ಟುಕೊಳ್ಳುವುದು ನಮ್ಮ ಮೂರ್ಖತನ ಅಷ್ಟೆ
–ಎಸ್.ಭಾಸ್ಕರನ್-ಸಾಮಾಜಿಕ ಕಾರ್ಯಕರ್ತ