advertise here

Search

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR


ಬೆಂಗಳೂರು: ಸುವರ್ಣ ನ್ಯೂಸ್ ಚಾನೆಲ್ ನ ಸುದ್ದಿ ಸಂಪಾದಕ/ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ದ ಎಫ್ ಐ ಆರ್ ಮಾಡಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಸುವರ್ಣ ಸುದ್ದಿವಾಹಿನಿಯ ದಕ್ಷಿಣ ಕನ್ನಡ ಜಿಲ್ಲೆಯ ವರದಿಗಾರ ಹಾಗೂ ಕ್ಯಾಮೆರಾಮನ್ ಮೇಲೆ ಸೌಜನ್ಯಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮ್ಮರೋಡಿ, ಗಿರೀಶ್ ಮಟ್ಟಣ್ಣನವರ್ ಹಾಗೂ ತಂಡ ಹಲ್ಲೆ ಮಾಡಿದೆ ಎಂದು ಸುವರ್ಣ ನ್ಯೂಸ್ ನಲ್ಲಿ ತಪ್ಪು ವರದಿ ನೀಡಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ  ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ  ಗಣೇಶ್ ಶೆಟ್ಟಿ ಎನ್ನುವವರು ದೂರು ನೀಡಿದ್ದರು.

 ಗಣೇಶ್ ಶೆಟ್ಟಿ ಅವರ ದೂರನ್ನು ಆಧರಿಸಿ ಪೊಲೀಸರು ಸುವರ್ಣ ಟಿವಿ ಸಂಪಾದಕ  ಅಜಿತ್ ಹನುಮಕ್ಕನವರ್, ಸುವರ್ಣ ಚಾನೆಲ್ ನ ವರದಿಗಾರ ಮತ್ತು ಕ್ಯಾಮೆರಾಮನ್ ವಿರುದ್ದ ಎಫ್ ಐಆರ್ ದಾಖಲಿಸಿದ್ದಾರೆ. ಶವಗಳನ್ನು ಹೂಳಲಾಗಿದೆ ಎಂದು ಹೇಳಲಾಗುತ್ತಿರುವ ಸ್ಥಳದಲ್ಲಿ ನಡೆಯುತ್ತಿದ್ದ ಉತ್ಖನನದ ವರದಿ ಮಾಡಲು ಯೂಟ್ಯೂಬರ್ಸ್ ತೆರಳಿದ್ದರು.

ಈ ವೇಳೆ ಕೆಲವು ಕಿಡಿಗೇಡಿಗಳು ಯೂ ಟ್ಯೂಬರ್ಸ್ ಗಳ ಮೇಲೆ ಹಲ್ಲೆ ಮಾಡಿದ್ದರು.ಹಲ್ಲೆಗೊಳಗಾದವರ ಬಗ್ಗೆ ಸುದ್ದಿ ಮಾಡಲು ಸುವರ್ಣ ರಿಪೋರ್ಟರ್ ಹಾಗೂ ಕ್ಯಾಮೆರಾಮನ್ ತೆರಳಿದ್ದಾಗ ತಿಮ್ಮರೋಡಿ ಹಾಗೂ ಗಿರೀಶ್ ಮೆಟ್ಟಣ್ಣನವರ್ ಕಡೆಯವರು ಹಲ್ಲೆ ಮಾಡಿದ್ದಾರೆ ಎಂದು ಚಾನೆಲ್ ನಲ್ಲಿ ವರದಿ ಮಾಡಿದ್ದರು.ಇದು  ಸೌಜನ್ಯಪರ ಹೋರಾಟಗಾರರ ನೈತಿಕ ಸ್ಥೈರ್ಯ ಕುಗ್ಗಿಸುವ ಪ್ರಯತ್ನದ ಭಾಗವಷ್ಟೇ ಅಲ್ಲದೇ ಹೋರಾಟಗಾರರನ್ನು ತೇಜೋವಧೆ ಮಾಡುವ ದುಸ್ಸಾಹಸ ಎಂದು ದೂರಿನಲ್ಲಿ ವಿವರಿಸಿದ್ದರು. ದೂರಿನ ಹಿನ್ನಲೆಯಲ್ಲಿ ಮೂವರ ವಿರುದ್ಧ ಎಫ್ ಐಆರ್ ಮಾಡಿಕೊಳ್ಳಲಾಗಿದೆ.

ALSO READ :  ಬಿಜೆಪಿ ನೂತನ ರಾಜ್ಯಾಧ್ಯಕ್ಷ ಲೀಸ್ಟ್ ನ ಆ ಮುಂಚೂಣಿ ಹೆಸರು..ರೇಸ್ ನಲ್ಲಿರೋರು ಯಾರ್ ಗೊತ್ತಾ..!?

ಇನ್ನೊಂದೆಡೆ ಹಲ್ಲೆಗೊಳಗಾದರೆನ್ನಲಾದ ಸುವರ್ಣ ರಿಪೋರ್ಟರ್ ಅವ್ರೇ ಮಾದ್ಯಮಗಳ ಮುಂದೆ ನಮ್ಮ ಮೇಲೆ ಹಲ್ಲೆ ಮಾಡಲು ಬಂದಿದ್ದು ನಿಜ.ಆದರೆ ಯಾರೊಬ್ಬರು ಹಲ್ಲೆ ನಡಸಲಿಲ್ಲ.ಅಲ್ಲೇ ಇದ್ದ ಪೊಲೀಸರು ಮತ್ತು ಕೆಲವು ಹೋರಾಟಗಾರರು ನಮ್ಮನ್ನು ರಕ್ಷಿಸಿದರು ಎಂದು ಹೇಳಿರುವುದು ಸೋಷಿಯಲ್ ಮೀಡಿಯಾಗಳಲ್ಲಿ ಸಿ್ಕ್ಕಾಪಟ್ಟೆ ವೈರಲ್ ಆಗಿದೆ.ಈ ವೀಡಿಯೋ ಅಜಿತ್ ಹನುಮಕ್ಕನವರ್ ಚಾನೆಲ್ ನಲ್ಲಿ ಕುಳಿತು ಹೇಳಿದ ಮಾತು ಸುಳ್ಳು ಎನ್ನುವುದನ್ನು ಬಿಂಬಿಸುವಂತಿದೆ. ತಮ್ಮ ಸಿಬ್ಬಂದಿ ಮೇಲೆ ಹಲ್ಲೆ ಆಗಿದೆ ಎನ್ನುವಂಥ ಸೂಕ್ಷ್ಮ ಹಾಗೂ ಗಂಭೀರ ವಿಚಾರವನ್ನು ಅತ್ಯಂತ ಜೋರುದ್ವನಿಯಲ್ಲಿ ಅಬ್ಬರಿಸುತ್ತಾ ಹೇಳಿದ್ದರ ಹಿಂದಿನ ಉದ್ದೇಶ, ಸೌಜನ್ಯಪರ ಹೋರಾಟಗಾರರ ವಿರುದ್ದ ಧರ್ಮಸ್ಥಳದ ಭಕ್ತಾಧಿಗಳನ್ನು ರೊಚ್ಚಿಗೆಬ್ಬಿಸಿ ದಾಂದಲೆ ಎಬ್ಬಿಸುವುದು ಸಂಘರ್ಷ ಸೃಷ್ಟಿಸುವುದಾಗಿತ್ತಾ ಎನ್ನುವ ಅನುಮಾನ ಹಲವರನ್ನು ಕಾಡುತ್ತಿದೆ.

ಅಜಿತ್ ಹನುಮಕ್ಕನವರ್ ಬಗ್ಗೆ ವ್ಯಾಪಕ ಆಕ್ರೋಶ-ಟೀಕೆ-ಅಸಮಾಧಾನ:ಜವಾಬ್ದಾರಿಯುತ ಮಾದ್ಯಮದ ಮುಖ್ಯಸ್ಥರಾಗಿ ಅಜಿತ್ ಹನುಮಕ್ಕನವರ್ ಅವರಂಥವರು ಪರಿಸ್ಥಿತಿಯನ್ನು ಅವಲೋಕಿಸದೆ ಒಂದು ಕ್ಷೇತ್ರದ ಬಗ್ಗೆ ತಮಗೆ ವೈಯುಕ್ತಿಕವಾಗಿ ಇರುವ ಶೃದ್ಧೆಯನ್ನು ವೈಭವೀಕರಿಸುವ ಉದ್ದೇಶದಲ್ಲಿ ವಾಸ್ತವವಾಗಿ ಸಂಭವಿಸದೆ ಇರುವಂಥದ್ದನ್ನು ಸಂಭವಿಸಿದೆ ಎಂದು ಹೇಳಿದ್ದು ಎಷ್ಟು ಸರಿ..ಇದು ಅವರ ಪೂರ್ವಾಗ್ರಹಪೀಡಿತ ಮನಸ್ಥಿತಿ ತೋರಿಸುತ್ತದೆ.ಅಷ್ಟೇ ಅಲ್ಲ ತಮ್ಮ ವಿಚಾರಧಾರೆಗಳನ್ನು ಬಲವಂತವಾಗಿ ವೀಕ್ಷಕರ ಮೇಲೆ ಹೇರುವ ಕೆಲಸವನ್ನು ಮಾಡುವ ಮೂಲಕ ಗೊಂದಲಕ್ಕೆ ಸಿಲುಕಿಸುವ ಪ್ರಯತ್ನ ಮಾಡಿದ್ದಾರೆ.ಇದು ನಿಜಕ್ಕೂ ಅವರ ವ್ಯಕ್ತಿತ್ವಕ್ಕೆ ಘನತೆ ತರುವಂತದ್ದಲ್ಲ.ಅವರು ತಮ್ಮ ತಪ್ಪಿಗೆ ಮಾದ್ಯಮದಲ್ಲೇ ಕ್ಷಮೆ ಕೋರಬೇಕು.ಇಲ್ಲವಾದಲ್ಲಿ ಅವರ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಾಮಾಜಿಕ ಮಾದ್ಯಮಗಳಲ್ಲಿ ಅನೇಕರು ಎಚ್ಚರಿಸಿದ್ದಾರೆ.


Political News

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

ಜೋಗ್-ಕಾರ್ಗಲ್ ನಲ್ಲಿ ಮಟ್ಕಾ ದಂಧಗೆ ಬಲಿಯಾಯ್ತು ಜೀವ…!

INSIDE THE TRUTH….ಮುರಿದುಬಿದ್ದ ಮಾತುಕತೆ- ಬೇಡಿಕೆಗಳಿಗೆ ಸೊಪ್ಪಾಕದ ಸರ್ಕಾರ-14 ತಿಂಗಳ ಹಿಂಬಾಕಿ 700 ಕೋಟಿ ಬಿಡುಗಡೆಗಷ್ಟೇ ಸರ್ಕಾರ ಒಪ್ಪಿಗೆ…

ನಾಳೆ ಸಾರಿಗೆ ಮುಷ್ಕರ ಇಲ್ಲ, ಒಂದು ದಿನ ಮುಂದೂಡಿಕೆ :ಹೈಕೋರ್ಟ್ ಆದೇಶ

“ಅವರಿಬ್ಬರು” ಒಂದಾದ್ರೆ ಆಗಸ್ಟ್ 5 ರ ಸಾರಿಗೆ ಮುಷ್ಕರ “ಯಶಸ್ವಿ”ನಾ.?!

ಬಿಗ್ ಇಂಪ್ಯಾಕ್ಟ್..kSRTC ಎಂಡಿ ಸಹಿ ನಕಲು ಮಾಡಿದ್ದಾತ ಸಸ್ಪೆಂಡ್…

eXCLUSIVE….ಕೆಎಸ್ ಆರ್ ಟಿಸಿ MD ಸಹಿ ನಕಲು..!-ಲಕ್ಷಾಂತರ ಸುಲಿಗೆ..! ತನಿಖೆಯಾದರೆ ಮತ್ತಷ್ಟು ಅಕ್ರಮ ಬಹಿರಂಗ..

Scroll to Top