advertise here

Search

ಐಪಿಎಲ್ 2026: 19 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲು! ಹತ್ತೂ ತಂಡಗಳಿಗೆ ಭಾರತೀಯರೇ ಸಾರಥಿಗಳು

ipl 2026

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆರಂಭವಾಗಿ ಎರಡು ದಶಕಗಳು ಹತ್ತಿರವಾಗುತ್ತಿವೆ. ಈ 19 ವರ್ಷಗಳಲ್ಲಿ ಐಪಿಎಲ್, ಕ್ರಿಕೆಟ್‌ನ ಸ್ವರೂಪವನ್ನೇ ಬದಲಿಸಿದೆ. ಆದರೆ, 2026ರ ಈ ಸೀಸನ್ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅತ್ಯಂತ ಹೆಮ್ಮೆಯ ಕ್ಷಣವನ್ನು ಹೊತ್ತು ತಂದಿದೆ. ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ, ಕಣದಲ್ಲಿರುವ ಎಲ್ಲಾ 10 ತಂಡಗಳನ್ನು ಭಾರತೀಯ ಆಟಗಾರರೇ ಮುನ್ನಡೆಸುತ್ತಿದ್ದಾರೆ.

ವಿದೇಶಿ ನಾಯಕರ ಅಧಿಪತ್ಯಕ್ಕೆ ತೆರೆಬಿದ್ದ ಈ ವಿದ್ಯಮಾನ, ಭಾರತೀಯ ಕ್ರಿಕೆಟ್‌ನ ನಾಯಕತ್ವದ ಕ್ಷಮತೆ ಮತ್ತು ಬೆಳೆದು ನಿಂತಿರುವ ಯುವ ಶಕ್ತಿಗೆ ಹಿಡಿದ ಕನ್ನಡಿಯಾಗಿದೆ.

ವಿದೇಶಿ ಸಾರಥ್ಯದ ಯುಗ ಅಂತ್ಯ?

2008ರಲ್ಲಿ ಐಪಿಎಲ್ ಆರಂಭವಾದಾಗ ರಾಜಸ್ಥಾನ್ ರಾಯಲ್ಸ್ ತಂಡವನ್ನು ಶೇನ್ ವಾರ್ನ್ (shane warn) ಚಾಂಪಿಯನ್ ಮಾಡಿದ್ದರು. ಅಲ್ಲಿಂದಾಚೆಗೆ ಆಡಂ ಗಿಲ್‌ಕ್ರಿಸ್ಟ್, ಡೇವಿಡ್ ವಾರ್ನರ್ (devid warner) ಅವರಂತಹ ವಿದೇಶಿ ನಾಯಕರು ತಂಡಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಫಾಫ್ ಡು ಪ್ಲೆಸಿಸ್ (RCB) ಮತ್ತು ಪ್ಯಾಟ್ ಕಮ್ಮಿನ್ಸ್ (SRH) ಅವರಂತಹ ಅನುಭವಿ ವಿದೇಶಿ ಆಟಗಾರರು ತಂಡದ ಚುಕ್ಕಾಣಿ ಹಿಡಿದಿದ್ದರು.

ಆದರೆ ಈ ಬಾರಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪ್ಯಾಟ್ ಕಮ್ಮಿನ್ಸ್ ಅಲಭ್ಯತೆಯಿಂದಾಗಿ ಇಶಾನ್ ಕಿಶನ್ (ISHAN KISHAN) ಅವರಿಗೆ ಜವಾಬ್ದಾರಿ ಹಸ್ತಾಂತರವಾಗುವುದರೊಂದಿಗೆ, 10ಕ್ಕೆ ಹತ್ತು ತಂಡಗಳೂ ಸಂಪೂರ್ಣವಾಗಿ ಭಾರತೀಯ ಆಟಗಾರರ ಸಾರಥ್ಯಕ್ಕೆ ಒಳಪಟ್ಟಿವೆ.

2026ರ ಐಪಿಎಲ್ ತಂಡಗಳು ಮತ್ತು ಭಾರತೀಯ ಸೇನಾಧಿಪತಿಗಳು:

ಈ ಬಾರಿಯ ನಾಯಕತ್ವದ ಪಟ್ಟಿ ಗಮನಿಸಿದರೆ ಯುವ ಮತ್ತು ಅನುಭವಿ ಆಟಗಾರರ ಸಮಾಗಮ ಕಂಡುಬರುತ್ತದೆ:

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಈ ಬಾರಿ ಆರ್‌ಸಿಬಿ ತನ್ನ ನಾಯಕತ್ವದ ಶೈಲಿಯನ್ನು ಬದಲಿಸಿದ್ದು, ಸ್ಥಳೀಯ ಪ್ರತಿಭೆ ರಜತ್ ಪಾಟಿದಾರ್ (RAJATH PATIDAR) ಅವರಿಗೆ ಜವಾಬ್ದಾರಿ ನೀಡಿದೆ.

ಚೆನ್ನೈ ಸೂಪರ್ ಕಿಂಗ್ಸ್ (CSK): ಧೋನಿ ಉತ್ತರಾಧಿಕಾರಿಯಾಗಿ ರುತುರಾಜ್ ಗಾಯಕ್ವಾಡ್ (RUTURAJ GAIKWAD) ಯಶಸ್ವಿಯಾಗಿ ತಂಡ ಮುನ್ನಡೆಸುತ್ತಿದ್ದಾರೆ.

ಮುಂಬೈ ಇಂಡಿಯನ್ಸ್ (MI): ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ (HARDIK PANDYA) ಮುಂಬೈ ಸಾರಥ್ಯ ವಹಿಸಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ (KKR): ಅನುಭವಿ ಅಜಿಂಕ್ಯ ರಹಾನೆ (ajinkya rahane) ಈ ಬಾರಿ ಕೆಕೆಆರ್ ತಂಡದ ನಾಯಕತ್ವದ ಹೊಣೆ ಹೊತ್ತಿದ್ದಾರೆ.

ALSO READ :  ಬದಲಾಯ್ತಾ "ಪ್ರಜಾ ಟಿವಿ" ಕನ್ನಡ ಆಡಳಿತ..!? ಮಾದ್ಯಮ ಉದ್ಯಮಿ "ವಿಜಯತಾತಾ" ತೆಕ್ಕೆಗೆ ಜಾರಿತಾ..?

ಗುಜರಾತ್ ಟೈಟಾನ್ಸ್ (GT): ಯುವ ತಾರೆ ಶುಭಮನ್ ಗಿಲ್ (shubman gill) ತಂಡದ ಚುಕ್ಕಾಣಿ ಹಿಡಿದಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ (DC): ಆಲ್‌ರೌಂಡರ್ ಅಕ್ಷರ್ ಪಟೇಲ್ (axar patel) ಡೆಲ್ಲಿ ಪಡೆಯನ್ನು ಮುನ್ನಡೆಸುತ್ತಿದ್ದಾರೆ.

ರಾಜಸ್ಥಾನ್ ರಾಯಲ್ಸ್ (RR): ಸ್ಫೋಟಕ ಬ್ಯಾಟರ್ ರಿಯಾನ್ ಪರಾಗ್ (riyan parag) ಈ ಬಾರಿ ರಾಜಸ್ಥಾನ್ ತಂಡಕ್ಕೆ ನಾಯಕರಾಗಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ (LSG): ಗಾಯದ ನಂತರ ಮರಳಿರುವ ರಿಷಬ್ ಪಂತ್ (rishab pant) ಲಕ್ನೋ ತಂಡದ ಸಾರಥಿ.

ಪಂಜಾಬ್ ಕಿಂಗ್ಸ್ (PBKS): ಈ ಬಾರಿ ಶ್ರೇಯಸ್ ಅಯ್ಯರ್ (shreyas patel) ಪಂಜಾಬ್ ತಂಡದ ನಾಯಕತ್ವದ ಜವಾಬ್ದಾರಿ ಹೊತ್ತಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್ (SRH): ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ (ishan kishan) ಹಂಗಾಮಿ ನಾಯಕರಾಗಿ ತಂಡ ಮುನ್ನಡೆಸುತ್ತಿದ್ದಾರೆ.

ಈ ಹಿಂದೆ ಐಪಿಎಲ್ ತಂಡಗಳು ವಿದೇಶಿ ನಾಯಕರ ಮೇಲೆ ಅವಲಂಬಿತವಾಗಲು ಪ್ರಮುಖ ಕಾರಣವೆಂದರೆ ನಾಯಕತ್ವದ ಗುಣಗಳಿರುವ ಭಾರತೀಯ ಆಟಗಾರರ ಕೊರತೆ. ಆದರೆ ಇಂದು ಭಾರತೀಯ ಕ್ರಿಕೆಟ್ ಪ್ರತಿಭೆಗಳ ಗಣಿಯಾಗಿದ್ದು, ಪ್ರತಿಯೊಂದು ತಂಡದಲ್ಲೂ 2-3 ಮಂದಿ ನಾಯಕತ್ವ ವಹಿಸಬಲ್ಲ ಸಮರ್ಥ ಆಟಗಾರರಿದ್ದಾರೆ.

ಇದನ್ನೂ ಓದಿ | ಆರಂಭಕ್ಕೂ ಮುನ್ನವೇ CSKಗೇ ಶಾಕ್‌: ಸ್ಟಾರ್ ಆಟಗಾರ ಔಟ್!

ಯುವ ಆಟಗಾರರಾದ ರುತುರಾಜ್ ಗಾಯಕ್ವಾಡ್, ರಿಯಾನ್ ಪರಾಗ್ ಮತ್ತು ಶುಭಮನ್ ಗಿಲ್ ಅವರಿಗೆ ಸಿಕ್ಕಿರುವ ಈ ಅವಕಾಶ, ಮುಂದಿನ ದಿನಗಳಲ್ಲಿ ಭಾರತೀಯ ರಾಷ್ಟ್ರೀಯ ತಂಡಕ್ಕೆ ಹೊಸ ನಾಯಕರನ್ನು ತಯಾರು ಮಾಡಲು ವೇದಿಕೆಯಾಗಲಿದೆ.

ಐಪಿಎಲ್ ಈಗ ಅಕ್ಷರಶಃ ‘ಇಂಡಿಯನ್’ ಪ್ರೀಮಿಯರ್ ಲೀಗ್ ಆಗಿ ರೂಪಾಂತರಗೊಂಡಿದೆ. ವಿದೇಶಿ ಆಟಗಾರರು ಕೇವಲ ಆಟಗಾರರಾಗಿ ತಂಡಕ್ಕೆ ಶಕ್ತಿ ತುಂಬುತ್ತಿದ್ದರೆ, ರಣತಂತ್ರ ಮತ್ತು ಮೈದಾನದ ನಿರ್ಧಾರಗಳನ್ನು ಭಾರತೀಯರೇ ತೆಗೆದುಕೊಳ್ಳುತ್ತಿರುವುದು ಕ್ರಿಕೆಟ್ ಜಗತ್ತಿನಲ್ಲಿ ಭಾರತದ ಪಾರುಪತ್ಯವನ್ನು ಸಾರುತ್ತಿದೆ. 19 ವರ್ಷಗಳ ಕಾಯುವಿಕೆಯ ನಂತರ ಬಂದಿರುವ ಈ ಬದಲಾವಣೆ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿದೆ.


Political News

ಜಮೀರ್ ಅಹಮ್ಮದ್ ರಾಜೀನಾಮೆ ಅಸ್ತ್ರ: ದಾವಣಗೆರೆ ಟಿಕೆಟ್ ಫೈಟ್ ಈಗ ಹೈಕಮಾಂಡ್ ಅಂಗಳಕ್ಕೆ!

ಅಮೆರಿಕಾ–ಇರಾನ್ ಯುದ್ಧದ ಭೀತಿ: ಶಾಂತಿ ಒಪ್ಪಂದಕ್ಕೆ ಟ್ರಂಪ್ ನಕಾರ, ಇರಾನ್ ತೈಲ ಕೇಂದ್ರಗಳೇ ಟಾರ್ಗೆಟ್!

ಹುಳಿಯಾರು ಲಾಕಪ್ ಡೆತ್ ಪ್ರಕರಣ: ಸಿಐಡಿ ತನಿಖೆಗೆ ಗೃಹ ಸಚಿವ ಪರಮೇಶ್ವರ್ ಆದೇಶ!

ದಾವಣಗೆರೆ ದಕ್ಷಿಣ ಉಪಚುನಾವಣೆ: ಟಿಕೆಟ್ ಘೋಷಣೆಗೂ ಮುನ್ನವೇ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ!

ಜಿಬಿಎ ಟೌನ್‌ ಪ್ಲ್ಯಾನಿಂಗ್‌ನಲ್ಲಿ ‘ಪರ್ಸಂಟೇಜ್‌’ ಪರ್ವ; ಡಿಸಿಎಂ ಹೆಸರಲ್ಲೇ ಅಧಿಕಾರಿಗಳ ಲೂಟಿ ದರ್ಬಾರ್‌!

ವರ್ಗಾವಣೆ ದಂಧೆಗೆ ಹೈಕೋರ್ಟ್ ಬ್ರೇಕ್! “ಸಿಎಂಗೆ ಇದಕ್ಕಿಂತ ದೊಡ್ಡ ಕೆಲಸಗಳಿವೆ” ಎಂದ ನ್ಯಾಯಪೀಠ

ಉಪಚುನಾವಣೆ ಸಮರ: ಯುಗಾದಿ ಹಬ್ಬದಂದೇ ಬಿಜೆಪಿ ಅಭ್ಯರ್ಥಿಗಳ ಘೋಷಣೆ

ಬಾಗಲಕೋಟೆ ಉಪಚುನಾವಣೆ: ಮೇಟಿ ಕುಟುಂಬದ ಭಿನ್ನಮತಕ್ಕೆ ಸಿಎಂ ‘ಬ್ರೇಕ್’; ಸಂಧಾನ ಸಭೆ ಯಶಸ್ವಿ!

Scroll to Top