advertise here

Search

ಬದಲಾಯ್ತಾ “ಪ್ರಜಾ ಟಿವಿ” ಕನ್ನಡ ಆಡಳಿತ..!? ಮಾದ್ಯಮ ಉದ್ಯಮಿ “ವಿಜಯತಾತಾ” ತೆಕ್ಕೆಗೆ ಜಾರಿತಾ..?


ಬೆಂಗಳೂರು:ಇದು ಕನ್ನಡ ಮಾದ್ಯಮ ಲೋಕದಲ್ಲಿ ನಡೆದಿರುವ ಮತ್ತೊಂದು ಬೆಳವಣಿಗೆ.ಕನ್ನಡ ಸುದ್ದಿ ವಾಹಿನಿಗಳ ಪೈಕಿ ಅನೇಕ ವರ್ಷಗಳಿಂದ  ಮುಂಚೂಣಿಯಲ್ಲಿದ್ದ ಕನ್ನಡದ ಸುದ್ದಿ ವಾಹಿನಿಗಳಲ್ಲಿ ಒಂದಾದ ಪ್ರಜಾ ಟಿವಿ ಕನ್ನಡದ ಮಾಲಿಕತ್ವ ಬದಲಾಗಿರುವ ಸುದ್ದಿ ಹೊರಬಿದ್ದಿದೆ.ಪ್ರಸ್ತುತ ಮಾಲೀಕತ್ವದಿಂದ ಬೇರೊಬ್ಬರ ತೆಕ್ಕೆಗೆ ಮಗ್ಗಲು ಬದಲಿಸಿದೆ ಎನ್ನುವ ಮಾತು ಕೇಳಿಬರುತ್ತಿದೆ. ಹೊಸ ಮಾಲೀಕತ್ವದಲ್ಲಿ ಪ್ರಜಾ ಟಿವಿ ಹೊಸ ರೂಪ-ಹೊಸ ವಿನ್ಯಾಸದಲ್ಲಿ ಹೊರಹೊಮ್ಮಲಿದೆ ಎನ್ನುವ ಮಾತು ಸಿಕ್ಕಾಪಟ್ಡೆ ಸುದ್ದಿ ಮಾಡುತ್ತಿದೆ.

ಸರಿಸುಮಾರು ಒಂದು ದಶಕಕ್ಕಿಂತಲೂ ಹೆಚ್ಚಿನ  ಸಮಯದಿಂದಲೂ ಸುದ್ದಿ ಪ್ರಸಾರದಲ್ಲಿ ಮಂಚೂಣಿಯಲ್ಲಿತ್ತು ಪ್ರಜಾ ಟಿವಿ.ಸುದ್ದಿ ಚಾನೆಲ್ ಗಳಿಗೆ ಪೈಪೋಟಿ ನೀಡುವ ಮಟ್ಟದಲ್ಲಿ ಕಸುವನ್ನು ಹೊಂದಿತ್ತು.ಸುದ್ದಿ ಲೋಕದ ಪ್ರತಿಭಾನ್ವಿತರು ಹಾಗೂ ದಿಗ್ಗಜರು ಪ್ರಜಾ ಟಿವಿಯಲ್ಲಿ ದುಡಿದಿದ್ದಾರೆ.ತಮ್ಮ ಶ್ರಮ ಬೆವರಿನಿಂದ ಪ್ರಜಾ ಟಿವಿಯನ್ನು ಸುದ್ದಿ ಮಾದ್ಯಮಗಳ ಸಾಲಿನಲ್ಲಿ ಗೌರವಯುತವಾಗಿ ನೋಡುವಂತೆ ಮಾಡಿದ್ದಾರೆ.ಸುದ್ದಿ ವಿಚಾರದಲ್ಲೂ ಪ್ರಚಲಿತ ವಿದ್ಯಾಮಾನ ಗಳನ್ನು ಕ್ಷಿಪ್ರವಾಗಿ ಬಿತ್ತರಿಸುವ ಕಾಯಕವನ್ನು ಪ್ರಜಾ ಟಿವಿ ಕನ್ನಡ ಮಾಡುತ್ತಾ ಬಂದಿತೆನ್ನುವುದರಲ್ಲಿ ಎರಡು ಮಾತಿಲ್ಲ.

ಮಾದ್ಯಮ ಲೋಕದಲ್ಲಿ ಕೇಳಿಬರುತ್ತಿರುವ ಸುದ್ದಿಗಳ ಪ್ರಕಾರ ಮತ್ತು ಪ್ರಜಾ ಟಿವಿಯಲ್ಲಿ ಕೆಲಸ ಮಾಡುತ್ತಿರುವ ಮಾದ್ಯಮ ಮಿತ್ರರ ಮಾಹಿತಿ ಪ್ರಕಾರ ಕಾಂಗ್ರೆಸ್ ಶಾಸಕರೊಬ್ಬರ ಮಾಲೀಕತ್ವದಲ್ಲಿ ಮೂಡಿಬರುತ್ತಿದ್ದ ಪ್ರಜಾ ಟಿವಿಯನ್ನು ಉದ್ಯಮಿ ಹಾಗು ಸುದ್ದಿ ಜಗತ್ತಿನಲ್ಲಿ ಸಾಕಷ್ಟು ಅನುಭವಿ ಎಂದೇ ಕರೆಯಿಸಿಕೊಳ್ಳುವ ವಿಜಯ್ ತಾತಾ ಅವರಿಗೆ ವಹಿಸಿಕೊಡಲಾಗಿದೆ ಎನ್ನಲಾಗುತ್ತಿದೆ. ಮಾಲೀಕತ್ವವನ್ನು ಸಂಪೂರ್ಣವಾಗಿ ವರ್ಗಾಯಿಸಲಾಗಿದೆಯೋ ಅಥವಾ ಎಷ್ಟು ಪ್ರಮಾಣದ ಶೇರುಗಳ ಹಂಚಿಕೆಯಾಗಿದೆ ಎನ್ನುವುದು ಇನ್ನೂ ದೃಢಪಟ್ಟಿಲ್ಲ.ಆದರೆ ವಿಜಯ ತಾತಾ ಅವರ ಸಮೂಹದಲ್ಲಿರುವ ಸುದ್ದಿ ಬಳಗದ ಕೆಲವು ಮಾದ್ಯಮ ಮಿತ್ರರು ಈಗಾಗಲೇ ಪ್ರಜಾ ಟಿವಿ ಕಚೇರಿಯ ಮೇಲುಸ್ತುವಾರಿಯನ್ನು ತಮ್ಮ ಅಧೀನಕ್ಕೆ ತೆಗೆದುಕೊಂಡಿರುವುದಂತೂ ಸ್ಪಷ್ಟ ಎನ್ನಲಾಗುತ್ತಿದೆ.

ಅಂದ್ಹಾಗೆ ಯಾವ ಕಾರಣಗಳಿಂದ ಈ ಬದಲಾವಣೆ ಎನ್ನುವುದು ಗೊತ್ತಾಗಿಲ್ಲ.ಬದಲಾವಣೆಗೆ ಕಾರಣ ಏನು ಎನ್ನುವುದನ್ನು ಪ್ರಜಾ ಟಿವಿಯ ಹಳೆಯ ಮ್ಯಾನೇಜ್ಮೆಂಟ್ ಕೂಡ ಸ್ಪಷ್ಟಪಡಿಸಿಲ್ಲ.ಅಥವಾ ಹೊಸ ಮ್ಯಾನೇಜ್ಮೆಂಟ್ ಜತೆಗೆ ಹಳೆಯ ಮ್ಯಾನೇಜ್ಮೆಂಟ್ ನ ಮಾತುಕತೆ ಅನೇಕ ವರ್ಷಗಳಿಂದಲೂ ನಡೆಯುತ್ತಿತ್ತಾ  ಎನ್ನುವುದು ಗೊತ್ತಿಲ್ಲ.ಮಾದ್ಯಮ ಕ್ಷೇತ್ರದ ಮಾರುಕಟ್ಟೆಯಲ್ಲಿ ನೂರಾರು ಊಹಾಪೋಹದ ಮಾತುಗಳು ಕೇಳಿಬರುತ್ತಿವೆ.ಆದ್ರೆ ಅದ್ಯಾವುದನ್ನು ಗಂಭೀರವಾಗಿ ಪರಿಗಣಿಸುವ ಗೋಜಿಗೆ ನಾವು ಹೋಗುವುದಿಲ್ಲ.ಅದರ ಅವಶ್ಯಕತೆಯಾಗಲಿ,ಉಸಾಬರಿಯಾಗಲಿ ನಮಗಿಲ್ಲ.ಕಾಲಾನುಕ್ರಮದಲ್ಲಿ ಪ್ರಜಾ ಟಿವಿ ವಿಜಯ ತಾತಾ ಅವರಿಗೆ ಹಸ್ತಾಂತರವಾಗಲು ಕಾರಣವೇನು ಎನ್ನುವುದು ಜಗಜ್ಜಾಹೀರಾಗು್ತದೆ. ಸಧ್ಯಕ್ಕೆ ನಿರ್ದಿಷ್ಟ ಕಾರಣಗಳು ಎರಡು ಮ್ಯಾನೇಜ್ಮೆಂಟ್ ಮೂಲಗಳಿಂದ ದೃಢಪಟ್ಟಿಲ್ಲ.

ALSO READ :  Rajyotsava awards 2024: ರಾಜ್ಯೋತ್ಸವ ಪ್ರಶಸ್ತಿ ಪ್ರಕಟ- ಹೇಮಾ ಚೌಧರಿ, ಅರುಣ್ ಯೋಗಿರಾಜ್ ಸೇರಿ 69 ಸಾಧಕರಿಗೆ ಪ್ರಶಸ್ತಿಯ ಗರಿ

ಮೇಲ್ಕಂಡ ಬದಲಾವಣೆಯಿಂದಾಗಿ ಯುಬಿ ಸಿಟಿಯ ಲ್ಯಾವೆಲ್ಲೆ ರಸ್ತೆಯ ಕಟ್ಟಡದಲ್ಲಿ ಕೆಲಸ ಮಾಡುತ್ತಿರುವ ಪ್ರಜಾ ಟಿವಿಯ ಕಚೇರಿಯನ್ನು ಹೊಸ ಮ್ಯಾನೇಜ್ಮೆಂಟ್ ಅಲ್ಲಿಯೇ ಮುಂದುವರೆಸಿಕೊಂಡು ಹೋಗಲಿದೆಯೋ ಅಥವಾ   ನೂತನ ಉದ್ದೇಶಿತ  ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.ಏಕೆಂದರೆ ವಿಜಯ ತಾತಾ ಅವರು ಈ ಹಿಂದೆಯೇ ಪ್ರಜಾ ಟಿವಿ ಕಚೇರಿಯ ಮಾಲೀಕತ್ವ ಪಡೆಯುವ ಪ್ರಯತ್ನದಲ್ಲಿದ್ದಾಗ ಹೊಸ ಕಟ್ಟಡವೊಂ ದನ್ನು ನಿರ್ಮಿಸಿದ್ದರು ಎನ್ನಲಾಗಿದೆ.

ಆದರೆ ಈಗ ಪ್ರಶ್ನೆ ಉದ್ಭವವಾಗಿರುವುದು ಅಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ವಿಚಾರ. ಹೊಸ ಮ್ಯಾನೇಜ್ಮೆಂಟ್ ಎಲ್ಲಾ ಸಿಬ್ಬಂದಿಯನ್ನು ಉಳಿಸಿಕೊಂಡೇ ಚಾನೆಲ್ ನ ಸ್ವರೂಪ ಬದಲಿಸುತ್ತೋ ಅಥವಾ ಒಂದಷ್ಟು ಜನರನ್ನು ಮಾತ್ರ ಬಳಸಿಕೊಂಡು ಉಳಿದವರನ್ನು ಬೇಡ ಎನ್ನುತ್ತದೋ ಎನ್ನುವುದು..ಈ ಗೊಂದಲ ಹಾಗೂ ಆತಂಕ ಎಲ್ಲಾ ಆಯಾಮದಲ್ಲಿ ಕೆಲಸ ಮಾಡುತ್ತಿರುವ ಮಾದ್ಯಮಮಿತ್ರರನ್ನು ಕಾಡುತ್ತಿದೆ.ಏಕೆಂದರೆ ಮ್ಯಾನೇಜ್ಮೆಂಟ್ ಚೇಂಜ್ ಆದ ವಿಷಯವನ್ನು ಇನ್ನೂ ಅಧೀಕೃತವಾಗಿ ಸಿಬ್ಬಂದಿಗೇನೆ ತಿಳಿಸಿಲ್ಲ ಎನ್ನಲಾಗುತ್ತಿದೆ.ಇದೆಲ್ಲದರ ನಡುವೆ ಹೊಸ ಮ್ಯಾನೇಜ್ಮೆಂಟ್ ಸಿಬ್ಬಂದಿ ಕಚೇರಿಗೆ ಆಗಮಿಸಿ ಎಲ್ಲಾ ವ್ಯವಸ್ಥೆಯನ್ನು ಅವಲೋಕಿಸುತ್ತಿದ್ದರೂ ತಮ್ಮೊಂದಿಗೆ ಯಾವುದೇ ವಿಚಾರದಲ್ಲೂ ಚರ್ಚೆ-ಸಮಾಲೋಚನೆ ನಡೆಸದಿರುವುದೇ ಈ ಗೊಂದಲಕ್ಕೆ ಕಾರಣವಾಗಿದೆಯಂತೆ.ಹಾಗಾಗಿ ಹೊಸ ಮ್ಯಾನೇಜ್ಮೆಂಟ್ ಆಗಲಿ ಹಳೆಯ ಮ್ಯಾನೇಜ್ಮೆಂಟ್ ಆಗಲಿ ಇದರ ಬಗ್ಗೆ ಸ್ಪಷ್ಟನೆ ನೀಡೋದು ಉತ್ತಮ. ಇದೆಲ್ಲದರ ಜತೆಗೆ ಯಾವೊಬ್ಬ ಮಾದ್ಯಮ ಸಿಬ್ಬಂದಿಯನ್ನು ತೆಗೆಯದೆ ಅವರನ್ನು ಉಳಿಸಿಕೊಂಡೇ ತಂಡ ಕಟ್ಟಿ ಮುನ್ನಡೆಸುವುದು ಸೂಕ್ತ..ಈ ನಿಟ್ಟಿನಲ್ಲಿ ಹೊಸ ಮ್ಯಾನೇಜ್ಮೆಂಟ್ ಇಂತಹದೊಂದು ಮಾನವೀಯತೆಯನ್ನು ಪ್ರದರ್ಶಿಸಬೇಕಿದೆ. ಇದನ್ನು ಹಳೆಯ ಮ್ಯಾನೇಜ್ಮೆಂಟ್ ಕೂಡ ಮನವರಿಕೆ ಮಾಡಿಕೊಟ್ಟರೆ ಯಾವುದೇ ಮಾದ್ಯಮ ಸ್ನೇಹಿತ ಕೆಲಸ ಕಳೆದುಕೊಂಡು ಪರಿತಪಿಸಬೇಕಾದ ಸ್ತಿತಿ ನಿರ್ಮಾಣವಾಗುವುದಿಲ್ಲವೇನೋ ..?  


Political News

ಎಲೆನ್ (allen) ಅಕ್ರಮದ ಸಕ್ರಮಕ್ಕೆ ಮುಂದಾಯ್ತಾ ಶಿಕ್ಷಣ ಇಲಾಖೆ..? ಕ್ರಮಕ್ಕೆ ಶಿಫಾರಸ್ಸು ಮಾಡಿದ್ದ  ಡಿಡಿಪಿಯು(ddpu) ಮನೋಹರ್  ಕೊಳ್ಳಾ “ಯೂ ಟರ್ನ್” ಹಿಂದಿದ್ಯಾ “ಮೆಗಾ ಪ್ಲ್ಯಾನ್”-“ಬಿಗ್ ಡೀಲ್”..!?

EXCLUSIVE….. ಯಾವ ಕ್ಷಣದಲ್ಲೂ ಎಲೆನ್‌ (ALLEN) ಟ್ಯೂಷನ್‌ ಸೆಂಟರ್ಸ್‌ ಗಳಿಗೆ ಬೀಗ..?!

BBMP ಯುಗಾಂತ್ಯ-ಗ್ರೇಟರ್ ಬೆಂಗಳೂರು ಯುಗಾರಂಭ..GBA ಗೆ ತುಷಾರ ಗಿರಿನಾಥ್ ಬಾಸ್…!

“ಯುದ್ಧಭೂಮಿ”ಯಲ್ಲಿ ಪ್ರಾಣದ ಹಂಗು ತೊರೆದ “ಮಾದ್ಯಮಯೋಧರು”

ಶೈಕ್ಷಣಿಕ ನಿಯಮ ಉಲ್ಲಂಘಿಸಿ “ಡೆಲ್ಲಿ ಪಬ್ಲಿಕ್‌ ಸ್ಕೂಲ್‌” ನಿರ್ಮಾಣ..!?

ಇದೆಂಥಾ ನ್ಯಾಯ.? ಸಂಬಂಧಿಗೇ ಸಾಲ.. ?! ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರ ವಿರುದ್ಧ “ಸ್ವಜನ ಪಕ್ಷಪಾತ” ಆರೋಪ..?!

ಈ ಸುದ್ದಿ ನಮ್ಮಲ್ಲಿ ಮಾತ್ರ…POLITICAL EXCLUSIVE… ಕಾಂಗ್ರೆಸ್ ಗೆ ಗುಡ್ ಬೈ..! ಬಿಜೆಪಿಗೆ ಜೈ..ಜೈ.. ! 60 ಶಾಸಕರಿಗೆ ಗಾಳ….! 42 ಶಾಸಕರ ಲೀಸ್ಟ್ ರೆಡಿ..! ನವೆಂಬರ್ ಗೆ “ಡಿಕೆಶಿ” ಜಂಪಿಂಗ್ ಪಕ್ಕಾ..!

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಲೀಸ್ಟ್ ನ ಆ ಮುಂಚೂಣಿ ಹೆಸರು..ರೇಸ್ ನಲ್ಲಿರೋರು ಯಾರ್ ಗೊತ್ತಾ..!?

Scroll to Top